Saturday, April 4, 2026
Ranga Shankara, J P Nagara, Bengaluru
MEMORIES OF BIRTHIMANE,BIRTHDAYS, POOJA, CELEBRATIONS, FESTIVALS, VISITS, DRAMA, MUSIC, YAKSHAGANA, GET-TOGETHERS, WEDDING ENGAGEMENTS, WEDDINGS, WEDDING ANNIVERSARY, BRAHMOPADESHA, NAMAKARANA, SEEMANTHA, BOOK RELEASE, BOOK REVIEW, AND SHRADDHANJALI....
Saturday, April 4, 2026
Ranga Shankara, J P Nagara, Bengaluru
Thursday, April 2, 2026
Sunandi Holistic Eldercare, KodigeHalli, Bengaluru.
The weekly divine session of Bhajan and Satsag for residents of the Eldercare Home of Sunandi was completed, with active participation of inmates.
HANUMAN JAYANTI SPECIAL
April 1, 2026
ರಾಮನ ನಡೆ ಚೆಂದ, ಕೃಷ್ಣನ ನುಡಿ ಚಂದ
👉 ರಾಮನ ಜನನ ನಡು ಮಧ್ಯಾಹ್ನವಾದರೆ, ಕೃಷ್ಣನ ಜನನ ನಡುರಾತ್ರಿ.
👉 ಬೇಸಿಗೆ ಕಾಲದಲ್ಲಿ ರಾಮನ ಜನನವಾದರೆ, ಭೋರ್ಗರೆಯುವ ಮಳೆಗಾಲದಲ್ಲಿ ಕೃಷ್ಣನ ಜನನ.
👉 ಅರಮನೆಯಲ್ಲಿ ರಾಮ ಜನಿಸಿದರೆ ಸೆರೆಮನೆಯಲ್ಲಿ ಕೃಷ್ಣ ಜನಿಸಿದ
👉 ರಾಮ ಹಿರಿಯ ಮಗನಾದರೆ, ಕೃಷ್ಣ ಕೊನೆಯ ಮಗ.
👉 ರಾಮ ಶುಕ್ಲಪಕ್ಷವಾದರೆ, ಕೃಷ್ಣ ಕೃಷ್ಣಪಕ್ಷ.
👉 ರಾಮನ ಬದುಕು ತೆರೆದಿಟ್ಟ ಪುಸ್ತಕವಾದರೆ, ಕೃಷ್ಣನದ್ದು ರಹಸ್ಯ, ನಿಗೂಢ.
👉 ರಾಮ ಏಕಪತ್ನಿ ವ್ರತಸ್ಥ, ಕೃಷ್ಣ 16108 ಪತ್ನಿಯರ ವಲ್ಲಭ.
👉ರಾಮ ಮರ್ಯಾದಾವತಾರ, ಕೃಷ್ಣ ಲೀಲಾವತಾರ.
👉ಕೃಷ್ಣನ ನುಡಿ ಭಗವದ್ಗೀತೆ, ರಾಮನ ನಡೆ ರಾಮಾಯಾಣ
👉 ಕೃಷ್ಣನಸಿದ್ಧಾಂತ, ರಾಮನ ಆಚರಣೆ
👉 ರಾಮನೇ ಯುದ್ಧ ಮಾಡಿ ಗೆದ್ದ ಕಥೆ ರಾಮಾಯಣವಾಯ್ತು.
ಕೃಷ್ಣ ಯುದ್ಧವನ್ನೇ ಮಾಡದೆ ಗೆದ್ದ ಕಥೆ ಮಹಾಭಾರತವಾಯ್ತು
👉 "ರಾಮ" ಮತ್ತು "ಕೃಷ್ಣ" ಒಂದೇ ದೇವರ ಅವತಾರವಾದರೂ ಅವರ ನಡೆ ನುಡಿಗಳಲ್ಲಿ ವ್ಯತ್ಯಾಸವಿದೆ.
ನಾವು ನಮ್ಮ ಜೀವನದಲ್ಲಿ ಹೇಗೆ ಇರಬೇಕೆಂದು ರಾಮ ನಡೆದು ತೋರಿಸಿದ,
ಕೃಷ್ಣ ಹೇಳಿ ತೋರಿಸಿದ.
