Wednesday, June 29, 2022

ದೇವರಿಗೆ ಪೂಜೆ ಪ್ರಾರ್ಥನೆ ಯಾಕೆ ಮಾಡಬೇಕು⁉️

ಗುರುವಾರ, ಜೂನ್ 30, 2022  

ದೇವರಿಗೆ ಪೂಜೆ ಪ್ರಾರ್ಥನೆ ಯಾಕೆ ಮಾಡಬೇಕು⁉️


ಪೂಜೆ ಯಾಕೆ ಮಾಡಬೇಕು❓ ಪ್ರಾರ್ಥನೆ ಯಾಕೆ ಮಾಡಬೇಕು❓ ಬಹಳ ಜನರನ್ನು ಕಾಡುವ ಪ್ರಶ್ನೆಯಿದು. ಕಾಣದ ದೇವರಿಗೆ ಪೂಜೆ ಯಾಕೆ ಮಾಡಬೇಕು❓ ದೇವರ ಪೂಜೆಯಿಂದ ನಿಜ ವಾಗಿಯೂ ಲಾಭವಿದೆಯೇ❓

ನಾವು ದೇವರ ಪೂಜೆ ಮಾಡ ದಿದ್ದರೆ, ಏನಾಗುತ್ತದೆ❓ "ಪೂಜೆ" ಎನ್ನುವುದು ಒಂದು ಯೋಗ ಶಾಸ್ತ್ರದ ಪದ್ಧತಿ. ಸಾಧನೆಗೆ ಅನು ಸಂಧಾನವಾದ ಪ್ರಕ್ರಿಯೆ ಎಂಬ ಪರಮಾರ್ಥ ಸೃಷ್ಟಿ, ಸ್ಥಿತಿ, ಲಯಗಳೆಂಬ ಜೀವನ ವ್ಯವಸ್ಥೆಗೆ ಕಾರಣವಾದ ದೇವಾನು ದೇವನಿಗೆ ಸರ್ವೋತ್ತಮನಿಗೆ ಕೃತಜ್ಞತೆ ಸಲ್ಲಿಸುವ ಧಾರ್ಮಿಕ ವಿಧಾನವೇ ಪೂಜೆ.

ಪೂಜೆ ಮಾಡದೇ ಇದ್ದರೇ ಏನಾಗುತ್ತದೆಯೋ ಗೊತ್ತಿಲ್ಲ. ಆದರೆ, ಪ್ರತಿನಿತ್ಯವೂ ಪೂಜೆ ಮಾಡಿದರೆ, ಮಾತ್ರ ನಮ್ಮ ಜೀವನಕ್ಕೇನು ಬೇಕೋ ಎಲ್ಲವೂ ಸಿಗುತ್ತವೆ. ಶಾಂತಿ, ನೆಮ್ಮದಿ, ನಂಬಿಕೆ, ಸಂತೋಷ, ಸಹೃದಯತೆ, ಯೋಜನಾ ಮುನ್ನಡೆ, ಧೈರ್ಯ, ಕಾರ್ಯದಕ್ಷತೆ, ದೀಕ್ಷೆ, ಆಶಾವಾದ, ಶ್ರದ್ಧೆ, ಗಹಿತ್ಯ ಕಲಿಯುವಿಕೆ, ಆರಾಧನೆ, ಐಕ್ಯತೆ, ಮುಂತಾದ  ಶಕ್ತಿ ಕ್ರಿಯೆಗಳು ಲಭಿಸುತವೆ‌. ಪೂಜೆಯಿಂದ ಮನೋಶಕ್ತಿ ವೃದ್ಧಿಯಾಗುತ್ತದೆ.

 "ಅವಶ್ಯ ಮನುಭೋಕ್ತವ್ಯಂ  ಗತಂ ಜನ್ಮಶುಭಾಶುಭಂ"

ಗತ ಜನ್ಮದಲ್ಲಿ ಮಾಡಿರುವ ಪಾಪ ಪುಣ್ಯಗಳನ್ನೇ ನಾವು

ಈ ಜನ್ಮದಲ್ಲಿ ಅನುಭವಿಸುತ್ತಿದ್ದೇವೆ. ಅಂದಮೇಲೆ ಗತ ಜನ್ಮದ ಕಾರಣದಿಂದ ಬಂದ ಕಷ್ಟಗಳನ್ನು ಈಗ ಅನುಭವಿಸ ಬೇಕಾಗಿ ಬಂದಿದೆ. ಈಗ ಮಾಡುವ ಪೂಜೆಗೂ ಕಷ್ಟಗಳಿಗೂ ಸಂಬಂಧವಿಲ್ಲ. ನಾವೀಗ ಮಾಡುವ ಪೂಜಾಫಲದಿಂದ ಕಷ್ಟ ನಿವಾರಣೆಯಾಗದಿದ್ದರೂ. ಉಪಶಮನ ಸಿಗುತ್ತದೆ. ಸಹನಾ ಶಕ್ತಿ ಸಿಗುತ್ತದೆ. "ಗತ ಜನ್ಮದ ರೋಗಕ್ಕೆ ಈ ಜನ್ಮದ ಔಷಧಿಯೇ ಪೂಜೆ".

"ಪ್ರಾರ್ಥನೆ ಪೂಜೆ ನಂಬಿದವರಿಗೆ ದೇವರಿದ್ದಾನೆ, ಪಾಲಿಸು ತ್ತಾನೆ, ರಕ್ಷಿಸುತ್ತಾನೆ, ಸಹಕರಿಸುತ್ತಾನೆ" ಎಂಬುದಕ್ಕೆ ಸಾಕ್ಷಿಯಾಗುವ ಸ್ವಾರಸ್ಯಕರ ಪ್ರಸಂಗವೊಂದು ಇಲ್ಲಿದೆ....‼️ ‌  

ಒಂದು ನಗರದಲ್ಲಿ ಔಷಧ ಅಂಗಡಿ ಹೊಂದಿದ್ದ ವ್ಯಕ್ತಿಯೊಬ್ಬ ದೇವರನ್ನು ನಂಬದ ಪರಮ ನಾಸ್ತಿಕನಾಗಿದ್ದ. ಆದರೆ ಜನ ಸೇವೆಯೆಂಬ ಕಾಯಕದಿಂದ ಆಸುಪಾಸಿನವರಿಗೆಲ್ಲ ಅಚ್ಚು ಮೆಚ್ಚಿನವನಾಗಿದ್ದ. ಆತನ ಮನೆಯವರೆಲ್ಲ ಆಸ್ತಿಕರಾಗಿ ದ್ದರು. ದೇವಸ್ಥಾನ, ದೇವರು, ಪ್ರಾರ್ಥನೆ ಇಂತಹ ವಿಚಾರ ದಲ್ಲಿ ನಂಬಿಕೆ ಇದ್ದ ಮನೆಮಂದಿಯೆಲ್ಲ ಈತನನ್ನು ಪ್ರಾರ್ಥಿಸುವಂತೆ ಒತ್ತಾಯಿಸುತ್ತಿದ್ದರೂ ನಾಸ್ತಿಕನಾಗಿಯೇ ಉಳಿದಿದ್ದ.

