ಶಿವರಾಮ ಕಾರಂತ ವೇದಿಕೆಯ 2024-25 ರ ವಾರ್ಷಿಕ ವರದಿ.
ಸನ್ಮಾನ್ಯ ಅಧ್ಯಕ್ಷರೇ,
ವೇದಿಕೆಯ ಗೌರವಾನ್ವಿತ ಪದಾಧಿಕಾರಿಗಳೆ , ನೆರೆದಿರುವ ಸಕಲ ಸದಸ್ಯರೇ, ಸನ್ಮಿತ್ರರೇ,
ಮೂವತ್ತು ವರ್ಷಗಳ ಇತಿಹಾಸವಿರುವ ನಮ್ಮ ಶಿವರಾಮ ಕಾರಂತ ವೇದಿಕೆ(ರಿ) , ಕನ್ನಡ ಸಾಹಿತ್ಯಿಕ ಕಾರ್ಯಕ್ರಮಗಳ ಜೊತೆ ಜೊತೆಗೆ ಕಲೆ ,ಸಂಸ್ಕೃತಿಗಳ ವರ್ಧನೆಗೂ ಮೀಸಲಿಟ್ಟಿದೆ. ಸಂಸ್ಥೆಯು ಸತತವಾಗಿ ಉಪನ್ಯಾಸ, ನಾಟಕ, ಯಕ್ಷಗಾನ, ಮಕ್ಕಳಿಗೆ ಸಂಬಂಧಿಸಿದಂತೆ ರಸಪ್ರಶ್ನೆ ಹೀಗೆ ವಿವಿಧ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿರುತ್ತದೆ. ಬೆಂಗಳೂರಿನ ಪ್ರತಿಷ್ಠಿತ ಸಾಹಿತ್ಯಕ ಸಂಸ್ಥೆ ಎಂದು ಗುರುತಿಸಲ್ಪಟ್ಟಿದ್ದು, ಬೆಂಗಳೂರು ಉತ್ತರ ಭಾಗದ ಏಕೈಕ ಸಾಹಿತ್ಯ ವೇದಿಕೆ ಎನ್ನಲು ನಮಗೆ ಹೆಮ್ಮೆ ಎನಿಸುತ್ತದೆ.
ನಮ್ಮ ಸಂಸ್ಥೆಯ ಕಳೆದ ವಾರ್ಷಿಕ 2024-25ನೇ ಸಾಲಿನ ಮಹಾಸಭೆ ದಿನಾಂಕ 22.6.2025ರ ಭಾನುವಾರ , ಮಧ್ಯಾಹ್ನ 3 ಗಂಟೆಗೆ ಸರಿಯಾಗಿ, ತರಳಬಾಳು ಕೇಂದ್ರ, ಮಿನಿ ಹಾಲ್ ನಲ್ಲಿ .ಆರ್. ಟಿ. ನಗರ ,ಬೆಂಗಳೂರು-32 ಇಲ್ಲಿ ನಡೆಯಿತು.
2024-25 ರ ವಾರ್ಷಿಕ ವರದಿಯ ವರ್ಷದಲ್ಲಿ ಕೆಳಗೆ ಕಾಣಿಸಿದವರು ಸಂಸ್ಥೆಯ ಏಳಿಗೆಗಾಗಿ ದುಡಿದಿದ್ದಾರೆ.
