Saturday, May 11, 2024

FUN AT DOG / CUBBON PARK

 Sunday, 5th May 2024

Cubbon Park, Bengaluru.


People go to Park , specially sundays to refresh themselves, do various activities like jogging, running, roller skating or simply walking.



Another interesting area in the park is DOG PARK. 

People come witheir pets, specially dogs of various breeds, sizes and temperaments.


They play, run around, have fun, meet other similar dogs. People, specially dog lovers come to the park to see the fun and pet them.

We, Rishi, Seena, mom and me were there at the Dog Park and seeing their activities.



After an hour we landed in Airline Restaurant, a crowded place, pet friendly for breakfast and returned home.

Posted 12/5/2024


Friday, May 10, 2024

HANDADI SATYANARAYANA BHAT FAMILY - HOME VISIT

 Friday, 10th May 2024

BirthiMane, Bhuvaneshwarinagar, Hebbala, Bengaluru.

That was visit home for lunch for Handadi Satyanarayana Bhat Family.



The family is distant relative good and friendly, respectable people.



Usually we meet them only in common function. It was time we invited them for lunch.

It happened to be a special day... Akshaya Tritiya, Basava Jayathi, Parashurama Jayanthi .......



Daughter ShashiRekha and grand daughter Shubha were also there.

Mom prepared nice lunch with rice, other items, sweets.




After returning home at Laggere, he sent a message:

***********************************************

5. 20 p. m. ಗೆ ಕ್ಷೇಮದಲ್ಲಿ ಮನೆಗೆ ಬಂದು ತಲ್ಪಿರುವೆವು  !! ಇವತ್ತಿನ ನಿಮ್ಮದಂಪತಿಯ ಅತಿಥಿ ಸತ್ಕಾರ ಕಾರ್ಯಕ್ರಮ ಬಹಳ ಸಂತೋಷವನ್ನುಂಟು ಮಾಡಿತು  !! 

ಇವತ್ತು ಕ್ರೋಧಿ ರೋಹಿಣೀ ನಕ್ಷತ್ರ ಯುಕ್ತ ವೈಶಾಖ ಅಕ್ಷಯ ತೃತೀಯ, ಹಾಗೂ ಪರಶು ರಾಮ ಜಯಂತಿ ದಿನ  !!  ಬಹಳ ಅಪುರೂಪದ ಮುಖ್ಯ ಪರ್ವದಿನ ದಂದು, ನಿಮ್ಮ ಮನೆಯಲ್ಲಿ ಅತಿಥಿ ಸತ್ಕಾರ ಹೋಂದಿರುವುದು ನಮ್ಮ ಸೌಭಾಗ್ಯವೇ ಸರಿ  !! 

ದೇವರು ನಿಮಗೂ, ಸರ್ವ ಕುಟುಂಬ ಸದಸ್ಯರಿಗೂ ಸಕಲ ಸುಖ, ಶಾಂತಿ, ಆಯುರಾರೋಗ್ಯೈಶ್ವರ್ಯ, ಸಂಪತ್ಸೌಭಾಗ್ಯ ವನ್ನಿತ್ತು ಸದಾ ಕಾಪಾಡಲಿ ಯೆಂದು ದೇವರಲ್ಲಿ ಪ್ರಾರ್ಥನೆ  !! 

               "ಹಂಸ ವೇಣಿ""

 ಮತ್ತೂ ಕುಟುಂಬಸದಸ್ಯರು!

***************************************************

In the reply:

ಧನ್ಯವಾದಗಳು. ನಿಮ್ಮ ಆತ್ಮೀಯ ಆಶೀರ್ವಚನಕ್ಕೆ ಅನಂತಾನಂತ ವಂದನೆಗಳು. ಶ್ರೀ ದೇವರು ನಿಮ್ಮೆಲರಿಗೆ ಆರೋಗ್ಯ, ಆಯುಷ್ಯ, ನೆಮ್ಮದಿಯನ್ನು ಸದಾ ಕರುಣಿಸಲಿ.