ಒಂದು ದಿನ ರಾತ್ರಿ ಜೋರಾಗಿ ಮಳೆಸುರಿಯಲಾರಂಭಿಸಿ ದಾಗ ವಿದ್ಯುತ್ ಕಡಿತವಾಯಿತು. ಆ ವೇಳೆಯಲ್ಲಿ ಮಳೆ ಯಲ್ಲಿ ತೋಯ್ದು ಹೋಗಿದ್ದ ಬಾಲಕನೊಬ್ಬ ಓಡೋಡಿ ಬಂದು ಅನಾರೋಗ್ಯ ಪೀಡಿತಳಾಗಿರುವ ತನ್ನ ತಾಯಿಗೆ ತುರ್ತಾಗಿ ಔಷಧ ಕೊಡುವಂತೆ ಕೋರಿ ಔಷಧ ಚೀಟಿಯನ್ನು ಕೊಟ್ಟ. ಅಂಗಡಿ ಮಾಲೀಕ ಒಲ್ಲದ ಮನಸ್ಸಿನಿಂದಲೇ ಟಾರ್ಚ್ ಬೆಳಕಿನಲ್ಲಿ ತಡಕಾಡಿ ಔಷಧ ಕೊಟ್ಟು ಕಳಿಸಿದ.

ಕೊಂಚ ಹೊತ್ತಲ್ಲಿ ಮಳೆ ನಿಂತು, ವಿದ್ಯುತ್ ದೀಪಗಳು ಬೆಳಗಿದವು. ಅಷ್ಟರಲ್ಲಿ ಅಂಗಡಿ ಮಾಲೀಕ, ತಾನು ಕತ್ತಲಲ್ಲಿ ಬಾಲಕನಿಗೆ ಕೊಟ್ಟ ಔಷಧಗಳತ್ತ ಗಮನ ಹರಿಸಿ ಹೌಹಾರಿದ. ಅದು ಮನುಷ್ಯರು ಸೇವಿಸುವ ಔಷಧವಾಗಿರದೆ ಕ್ರಿಮಿ ನಾಶಕದ ಬಾಟಲಿಯಾಗಿತ್ತು. ತನ್ನಿಂದ ಅಮಾಯಕ ಜೀವ ವೊಂದು ಬಲಿಯಾಗುತ್ತದಲ್ಲ ಎಂಬ ಪಾಪಪ್ರಜ್ಞೆಯೂˌ ಜೊತೆಗೆ ಆ ಬಾಲಕ ಅನಾಥನಾಗುತ್ತಾನಲ್ಲ, ಎಂಬ ಅಪರಾಧ ಪ್ರಜ್ಞೆಯೂ ಕಾಡಿತು. ಏನು ಮಾಡಬೇಕೆಂಬುದನ ರಿಯದೆ ಈ ದುರಂತವನ್ನು ಹೇಗೆ ತಪ್ಪಿಸಲಿ ಎಂದು ಯೋಚಿಸುತ್ತಾನೆ.

ಆಗ ಆತನಿಗೆ ಗೋಡೆಯಲ್ಲಿ ತೂಗುಹಾಕಿದ್ದ ದೇವರ ಚಿತ್ರ ಪಟವೊಂದು ಕಣ್ಣಿಗೆ ಬಿತ್ತು. ಬೇಡವೆಂದರೂ ಒತ್ತಾಯ ದಿಂದ ಆತನ ತಂದೆ ಅದನ್ನಲ್ಲಿ ತೂಗು ಹಾಕಿದ್ದರು. "ಯಾವುದೇ ಸಂದರ್ಭದಲ್ಲಿ ಪರಿಸ್ಥಿತಿ ನಿನ್ನ ಕೈಮೀರಿ ಹೋದಾಗ, ಅಸಹಾಯ ಸ್ಥಿತಿಯಲ್ಲಿದ್ದಾಗಲಾದರೂ ಈ ಚಿತ್ರ ಪಟಕ್ಕೆ ಕೈಮುಗಿದು ಮನಃಪೂರ್ವಕವಾಗಿ ಪ್ರಾರ್ಥಿಸು, ದಾರಿಯೊಂದು ಗೋಚರವಾಗುತ್ತದೆ" ಎಂದು ಅಪ್ಪ ಹೇಳಿದ್ದ ಮಾತು ಆ ಕ್ಷಣಕ್ಕೆ ನೆನಪಿಗೆ ಬಂತು. ಎಂದೂ ದೇವರಿಗೆ ಕೈಮುಗಿಯದಿದ್ದ ಆತ ಮೊದಲ ಬಾರಿಗೆ ಕೈಮುಗಿದು ಪ್ರಾರ್ಥನೆ ಸಲ್ಲಿಸಿದ. 

ಕೆಲವೇ ಕ್ಷಣಗಳಲ್ಲಿ ಪವಾಡವೋ ಎಂಬಂತೆ ಔಷಧ ತೆಗೆದು ಕೊಂಡು ಹೋಗಿದ್ದ ಬಾಲಕ ಏದುಸಿರು ಬಿಡುತ್ತ ಓಡೋಡಿ ಅಂಗಡಿಗೆ ಬಂದು 'ಅಂಕಲ್ ಜೋರುಮಳೆಯಲ್ಲಿ ನಾನು ಓಡೋಡಿ ಹೋಗುತ್ತಿದ್ದಾಗ ನೀವು ಕೊಟ್ಟಿದ್ದ ಔಷಧ ಬಾಟಲಿ ಕೈಜಾರಿ ಕೆಳಗೆ ಬಿದ್ದು ಒಡೆದು ಹೋಯಿತು, ನನಗೆ ಇನ್ನೊಂದು ಔಷಧ ಬಾಟಲಿ ಕೊಡಿ, ಆದರೆ ನನ್ನಲ್ಲೀಗ ಕೊಡಲು ಹಣವಿಲ್ಲ' ಎಂದು ಗಾಬರಿಯಿಂದ ಒಂದೇ ಉಸಿರಿಗೆ ಹೇಳಿ ಕಣ್ಣೀರು ಹಾಕಿದ. 

ಆಗ ಅಂಗಡಿಯವನು ಆ ಬಾಲಕನನ್ನು ತಬ್ಬಿಕೊಂಡು, ಆತನಿಗೆ ಬೇಕಾದ ಔಷಧದ ಜೊತೆಗೆ ಕೊಂಚ ಹಣವನ್ನೂ ಕೊಟ್ಟು ಕಳಿಸಿದ. ನಾಸ್ತಿಕನಾಗಿದ್ದರೂ ಪರಿಶುದ್ಧ ಮನಸ್ಸಿನಿಂದ ಆತ ಮೊದಲ ಬಾರಿಗೆ ದೇವರಲ್ಲಿ ಮೊರೆ ಇಟ್ಟು ಮಾಡಿದ ಪ್ರಾರ್ಥನೆ ಕೈಗೂಡಿತ್ತು. ಮನುಜ ಶುದ್ಧ ಭಕ್ತಿಯ ಮೂಲಕ ಮೋಕ್ಷವನ್ನು ಪಡೆಯಬಹುದು. 


ಸರ್ವಶಕ್ತನಾದ ಭಗವಂತನಲ್ಲಿ ಅನುದಿನ-ಅನುಕ್ಷಣ ಪ್ರಾರ್ಥನೆ ಸಲ್ಲಿಸುತ್ತಿರಬೇಕು. ನಿಷ್ಕಲ್ಮಶ ಮನದಿಂದ ಪ್ರಾರ್ಥನೆ ಸಲ್ಲಿಸಿದಾಗ ಅಸಾಧ್ಯವೂ ಸಾಧ್ಯವಾಗುತ್ತದೆ.

