Tuesday, August 31, 2021

SHRI KRISHNA JANMASTAMI 2021

 Monday, 30th August 2021


Sri Krishna Janmastami comes every year, which is the birthday of Lord SriKrishna.

There are celebrations all over the place, special programs and festivities and competition for children.


Entries for the competition was sent with pictures of ATHARV RISHI SOMAYAJI and URVI RAVI SOMAYAJI. Voting from friends and well wishers are expected.




Monday evening, special pooja was performed with MOM preparing number of items for offering to Lord Krishna. Also special POOKALAM was done by Mom.







Ravi, Vidya and Urvi joined the celebrations at home, we had small bhajan, music and enjoyed ASHTAMI delicacies Different types of Unde (Laddu), Avalakki, Chakkuli, Payasa and curd prepared by mom.



Earlier on Sunday 29th Aug, Rishi, Kavitha and Atharv at home and later left for tour to Chikkamagalur. 

Also little Atharv was prepared for the competition.



It was happy occasion.

Written on Wednesday, 1st September 2021

Thursday, August 26, 2021

VISIT MURALI AISHWARYA

 Tuesday, 24 August 2021

It was after lunch at Raghavendra Swamy Aaradhane at Poornaparjna Nagara, Uttarahalli, we went to visit Aishwarya Murali at their apartment, near Aditi School, at AGS Layout.


Aishwarya is D/O Bhaskar Bhat Mayagundi, who is my sister Bhagirathi (Baabi)'s son.

They have new baby girl arrived in the family in May 2021, so it was with that intention, we visited their place on their way back.

They named the baby as "ANARGYA"

 


It was a short visit and we wished the God's Blessings and Happy life.

Written Friday, 27th Aug,2021

Tuesday, August 24, 2021

ಸನಾತನ ಧರ್ಮ - ಹಿಂದುತ್ವ

ಬುಧವಾರ, 25 ಅಗಸ್ಟ್, 2021  

ವಾಟ್ಸ್ ಅಪ್ ನಿಂದ ಬಂದದ್ದು.


ನಾವು ಯಾವ ಧರ್ಮದ ವಿರೋಧಿಗಳೂ ಅಲ್ಲ, ನಾವು ಹಿಂದುತ್ವದ ಪ್ರಭಲ ಸಮರ್ಥಕರಷ್ಟೇ.

ಏಕೆಂದರೆ...?

# 'ವಸುದೈವ ಕುಟುಂಬಕಂ' ಅಂದ್ರೆ ಇಡೀ ಪ್ರಪಂಚವನ್ನೇ ಒಂದು ಕುಟುಂಬವಾಗಿ ನೋಡು ಎಂದು ಹೇಳಿಕೊಟ್ಟದ್ದು ನನ್ನ ಹಿಂದುತ್ವ.

# ಹೆಣ್ಣನ್ನ ಹೊತ್ತ ಭೂಮಿಯನ್ನ ತಾಯಿಯಂತೆ ಗೌರವಿಸು ಎಂದು ಹೇಳಿಕೊಟ್ಟದ್ದು ನನ್ನ ಹಿಂದುತ್ವ.

# ಇಲ್ಲಿನ ನದಿ, ನೆಲ,ಜಲ,ಪ್ರಾಣಿ ಸಕಲ ಚರಾಚರಗಳಲ್ಲಿ ಈಶ್ವರನಿದ್ದಾನೆ ಅವುಗಳನ್ನು ಪೂಜಿಸು ರಕ್ಷಿಸು ಎಂದು ಹೇಳಿಕೊಟ್ಟದ್ದು ನನ್ನ ಹಿಂದುತ್ವ.

# 'ಈ ರಾಷ್ಟ್ರ ದೇವನಿರ್ಮಿತರಾಷ್ಟ್ರ ಈ ನೆಲದಲ್ಲಿ ಜನ್ಮವೆತ್ತಲು ದೇವತೆಗಳೂ ಆಸೆ ಪಡುತ್ತಾರೆ ಹಾಗಾಗಿ ಈ ನೆಲದ ಪಾವಿತ್ರತೆಗೆ ದಕ್ಕೆ ಬಾರದ ಹಾಗೆ ನೋಡಿಕೊಳ್ಳಿ' ಎಂದು ಹೇಳಿಕೊಟ್ಟದ್ದು ನನ್ನ ಹಿಂದುತ್ವ.

