Thursday, July 30, 2026
Here and there
Mom Nalini Somayaji celebrated her birthday quietly, visited Radhakrishna temple at Sanjaynagara, went to Bookshp to buy some books, had lunch.
The temple has number of deities, Balaji, Anjaneya, Subramanya, Shiradi Baba and many moore. It was a short visit,
Lunch at Hotel Adithya at Sahakaranagar, after trying couple of other hotels.
In the evening, with children of Learning Centre at home, with cake, and books given.
ಶ್ರೀ ತಿರು ಶ್ರೀಧರ್ ಅವರ Facebook ನಲ್ಲಿ ಶುಭ ಹಾರೈಕೆಗಳು:
Happy Birth Day Nalini Somayaji


ನಳಿನಿ ಸೋಮಯಾಜಿ ಸದಾ ಹಸನ್ಮುಖಿ, ಉತ್ಸಾಹಿ, ವಿವಿಧ ಸಾಂಸ್ಕೃತಿಕ ಚಟುವಟಿಕೆಗಳ ಆಸಕ್ತೆ, ಪ್ರೋತ್ಸಾಹದಾಯಿನಿ, ಮಕ್ಕಳೊಂದಿಗೆ-ಹಿರಿಯರೊಂದಿಗೆ-ಎಲ್ಲರೊಂದಿಗೆ ಬೆರೆವವರು. ನಳಿನಿ ಸೋಮಯಾಜಿ ಮತ್ತು Jayarama Somayaji ದಂಪತಿ ಯುನೈಟೆಡ್ ಅರಾಬ್ ಎಮಿರೇಟ್ಸ್ ದೇಶದಲ್ಲಿ ಕನ್ನಡ ಸಾಂಸ್ಕೃತಿಕ ವಾತಾವರಣ ನಿರ್ಮಿಸುವಲ್ಲಿ ವಹಿಸಿದ ಪಾತ್ರವನ್ನು ಅಲ್ಲಿನ ಜನ ಇಂದೂ ಆಪ್ತವಾಗಿ ಸ್ಮರಿಸುತ್ತಾರೆ. ಶಿಕ್ಷಣ ಕ್ಷೇತ್ರದಲ್ಲಿಯೂ ಅಪಾರ ಕೆಲಸ ಮಾಡಿರುವ ಈ ದಂಪತಿಗಳು ಇಂದೂ ಆ ಕ್ಷೇತ್ರದಲ್ಲಿ ಸಾಕಷ್ಟು ಆಪ್ತತೆಯಿಂದ ಆಸಕ್ತಿವಹಿಸಿದ್ದಾರೆ.
ಪಾಕ ವಿಚಾರದಲ್ಲಾಗಲಿ, ಪ್ರಾಣಿ - ನಿಸರ್ಗ ವಿಚಾರದಲ್ಲಾಗಲಿ, ಮಕ್ಕಳಿಗೆ ಕಥೆ ಹೇಳುವುದರಲ್ಲಾಗಲಿ, ಸಾಂಸ್ಕೃತಿಕ ಚಟುವಟಿಕೆಗಳ ಭಾಗವಹಿಕೆಯನ್ನು ಅಭಿವ್ಯಕ್ತಿಸುವುದರಲ್ಲಾಗಲಿ ಈ ಹಿರಿಯ ದಂಪತಿಗಳ ಮನೋಧರ್ಮ ಮೆಚ್ಚುಗೆ ಹುಟ್ಟಿಸುತ್ತದೆ. ಈ ಹಿರಿಯ ದಂಪತಿಗಳಿಗೆ ಮತ್ತು ಅವರ ಕುಟುಂಬವರ್ಗದವರಿಗೆ ಶುಭಕೋರುತ್ತಾ, ನಳಿನಿ ಸೋಮಯಾಜಿ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳನ್ನು ಸಲ್ಲಿಸೋಣ.
ಅಮ್ಮಾ, ಆತ್ಮೀಯ ನಮಸ್ಕಾರ ಮತ್ತು ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು. ತಮ್ಮ ಮತ್ತು ತಮ್ಮ ಕುಟುಂಬದವರ ಬದುಕು ಸಕಲ ಸುಖ, ಸೌಖ್ಯ, ಸಂಪದ, ಸಂತಸ, ಸಾಧನೆ, ಸಂತೃಪ್ತಿಗಳಿಂದ ನಿತ್ಯ ಕಂಗೊಳಿಸುತ್ತಿರಲಿ.Tiru Sridhara ಅವರಿಗೆ ಅನಂತಾನಂತ ವಂದನೆಗಳು. ಶ್ರೀ ದೇವರು ನಿಮಗೆ ಹಾಗೂ ನಿಮ್ಮ ಕುಟುಂಬಕ್ಕೆ ಆಯುರಾರೋಗ್ಯ, ನೆಮ್ಮದಿಯನ್ನು ಸದಾ ಕರುಣೆಸಲಿ
ಸದಾ ಲವಲವಿಕೆಯ, ಚೈತನ್ಯದ ಚಿಲುಮೆಯಂತಿರುವ ನಳಿನಿ ಸೋಮಯಾಜಿ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು. 




