Sunday, August 3, 2025

ಪುಸ್ತಕ ಬಿಡುಗಡೆ - ಕತೆಗಳ ತೋರಣ

 ಭಾನುವಾರ, ಆಗೋಸ್ಟ್ 3, 2025

ಕರ್ನಾಟಕ ಚಿತ್ರಕಲಾ ಪರಿಷತ್, ಬೆಂಗಳೂರು.



ಶಾಲಿನಿ ಮೂರ್ತಿ ಅವರ 10, 11, 12 ನೇ ಭಾಗದ "ಕತೆಗಳ ತೋರಣ" ಪುಸ್ತಕದ ಬಿಡುಗಡೆ ಸಮಾರಂಭ.




ಮಕ್ಕಳಿಂದ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಸಮಾರಂಭ, ದೀಪ ಬೆಳಗುವಿನೊಂದಿಗೆ ಮುಂದುವರಿಯಿತು.

ಶ್ರೀಮತಿ ತೇಜಸ್ವಿನಿ ಅನಂತಕುಮಾರ್ , ಶ್ರೀ ಜಿ. ಬಾಲಕೃಷ್ಣ, ಹಾಗೂ ಶ್ರೀ ಯು. ಪ್ರೇಮಚಂದ್ರ ಅವರಿಂದ ಮಕ್ಕಳ ಸಮುಖದಲ್ಲಿ ಭಾಗ 10, 11, 12 ರ "ಕತೆಗಳ ತೋರಣ" ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು.

ಜಿ. ಬಾಲಕೃಷ್ಣ 

ಯು. ಪ್ರೇಮಚಂದ್ರ 

ವಿದ್ಯಾ ಬಿ ರಾವ್ 

ತೇಜಸ್ವಿನಿ ಅನಂತಕುಮಾರ್ 
ಅತಿಥಿಗಳು ತಮ್ಮ ಭಾಷಣದಲ್ಲಿ, ಮಕ್ಕಳ ಕಥಾ ಪುಸ್ತಕಗಳು ಅವರ ಸರ್ವಾಂಗೀಣ ಬೆಳವಣಿಗೆಗೆ  ಬಹಳ ಅವಶ್ಯಕ ಎಂದು ಪ್ರತಿಪಾದಿಸಿದರು.




ಶ್ರೀಮತಿ ವಿದ್ಯಾ ಬಿ ರಾವ್ ಅವರು ಅತ್ಯಂತ ಅಚ್ಚುಕಟ್ಟಾಗಿ ಕಾರ್ಯಕ್ರಮದ ನಿರೂಪಣೆಯನ್ನು ಮಾಡಿದರು.

ಭರ್ಜರಿಯಾದ ಉಪಹಾರದೊಂದಿಗೆ ಅಂದಿನ ಕಾರ್ಯಕ್ರಮ ಮುಕ್ತಾಯಗೊಂಡಿತು.

Posted 4/8/2025

Saturday, August 2, 2025

ದೇವರ ದೀಪ ಹಚ್ಚುವುದು - ಶೋಭಾ ಸೋಮಯಾಜಿ

August 2, 2025 

ದೇವರ ದೀಪ ಹಚ್ಚುವುದು ಒಂದು ಸರಳವಾದ ಕೆಲಸ. ದೀಪಕ್ಕೆ ಎಣ್ಣೆ ಅಥವಾ ತುಪ್ಪ ಹಾಕಿ, ಬತ್ತಿಯನ್ನು ಅದರೊಳಗಿನ ಜಿಡ್ಡಿನಲ್ಲಿ ನೆನೆಸಿ, ಕಡ್ಡಿ ಗೀರಿ, ಆ ಬತ್ತಿ ಬೆಂಕಿಯನ್ನು ತನ್ನ ತುದಿಯೊಂದರಲ್ಲಿ ಇಟ್ಟುಕೊಂಡು ಉರಿಯುವಂತೆ ಮಾಡಿದರಾಯಿತು. ಅಷ್ಟೇ!