ಜಯರಾಮ ನಳಿನಿ ಸೋಮಯಾಜಿ 

***********************************************

That was a fine get-together, spent time talking about the memories....

God Bless

Posted 11/5/2024

HOME VISIT - MAYAGUNDI BHATS

 Monday, 29th April 2024

Mayagundi, Puttoru, Udupi









My sister Bhagirathi's (Baabi) children Bhaskar Bhat, Krishnamoorthy (Kittu),  Jayalakshmi, and Veda (w/o late Parabhakar Bhat) live in separate houses.



It was after haviing oota at Udupi, came to Kittu's house for siesta.


After nap and coffee, it was get-together for some time at Bhaskar's house, met all the family members and the new member of the family.

Posted 10/5/2024

Thursday, May 9, 2024

HOME VISIT - CHANDRASHKAR ADIGA

 Tuesday, 30th April 2024

Ajekar, Karkala Taluk



Chandraskara Adiga is s/o Late Y Subramanya Adiga, Nalini's mother's brother.

Chandraskar Adiga lives alone in a new house at Ajekar, as his wife passed away sometime ago.


Ajekar is about 40 km from Birthi, Salekeri, on a good road via Petri, Perdoor, KukkeHalli, HariKhandige and took about an hour to go.


Spent about an hour there, and returned home.

He was quite about our visit and presented with a saree to mom, and Dhoti and shawl to me.

God Bless.

Posted 10/5/2024


HONGIRANA SCHOOL OF EXCELLENCE/PU COLLEGE

May 2, 2024

HONGIRANA SCHOOL OF EXCELLENCE

 


2003 ರಲ್ಲಿ ನಾವು ಹೊಂಗಿರಣ ಶಾಲೆಯನ್ನು ಪ್ರಾರಂಭಿಸಿದಾಗ ಪದವಿ ಪೂರ್ವ ಕಾಲೇಜು ಪ್ರಾರಂಭಿಸುವ ಎಳ್ಳಷ್ಟು ಕಲ್ಪನೆಯು ನಮ್ಮಲ್ಲಿರಲಿಲ್ಲ. ಶಾಲೆ ಪ್ರಾರಂಭಿಸಿ ಒಂದೆರಡು ವರ್ಷಗಳಾದಾಗ ಪದವಿ ಪೂರ್ವ ಶಿಕ್ಷಣಕ್ಕಾಗಿ ಮಲೆನಾಡಿನ ಮಕ್ಕಳು ಘಟ್ಟದ ತಗ್ಗು ಇಳಿಯುವುದನ್ನು ನೋಡಿದಾಗ “ಇಲ್ಲಿ ಇಲ್ಲದ್ದು ಅಲ್ಲೇನು ಸಿಗುತ್ತಿದೆ? ನಾವ್ಯಾಕೆ ಒಳ್ಳೆಯ ಗುಣಮಟ್ಟದ ಪದವಿ ಪೂರ್ವ ಕಾಲೇಜನ್ನು ಸ್ಥಾಪಿಸಿ ಅದಕ್ಕಿಂತ ಮಿಗಿಲಾದದ್ದನ್ನು ಇಲ್ಲೇ ಪಡೆಯಬಹುದು ಎಂದು ನಿರೂಪಿಸಿ ತೋರಿಸಬಾರದು” ಎನ್ನುವ ಯೋಚನೆ ಬಂದಿದ್ದರ ಫಲ 2006ರಲ್ಲಿ ಪ್ರಾರಂಭಿಸಿದ ನಮ್ಮ ವಸತಿ ಸಹಿತ ವ್ಯವಸ್ಥೆಯ ಹೊಂಗಿರಣ ಪದವಿ ಪೂರ್ವ ಕಾಲೇಜು.

