Friday, April 19, 2024

ವಿಂಶತಿ ವೈಭವ (2) - ಬ್ರಾಹ್ಮಣ ಸಮಾಜ ದುಬೈ

 ಶನಿವಾರ, 13 ಏಪ್ರಿಲ್ 2024 

ದುಬೈ ಬಕಾಲುರೆಟ್ ಶಾಲೆ, ಜುಮೇರಾ, ದುಬೈ.

ವಿಂಶತಿ ವೈಭವ - ಬ್ರಾಹ್ಮಣ ಸಮಾಜ ದುಬೈ 

ಯು.ಎ.ಇ. ಬ್ರಾಹ್ಮಣ ಸಮಾಜ, ದುಬೈ ಅವರ 20 ನೇ ವರ್ಷದ, ವರ್ಷದಲ್ಲಿ 20 ಕಾರ್ಯಕ್ರಮಗಳ ವಿಂಶತಿ ಉತ್ಸವದ ನಂತರ ಅದ್ದೂರಿಯಾಗಿ ನಡೆದ ಸಮಾರೋಪ ಸಮಾರಂಭ "ವಿಂಶತಿ ವೈಭವ"



ದಿನವಡೀ ನಡೆದ ಸಂಭ್ರಮದ ಕಾರ್ಯಕ್ರಮದಲ್ಲಿ ನೃತ್ಯ, ಸಂಗೀತ, ಯಕ್ಷಗಾನ, ಸನ್ಮಾನ ಇತ್ಯಾದಿ ಇದ್ದು ಮಧ್ಯಾಹ್ನ ಭರ್ಜರಿ ಭೋಜನದ ವ್ಯವಸ್ಥೆ ಮಾಡಲಾಗಿತ್ತು.




ಮಂಗಳೂರು ನಮ್ಮ ಕುಡ್ಲ ಅವರಿಂದ ನಿರಂತರವಾಗಿ ಕಾರ್ಯಕ್ರಮವನ್ನು ಲೈವ್ ಪ್ರಸರ ಮಾಡಲಾಗಿತ್ತು.


ಮುಖ್ಯ ಅತಿಥಿ ಡುಂಡಿರಾಜ್ ಅವರ ಹಾಸ್ಯ ಭಾಷಣ, ರೋಹಿಣಿ ಆನಂತ್ ಅವರಿಂದ ಅಸ್ಸಾಂನ ಪ್ರಾಚೀನ ನೃತ್ಯ ಕಲೆ, "ಸತ್ರಿಯಾ" ಮತ್ತು "ದಕ್ಷ ದ್ವರ" ಯಕ್ಷಗಾನ ವಿಶೇಷವಾಗಿತ್ತು.


ಹಳೆಯ ಸ್ನೇಹಿತರುಗಳು, ದುಬೈ/ಶಾರ್ಜಾ ದಲ್ಲಿ ಕೆಲಸ ಮಾಡುತ್ತಿರುವ ಆತ್ಮೀಯರು ಭೇಟಿಯಾಗಿ ಉಭಯ ಕುಶಲೋಪರಿ ಮಾತುಕತೆ ಅದ್ಭುತವಾಗಿತ್ತು.









ಸಮಾಜದ ಸದಸ್ಯರಿಂದ ರೋಮಾಂಚಕ ಕಂಸಾಳೆ ನೃತ್ಯ ಪ್ರದರ್ಶನ 

ಬ್ರಾಹ್ಮಣ ಸಮಾಜದ ಸಂಚಾಲಕ ಸುಧಾಕರ್ ರಾವ್ ಪೇಜಾವರ್ ಅವರ ಪರಿಶ್ರಮ, ಶ್ರದ್ಧೆ, ಕಾರ್ಯ ವೈಖರಿ ಎಲ್ಲವೂ ಸಮಾರಂಭದ ಯಶಸ್ಸಿಗೆ ಕಾರಣ, ಅವರಿಗೆ ಅನಂತಾನಂತ ಅಭಿನಂದನೆಗಳು.





ಬರೆದಿರುವುದು 20/4/2024 

No comments:

Post a Comment