# ಸ್ವಾರ್ಥಕ್ಕಾಗಿ ಎಲ್ಲರೂ ಬದುಕುತ್ತಾರೆ ನಿಸ್ವಾರ್ಥವಾಗಿ ಬದುಕಿ ಜಗತ್ತಿಗೇ ಬೆಳಕು ಕೊಟ್ಟಂತಹ ಸಂತ ಮಹಂತರನ್ನ ಜಗತ್ತಿಗೆ ಕೊಟ್ಟದ್ದು ನನ್ನ ಹಿಂದುತ್ವ.

# ವಿಶ್ವಸಂತತಿಗೆ ಒಳಿತನ್ನು ಬಯಸುವ ಗೋವನ್ನ ತಾಯಿಯಂತೆ ಕಾಣಿ ಎಂದು ಸಾರಿದ್ದು ನನ್ನ ಹಿಂದುತ್ವ.

# ಶ್ರೀಕೃಷ್ಣನ ಬೃಂದಾವನದ ಕಥೆಹೇಳಿ ಒಂದು ಹಳ್ಳಿಯ ಸ್ವಾವಲಂಬನೆ ಹೀಗಿರಬೇಕು ಎಂದು ತಿಳಿಸಿ ಕೊಟ್ಟದ್ದು ನನ್ನ ಹಿಂದುತ್ವ.

# ಪ್ರಭು ಶ್ರೀರಾಮನ ಚರಿತ್ರೆಯನ್ನ ದಶದಿಕ್ಕುಗಳಿಗೂ ಸಾರಿ ಪ್ರಜಾರಾಜ್ಯವೆಂದರೆ ಯಾವುದು.? ಪ್ರಜಾರಂಜಕನಾದ ಧರ್ಮಮೂರ್ತಿಯಾದ ರಾಜ ಹೇಗಿರಬೇಕು..? ಎಂದು ಸಮಾಜಕ್ಕೆ ತಿಳಿಸಿ ಕೊಟ್ಟದ್ದು ನನ್ನ ಹಿಂದುತ್ವ.

# 'ಸತ್ಯಂ ಶಿವಂ ಸುಂದರಂ' ಎನ್ನುತ್ತಾ ಸತ್ಯವೆಂದರೆ ಬೇರಲ್ಲ ಸಾಕ್ಷಾತ್ ಶಿವನೇ ಶಿವನೆಂದರೆ ಬೇರೆಯಲ್ಲ ಅದು ಜಗತ್ತಿನಲ್ಲೇ ಸುಂದರವಾದ ಸತ್ಯ ಎನ್ನುತ್ತಾ ಸತ್ಯಕ್ಕೆ ಶಿವನನ್ನೇ ಹೋಲಿಸಿದ್ದು ನನ್ನ ಹಿಂದುತ್ವ.

# ಪ್ರತಿ ನಿತ್ಯ ಆಲಯ ಮಂದಿರಗಳಲ್ಲಿ ಮೊಳಗುವ ವೇಧ ಘೋಷಣೆಗಳಲ್ಲಿ  ಸಕಲ ಸೃಷ್ಟಿಗೂ ಸoನ್ಮಗಳವನ್ನ ಭಗವಂತನಲ್ಲಿ ಕೋರುವುದು ನನ್ನ ಹಿಂದುತ್ವ.

"ಆತ್ಮದೀಪೋಭವ" ಎನ್ನುವ ಬುದ್ಧನ ವಾಣಿಯಂತೆ ಇಷ್ಟು ಆದರ್ಶಗಳನ್ನ ಜಗತ್ತಿಗೆ ಸಾರಿ ನರನ ಆತ್ಮವನ್ನು ಜಗತ್ತಿನ ಹಿತಕ್ಕಾಗಿ ಅಣಿಗೊಳಿಸಿ ನರನನ್ನೇ ನಾರಾಯಣನನ್ನಾಗಿಸಬಲ್ಲ ತಾಕತ್ತಿರುವ ಏಕೈಕ ತತ್ವ ನನ್ನ ಹಿಂದುತ್ವ.

