Wednesday, March 8, 2023

HOMA SHANTHI - RAJESHWARA HOLLA

 Wednesdahy, March 8, 2023

Poornaprajna Vidyapeeth, Bengaluru.

Rajeshwara Holla & Hemalatha Holla, been our family friend from our Dubai years.



He is now back from Dubai and re-located in Mangalore.



He invited relatives, friends and well-wishers for pooja, with Pavamana Homa, Mrutyanjaya Homa and Gana Homa and feast.







Their daughter Sitara with her husband and kid Nayan, living and working in USA, are on holidays and son Kartik also working in USA, here for celebrations.



After Pooja, Homa and Magalarathi, VAAYANA DAANA were given to elderly Ladies.





Grand Lunch followed with Holige, Mysore Paak, and Halwa with usual items.




Socialization and photos followed, with bye for now.

written 9/3/2023

Tuesday, March 7, 2023

ಹೋಂ ರೂಲು - ಕನ್ನಡ ನಾಟಕ

 ಭಾನುವಾರ, ಮಾರ್ಚ್ 5, 2023 

ಸೇವಾ ಸದನ, ಮಲ್ಲೇಶ್ವರ, ಬೆಂಗಳೂರು.

ಕೈಲಾಸಂ ಅವರ ನಗೆ ನಾಟಕ "ಹೋಂ ರೂಲು"



ಕೈಲಾಸಂ ಎಂದರೆ ನಗೆಯಬುಗ್ಗೆ, ಮಾತುಗಳ ಆಗರ. ವಿಡಂಬನೆಗೂಡು, ಇವು ಅವರ ಕೃತಿಗಳಲ್ಲಿ ಎದ್ದುಕಾಣುವ, ಓದುಗ ನಿರೀಕ್ಷಿಸುವ ಅಂಶಗಳು.


ವೈ. ವಿ. ಗುಂಡೂ ರಾವ್ 

ಹೋಂರೂಲ್ ನಾಟಕದ ವಸ್ತು ಹೀಗಿದೆ. ಮೈದಾನದಲ್ಲಿ ಹೆಬ್ಬುಲಿ ಮನೇಲಿ ಮೂಗಿಲಿ ಈ ನಾಟಕದ ಪಾತ್ರಧಾರಿ ರಾಮಣ್ಣ. ಮನೆಯ ಯಜಮಾನಿಕೆ ತನ್ನ ಹಿಡಿತದಲ್ಲಿಟ್ಟುಕೊಳ್ಳು ಪ್ರಯತ್ನಿಸುವ ಹೆಂಡತಿ ತಾಯಿ ಮಧ್ಯೆ ನರಳುವ ಅಸಹಾಯಕ ಪ್ರಾಣಿಯೆ ಈ ರಾಮಣ್ಣ.




ಖ್ಯಾತ ವಿಮರ್ಶಕ, ವಾಗ್ಮಿ, ನಾಟಕಕಾರ ವೈ,ವಿ, ಗುಂಡೂ ರಾವ್ ಅವರ ನಿರ್ದೇಶನ ಹಾಗೂ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ ನಗೆ ನಾಟಕ "ಹೋಂ ರೂಲು"


ಗುಂಡೂ ರಾವ್ ಅವರು ಸುಮಾರು 20 ನಿಮಿಷಗಳ ಕಾಲ "ಟಿ. ಪಿ. ಕೈಲಾಸಂ ಜಲಕ್" ಎಂಬ ವಿಶಯವಾಗಿ ಕೈಲಾಸಂ ಅವರ ಹಾಸ್ಯ ಪ್ರಜ್ಞೆ, ನಾಟಕಗಳ ಬಗ್ಗೆ ಮಾತನಾಡಿದರು.


ರಾಮಣ್ಣ ಪಾತ್ರದಲ್ಲಿ ಗುಂಡೂ ರಾವ್ ಅಭಿನಯಿಸಿ, ಹೆಂಡತಿ ಮತ್ತು ತಾಯಿಯ ನಡುವಿನ ಘರ್ಷಣೆ, ರಸವತ್ತಾಗಿ ರಂಗದ ಮೇಲೆ ನಟಿಸಿದರು.

ರಾಮಣ್ಣನ ಹೆಂಡತಿ, ಅಜ್ಜಿಯ  ಪಾತ್ರವೂ ಚೆನ್ನಾಗಿ ಮೂಡಿ ಬಂದಿತ್ತು.

