ಭಾನುವಾರ, ಜುಲೈ 20, 2025
ತರಳಬಾಳು ಕೇಂದ್ರ ಮಿನಿ ಹಾಲ್, ಆರ್. ಟಿ. ನಗರ, ಬೆಂಗಳೂರು.
ಶಿವರಾಮ ಕಾರಂತ ವೇದಿಕೆಯ ಜುಲೈ ತಿಂಗಳ ಕಾರ್ಯಕ್ರಮವು, ಜಿ. ವಿ. ರೇಣುಕಾ ಅವರ "ಸುಧಿ" ವೈಚಾರಿಕ ಕೃತಿ ಲೋಕಾರ್ಪಣೆಯೊಂದಿಗೆ ಸಂಪನ್ನಗೊಂಡಿತು.
ಸಂಜೆ 4 ಗಂಟೆಗೆ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ನಂತರ, ವೇದಿಕೆಯ ಅಧ್ಯಕ್ಷೆ ದೀಪಾ ಫಡ್ಕೆ ಅವರು ಪ್ರಾಸ್ತಾವಿಕ ನುಡಿ ಹಾಗೂ ಸ್ವಾಗತವನ್ನು ಕೋರಿದರು.
ಶ್ರೀಮತಿ ಚೇತನಾ ಹೆಗಡೆ ಯವರಿಂದ ಕೃತಿ ಪರಿಚಯವಾದ ನಂತರ, ಮುಖ್ಯ ಅತಿಥಿ ಅನ್ನದಾನೇಶ್ ಹರೀಶ್ ಅವರು ಕೃತಿಯ ಬಗ್ಗೆ ಮಾತನಾಡಿದರು.
![]() |
ಚೇತನಾ ಹೆಗಡೆ |
ಲೇಖಕಿ ಜಿ. ವಿ. ರೇಣುಕ ಅವರು ಜೀವನದ ತಮ್ಮ ಅನುಭವವನ್ನು ಅನುಸಂಧಾನದ ರೂಪದಲ್ಲಿ ಕೃತಿಯನ್ನು ಹಾಗೂ ಅವರ ಸುಮಾರು 4000 ದಷ್ಟು ವಚನಗಳನ್ನು ಬರೆದಿರುವುದು ಎಂದು ತಿಳಿಸಿದರು.
![]() |
ಜಿ. ವಿ. ರೇಣುಕಾ |
ವೇದಿಕೆಯ ಕೋಶಾಧಿಕಾರಿ ಜಯರಾಮ ಸೋಮಯಾಜಿ ಅವರು ಡಾ ಅನ್ನದಾನೇಶ್ ಅವರನ್ನು ಶಾಲು ಹೊದಿಸಿ ಸನ್ಮಾನಿಸಿದರು.
ಹಲವಾರು ದಿನಪತ್ರಿಕೆಗಳಲ್ಲಿ ಕಾರ್ಯಕ್ರಮದ ಸುದ್ದಿಯನ್ನು ಪ್ರಕಟಿಸಲಾಯಿತು.
ವರದಿ: ಮಂಜುಳಾ ಭಾರ್ಗವಿ, ಕಾರ್ಯದರ್ಶಿ , ಶಿವರಾಮ ಕಾರಂತ ವೇದಿಕೆ.
ಎಲ್ಲರಿಗೂ ನಮಸ್ಕಾರ.
ಶಿವರಾಮ ಕಾರಂತ ವೇದಿಕೆಯ ಜುಲೈ ತಿಂಗಳ 20 ನೇ ತಾರೀಕು, ಭಾನುವಾರದ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ, ವಚನಕಾರ್ತಿಯವರಾದ ಶ್ರೀಮತಿ ಜಿ. ವಿ. ರೇಣುಕಾ ರವರ " ಸುಧಿ "ಎಂಬ ಪುಸ್ತಕ ಬಿಡುಗಡೆಯನ್ನು ಮಾಡುವ ಮೂಲಕ ನೆರವೇರಿಸಲಾಯಿತು.
