Sunday, September 5, 2021

ಶಿವರಾಮ ಕಾರಂತ ವೇದಿಕೆ - ಶಿಕ್ಷಕರ ದಿನಾಚರಣೆ 2021

 ಭಾನುವಾರ, ಸೆಪ್ಟಂಬರ 5, 2021, ಸಂಜೆ 4 ಗಂಟೆಗೆ 

ಗೂಗಲ್ ಮೀಟ್ ಸಭೆ 

ಶಿವರಾಮ ಕಾರಂತ ವೇದಿಕೆಯು ಸೆಪ್ಟಂಬರ ತಿಂಗಳ ಕಾರ್ಯಕ್ರಮವು "ಶಿಕ್ಷಕರ ದಿನಾಚರಣೆ" ಎಂದು ಆಚರಿಸಿತು.

ಡಾ ಆರ್. ಸುರೇಶ್ 

ಡಾ ಆರ್ ಸುರೇಶ್, ಅತಿಥಿ ಉಪನ್ಯಾಸಕರು, ಸಂಸ್ಕೃತ ವಿಭಾಗ, ಮೈಸೂರು ವಿಶ್ವ ವಿದ್ಯಾನಿಲಯ, ಇವರು  "ಶಿಕ್ಷಣ ಮತ್ತು ಬದುಕು" ಎಂಬ ವಿಷಯವಾಗಿ ಪ್ರಬುದ್ಧವಾದ ಭಾಷಣವನ್ನು ಮಾಡಿದರು.

ವೇದಿಕೆಯ ಕಾರ್ಯದರ್ಶಿ ಶ್ರೀಮತಿ ಇಂದಿರಾ ಶರಣ್ ಅವರು, ಸ್ವಾಗತವನ್ನು ಮಾಡಿ ಅತಿಥಿಗಳ ಪರಿಚಯವನ್ನು ಮಾಡಿದರು.

ಶ್ರೀಮತಿ ಇಂದಿರಾ ಶರಣ್ 

ವೇದಿಕೆಯ ಕೋಶಾಧಿಕಾರಿ ಶ್ರೀ ಜಯರಾಮ ಸೋಮಯಾಜಿಯವರು ವಿಘ್ನ ವಿನಾಶಕನನ್ನು ಸ್ಮರಿಸಿ ಪ್ರಾರ್ಥನೆಯನ್ನು ಮಾಡಿದರು.

ಜಯರಾಮ ಸೋಮಯಾಜಿ 

ಡಾ ಸುರೇಶ್ ಅವರು ತಮ್ಮ ಭಾಷಣದಲ್ಲಿ ಶಿಕ್ಷಣ ಮತ್ತು ಬದುಕಿನ ಬಗ್ಗೆ ಮಾತನಾಡುತ್ತ, ಹಿಂದಿನ ಕಾಲಘಟ್ಟದಲ್ಲಿ ಶಿಕ್ಷಣವು ಗುರುಕುಲ ಪದ್ದತಿಯಲ್ಲಿದ್ದು ಗುರುವು ಅಪಾರ ಜ್ಞಾನ ಸಂಪಾದನೆ ಮಾಡಿದ್ದು ತಮ್ಮ ಶಿಷ್ಯರಿಗೆ ವಿದ್ಯಾರ್ಜನೆಯನ್ನು ಮಾಡುತಿದ್ದು, ಪ್ರಸ್ತುತ ಕಾಲಮಾನದಲ್ಲಿ ವಿದ್ಯೆಯು ಒಂದು ವ್ಯಾಪಾರೀ ಭಾವನೆಯಿಂದ ಇದ್ದು, ಜ್ಞಾನ ಸಂಪಾದನೆಯು ಕಡಿಮೆಯಾಗುತ್ತಿರುವುದು ಕಂಡುಬರುತ್ತಿದೆ. ಸಾಮಾಜಿಕ ಸ್ತರದಲ್ಲಿ ಮೂರು ಅಥವಾ ನಾಲ್ಕು ತಲೆಮಾರುಗಳ ಕುಟುಂಬವು ಒಟ್ಟಿಗೆ ಇರುವುದು ಕಷ್ಟ ಸಾಧ್ಯವಾಗುತ್ತಿದೆ ಎಂದೂ ಅಭಿಪ್ರಾಯ ಪಟ್ಟರು. ಈಗಿನ ಜೀವನ ಶೈಲಿ, ಸಂಪಾದನೆಯ ಅಂತರವೂ ಕಾರಣವಾಗಿರಬಹುದು.

ವೀರಶೇಖರ ಸ್ವಾಮಿ ಮತ್ತು ಚಂದ್ರಶೇಖರ ಚಡಗ 

ವೇದಿಕೆಯ ಕಾರ್ಯಾಧ್ಯಕ್ಷರಾದ ಶ್ರೀ ಚಂದ್ರಶೇಖರ ಚಡಗರು ಶಿವರಾಮ ಕಾರಂತ ವೇದಿಕೆಯು ಕಳೆದ 27 ವರ್ಷಗಳಿಂದ ನಡೆದು ಬಂದ ಹಾದಿ, ಸಾಹಿತ್ಯ, ಕಲೆಗಳಿಗೆ ನಿರಂತರವಾದ ಪ್ರೋತ್ಸಾಹ ಮತ್ತು ಗ್ರಂಥಲಯದ ಬಗ್ಗೆ ಸಹಾ ಮಾತನಾಡಿದರು.

