Monday, June 23, 2025

ಪಂಜೆ ಮಂಗೇಶರಾಯರ ಸ್ಮರಣೆ - ಶಿವರಾಮ ಕಾರಂತ ವೇದಿಕೆ

 ಭಾನುವಾರ, 22 ಜೂನ್, 2025

ತರಳಬಾಳು ಕೇಂದ್ರ, ಮಿನಿ ಹಾಲ್, ಅರ್. ಟಿ. ನಗರ, ಬೆಂಗಳೂರು.

ಪಂಜೆ ಮಂಗೇಶರಾಯರ ಸಾಹಿತ್ಯ -  ಸ್ಮರಣೆ 

ಶಿವರಾಮ ಕಾರಂತ ವೇದಿಕೆಯ ಜೂನ್ ತಿಂಗಳ ಕಾರ್ಯಕ್ರಮದಲ್ಲಿ " ಶ್ರೀ ಪಂಜೆ ಮಂಗೇಶರಾಯರ ಸಾಹಿತ್ಯ " ಈ ವಿಚಾರ ಶ್ರೀ ಮಾಲಿಂಗೆಶ್ವರ ಭಟ್ ಹಾಗೂ ಶ್ರೀ ಎಸ್. ಅರ್. ವಿಜಯಶಂಕರ್ ಅವರ ಉಪನ್ಯಾಸದೊಂದಿಗೆ ಸಂಪನ್ನ ಗೊಂಡಿತು.



 ಪ್ರಾರ್ಥನೆ ಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮ, ವೇದಿಕೆಯ ಅಧ್ಯಕ್ಷೆ ಡಾ. ದೀಪಾ ಫಡ್ಕೆ ಅವರ ಸ್ವಾಗತ ಹಾಗೂ ಪ್ರಾಸ್ತಾವಿಕ ನುಡಿಯೊಂದಿಗೆ ಮುಂದುವರಿಯಿತು.

ಡಾ. ದೀಪಾ ಫಡ್ಕೆ 

ಡಾ. ಮಹಾಲಿಂಗೇಶ್ವರ ಭಟ್ 


ಕಾರ್ಯದರ್ಶಿ ಶ್ರೀಮತಿ ಮಂಜುಳಾ ಭಾರ್ಗವಿ ಅವರು ಅತಿಥಿಗಳ ಪರಿಚಯವನ್ನು ಮಾಡಿದರು.

ಶ್ರೀ ಎಸ್ ಅರ್ ವಿಜಯಶಂಕರ್ 

ವೇದಿಕೆಯ ಗೌರವ ಅಧ್ಯಕ್ಷ ಶ್ರೀ ಎಸ್.ಅರ್. ವಿಜಯಶಂಕರ್ ಅವರು ಮಾತನಾಡಿ, ಪಂಜೆ ಅವರ ಸಾಧನೆ, ಬದುಕು ವಿಚಾರವಾಗಿ ಮಾತನಾಡಿದರು.




ಅತಿಥಿ ಉಪನ್ಯಾಸಕ ಡಾ. ಮಹಾಲಿಂಗೇಶ್ವರ ಭಟ್ ಅವರು ಪಂಜೆ ಅವರ ಸಾಹಿತ್ಯದ ಬಗ್ಗೆ ವಿವರವಾಗಿ ಮಾತನಾಡಿದರು.


ಪ್ರೊಫೆಸರ್ ಭೋಜಪ್ಪ 


ವೇದಿಕೆಯ ಅತ್ಯಂತ ಹಿರಿಯ ಸದಸ್ಯ, 95 ವರ್ಷದ ಮುತ್ಸದ್ದಿ , ಪ್ರೊಫೆಸರ್ ಭೋಜಪ್ಪ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.
ಶ್ರೀಮತಿ ಸಂಧ್ಯಾ 

ಶ್ರೀಮತಿ ಚೇತನಾ ಹೆಗಡೆ 

ಶ್ರೀಮತಿ ಚೇತನಾ ಹೆಗಡೆ ಧನ್ಯವಾದ ಸಮರ್ಪಣೆ ಮಾಡಿದರು.. ಶ್ರೀಮರಿ ಸಂಧ್ಯಾ ಅವರು ಕಾರ್ಯಕ್ರಮದ ನಿರೂಪಣೆಯನ್ನು ಅಚ್ಚುಕಟ್ಟಾಗಿ ಮಾಡಿದರು.