  ॥ಶ್ರೀಕೃಷ್ಣಾರ್ಪಣಮಸ್ತು॥

(ಸತ್ಸಂಗ ಸಂಗ್ರಹ)

✍️ಮೂಲ ಲೇಖಕರಿಗೆ:

SUGAMA BHAJANE - 9

 ಭಾನುವಾರ, 26 ಜುಲೈ, 2022 

ಜೂಮ್ ಮೂಲಕ 

ಅಭ್ಯಾಗತರು: (Host) : ಅಶೋಕ್, ಸುಧಾಕರ್ ಖಂಡಿಗೆ, ಶಾರ್ಜಾ.


ಎಂದಿನಂತೆ ಭಜನೆ ಕಾರ್ಯಕ್ರಮವು ಇಲ್ಲಿ 6.30 ಗಂಟೆಗೆ (ಯು.ಎ.ಇ. ನಲ್ಲಿ 5 ಗಂಟೆಗೆ) ಲಲಿತಾ ಸಹಸ್ರನಾಮ ದೊಂದಿಗೆ ಪ್ರಾರಂಭವಾಯಿತು.


ಕರುನಾಕನರನೀ ನೆಂಬುವ ದ್ಯಾತಕೋ - ಜಯರಾಮ ಸೋಮಯಾಜಿ 

ಈ ಕೆಳಗಿನವರು ಹಾಜರಿದ್ದರು:

ಅಶೋಕ್, ಕಲ್ಪನಾ, ಅಕ್ಷತ, ಅನನ್ಯ, ಸುಧಾಕರ್ ಖಂಡಿಗೆ (ಶಾರ್ಜಾ)


ಪಂಡರಾಪುರದಲಿ ಪಾಂಡುರಂಗ - ನಳಿನಿ ಸೋಮಯಾಜಿ 

ಉದಯಕುಮಾರ್ (ದುಬೈ)

ಪ್ರಶಾಂತ್, ಸುಪ್ರಿಯಾ, ಅನಿರುದ್ಹ್, (ಶಾರ್ಜಾ)


ರಾಘವೇಂದ್ರ ತವ ನಾಮವೇ ಮಧುರಾ - ಜಯರಾಮ ಸೋಮಯಾಜಿ 

ಜಯರಾಮ ಸೋಮಯಾಜಿ, ನಳಿನಿ ಸೋಮಯಾಜಿ (ಬೆಂಗಳೂರು)


ದೀನ ದಯಾಳೋ  ರಾಮಾ - ರವಿರಾಜ್ ತಂತ್ರಿ 

ಸುಧಾಕರ್ ಪೇಜಾವರ್, ಲತಾ (ಬೆಂಗಳೂರು)


ಕೃಷ್ಣ ಕೃಷ್ಣ ಓಡಿ ಬಾ - ಲತಾ ಸುಧಾಕರ್ 

ರಾಜೇಶ್ವರ ಹೊಳ್ಳ (ಮಂಗಳೂರು)


ಹಿಮಗಿರಿ ತನಯೇ ಹೇಮಲತೆ - ರಾಮಚಂದ್ರ ಉಡುಪ ಮತ್ತು ತಂಡ 

ರಾಮಚಂದ್ರ ಉಡುಪ, ರಾಘವೇಂದ್ರ, ಪುರುಷೋತ್ತಮ ಉಡುಪ (ಉಡುಪಿ)


ಪಾಹಿ ಪಾಹಿ ಗಜಾನನ - ರಾಘವೇಂದ್ರ ಉಡುಪ 

ರವಿರಾಜ್ ತಂತ್ರಿ, ಪ್ರತಿಮಾ (ದುಬೈ)

ಸುಮಂಗಲಿ (ಪಾರಂಪಳ್ಳಿ , ಸಾಲಿಗ್ರಾಮ)


ಆರತಿ - ಜಯ್ ಜಗದೀಶ ನಮೋ - ಸುಪ್ರಿಯಾ, ಪ್ರಶಾಂತ್ 

ವಿದ್ಯಾ ವಿಶ್ವನಾಥ್ (ಬೆಂಗಳೂರು)

ವಿಶೇಷಅತಿಥಿಗಳು : ಸುಶ್ರಾವ್ಯ (ಮಂಗಳೂರು) 



ಚಲಿಸುವ ಜಲದಲಿ ಮತ್ಸ್ಯನಿಗೆ - ರಾಮಚಂದ್ರ ಉಡುಪ 

ಬರೆದಿರುವುದು - 30/6/2022 

Monday, June 27, 2022

HAPPY WORLD HEALTH DAY TO ALL...

 HAPPY WORLD HEALTH DAY TO ALL... 


Important numbers to remember :

1. Blood pressure : 120 / 80

2. Pulse                   : 70 - 100

3. Temperature     : 36.8 - 37

4. Respiration        : 12-16

                        Males     (13.50-18)

                        Females ( 11.50 - 16) 

6. Cholesterol        : 130 - 200

7. Potassium          : 3.50 - 5

8. Sodium                : 135 - 145

9. Triglycerides      : 220

10. Amount of blood in the body : 

                            Pcv 30-40%

11. Sugar             

              Children     : 70-130

              Adults        : 70 - 115

12. Iron                    : 8-15 mg

13. WBC                   : 4000 - 11000

14. Platelets           : 150,000 - 400,000

15. RBC                     : 4.50 - 6 million

16. Calcium              : 8.6 - 10.3 mg/dL

17. Vitamin D3        : 20 - 50 ng/ml

                                  (nanograms/ml)

18. Vitamin B12       : 200 - 900 pg/ml

Tips for the 60 plus

 First Tip:

 Always drink water even if you don't feel thirsty!!

 The biggest health problem  is from the lack of water in the body!

2 litres Minimum per day (24 hours) 

Second Tip:

 Play sports even when you are very busy!

The body must be moved, even if only by walking or swimming or any kind of sport!.🚶 

Walking is good for a start!👌

 Third Tip:

Reduce food!

Leave excessive food cravings  because it never does good!

Don't deprive yourself  but reduce the quantity!

 Use more of Protein & Carbohydrates based foods. 

 Fourth Tip

 As much as possible, do not use the car unless absolutely necessary! Try to reach on foot for what you want (grocery, visiting someone or any goal)!  Climb stairs instead of  using an elevator/ escalator. 

Fifth Tip

 Let go of Anger!!

 Let go of worry!!

Try to overlook things...

 Do not involve yourself in situations of disturbances! They all diminish health and take away the splendor of the soul. Talk to people who are positive and listen 👂 

Sixth Tip

 As it is said....'leave your money in the Sun  and sit in the shade'!!

Don't limit yourself and those around you.

Money was made to live by it, not to live for it.

Seventh Tip

 Don't make yourself feel sorry for anyone nor on something you could not achieve, 

nor anything that you could not own!

 Ignore it, forget it!🤔

Eighth Tip

Humility! Money, Prestige, Power and Influence  are all things that are corrupted by arrogance!

 Humility is what brings people closer to you with love.!☺ 

Ninth Tip

If your hair turns grey, this does not mean the end of life! It is a proof that a better life has begun! 

