Sunday, January 18, 2026
Sripada SriVallabha Bhavana, Thyagarajanagara, Bengaluru.
ಇಂದು ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 1:30ರವರೆಗೆ ಶ್ರೀಪಾದ ಶ್ರೀವಲ್ಲಭ ಭವನದಲ್ಲಿ ಸಪ್ತಸ್ವರ ಸಂಗೀತ ಶಾಲೆಯ ವತಿಯಿಂದ ತ್ಯಾಗರಾಜ ಸ್ವಾಮಿ ಆರಾಧನ ಮಹೋತ್ಸವವು ಭಕ್ತಿ ಮತ್ತು ಸೌಂದರ್ಯದೊಂದಿಗೆ ಸಂಪನ್ನ ಗೊಂಡಿತು.
ಈ ಸಂದರ್ಭದಲ್ಲಿ ತ್ಯಾಗರಾಜ ಸ್ವಾಮಿಯ ಪಂಚರತ್ನ ಕೃತಿಗಳು ಸಮೂಹವಾಗಿ ಹಾಡಲ್ಪಟ್ಟವು. ವಿದ್ಯಾರ್ಥಿಗಳು, ಸಂಗೀತಾಭಿಮಾನಿಗಳು ಹಾಗೂ ವಿದ್ವಾಂಸರು ಸೇರಿ ಸೌಹಾರ್ದಯುತವಾಗಿ ಗಾಯನದಲ್ಲಿ ಪಾಲ್ಗೊಂಡರು.
ಕಾರ್ಯಕ್ರಮವನ್ನು ವಿದ್ವಾನ್ ರಘುರಾಮ ಮೂಡನೂರು ಅವರ ಮಾರ್ಗದರ್ಶನದಲ್ಲಿ ಸಪ್ತಸ್ವರ ಸಂಸ್ಥೆಯು ಆಯೋಜಿಸಿತ್ತು.ಸಂಗೀತ ಶಾಲೆಯ ವಿದ್ಯಾರ್ಥಿಗಳು ಒಬ್ಬೊಬ್ಬರರಾಗಿ ತಮ್ಮ ಕಲಿಕೆಯ ಹಾಡುಗಳನ್ನು ಸುಶ್ರಾವ್ಯವಾಗಿ ಹಾಡಿದರು.
ಪಂಚರತ್ನ ಕೃತಿಗಳನ್ನು ವಿದ್ವಾನ್ ರಘುರಾಮ ಮೂಡನೂರು ಅವರ ನೇತೃತ್ವದಲ್ಲಿ ವಿದ್ಯಾರ್ಥಿಗಳು ಮತ್ತು ಸಂಗೀತಾಭಿಮಾನಿಗಳು ಸಮೂಹವಾಗಿ ಗಾಯನ ಮಾಡಿದರು.
ನಾದಯೋಗದ ಸಾನ್ನಿಧ್ಯದಲ್ಲಿ ಸಂಗೀತದ ಈ ಅರವತ್ತು ನಿಮಿಷಗಳು ಭಾವಭರಿತ ಕ್ಷಣಗಳಾಗಿ ಉಳಿದವು! 🎵

.jpg)




.jpg)

.jpg)
.jpg)

.jpg)
No comments:
Post a Comment