ಶ್ರೀ ಬಿ ವಿ ಕೆದಿಲಾಯರು 

ಶ್ರೀಯುತ ಬಿ ವಿ ಕೆದಿಲಾಯರು ಮಾತನಾಡಿ, ಪ್ರಸ್ತುತ ಕಾಲಘಟ್ಟದಲ್ಲಿ ಮೂರು ತಲೆಮಾರುಗಳ ಕುಟುಂಬವು ಒಟ್ಟಿಗೆ ಇರುವುದು ಬದುಕುವುದು ಸಾಧ್ಯವಾಗದ ವಿಚಾರ ಎಂದು ತಮ್ಮ ಅಭಿಪ್ರಾಯವನ್ನು ತಿಳಿಸಿದರು.

ಈ ಕೆಳಗಿನ ಯುಟ್ಯೂಬ್ ಕೊಂಡಿಯಿಂದ ಸಂಪೂರ್ಣ ಕಾರ್ಯಕ್ರಮವನ್ನು ವೀಕ್ಷಿಸಬಹುದು.



ಉಪಾಧ್ಯಕ್ಷ ಶ್ರೀ ವೀರಶಖರ ಸ್ವಾಮಿಯವರು ಕಾರ್ಯಕ್ರಮದ ಯಸಸ್ಸಿಗೆ ಶ್ರಮಿಸಿದವರಿಗೆ, ಅತಿಥಿಗಳಿಗೆ, ಮತ್ತು ಭಾವಹಿಸಿದವರಿಗೆ ಧನ್ಯವಾದ ಸಮರ್ಪಣೆ ಮಾಡಿದರು.

ಸುಮಾರು 20 ಮಂದಿ ಆಸಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಬರೆದಿರುವುದು, ಜಯರಾಮ ಸೋಮಯಾಜಿ . ಸೋಮವಾರ, 6 ಸೆಪ್ಟಂಬರ 2021 


ವರದಿ: ಶಶಿಕಲಾ.ಅರ್.. ಅವರಿಂದ 

ಶಿವರಾಮ ಕಾರಂತ ವೇದಿಕೆ(ರಿ), ಆರ್‌ಟಿ.ನಗರ, 

ದಿನಾಂಕ: 05-09-2021

ಸಂಜೆ : 4 ಗಂಟೆ

ಸೆಪ್ಟೆಂಬರ್ ತಿಂಗಳ ನಮ್ಮ ವೇದಿಕೆಯ ಕಾರ್ಯಕ್ರಮವನ್ನು

" ಶಿಕ್ಷಕರ ದಿನಾಚರಣೆ "ಯ ವಿಶೇಷ ದಿನದಂದು ಹಮ್ಮಿಕೊಳ್ಳಲಾಗಿತ್ತು.   

ನಮ್ಮ ವೇದಿಕೆಯ ಕಾರ್ಯಕ್ರಮದಲ್ಲಿ  ಮುಖ್ಯ ಅತಿಥಿಗಳಾಗಿ  ಡಾ . ಆರ್ ಸುರೇಶ್  ರವರನ್ನು ಆಹ್ವಾನಿಸಲಾಗಿತ್ತು. ಇವರು " ಶಿಕ್ಷಣ ಮತ್ತು ಬದುಕು" ವಿಷಯವಾಗಿ ಮಾತನಾಡಿದರು.

 ಕಾರ್ಯಕ್ರಮ ಆರಂಭ: 

ಈ ಕಾರ್ಯಕ್ರಮದಲ್ಲಿ ವಿಘ್ನೇಶ್ವರ ಕುರಿತು ಪ್ರಾರ್ಥನೆಯನ್ನು ಶ್ರೀ ಜಯರಾಮ ಸೋಮಯಾಜಿ, ವೇದಿಕೆಯ ಕೋಶಾಧಿಕಾರಿ,  ಮಾಡುವ ಮೂಲಕ ಕಾರ್ಯಕ್ರಮ ಆರಂಭವಾಯಿತು. ವರ್ಚುವಲ್ ಸಭೆ ತಂತ್ರಗಾರಿಕೆ ಶಕ್ತಿ ಕೂಡ ನಮ್ಮ ಸೋಮಯಾಜಿಯವರು. ಇದು ಹೆಮ್ಮೆಯ ವಿಷಯ.

 ಶ್ರೀಮತಿ ಇಂದಿರಾ ಶರಣ್, ವೇದಿಕೆಯ ಕಾರ್ಯದರ್ಶಿ "ಗುರು ಬ್ರಹ್ಮ ಗುರು ವಿಷ್ಣು ಗುರುದೇವೋ ಮಹೇಶ್ವರಹಃ" ಗುರು  ನಮನದೊಂದಿಗೆ ಬದಲಾದ ಪರಿಸ್ಥಿತಿ ಯಲ್ಲಿ  ಹೊಸ ಸ್ವರೂಪದಲ್ಲಿ ಕಾರ್ಯಕ್ರಮ,  ನಮ್ಮ ದೇಶದ ಗುರು ಪರಂಪರೆಯ ವಿಶೇಷ ಆರಂಭಿಕ ಮಾತುಗಳಿಂದ ನಿರೂಪಣೆ, ಸ್ವಾಗತ ಹಾಗೂ ಅತಿಥಿಗಳ ಪರಿಚಯ ವನ್ನು ಅಚ್ಚುಕಟ್ಟಾಗಿ ಮಾಡಿಕೊಟ್ಟರು.