 Be optimistic, travel, enjoy yourself!  Make memories!

WorldHealthDay

Wishing you a Healthy and Happy life!!

From WhatApp 28/6/2022

Friday, June 24, 2022

ಯಾವ ಸಂದರ್ಭದಲ್ಲಿ ಮೌನವಾಗಿರಬೇಕು?..

 ಯಾವ ಸಂದರ್ಭದಲ್ಲಿ ಮೌನವಾಗಿರಬೇಕು?...

ವಾಟ್ಸ್ ಆಪ್ ನಿಂದ:


ನಾವು ಮಾತನಾಡುವ ರೀತಿಗೆ ಸಂಬಂಧವನ್ನು ಉಳಿಸುವ ಅಥವಾ ಅಳಿಸುವ ಶಕ್ತಿ ಇರುತ್ತದೆ.

'ಮಾತು ಬೆಳ್ಳಿ, ಮೌನ ಬಂಗಾರ' ಈ ಮಾತು ಅಕ್ಷರಶಃ ಸತ್ಯ. ಯಾವಾಗ ಮಾತನಾಡಬೇಕು, ಯಾವಾಗ ಮೌನವಾಗಿರಬೇಕು ಎಂಬ ಪ್ರಜ್ಞೆಯನ್ನು ಬೆಳೆಸಿಕೊಂಡಿರುವುದೇ ಬುದ್ಧಿವಂತಿಕೆ. ಯಾಕೆಂದರೆ ಕೇವಲ ಮಾತಿನಿಂದಲೇ ಎಷ್ಟೋ ಸಂಬಂಧಗಳು ಕಡಿದುಕೊಳ್ಳುತ್ತವೆ. ಅದರಿಂದಲೇ ಹೇಳುವುದು 'ಮೌನಂ ಕಲಹ ನಾಸ್ತಿ'.

ಯಾವಾಗ ಮಾತನಾಡಬೇಕು, ಯಾವಾಗ ಮೌನವಾಗಿರಬೇಕು ಎಂಬುದರ ಅರಿವಿರಬೇಕು ನಮಗೆ. ಅದು ಅನುಭವದಿಂದ ಬರುವಂತದ್ದು, ಪಕ್ವತೆಯಿಂದ ಬರುವಂತದ್ದು.

ಪ್ರಶ್ನೆಗೆ ಉತ್ತರಿಸಿದ ಎಲ್ಲ ಸನ್ಮಿತ್ರ ಸದಸ್ಯರ ಅಭಿಪ್ರಾಯಗಳನ್ನು ಕ್ರೋಢೀಕರಿಸಿ ಯಾವ ಯಾವ ಸಂದರ್ಭಗಳಲ್ಲಿ ಮೌನವಾಗಿರಬೇಕು ಎಂಬುದನ್ನು ಹೇಳುವುದಾದರೆ..... 👇

🔸 ಜ್ಞಾನಿಗಳ ಮುಂದೆ, ಗುರು-ಹಿರಿಯರ ಮುಂದೆ ನಮ್ಮ ಅಲ್ಪವಿದ್ಯೆ, ಅರ್ಧಂಬರ್ಧ ತಿಳುವಳಿಕೆಯ ಪಾಂಡಿತ್ಯ ಪ್ರದರ್ಶನ ಮಾಡದೇ ಮೌನವಾಗಿರುವುದು ಲೇಸು. 

🔸 ಪೂಜೆಯ ಸಮಯದಲ್ಲಿ, ಪ್ರಾರ್ಥನೆ ಸಲ್ಲಿಸುವಾಗ, ಧ್ಯಾನ ಮಾಡುವಾಗ ಮೌನವಾಗಿರಬೇಕು ಹಾಗೂ ಎದ್ದು ಓಡಾಡಬಾರದು. 

🔸 ದೇವಸ್ಥಾನಗಳಲ್ಲಿ, ದೇವರ ಸನ್ನಿಧಿಯಲ್ಲಿ ಮೌನವಾಗಿರಬೇಕು. ಆಶ್ರಮಗಳಲ್ಲಿ ಆದಷ್ಟೂ ಮೌನವಾಗಿರಬೇಕು.

🔸 ಮತ್ತೊಬ್ಬರ ಮನೆಯಲ್ಲಿ ನಡೆಯುವ ಪೂಜೆ, ದೈವಾರಾಧನೆ.. ಮುಂತಾದ ಶುಭಕಾರ್ಯಗಳಿಗೆ ಆಹ್ವಾನಿತರಾಗಿ ಹೋದಾಗ ಮೌನವಾಗಿರಬೇಕು.

🔸 ಆಧ್ಯಾತ್ಮಿಕ ಪ್ರವಚನ ನಡೆಯುವಲ್ಲಿ, ಪುರಾಣ, ಹರಿಕಥೆ ನಡೆಯುವಲ್ಲಿ ಮನಸ್ಸು ಕೊಟ್ಟು ಆಲಿಸಬೇಕು. ಅಲ್ಲಿ ಕಿವಿಗಳಿಗೆ ಮಾತ್ರ ಕೆಲಸ. ಹರಟೆಗೆ ಆಸ್ಪದ ಕೊಡದೇ ಮೌನವಾಗಿರಬೇಕು.

🔸 ನಮ್ಮ ಮಾತಿಗೆ ಬೆಲೆ, ಗೌರವ ಸಿಗದ ಕಡೆ ಮೌನವಾಗಿರಬೇಕು. ಎದುರಿಗಿರುವ ವ್ಯಕ್ತಿಯಿಂದ ನಮ್ಮ ಮಾತಿಗೆ ಸ್ಪಂದನೆ ಸಿಗದೇ ಇದ್ದಾಗ ಮೌನದಿಂದಿರಬೇಕು ಎದ್ದು ಹೊರ ಬಂದರೂ ಆದೀತು.

🔸 ಅಜ್ಞಾನಿಗಳ ಜೊತೆಯಲ್ಲಿ, ಮೂರ್ಖರ ಜೊತೆಯಲ್ಲಿ, ವಿತಂಡವಾದಿಗಳ ಜೊತೆಯಲ್ಲಿ ವಾದ ಮಾಡದೇ ಮೌನವಾಗಿರುವುದೇ ಲೇಸು.

🔸 ಎಲ್ಲಿ ಮಾತಿನಿಂದ ಕಲಹ ಉಂಟಾಗುವ ಸಂಭವವಿರುತ್ತದೆಯೋ ಅಲ್ಲಿ ಮೌನವಹಿಸಬೇಕು.

🔸 ಮನೆಯಲ್ಲಿ ಇಬ್ಬರು ಸ್ತ್ರೀಯರ ಮಧ್ಯೆ (ಅತ್ತೆ-ಸೊಸೆ) ಮಾತಿನ ವಾಗ್ವಾದ ನಡೆವಾಗ ಯಾರ ಪರ ವಹಿಸದೇ ಸುಮ್ಮನಿರುವುದು ಒಳ್ಳೆಯದು. 

🔸 ನಮ್ಮನ್ನು ಕೆಣಕುವ ಉದ್ದೇಶದಿಂದಲೇ ಕಾಲುಕೆರೆದು ಜಗಳಕ್ಕೆ ಬರುವವರಿಗೆ ಮೌನವೇ ನಮ್ಮ ಉತ್ತರವಾಗಬೇಕು. ಅವರಿಗೆ ಅಸ್ತ್ರ ಸಿಗುವಂತಾಗಬಾರದು.