ಇವತ್ತು ಬೆಳಿಗ್ಗೆ ದೇವರ ದೀಪ ಹಚ್ಚುವಾಗ ನನಗೇಕೋ ಆ ದೀಪ ಹಚ್ಚುವ ಪ್ರಕ್ರಿಯೆಯ ಬಗ್ಗೆ ಬರೆಯಬೇಕೆಂದೆನಿಸಿತು. ಸುಮಾರು ಒಂದೈದು ನಿಮಿಷ ನಡೆಯುವ ಆ ಪ್ರಕ್ರಿಯೆ ಒಂದು ‘ದಿವ್ಯ ಘಳಿಗೆ’ ಎಂದೆನಿಸಿತು. ದೇವರ ಗೂಡಿನೊಳಗಿರುವ ಉರಿಯುವ ದೀಪ ಮತ್ತು ನನ್ನೊಳಗೆ ಏನೋ ಅವಿನಾಭಾವ ಸಂಬಂಧ ಉದಿಸಿದಂತೆನಿಸಿತು. 

ನಾನು ದೇವರಿಗೆ ದೀಪ ಹಚ್ಚಲು ಪ್ರಾರಂಭಿಸಿ ಏಳೆಂಟು ವರ್ಷಗಳಾದವಷ್ಟೆ. ಮನೆಯಲ್ಲಿ ದೇವರ ಗೂಡಿನ ಅಗತ್ಯವೇ ಇಲ್ಲವೆಂದು ವಾದಿಸಿದವಳು ನಾನು. ಹಾಗೆಂದು ನಾನೇನು ನಾಸ್ತಿಕಳಲ್ಲ. ನಮ್ಮನ್ನೆಲ್ಲ ಪೊರೆಯುವ ಒಂದು ಅತೀಂದ್ರಿಯ ಅಥವಾ ಅಲೌಕಿಕ ಶಕ್ತಿ ಇದೆ ಎಂಬ ನಂಬಿಕೆ ನನಗೆ ಮೊದಲಿನಿಂದಲೂ ಇತ್ತು(ಎಷ್ಟೆಂದರೂ ದೇವಸ್ಥಾನದ ಅರ್ಚಕರ ಮನೆಯವಳಲ್ಲವೇ ನಾನು!) ಆದರೆ ಪೂಜೆ ಪುನಸ್ಕಾರಗಳಲ್ಲಿ ಎಳ್ಳಷ್ಟೂ ನಂಬಿಕೆ ಇಲ್ಲದವಳು ನಾನಾಗಿದ್ದೆ. ಭಕ್ತಿ ಭಾವ ಮನಸ್ಸಿನಲ್ಲಿರಬೇಕೇ ಹೊರತು ಬಾಹ್ಯ ಆಚರಣೆಗಳಲ್ಲಲ್ಲ ಎಂಬುವುದು ನನ್ನ ನಿಲುವಾಗಿತ್ತು. ಈಗಲೂ ಕೂಡಾ ಪೂಜೆ ನಡೆಯುವಲ್ಲಿ ನಾನಿದ್ದರೆ ‘ನಾನಲ್ಲಿ ಸಲ್ಲದವಳು’ ಎಂದೆನಿಸಿ ಬಿಡುತ್ತದೆ. ಆ ಪ್ರಕ್ರಿಯೆಯಲ್ಲಿ ತೊಡಗಿಕೊಳ್ಳುವುದು ಸಹ್ಯವೆನಿಸುವುದಿಲ್ಲ. ಇದಲ್ಲದೇ ದೇವಸ್ಥಾನಕ್ಕೆ ಹೋದಾಗ ಅಲ್ಲಿ ಜನಜಂಗುಳಿ ಇದ್ದರೆ ನನ್ನಲ್ಲಿರುವ ಅಲ್ಪ ಸ್ವಲ್ಪ ಭಕ್ತಿಯೂ ಮಾಯವಾಗಿ ಬಿಡುತ್ತದೆ. 