ನಮ್ಮ ವೇದಿಕೆ ಸದಸ್ಯರಾದ ಶ್ರೀಮತಿ ದೀಪಾ ಪಡ್ಕೆ ರವರುತಮ್ಮ ಪರಿಶ್ರಮದಿಂದ ವೇದಿಕೆಯಲ್ಲಿ ಇವತ್ತಿನ ಅತಿಥಿಗಳ ಪರಿಚಯ ಮಾಡಿದ್ದು, ಅವರಿಗೆ ವೇದಿಕೆ ಕೃತಜ್ಞತೆ ಸಲ್ಲಿಸುತ್ತದೆ.

ನಮ್ಮ ವೇದಿಕೆಯ ಕಾರ್ಯಕ್ರಮದಲ್ಲಿ   ಮುಖ್ಯ ಅತಿಥಿಗಳಾಗಿ ವೇದಿಕೆಯ ಆಹ್ವಾನ  ಸ್ವೀಕರಿಸಿ ಆಗಮಿಸಿದ್ದ ಡಾ.ಆರ್ ಸುರೇಶ್ ರವರ ಕಿರುಪರಿಚಯವನ್ನು ಶ್ರೀಮತಿ ಇಂದಿರಾ ಶರಣ್ ತಿಳಿಸಿಕೊಟ್ಟರು. ಇವರು ಅನೇಕ ಭಾಷೆಗಳ ಬಗ್ಗೆ ಇರುವ ಪರಿಣಿತಿ ಹೊಂದಿದ್ದಾರೆ., ಗಮನ ಸೆಳೆಯುವ ವಿಷಯವೆಂದರೆ ಮೊದಲಿಯಾರ್ ಸಮಾಜದಲ್ಲಿ ವೇದವೇದಾಂತ ಅಧ್ಯಯನ ಮಾಡಿದಂತಹ ಮೊದಲ ಮತ್ತು ಏಕೈಕ ವ್ಯಕ್ತಿ. ಬೆಂಗಳೂರು. ಗ್ರಾಮಾಂತರ ಹೊಸಕೋಟೆ ಯವರು. ಪಿಜಿಯವರೆಗೂ ಕನ್ನಡ ಮಾಧ್ಯಮದಲ್ಲಿ ಅಧ್ಯಯನ. ತಮಿಳು, ಸಂಸ್ಕೃತ ಮತ್ತು ಹಿಂದಿ ಭಾಷೆಗಳಲ್ಲಿ ಪರಿಣಿತಿ. ಸಂಸ್ಕೃತ ಮತ್ತು ಪ್ರಾಕೃತದಲ್ಲಿ ಪಿಜಿ ಮತ್ತು ಡಿಪ್ಲೋಮಾ ಪಡೆದಿದ್ದಾರೆ. ಬೋಧಕರಾಗಿ,  ಅತಿಥಿ ಉಪನ್ಯಾಸಕರಾಗಿ ಹಲವಾರು ವರ್ಷಗಳ ಅನುಭವ. ಹಲವಾರು ಸಂಶೋಧನಾ ಪ್ರಬಂಧಗಳು, ರಾಷ್ಟ್ರೀಯ. ವಿಚಾರ ಸಂಕೀರ್ಣಗಳಲ್ಲಿ ನಿರಂತರ ಭಾಗವಹಿಸುವಿಕೆ ಮತ್ತು ವಿಚಾರ ಮಂಡನೆ. ಸ್ವತಃ ಐದು ರಾಷ್ಟ್ರೀಯ ಸಮ್ಮೇಳನಗಳ ಆಯೋಜನೆ. ಅನುವಾದ ಹೀಗೆ ಇವರ ಕೈಂಕರ್ಯ ತೆರೆದಿಟ್ಟರು.

 ಅತಿಥಿಗಳ ಭಾಷಣ: 

ಅತಿಥಿಗಳು ಶಿಕ್ಷಣ ಮತ್ತು ಬದುಕು" ವಿಷಯವಾಗಿ  ವೇದಿಕೆ ಕೊಟ್ಟ ಅವಕಾಶಕ್ಕಾಗಿ ಅಭಾರಿಯಾಗಿರುವುದಾಗಿ ತಿಳಿಸುತ್ತಾ, ಹಿರಿಯರ ಈ ವೇದಿಕೆಯಲ್ಲಿ ನನ್ನದು ಬಾಲಭಾಷೆ ಎನ್ನುತ್ತಾ, " ಅಂದು, ಇಂದು ಮತ್ತು ಮುಂದು", ಹೀಗೆ ಮೂರು ವಿಭಾಗಗಳ ಮೂಲಕ presentation  ಬಹಳ ಪ್ರಬುದ್ಧ ವಿಷಯಗಳನ್ನು  ಹಂಚಿಕೊಂಡರು.