ಈಗ ಹೇಳಿ ಜಗತ್ತಿನಲ್ಲಿ ಮತ್ಯಾವುದಾದರೂ ಧರ್ಮಗಳಲ್ಲಿ ಈ ಶ್ರೇಷ್ಠಗುಣಗಳು ಇರಲು ಸಾಧ್ಯವೇ...?

ಅಹರ್ನಿಷಿ ಜಗತ್ತಿನ ಕಲ್ಯಾಣ ಕೋರುವ ಈ ನೆಲದ ಅಸ್ಮಿತೆಯಾದ ಹಿಂದುತ್ವದ ಸಮರ್ಥಕರಾದ ನಮ್ಮನ್ನು ನೀವು ಕೋಮುವಾದಿಗಳು ಎಂದರೆ ಅದು ನಿಮ್ಮ ದೌರ್ಭಾಗ್ಯ.

ನಮಗೆ ಹೆಮ್ಮೆಯಿದೆ ಜಾತ್ಯಾತೀತತೆಯ ಸೋಗಿನಲ್ಲಿ ನಾಟಕವಾಡುವ ಬದಲಿಗೆ ಸ್ವಂತಿಕೆಯ ಸಮರ್ಥಕರಾಗಿದ್ದೇವೆ ಎಂದು ಹೇಳಿಕೊಳ್ಳಲು.


ಜೈ  ಹಿಂದ್🚩


✍️ಅಭಿಲಾಷ್ ಪಂಡ್ರಳ್ಳಿ

RAGHAVENDRA SWAMY - MADHYARADHANE 2021

 Tuesday, 24th August 2021

ಶ್ರೀ ರಾಘವೇಂದ್ರ ಸ್ವಾಮಿ ಸನ್ನಿಧಾನ 

ಪೂರ್ಣಪ್ರಜ್ಞ ಬಡಾವಣೆ, ಉತ್ತರಹಳ್ಳಿ, ಬೆಂಗಳೂರು.



ವರ್ಷಂಪ್ರತಿಯಂತೆ ನಡೆಯುವ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವ ಈ ಬಾರಿಯೂ ಶ್ರೀ ರಾಘವೇಂದ್ರ ಸ್ವಾಮಿಗಳ ಸನ್ನಿಧಾನ, ಪೂರ್ಣಪ್ರಜ್ಞ ಬಡಾವಣೆ ಉತ್ತರಹಳ್ಳಿಯಲ್ಲಿ ವಿಜ್ರಂಭಣೆಯಿಂದ ನಡೆಯಿತು.




ನಾವು  ಈ ವರ್ಷದ ಮಧ್ಯಾರಾಧನೆಯ ಸಮಾರಂಭಕ್ಕೆ ರಾಘವೇಂದ್ರ ಸ್ವಾಮಿಗಳ ಸನ್ನಿಧಾನಕ್ಕೆ ಮಧ್ಯಾಹ್ನ 12.14ಗಂಟೆಗೆ ಹೋಗಿದ್ದೆವು.



ನೂರಾರು ಭಕ್ತಾದಿಗಳು ಸೇರಿದ್ದರು. ಅದೊಂದು ಜಾತ್ರೆಯ ವಾತಾವರಣ. ಸಂಗೀತ ಕಾರ್ಯಕ್ರಮ, ಮಹಾ ಮಂಗಳಾರತಿ, ತೀರ್ಥ ಪ್ರಸಾದ, ಪಂಚಾಮೃತ ಸ್ವೀಕರಿಸಿ, ಭೋಜನ ಪ್ರಸಾದ ಸ್ವೀಕರಿಸಲು ಸ್ವಲ್ಪ ಹೊತ್ತು ಕಾದು ಎರಡನೇ ಪಂಕ್ತಿಯಲ್ಲಿ ಭರ್ಜರಿಯಾದ ಊಟವೂ ಆಯಿತು. 




ಪಾಯಸ, ಹಯಗ್ರೀವ, ಬಿಸಿಬೇಳೆ ಬಾತ್, ಅನ್ನ, ಸಾರು ಇತ್ಯಾದಿ, ಬಾಳೆ ಎಲೆಯಲ್ಲಿ ಕೆಳಗೆ ಕೂತು ಊಟವಾಯಿತು.