ನನಗೆ ಎರಡು ಸಾರಿ ನಳಿನಿಯವರನ್ನು ಅವರ ಪತಿ ಸೋಮಯಾಜಿ ಅವರೊಂದಿಗೆ ಭೇಟಿಯಾಗುವ ಅವಕಾಶ ಸಿಕ್ಕಿತ್ತು. ನಳಿನಿಯವರ ಬಗ್ಗೆ ಎಲ್ಲರಿಗೂ ಗೊತ್ತಿದೆ ಬಹುಮುಖ ಪ್ರತಿಭೆ ಎಂದು! ಶೈಕ್ಷಣಿಕವಾಗಿ ಮಾಡುತ್ತಿರುವ ಸೇವೆಯ ಬಗ್ಗೆಯೂ ಈ ದಂಪತಿಗಳ ಬಗ್ಗೆ ಗೊತ್ತಿದೆ. ಮೊದಲ ಸಾರಿ ನೇರವಾಗಿ ನಳಿನಿ ರವೀಂದ್ರಕಲಾಕ್ಷೇತ್ರದ ಮೆಟ್ಟಿಲುಗಳ ಮುಂದೆ ಸಿಕ್ಕರು! ಇಬ್ಬರೂ ಮಾತಾಡುತ್ತಾ ನಿಂತಿದ್ದರೆ ಪತಿ ಅವರಾಗೇ ನಮ್ಮಿಬ್ಬರ ಫೋಟೊ ತೆಗೆಯುತ್ತಿದ್ದರು! ಇದ್ಯಾವ ದೊಡ್ಡ ವಿಷಯ ಅಂತ ಯಾರಿಗಾದರೂ ಅನಿಸಬಹುದೇನೋ ಗೊತ್ತಿಲ್ಲ. ನನಗೆ ಇವರಿಬ್ಬರೂ ದುಬೈನಲ್ಲಿ ಸಾಮಾಜಿಕವಾಗಿ ಹಮ್ಮಿಕೊಂಡ ವಿಷಯ ಗೊತ್ತಿದ್ದರಿಂದ, ಅವರ ಪತಿಯ ಬಗ್ಗೆ ಗೌರವವಿತ್ತು. ಆದರೆ ಹೀಗೆ ತನ್ನ ಸಂಗಾತಿಯ ಜೊತೆಯಲ್ಲಿದ್ದಾಗ, ಆಕೆಯ ಖುಷಿಯನ್ನು ತಾವಾಗೇ ಸೆರೆಹಿಡಿಯುವ ಮನಸ್ಥಿತಿ ಅಷ್ಟು ಸುಲಭಕ್ಕೆ ಇರುವಂತಹುದಲ್ಲ.ಆಗಲೇ ಅನಿಸಿತ್ತೇನೆಂದರೆ ಅದೆಂತಹಾ ಅನುರೂಪದ ದಂಪತಿಗಳಿವರು ಎಂಬುದು!
ನಳಿನಿ ಹೀಗೇ ಖುಷಿಖುಷಿಯಾಗಿರಿ
ಚಟುವಟಿಕೆಯ ಕಾರಂಜಿ,ಸದಾ ಹಸನ್ಮುಖಿ,ಸರಳ ಸಜ್ಜನಿ ಪ್ರೀತಿಯ ಗೆಳತಿ ನಳಿನಿ ನಿಮಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು,,ಇದೇ ಜೀವನೋತ್ಸಾಹವನ್ನು ಕೊನೆಯ ಉಸಿರಿನವರೆಗೂ ಭಗವಂತ ನಿಮಗೆ ದಯಪಾಲಿಸಲಿ
·
ಸಹೋದರಿ ನಳಿನಿ ಸೋಮಯಾಜಿಯವರಿಗೆ ಜನುಮದಿನದ ಶುಭಾಶಯಗಳು ನಿಮ್ಮ ಜೀವನದಲ್ಲಿ ಭಗವಂತನ ಸಂಪೂರ್ಣವಾದ ರಕ್ಷಣೆ ಇರಲಿ ಇಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ನಾರಾಯಣ ನಾರಾಯಣ ನಾರಾಯಣ
ಇವರು ಹಲವಾರು ವರ್ಷಗಳಿಂದ ನನ್ನ ಆತ್ಮೀಯ ಸ್ನೇಹಿತರಾಗಿರುವುದು ನನ್ನ ಸೌಭಾಗ್ಯ. ಇವರಿಗೆ ಜನ್ಮದಿನದ ಅಂಗವಾಗಿ ಹಾರ್ದಿಕ ಶುಭಾಶಯಗಳು.
" ಪಾಕಪ್ರವೀಣೆ ನಳಿನಿಗೆ ಜನ್ಮದಿನದ ಹೆಮ್ಮೆಯ ಶುಭಾಶಯಗಳು ಕಣಮ್ಮಾ " ಆಯುರಾರೋಗ್ಯದಿಂದ ಸದಾಕಾಲ ಸಂತೋಷವಾಗಿರಮ್ಮಾ
ಜನ್ಮದಿನದ ಹಾರ್ದಿಕ ಶುಭಾಶಯಗಳು ಮೇಡಂ 

ಆಯುರಾರೋಗ್ಯದೊಂದಿಗಿನ ತುಂಬು ಜೀವನೋತ್ಸಾಹವುಳ್ಳ ಚೆಂದದ ಬದುಕು ನಿಮ್ಮದಾಗಲಿ
Happy birthday Nalini. Many happy returns. It’s my birthday too. I don’t know how you showed up on my fb. But I enjoy your happy spirits and posts
Happy Birthday.May God bless you with good health and happiness and more and more talents
Vijaya Kadiyali
ಸಾವಿರ ಅಗ್ನಿ ಕುಂಡ ದಲ್ಲಿ ಪುಟಿದೆದ್ದ ಬಂಗಾರ ನೀನು. ನಿನಗೆ ಹುಟ್ಟು ಹಬ್ಬದ ಶುಭಾಶಯಗಳು
Happy Birthday..... God Bless.....