ನಾವು ಈವರೆಗೆ ಯಾರೊಡನೆಯೂ ಸ್ಪರ್ಧೆಗೆ ಇಳಿಯದೆ ಜೀವನದ ನಿರ್ಣಾಯಕ ಘಟ್ಟ ಎನ್ನಬಹುದಾದ ಪದವಿ ಪೂರ್ವ ಶಿಕ್ಷಣದ ಹಂತದಲ್ಲಿ ಮಕ್ಕಳಿಗೆ ಅಗತ್ಯವಿರುವ ಕಲಿಕಾ ವಿಷಯ ಪರಿಕಲ್ಪನೆ ಕೊಡುವುದರೊಂದಿಗೆ ಸಮಂಜಸವಾದ ಕಲಿಕೆಯ ವಿಧಾನವನ್ನು ರೂಢಿಸಿಕೊಳ್ಳುವ ಅಭ್ಯಾಸವನ್ನು ಮೈಗೂಡಿಸಿಕೊಳ್ಳುವಂತೆ ಮಾಡುವ ಪರಿಸರವನ್ನು ಕಟ್ಟಿದ್ದೇವೆ. ಅಷ್ಟೇ ಅಲ್ಲದೆ ನಮ್ಮಿಂದ ಕಲಿತು ಹೊರಹೋಗುವ ಪ್ರತಿ ಮಗುವೂ ತನ್ನ ಮುಂದಣ ಬದುಕಿನ ಬಗ್ಗೆ ಸೂಕ್ತ ವಿಚಾರ ಮಾಡುವ ಪ್ರಬುದ್ಧತೆಯನ್ನು ಹೊಂಗಿರಣ ಪದವಿ ಪೂರ್ವ ಕಾಲೇಜು ಕೊಡುತ್ತಿದೆ ಎನ್ನುವುದನ್ನು ಈಗಾಗಲೇ ಹೊರಹೋಗಿರುವ ನಮ್ಮ 18 ಬ್ಯಾಚಿನ ಮಕ್ಕಳು ಸಾಬೀತು ಪಡಿಸಿದ್ದಾರೆ.