 ಅಂದು: 

ಪ್ರಾಚೀನ ಕಾಲದಲ್ಲಿ ಗುರುಕುಲ ಪದ್ಧತಿ, ಆಚಾರ್ಯ ಮತ್ತು ಚಾತ್ರರ ಸಂಬಂಧ.  ಶಿಕ್ಷಣ ಮತ್ತು ಬದುಕಿಗೆ ನೇರ ಸಂಬಂಧ ಇದ್ದ ಕಾಲ.  ವಿದ್ಯಾರ್ಥಿ ಶಿಕ್ಷಣಕ್ಕೆ ತಕ್ಕಂತಹ ಜೀವನ ರೂಪಿಸಿಕೊಳ್ಳುತ್ತಿದ್ದ. ಇದು ಪ್ರಮುಖ ವಿಚಾರ. ಪ್ರಾಚೀನ ಶಿಕ್ಷಣದಲ್ಲಿತ್ತು ಏಕಾಗ್ರತೆ ಮತ್ತು ಸೇವೆ. ಇವತ್ತಿನಷ್ಟು ವ್ಯಾಪಕತೆ ವಿಮುಖತೆಯಿಲ್ಲದೆ ಏಕಾಂತದಲ್ಲಿ ಗುರುಕುಲಗಳು ನಡೆಯುತ್ತಿದವು‌. ಶಿಕ್ಷಣಕ್ಕೆ ನಾಲ್ಕು ಸೋಫಾನಗಳು ಅಧಿತಿ, ಬೋಧ, ಆಚರಣಂ ಮತ್ತು ಪ್ರಚಾರಣಂ. ತಮ್ಮ ಜೀವನ ವೃತವಾಗಿ ಹಿಂದಿನ ಚಾತ್ರರು ಅಳವಡಿಸಿಕೊಳ್ಳುತ್ತಿದ್ದರು. ಪೂರಕವಾಗಿ ಪುರುಷಾರ್ಥಗಳು ಧರ್ಮ, ಅರ್ಥ, ಕಾಮ,.ಮೋಕ್ಷ ಇವುಗಳನ್ನು ಯಥಾ ಯೋಗ್ಯ ಅಳವಡಿಸಿಕೊಳ್ಳಬೇಕೆಂಬುದು ಪ್ರಾಚೀನ ಕಲ್ಪನೆ.  ರಘುವಂಶದ ಕಾಳಿದಾಸ ಒಂದೇ ಶ್ಲೋಕದಲ್ಲಿ ಹೇಗೆ ಸೂರ್ಯ ವಂಶದ ರಾಜರು ತಮ್ಮ ಜೀವನ ಮಾಡುತ್ತಿದ್ದರು ಎಂಬುದನ್ನು ತಿಳಿಸಿದ್ದಾನೆ.  ಪೂರಕ ವಿಷಯ ಕಾಣಬಹುದು. ಪರಿಪೂರ್ಣ ವ್ಯಕ್ತಿ ವಿಕಾಸದ ಬಗ್ಗೆ ಇವತ್ತು ಏನು ಮಾತನಾಡುತ್ತಿದ್ದಾರೆ ಅದು ಪ್ರಾಚೀನ ಶಿಕ್ಷಣದಲ್ಲಿ ಕಂಡುಬರುತ್ತದೆ. 

ಅಧ್ಯಯನಕ್ಕೆ, ಐಹಿಕ ಸುಖ, ಅಂತರ್ಮುಖತೆ, ಘಟ್ಟಗಳ ರಾಜರ ಬದುಕನ್ನು ಪ್ರಜೆಗಳು ಪಾಲಿಸುತ್ತಿದ್ದರು.

ಅವಿಷ್ಕಾರ, ಪರಿಷ್ಕಾರಗಳ ಅಳವಡಿಕೆ. ವಿದ್ವತ್ತ, ನೀತಿ ಮತ್ತ ಶಾಸನ ಕ್ಷಮತ ಈ ಮೂರು ಅಂಶಗಳನ್ನು ವಿದ್ಯಾರ್ಥಿ ತನ್ನ ವಿದ್ಯಾರ್ಥಿ ಜೀವನದಲ್ಲಿ ಪಡೆದುಕೊಂಡಃ ಸ್ನಾತಕನಾಗುತ್ತಿದ್ದ.

ಹೀಗೆ ಪ್ರಾಚೀನ ಶಿಕ್ಷಣದ ಸೂಕ್ಷ್ಮ ವಿಚಾರಗಳನ್ನು ತಿಳಿಸಿದರು.ಎರಡನೆಯ ಭಾಗ ಇಂದಿನ ಶಿಕ್ಷಣ

ಇಂದಿನ ಶಿಕ್ಷಣ: 