ದೇವರ ಹಾಗೂ ನಮ್ಮ ನಡುವಣ ನಂಟು ವೈಯಕ್ತಿಕ ಮಟ್ಟದಲ್ಲಿ ಇದ್ದರೆ ಚೆಂದವಲ್ಲವೆ? ಆ ಅಲೌಕಿಕ ಶಕ್ತಿಯೊಡನೆ ನನ್ನದೇ ಆದ ಒಂದು ವೈಯಕ್ತಿಕ ಅನುಬಂಧವಿರಬೇಕು ಎನ್ನುವ ನಿಲುವು ನನ್ನದು. ಅದು ನನ್ನೊಳಗಿನ ಒಂದು ‘ಭಾವ’ವಾಗಿರಬೇಕೇ ಹೊರತು ಪ್ರದರ್ಶನದ ವಿಷಯವಾಗಿರಬಾರದು ಎಂಬುವುದು ನನ್ನ ಅಂಬೋಣ. 

ಅಂತಹ ಮನೋಧರ್ಮದ ನನ್ನಲ್ಲೂ ಹಲವು ಬದಲಾವಣೆಗಳಾದವು. ಬದುಕಿನ ಏರುಪೇರುಗಳು, ಒತ್ತಡಗಳು, ಸವಾಲುಗಳು, ಹತಾಶೆಗಳು ನನ್ನನ್ನು ದೇವರ ಗೂಡಿನ ಮುಂದೆ ಕುಳಿತು ಜಪತಪದಲ್ಲಿ ತೊಡಗುವಂತೆ ಮಾಡಿದವು. ನಾನು ದೇವರ ದೀಪ ಹಚ್ಚಿ ಒಂದಿಷ್ಟು ಸ್ತೋತ್ರಗಳನ್ನು ಹೇಳುತ್ತಾ ನನ್ನೊಳಗಣ ನೆಮ್ಮದಿಗೆ ದಾರಿ ಹುಡುಕ ಹೊರಟಿದ್ದು ನನಗೇ ಪರಮಾಶ್ಚರ್ಯ ಉಂಟು ಮಾಡಿರುವ ವಿಷಯ! ಇಂತಹ ಬದಲಾವಣೆಯಿಂದ ನನಗೆ ಲಾಭವಾದದ್ದೇ ಜಾಸ್ತಿ. ಬೆಳಗಿನ ಆ ಒಂದಷ್ಟು ಹೊತ್ತು ನಾನು ನನಗಾಗಿ ಮೀಸಲಿಡುವ “ನನ್ನದೇ ಸಮಯ”ವಾಗಿರುತ್ತದೆ. ಆ “ನನ್ನ ಸಮಯದಲ್ಲಿ” ಪರಿಹಾರ ಸಿಗದ ಎಷ್ಟೋ ಸಮಸ್ಯೆಗಳ ಬಗ್ಗೆ “ಶಾಂತವಾದ ಮನಸ್ಸಿನಿಂದ” ಯೋಚಿಸಿ ದಡ ಮುಟ್ಟುವ ದಾರಿ ಸಿಗುತ್ತದೆ. ಅಂದರೆ ಮನಸ್ಸನ್ನು ಒಂದೆಡೆ ಕೇಂದ್ರೀಕರಿಸಿ ವಿಚಾರ ಮಾಡಲು ಅದು ಪ್ರಶಸ್ತ ಸಮಯವಾಗಿರುತ್ತದೆ. ಇಲ್ಲೂ ನಾನು “ಸ್ವಾರ್ಥ ಭಾವ”ದಿಂದಲೇ ನನ್ನ ಸಮಯವನ್ನು ಪೂಜೆಗೆ ಮೀಸಲಿಡುವುದು ಕೆಲವೊಮ್ಮೆ ನನ್ನಲ್ಲಿ ಅಪರಾಧಿ ಭಾವವನ್ನು ಮೂಡಿಸುತ್ತದೆ. ಅದೇನೇ ಇರಲಿ, ನನ್ನ ಚಿಂತನೆಯಲ್ಲಾದ ಬದಲಾವಣೆ ಎನ್ನುವುದು ಬೆಳಗಿನ “ಅಷ್ಟು ಹೊತ್ತು” ಸಮರ್ಪಕವಾಗಿ ಬಳಕೆ ಆಗಿ ಗೂಡಿನೊಳಗೆ ದೇವರ ದೀಪ ಬೆಳಗಿದಂತೆ ನನ್ನ ಮನಸ್ಸಿನ ಗೂಡಿನೊಳಗೆ ಶಾಂತಿಯ ದೀಪ ಬೆಳಗಲು ಕಾರಣವಾಗಿದೆ ಎಂದರೆ ತಪ್ಪಿಲ್ಲ!?