ಇದಕ್ಕೆ ಮುಖ್ಯ ಅತಿಥಿಗಳಾಗಿ ಬಂದಿದ್ದವರು, ಡಾ. ಅನ್ನದಾನೇಶ್. ಮಹಾರಾಣಿ ಲಕ್ಷ್ಮಿ ಅಮ್ಮಣ್ಣಿ ಮಹಿಳಾ ಕಾಲೇಜಿನ ಪ್ರಾಧ್ಯಾಪಕರು. ಕಾರ್ಯಕ್ರಮದಲ್ಲಿ ಹಲವಾರು ಸದಸ್ಯರು ಭಾಗವಹಿಸಿದ್ದು ಬಹಳ ಹೆಮ್ಮೆಯ ಸುದ್ದಿ. ಕಾರ್ಯಕ್ರಮ ಅತ್ಯಂತ ಅಚ್ಚುಕಟ್ಟಾಗಿ ನಡೆಯಿತು.
ಈ ಕಾರ್ಯಕ್ರಮದಲ್ಲಿ ಮೊದಲಿಗೆ ಅತಿಥಿಗಳನ್ನು ವೇದಿಕೆಗೆ ಆಹ್ವಾನಿಸಲಾಯಿತು. ಮತ್ತು ಇದಾದ ಬಳಿಕ ನಮ್ಮ ಕಾರಂತ ವೇದಿಕೆಯ ಅಧ್ಯಕ್ಷರು ಡಾ. ದೀಪ ಫಡ್ಕೆ ಅವರು ಪುಸ್ತದ ಬಗ್ಗೆ ಒಂದೆರಡು ಮಾತುಗಳನ್ನು ಆಡುತ್ತಾ, ಅತ್ಯಂತ ಅಚ್ಚುಕಟ್ಟಾಗಿ ವೇದಿಕೆಗೆ ಶುಭ ಕೋರಿದರು.ತಮ್ಮ ಪ್ರಾಸ್ತಾವಿಕ ನುಡಿಗಳ ಮೂಲಕ ಎಲ್ಲರನ್ನುದ್ದೇಶಿಸಿ ಮಾತನಾಡಿ ಕಾರ್ಯಕ್ರಮಕ್ಕೆ ಆಗಮಿಸಿದ ಅತಿಥಿಗಳಿಗೆ ಸ್ವಾಗತ ಕೋರಿದರು.
ನಂತರ. ' ಸುಧಿ ' ಪುಸ್ತಕವನ್ನು ಲೋಕಾರ್ಪಣೆಗೊಳಿಸಲಾಯಿತು. ನಂತರ ಮೌoಟ್ ಕಾರ್ಮಲ್ ಕಾಲೇಜಿನ ಸಹ ಪ್ರಾಧ್ಯಪಕರಾದ ಶ್ರೀಮತಿ ಚೇತನಾ ಹೆಗಡೆ ಅವರು ಸುಧಿ ಕೃತಿಯ ಪರಿಚಯವನ್ನು ಬಹಳ ಚಂದದ ರೀತಿಯಲ್ಲಿ ಮಾಡಿದರು.
ನಂತರ ಜಿ. ವಿ ರೇಣುಕಾರವರನ್ನು ಪುಸ್ತಕದ ಬಗ್ಗೆ ತಮ್ಮ ಅನುಭವವನ್ನು ಹಂಚಿಕೊಳ್ಳುವoತೆ, ಕೇಳಿಕೊಳ್ಳಲಾಯಿತು. ಹಾಗೆಯೇ ಜಿ. ವಿ ರೇಣುಕಾರವರು, ತಮ್ಮ ಜೀವನದಲ್ಲಿ ಸಾಹಿತ್ಯದ ಹಾದಿಯ ಬಗ್ಗೆ, ಕೆಲವು ಅದ್ಭುತವಾದ ಅನುಭವವನ್ನು ವೇದಿಕೆಯೊಂದಿಗೆ ಹಂಚಿಕೊಳ್ಳಲಾಯಿತು. ಇದಾದ ನಂತರ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಬಂದಿದ್ದ ಡಾ. ಅನ್ನದಾನೇಶ್ ರವರು ಸುಧಿ ಪುಸ್ತಕದ ಲೇಖಕಿಗೆ ಶುಭ ಕೋರುತ್ತಾ, ನಮ್ಮ ವೇದಿಕೆಯ ಬಗ್ಗೆ ಹೆಮ್ಮೆಯ ನುಡಿಗಳನ್ನಾಡುತ್ತಾ, ತಮ್ಮ ಮಾತುಗಳನ್ನು ಪ್ರಾರಂಭಿಸಿದರು. ಸಾಹಿತ್ಯ ಕ್ಷೇತ್ರದಲ್ಲಿ ಮಹಿಳೆಯರ ಪಾತ್ರ, ವೈಚಾರಿಕತೆ, ಮಹಿಳೆಯರು ಬೆಳೆದು ಬಂದ ಹಾದಿ, ಆಧುನಿಕ ಸಮಾಜದಲ್ಲಿ ಮಹಿಳಾ ಸಾಹಿತ್ಯದ ಕುರಿತು, ಹಾಗೂ ವಚನ ಸಾಹಿತ್ಯದಲ್ಲಿ ಮಹಿಳೆಯರ ಸಾಧನೆಗಳು ಹೀಗೆ ಹಲವಾರು ವಿಷಯದ ಬಗ್ಗೆ ಒಂದು ಒಳ ನೋಟವನ್ನು ಬೀರುತ್ತಾ, ಸಾಹಿತ್ಯ ವಲಯದಲ್ಲಿ ಅತ್ಯಂತ ಪ್ರಮುಖ ಪಾತ್ರವನ್ನು ವಹಿಸಿದ ಅಕ್ಕಮಹಾದೇವಿ, ಸಂಚಿ ಹೊನ್ನಮ್ಮನoತವರ ಹಿರಿಯರನ್ನು ಉದಾಹರಣೆಯಾಗಿ ನೀಡಿ, ತಮ್ಮ ಅಮೂಲ್ಯವಾದ ಅವರ ಸಮಯವನ್ನು ನಮ್ಮ ವೇದಿಕೆ, ಸ್ಮರಿಸುವಂತೆ ಮಾತನಾಡಿದರು.ನಂತರ ಸಾಹಿತಿಗಳಾದ ಜಿ. ವಿ. ರೇಣುಕಾ ಹಾಗೂ ಡಾ. ಅನ್ನದಾನೇಶ್ ರವರನ್ನು ಗೌರವ ಪೂರ್ವಕವಾಗಿ ಸನ್ಮಾನಿಸಲಾಯಿತು.
ನಂತರ ನಮ್ಮ ವೇದಿಕೆಯ ಹಿರಿಯ ಸದಸ್ಯರಾದ ಶ್ರೀ ಸುಧೀoದ್ರ ಅವರು ಧನ್ಯವಾದ ಸಮರ್ಪಣೆ ಮಾಡಿ,ಶಿವರಾಮ ಕಾರಂತ ವೇದಿಕೆಯ ಅಧ್ಯಕ್ಷರಿಗೂ, ಕಾರ್ಯಕ್ರಮಕ್ಕೆ ನಿರೂಪಣೆಯನ್ನು ಮಾಡಿದ, ಶಿವರಾಮ ಕಾರಂತ ವೇದಿಕೆಯ ಕಾರ್ಯದರ್ಶಿ ಶ್ರೀಮತಿ ಮಂಜುಳಾ ಭಾರ್ಗವಿ ಅವರಿಗೂ ಈ ಸಭಾಂಗಣವನ್ನು ಒದಗಿಸಿ ಕೊಟ್ಟ ತರಳಬಾಳು ಸಂಸ್ಥೆಯವರಿಗೂ, ಕಡೆಯದಾಗಿ ಶಿವರಾಮ ಕಾರಂತ ವೇದಿಕೆಯ ಪದಾಧಿಕಾರಿಗಳು ಹಾಗೂ ಕಾರ್ಯಕಾರಿ ಸಮಿತಿಯ ಸರ್ವ ಸದಸ್ಯರಿಗೂ ಬಹಳ ಮುಖ್ಯವಾಗಿ ನಮ್ಮ ವೇದಿಕೆಯ ಯಶಸ್ಸಿಗೆ ಕಾರಣರಾದ ನಿಮ್ಮೆಲ್ಲರಿಗೂ ಅವರು ಹೃತ್ಪೂರ್ವಕ ವಂದನೆಗಳನ್ನು ಸಲ್ಲಿಸಿದರು.
ಧನ್ಯವಾದಗಳು.
ಕಾರ್ಯದರ್ಶಿ: ಮಂಜುಳಾ ಭಾರ್ಗವಿ.
Posted 22/7/2025
No comments:
Post a Comment