ವಿಷಯವಾಗಿ ಮಾತನಾಡುತ್ತಾ, ಸೇವೆಯಿಂದ ವ್ಯಾಪಾರವಾಗಿದೆ, ಉದ್ಯೋಗದೊಂದಿಗೆ ಸಂಬಂಧ

 ಅಕ್ಷರಸ್ಥರು, ಶಿಕ್ಷಿತರು ಪಧವೀಧರರರು, ಉದ್ಯೋಗಾಕಾಂಕ್ಷಿಗಳು, ಅಂತರ್ಜಾಲವೆಂಬ ಮಾಯಾಜಾಲ

- ಈ ಅಂಶಗಳು

ಶಿಕ್ಷಣಕ್ಕೂ ಮತ್ತು ಬದುಕಿಗೂ ಸಂಬಂಧವಿಲ್ಲ. ಓದಿದ್ದು ಒಂದು ವಿಚಾರವಾದರೆ, ಮಾಡುವ ಕೆಲಸ ಬೇರೆ  ಆಗಿರುತ್ತದೆ. ಎರಡೂ ಪರಸ್ಪರ ದೂರ ಹೋಗುತ್ತಿದೆ.  ಸೇವಾಕ್ಷೇತ್ರಗಳು  ಎಂದು ವಿದ್ಯಾಕೇಂದ್ರಗಳು ಮತ್ತು ವೈದ್ಯಕ್ಷೇತ್ರಗಳನ್ನು ಗೌರವದಿಂದ ಕಾಣಲಾಗುತ್ತಿತ್ತು.ಈಗ ವ್ಯಾಪಾರೀಕರಣವಾಗಿದೆ. ಆರ್ಥಿಕ ಬಲಾಢ್ಯರು ಈ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ ಬದಲಾವಣೆ ಕಾಣಬಹುದು. ಇನ್ನು ಈಗಿನ ಶಿಕ್ಷಣ ಸಂಸ್ಥೆಗಳು ಉದ್ಯೋಗ ಕಲ್ಪಿಸುತ್ತೇವೆ  ಎಂಬ ಭಾವದಲ್ಲಿ ನಡೆಯುತ್ತಿವೆ.

ಎಲ್ಲರೂ ಉದ್ಯೋಗ ಪಡೆಯಬೇಕು ಎಂಬ ಹಂಬಲ ಹೊಂದಿರುತ್ತಾರೆ. ಈಗಿನ ವ್ಯವಸ್ಥೆಯಲ್ಲಿ  ಶೇ 90 ಪದವೀಧರರು ಉದ್ಯೋಗಾಕಾಂಕ್ಷಿಗಳು, ಕೇವಲ.ಶೇ 10 ಮಾತ್ರ ಅದರಿಂದ ಹೊರತು ಇದ್ದಾರೆ.

ಕೊರೋನಾ ಸಂಬಂಧದಿಂದ ಶಿಕ್ಷಣ ಸ್ವರೂಪ ಬದಲಾಗಿದೆ. ಕೊರೋನಾ ಪೂರ್ವ ಮತ್ತು ಕೊರೋನಾ ನಂತರ  ಎಂದು ವಿಭಾಗಿಸಬಹುದು. 

Physical,  Digital ಎರಡು ಸೇರಿಸಿ ಇವತ್ತಿನ ಕೊರೋನಾ ಉತ್ತರ ಕಾಲವನ್ನು ನೋಡಬಹುದು. "ಶಿಕ್ಷಕನಾಗಿ ಜ್ಞಾನ ಕೊಟ್ಟಿದ್ದೆ, ಪರೀಕ್ಷೆಯಲ್ಲಿ ಪಾಸು ಮಾಡಲಿಲ್ಲ ಎಂದು ಗುರುಗಳು ಹೇಳಿದರೆ, ಶಿಷ್ಯ ಹೇಳ್ತಾನೆ ಆವತ್ತು ನೀವು ಫೇಲ್ ಮಾಡಿದ್ದರಿಂದಲೇ ಇವತ್ತು ಶಿಕ್ಷಣ ಮಂತ್ರಿ ಆಗಿದ್ದೇನೆ" ಇದು ಇವತ್ತಿನ ಶಿಕ್ಷಣವನ್ನು ವಿಡಂಬನೆ ಮಾಡುವಷ್ಟು ಇರುವಂತಹ ಸೂಕ್ಷ್ಮ ಸಂವೇದನೆ ತಿಳಿಸುವ ಚಿತ್ರ ಎಂದರು. 

 ಮುಂದಿನ ಶಿಕ್ಷಣ: 

ಪ್ರಾಚೀನ ಮತ್ತು ಇಂದಿನ ಅನುಭವದ ಹಿನ್ನಲೆಯಲ್ಲಿ ಹೊಸ ಶಿಕ್ಷಣ ನೀತಿ ಹೇಗೆ ಇರಬಹುದು ಎಂದು ಹೇಳುತ್ತಾ,  ಸೃಜನಾತ್ಮಕತೆಯಿಂದ  ಸಕಾರಾತ್ಮಕ ತೆಯೂ ಹೆಚ್ಚಾಗುವಂತಹ ಪರಿಸ್ಥಿತಿ ಉಂಟಾಗಬೇಕು ಮತ್ತು ಸಾವಧಾನತೆ ಈ ಮೂರು ಅವಶ್ಯಕತೆ ಗಳನ್ನು ಶಿಕ್ಷಣವು ಪೂರೈಸುವಂತಹ ಸ್ಥಿತಿಗೆ ತಲುಪಬೇಕು ಎಂಬ ಮಹದಾಸೆಯೊಂದಿಗೆ ಹೊಸ ಶಿಕ್ಷಣ ಆರಂಭಿಸಿದ್ದಾರೆ. ಅದಕ್ಕೆ ಸಮಯ ಬೇಕಾಗಬಹುದು. 