🔸 ಸಾವಿನ ಮನೆಯಲ್ಲಿ, ಸೂತಕದ ಛಾಯೆ ಆವರಿಸಿರುವ ವಾತಾವರಣದಲ್ಲಿ ಮೌನವಹಿಸಬೇಕು.

🔸 ಕೇಳದೆಯೇ ಯಾರಿಗೂ ಸಲಹೆ ಕೊಡುವ, ಉಪದೇಶ ಮಾಡುವ ಕೆಲಸವನ್ನು ಮಾಡಬಾರದು.

🔸 ಸಿಟ್ಟು ಬಂದಾಗ ಮಾತನಾಡದೇ ಮೌನವಾಗಿರಬೇಕು.. ಯಾವುದೇ ವಿಷಯಕ್ಕೂ ಕೋಪದಿಂದ ಪ್ರತಿಕ್ರಿಯೆ ನೀಡಲೇಬಾರದು. ಅಂತಹ ಸಂದರ್ಭಗಳಲ್ಲಿ ಮಾತನಾಡುವಾಗ ನಾವು ನಮ್ಮ ವಿವೇಚನೆ ಕಳೆದುಕೊಂಡಿರುತ್ತೇವೆ. ಕ್ರೋಧದಿಂದ ಗಟ್ಟಿಧ್ವನಿಯಲ್ಲಿಮತ್ತೊಬ್ಬರ ಮೇಲೆ ರೇಗಾಡಿಬಿಡುತ್ತೇವೆ. ಇದು ಕೇವಲ ಇಬ್ಬರ ನಡುವಿನ ಸಂವಹನವನ್ನು ಮಾತ್ರವಲ್ಲ, ಸಂಬಂಧವನ್ನೇ ಹಾಳು ಮಾಡಿಬಿಡುತ್ತದೆ.

🔸 ಸತ್ಯ ಏನು ಎಂಬುದು ಗೊತ್ತಿಲ್ಲದೇ ಇದ್ದಾಗ ಮಾತನಾಡದೇ ಮೌನದಿಂದಿರುವುದು ಇರುವುದು ಒಳ್ಳೆಯದು. ಕೆಲವೊಂದು ಸಂದರ್ಭಗಳಲ್ಲಿ ಘಟನೆ ಏನು, ನಿಜವಾಗಿಯೂ ಏನಾಗಿದೆ ಎಂಬುದು ತಿಳಿಯದೆಯೂ ಕೆಲವರು ಮಾತನಾಡುವುದಿದೆ. ವಿನಾಃ ಕಾರಣ ಹಬ್ಬಿದ ವದಂತಿಗಳೂ ಅದಾಗಿರಬಹುದು. ಹೀಗೆ ಗೊತ್ತಿಲ್ಲದ ವಿಚಾರಗಳಿಗೆ ಪ್ರತಿಕ್ರಿಯೆ ನೀಡುವುದರಿಂದ ಅನಗತ್ಯ ಮನಸ್ತಾಪಗಳಿಗೆ ಕಾರಣವಾಗುವುದರಿಂದ ಮೌನವಾಗಿರುವುದೇ ಲೇಸು. 

🔸 ಎದುರಿಗಿದ್ದವರಿಗೆ ನಮ್ಮ ಮಾತಿನಿಂದ ನೋವುಂಟಾಗುತ್ತದೆ ಅಂತಾದರೆ ಮೌನವಾಗಿರುವುದೇ ಒಳ್ಳೆಯದು. ನಮ್ಮ ಮಾತಿನಿಂದ ಆ ವ್ಯಕ್ತಿಯ ಮನಸ್ಥಿತಿ ಕುಗ್ಗಿ ಹೋಗಬಹುದು. ಅಂತಹ ಸಂದರ್ಭದಲ್ಲಿ ಮೌನವಾಗಿರುವುದೇ ಲೇಸು.

🔸 ಇತರರು ಮಾತನಾಡುವಾಗ ಮೌನವಾಗಿದ್ದುಕೊಂದು ಅವರ ಮಾತು ಮುಗಿಯುವವರೆಗೂ ಕೇಳಿಸಿಕೊಳ್ಳಬೇಕು. ಒಳ್ಳೆಯ ಕೇಳುಗ ಒಳ್ಳೆಯ ಮಾತುಗಾರನೂ ಆಗಬಲ್ಲ. 

🔸 ನಿರಂತರವಾಗಿ ಮಾತನಾಡುತ್ತಿದ್ದರೆ ಎದುರಿಗಿದ್ದವರಿಗೆ ಸಹಿಸಿಕೊಳ್ಳಲೂ ಅಸಾಧ್ಯವಾಗಬಹುದು. ಎಷ್ಟು ಬೇಕೋ ಅಷ್ಟು ಮಾತನಾಡಿ ಮೌನವಾಗಿರುವುದು ಒಳ್ಳೆಯದು.  

🔸 ಇನ್ನೊಬ್ಬರ ನಡವಳಿಕೆಯ ಬಗ್ಗೆ ತೀರ್ಪು ನೀಡಲು ಹೋಗದೇ ಮೌನವಾಗಿರುವುದು ಒಳ್ಳೆಯದು.  

🔸 ಗುಂಪಿನಲ್ಲಿ ಒಂದಷ್ಟು ಜನ ಯಾವುದೋ ವಿಚಾರಕ್ಕೆ ಮಾತನಾಡುತ್ತಿರುತ್ತಾರೆ, ಏನು ಎಂಬುದು ತಿಳಿದಿರುವುದಿಲ್ಲ. ಆದರೂ ಅವರ ಮಧ್ಯೆ ಹೋಗಿ ಸೇರಿಕೊಂಡಾಗ ಎಲ್ಲವೂ ಗೊತ್ತಿದ್ದವರಂತೆ ವರ್ತಿಸಬಾರದು. ಯಾವ ರೀತಿ ಮಾತನಾಡಬೇಕು, ಯಾವ ಸಂದರ್ಭದಲ್ಲಿ ಹೇಗೆ ಮಾತನಾಡಬೇಕು ಎಂಬುದರ ಅರಿವು ಇರಬೇಕು. ನಮ್ಮ ಮಾತಿನ ಅಗತ್ಯ ಇಲ್ಲದಿದ್ದರೂ ಅನಗತ್ಯವಾಗಿ ಮಾತನಾಡಿ ಮುಜುಗರಕ್ಕೀಡಾಗಬಾರದು.

🔸 ಹೇಳಿದ್ದನ್ನೇ ಮತ್ತೆ ಮತ್ತೆ ಹೇಳುವುದು. ಹೀಗೆ ಮಾಡುವುದರಿಂದ ಕೇಳಿಸಿಕೊಳ್ಳುವವರಿಗೂ ಬೇಸರವಾಗುತ್ತದೆ. ಹೇಳಿದ್ದನ್ನೇ ಹೇಳಿದರೆ ಸುಳ್ಳು ಹೇಳುತ್ತಿದ್ದಾರೋ ಏನೋ ಎಂದೆಣಿಸಬಹುದು. ಮಾತಾನಾಡುವಾಗ ಇತರರು ನಮ್ಮ ಮಾತನ್ನು ತುಂಡರಿಸುವ ಮೊದಲು ನಾವೇ ಮಾತಿಗೆ ಪೂರ್ಣ ವಿರಾಮ ಹಾಕಿ ಮೌನವಹಿಸುವುದು ಒಳ್ಳೆಯದು.