ಸಂಸ್ಥಾಪಕರು - ಶ್ರೀ ಪಾ.ಚಂದ್ರಶೇಖರ ಚಡಗ ರವರು
ಅಧ್ಯಕ್ಷರು - ಡಾ. ದೀಪಾ ಫಡ್ಕೆ
ಗೌರವಾಧ್ಯಕ್ಷರು - ಶ್ರೀ ಎಸ್.ಆರ್. ವಿಜಯಶಂಕರ
ಉಪಾಧ್ಯಕ್ಷರು - ಡಾ. ಆರ್ .ಆರ್. ಪಾಂಗಾಳ್ ಮತ್ತು ಶ್ರೀ ವೀರಶೇಖರ ಸ್ವಾಮಿ
ಕಾರ್ಯದರ್ಶಿ - ಶ್ರೀಮತಿ ಮಂಜುಳಾ ಭಾರ್ಗವಿ
ಕೋಶಾಧಿಕಾರಿ - ಶ್ರೀ. ಬಿ. ಜಯರಾಮ ಸೋಮಯಾಜಿ
ಕಾರ್ಯಕಾರಿ ಸಮಿತಿಯ ಸದಸ್ಯರು
ಶ್ರೀ ಕೆ. ರಮೇಶ್ ಗೋಟ
ಶ್ರೀಮತಿ ಸತ್ಯಭಾಮ ರಂಗೇಗೌಡ
ಶ್ರೀಮತಿ ಅರುಣ ಮಯ್ಯ
ಶ್ರೀಮತಿ ಚೇತನಾ ಹೆಗಡೆ
ಶ್ರೀಮತಿ ಸಂಧ್ಯಾ ಮಂಜುನಾಥ್
ಶ್ರೀ ಸುಧೀoದ್ರ
ಯಕ್ಷಗಾನ ಮತ್ತು ನಾಟಕ ಸಮಿತಿ - ಶ್ರೀ ಕೆ. ಕೃಷ್ಣ ಪ್ರಸಾದ .
ಸಂಪನ್ಮೂಲ ಸಮಿತಿ- ಶ್ರೀ ಬಿ.ಎಚ್. ಎಂ. ವೀರಶೇಖರ ಸ್ವಾಮಿ ಮತ್ತು ಶ್ರೀ. ಬಿ. ಜಯರಾಮ ಸೋಮಯಾಜಿ
ಕಾರ್ಯಕಾರಿ ಸಮಿತಿಯ ಸಮಯೋಜಿತ ಸಭೆಗಳ / ಸಂದರ್ಭಕ್ಕನುಗುಣವಾಗಿ ತೀರ್ಮಾನಗಳನ್ನು ತೆಗೆದುಕೊಳ್ಳುತ್ತ ಮೇಲ್ಕಂಡ ಅವಧಿಯ ಕಾರ್ಯಕ್ರಮಗಳನ್ನು ರೂಪಿಸಿ , ನಡೆಸಿ ಯಶಸ್ವಿಯಾಗಿರುತ್ತದೆ. ಅದರನ್ವಯ 2024-2025 ರ ವಾರ್ಷಿಕ ಅವಧಿಯ ಕಾರ್ಯಕ್ರಮಗಳ ಸಂಕ್ಷಿಪ್ತ ವರದಿಯನ್ನು ಈ ಮಹಾ ಸಭೆಯ ಮುಂದೆ ಇಡುತ್ತಿದ್ದೇನೆ.
1. ದಿನಾಂಕ 28.4.24 ಭಾನುವಾರ ಸಂಜೆ 4.00 ಗಂಟೆಗೆ ಸ್ಥಳ: ಡಿ. ಜಿ. ಕ್ಯೂ. ವಸತಿ ಸಂಕಿರ್ಣ ಆರ್.ಟಿ.ನಗರ. ಇಲ್ಲಿ ಪಾ. ವೆಂ. ಸ್ಮೃತಿ ಕಾರ್ಯಕ್ರಮ ವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಕ್ಕೆ.ಮುಖ್ಯ ಅತಿಥಿಗಳಾಗಿ ಜಯಂತ್ ಕಾಯ್ಕಿಣಿ ಮತ್ತು ಡಾ. ಶಶಿಕಲಾ ಅವರು ವೇದಿಕೆಗೆ ಬಂದು ತಮ್ಮ ಉಪನ್ಯಾಸವನ್ನು ಮಾಡಿರುತ್ತಾರೆ.