ಕೃಷ್ಣ ನುಡಿದಂತೆ ನುಡಿದಾಗ ರಾಮ ನಡೆದಂತೆ ನಡೆದಾಗ ನಾವು ರಾಮ ಕೃಷ್ಣರಾಗ್ತೇವೆ.
ಅದಕ್ಕಾಗಿಯೇ ಹಿರಿಯರು ಹೇಳಿದ್ದು ರಾಮನ ನಡೆ ಚಂದ ಕೃಷ್ಣನ ನುಡಿ ಚಂದ
🙏🌺🙏🙏🌺🙏
ನಮ್ಮ ನಡೆ ನುಡಿ ಚೆನ್ನಾಗಿರಲಿ. ಬಾಳು ಬಂಗಾರವಾಗಲಿ. ಇತರರಿಗೆ ದಾರಿ ದೀಪವಾಗಲಿ ಎಂದು ಆಶಿಸುತ್ತಾ ಈ ನುಡಿ ಮುತ್ತುಗಳು...
Posted 1/4/2026
𝑻𝒉𝒊𝒔 𝑷𝒐𝒆𝒎 𝒊𝒔 𝑾𝒓𝒊𝒕𝒕𝒆𝒏 𝑺𝒐 𝑩𝒆𝒂𝒖𝒕𝒊𝒇𝒖𝒍𝒍𝒚.....
* 𝑯𝒐𝒘 𝑪𝒂𝒏 𝒀𝒐𝒖 " 𝑺𝑴_𝑳𝑬 " 𝑾𝒊𝒕𝒉𝒐𝒖𝒕 " 𝑰 " ?
𝑯𝒐𝒘 𝑪𝒂𝒏 𝒀𝒐𝒖 𝑩𝒆 " 𝑭_𝑵𝑬 " 𝑾𝒊𝒕𝒉𝒐𝒖𝒕 " 𝑰 " ?
𝑯𝒐𝒘 𝑪𝒂𝒏 𝒀𝒐𝒖 " 𝑾_𝑺𝑯 " 𝑾𝒊𝒕𝒉𝒐𝒖𝒕 " 𝑰 " ?
𝑯𝒐𝒘 𝑪𝒂𝒏 𝒀𝒐𝒖 𝑩𝒆 "𝑵_𝑪𝑬 " 𝑾𝒊𝒕𝒉𝒐𝒖𝒕 " 𝑰 " ?
𝑯𝒐𝒘 𝑪𝒂𝒏 𝒀𝒐𝒖 𝑩𝒆 𝒂 " 𝑭𝑨𝑴_𝑳𝒀 " 𝑶𝒓 *"
𝑹𝑬𝑳𝑨𝑻_𝑽𝑬 " 𝑾𝒊𝒕𝒉𝒐𝒖𝒕 " 𝑰 " ?
𝑯𝒐𝒘 𝑪𝒂𝒏 𝒀𝒐𝒖 𝑩𝒆 𝒂 " 𝑭𝑹_𝑬𝑵𝑫 " 𝑾𝒊𝒕𝒉𝒐𝒖𝒕 " 𝑰 " ?
𝑺𝒐 " 𝑰 " 𝑨𝒎 𝑽𝒆𝒓𝒚 𝑰𝒎𝒑𝒐𝒓𝒕𝒂𝒏𝒕!
𝑩𝒖𝒕 𝑯𝒐𝒘 𝑪𝒂𝒏 𝑰 𝑨𝒄𝒉𝒊𝒆𝒗𝒆 " 𝑺_𝑪𝑪𝑬𝑺𝑺 " 𝑾𝒊𝒕𝒉𝒐𝒖𝒕 " 𝑼 " ?
𝑯𝒐𝒘 𝑪𝒂𝒏 𝑰 " 𝑳𝑨_𝑮𝑯 🤭 " 𝑾𝒊𝒕𝒉𝒐𝒖𝒕 " 𝑼 "?
𝑯𝒐𝒘 𝑪𝒂𝒏 𝑰 𝑻𝒂𝒌𝒆 𝑨 " 𝑪_𝑷 " 𝒐𝒇 𝑻𝒆𝒂 ☕️ 𝑾𝒊𝒕𝒉𝒐𝒖𝒕 " 𝑼 " ?