ನಾವು ಮಾತನಾಡುವ ರೀತಿಗೆ ಸಂಬಂಧವನ್ನು ಉಳಿಸುವ ಅಥವಾ ಅಳಿಸುವ ಶಕ್ತಿ ಇರುತ್ತದೆ. ಹಾಗಾಗಿ ಅನುಕಂಪ, ಪ್ರೀತಿ, ಸಕಾರಾತ್ಮಕತೆ, ಇತರರನ್ನು ಪ್ರೇರೇಪಿಸುವ, ಪ್ರೋತ್ಸಾಹಿಸುವ ಮಾತುಗಳನ್ನೇ ಆಡಬೇಕು. ಇಲ್ಲವಾದರೆ ಮೌನವಾಗಿರುವುದೇ ಲೇಸು.

ಶಿವಾರ್ಪಣಮಸ್ತು 

ಸದ್ವಿಚಾರ ತರಂಗಿಣಿ.

APPA BIRTHDAY FACEBOOK POST

TUESDAY 21ST JUNE 2022

FACEBOOK POST & COMMENTS:

Tiru Sridhar: www.sallapa.com
ಜಯರಾಮ ಸೋಮಯಾಜಿ
Happy birthday Jayarama Somayaji Sir

ಜಯರಾಮ ಸೋಮಯಾಜಿ - ನಳಿನಿ ಸೋಮಯಾಜಿ ದಂಪತಿಗಳು ನಮ್ಮ ನಡುವೆ ಇರುವ ವಿಶಾಲವ್ಯಾಪ್ತಿಯ ಸಾಹಿತ್ಯ, ಕಲೆ, ಶಿಕ್ಷಣ, ಪರಿಸರ ಮತ್ತು ಸಾಂಸ್ಕೃತಿಕ ಪ್ರೀತಿಗಳ ನೆಲೆಯಂತಿರುವವರು. ಈ ದಂಪತಿಗಳು ಭಾರತದಲ್ಲಷ್ಟೇ ಅಲ್ಲದೆ ಆಫ್ರಿಕಾದ ಹಲವು ದೇಶಗಳು ಮತ್ತು ಮಧ್ಯಪ್ರಾಚ್ಯದ ದುಬೈ ಪ್ರದೇಶದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವುದರ ಜೊತೆಗೆ ಕನ್ನಡ ಸಾಂಸ್ಕೃತಿಕ ಪರಿಸರದ ವಿಸ್ತಾರಕ್ಕೆ ಬಹಳಷ್ಟು ಕೊಡುಗೆ ನೀಡಿದ್ದಾರೆ. ಇಂದು ಪೂಜ್ಯ ಜಯರಾಮ ಸೋಮಯಾಜಿ ಅವರ ಜನ್ಮದಿನ.
ಜಯರಾಮ ಸೋಮಯಾಜಿ ಅವರು ಸಾಲಿಕೇರಿ ಬ್ರಹ್ಮಾವರದ ಹತ್ತಿರದ ಬಿರ್ತಿ ಎಂಬಲ್ಲಿ 1948ರ ಜೂನ್ 21ರಂದು ಜನಿಸಿದರು. ತಂದೆ ಅಲ್ಲಿಯ ಶ್ರೀ ದುರ್ಗಾಪರಮೇಶ್ವರಿ ವೀರಭದ್ರ ದೇವಸ್ಥಾನದ ಅರ್ಚಕರಾದ ವೆಂಕಟ್ರಮಣ ಸೋಮಯಾಜಿ. ತಾಯಿ ಕಾವೇರಿ. ಹಾರಾಡಿ ವಿದ್ಯಾಮಂದಿರ ಶಾಲೆಯಲ್ಲಿ ಜಯರಾಮ ಸೋಮಯಾಜಿ ಅವರ ವಿಧ್ಯಾಭ್ಯಾಸ ಆರನೇ ಕ್ಲಾಸಿನವರೆಗೆ ನಡೆದು ಏಳನೇ ಕ್ಲಾಸಿಗೆ ಬ್ರಹ್ಮಾವರದ ಎಸ್.ಎಮ್.ಎಸ್. ಹೈಸ್ಕೂಲಿಗೆ ಸೇರಿದರು. 1964ರಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಪ್ರಥಮ ದರ್ಜೆಯಲ್ಲಿ, ಡಿಸ್ಟಿಂಕ್ಷನ್ನಿನಲ್ಲಿ ಉತ್ತೀರ್ಣರಾಗಿ ಉಡುಪಿಯಲ್ಲಿಯ ಎಮ್.ಜಿ.ಎಮ್. ಕಾಲೇಜಿಗೆ ಪಿಯುಸಿ. ವಿಜ್ಞಾನ ವಿಭಾಗಕ್ಕೆ ಸೇರಿದರು. ಆಗ ಕು.ಶಿ.ಹರಿದಾಸ ಭಟ್ಟರು ಕಾಲೇಜಿನ ಪ್ರಾಂಶುಪಾಲರಾಗಿದ್ದರು. 12ಕಿಲೋಮೀಟರ್ ಏರುತಗ್ಗುಗಳ ಸೈಕಲ್ ಪಯಣದಲ್ಲಿ ಓದು ಸಾಗಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದರು. 1965ರಲ್ಲಿ ಗಣಿತ, ಭೌತಶಾಸ್ತ್ರ, ರಸಾಯನ ಶಾಸ್ತ್ರಗಳನ್ನಾಯ್ದು ಬಿ.ಎಸ್ಸಿ ಸೇರಿದರು. 1968 ಮಾರ್ಚ್ ತಿಂಗಳಲ್ಲಿ ಆರನೇ ರ್ಯಾಂಕ್ ಪಡೆದು ಬಿ.ಎಸ್ಸಿ ಪದವಿ ಗಳಿಸಿದರು. 1968-70 ಅವಧಿಯಲ್ಲಿ ಮೈಸೂರು ಮಾನಸ ಗಂಗೋತ್ರಿಯಲ್ಲಿ ಎಂ. ಎಸ್ಸಿ ಓದಿ ಮೂರನೇ ರ್ಯಾಂಕ್ ಸಾಧನೆ ಮಾಡಿದರು.