ವರದಿ : ಮಂಜುಳಾ ಭಾರ್ಗವಿ. ಕಾರ್ಯದರ್ಶಿ 

ಎಲ್ಲರಿಗೂ ನಮಸ್ಕಾರ.
ಶಿವರಾಮ ಕಾರಂತ ವೇದಿಕೆಯ ಜೂನ್ ತಿಂಗಳ 22ನೇ ತಾರೀಕು, ಭಾನುವಾರ, ಪಂಜೆ ಮಂಗೇಶರಾಯರ ಸಾಹಿತ್ಯ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಹಲವಾರು ಸದಸ್ಯರು ಭಾಗವಹಿಸಿದ್ದು ಬಹಳ ಹೆಮ್ಮೆಯ ಸುದ್ದಿ. ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನಡೆದದ್ದು ಮತ್ತಷ್ಟು ಸಂತೋಷದ ಸುದ್ದಿ..

 ಈ ಕಾರ್ಯಕ್ರಮದಲ್ಲಿ ಮೊದಲಿಗೆ ವಿಶೇಷ ಅತಿಥಿಗಳಾಗಿ ಶಿವರಾಮ ಕಾರಂತ ವೇದಿಕೆಗೆ ಬಂದಿದ್ದ, ಡಾ. ಎಸ್. ಪಿ ಮಹಾಲಿಂಗೇಶ್ವರ ಭಟ್. (ಲೇಖಕರು ನಿವೃತ್ತ ಉಪಕಾರ್ಯದರ್ಶಿ ಕೇಂದ್ರ ಸಾಹಿತ್ಯ ಅಕಾಡೆಮಿ)  ಮತ್ತು ನಮ್ಮ ವೇದಿಕೆಯ ಅಧ್ಯಕ್ಷರನ್ನು  ಆಹ್ವಾನಿಸಲಾಯಿತು. ನಂತರ ಮಂಗೇಶರಾಯರ   ಗೀತೆಯೊಂದನ್ನು ಅತ್ಯಂತ ಸುಮಧುರವಾಗಿ ಹಾಡಲಾಯಿತು.  ನಂತರ ವೇದಿಕೆಯ ಕಾರ್ಯದರ್ಶಿ ಅವರಿಂದ ಸ್ವಾಗತ ಭಾಷಣ ಮಾಡಿ, ಬಂದ ಅತಿಥಿಗಳಿಗೆ ಹಾಗೂ ಎಲ್ಲಾ ಗಣ್ಯರಿಗೆ ಸ್ವಾಗತ ಕೋರುತ್ತಾ ಪಂಜೆ ಮoಗೇಶರಾಯರ ಮೇರು ಸಾಹಿತ್ಯವನ್ನು ನೆನೆಯುತ್ತ ಅವರಿಗೆ ಭಾವ ತುಂಬಿದ ಗೌರವ ಸಲ್ಲಿಸಲಾಯಿತು. ತದ ನಂತರ ನಮ್ಮ ವೇದಿಕೆಯ  ಗೌರವಧ್ಯಕ್ಷರಾದ ಖ್ಯಾತ ವಿಮರ್ಶಕರು, ಎಸ್. ಆರ್ ವಿಜಯ ಶಂಕರ ಅವರು ಮಾತನಾಡಿ, ಪಂಜೆಯವರ ಬಗ್ಗೆ ಅತ್ಯಂತ ಸೂಕ್ಷ್ಮ ವಿಚಾರಗಳನ್ನು ತಮ್ಮ ನೆನಪಿನ ಬುತ್ತಿಯಿಂದ ತೆಗೆದು ನಮಗೆ ಹಂಚಿದರು. ಇದಾದ ಬಳಿಕ ನಮ್ಮ ಕಾರಂತ ವೇದಿಕೆಯ ಅಧ್ಯಕ್ಷರು ಡಾ. ದೀಪ ಫಡ್ಕೆ ಅವರು ಮಂಗೇಶರಾಯರ  ಸಾಹಿತ್ಯ ಕ್ಷೇತ್ರದ ಸಾಧನೆಗಳನ್ನು ನೆನೆದು, ಅತ್ಯಂತ ಅಚ್ಚುಕಟ್ಟಾದ ತಮ್ಮ ಮಾತುಗಳಿಂದ ವೇದಿಕೆಗೆ ಶುಭ ಕೋರಿದರು. ತಮ್ಮ ಪ್ರಾಸ್ತಾವಿಕ ನುಡಿಗಳ ಮೂಲಕ  ಎಲ್ಲರನ್ನುದ್ದೇಶಿಸಿ ಮಾತನಾಡಿ ಕಾರ್ಯಕ್ರಮಕ್ಕೆ ಆಗಮಿಸಿದ ಅತಿಥಿಗಳಿಗೆ ಸ್ವಾಗತ ಕೋರಿದರು.