𝑯𝒐𝒘 𝑪𝒂𝒏 𝑰 𝑬𝒏𝒋𝒐𝒚 𝑻𝒉𝒆 " 𝑺_𝑵𝑺𝑯𝑰𝑵𝑬 ☀️ " 𝑾𝒊𝒕𝒉𝒐𝒖𝒕 " 𝑼 " ?
𝑯𝒐𝒘 𝑪𝒂𝒏 𝑰 𝑯𝒂𝒗𝒆 " 𝑭_𝑵 " 𝑾𝒊𝒕𝒉𝒐𝒖𝒕 " 𝑼 " ?
𝑨𝒏𝒅 𝑻𝒉𝒂𝒕 𝑴𝒂𝒌𝒆𝒔 " 𝑼 " 𝑨𝒍𝒔𝒐 𝑰𝒎𝒑𝒐𝒓𝒕𝒂𝒏𝒕 𝑨𝒔 " 𝑰 "
𝑻𝒉𝒆𝒓𝒆𝒇𝒐𝒓𝒆 𝒉𝒖𝒎𝒂𝒏𝒔 ( 𝑼 n 𝑰 ) = 𝑾𝑬 𝒏𝒆𝒆𝒅 𝒐𝒏𝒆 𝒂𝒏𝒐𝒕𝒉𝒆𝒓 𝒊𝒏 𝑳𝒊𝒇𝒆 𝒕𝒐 𝒃𝒆 𝑯𝒂𝒑𝒑𝒚, 𝑾𝒐𝒓𝒌 𝒕𝒐𝒈𝒆𝒕𝒉𝒆𝒓 𝒂𝒏𝒅 𝒂𝒄𝒉𝒊𝒆𝒗𝒆 𝑮𝒓𝒆𝒂𝒕𝒆𝒓 𝑻𝒉𝒊𝒏𝒈𝒔.
𝑳𝒆𝒕'𝒔 𝑷𝒓𝒐𝒑𝒂𝒈𝒂𝒕𝒆 𝑷𝒐𝒔𝒊𝒕𝒊𝒗𝒊𝒕𝒚 𝒂𝒏𝒅 𝒔𝒉𝒖𝒏 𝑵𝒆𝒈𝒂𝒕𝒊𝒗𝒊𝒕𝒚.
ಸೋಮವಾರ, 30/3/2026
ನಾನು ಹುಟ್ಟಿದ್ದು ಹಾಗೂ ಒಂಬತ್ತು ವರ್ಷಗಳವರೆಗೆ ಬೆಳೆದಿದ್ದು ಹೆಬ್ರಿಯಲ್ಲಿ ಆದ ಕಾರಣ ನನಗೆ ಸೀತಾನದಿಯೊಂದಿಗೆ ಬಾಲ್ಯ ಕಾಲದಿಂದಲೂ ಬಾಂಧವ್ಯವಿದೆ. ನಮ್ಮ ಮನೆಯ ಮಾಲಿಕರಾದ ಸುಮತಿ ಆಂಟಿಯ ಬಾಲವಾದ ನಾನು ಅವರು ಅವರ ನೆಂಟರ ಮನೆಯಾದ ಸೀತಾನದಿಗೆ ಹೋಗುವಾಗಲೆಲ್ಲ ಅವರ ಮಕ್ಕಳೊಡನೆ ಅವರ ಹಿಂದೆ ಹೋಗುತ್ತಿದ್ದೆ. ರಸ್ತೆಯ ಪಕ್ಕದಲ್ಲಿ ಇದ್ದ ಆ ನೆಂಟರ ಮನೆಯ ಮಗ್ಗುಲಲ್ಲಿ ಸೀತಾನದಿ ಹರಿಯುತ್ತಿತ್ತು. ಅವರ ಮನೆಯ ಬಳಿ ಅದು ಹೆಚ್ಚು ಆಳವಿಲ್ಲದ ಕಾರಣ ನಾವು ಮನಸೋ ಇಚ್ಛೆ ಆ ನದಿಯ ನೀರಿನಲ್ಲಿ ಆಟವಾಡುತ್ತಿದ್ದೆವು. ಅದರೊಡನೆಯ ನನ್ನ ನಂಟು ಎಷ್ಟಿದೆಯೆಂದರೆ ನಾನು ಈಗಲೂ ಆಗುಂಬೆ ಘಾಟಿ ಮುಖಾಂತರ ಊರೆಡೆಗೆ ಹೋಗುವಾಗಲೆಲ್ಲ ರಸ್ತೆಯ ಪಕ್ಕದಲ್ಲಿ ಹರಿಯುವ ಆ ನದಿ ಪ್ರತಿ ಬಾರಿಯೂ ಚುಂಬಕದಂತೆ ನನ್ನನ್ನು ಸೆಳೆಯುತ್ತದೆ.