ರಾಘವೇಂದ್ರ ಸ್ವಾಮಿಗಳು ಜನಿಸಿದ್ದು 1595 ರಲ್ಲಿ. ತಮಿಳುನಾಡಿನ ಭುವನಗಿರಿ ಎಂಬಲ್ಲಿ. ತಂದೆ ತಿಮ್ಮಣ್ಣ ಭಟ್ಟ, ತಾಯಿ ಗೋಪಿಕಾಂಬಾ. ಹೆತ್ತವರು ಮಗುವಿಗಿಟ್ಟ ಹೆಸರು ವೆಂಕಟನಾಥ. ಬಾಲ್ಯದಲ್ಲೇ ಈತ ಬುದ್ಧಿವಂತ ಬಾಲಕ

ಆರಂಭದ ವಿದ್ಯಾಭ್ಯಾಸ ಸೋದರಮಾವನಾದ ಲಕ್ಷ್ಮಿ ನರಸಿಂಹಾಚಾರ್ಯರ ಬಳಿ ಮಧುರೈನಲ್ಲಿ ಪೂರ್ಣಗೊಂಡಿತು. ಕೋಶ, ಕಾವ್ಯ, ನಾಟಕ ವ್ಯಾಕರಣಗಳನ್ನು ಅಧ್ಯಯನ ಮಾಡಿದರು.

ಇವರು ಸಣ್ಣ ವಯಸ್ಸಿನಲ್ಲಿದ್ದಾಗಲೇ ತಂದೆ ತೀರಿಕೊಂಡ ಕಾರಣ ಸಂಸಾರದ ಜವಾಬ್ದಾರಿ ಹೆಗಲ ಮೇಲೆ ಬಿತ್ತು. ಸರಸ್ವತಿ ಎಂಬಾಕೆಯೊಂದಿಗೆ ವಿವಾಹವಾಯಿತು.

ಆ ಬಳಿಕ ಕುಂಭಕೋಣಕ್ಕೆ ಬಂದು ಶ್ರೀ ಸುಧೀಂದ್ರ ತೀರ್ಥದಲ್ಲಿ ದ್ವೈತ ವೇದಾಂತ ವ್ಯಾಸಂಗ ಆರಂಭಿಸಿದರು. ತರ್ಕ, ವ್ಯಾಕರಣ, ಮೀಮಾಂಸಾ, ವೇದಾಂತಾದಿ ಶಾಸ್ತ್ರಗಳನ್ನು ಕಲಿತರು. ಅಲ್ಲಿನ ಮಕ್ಕಳಿಗೆ ಸಂಸ್ಕೃತ ಮತ್ತು ವೇದಗಳನ್ನು ಬೋಧಿಸಿದರು. ಅದಕ್ಕೆಂದು ಮಕ್ಕಳಿಗೆ ಪ್ರತ್ಯೇಕ ಶುಲ್ಕ ವಿಧಿಸುತ್ತಿರಲಿಲ್ಲ. ಅವರು ಕೊಟ್ಟರಷ್ಟೇ ತೆಗೆದುಕೊಳ್ಳುತ್ತಿದ್ದರು.

ಹೀಗಾಗಿ ಅವರ ಆರ್ಥಿಕ ಸ್ಥಿತಿ ಮತ್ತಷ್ಟು ಕುಸಿಯಿತು. ಅದೆಷ್ಟೋ ಬಾರಿ ಮಡದಿ ಮಕ್ಕಳೊಂದಿಗೆ ಉಪವಾಸ ಮಲಗುತ್ತಿದ್ದರು. ಇರುವ ಮನೆಯೂ ಸೋರುತ್ತಿತ್ತು. ಮನೆಯಲ್ಲಿದ್ದ ಒಡಕು ಪಾತ್ರೆಗಳು ಕಳವಾದವು. ಎಲ್ಲವೂ ಹರಿಯ ಇಚ್ಛೆ ಎಂದುಕೊಂಡು ಗೊಣಗದೇ ಜೀವನ ನಡೆಸುತ್ತಿದ್ದರು.