ಹೊಂಗಿರಣ ಪಿ ಯು ಕಾಲೇಜಿನ ವಿಶಿಷ್ಟತೆ ಏನೆಂದರೆ ದಾಖಲಾತಿಗೆ ಇರುವ ಮುಕ್ತ ಅವಕಾಶ. ಹತ್ತನೇ ತರಗತಿಯಲ್ಲಿ 625ಕ್ಕೆ 624 ಅಂಕ ಪಡೆದ ಮಗುವಿಗೂ ಹಾಗೆಯೇ ಕೇವಲ ಐವತ್ತು, ಅರವತ್ತು ಪರ್ಸೆಂಟ್ ಬಂದಿರುವ ಮಗುವಿಗೂ ಇಲ್ಲಿ ಕಲಿಯುವ ಹಕ್ಕು ಸಮಾನವಾಗಿದೆ. ವಿಜ್ಞಾನ ವಿಭಾಗದ ಕಾಲೇಜಾದರೂ ಯಾವುದೇ ಮಗುವಾದರೂ ಅದರ ಹತ್ತನೆಯ ತರಗತಿಯ ಫಲಿತಾಂಶ ಎಷ್ಟೇ ಬಂದಿದ್ದರೂ ಅದರ ಕಲಿಕಾ ಆಸಕ್ತಿಯನ್ನು ಆಧರಿಸಿ ಮುಕ್ತ ದಾಖಲಾತಿಗೆ ಅವಕಾಶ ನೀಡಲಾಗುವುದು. ನಮ್ಮಲ್ಲಿ ವಿಜ್ಞಾನ ವಿಷಯವನ್ನು ಯಾವುದೇ ಒತ್ತಡ ಇಲ್ಲದೆ ಬೆಳಗಿನ ಒಂಬತ್ತರಿಂದ ಸಾಯಂಕಾಲ ನಾಲ್ಕು ಗಂಟೆಯವರೆಗೆ ಆಸಕ್ತಿಯಿಟ್ಟು ಕಲಿಯುವಂತೆ ಮಾಡುವುದು ಇನ್ನೊಂದು ವಿಶಿಷ್ಟತೆ. ಹಾಸ್ಟೆಲ್ ನಲ್ಲಿ ಇರುವ ಮಕ್ಕಳಿಗೆ ಇದಕ್ಕೆ ಹೊರತಾಗಿ ದಿನಕ್ಕೆ ನಾಲ್ಕೈದು ತಾಸು ಅವರದೇ ಓಘದಲ್ಲಿ ಕಲಿಯುವ ವಾತಾವರಣವನ್ನು ಸೃಷ್ಟಿಸಲಾಗಿದೆ. ಇದರೆಲ್ಲದರ ಫಲವಾಗಿ ಹತ್ತನೇ ತರಗತಿಯಲ್ಲಿ ಐವತ್ತು, ಅರವತ್ತು ಪರ್ಸೆಂಟ್ ಪಡೆದು ನಮ್ಮಲ್ಲಿ ದಾಖಲಾದ ಮಕ್ಕಳು ದ್ವಿತೀಯ ಪಿಯುಸಿಯಲ್ಲಿ ಎಂಬತ್ತಕ್ಕೂ ಹೆಚ್ಚು ಪರ್ಸೆಂಟ್ ಪಡೆದ ದಾಖಲೆಗಳು ಪ್ರತಿ ಬ್ಯಾಚಿನಲ್ಲಿಯೂ ಇದೆ. ಹಾಗೆಯೇ ಉತ್ತಮ ಗುಣಮಟ್ಟದ ಅಂಕ ಗಳಿಸಿ ಬಂದವರು ಅದನ್ನು ಉಳಿಸಿಕೊಂಡು ನೂರರಲ್ಲಿ ನೂರು ಅಂಕ ಗಳಿಸಿ ತಮ್ಮ ಕಲಿಕಾ ಮಟ್ಟವನ್ನು ಕಾಪಾಡಿಕೊಂಡು ಬಂದಿದ್ದಾರೆ ಕೂಡಾ. ಇಂತಹ ಕಲಿಕಾ ಉನ್ನತಿ ಆಗಬೇಕೆಂದರೆ ಹೊಂಗಿರಣ ಸೃಷ್ಟಿಸಿರುವ ಕಲಿಕಾ ಪರಿಸರ ಹಾಗೂ ಅಲ್ಲಿನ ಪ್ರಾಧ್ಯಾಪಕರ ಸಮರ್ಪಣಾ ಭಾವ ಗಣನೀಯವಾದುದು.

ಹೊಂಗಿರಣದಲ್ಲಿ ಪದವಿ ಪೂರ್ವ ಶಿಕ್ಷಣ ಪಡೆದ ಹಳೆಯ ವಿದ್ಯಾರ್ಥಿಗಳು ಈಗ ಉತ್ತಮ ವೈದ್ಯರು, ಇಂಜಿನಿಯರ್, ವಿಜ್ಞಾನಿಗಳು, ವಾಣಿಜ್ಯೋದ್ಯಮಿಗಳು, ಶಿಕ್ಷಕರು, ಸೃಜನಶೀಲ ಕಲಾವಿದರು, ಕೃಷಿಕರು….. ಹೀಗೆ ಹತ್ತು ಹಲವಾರು ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ತಮ್ಮ ಛಾಪನ್ನು ಮೂಡಿಸಿದ್ದಾರೆ. ಹೊಂಗಿರಣದಿಂದ ತಮಗೆ ಪಠ್ಯ ಹಾಗೂ ಪಠ್ಯೇತರವಾಗಿ ದೊರೆತದ್ದನ್ನು ಸಂಪೂರ್ಣವಾಗಿ ತಮ್ಮ ಬೆಳವಣಿಗೆಯಲ್ಲಿ ಅಳವಡಿಸಿಕೊಂಡು ಬೆಳೆಯುತ್ತಿದ್ದಾರೆ ಎನ್ನುವುದು ನಮ್ಮ ಮೂಲ ಉದ್ದೇಶದ ಸಾರ್ಥಕತೆಯನ್ನು ತೋರಿಸಿಕೊಡುತ್ತದೆ.