ಬರೆದಿರುವುದು 8/3/2023 




Monday, March 6, 2023

ಮದನೋತ್ಸವ - ಸಂಗೀತ - ಪಂ. ವೆಂಕಟೇಶ್ ಕುಮಾರ್

 ಭಾನುವಾರ, ಮಾರ್ಚ್ 5, 2023 , ಬೆಳಿಗ್ಗೆ 8 ಗಂಟೆಗೆ 

ರಾಮಾಂಜನೇಯ ಗುಡ್ಡ, ಹನುಮಂತ ನಗರ, ಬೆಂಗಳೂರು.



"ತೊರೆದು ಜೀವಿಸ ಬಹುದೇ.... ಹರಿ ನಿನ್ನ ಚರಣಗಳ.......

ಬರಿದೆ ಮಾತೇಕಿನ್ನು ಅರಿತು ಪೆಳುವೆನಯ್ಯ....."

ತಾಯಿ ತಂದೆಯ ಬಿಟ್ಟು ತಪವ ಮಾಡಲು ಬಹುದು.....

ದಾಯಾದಿ ಬಂಧುಗಳ ಬಿಡಲು ಬಹುದು.....

ರಾಯಜ ಮುನಿದರೆ ರಾಜ್ಯವ ಬಿಡ ಬಹುದು.....

ರಾಯಜ ಪಿತ  ನಿನ್ನ ಹರಿಯ ಬಿಡಲಾಗದು..... ಬಿಡಲಾಗದು.....


ಬೆಳಗ್ಗಿನ ಸುಂದರ ವಾತಾವರಣದಲ್ಲಿ, ಆಂಜನೇಯನ ಸನ್ನಿಧಿಯಲ್ಲಿ ಪಂಡಿತ್ ವೆಂಕಟೇಶ್ ಕುಮಾರ್ ಅವರ ಅದ್ಭುತ ಹಾಡುಗಾರಿಕೆಯನ್ನು ಕೇಳುವುದು ಸುಯೋಗ. ಅವರೇ ಹೇಳಿದಂತೆ "ಅದೊಂದು ಧ್ಯಾನ"

ನಿರುಪಮ- ರಾಜೇಶ್ ಅವರ ಅಭಿನವ ಡಾನ್ಸ್ ಕಂಪನಿಯಿಂದ "ಮದನೋತ್ಸವ" ದ ಕಾರ್ಯಕ್ರಮ.



ಮೊದಲನೇಯ ಕಾರ್ಯಕ್ರಮ, ಸಂಗೀತ-ನ್ರತ್ಯ "ಸುಪ್ರಭಾತ" ದ ನಂತರ, ಹಿಂದುಸ್ತಾನಿ ಗಾಯಕ ಪಂಡಿತ್ ವೆಂಕಟೇಶ್ ಕುಮಾರ್ ಅವರ ಅದ್ಭುತವಾದ ಹಾಡುಗಾರಿಕೆ.

ಸುಮಾರು ಒಂದೂವರೆ ಗಂಟೆಗಳ ಕಾಲ ಹಾಡಿ, ಸುಮಾರು ಹತ್ತು ಗಂಟೆಗೆ ಕಛೇರಿಯನ್ನು ಮುಗಿಸಿದರು.

ನಂತರ ಅವರು ಮತ್ತು ತಂಡದವರಿಗೆ ಹಾರ, ಉಡುಗೊರೆ.....

ಬರೆದಿರುವುದು 7/3/2023 





Sunday, March 5, 2023

ಮದನೋತ್ಸವ - ನ್ರತ್ಯ ಮತ್ತು ಸಂಗೀತ

 ಭಾನುವಾರ, ಮಾರ್ಚ್ 5, 2023 , ಬೆಳಿಗ್ಗೆ 7 ಗಂಟೆ.

ರಾಮಾಂಜನೇಯ ಗುಡ್ಡ, ಬೆಂಗಳೂರು.





ಅಂದು ಮುಂಜಾನೆ 6 ಗಂಟೆಗೆ ಮನೆಯಿಂದ ಹೊರಟು,  ಹನುಮಂತ ನಗರದಲ್ಲಿರುವ ರಾಮಾಂಜನೇಯ ಗುಡ್ಡದ ಕೆಳಗೆ 7  ಗಂಟೆಗೆ ತಲುಪಿ, ಅಲ್ಲಿ ಇಲ್ಲಿ ಕಾರು ನಿಲ್ಲಿಸಲು ಸ್ಥಳ ಹುಡುಕಿ ಸುಮಾರು 50 ಮೆಟ್ಟಿಲುಗಳು ಇರುವ ಬೆಟ್ಟದ ಮೇಲೆ ತಲುಪಿದೆವು.