ಮಾರ್ಚ್ 28ರಂದು ನಮ್ಮ ಶಾಲಾ ಶಿಕ್ಷಕರ ಔಟಿಂಗ್ ಗೆ ಹೊರಟ ನಾವು ಉಳಿದುಕೊಂಡಿದ್ದು ಸೀತಾನದಿಯ ತೀರದಲ್ಲಿದ್ದ ಇಕ್ಕೊಡ್ಲು ಹೋಂ ಸ್ಟೇ ಯಲ್ಲಿ. ಸಾಯಂಕಾಲ ಐದೂವರೆಗೆ ಅಲ್ಲಿ ತಲುಪಿದ ನಮ್ಮ ತಂಡ ಮೂಗು ಬಾಯಿಯಲ್ಲಿ ಸ್ನ್ಯಾಕ್ಸ್ ತಿಂದು, ಟೀ ಕುಡಿದು ಓಡಿದ್ದು ಆ ನದಿಯೆಡೆಗೆ! ನನಗೆ ಆ ಉರುಳುಗಲ್ಲಿನ ರಾಶಿಯಲ್ಲಿ ಹೆಜ್ಜೆ ಇಡುವುದು ಕಷ್ಟವಾದರೂ ನಮ್ಮವರೆಲ್ಲರ ಸಹಾಯ ಪಡೆದು ಮಹಾನ್ ಸಾಧನೆ ಮಾಡಿದವಳಂತೆ ನೀರಿನೊಳಗೆ ಇಳಿದೇ ಬಿಟ್ಟೆ. ಅರವತ್ತರ ಹೊಸ್ತಿಲಲ್ಲಿ ಇರುವ ನಾನು ಬೇರೆಯವರ ಸಹಾಯ ಪಡೆಯುವುದು ತಪ್ಪಲ್ಲವಲ್ಲವೆ? ನೀರಿನೊಳಗೆ ಇಳಿದ ಮೇಲೆ ನಾನು ಸರ್ವ ಸ್ವತಂತ್ರಳು; ಒಂದು ರೀತಿಯಲ್ಲಿ ನೀರೊಳಗಿನ ಮೀನಿನಂತೆ !!!
ಹದವಾಗಿ ಬೆಚ್ಚಗಿದ್ದ ಸೀತಾನದಿಯ ನೀರಿನೊಳಗೆ ನಮ್ಮ ತಂಡದವರು ಆಡಿದ್ದೇ ಆಡಿದ್ದು! ನೀರೆರಚಾಟವಂತೂ ಬಹಳ ಮಜವಾಗಿತ್ತು. ಈಜು ಬಲ್ಲವರು ಹೆಚ್ಚಿನ ಜನ ಇಲ್ಲದ ಕಾರಣ ತುಂಬಾ ಆಳವಿದ್ದ ಕಡೆಗೆ ಅವರನ್ನು ಹೋಗಗೊಡಲಿಲ್ಲ. ಈಜು ಬಲ್ಲ ನಾವೊಂದಿಷ್ಟು ಜನ ನದಿಯೊಳಗೆ ಒಂದಿಷ್ಟು ಈಜಿದೆವು. ಒಂದು ಕಡೆ ದಟ್ಟ ಮಳೆಯ ಮೋಡ; ಗುಡುಗು ಸಿಡಿಲಿನ ಅಬ್ಬರಾಟ. ನಂತರದಲ್ಲಿ ಸಣ್ಣಗೆ ಹನಿಗರೆಯತೊಡಗಿದ್ದ ಆ ವಾತಾವರಣದಲ್ಲಿ ನೀರೊಳಗೆ ಇರುವ ಆನಂದವೇ ಬೇರೆ. ಸುಮಾರು ಒಂದು ಗಂಟೆಯ ಕಾಲ ನದಿ ನೀರಿನಲ್ಲಿ ಆಟವಾಡಿ ನಂತರದಲ್ಲಿ ಹೋಂ ಸ್ಟೇ ಯಲ್ಲಿದ್ದ ಈಜುಕೊಳದಲ್ಲಿ ಈಜಾಟವಾಡಿದೆವು.