ಅವರ ಭಕ್ತಿಯ ತೀವ್ರತೆ ಎಷ್ಟಿತ್ತು ಎಂಬುದಕ್ಕೆ ಒಂದು ಉದಾಹರಣೆ ಇದೆ ಕೇಳಿ…ಒಮ್ಮೆ ವೆಂಕಟನಾಥರಿಗೆ ಸಮಾರಂಭವೊಂದರಲ್ಲಿ ಪಾಲ್ಗೊಳುವ ಆಹ್ವಾನ ಸಿಕ್ಕಿತು. ಆದರೆ ಅಲ್ಲಿ ಅವರಿಗೆ ಸೂಕ್ತ ಸ್ಥಾನಮಾನ ನೀಡದೆ ಅವರನ್ನು ಗಂಧ ಅರೆಯುವ ಕೆಲಸಕ್ಕೆ ನೇಮಿಸಲಾಯಿತು. ಅವರು ಬೇಸರಿಸಿಕೊಳ್ಳದೇ ಗಂಧದ ಕೊರಡನ್ನು ತೇಯ್ದರು. ತೇಯುವಾಗ ಪದ್ಧತಿಯ ಪ್ರಕಾರ ಅಗ್ನಿಸೂಕ್ತವನ್ನು ಪಠಿಸುತ್ತಿದ್ದರು.

ಬಳಿಕ ಆ ಗಂಧವನ್ನು ಲೇಪಿಸಿಕೊಂಡವರಿಗೆ ವಿಪರೀತ ಉರಿ ಆರಂಭವಾಯಿತು. ಹೀಗಾಗಲು ಏನು ಕಾರಣವೆಂದು ವೆಂಕಟನಾಥರನ್ನು ಪ್ರಶ್ನಿಸಿದರು. ಅಗ್ನಿ ಸೂಕ್ತ ಹೇಳುತ್ತಾ ಗಂಧ ತೇಯ್ದಿರುವುದೇ ಇದಕ್ಕೆ ಕಾರಣ ಎಂದು ಊಹಿಸಿ ಮತ್ತೆ ವರುಣ ಮಂತ್ರ ಪಠಿಸಿದಾಗ ಎಲ್ಲರ ಉರಿಯೂ ಕಡಿಮೆಯಾಯಿತು. ಇದು ಅವರ ಮಂತ್ರ ಪಠನೆಗಿದ್ದ ಶಕ್ತಿ!. 

ಗುರುಗಳೊಂದಿಗೆ ಅನೇಕ ಪಾಂಡಿತ್ಯ ಸ್ಪರ್ಧೆಗಳಲ್ಲಿ ಪಾಲ್ಗೊಂಡು ಜಯಶಾಲಿಯಾಗಿ ಮಠಕ್ಕೆ ಹೆಸರು ತಂದರು. ಗುರುಗಳಿಂದ ‘ಮಹಾಭಾಷ್ಯಕಾರ’ ಎಂಬ ಬಿರುದನ್ನೂ ಪಡೆದುಕೊಂಡರು. ಭೈರವ ಭಟ್ಟ, ವೀರಭದ್ರ ಮೊದಲಾದ ಪ್ರಸಿದ್ಧ ಪಂಡಿತರನ್ನೂ ಸೋಲಿಸಿ ಜಯಪತ್ರ ಗೆದ್ದುಕೊಂಡರು.

ಸುಧೀಂದ್ರ ತೀರ್ಥರು ವೆಂಕಟನಾಥರನ್ನೇ ತಮ್ಮ ಉತ್ತರಾಧಿಕಾರಿಯನ್ನಾಗಿ ನೇಮಿಸಿದರು. 1625ರಲ್ಲಿ ತಂಜಾವೂರಿನಲ್ಲಿ ತನ್ನ ಗುರುಗಳ ಸಮ್ಮುಖದಲ್ಲೇ ಸನ್ಯಾಸತ್ವ ಸ್ವೀಕರಿಸಿ ರಾಘವೇಂದ್ರ ತೀರ್ಥ ಎಂದು ನಾಮಾಂಕಿತರಾದರು. ಕುಂಭಕೋಣ ಮಠದ ಉತ್ತಾರಾಧಿಕಾರಿಯಾದರು. ಮುಂದೆ ಅನೇಕ ತೀರ್ಥಕ್ಷೇತ್ರಗಳಿಗೆ ಸಂಚರಿಸಿದರು. ಶ್ರೀರಂಗ, ಮಧುರೈ,ರಾಮೇಶ್ವರ, ತಿರುಪತಿ, ಉಡುಪಿಗೆ ಭೇಟಿ ನೀಡಿ, ನೊಂದು, ಬೆಂದ ಭಕ್ತರ ಕಷ್ಟಗಳನ್ನು ಪರಿಹರಿಸಿದರು.