ಮುಂದಿನ ಶಿಕ್ಷಣದಲ್ಲಿ  ಅನುಭವಾತ್ಮಕ ಕಲಿಕೆ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ. ಹೆಚ್ಚಿನ ವಿಷಯಗಳು ಮುಂದಿನ. ದಿನಮಾನ ಗಳಲ್ಲಿ ಎಲ್ಲರಿಗೂ ಎಲ್ಲಾ ಕಡೆ, ಎಲ್ಲಾ ಕಾಲಮಾನದಲ್ಲಿಯೂ ಸಿಗುವಂತಹ ಸಾಧ್ಯತೆಗಳು ಹೆಚ್ಚಾಗಿವೆ..

ಉದಾಹರಣೆಗೆ ಒಬ್ಬ ಬೋಧಕರು ಒಂದು ವಿಷಯ ಬೋಧನೆ ಮಾಡುತ್ತಾರೆ ಅಂದರೆ ವಿದ್ಯಾರ್ಥಿಗಳೇ ಹೆಚ್ಚು ವಿಷಯ ಸಂಗ್ರಹ ಮಾಡುವಂತಹ ಸಾಧ್ಯತೆಗಳು ಮುಂದಿನ ದಿನಮಾನಗಳಲ್ಲಿ ಇರಲಿದೆ. ಅನುಭವಾತ್ಮಕ ಕಲಿಕೆಗೆ ಪ್ರೊತ್ಸಾಹ ಸಿಗಲಿದೆ. ಸತ್ಪ್ರಜೆಯಾಗಿ ಸಮಾಜಕ್ಕೆ ಕೊಡುಗೆ ನೀಡುತ್ತಾ ತಾನು ವಿಕಾಸ ಹೊಂದುವುದು.

ಶಿಕ್ಷಣ ಮೂರು ಭಾಗ ಮಾಡಿದರೆ ಹೆಚ್ಚಿನ ಭಾಗ ಅನುಭವಾತ್ಮಕ ಕಲಿಕೆಗೆ ಅಂದರೆ ಶೇ.70,  ಸುಮಾರು ಶೇ.20 ಸಾಪೇಕ್ಷ ಕಲಿಕೆ .ಅಂದರೆ ಸ್ನೇಹಿತರೊಂದಿಗೆ, ಬಂಧುಬಾಂಧವರೊಂದಿಗೆ ಹೇಗೆ ವರ್ತಿಸಬೇಕು ಉಳಿದ ಶೇ.10 ರಷ್ಟು ಕಲಿಯಲು ವಿದ್ಯಾಲಯಕ್ಕೆ ವಿದ್ಯಾರ್ಥಿಗಳು ಬರುತ್ತಾರೆ.

ಈ ಹಂತದಲ್ಲಿ ಪ್ರಾಚೀನ ಶಿಕ್ಷಣ ತೆಗೆದುಕೊಳ್ಳುವುದಾದರೆ ತುಲನಾತ್ಮಕವಾಗಿ ನೋಡುವುದಾದರೆ. ಗುರುಗಳಿಂದ ಕಾಲು ಭಾಗ ಮಿತ್ರ  ವರ್ಗದಿಂದ ಕಾಲು ಭಾಗ, ತನ್ನ ಜ್ಞಾನ ಬಳಸಿ ಮತ್ತಷ್ಟು ಕಾಲು ಭಾಗ, ಕಾಲಕ್ರಮೇಣ ಅನುಭವ ಪಕ್ವವಾಗಿ ಕಾಲು ಭಾಗ ಕಲಿಯುವಂತಹದ್ದು. ನಾಲ್ಕು ಹಂತದ ಕಲಿಕೆ ನಡೆಯುತ್ತಿತ್ತು. ಈಗ ಕಲಿಕೆ ಬದಲಾಗಿದೆ. ನಮ್ಮ ಶಾಲಾ ಕಾಲೇಜುಗಳು ನವಕಲಿಕೆಗೆ ಹೊಸ ಬುನಾದಿ ಹಾಕಬೇಕಾದ ಅನಿವಾರ್ಯತೆ ಉಂಟಾಗಿದೆ. ಗುರು ಸನ್ಮಿತ್ರರಾಗಬೇಕಾಗಿದೆ. 

ಯಾರು ಈ ಬದುಕಿಗೆ ಬೇಕಾದ ಜೀವನ ಮೌಲ್ಯಗಳು ವಿಚಾರಗಳನ್ನು ಕೊಟ್ಟು ದಿಗ್ದರ್ಶನ ಮಾಡಿರುತ್ತಾರೋ ಅವರು ಗುರುಗಳೆನ್ನಿಸಿಕೊಳ್ಳುತ್ತಾರೆ.

ಶಿಕ್ಷಕ ಎನ್ನುವ ಪದಕ್ಕಿಂತ ಗುರು ಎನ್ನುವುದು ಹೆಚ್ಚು ಪ್ರಖರ , ಅರ್ಥ ಪೂರ್ಣ ವಾಗಿರುತ್ತದೆ. "ಶಿಷ್ಯನ ಹಿತಕ್ಕಾಗಿ ಯೋಚನೆ ಮಾಡುವವನು ನಿಜವಾದ ಗುರು" ಎಂದು ಶಂಕರಾಚಾರ್ಯರು ಹೇಳಿದ್ದಾರೆ. ಮುಂದಿನ ದಿನಮಾನಗಳಲ್ಲಿ ಶಿಕ್ಷಕನು ವಿದ್ಯಾರ್ಥಿಯ ಸನ್ಮಿತ್ರನಾಗಿ ಜ್ಞಾನ, ಮಾರ್ಗದರ್ಶನದ ಜೊತೆಗೆ ಅವನ ಭಾವಸಂವೇದನೆಗಳ ನ್ನು ಅರ್ಥ ಮಾಡಿಕೊಂಡು ಜೀವನಕ್ಕೆ ಬೇಕಾದ ಮಾರ್ಗದರ್ಶನ ಕೊಡಬೇಕಾಗಿರುವುದು, ಇದನ್ನು ಶಿಕ್ಷಕರು ಮುಂದಿನ ದಿನಮಾನಗಳಲ್ಲಿ ರೂಪಿಸಿಕೊಳ್ಳಬೇಕಾಗಿದೆ. ಅಂದರೆ ಇಂದಿನ ಶಿಕ್ಷಕರೂ ಕೂಡ ಬದಲಾಗಬೇಕಾಗಿದೆ.