ನಂತರ. ನಾವೆಲ್ಲರೂ ಕಾಯುತ್ತಿದ್ದ, ಉಪನ್ಯಾಸಕರ ಮಾತು, ಪಂಜೆ ಮಂಗೇಶರಾಯರ ಸಾಹಿತ್ಯ, ಬಾಲ್ಯ, ಓದು, ಸಾಧನೆ, ಇವುಗಳ ಕುರಿತು ಒಂದೊಂದಾಗಿ ತಮ್ಮ ಅಮೂಲ್ಯವಾದ ಮಾತುಗಳ ಮೂಲಕ ಎಲ್ಲರನ್ನೂ ಸೆಳೆದರು. ಪಂಜೆಯವರ ಮನೆತನ, ಸ್ಥಳ, ಕಾಲ ಘಟ್ಟದ ಒಂದೊಂದು ವಿವರಗಳನ್ನು ಹೇಳುತ್ತಾ ಸಾಗಿದರು. ಮತ್ತು ಪಂಜೆಯವರ ಅಪಾರ  ಸಾಹಿತ್ಯ ಜ್ಞಾನವನ್ನು ಕುರಿತು ಪಂಜೆಯವರ ಪುಸ್ತಕಗಳನ್ನು ಉಲ್ಲೆಖಿಸುತ್ತಾ, ಮಾತಿನುದ್ದಕ್ಕೂ ಪಂಜೆ ಮoಗೇಶರಾಯರ ಸಾಹಿತ್ಯ ಕೊಡುಗೆಯನ್ನೂ, ನೆನೆಯುತ್ತ ಕನ್ನಡ ಸಾರಸ್ವತ ಲೋಕಕ್ಕೆ ಪಂಜೆಯವರ ಕೊಡುಗೆ ಆಪಾರವಾಗಿದ್ದದ್ದನ್ನು ನಾವು ಕೇಳಿಸಿಕೊಂಡೆವು

ನಂತರ ಹಿರಿಯ ಸಾಹಿತಿಗಳಾದ ಮಹಾಲಿಂಗೇಶ್ವರ ಭಟ್ ರವರನ್ನು ಗೌರವ ಪೂರ್ವಕವಾಗಿ ಸನ್ಮಾನಿಸಲಾಯಿತು. ಹಾಗೆ ಹಿರಿಯರಾದ ಭೋಜಪ್ಪನವರನ್ನು  ವೇದಿಕೆಯ ಪರವಾಗಿ ಸನ್ಮಾನಿಸಲಾಯಿತು.
ನಂತರ ನಮ್ಮ ಕಾರ್ಯಕಾರಿ ಸಮಿತಿಯ ಸದಸ್ಯರಾದ ಶ್ರೀಮತಿ ಚೇತನಾ ಹೆಗಡೆ ಅವರು  ಧನ್ಯವಾದ ಸಮರ್ಪಣೆ ಮಾಡಿ,ಶಿವರಾಮ ಕಾರಂತ ವೇದಿಕೆಯ ಅಧ್ಯಕ್ಷರಿಗೂ, ಕಾರ್ಯಕ್ರಮಕ್ಕೆ ಅತ್ಯಂತ ಸೊಗಸಾದ ನಿರೂಪಣೆಯನ್ನು ಮಾಡಿದ ಶ್ರೀಮತಿ ಸಂಧ್ಯಾ ಮಂಜುನಾಥ್ ಅವರಿಗೂ ಈ ಸಭಾಂಗಣವನ್ನು ಒದಗಿಸಿ ಕೊಟ್ಟ ತರಳಬಾಳು ಸಂಸ್ಥೆಯವರಿಗೂ,ಶ್ರೀ ವಿನಾಯಕ ದೇವಸ್ಥಾನದ ಬಳಗಕ್ಕೂ, ಕಡೆಯದಾಗಿ ಶಿವರಾಮ ಕಾರಂತ ವೇದಿಕೆಯ ಪದಾಧಿಕಾರಿಗಳು ಹಾಗೂ ಕಾರ್ಯಕಾರಿ ಸಮಿತಿಯ ಸರ್ವ ಸದಸ್ಯರಿಗೂ  ಬಹಳ ಮುಖ್ಯವಾಗಿ  ನಮ್ಮ ವೇದಿಕೆಯ ಯಶಸ್ಸಿಗೆ ಕಾರಣರಾದ  ನಿಮ್ಮೆಲ್ಲರಿಗೂ ನಾನು ಹೃತ್ಪೂರ್ವಕ ವಂದನೆಗಳನ್ನು ಸಲ್ಲಿಸಿದರು.

.ಧನ್ಯವಾದಗಳು.
ಕಾರ್ಯದರ್ಶಿ:               ಮಂಜುಳಾ ಭಾರ್ಗವಿ

Posted 24/6/2025



No comments:

Post a Comment