ಪವಾಡ ಪುರುಷ ಎಂದೇ ರಾಘವೇಂದ್ರ ಸ್ವಾಮಿಗಳು ಹೆಸರು ಮಾಡಿದ್ದರೂ ಪ್ರಚಂಡ ವಿದ್ವಾಂಸರಾಗಿದ್ದರು. 48ಕ್ಕೂ ಹೆಚ್ಚಿನ ಅಮೂಲ್ಯ ಗ್ರಂಥಗಳನ್ನು ಬರೆದು ‘ಟಿಪ್ಪಣ್ಣಾಚಾರ್ಯ ಚಕ್ರವರ್ತಿ’ ಗಳೆಂದು ಪ್ರಸಿದ್ಧರಾದರು. ವೇದವ್ಯಾಸರ ‘ಬ್ರಹ್ಮಸೂತ್ರ’ ಗಳಿಗೆ ‘ತಂತ್ರ ದೀಪಿಕಾ’, ಮಧ್ವಾಚಾರ್ಯರ ‘ಅಣು ಭಾಷ್ಯ’ಕ್ಕೆ ‘ತತ್ತ್ವ ಮಂಜರೀ’, ವ್ಯಾಖ್ಯಾನ, ಉಪನಿಷತ್ತುಗಳಿಗೆ ‘ಖಂಡಾರ್ಥ’, ಟೀಕಾಕೃತ್ಪಾದರ ‘ನ್ಯಾಯಸುಧಾ’ ಕ್ಕೆ ‘ಪರಿಮಳ’, ಉಳಿದ ಟೀಕಾಗ್ರಂಥಗಳಿಗೆ ‘ಭಾವದೀಪ’ ಎಂಬ ವ್ಯಾಖ್ಯಾನ ರಚಿಸಿದ್ದಾರೆ.

ಚಂದ್ರಿಕಾರ್ಚಾಯರ ‘ಚಂದ್ರಿಕಾ ಗ್ರಂಥ’, ‘ತರ್ಕತಾಂಡವ’ ಗ್ರಂಥಗಳಿಗೂ ವ್ಯಾಖ್ಯಾನ ಬರೆದಿದ್ದಾರೆ. ತಾತ್ಪರ್ಯ ನಿರ್ಣಯದ ಸಂಗ್ರಹ, ಪ್ರಮೇಯ ನವಮಾಲಿಕೆಯ ವ್ಯಾಖ್ಯಾನ, ಪ್ರಾತಃ ಸಂಕಲ್ಪ ಗದ್ಯ ಮೊದಲಾದ ಸ್ವತಂತ್ರ ಗ್ರಂಥಗಳನ್ನೂ ರಚಿಸಿದ್ದಾರೆ. ನದಿ ತಾರತಮ್ಯ ಸ್ತೋತ್ರವೆಂಬ ಚಿಕ್ಕ ಗ್ರಂಥದಿಂದ ಆರಂಭಿಸಿ ಪರಿಮಳ ಗ್ರಂಥವೆಂಬ ಬೃಹತ್ ಗಾತ್ರದ ಗ್ರಂಥಗಳನ್ನೂ ರಚಿಸಿದ್ದಾರೆ.