ಬಹಳ ವರುಷಗಳ ನಂತರ ನಾನು ಸೀತಾನದಿಯ ನೀರಲ್ಲಿ ಆಟವಾಡಿದ್ದು ನನ್ನ ಹಳೆಯ ನೆನಪುಗಳನ್ನು ಕಲುಕಿದಂತಾಯಿತು. ಬಾಲ್ಯದ ನೆನಪುಗಳೇ ಚೆಂದ. ಯಾವುದೇ ಜವಾಬ್ದಾರಿ ಇಲ್ಲದೆ ನಮ್ಮದೇ ಆದ ಜಗತ್ತಿನೊಳಗೆ ನಾವಿರಲು ಸಾಧ್ಯವಾಗುವುದು ನಮ್ಮ ಬಾಲ್ಯಕಾಲದಲ್ಲಿ ಮಾತ್ರವೇನೊ? ಪುನಃ ನಾನು ನನ್ನ ಬಾಲ್ಯಕಾಲಕ್ಕೆ ಹಿಂತಿರುಗಿ ಹೋಗಬಾರದೆ ಎಂದು ಆ ಕ್ಷಣ ಹಂಬಲಿಸಿದೆ.
ಮಾರನೆಯ ದಿನ ಬೆಳಿಗ್ಗೆ ಎದ್ದು ಮತ್ತೊಮ್ಮೆ ಅಲ್ಲಿ ಪ್ರಶಾಂತವಾಗಿ ಹರಿಯುತ್ತಿದ್ದ ಸೀತಾನದಿಯನ್ನು ಸಾದ್ಯಂತವಾಗಿ ಅವಲೋಕಿಸಿದೆ. ರಾತ್ರಿಯ ಮಳೆಯಿಂದ ನದಿಯ ರಭಸವೇನು ಜಾಸ್ತಿಯಾಗಿರಲಿಲ್ಲ. ಅದನ್ನು ಸುತ್ತುವರೆದಿದ್ದ ಹಸಿರು ಸಿರಿಯನ್ನು ನೋಡಿ ಕಣ್ತುಂಬಿಸಿಕೊಂಡೆ. ನನ್ನನ್ನೊಮ್ಮೆ ಪುನಃ ಬಾಲ್ಯಕ್ಕೆ ಕರೆದೊಯ್ದ ಆ ಕ್ಷಣವನ್ನು ಮನಸ್ಸಿನೊಳಗೆ ಭದ್ರಗೊಳಿಸಿದೆ. ನನ್ನೊಳಗಿನ ಭಾವನೆಗಳ ಪರಿವೇ ಇಲ್ಲದೆ ತನ್ನ ಪಾಡಿಗೆ ತಾನು ಹರಿಯುತ್ತಿದ್ದ ಆ ನದಿಗೆ ಮನದೊಳಗೆ ನಮಿಸಿದೆ
Posted 31.3.2026
Sunday, March 29, 2026
Flomont World School, RamaMurthyNagar, Bengaluru.
March 21 - 28, 2026
Singapore trip - Rishi, Kavitha, Atharv
Saturday, 28th March 2026
GOOGLE MEET ONLINE
Friday, March 27, 2026
Galleria Mall, Yalahanka, Bengaluru.
Friday, March 27, 2026
Galleria Mall, Yalahanka, Bengaluru
The 4-hour long movie about Indian agent working in Afghanistan and Pakistan, finally able to crush the hideouts of terrosits.
Thursday, March 26, 2026
Sunandi Eldercare, Kodigehalli, Bengaluru.
SRI RAMANAVAMI SPECIAL
Srirama Bhajane was held at the centre, to mark Sri Ramanavami, which is being celebrate today and tomorrow.