Sunday, August 3, 2025

ಪುಸ್ತಕ ಬಿಡುಗಡೆ - ಕತೆಗಳ ತೋರಣ

 ಭಾನುವಾರ, ಆಗೋಸ್ಟ್ 3, 2025

ಕರ್ನಾಟಕ ಚಿತ್ರಕಲಾ ಪರಿಷತ್, ಬೆಂಗಳೂರು.



ಶಾಲಿನಿ ಮೂರ್ತಿ ಅವರ 10, 11, 12 ನೇ ಭಾಗದ "ಕತೆಗಳ ತೋರಣ" ಪುಸ್ತಕದ ಬಿಡುಗಡೆ ಸಮಾರಂಭ.




ಮಕ್ಕಳಿಂದ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಸಮಾರಂಭ, ದೀಪ ಬೆಳಗುವಿನೊಂದಿಗೆ ಮುಂದುವರಿಯಿತು.

ಶ್ರೀಮತಿ ತೇಜಸ್ವಿನಿ ಅನಂತಕುಮಾರ್ , ಶ್ರೀ ಜಿ. ಬಾಲಕೃಷ್ಣ, ಹಾಗೂ ಶ್ರೀ ಯು. ಪ್ರೇಮಚಂದ್ರ ಅವರಿಂದ ಮಕ್ಕಳ ಸಮುಖದಲ್ಲಿ ಭಾಗ 10, 11, 12 ರ "ಕತೆಗಳ ತೋರಣ" ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು.

ಜಿ. ಬಾಲಕೃಷ್ಣ 

ಯು. ಪ್ರೇಮಚಂದ್ರ 

ವಿದ್ಯಾ ಬಿ ರಾವ್ 

ತೇಜಸ್ವಿನಿ ಅನಂತಕುಮಾರ್ 
ಅತಿಥಿಗಳು ತಮ್ಮ ಭಾಷಣದಲ್ಲಿ, ಮಕ್ಕಳ ಕಥಾ ಪುಸ್ತಕಗಳು ಅವರ ಸರ್ವಾಂಗೀಣ ಬೆಳವಣಿಗೆಗೆ  ಬಹಳ ಅವಶ್ಯಕ ಎಂದು ಪ್ರತಿಪಾದಿಸಿದರು.




ಶ್ರೀಮತಿ ವಿದ್ಯಾ ಬಿ ರಾವ್ ಅವರು ಅತ್ಯಂತ ಅಚ್ಚುಕಟ್ಟಾಗಿ ಕಾರ್ಯಕ್ರಮದ ನಿರೂಪಣೆಯನ್ನು ಮಾಡಿದರು.

ಭರ್ಜರಿಯಾದ ಉಪಹಾರದೊಂದಿಗೆ ಅಂದಿನ ಕಾರ್ಯಕ್ರಮ ಮುಕ್ತಾಯಗೊಂಡಿತು.

Posted 4/8/2025

No comments:

Post a Comment