ನಿರುಪಮ - ರಾಜೇಂದ್ರ ಅವರ ಅಭಿನವ ಡ್ಯಾನ್ಸ್ ಕಂಪನಿಯವರ ಮದನೋತ್ಸವ ಕಾರ್ಯಕ್ರಮದ ಪೂರ್ವ ತಯಾರಿ. ಸುಂದರವಾದ ವಾತಾವರಣ ದಲ್ಲಿಯ, ಆಯೋಜಕರ ಓಡಾಟ, ನ್ರತ್ಯದಲ್ಲಿ ಭಾಗವಹಿಸುವರ ಆತಂಕ, ಆಗಲೇ ಹಲವಾರು ಮಂದಿ ಆಸೀನರಾಗಿರುವುದು .....


ಸುಮಾರು 7 .30 ಗಂಟೆಗೆ ಪ್ರಾರಂಭವಾದ "ಸುಪ್ರಭಾತ" ನ್ರತ್ಯ ಸಂಯೋಜನೆ,  ಪ್ರವೀಣ್ . ಡಿ. ರಾವ್  ಸಂಗೀತ, ರು ನೂರಕ್ಕೂ ಹೆಚ್ಚು ನ್ರತ್ಯಧಾರಿಗಳು ಭಾಗವಹಿಸಿದರು. ಸುಮಾರು 15 ನಿಮಿಷಗಳ ಕಾಲದ ಪ್ರಸ್ತುತಿ.


ಅವರ ನ್ರತ್ಯದ ಚಲನ ವಲನೆ, ಭಾವ ಭಂಗಿ, ಮುಖದ ಮುಗ್ಧತೆ ಮನಸ್ಸಿಗೆ ಉಲ್ಲಾಸ ಕರವಾಗಿತ್ತು.
ನಂತರದ ಕಾರ್ಯಕ್ರಮ ವೆಂಕಟೇಶ್ ಕುಮಾರ್ ಅವರ ಹಿಂದುಸ್ತಾನಿ ಗಾಯನ.....

ಬರೆದಿರುವುದು 6/3/2023 






ಟಿಪ್ಪು ನಿಜ ಕನಸುಗಳು - ಕನ್ನಡ ನಾಟಕ

 ಶನಿವಾರ, ಮಾರ್ಚ್ 4, 2023 

ರವೀಂದ್ರ ಕಲಾಕ್ಷೇತ್ರ,  ಬೆಂಗಳೂರು.

ಟಿಪ್ಪು ನಿಜ ಕನಸುಗಳು 

ಅದೊಂದು ಅದ್ಭುತವಾದ ಮೂರುವರೆ ಗಂಟೆಗಳ ಕಾಲದ ಕನ್ನಡ ಐತಿಹಾಸಿಕ ನಾಟಕ.

ಕ್ರೂರಿ, ಮತಾಂಧ, ಟಿಪ್ಪು ಸುಲ್ತಾನನ ಕಾಲದ ಜನರ ಹಿಂಸೆ, ದಬ್ಬಾಳಿಕೆ ಯಾ ಅನಾವರಣ.



ಅದ್ಭುತವಾದ ನಟನೆ, ದೃಶ್ಯ ಸಂಯೋಜನೆ, ರಂಗ ನೇಪಥ್ಯ, ಬೆಳಕು, ಶಬ್ದ, ಉಡುಪು, ವಿನ್ಯಾಸ, ರಂಗಸಂಗೀತ... ವಾಹ್ವ್ ನಿಜಕ್ಕೂ ಅಪರೂಪಕ್ಕೊಮ್ಮೆ ಅತ್ಯುತ್ತಮವಾದ್ದೊಂದು ರಂಗಪ್ರಯೋಗ ನೋಡಿದೆ. ಆ ನಟರೋ ಸಂಪೂರ್ಣ ಭಾವಪರವಶವಾದವರಂತೆ ಅಭಿನಯಿಸಿದ್ದಾರೆ. ಅದೆಷ್ಟು ಅಸ್ಕಲಿತವಾಗಿ ಸಂಭಾಷಿಸುತ್ತ ಅಭಿನಯಿಸುತ್ತಿದ್ದರೆಂದರೆ ಯಾವುದೇ ಪರಾಕರ್ಷಣೆಗೆ ಒಳಗಾಗದೆ ನಾವೂ ಅದರ ಭಾಗವಾದ ಹೋಗಿದ್ದು ಸುಳ್ಳಲ್ಲ.