2. ದಿನಾಂಕ 23.ಜೂನ್.2024 ಭಾನುವಾರ ಸಂಜೆ 4.00 ಗಂಟೆಗೆ ಸ್ಥಳ: ವಿನಾಯಕ ದೇವಸ್ಥಾನ ಸಭಾಂಗಣ ಆರ್.ಟಿ.ನಗರ. ಇಲ್ಲಿ ಪ್ರೊ. ಎಲ್. ಎಸ್. ಶೇಷಗಿರಿ ರಾವ್ ಜನ್ಮ ಶತಮಾನತ್ಸವದ ಅಂಗವಾಗಿ .ಮುಖ್ಯ ಅತಿಥಿಗಳಾಗಿ ಟಿ. ಎನ್ ವಾಸುದೇವ ಮೂರ್ತಿ ಹಾಗೂ ಖ್ಯಾತ ಸಾಹಿತಿಗಳು ಹಾಗು ವಿಮರ್ಶಕರಾದ ಶ್ರೀ ಎಸ್ ಆರ್. ವಿಜಯ ಶಂಕರ ಅವರು ವೇದಿಕೆಗೆ ಬಂದು ತಮ್ಮ ಉಪನ್ಯಾಸವನ್ನು ಮಾಡಿರುತ್ತಾರೆ.
3. ದಿನಾಂಕ 22.ಅಕ್ಟೋಬರ್ ಭಾನುವಾರ. .2024 ಸಂಜೆ 4.00 ಗಂಟೆಗೆ ಸ್ಥಳ: ವಿನಾಯಕ ದೇವಸ್ಥಾನ ಆರ್.ಟಿ.ನಗರ. ಇಲ್ಲಿ ನಮ್ಮ ಆಹಾರ ನಮ್ಮ ಅರೋಗ್ಯ .ಈ ವಿಷಯವಾಗಿ ಡಾ. ಪ್ರಸನ್ನ ಸಂತೆ ಕಡೂರ್ ವೇದಿಕೆಗೆ ಬಂದು ತಮ್ಮ ಉಪನ್ಯಾಸವನ್ನು ಮಾಡಿರುತ್ತಾರೆ.
4. ದಿನಾಂಕ 20.ಅಕ್ಟೋಬರ್ .2024 ಭಾನುವಾರ ಸಂಜೆ 4.00 ಗಂಟೆಗೆ ಸ್ಥಳ: ವಿನಾಯಕ ದೇವಸ್ಥಾನ ಸಭಾಂಗಣ ಆರ್.ಟಿ.ನಗರ. ಇಲ್ಲಿ ಸರ್ವ ಸದಸ್ಯರ ಮಹಾ ಸಭೆ ಕಾರ್ಯಕಾರಿ ಸಮಿತಿಯ ಸಭೆ ನಡೆದಿರುತ್ತದೆ.
5. ದಿನಾಂಕ 26 ಅಕ್ಟೋಬರ್ .24 ಶನಿವಾರ ಸಂಜೆ 4.00 ಗಂಟೆಗೆ ಸ್ಥಳ: ವಿನಾಯಕ ದೇವಸ್ಥಾನ ಸಭಾಂಗಣ ಆರ್.ಟಿ.ನಗರ. ಇಲ್ಲಿ ಕಾರಂತರ ವೇದಿಕೆಯಲ್ಲಿ ಕಾರಂತರ 132 ನೆ ಹುಟ್ಟುಹಬ್ಬ ನಿರಂಜನ ಸ್ಮರಣೆ ಕಾರ್ಯಕ್ರಮ ನಡೆದಿರುತ್ತದೆ.ಇದರಲ್ಲಿ ಎಚ್. ಎಸ್. ರಾಘವೇಂದ್ರ ರಾವ್ ಅವರು ಆಗಮಿಸಿ ತಮ್ಮ ಉಪನ್ಯಾಸ ನೀಡಿರುತ್ತಾರೆ.
6. ದಿನಾಂಕ 10 ನವಂಬರ್ 2024 ಭಾನುವಾರ ಬೆಳಿಗ್ಗೆ 10.00 ಗಂಟೆಯಿಂದ ಸ್ಥಳ: ವಿನಾಯಕ ದೇವಸ್ಥಾನ, ಸಭಾಂಗಣ, ಆರ್.ಟಿ.ನಗರ. ಇಲ್ಲಿ ಕನ್ನಡ ರಾಜ್ಯೋತ್ಸವ 2024 ಕಾರ್ಯಕ್ರಮ, ಹಿರಿಯರಿಗೆ ಗೌರವ ಸನ್ಮಾನ, ಸಾಂಸ್ಕ್ರತಿಕ ಕಾರ್ಯಕ್ರಮ, ಪ್ರಸಾದ ವಿತರಣೆ, ಬಿ. ಎಂ. ಶ್ರೀ. ಪ್ರತಿಷ್ಟಾನದ ಅಧ್ಯಕ್ಷರಾದ ಶ್ರೀ ಭೈರಮಂಗಲ ರಾಮೇಗೌಡ ಅವರು ಆಗಮಿಸಿ ಕಾರ್ಯಕ್ರಮ ವನ್ನು ಅತ್ಯಂತ ಅದ್ಧುರಿಯಿಂದ ಆಚರಿಸಿದ್ದೇವೆ.