ಇದೆಲ್ಲದರ ಜೊತೆಗೆ ರಾಜ್ಯಮಟ್ಟದ ಗುಣಮಟ್ಟದೊಂದಿಗೆ ನಮ್ಮ ಕಾಲೇಜಿನಲ್ಲಿ CET NEET JEE ಕೋಚಿಂಗ್ ಅನ್ನು ಸಹ ನೀಡಲಾಗುತ್ತಿದೆ. ಪ್ರಾಯಶಃ ಸಿಇಟಿ ಕೋಚಿಂಗ್ ಆರಂಭಿಸಿದ ಸಾಗರದ ಮೊಟ್ಟಮೊದಲ ಪಿ ಯು ಕಾಲೇಜು ನಮ್ಮದೇ. ಇಂಜಿನಿಯರಿಂಗ್ ಮತ್ತು ಮೆಡಿಕಲ್ ಕ್ಷೇತ್ರಗಳನ್ನು ಆಯ್ಕೆ ಮಾಡಿಕೊಳ್ಳಲು ಬಹು ಮುಖ್ಯ ಭೂಮಿಕೆಯನ್ನು ನಿಭಾಯಿಸುತ್ತಿರುವ ಈ ಪ್ರವೇಶ ಪರೀಕ್ಷೆಗಳು ಕಬ್ಬಿಣದ ಕಡಲೆಯಲ್ಲ, ಉತ್ತಮ ತರಬೇತಿ ಸಿಕ್ಕರೆ ನಮ್ಮ ಮಕ್ಕಳು ಕೂಡ ದೊಡ್ಡ ಸಾಧನೆ ಮಾಡಬಲ್ಲರು ಎಂಬುದನ್ನು ಅರಿತು, ರಾಜ್ಯಮಟ್ಟದ ಅನುಭವಿ ಹಾಗೂ ನುರಿತ ಉಪನ್ಯಾಸಕರನ್ನು ಆಹ್ವಾನಿಸಿ ನಮ್ಮ ಕ್ಯಾಂಪಸ್ ನಲ್ಲಿ ವರ್ಷಪೂರ್ತಿ ತರಬೇತಿ ನೀಡಲಾಗುತ್ತಿದೆ. ಈ ವರ್ಷದಿಂದ ಪರಿಣಿತ್ ಅಕಾಡೆಮಿಯ ಮೂಲಕ ಇನ್ನಷ್ಟು ಉತ್ಕೃಷ್ಟ ಗುಣಮಟ್ಟದ ತರಬೇತಿಯನ್ನು ನಮ್ಮ ಕಾಲೇಜು ನೀಡಲಿದೆ.
2024ರಲ್ಲಿ ಹೊಂಗಿರಣ ಪದವಿ ಪೂರ್ವ ಕಾಲೇಜಿನ ವಿಶೇಷ ಸಾಧನೆಯೆಂದರೆ ಶೇಕಡಾ 100 ಗುಣಮಟ್ಟದ ಫಲಿತಾಂಶದೊಂದಿಗೆ, ನಮ್ಮ ವಿದ್ಯಾರ್ಥಿನಿ ಸವಿ ಪ್ರಸಾದ್ ಆರು ನೂರಕ್ಕೆ 590 ಅಂಕ ಗಳಿಸಿ ರಾಜ್ಯ ಮಟ್ಟದಲ್ಲಿ ಒಂಬತ್ತನೇ ರ್ಯಾಂಕ್ ಪಡೆದಿರುವುದು. ಇದರ ಜೊತೆಗೆ ಶೇಕಡ 60ರಷ್ಟು ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಪಡೆದಿರುವುದು ನಮ್ಮ ಗುಣಮಟ್ಟದ ಶಿಕ್ಷಣಕ್ಕೆ ಸಿಕ್ಕ ಪ್ರತಿಫಲ ಎಂದರೆ ತಪ್ಪಾಗಲಾರದು.

