ಭಾನುವಾರ, 9 ನವಂಬರ, 2025
ನಿಸರ್ಗ ಗಾರ್ಡನ್, ಯಲಹಂಕ, ಬೆಂಗಳೂರು.
ಯಕ್ಷಗಾನ ಎಂಬುದು ಕರಾವಳಿಯ ಪ್ರಸಿದ್ಧ ಕಲೆ. ವೇಷಭೂಷಣ, ಅಭಿನಯ, ನೃತ್ಯ, ಹಾಡುಗಾರಿಕೆ ಎಲ್ಲವೂ ಸೊಗಸು, ಚಂದ.
ಮಹಾಭಾರತ, ರಾಮಾಯಣದ ಕಥೆಗಳನ್ನು ಆಧರಿಸಿ, ಪ್ರಸಂಗವನ್ನು ತಯಾರಿಸಲಾಗುತ್ತದೆ.
ಇಂದು ಶ್ರೀ ಬ್ರಾಹ್ಮೀ ದುರ್ಗಾ ಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿ, ಕ್ಷೇತ್ರ ಕಮಲಶಿಲೆ, ಅವರಿಂದ ದ್ರೌಪದಿ ಅಪಹರಣ ಮತ್ತು ದ್ರೌಪದಿ ಪ್ರತಾಪ ಎಂಬ ಎರಡು ಪ್ರಸಂಗಗಳ ಪ್ರದರ್ಶನವನ್ನು ಅದ್ಭುತವಾಗಿ ಆಡಿ ತೋರಿಸಿದ್ದಾರೆ.
"ಚೌಕಿ " - ವೇದಿಕೆಯ ಹಿಂಭಾಗದಲ್ಲಿ, ಕಲಾ ವಿದರುಗಳು ಬಣ್ಣ ಹಚ್ಚಿ ವೇಷ ಭೂಷಣಗಳನ್ನು ಧರಿಸುವ ಸ್ಥಳ.
ಇಲ್ಲಿ ಶ್ರೀ ದೇವರಿಗೆ ಪೂಜೆ ಮಂಗಳಾರತಿ ಆದ ನಂತರವೇ ಪ್ರದರ್ಶನ ಪ್ರಾರಂಭಿಸುವ ವಾಡಿಕೆ. 







No comments:
Post a Comment