ಕಲೆ ಹಾಗೂ ಸತ್ಯದ ನೆಲೆಯನ್ನು ಅತ್ಯುತ್ತಮವಾಗಿ ಯೋಜಿಸಿಕೊಂಡಿದ್ದಾರೆ. ಇವರು ತಮ್ಮ ವಿಷಯ ಪ್ರಸ್ತುತಿಗೆ ನಾಟಕವನ್ನು ಅಂದರೆ ಕಲೆಯನ್ನು ಒಣಗಿಸಿರುತ್ತಾರೆಂದುಕೊಂಡಿದ್ದ ನನ್ನ ಪೂರ್ವಗ್ರಹ ಕಳೆದು ಹೋಯಿತು. ಈ ಹಿಂದೆ ನೋಡುತ್ತಿದ್ದ ಸಿದ್ಧಾಂತ ಪ್ರಸ್ತುತಿಯ ನಾಟಕಗಳ ಪ್ರಭಾವದಿಂದ ನನಗೆ ಹಾಗನ್ನಿಸಿದ್ದಿರಬಹುದು. ಈಗದು ಕಳೆಯಿತು. ನಾಟಕ ಇನ್ನೂ ಹೆಚ್ಚಿನ ಪ್ರದರ್ಶನ ಕಾಣಲಿ. ಕಲೆ ಪೋಷಿತವಾಗಲಿ, ಸತ್ಯ ಅನಾವರಣವಾಗಲಿ. ಒಟ್ಟಿನಲಿ ಸಿದ್ಧಾಂತಭೇದಗಳೂ ನಮ್ಮ ಕಲೆಯನ್ನು ಬೆಳಗಿಸಬಲ್ಲವೆಂಬುದಕ್ಕೆ 'ಟಿಪ್ಪು ನಿಜಕನಸುಗಳು' ನಾಟಕ ಒಂದೊಳ್ಳೆ ಉದಾಹರಣೆ.


ಒಂದೇ ಒಂದು ವಿಪರ್ಯಾಸವೇನೆಂದರೆ ನಮ್ಮೀ ಪುರುಷ ಪ್ರಧಾನ ವ್ಯವಸ್ಥೆಯ ಅಹಮಿಕೆ ಮಹಿಳೆಗೆ ದನಿಯಾಗದೆ ಕೇವಲ ಕತ್ತಿಯ ಮೊನೆಯಲ್ಲಿ, ಮತದ ಅಫೀಮಿನಲ್ಲಿ ಮುನ್ನುಗ್ಗುತ್ತಿರುವುದು!


18 ನೆ ಶತಮಾನದ ಕೊನೆಯಲ್ಲಿ ದಿಲ್ಲಿಯಲ್ಲಿ ಮೊಘಲರು ಭಾರವನ್ನು ಅಳುತಿದ್ದ ಕಾಲ, ದಕ್ಷಿಣದಲ್ಲಿ   ಹೈದರ್ ಅಲಿಯ ,ಮಗ ಟಿಪ್ಪು ಸುಲ್ತಾನ, ಮಹಾತ್ವಾಕಾಂಕ್ಷಿ, ಕ್ರೂರಿ, ಮತಾಂಧ. ಇಡೀ ಭಾರತ ದೇಶವನ್ನು, ಹಿಂದುಸ್ತಾನವನ್ನು ಇಸ್ಲಾಮೀ ಕರಣ ವನ್ನಾಗಿ ಮಾಡುವ ಬಹು ದೊಡ್ಡ ಕನಸು.


ವಿಪರ್ಯಾಸ ವೆಂದರೆ ಇತಿಹಾಸವನ್ನು ತಿರುಚಿ, ಆಗ ನಡೆದ ಘಟನೆಗಳನ್ನು ಸರಕಾರಕ್ಕೆ ದ್ವನಿಯಾಗುವಂತೆ ಬರೆದಿರುವುದು ಸನಾತನ ಧರ್ಮದ ದುರಂತ.


ನಾಟಕದಲ್ಲಿ ಅತ್ಯಂತ ಸುಂದರವಾಗಿ ಪ್ರಸ್ತುತ ಪಡಿಸಿದ ಕಲಾವಿದರುಗಳು ಅತ್ಯಂತ ಪ್ರಶಂಸನಾರ್ಹರು.
ಹಲವಾರು ಸನ್ನಿವೇಶಗಳು - ಕೊಡಗಿನ ಪ್ರಮುಖರನ್ನು ಹಿಂಸಿಸಿ ಮೋಸದಿಂದ ಸಾಯಿಸುವ ದ್ರಶ್ಯ, ಮೇಲು ಕೋಟೆಯ ಬ್ರಾಹ್ಮಣರನ್ನು ದೀಪಾವಳಿಯ ನರಕ ಚತುರ್ದಶಿಯಂದು ಕೊಂದು ಮರಕ್ಕೆ ನೇತು ಹಾಕಿರುವ ದ್ರಶ್ಯ,  ನಂತರ, ಬ್ರಾಹ್ಮಣನೊಬ್ಬ ಅತ್ಯಂತ ದುಖಿತನಾಗಿ ಟಿಪ್ಪು ಸುಲ್ತಾನ ನಿಗೆ ಶಾಪ ಹಾಕುವ ದ್ರಶ್ಯ ಅತ್ಯಂತ ಮನ ಕರುಗುವಂತಿತ್ತು.

ತುಂಬಿದ ಸಭಾಂಗಣದಲ್ಲಿ, ಎಲ್ಲರೂ ಏಕಾಗ್ರತೆಯಿಂದ ವೀಕ್ಷಿಸಿರುವುದು, ಹತ್ತು ನಿಮಿಷಗಳ ವಿರಾಮದ ನಂತರ ವಾಪಸ್ಸು ಬಂದಿರುವುದು ನಾಟಕದ ಸ್ಹೇಷ್ಟತೆಯನ್ನು ತೋರಿಸುತ್ತದೆ.
ಅದ್ಯಂಡ ಸಿ. ಕಾರ್ಯಪ್ಪ 


ನಾಟಕದ ರಚನೆ, ನಿರ್ದೇಶನವನ್ನು ಮಾಡಿದ ಅದ್ಯಂದ ಸಿ. ಕಾರ್ಯಪ್ಪ ಅವರಿಗೆ ತುಂಬು ಹ್ರದಯದ ಅಭಿನಂದನೆಗಳು.


ರಾಜ್ಯಾದಂತ 50 ನೇ ಪ್ರದರ್ಶನವನ್ನು ಪ್ರಸ್ತುತ ಪಡಿಸಿದ ಮೈಸೂರಿನ ರಂಗಾಯಣ ತಂಡದವರಿಗೆ ಹಾರ್ದಿಕ ಶುಭಾಶಯಗಳು. 

ಬರೆದಿರುವುದು 5/3/2023 


Friday, March 3, 2023

SHRADDHANJALI - KUSUMA (BAABU ACHEMANE)

 Friday, March 3 , 2023

Bengaluru.

KUSUMA

It was those days, when we used to school from our house at Birthi, Salekeri, 

then, after returning from school, in the evening playing at home,

their house was just a wall across, with a door,



Kusuma, we used to call her Baabu, breathed her last yesterday morning (3/3/2023)

She was D/O Baikady Venkatakrishna Rao,

Rakesh and Ritesh are sons, Yogish Karanth, her husband.



Little more than a month ago, we visited their home at RajaRajeshwarinagar.



Sent a condolence message to her son Rakesh:

Hello Rakesh

Very sad to hear about demise of your mother, (aachemane baabu. We used call her) Please accept our heartfelt condolences, God to give you strength to bear the loss.

May her soul rest in peace.😔

and he replied:

Yes feeling sad every thing happened so quickly didn’t even realise today we don’t have Amma

Today is punarvasu nakshathra which my nakshathra .Amma choose this day.

Sumathi (Bulli), who passed away recently and Gowri are her sisters.



However, it's only the memories remain to cherish.

RITUALS PERFORMED (RAKESH, WIFE RITESH)

with SURYANARAYANA RAO, RAGHAVENDRA BHAT

at Vaikuntha Samaradhane, Hayagreeva Dharmika Mandira, Pushpagiri, Bengaluru.

Life's lesson..... when the time comes..... leave this world quietly....

MAY HER SOUL REST IN PEACE.

OM SHANTHI..... OM SADGATHI....

written on 4/3/2023