ಪವಾಡ ಪುರುಷನೆಂದು ಹೆಸರು ಮಾಡಿದ್ದ ರಾಘವೇಂದ್ರ ಸ್ವಾಮಿಗಳನ್ನು ಹಲವರು ಪರೀಕ್ಷಿಸಿದ್ದರು. ಆದವಾನಿಯ ನವಾಬನೊಬ್ಬ ಬಟ್ಟೆ ಮುಚ್ಚಿದ್ದ ಹರಿವಾಣದಲ್ಲಿ ಮಾಂಸದೂಟವನ್ನಿಟ್ಟು ಗುರುಗಳಿಗೆ ಕೊಟ್ಟ. ಅದಕ್ಕೆ ಜಲ ಪೋಕ್ಷಣೆ ಮಾಡಿ ಬಟ್ಟೆ ಸರಿಸಿದಾಗ ಒಳಗೆ ಬಗೆಬಗೆಯ ಹಣ್ಣು ಹಂಪಲುಗಳಿದ್ದವು. ತಪ್ಪನ್ನು ತಿದ್ದಿಕೊಂಡ ನವಾಬ ಗುರುಗಳಿಗೆ ಶರಣಾದ.

ಹಿಂದೂ ಧರ್ಮದ ಬ್ರಾಹ್ಮಣ ಮಾಧ್ವ ಸಂನ್ಯಾಸಿಗಳಲ್ಲಿ ಗುರು ರಾಘವೇಂದ್ರ ಸ್ವಾಮಿಗಳೂ ಒಬ್ಬರು. ಮಧ್ವಾಚಾರ್ಯರ ಅನುಯಾಯಿಯಾಗಿ ದ್ವೈತ ಸಿದ್ಧಾಂತವನ್ನು ಪ್ರತಿಪಾದಿಸಿದರು.1671ರಲ್ಲಿ ಆಂಧ್ರಪ್ರದೇಶದ ಮಂತ್ರಾಲಯದಲ್ಲಿ ವೃಂದಾವನ ಪ್ರವೇಶ ಮಾಡಿದರು. ವೃಂದಾವನವನ್ನು ಸಜೀವವಾಗಿ ಪ್ರವೇಶಿಸಿದ್ದ ಆ ಪ್ರದೇಶ ಇಂದು ಜಗತ್ತಿಗೇ ಪೂಜನೀಯ ಸ್ಥಳ ಎಂದರೆ ಅತಿಶಯೋಕ್ತಿಯಲ್ಲ.

 ಸಾವಿರಾರು ಭಕ್ತರು ಪ್ರತಿನಿತ್ಯ ದೇವಾಲಯಕ್ಕೆ ಭೇಟಿ ನೀಡಿ ಗುರುಗಳ ಆಶೀರ್ವಾದ ಪಡೆದುಕೊಂಡಿದ್ದಾರೆ.

‘ಇನ್ನೂ 400 ವರ್ಷಗಳ ಕಾಲ ನಾನಿಲ್ಲಿ ವಾಸಿಸುತ್ತೇನೆ’ ಎಂದು ಅವರು ಹೇಳಿದ್ದನ್ನು ಭಕ್ತರಿನ್ನೂ ನಂಬಿಕೊಂಡಿದ್ದಾರೆ. ‘ದೀನಜನರ ಬಡವರ, ಹಿಂದುಳಿದವರ ಬಗ್ಗೆ ಅಪಾರ ಕಾಳಜಿ ಹೊಂದಿದ್ದ ರಾಘವೇಂದ್ರ ಸ್ವಾಮಿಗಳನ್ನು ಆರಾಧನಾ ಮಹೋತ್ಸವದ ಮೂಲಕ ಪ್ರತಿವರ್ಷ ನೆನಪಿಸಿಕೊಳ್ಳಲಾಗುತ್ತದೆ.

• ರಾಘವೇಂದ್ರ ಸ್ವಾಮಿಗಳು ಬೃಂದಾವನ ಪ್ರವೇಶಿಸುವ ಮೊದಲು ಮಾಡಿದ ಕೊನೆಯ ಪ್ರವಚನದ ಸಾರಾಂಶ:

• ಯಾವ ಪ್ರತಿಫಲಾಪೇಕ್ಷೆಯೂ ಇಲ್ಲದೇ ಸತ್ಕಾರ್ಯಗಳನ್ನು ಮಾಡಬೇಕು.

• ಸಮಾಜಕ್ಕೆ ಒಳಿತಾಗುವಂತೆ ಮಾಡುವುದೇ ನಿಜವಾದ ದೇವರ ಪೂಜೆ. 

ಕಳೆದುಹೋದ ಒಂದು ನಿಮಿಷವೂ ಮತ್ತೆಬಾರದು ಎಂಬುದನ್ನು ಮರೆಯಬಾರದು.