ಗುಣಮಟ್ಟದ ಪಿ ಯು ಶಿಕ್ಷಣ, ಅತ್ಯುತ್ತಮವಾದ ಸಿಇಟಿ ನೀಟ್ ಮತ್ತು ಜೆಇಇ ತರಬೇತಿ, ವಿದ್ಯಾರ್ಥಿಗಳಿಗೆ ಭವಿಷ್ಯದ ಆಯ್ಕೆಗಳ ಬಗ್ಗೆ ತರಬೇತಿ, ಒತ್ತಡ ರಹಿತ ವಾತಾವರಣದಲ್ಲಿ ಸದೃಢವಾದ ಮಾನಸಿಕ ಸಾಮರ್ಥ್ಯದೊಂದಿಗೆ ಸಮಾಜಕ್ಕೆ ಉತ್ತಮ ನಾಗರಿಕರನ್ನು ಒದಗಿಸಿಕೊಡುವ ಕೈಂಕರ್ಯಕ್ಕೆ ಹೊಂಗಿರಣ ಪಿ ಯು ಕಾಲೇಜು ಸದಾ ಕಟಿಬದ್ಧವಾಗಿದೆ.

Posted 9/5/2024

Wednesday, May 8, 2024

BEACH FUN - SALIGRAMA

Thursday, 2nd May 2024, 8.00 am

Saligrama Beach , Udupi Dist.

Beach is place, where you have fresh air, continuous tides coming in, spend time walking, play in the sand, or simply relax.


Mom, Rishi, Kavitha and little Atharv went from Birthi Salekeri went in the car, looking for nice place in the beach to have fun.




It is really soothing atmosphere, just enjoy the beauty of nature.



Spent two good hours and returned home after having Dose at Mantap Restaurant.


Posted 9/5/2024



1008 ಕಾಯಿ ಗಣ ಹೋಮ - ಅನೆಗುಡ್ಡೆ ವಿನಾಯಕ

 ಗುರುವಾರ, 2 ಮೇ 2024 

ಅನೆಗುಡ್ಡೆ  ವಿನಾಯಕ ದೇವಸ್ತಾನ, ಕುಂಭಾಷಿ , ಉಡುಪಿ ಜಿಲ್ಲೆ.

1008 ಕಾಯಿ ಗಣ ಹೋಮ - ಅನೆಗುಡ್ಡೆ  ವಿನಾಯಕ 

ಶ್ರೀ ಪ್ರಕಾಶ್ ವೈಲಾಯ ಮತ್ತು ಮಡದಿ ವಿದ್ಯಾ ಅವರಿಂದ ವಿಶೇಷ ಸೇವೆ 1008 ಕಾಯಿ ಗಣಹೋಮ ಗುರುವಾರ ಮೇ 2 ರಂದು ಸಂಪನ್ನಗೊಂಡಿತು.



ಗದಗ್ ದಲ್ಲಿ ನೆಲೆಸಿರುವ ಪ್ರಕಾಶ್ ವೈಲಾಯರು , ಲೀಲಾ ಅತ್ತಿಗೆಯ ತಂಗಿ ಸರೋಜಿನಿ ಯವರ ಅಳಿಯ.


ಅನೆ ಗುಡ್ಡೆ ವಿನಾಯಕನಿಗೆ ಗಣಹೊಮವು ವಿಶಿಷ್ಟವಾದ ಸೇವೆ. ಅದರಲ್ಲೂ 1008 ಕಾಯಿಯ ಗಣಹೋಮಾ ಬಹಳ ವಿಶೇಷ. 


 ಈ ಸಮಾರಂಭಕ್ಕೆ ನಮ್ಮನ್ನೂ ಆಹ್ವಾನಿಸಿ ಊಟ ಉಪಚಾರಗಳಿಂದ ಗೌರವಿಸಿರುವುದು ನಮ್ಮ ಸೌಭಾಗ್ಯ.