ಒಂದು ರಿಪೊರ್ಟ್ ನೋಡಿರಬಹುದು, ಕೊರೋನಾ ಕಾಲದಲ್ಲಿ ಆನ್ ಲೈನ್ ವ್ಯಾಪಕತೆ ತುಂಬಾ ಹೆಚ್ಚಾಗಿದ್ದು. ಅದರ ದುಷ್ಪರಿಣಾಮ ವಾಗಿ ಅನೇಕ ವಿದ್ಯಾರ್ಥಿಗಳು ಸುಮಾರು 15 ರಿಂದ 20 ವಯಸ್ಸಿನವರು ಹೆಚ್ಚಾಗಿ ಅಶ್ಲೀಲ ಚಿತ್ರಗಳನ್ನು ಅದರಲ್ಲೂ ಭಾರತದ ವಿದ್ಯಾರ್ಥಿಗಳು ನೋಡಿದ್ದಾರೆ. ಇದು  ಯಂತ್ರದೊಂದಿಗೆ ಸಂಬಂಧ ಹೆಚ್ಚಾಗಿ ಜೀವನದೊಂದಿಗೆ ಸಂಬಂಧ ಕಡಿಮೆಯಾಗುತ್ತಿದೆ. ನಮ್ಮಲ್ಲಿರುವ ಶಕ್ತಿ ಬೇರೆ ಮುಖವಾಗಿ ಹಂಚಿಹೋಗುತ್ತಿದೆ. ಇದರಿಂದ ವ್ಯಸನಮುಕ್ತತೆ ದೊಡ್ಡ ಪಾತ್ರ ವಹಿಸುತ್ತದೆ. ನಮ್ಮನ್ನು ಕುಗ್ಗಿಸುವ ಎಲ್ಲಾ ವಿಷಯಗಳು ವ್ಯಸನಗಳು. 

ಶಿಕ್ಷಣ ಒಬ್ಬ ವ್ಯಕ್ತಿಯ ಸರ್ವಾಂಗೀಣ ವಿಕಾಸ ಮಾಡಬೇಕು. ಮುಂದಿನ ದಿನಗಳಲ್ಲಿ ಹಿರಿಯರು ಬಹಳ ಮುಖ್ಯ ಪಾತ್ರ ವಹಿಸಲಿದ್ದಾರೆ. ಹಿರಿಯರ ಮೇಲ್ಪಂಕ್ತಿ ಕೊಡುಗೆ ಆಗಲಿದೆ ಎಂದರೆ ತಪ್ಪಾಗಲಾರದು. ಯಾವ ಮನೆಯಲ್ಲಿ ಮೂರು ತಲೆಮಾರಿನ ಜನರು ಮನೆಯಲ್ಲಿರುತ್ತಾರೋ ಅಂತಹ ಮನೆಗಳಲ್ಲಿ ಹೆಚ್ಚಿನ ಅಸಂಭಾವನೆಗಳು ನಡೆಯುವಂಥಹದ್ದು ಕಂಡುಬರುವುದಿಲ್ಲ. ಎರಡು ಪೀಳಿಗೆಯ ಮನೆಯವರು ವಾಸಿಸುವ ಈ ಸಂದರ್ಭದಲ್ಲಿ  ಬದಲಾವಣೆ ಅನಿವಾರ್ಯ. ಅಜ್ಜ ಅಜ್ಜಿಯರು ಮೊಮ್ಮಕ್ಕಳ ಬಗ್ಗೆ ಹೆಚ್ಚು ಪ್ರೀತಿ ಹೊಂದಿರುತ್ತಾರೆ. ಮೊಮ್ಮಕ್ಕಳು ಕೂಡ ಅಂತಹದೇ ಪ್ರೀತಿ ಹೊಂದಿರುತ್ತಾರೆ.  ಆ ವಾತಾವರಣ ಮರುಕಳಿಕೆಯ ಆಶಯ ತಿಳಿಸಿದರು.

ಮೂರು ತಲೆಮಾರಿನವರು ವಾಸ ಮಾಡುವುದು ಮುಂದಿನ ದಿನಗಳಲ್ಲಿ ಹೆಚ್ಚಿನ ಮಹತ್ವ ಪಡೆದುಕೊಳ್ಳುತ್ತೆ, ಚಿಂತನಾ ಕಾಲ ಬರಲಿದೆ. ಅದನ್ನು ರೂಪಿಸುವ  ಸಾಮಾಜಿಕ ಜವಾಬ್ದಾರಿ  ನಮ್ಮ ಎಲ್ಲರದಾಗಿದೆ.