7. ದಿನಾಂಕ 15.ಡಿಸೆಂಬರ್ .2024 ಸೋಮವಾರ ಸಂಜೆ 4.00 ಗಂಟೆಗೆ ಸ್ಥಳ: ವಿನಾಯಕ ದೇವಸ್ಥಾನ ಆರ್.ಟಿ.ನಗರ. ಇಲ್ಲಿ ಗೆ ಶ್ರೀ ಬೇಲೂರು ರಘುನಂದನ್ ರವರು ವೇದಿಕೆಗೆ ಬಂದು ತಮ್ಮ ಉಪನ್ಯಾಸವನ್ನು ಮಾಡಿರುತ್ತಾರೆ.
8. ದಿನಾಂಕ 21.ಜನವರಿ 2025 ಮಂಗಳವಾರ ಕಾರ್ಯಕ್ರಮ ಸಂಜೆ 4.00 ಗಂಟೆಗೆ ಸ್ಥಳ: ವಿನಾಯಕ ದೇವಸ್ಥಾನ ಆರ್.ಟಿ.ನಗರ. ಇಲ್ಲಿ ಶಿವರಾಮ ಕಾರoತ ವೇದಿಕೆಯ 32 ನೇ ವಾರ್ಷಿಕೋತ್ಸವದ ಪ್ರಯುಕ್ತ ಕಾಯ್ಕಿಣಿ ಸಾಹಿತ್ಯ ಸಂವಾದ ಈ ಕಾರ್ಯಕ್ರಮಕ್ಕೆ ಖ್ಯಾತ ಕವಿಗಳಾದ ಜಯಂತ್ ಕಾಯ್ಕಿಣಿ, ಸಚ್ಚಿದಾನಂದ ಹೆಗಡೆ, ಸಿಂಧು ರಾವ್ ರವರು ವೇದಿಕೆಗೆ ಬಂದು ತಮ್ಮ ಉಪನ್ಯಾಸವನ್ನು ಮಾಡಿರುತ್ತಾರೆ.
9.ಭಾನುವಾರ ಫೆಬ್ರವರಿ 16 2025 ವಿನಾಯಕ ದೇವಸ್ಥಾನ ಸಭಾಂಗಣ ಇಲ್ಲಿ ಪಾ. ವೆಂ. ಸ್ಮೃತಿ ಕಾರ್ಯಕ್ರಮ ಕ್ಕೆ ಪುರುಷೋತ್ತಮ ಬಿಳಿಮಲೆ. ಬಿ. ಕೆ. ಸುಮತಿ ರವರು ಬಂದು ಉಪನ್ಯಾಸವನ್ನು ಮಾಡಿರುತ್ತಾರೆ.
10.ಭಾನುವಾರ ಮಾರ್ಚ್ 2025 ಸ್ಥಳ ತರಳಬಾಳು ಕೇಂದ್ರ ಮಿನಿ ಹಾಲ್. ಇಲ್ಲಿ ಮಹಿಳಾ ದಿನಾಚರಣೆಯ ಅಂಗವಾಗಿ ಎಂ. ಎಚ್ ಆಶಾ ದೇವಿ ಅವರು ಬಂದು ತಮ್ಮ ಉಪನ್ಯಾಸವನ್ನು ಮಾಡಿ ಚೇತನಾ ಹೆಗಡೆ ಅವರ " ಅವಳ ಅರಿವು "ಪುಸ್ತಕದ ಲೋಕಾರ್ಪಣೆನ್ನು ಮಾಡಿ ಸ್ತ್ರೀ ಅಸ್ಮಿತೆಯ ಕುರಿತು ಮಾತನಾಡಿರುತ್ತಾರೆ.