ಜಯರಾಮ ಸೋಮಯಾಜಿ ಅವರು ಸುರತ್ಕಲ್ ಇಂಜಿನಿಯರಿಂಗ್ ಕಾಲೇಜಿಗೆ ಎಮ್.ಟೆಕ್. ಓದಿಗೆ ಸೇರಿದರಾದರೂ ರುಚಿಸದೆ ಮೂರು ತಿಂಗಳಿಗೆ ಬಿಟ್ಟು, 1970 ರ ಅಕ್ಟೋಬರ ತಿಂಗಳಲ್ಲಿ ಮಣಿಪಾಲ ಇಂಜಿನಿಯರಿಂಗ್ ಕಾಲೇಜಿಗೆ ಭೌತಶಾಸ್ತ್ರದ ಉಪನ್ಯಾಸಕರಾಗಿ ಸೇರಿದರು. ಇದೇ ಸಮಯದಲ್ಲಿ ವಿದೇಶಕ್ಕೆ ಹೋಗಿ ಕೆಲಸ ಮಾಡುವ ಹಂಬಲ ಮೂಡಿತು. ಆಫ್ರಿಕಾದ ಸಿಯಾರ ಲಿಯೋನ್ ದೇಶದ ಫ್ರಿಟೌನ್ ಎಂಬಲ್ಲಿ ಅಧ್ಯಾಪನಕ್ಕೆ ಸೇರಿದರು. 1974ರಲ್ಲಿ ನೈಜಿರಿಯಾ ದೇಶದ ಗೊಂಬೆ ಎಂಬ ಊರಿನಿಂದ ಪ್ರಾರಂಭಗೊಂಡು, ಆಫ್ರಿಕ ಖಂಡದ ಸಣ್ಣ ದೇಶ ದಿ ಗ್ಯಾಂಬಿಯಾ, ನೈಜಿರಿಯಾದ ಗೊಂಗೊಲ ರಾಜ್ಯದ ರಾಜಧಾನಿ ಯೋಲ, ಗುಯುಕ್ ಎಂಬ ಗ್ರಾಮ ಮುಂತಾದೆಡೆಗಳಲ್ಲಿ ಸೇವೆ ಸಲ್ಲಿಸಿದರು. ಹೋದೆಡೆಯಲ್ಲೆಲ್ಲ ತಮ್ಮ ಜ್ಞಾನ ಸಂಪತ್ತನ್ನು ವಿದ್ಯಾರ್ಥಿಗಳೊಡನೆ ಹಂಚಿದ್ದಲ್ಲದೆ ಅಲ್ಲಿನ ಸ್ಥಳೀಯರು ಮತ್ತು ಭಾರತೀಯ ಸಮುದಾಯದೊಡನೆ ಆತ್ಮೀಯ ಬಾಂಧವ್ಯ ಹೊಂದಿದ್ದರು.
ಜಯರಾಮ ಸೋಮಯಾಜಿ ಅವರು 1986ರಲ್ಲಿ ದುಬೈಗೆ ಬಂದರು. ಅಲ್ಲಿನ ಜೆಮ್ಸ್ ಸಮೂಹದ ಪ್ರತಿಷ್ಟಿತ ಅವರ್ ಓನ್ ಇಂಗ್ಲಿಷ್ ಸಂಸ್ಥೆಯಲ್ಲಿ ಅಧ್ಯಾಪನ ಆರಂಭಿಸಿದರು. ಎರಡು ದಶಕಗಳಿಗೂ ಮೀರಿದ ಕಾಲ ದುಬೈನಲ್ಲಿದ್ದ ಸಂದರ್ಭದಲ್ಲಿ ಜಯರಾಮ ಸೋಮಯಾಜಿ - ನಳಿನಿ ಸೋಮಯಾಜಿ ದಂಪತಿಗಳು ದುಬೈ ಕರ್ನಾಟಕ ಸಂಘದ ಕಾರ್ಯಕ್ರಮದಲ್ಲಿ ಸಕ್ರಿಯರಾಗಿದ್ದರು. ದುಬೈ ಕರ್ನಾಟಕ ಸಂಘದ ಪ್ರಧಾನ ಕಾರ್ಯದರ್ಶಿಗಳಾಗಿ ಕಾರ್ಯನಿರ್ವಹಿಸಿದರು. ದುಬೈ ಕನ್ನಡ ಸಂಘವೆಂದರೆ ಅತ್ಯಂತ ಕ್ರಿಯಾಶೀಲ ಎಂಬ ಪ್ರಸಿದ್ಧಿ ಮೂಡುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಕನ್ನಡದ ಸಂಘದ ಚಟುವಟಿಕೆಗಳೇ ಅಲ್ಲದೆ ಈ ದಂಪತಿಗಳು ಅನೇಕ ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ಯುನೈಟೆಡ್ ಅರಾಬ್ ಎಮಿರೇಟ್ಸ್ ದೇಶದಲ್ಲಿನ ಭಾರತೀಯ ಮನಗಳನ್ನು ಒಂದೆಡೆ ಕೂಡಿಸಿದ ಕೆಲಸ ಮಾಡುತ್ತಾ ಬಂದಿದ್ದರು.
ಎರಡು ದಶಕಗಳಿಗೂ ಹೆಚ್ಚು ಕಾಲದ ದುಬೈ ವಾಸದ ನಂತರ ಕನ್ನಡದ ಮಣ್ಣಿನಲ್ಲಿ ವಿಶ್ರಾಂತ ಜೀವನಕ್ಕೆ ಬಂದ ಜಯರಾಮ ಸೋಮಯಾಜಿ ಅವರು ತಮ್ಮ ಕುಟುಂಬದೊಡನೆ ವಿಜ್ಞಾನ ಶಿಕ್ಷಣ ಮತ್ತು ಸಾಂಸ್ಕೃತಿಕ ಆಸಕ್ತಿಗಳಲ್ಲಿ ನಿರಂತರ ಸಕ್ರಿಯರಾಗಿದ್ದಾರೆ. ಸೋಮಯಾಜೀಸ್ ಲರ್ನಿಂಗ್ ಸೆಂಟರ್ ನಡೆಸುತ್ತಿದ್ದಾರೆ. ಎಲ್ಲ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಕ್ರಿಯಾಶೀಲರಾಗಿದ್ದಾರೆ. ಸೋಮಯಾಜಿ ದಂಪತಿಗಳು ಬ್ಲಾಗ್ ಬರವಣಿಗೆ, ಯೂ ಟ್ಯೂಬ್ ಚಾನಲ್ ಮತ್ತು ಫೇಸ್ಬುಕ್ ಅಂತಹ ಮಾಧ್ಯಮಗಳಲ್ಲಿ ತಮ್ಮ ಅನೇಕ ಉತ್ತಮ ಅಭಿರುಚಿಗಳನ್ನು ತೆರೆದಿಡುತ್ತಾ ಎಲ್ಲರೊಂದಿಗೆ ಅನುಪಮ ಬಾಂಧವ್ಯ ಹೊಂದಿದ್ದು ನಮಗೆಲ್ಲ ಪ್ರೇರಣೆ ಆಗಿದ್ದಾರೆ.
ಪೂಜ್ಯ ಹಿರಿಯರಾದ ಜಯರಾಮ ಸೋಮಯಾಜಿ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು. ಸಾರ್, ತಮ್ಮ ಮತ್ತು ತಮ್ಮ ಕುಟುಂಬದವರ ಬದುಕು ಸಕಲ ಸುಖ, ಸೌಖ್ಯ, ಸಂಪದ, ಸಂತಸ, ಸಾಧನೆ, ಸಂತೃಪ್ತಿಗಳಿಂದ ನಿತ್ಯ ಕಂಗೊಳಿಸುತ್ತಿರಲಿ. ನಮಸ್ಕಾರ.
(ನಮ್ಮ'ಕನ್ನಡ ಸಂಪದ'ದಲ್ಲಿ ಮೂಡಿಬರುತ್ತಿರುವ ಬರಹಗಳನ್ನು ನಮ್ಮ 'ಸಂಸ್ಕೃತಿ ಸಲ್ಲಾಪ' ತಾಣವಾದ www.sallapa.comನಲ್ಲಿ ಆಸ್ವಾದಿಸಲು ತಮ್ಮನ್ನು ಆದರದಿಂದ ಸ್ವಾಗತಿಸುತ್ತಿದ್ದೇವೆ. ನಮಸ್ಕಾರ)
COMMENTS:

Tiru Sridhar:
ಆತ್ಮೀಯ ನಮಸ್ಕಾರ ಮತ್ತು ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು. ತಮ್ಮ ಮತ್ತು ತಮ್ಮ ಕುಟುಂಬದವರ ಬದುಕು ಸಕಲ ಸುಖ, ಸೌಖ್ಯ, ಸಂಪದ, ಸಂತಸ, ಸಾಧನೆ, ಸಂತೃಪ್ತಿಗಳಿಂದ ನಿತ್ಯ ಕಂಗೊಳಿಸುತ್ತಿರಲಿ.
Jayarama Somayaji:
ಅನಂತಾನಂತ ಧನ್ಯವಾದಗಳು ತಿರು ಶ್ರೀಧರ್ ಅವರೇ.
Manjunatha Shetty:
Happiest birthday dear friend Somayaji may god grant you good health happiness and long life many many Happy returns of the day stay blessed have a wonderful day 😊
Raghavendra H R :
ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು ಸೋಮಯಾಜಿಯವರಿಗೆ. ತಮ್ಮ ಕ್ರಿಯಾಶೀಲತೆಗೆ ದೇವರ ಆಶೀರ್ವಾದ ನಿರಂತರವಾಗಿರಲಿ
Mysore Govinda Prasad:
Happy birthday my dear friend enjoy your special day 🎂 with love and happiness. wishing you many more years filled with happiness
Jayashree Deshpande:
ಅಪರೂಪದ ದಂತಿಗಳು ಸೋಮಯಾಜಿಯವರು. ಜನ್ಮದಿನದ ಶುಭಾಶಯಗಳು 🙏🙏

Akhyar Ahmad:
Happy birthday doctor. You are looking younger and refreshed.
Shashikala Gowda:
*ಹಿರಿಯರು, ಗೌರವಾನ್ವಿತರಾದ ಶ್ರೀ ಜಯರಾಮ್ ಸೋಮಯಾಜಿ ಸರ್, ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು💐💐💐
ಈ ಸಮಯದಲ್ಲಿ (facebook ನಲ್ಲಿ) ತಿರು ಶ್ರೀಧರ ಸರ್ ಅವರು ನಿಮ್ಮ ಬದುಕಿನ ಅದ್ಭುತ ಯಾನವನ್ನು ತೆರೆದಿಟ್ಟಿರುವುದು ವಿಶೇಷ. ಇಷ್ಟೆಲ್ಲಾ ಅನುಭವಗಳ ವಿದ್ಯಾಸಂಪನ್ನರು, ಸಂಸ್ಕಾರವಂತರು, ತಾವು ಯಾವುದೂ ತೋರ್ಪಡದೆ ಸರಳತೆಯೊಂದಿಗೆ ಅದರ್ಶಪ್ರಾಯರು ನಮ್ಮ ಮುಂದೆ ನಿಂತಿದ್ದೀರಾ.
ಶಿವರಾಮ ಕಾರಂತ ವೇದಿಕೆಯ ಹಿರಿಮೆ ಕೂಡ.
ಭಗವಂತ ಆಶೀರ್ವಾದ ಸದಾ ನಿಮ್ಮ ಕುಟುಂಬಕ್ಕಿರಲಿ 

Geetha Jayaprakash:
Happy birthday dear Sir, Wishing you many more wonderful ones ahead...stay blessed 🎊🎊🎉🎉💐💐🎂
Esther Praveen:
Many more happy healthy and peaceful returns of the day Dear Somayaji Sir. You are a blessing to many.
Vishwanath G M:
೭೫ನೇ ಜನುಮದಿನದ ಹಾರ್ದಿಕ ಶುಭಾಶಯಗಳು.
೨೫ ವಯಸ್ಸಿನ ಹುಡುಗರನ್ನು ನಾಚಿಸುವ ನಿಮ್ಮ ಸದಾ ಚಟುವಟಿಕೆಯಿಂದ ಕೂಡಿರುವ ಉತ್ಸಾಹ ಉಲ್ಲಾಸ ದ ಜೀವನ ನಮ್ಮೆಲ್ಲರಿಗೂ ಯಾವತ್ತಿಗೂ ಆದರ್ಶ ಮತ್ತು ಸ್ಫೂರ್ತಿಯ ಸೆಲೆ.
🙏🙏🙏


K Ramesh Ballal:
Many more happy returns of the day A Very happy birthday, Stay blessed May Lord Sri Krishna showers choicest blessings on you n your family more progress prosperity and peace in your future life Stay blessed
Putraya B Bhat:
Happy returns and wishes on your birthday sir. May God bless you with good health and happines

H Janardhana Hande:
ಸಮಯೋಚಿತ ಲೇಖನ..ಚಿತ್ರ ಮಾಲೆ. ನೋಡಿ..ಓದಿ ಬಹಳ ಆನಂದವಾಯಿತು. ವಂದನೆ
Veena Devagiri:
Many happy returns of the day sir

Above are few. There were 140 comments and 116 likes

Thanks one and all: God Bless

Thursday, June 23, 2022

BIRTHDAY APPA @ 7.4

 Tuesday, 21st June 2022

Yes, It's one more year over in my life.


21st June 2022

t was in 1948, in Birthi Salekeri, I was born.

Spent major part of my life, outside India, now more than 11 years back to India.




Birthday was spent, in the afternoon, visit to a temple, lunch outside and back home.



Evening family get-together 


Shubha Raghu,Lahari were there,







Ravi, Vidya little Urvi was there,

Rishi, Kavitha and bigboy Atharv did not come as they were not well, felt sad.


Mom made cake, Pathrode. Ravi brought some food item.

YUMMY PATHRODE

Some fun, chat, cake cutting and happy time spent together.

written Friday, 24th June 2022


HOME VISIT - BASAVA

 Tuesday, 21st June 2022

Birthimane, Bengaluru

Basava, male cow is taken by some people to ask for money.



Some will go about playing an instrument like Nagaswara, playing irritably, just to draw the attention of people.

Such wa an ocassion, when a man appears in front of the house, producing sound (Music) from his instrument.


Mom gave some food to Basava, which the animal ate nicely, the man was given some money.

From here, he went to the next house.

Written Thursday, 23rd June 2022

Wednesday, June 22, 2022

WEDDING - SHRINIDHI/RAKSHITH

 Wednesday, 22nd June 2022

Srigandha Palace Marriage Hall, Hebbala, Bengaluru.





Distant relations from ooru, all settled in Bengaluru, invited us for the wedding at nearby Srigandha Palace Marriage Hall.


We were there and met lot of relatives, most of them were Mom's known people on younger days at Udyavara and Hunsur.

BRIDE'S FATHER


WITH AMJI BHAT


The bride is grand daughter of 95+ year old Amji Bhat, who live in Amji near Karja, Brahmavara also was present. We had been to their house some years ago.

WITH RAMACHANDRA, HARINI




Ramachandra Somayaji, Harini, Neelavara Surendra Adiga were konwn people among the crowd.




Grand lunch as usual in such ocassion, after which we left from the place.

written Thursday 23rd June 2022