Wednesday, September 22, 2021

ಶ್ರೀ ಭೂ ವರಾಹನಾಥ ಸ್ವಾಮಿ ದೇವಸ್ಥಾನ, ಕಲ್ಲಹಳ್ಳಿ

 ಭಾನುವಾರ, 19 ಸಪ್ಟಂಬರ 2021  

ಶ್ರೀ ಭೂ ವರಹಾನಾಥ ಸ್ವಾಮಿ ದೇವಸ್ಥಾನ, ಕಲ್ಲಹಳ್ಳಿ, ಕೆ.ಅರ್.ಪೇಟೆ ತಾಲೂಕು, ಲಕ್ಷ್ಮೀದೇವಿಯ ವಿಶೇಷ ಸ್ಥಳ. ಹೇಮಾವತಿ ನದಿ ತೀರದಲ್ಲಿರುವ ಇದು ಕೆ.ಅರ್. ಪೇಟೆಯಿಂದ 20 ಕಿಮೀ ದೂರದಲ್ಲಿದ್ದು, ಹುಣಸೂರಿನಿಂದ 48 ಕಿಮೀ ದೂರದಲ್ಲಿದೆ.


ಈ ದೇವಸ್ಥಾನಕ್ಕೆ ಸುಮಾರು 2500 ವರ್ಷಗಳ ಇತಿಹಾಸವಿದ್ದು, ಗೌತಮ ಮುನಿ ಗಳು ಭೂದೇವಿಯ ವಿಗ್ರಹವನ್ನು ಸ್ಥಾಪಿಸಿದ ಪ್ರತೀತಿ ಇದೆ. ಭೂ ವರಾಹಸ್ವಾಮಿಯ ವಿಗ್ರಹವು 15 ಅಡಿ ಎತ್ತರವಿದ್ದು ಸುಖಾಸನದಲ್ಲಿ ಕುಳಿತಿದ್ದು, ತೊಡೆಯ ಮೇಲೆ  3.5 ಅಡಿಯ ಭೂದೇವಿಯ (ಲಕ್ಷ್ಮಿ) ಯ ವಿಗ್ರಹವೂ ಇದೆ.





ಈ ಪುರಾತನ ದೇವಾಲಯವು ಹೊಯ್ಸಳ ರಾಜ ವೀರ ಬಲ್ಲಾಳ 111, ಸ್ಥಾಪಿಸಲ್ಪಟ್ಟಿದ್ದು , ಇತ್ತೀಚಿನ ವರೆಗೆ ಇದು ಬೆಳಕಿಗೆ ಬಂದಿಲ್ಲ. ಈಗ 15 ಕೋಟಿ ರೂ. ವೆಚ್ಚದಲ್ಲಿ ಜೀರ್ನೋದ್ಧಾರ ಕೆಲಸ ನಡೆಯುತ್ತಿದೆ.



ಮೊನ್ನೆ ಭಾನುವಾರ, ನಾವು, ನಳಿನಿಯ ತಮ್ಮ ಸತೀಶ ಕುಟುಂಬ, ರಾಮಕೃಷ್ಣ ಕವನ, ಸುಜಾತ ಸ್ಮಿತಾ ರೊಂದಿಗೆ ಎರಡು ಕಾರುಗಳಲ್ಲಿ ಸುಮಾರು 12.30 ಗಂಟೆಗೆ ಈ ಸ್ಥಳವನ್ನು ತಲುಪಿದೆವು. 

ನೂರಾರು ಮಂದಿ ಭಕ್ತರು, ಬಿಸಿಲಿನ ಕಾವು, ಜೀರ್ನೋದ್ಧಾರಕ್ಕಾಗಿ ಬಂದ ಹಲವಾರು ಶಿಲೆ ಕಲ್ಲುಗಳ ರಾಶಿ, ಈ ಮಧ್ಯೆ ವರಾಹಸ್ವಾಮಿಯ ದರ್ಶನವೂ ಆಯಿತು.

http://www.bhoovarahatemple.com/home.html

ಅಲ್ಲಿಯ ಅನ್ನಗೃಹದಲ್ಲಿ ನಮಗೆಲ್ಲಾ ಬಿಸಿಬೇಳೆ ಬಾತ್ ಮತ್ತು ಮೊಸರನ್ನದ ಪ್ರಸಾದವೂ ಆಯಿತು.