ಹೊಸದಾಗಿ ಕೈ ಗೊಂಡ ಕಾರಂತರ ಕಾದಂಬರಿಗಳ ಪರಿಚಯ ಮಾಲಿಕೆ (ಯೂ ಟ್ಯೂಬ್) ವಾಹಿನಿಯನ್ನು ಆರಂಭಿಸಿದೆ. ಈಗಾಗಲೇ 5 ವಿಡಿಯೋಗಳನ್ನು ಅಪ್ಲೋಡ್ ಮಾಡಲಾಗಿದೆ. ತಾವುಗಳೆಲ್ಲ ಈ ಕಾರ್ಯಕ್ರಮವನ್ನು ವೀಕ್ಷಿಸಿ ಪ್ರೋತ್ಸಾಹ ಪಡಿಸಬೇಕೆಂದು ಕೇಳಿ ಕೊಳ್ಳುತ್ತೇನೆ.
ಆತ್ಮೀಯರೇ .
ಮೇಲ್ಕಂಡ ವಾರ್ಷಿಕ ಅವಧಿಯ ವೇದಿಕೆಯ ಎಲ್ಲಾ ಕಾರ್ಯಕ್ರಮಗಳು ಯಶಸ್ಸಿನ ಬಾಗಿಲು ತಟ್ಟಿದ್ದು ನಮ್ಮ ಕಾರಂತ ವೇದಿಕೆಯ ಹೆಮ್ಮೆ..ಪ್ರತಿ ಯಶಸ್ಸಿನ ಕೊಂಡಿಗಳು ಮಾತ್ರ ಸಮಿತಿಯ ಪದಾಧಿಕಾರಿಗಳು ಮತ್ತು ಸದಸ್ಯರು ಎಂಬ ಹೆಮ್ಮೆಯನ್ನು ವೇದಿಕೆಯ ಪರವಾಗಿ ವ್ಯಕ್ತಪಡಿಸುತ್ತಾ,
ಮೂರು ದಶಕಗಳ ಈ ಸಂಭ್ರಮಾಚರಣೆಯಲ್ಲಿ ಶಿವರಾಮ ಕಾರಂತ ವೇದಿಕೆಯ ಸಂಸ್ಥಾಪಕರಾದ ಪಾ. ಚಂದ್ರಶೇಖರ ಚಡಗ ಸರ್ ರವರ ಆಶಯ,ಅಪ್ಪಣೆ, ಆದರ್ಶ ಮತ್ತು ಸತತ ಮಾರ್ಗದರ್ಶನದಲ್ಲಿ ,ಹಾಗು ಅಧ್ಯಕ್ಷೀಯ ಸ್ಥಾನವನ್ನು ಅಲಂಕರಿಸಿರುವ ಡಾ.ದೀಪಾಫಡ್ಕೆ ಅವರಿಗೂ, ಗೌರವಾಧ್ಯಕ್ಷರಾದ ಶ್ರೀ ಎಸ್. ಆರ್. ವಿಜಯಶಂಕರ್ ರವರಿಗೂ , ಉಪಾಧ್ಯಕ್ಷರಾದ ವೀರಶೇಖರ ಸ್ವಾಮಿಯವರಿಗೂ, ಎಂದಿನಂತೆ ವೇದಿಕೆಯ ಲೆಕ್ಕಪತ್ರಗಳನ್ನು ಪರಿಶೋಧಿಸಿದ ಯಾವುದೇ ರೀತಿಯ ಶುಲ್ಕ ಪಡೆಯದ ಶರತ್ ಅಂಡ್.ಕಂಪನಿ ಚಾರ್ಟೆಡ್ ಅಕೌಂಟೆಂಟ್ಸ್ ಶ್ರೀ ಶರತ್ ಚಂದ್ರ, ಅವರಿಗೆ ವೇದಿಕೆ ಅಭಾರಿಯಾಗಿದೆ.
