Thursday, July 10, 2025

ಮೈ ಮನಗಳ ಸುಳಿಯಲ್ಲಿ - ಕನ್ನಡ ನಾಟಕ

 ಗುರುವಾರ, ಜುಲೈ 10, 2025

ಚೌಡಯ್ಯ ಮೆಮೋರಿಯಲ್ ಹಾಲ್, ಬೆಂಗಳೂರು.

ಜ್ಞಾನ  ಪ್ರಶಸ್ತಿ ವಿಜೇತ ಕೋಟ ಶಿವರಾಮ ಕಾರಂತರ "ಮೈಮನಗಳ ಸುಳಿಯಲ್ಲಿ" ಕಾದಂಬರಿಯ ವಿಭಿನ್ನ ರೂಪದ  ರಂಗ ಪ್ರಸ್ತುತಿ, ನಿರ್ದಿಗಂತ ತಂಡದವರಿಂದ.



ವೈಶ್ಯೆ ಮಂಜುಳಾ ಅವಳ ಆತ್ಮ ಕಥನದಿಂದ ಪ್ರಾರಂಭವಾದ ನಾಟಕ, ಬರೇ ಕತೆಯನ್ನು ಹೇಳುತ್ತಾ ಮುಂದುವರಿಯುವುದು. ಮೈ ಮತ್ತು ಮನಸ್ಸುಗಳನ್ನು ಬೇರೆ ಬೇರೆಯಾಗಿ ಪರಿಗಣಿಸಬೇಕು ಎಂಬ ಮಂಜುಲೆಯ ಅಮ್ಮನ ನಿರ್ದೇಶನ, ಹಾಗೆಯೇ ಹೆಣ್ಣು ಗಂಡಿನ ಸಂಭಂದವೆಂಬ ಕಗ್ಗಂಟಾಗಿರುವ ವಿಷಯವನ್ನು ಶೋಧಿಸುತ್ತಾರೆ.


ನಾಟಕದಲ್ಲಿ ಮಂಜುಳೆಗೆ ಸಿಗುವ ಮೂರು ಪ್ರಮುಖ ವ್ಯಕ್ತಿಗಳ ಜತೆಗಿನ ಸಂಬಂಧ ಮುಂದುವರಿಯುತ್ತದೆ. 

ಕಾದಂಬರಿಯಲ್ಲಿ ಬರುವ  ಕಂಡಲೂರು ವಾಸುದೇವ ಪೈ, ಉಳ್ಳೂರು ಸುಬ್ರಾಯ ಅಡಿಗ ಮತ್ತು ಲಕ್ಷ್ಮಣ ತೀರ್ಥ ಸ್ವಾಮಿಗಳು ಇವರೊಡನೆ ಸರಸ ಸಲ್ಲಾಪ, ಆತ್ಮೀಯ ದ್ರಶ್ಯಗಳು,  ಸಂಭಾಷಣೆ, ಅಭಿನಯ ಅದ್ಭುತವಾಗಿತ್ತು. 



ರಂಗದ ಮೇಲೆ ಅಭಿನಯಿಸಿದ ಅಕ್ಷತಾ ಕುಮಟ (ಮಂಜುಳಾ),  ರಾಜೇಶ್ ಮಾಧವನ್ (ಮೂರು ಗಂಡಸಿನ ಪಾತ್ರಗಳು) ಅಭಿನಯ ತುಂಬಾ ಚೆನ್ನಾಗಿತ್ತು.


ಪಮ್ಮ- ದುಗ್ಗಿಯ ಬೊಂಬೆ 

ನಿರ್ದಿಗಂತ ತಂಡದ ಹಲವಾರು ಕಲಾವಿದರು, ತಂತ್ರಜ್ಞರು ರಂಗ ಪ್ರಸ್ತುತಿಗೆ ಕೈ ಜೋಡಿಸಿದ್ದರು.  
ಅಮಿತ್ ರೆಡ್ಡಿ- ನಿರ್ದೇಶನ,  ಹಿನ್ನೆಲೆ ಧ್ವನಿ - ವಿಜಯಮ್ಮ, ಸಂಗೀತ - ಅನುಷ್ ಶೆಟ್ಟಿ.

ಸರಳ ರಂಗ ಸಜ್ಜಿಕೆ, ಬೆಳಕು, ಹಿನ್ನೆಲೆ ಸಂಗೀತ (ನಿರಂತರವಾಗಿ ಕೇಳಿಸುವ ಸಮುದ್ರದ ಅಲೆಗಳ ನಾದ), ಹಾಡುಗಳು ಇತ್ಯಾದಿ, ಸಾಧಾರಣ ವಾಗಿತ್ತು.


ಕಾದಂಬರಿಯನ್ನು ಓದಿ, ಬೇರೇ ರೀತಿಯ ಕಲ್ಪನೆಯನ್ನು ಇಟ್ಟುಕೊಂಡು ನಾಟಕ ವೀಕ್ಷಿಸಿಲು ಹೋದವರಿಗೆ ಒಂದು ವಿಭಿನ್ನವಾದ ಅನುಭವ.

ಸುಮಾರು ಎರಡು ಗಂಟೆಗಳ ರಂಗ ಪ್ರಸ್ತುತಿಯು ಗಂಡು ಹೆಣ್ಣಿನ ಸಂಬಂಧವು ಸಮಾಜದ ಹೊಣೆ....??


Posted 11/7/2025



No comments:

Post a Comment