ವಿನಾಯಕ (ಗಣಪತಿ) ದೇವರು ವೈಲಾಯ ದಂಪತಿಗಳ ಸಕಲ ಅಭೀಸ್ಥವನ್ನು ನೆರವೇರಿಸಲಿ, ಅವರಿಗೆ  ಆಯುರಾರೋಗ್ಯ, ನೆಮ್ಮದಿಯನ್ನು ಕರುಣಿಸಲಿ ಎಂದು ನಮ್ಮೆಲ್ಲರ ಶುಭ ಹಾರೈಕೆಗಳು.


ಸರ್ವೇ ಜನಾಃ ಸುಖಿನೋ ಭವಂತು.....

Posted 9/5/2024 


ಶಿವರಾಮ ಕಾರಂತ ವೇದಿಕೆ - ಪಾ. ವೆಂ. ಸ್ಮೃತಿ

 ಭಾನುವಾರ, 28 ಏಪ್ರಿಲ್ 2024 

ಡಿಜಿ ಕ್ಯುಎ ವಸತಿ ಸಂಕೀರ್ಣ, ಅರ್.ಟಿ. ನಗರ, ಬೆಂಗಳೂರು.

ಶಿವರಾಮ ಕಾರಂತ ವೇದಿಕೆ - ಪಾ. ವೆಂ. ಸ್ಮೃತಿ 

ಶಿವರಾಮ ಕಾರಂತ ವೇದಿಕೆ, ಅರ್. ಟಿ. ನಗರ, ಬೆಂಗಳೂರು, ಇವರ ಆಶ್ರಯದಲ್ಲಿ ಮತ್ತು ಪಾವೆಂ ಟ್ರಸ್ಟ್ ನ ಸಹಯೋಗದಲ್ಲಿ ಪಾಡಿಗರು ವೆಂ. ಆಚಾರ್ಯರ ಸ್ಮರಣೆಯು ಸಂಪನ್ನ ಗೊಂಡಿತು.



ಪ್ರಸಿದ್ಧ ಕತೆಗಾರ ಜಯಂತ್ ಕಾಯ್ಕಿಣಿ, ಡಾ ಎಚ್ ಶಶಿಕಲಾ ಅವರು ಅತಿಥಿಗಳಾಗಿ ಬಂದು ಅರ್ಥಪೂರ್ಣವಾದ ಪಾವೆಂ ಅವರ ವಿಚಾರ ಉಪನ್ಯಾಸ ನೀಡಿದರು.

ಡಾ ಶಶಿಕಲಾ 

ಜಯಂತ್ ಕಾಯ್ಕಿಣಿ 







ಕಾರ್ಯಕ್ರಮದ ಮೊದಲಲ್ಲಿ ಪ್ರಾರ್ಥನೆಯಾದ ನಂತರ, ವೇದಿಕೆಯ ಅಧ್ಯಕ್ಷೆ ಡಾ ದೀಪಾ ಫಡ್ಕೆ ಯವರಿಂದ ಪ್ರಾಸ್ತಾವಿಕ ಹಾಗೂ ಅತಿಥಿಗಳಿಗೆ ಮತ್ತು ನೆರೆದ ಸಭಿಕರಿಗೆ ನ್ವಾಗತ ಮಾಡಿದರು.
ಡಾ. ದೀಪಾ ಫಡ್ಕೆ 




ನಾವುಗಳು ಅಂದೇ ರಾತ್ರಿ ಊರಿಗೆ ಹೋಗುವ ಕಾರ್ಯಕ್ರಮ ವಿದ್ದುದರಿಂದ 6 ಗಂಟೆಗೆ ಅಲ್ಲಿಂದ ನಿರ್ಗಮಿಸಿದೆವು.


ಪಾವೆಂ ಟ್ರಸ್ಟ್ ನ ಕಾರ್ಯದರ್ಶಿ ಶ್ರೀಮತಿ ಛಾಯ ಉಪಾದ್ಯ ಅವರಿಂದ ಧನ್ಯವಾದ ಸಮರ್ಪನೆಯೊಂದಿದೆ ಅಂದಿನ ಕಾರ್ಯಕ್ರಮ ಮುಕ್ತಾಯ ಗೊಂಡಿತು.

Posted 8/5/2024