Posted 3/8/2025


Friday, August 1, 2025

BIRTHDAY NALINI (2025) - FACEBOOK FRIENDS

 Wednesday, 30th July 2025

ನಳಿನಿ ಸೋಮಯಾಜಿ
Happy Birth Day Nalini Somayaji 🌷🙏🌷

ನಳಿನಿ ಸೋಮಯಾಜಿ ಸದಾ ಹಸನ್ಮುಖಿ, ಉತ್ಸಾಹಿ, ವಿವಿಧ ಸಾಂಸ್ಕೃತಿಕ ಚಟುವಟಿಕೆಗಳ ಆಸಕ್ತೆ, ಪ್ರೋತ್ಸಾಹದಾಯಿನಿ, ಮಕ್ಕಳೊಂದಿಗೆ-ಹಿರಿಯರೊಂದಿಗೆ-ಎಲ್ಲರೊಂದಿಗೆ ಬೆರೆವವರು. ನಳಿನಿ ಸೋಮಯಾಜಿ ಮತ್ತು Jayarama Somayaji ದಂಪತಿ ಯುನೈಟೆಡ್ ಅರಾಬ್ ಎಮಿರೇಟ್ಸ್ ದೇಶದಲ್ಲಿ ಕನ್ನಡ ಸಾಂಸ್ಕೃತಿಕ ವಾತಾವರಣ ನಿರ್ಮಿಸುವಲ್ಲಿ ವಹಿಸಿದ ಪಾತ್ರವನ್ನು ಅಲ್ಲಿನ ಜನ ಇಂದೂ ಆಪ್ತವಾಗಿ ಸ್ಮರಿಸುತ್ತಾರೆ. ಶಿಕ್ಷಣ ಕ್ಷೇತ್ರದಲ್ಲಿಯೂ ಅಪಾರ ಕೆಲಸ ಮಾಡಿರುವ ಈ ದಂಪತಿಗಳು ಇಂದೂ ಆ ಕ್ಷೇತ್ರದಲ್ಲಿ ಸಾಕಷ್ಟು ಆಪ್ತತೆಯಿಂದ ಆಸಕ್ತಿವಹಿಸಿದ್ದಾರೆ.

ಪಾಕ ವಿಚಾರದಲ್ಲಾಗಲಿ, ಪ್ರಾಣಿ - ನಿಸರ್ಗ ವಿಚಾರದಲ್ಲಾಗಲಿ, ಮಕ್ಕಳಿಗೆ ಕಥೆ ಹೇಳುವುದರಲ್ಲಾಗಲಿ, ಸಾಂಸ್ಕೃತಿಕ ಚಟುವಟಿಕೆಗಳ ಭಾಗವಹಿಕೆಯನ್ನು ಅಭಿವ್ಯಕ್ತಿಸುವುದರಲ್ಲಾಗಲಿ ಈ ಹಿರಿಯ ದಂಪತಿಗಳ ಮನೋಧರ್ಮ ಮೆಚ್ಚುಗೆ ಹುಟ್ಟಿಸುತ್ತದೆ. ಈ ಹಿರಿಯ ದಂಪತಿಗಳಿಗೆ ಮತ್ತು ಅವರ ಕುಟುಂಬವರ್ಗದವರಿಗೆ ಶುಭಕೋರುತ್ತಾ, ನಳಿನಿ ಸೋಮಯಾಜಿ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳನ್ನು ಸಲ್ಲಿಸೋಣ.

ಅಮ್ಮಾ, ಆತ್ಮೀಯ ನಮಸ್ಕಾರ ಮತ್ತು ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು. ತಮ್ಮ ಮತ್ತು ತಮ್ಮ ಕುಟುಂಬದವರ ಬದುಕು ಸಕಲ ಸುಖ, ಸೌಖ್ಯ, ಸಂಪದ, ಸಂತಸ, ಸಾಧನೆ, ಸಂತೃಪ್ತಿಗಳಿಂದ ನಿತ್ಯ ಕಂಗೊಳಿಸುತ್ತಿರಲಿ.