ಶಿಕ್ಷಣ ಜೀವನ ರೂಪಿಸುವ, ಹಸನಾಗಿಸುವ, ಚೈತನ್ಯ ಕೊಡುವಂತಹ ಕೇಂದ್ರವಾಗುತ್ತೆ. ಆಗ ಮನೆಯೂ ಕೂಡ ಸಂತಸದ ನಂದಗೋಕುಲವಾಗುತ್ತದೆ. 

ಯಾವ ಸಮಾಜದಲ್ಲಿ ಹಿರಿಯರ ಮೇಲ್ಪಂಕ್ತಿಯಲ್ಲಿ ಜೀವನ ನಡೆಸುವ ಕುಟುಂಬಗಳಿರುತ್ತವೋ ಅಂತಹ  ಸಮಾಜ ಯಾವತ್ತೂ ಅವನತಿ ಹೊಂದುವುದಿಲ್ಲ. ಇದು ಇತಿಹಾಸ ಕಲಿಸಿದ ಪಾಠ.

ಮೂರು ತಲೆಮಾರು ಒಟ್ಟಿಗೆ ವಾಸಿಸುವ ಸಂದರ್ಭ ಬಂದಾಗ ಮಾತ್ರ ಎಲ್ಲಾ ಬದಲಾವಣೆಗಳು ಆಗಲು ಸಾಧ್ಯ ಎಂದು ಒತ್ತಿ ಒತ್ತಿ ನಮ್ಮ ಅತಿಥಿಗಳು ಭಾಷಣದಲ್ಲಿ ಹೇಳಿದರು.  ವೇದಿಕೆಯ ಹಿರಿಯರು ತಮ್ಮ ಅನುಭವ ಬದುಕನ್ನು ಹಂಚಿಕೊಂಡು ಸಮಾಜಕ್ಕೆ ದಾರಿದೀಪವಾಗಲು ನಿವೇದಿಸುತ್ತಾ ಬದುಕು ಮತ್ತು ಶಿಕ್ಷಣಕ್ಕೆ ಪೂರಕವಾದ  ಬಹಳ ಮೇಲ್ಟಟ್ಟದ ಸ್ಥರದಲ್ಲಿ ಆಳವಾದ ತಮ್ಮ  ಜ್ಞಾನ ಅನುಭವದ ಮೂಸೆಯಲ್ಲಿ ವಿಷಯಗಳ ಮುಂದಿಡುತ್ತಾ ವಿಷಯ ಮಂಥನ ಹಾಗು ವೇದಿಕೆಯ ಸಾಹಿತ್ಯ ಭಂಡಾರದ ರಸದೌತಣಕ್ಕೆ ಕಾರಣರಾದರು ನಮ್ಮ ಅತಿಥಿಗಳು ಡಾ. ಆರ್ ಸುರೇಶ್ ರವರು. ವೇದಿಕೆಯು ಯಾವಾಗಲೂ ಅವರಿಗೆ ಅಭಾರಿಯಾಗಿರುತ್ತದೆ.🙏💐

ಈ ವಿಷಯ ನಮ್ಮ ವೇದಿಕೆಯಲ್ಲಿ ಬಹಳಷ್ಟು ಹಿರಿಯರು ಸಂಭ್ರಮಿಸಿದರು, ಇದರ ಸಲುವಾಗಿ ಅನೇಕ ಪ್ರಶ್ನೆಗಳನ್ನು ಅದರ ಸಾಧ್ಯಾಸಾಧ್ಯತೆಯ ವಿಷಯವಾಗಿ ಅತಿಥಿಗಳೊಂದಿಗೆ ಚರ್ಚಿಸಿದರು. ಇದು ಬಹಳ ವಿಶೇಷವಾಗಿ ಕಂಡಿತು. ಅವರಲ್ಲಿ ಹಿರಿಯರಾದ ಕೆದಿಲಾಯ ಸರ್ ಒಬ್ಬರು.

 ಕೊನೆಯದಾಗಿ 

ವೇದಿಕೆಯ ಸಂಸ್ಥಾಪಕರು, ಕಾರ್ಯಾಧ್ಯಕ್ಷರಾದ ಶ್ರೀ. ಪಾ. ಚಂದ್ರಶೇಖರ್ ಚಡಗರವರು ವೇದಿಕೆಯ ಆರಂಭ, ಗ್ರಂಥಾಲಯ,ಬೆಳವಣಿಗೆಗಳ ಬಗ್ಗೆ ಮಾತನಾಡಿದರು.

ಶ್ರೀ ವೀರಶೇಖರ ಸ್ವಾಮಿ, ಉಪಾಧ್ಯಕ್ಷರು ವಂದನೆಗಳೊಂದಿಗೆ ಕಾರ್ಯಕ್ರಮಕ್ಕೆ ಮುಕ್ತಾ ಹಾಡಿದರು.

ಭಾಗವಹಿಸಿದ ಎಲ್ಲರಿಗೂ ಧನ್ಯವಾದಗಳು🙏

~~~~~

 ಶಶಿಕಲಾ ಆರ್ 

ಸಹಕಾರ್ಯದರ್ಶಿ

ಶಿವರಾಮ ಕಾರಂತ ವೇದಿಕೆ



No comments:

Post a Comment