• ದೇವರೆಡೆಗಿನ ನಿಮ್ಮ ಭಕ್ತಿ ಪರಿಶುದ್ಧವಾಗಿರಲಿ. ಪೂರ್ಣ ಮನಸ್ಸಿನಿಂದ ಅವನನ್ನು ಪೂಜಿಸಿ.

• ಸುಜ್ಞಾನ ಎಂಬುದು ಎಲ್ಲಾ ಪವಾಡಗಳಿಗಿಂತ ಮಿಗಿಲು. 

ಜ್ಞಾನವಿಲ್ಲದಿದ್ದರೆ ಯಾವ ಪವಾಡವೂ ಘಟಿಸದು.

ದುರ್ವಾದಿ ಧ್ವಾಂತರವಯೇ

ವೈಷ್ಣವೇಂದೀವರೇಂದವೇ

ಶ್ರೀ ರಾಘವೇಂದ್ರ ಗುರವೇ

ನಮೋತ್ಯಂತ ದಯಾಲವೇ

ಶ್ರೀಮಧ್ವೇಶಾರ್ಪಣಮಸ್ತು

ಬರೆದಿರುವುದು 25 ಅಗಸ್ಟ್, 2021 



Saturday, August 21, 2021

ONAM FESTIVAL @ KAVITHA RISHI

 Saturday, 21st August 2021

B705, ILife Apartment, DevaraBeesanaHalli, Bengaluru

POOKKALAM



Onam brings together a multitude of colours and flavours from across the Country, and the celebrations reach their apex on the auspicious day of Thiruvonam. 


Onam commemorates the return of a mythical, righteous king – King Mahabali and brings together communities across the landscape in unified revelry that is unheard of across the planet. Households are adorned with exquisite floral carpets (Pookkalam), traditional art forms and games are seen everywhere and homes are cleaned and impeccably maintained. 

One can see elaborate sumptuous feasts (Onasadya) served in every single home, with the feast ending with delicious payasam (Kerala dessert), which ensures that the message of oneness and hope is spread far and wide.






There we had the celebrations at RishiKavitha's place, with Kavitha taking lot of effort, getting up 5am, beautiful floral carpet was laid in front of the house, prepared ONASADYA (Sumptuous feast), all by herself.

Family gathered, we, ShubhaRaghu,Lahari, Ravi Vidya and 

and two little kids, ATHARV and URVI, latest addition to the family.

ONASADYA








Two adorable children were pets of all.

Time was spent playing with little kids, happy for their smile, playful acts.


So, It was very memorable family get-together, for celebrating  ONAM.

HAPPY ONAM, 

Thanks Kavitha-Rishi for organizing the event, grand oota (ONASADYA )and happy times.

Written Sunday, 22nd August 2021



Friday, August 20, 2021

SHUBHA-RAGHU WEDDING ANNIVERSARY 2021

 Thursday, 19th August 2021

It was 17 years ago, in 2004, 19th August on this day, Shubha Raghu got married in Lakshmi Sabha Bhavana, Udupi.

19th August 2004, at Udupi

We went to ShubhaRaghu house in ChikkalaSandra, had lunch and in the evening a cake prepared by Mom was cut.




In the night at 8 pm we went to GO NATIVE Restaurant at JayaNagara. Ravi Vidya Urvi putti came, Rishi Kavitha and Atharv puttu joined.




Different food was ordered, photos taken, enjoyed the food items and juice.





Ice cream cake was there, and it was cut with others singing.




Variety of juice:






We had good two hours of get-together and every one reached their homes by 10.45 pm

We to BhuvaneshwariNagara, Hebbal, (Car Mahindra KUV100)

Shubha Raghu Lahari to Ramanjaneya Nagara, ChikkalaSandra,  (Car Venue Hyundai)

Ravi Vidya Urvi to Salarporia, Celesta, BhattaraHalli, K.R. Puram, (Car Verna, Hyundai)

Rishi Kavitha Atharv to ILife apartment,at Devarabeesanahalli, near Bellandur. (Car Baleno)

It was a memorable get-together.


Wishing HAPPY HAPPY Wedding Anniversary to Shubha Raghu.

written Saturday 21st August 2021