Tiru Sridhara

Nalini Somayaji ಆತ್ಮೀಯ ನಮಸ್ಕಾರ ಮತ್ತು ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು. ತಮ್ಮ, Jayarama Somayaji ಸಾರ್ ಮತ್ತು ತಮ್ಮ ಕುಟುಂಬದವರ ಬದುಕು ಸಕಲ ಸುಖ, ಸೌಖ್ಯ, ಸಂಪದ, ಸಂತಸ, ಸಾಧನೆ, ಸಂತೃಪ್ತಿಗಳಿಂದ ನಿತ್ಯ ಕಂಗೊಳಿಸುತ್ತಿರಲಿ

Jayarama Somayaji:  Tiru Sridhara ಅನಂತಾನಂತ ಧನ್ಯವಾದಗಳು ತಿರು ಶ್ರೀಧರ್ ಅವರೇ. ನಿಮ್ಮ ಶುಭಹಾರೈಕೆಗಳೇ ನಮಗೆ ಶ್ರೀ ರಕ್ಷೆ. ನಿಮ್ಮ ಕುಟುಂಬದವರಿಗೆ ನಮಸ್ಕಾರಗಳು

Mysore Govinda Prasad

ಸಕಾಲ ಕಲಾ ನಿಪುಣತೆ ಹೊಂದಿರುವ ಶ್ರೀಮತಿ ನಳಿನಿಯವರಿಗೆ ಜನ್ಮದಿನದ ಶುಭಾಶಯಗಳು
Varkadi Madhusudan
Sridhara Sir, excellent write up on our friend Nalini Somayaji. She is all what you have written
Anasuya Devi
ಪ್ರೀತಿಯ ಸೋದರಿ ನಳಿನಿ ಸೋಮಯಾಜಿಯವರಿಗೆ ಅನಂತ ಆತ್ಮೀಯತೆಯಿಂದ ಜನ್ಮದಿನದ ಶುಭಾಶಯಗಳು
💐💐💐ಭಗವಂತ ನಿಮಗೆ ಆಯುರಾರೋಗ್ಯವನ್ನಿತ್ತು ಸುಖ ಸಂತೋಷಗಳಿಂದ ಕೂಡಿರುವ ಜೀವನವನ್ನು ಕರುಣಿಸಲಿ...
Rukmini Jayarama Rao
" ಪಾಕಪ್ರವೀಣೆ ಪ್ರೀತಿಯ ನಳಿನಿಯವರಿಗೆ ಜನ್ಮದಿನದ ಹೆಮ್ಮೆಯ ಶುಭಾಶಯಗಳು 
Anjali Ramanna
Nalini Somayaji ಜೀವನ್ಮುಖಿ, ಸೀನು ಅಮ್ಮನಿಗೆ ತುಂಬಾ ತುಂಬಾ ಒಳ್ಳೆಯದಾಗಲಿ

Nalini Prasad ಸುಂದರ ಮನಸ್ಸಿನ, ಸದಾ ಉತ್ಸಾಹಿ ನಳಿನಿ ಮೇಡಂ ರವರಿಗೆ ಹುಟ್ಟು ಹಬ್ಬದ ಶುಭಾಶಯಗಳು. ನೂರ್ಕಾಲ ಖುಷಿಯಾಗಿರಿ ಮಾ

Y K Sandhya Sharma

ಪ್ರೀತಿಯ ನಳಿನಿ, ಹುಟ್ಟುಹಬ್ಬದ ಶುಭಾಶಯಗಳು ನಿಮಗೆ 🌹🌹 ಬಾಳೆಲ್ಲ ಸುಖ, ನೆಮ್ಮದಿ, ಆರೋಗ್ಯಪೂರ್ಣವಾಗಿ ಜೀವಿಸಿ 
Sarvamangala Shastry
Happy Birthday🎊🎉🎂 ಜನುಮದಿನದ ಪ್ರೀತಿಯ ಶುಭಾಶಯಗಳು ನಳಿನಿಯವರೇ ಶುಭವಾಗಲಿ, ಹೀಗೆ ಕ್ರಿಯಾತ್ಮಕವಾಗಿ ನHalebeedu Krishnamurthy
ನಳಿನಿ ಸೋಮಯಾಜಿ ರವರಿಗೆ ಜನ್ಮ ದಿನದ ಹಾರ್ದಿಕ ಶುಭಾಶಯಗಳು. ಭಗವಂತನು ದೀರ್ಘಾಯುಷ್ಯ ಆರೋಗ್ಯ ಐಶ್ವರ್ಯ ನೆಮ್ಮದಿ ಅನ್ಯೋನ್ಯತೆ ಇತ್ಯಾದಿ ಸಕಲ ಸನ್ಮಂಗಳವನ್ನೂ ಕರುಣಿಸಿ ಆಶೀರ್ವದಿಸಲಿಗುನಗುತ್ತಾ ಇರಿ