ನಳಿನಿ ಸೋಮಯಾಜಿ ವಿರಚಿತ ವೀಡಿಯೋ 

ಭೂದೇವಿ ಕೃತ ಆದಿವರಾಹಸ್ವಾಮಿ ಸ್ತೋತ್ರಂ:                                                          

 ಭೂವರಾಹ ಸ್ವಾಮಿ ಸ್ತೋತ್ರವಿದು. ಭೂದೇವಿ ತನಗೆ ಬಂದ ಕಷ್ಟದಿಂದ ಕಾಪಾಡುವಂತೆ ಭಗವಂತನನ್ನು ಕೋರಿದಾಗ ಭಗವಂತ ಭೂದೇವಿಯನ್ನು ರಕ್ಷಿಸಿ ಸಕಲ ಇಷ್ಟಾರ್ಥ ಕೊಟ್ಟು ರಕ್ಷಿಸಿದ.

ಈ ಸ್ತೋತ್ರವನ್ನು ಭಕ್ತಿಯಿಂದ ಹೇಳುತ್ತಾ ಹೋದಂತೆ, ಕಷ್ಟಗಳು ಕಡಿಮೆಯಾಗುವುದು.

ಭೂ ವಿವಾದಗಳು ಪರಿಹಾರವಾಗುತ್ತವೆ, ಅಲ್ಲದೇ ಸ್ವಂತ ಮನೆ, ಭೂ ಖರೀದಿ ಯೋಗ ಕೂಡ ಕೂಡಿ ಬರುವುದು. ಇದರ ಜೊತೆ  ವರಾಹ ಮಂಡಲ ರಂಗೋಲಿ ಹಾಕಿದರೆ ಬಹಳ ಒಳ್ಳೆಯದು.

ಸ್ತೋತ್ರಮ್

ನಮಸ್ತೇ ದೇವದೇವೇಶ ವರಾಹವದನಾsಚ್ಯುತ | ಕ್ಷೀರಸಾಗರಸಂಕಾಶ ವಜ್ರಶೃಂಗ ಮಹಾಭುಜ ||

ಉದ್ಧೃತಾಸ್ಮಿ ತ್ವಯಾ ದೇವ ಕಲ್ಪಾದೌ ಸಾಗರ ರಾಂಭಸಃ l

ಸಹಸ್ರಬಾಹುನಾ ವಿಷ್ಣೋ  ಧಾರಯಾಮಿ ಜಗಂತ್ಯಹಮ್ || 

ಅನೇಕದಿವ್ಯಾಭರಣ ಯಜ್ಞಸೂತ್ರವಿರಾಜಿತ | ಅರುಣಾರುಣಾಂಬರಧರ ದಿವ್ಯರತ್ನವಿಭೂಷಿತ ll

ಉದ್ಯದ್ಭಾನು ಪ್ರತೀಕಾಶ ಪಾದಪದ್ಮ ನಮೋ ನಮಃ |

ಬಾಲಚಂದ್ರಾಭ ದಂಷ್ಟಾಗ್ರ ಮಹಾಬಲಪರಾಕ್ರಮ l

ದಿವ್ಯಚಂದನಲಿಪ್ತಾಂಗ ತಪ್ತಕಾಂಚನಕುಂಡಲ |l ಇಂದ್ರನೀಲಮಣಿಜ್ಯೋತಿಹೇಮಾಂಗದವಿಭೂಷಿ

ವಜ್ರದಂಷ್ಟಾಗ್ರನಿರ್ಭಿನ್ನ ಹಿರಣ್ಯಾಕ್ಷಮಹಾಬಲ |

ಪುಂಡರೀಕಾಭಿತಾಮ್ರಾಕ್ಷ ಸಾಮಸ್ವನಮನೋಹರ || 

ಶ್ರುತಿಸೀಮಂತಭೂಷಾತ್ಮನ್ ಸರ್ವಾತ್ಮನ್ ಚಾರುವಿಕ್ರಮ |

ಚತುರಾನನಶಂಭುಲ್ಯಾಂ ವಂದಿತಾsಯತಲೋಚನ || 

ಸರ್ವವಿದ್ಯಾಮಯಾಕಾರ ಶಬ್ದಾತೀತ ನಮೋ ನಮಃ |

ಆನಂದವಿಗ್ರರ್ಹಾನಂತ ಕಾಲಕಾಲ ನಮೋ ನಮಃ ||

 Il ಇತಿ ಶ್ರೀಸ್ಕಂದಪುರಾಣೇ ವೇಂಕಟಾಚಲಮಾಹಾತ್ಮ ಭೂದೇವೀ ಕೃತ ಶ್ರೀಆದಿವರಾಹಸ್ತೋತ್ರಮ್ ll

ಕೃಷ್ಣ...ಕೃಷ್ಣ...ಕೃಷ್ಣ.

ಬರೆದಿರುವುದು ಗುರುವಾರ 23 ಸಪ್ಟಂಬರ 2021 



 

No comments:

Post a Comment