Saturday, April 26, 2025

ಮಾಸಿಕ ಜನ ಸಂಪರ್ಕ ಸಭೆ - ಅಮೃತ ಹಳ್ಳಿ.

 ಶನಿವಾರ, ಅಪ್ರಿಲ್. 26, 2025

ಅಮೃತ ಹಳ್ಳಿ ಪೋಲಿಸ್ ಸ್ಟೇಷನ್.


ದಿನಾಂಕ:26/04/2025 ರಂದು  ಬೆಳಿಗ್ಗೆ 10.30 ಗಂಟೆಗೆ ಅಮೃತ ಹಳ್ಳಿ ಪೊಲೀಸ್ ಠಾಣೆಯಲ್ಲಿ ಮಾಸಿಕ ಜನಸಂಪರ್ಕ ಸಭೆ ಇರುವುದರಿಂದ ಎಲ್ಲಾ ಸಾರ್ವಜನಿಕರು ಭಾಗವಹಿಸಿ ತಮ್ಮ ತಮ್ಮ ಕುಂದುಕೊರತೆಗಳನ್ನು ತಿಳಿಸಲು ಸೂಚಿಸಲಾಗಿದೆ.

ಇಂದು ಅಮೃತ ಹಳ್ಳಿಪೋಲಿಸ್ ಜನ ಸಂಪರ್ಕ ಸಭೆ, ಬೆಳಿಗ್ಗೆ 10.30ಗೆ ಹೋಗಿದ್ದೆ. ಸಭೆಯು ಸುಮಾರು 11.30 ಗಂಟೆಗೆ ಪ್ರಾರಂಭವಾಯಿತು. ಸಾಕಷ್ಟು ಸಾರ್ವಜನಿಕರು ಸೇರದಿದರಿಂದ ಸಭೆಯು ತಡವಾಗಿ ಪ್ರಾರಭವಾಯಿತು ಎಂದು ತಿಳಿಸಿದರು.




ಸಭೆಯಲ್ಲಿ ನಾಲ್ಕು ಉನ್ನತ ಪೋಲಿಸ್ ಅಧಿಕಾರಿಗಳಿದ್ದು , ಹಿರಿಯ ಅಧಿಕಾರಿ ಸಭೆಯನ್ನು ಪ್ರಾರಂಭಿಸಿ ಉದ್ದೇಶ ವನ್ನು ತಿಳಿಸಿ ಸಾರ್ವಜನಿಕರಿಂದ ಅಹವಾಲು, ದೂರುಗಳು, ಸಮಸ್ಯೆಗಳನ್ನು ಮುಂದಿಡಲು ಹೇಳಿದರು.



ಪ್ರಮುಖವಾಗಿ, ಪೋಲಿಸರಿಂದ ರಾತ್ರಿ ಹೊತ್ತಿನ ಬೀಟ್ ಸಮಸ್ಯೆ, ನಾಕಾ ಬಂಧಿ,  ಭುವನೇಶ್ವರಿ ನಗರ ಮುಖ್ಯ ರಸ್ತೆಯಲ್ಲಿ ಸಂಚಾರ ಸಮಸ್ಯೆ, ಸ್ಟೇಶನ್ ನಿನ ಕೆಳಭಾಗ ಶಾಲೆಯ ಆಸುಪಾಸಿನಲ್ಲಿ ಡ್ರಗ್ ಸೇವನೆ, ಇತ್ಯಾದಿಗಳನ್ನು ಅಧಿಕಾರಿಗಳ ಗಮನ ಸೆಳೆಯಲಾಯಿತು.

ಎಲ್ಲಾ ಸಮಸ್ಯೆಗಳಿಗೆ ಸೂಕ್ತವಾದ ಪರಿಹಾರ ಕಂಡು ಹಿಡಿದು, ನಿವಾರಣೆಗಾಗಿ ಪ್ರಯತ್ನಿಸುವುದಾಗೆ ಆಶ್ವಾಸನೆ ನೀಡಿದರು.

ಸಭೆಯು 12 ಗಂಟೆಗೆ ಮುಕ್ತಾಯಗೊಂಡಿತು.

Posted 27/4/2025


No comments:

Post a Comment