Ganesh Rai
ಶತಮಾನಂ ಭವತಿ ಶತಾಯುಃ ಪುರುಷಃ ಶತೇಂದ್ರಿಯಃ ಆಯುಷ್ಯೆವೆಂದ್ರಿಯೆ ಪ್ರತಿತಿಷ್ಠತಿ
Lalitha Shetty
Wishing you happiest birthday dear Nalini n good health, peace n endless blessings on your special day ! Enjoy your day! God bless you

Banumathy Ramesh Happy Birthday to you.Best wishes and blessings for a healthy and happy life for the years to come.God bless.

Malathi Hande

ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು...ನಳಿನಿ... ದೇವರು ಒಳ್ಳೆಯದು ಮಾಡಲಿ
Kusum Vijay
Happy birthday Nalini aunty!! You are truly an inspiration!

Geetha Holla
Many happy returns of your birthday Ms Nalini somayaji.

Vijaya Srinivas ಹುಟ್ಟು ಹಬ್ಬದ ಶುಭಾಶಯಗಳು ದೇವರು ನಿಮಗೆ ಆರೋಗ್ಯ ಆಯಸ್ಸು ಐರ್ಶ್ವಯ ನಿಮ್ಮಿಬರಿಗೂ ಕೊಟ್ಟು ಕಾಪಾಡಲಿ ಎಂದು ಹಾರೈಸುವೆ

Sabitha Shenoy ಜನ್ಮದಿನದ ಶುಭಾಶಯಗಳು ನಳಿನಿ. ಜೀವನದ ಸಕಲ ಸೌಭಾಗ್ಯಗಳು ನಿಮ್ಮ ಪಾಲಿಗಿರಲಿ ಎಂದು ಹಾರೈಸುತ್ತೇನೆ

Shashikala Gowda

ಹುಟ್ಟು ಹಬ್ಬದ ಶುಭಾಶಯಗಳು ನಳಿನಿ ಮೇಡಂ💐 ನಿಮ್ಮ ಸುಂದರ, ಸರಳ ನಗು ನನಗಿಷ್ಟ

Vijaya Srinivas

 ಹುಟ್ಟು ಹಬ್ಬದ ಶುಭಾಶಯಗಳು ದೇವರು ನಿಮಗೆ ಆರೋಗ್ಯ ಆಯಸ್ಸು ಐರ್ಶ್ವಯ ನಿಮ್ಮಿಬರಿಗೂ ಕೊಟ್ಟು ಕಾಪಾಡಲಿ ಎಂದು ಹಾರೈಸುವೆ

Nagaraj Aithal P R

ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು. ನಿಮಗೆ ದೇವರು ಎಲ್ಲಾ ಒಳ್ಳೆಯದು ಮಾಡಲಿ

Mangala Lakshmi

ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು ನಳಿನಿ,,ಸದಾ ಹೀಗೇ ಖುಷಿಖುಷಿಯಾಗಿರಿ