ವೇದಿಕೆಯ ಲೆಕ್ಕಪತ್ರಗಳ ಜವಾಬ್ದಾರಿ ನಿರ್ವಹಿಸುವ ಖಜಾಂಚಿ ಶ್ರೀ ಜಯರಾಮಸೋಮಯಾಜಿ ಸರ್ ರವರಿಗೂ, ಮತ್ತು ಯೂಟ್ಯೂಬ್ ,ಫೇಸ್ಬುಕ್ ಮಾಧ್ಯಮಗಳ ಮೂಲಕವೂ ವೇದಿಕೆಯ ಕಾರ್ಯಕ್ರಮ ವೀಕ್ಷಿಸಲು ತಾಂತ್ರಿಕ ಸಹಕಾರ ಜವಾಬ್ದಾರಿ ನಿರ್ವಹಿಸಿದ ಪತ್ರಿಕೋದ್ಯಮಿ ಶ್ರೀ ಶಿವ ಸುಬ್ರಮಣ್ಯರವರು, ಸಮಿತಿ ಸದಸ್ಯರು ಶ್ರೀ ಸುದಿಂದ್ರ ರವರು, ಎಲ್ಲರಿಗೂ ತುಂಬು ಹೃದಯದಿಂದ ಧನ್ಯವಾದಗಳು.
ಅಷ್ಟೇ ಅಲ್ಲದೇ ತರಳಬಾಳು ಗ್ರಂಥಾಲಯದಿಂದ ಶ್ರೀ ವಿನಾಯಕ ದೇವಸ್ಥಾನ ಸಭಾಂಗಣದ ಆಡಳಿತ ಮಂಡಳಿಯ ಸದಸ್ಯರೂ ಹಾಗು ವೇದಿಕೆಯ ಉಪಾಧ್ಯಕ್ಷರಾದ ಶ್ರೀ ವೀರಶೇಖರ ಸ್ವಾಮಿರವರು.ತನು ಮನ ಧನಗಳಿಂದ ವೇದಿಕೆಯಲ್ಲಿ ಅದ್ಧೂರಿ ಯಕ್ಷಗಾನ ಕಾರ್ಯಕ್ರಮಗಳಿಗೆ ಸಾಕ್ಷಿಯಾಗುವ ಡಾ. ಪಾಂಗಾಳ್ ಸರ್ ರವರಿಗೂ ನಮ್ಮ ಕೃತಜ್ಞತೆಗಳನ್ನು ಅರ್ಪಿಸುತ್ತೇವೆ.
ಎಂದಿನಂತೆ ನೀವಿಲ್ಲದೇ ಯಾವ ಕಾರ್ಯಕ್ರಮಗಳಿಗೂ ಕಳೆ ಇರುವುದಿಲ್ಲ .ಪ್ರತಿ ಕಾರ್ಯಕ್ರಮದ ಹಿಂದೆ ಕಾರ್ಯಕಾರಿ ಸಮಿತಿಯ ಸದಸ್ಯರಾದ ಪ್ರತಿಯೊಬ್ಬರ ಪಾತ್ರಗಳು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಇದ್ದುದ್ದನ್ನು ನಾವು ಕಾಣಬಹುದು.ಸಮಿತಿಯ ಪ್ರತಿ ಸದಸ್ಯರಿಗೂ ಕೂಡ ನಾನು ವಂದನೆಗಳನ್ನು ಸಲ್ಲಿಸುತ್ತೇನೆ.
ವೇದಿಕೆಯನ್ನು ಬೆಳಸಿ ಸಾರಸ್ವತ ಲೋಕದ ದಿಗ್ಗಜರ ಸೇವೆಯನ್ನು ನೆನೆಯುತ್ತಾ ನಮ್ಮ ನಿಮ್ಮೆಲ್ಲರ ಸಾಹಿತ್ಯಾಭಿರುಚಿಯನ್ನು ಮತ್ತಷ್ಟು ಮಗದಷ್ಟು ರುಚಿಕರ ವಾಗುವಂತೆ ಮಾಡಿಕೊಂಡು ಸವಿಯೋಣ.
ಧನ್ಯವಾದಗಳು. ಸರ್ವೇ ಜನಾ ಸುಖಿನೋಭವಂತು.
ಶ್ರೀಮತಿ ಮಂಜುಳಾ ಭಾರ್ಗವಿ, ಕಾರ್ಯದರ್ಶಿ
No comments:
Post a Comment