Nataraj HN Nataraj HN

||ಸರ್ವಮಂಗಳ ಮಾ0ಗಲೈಯೇ
ಶಿವೇಸವಾರ್ತ್ರತ ಸಾಧಿಕೆ||
*******
ಶುಭ ಮುಸ್ಸಂಜೆಯ ನಮನಗಳನ್ನು ಸಲ್ಲಿಸುತ್ತಾ
ಶ್ರೀಮತಿನಳಿನಿ ಜಯರಾಮ ಸೋಮಯಾಜಿ ರವರಿಗೆ ಜನ್ಮಧಿನದ ಶುಭಾಶಯಗಳನ್ನು
ಶ್ರೀ ಗುರು ಆಶೀರ್ವಾದ ಬಳಗದಿಂದ ಕೋರುತ್ತೇವೆ.
ಶ್ರೀಯುತ ತಿರುಶ್ರೀದರರವರ ಅಂಕಣದಲ್ಲಿ ನಿರೂಪಿಸಲಾದ ವೈಯಕ್ತಿಕ ದಂಪತಿಗಳ ಮತ್ತು ಕುಟುಂಭವರ್ಗದಪಾತ್ರ ಹೆಚ್ಚು ಈ ಧಿನ ಗಮನ ಸೆಳೆಯಲು ಸಂಭ್ರಮಿಸಲು , ಕುಟುಂಭದ ಅಭಿವ್ಯಕ್ತಿತ್ವ ,ನಿಸ್ಸರ್ಗ, ಮಕ್ಕಳ ಮತ್ತು ಹಿರಿಯರ ಒಡನಾಟದ ಪ್ರಭಾವ ಕುಟುಂಭದ ಸದಸ್ಯರಲ್ಲಿ ಸಧಾ ಹಸನ್ಮುಖಿ, ಉತ್ತ್ಸಹ ಆಸಕ್ತಿಯು, ಶ್ರೀ ಗುರು ಆಶೀರ್ವಾದದಕೊಡುಗೆಯಾಗಿದೆ ಶ್ರೀ ತಿರುಶ್ರೀದರ,ರವರ ಪ್ರೀತಿಯ ಬರವಣಿಗೆಗೆ ನಮ್ಮೆಲ್ಲರಾ ಸವಿನೆನಪಿನಾಹುಟ್ಟುಹಬ್ಬಸಂಭ್ರಮಿಸಿ ಸಲ್ಲಿಸಿದ ಪದಗಳಾ ಕೊಡುಗೆ.ವಿವರಣೆಯನ್ನುನೀಡಿದ್ದೇವೆ-ಮಂಗಳವಾಗಲಿ.
ಗೌರವಆದರಗಳೊಂದಿಗೆ
ಹೋ.ನ.ನಟರಾಜ್ ಅಡ್ಮಿನ್ ಶ್ರೀ ಗುರು ಆಶೀರ್ವಾದ ಬಳಗ.
*Every post deserves action indeed!..
Srilakshmi Shankar
💯 True.
You are an inspiration.
Always Active and Happy.
Wish you a very very Happy Birthday. I Love you

ನಿನ್ನೆಯ ದಿನ ನನ್ನ ಹುಟ್ಟು ಹಬ್ಬಕ್ಕೆ ಶುಭ ಹಾರೈಕೆಗಳನ್ನು ಹರಿಸಿ ಹಾರೈಸಿದ ಹಿರಿಯರಿಗೂ, ಕಿರಿಯರಿಗೂ, ಪ್ರತಿಯೋರ್ವರಿಗೂ ಮನಪೂರ್ಣ ಧನ್ಯವಾದಗಳು.
ಸಾಧ್ಯವಾದಷ್ಟೂ ಧನ್ಯವಾದಗಳನ್ನು ತಿಳಿಸಲು ಪ್ರಯತ್ನಿಸಿರುವೆ.
ಎಲ್ಲಾದರೂ, ಯಾರ ಹೆಸರಾದರೂ ಬಿಟ್ಟು ಹೋದಲ್ಲಿ ಅನ್ಯತಾ ಭಾವಿಸಬಾರದಾಗಿ ಕೇಳಿಕೊಳ್ಳುವೆ.
ನಿಮ್ಮೆಲ್ಲರ ಹಾರೈಕೆ ಮನತುಂಬಿ ಹಬ್ಬದ ದಿನವಾಯಿತು.
ಪ್ರತಿಯೊಬ್ಬರಿಗೂ ಮತ್ತೊಮ್ಮೆ ಧನ್ಯವಾದಗಳು ❤️❤️🙏🏻 🙏🏻
Thank You Everyone for the Birthday Wishes. I am really Blessed

ಕೆಲವೇ ಪ್ರತಿಕ್ರಿಯೆಗಳನ್ನು ನಮೂದಿಸ ಲಾಗಿದೆ.....


Posted 2/8/2025