Thursday, August 7, 2025
Sunandi Vraddhashrama, KodigeHalli, Bengaluru.
This week Bhajane at Sunandi Vraddhashrama was performed by me alone, as (Parabrahma Vittaladasa) Ramakrishna Bhat was not available.
Vandipe ninage Gananathaa....
Indu Enage Govinda....
The session was divine and happy, as four of the inmates sang good bhajans...
ಆಧ್ಯಾತ್ಮಿಕ ಸಂದೇಶ.
ಹೇಗೆ ಭಟ್ಟಿಯ ಬಾಣಲೆಯ ಕಾವಿನಲ್ಲಿ ಹುರಿದ ಭತ್ತ ಮತ್ತೆಂದೂ ಮೊಳಕೆಯೊಡೆಯದಂತೆ ಅವಲಕ್ಕಿಯಾಗಿ ಭಗವಂತನ ನೈವೇದ್ಯಕ್ಕೆ ತಯಾರಾಗುತ್ತದೆಯೋ ಹಾಗೆಯೇ ನಮ್ಮ ಪ್ರತಿಯೊಂದು ಕರ್ಮಗಳು ಕೂಡ ಜ್ಞಾನಾಗ್ನಿಯಲ್ಲಿ ಹುರಿದು ಇನ್ನೆಂದೂ ಮೊಳಕೆಯೊಡೆಯದಂತೆ, ಅವಲಕ್ಕಿಯಂತೆ ಭಗವಂತನಿಗೆ ಅರ್ಪಿತವಾದರೆ ಮತ್ತೆ ಮೊಳಕೆಯೊಡೆಯುವುದಿಲ್ಲ ! ಅಂದರೆ ಆ ಕರ್ಮಫಲವಾಗಿ ಮತ್ತೆ ಮತ್ತೆ ಕರ್ಮಗಳನ್ನು ಮಾಡುವ ಪ್ರಮೇಯವೇ ಇರುವುದಿಲ್ಲ.
ಇನ್ನೊಂದು ವಿಶಯವೆಂದರೆ, ಭಗವಂತ ಕೂಡ ಜೀವಿಗಳೆಂಬ ಭತ್ತವನ್ನು ಕಾಲವೆಂಬ ಒನಕೆಯಲ್ಲಿ ಕುಟ್ಟಿ ಸಂಸಾರವೆಂಬ ಬಾಣಲೆಯಲ್ಲಿ ಹುರಿಯುತ್ತಿರುತ್ತಾನೆ. ನಾವು ಸಂಸಾರದ ಕಾವಿಗೆ ಹೆದರಿ ಹೊರಬರಲು ಪ್ರಯತ್ನಿಸಿದಷ್ಟು ಮತ್ತೆ ಮತ್ತೆ ನಮ್ಮನ್ನು ಒಳಗೆ ದೂಡುತ್ತಾನೆ. ಕೊನೆಗೆ ಆ ಭತ್ತದ ಅಂತಃಸತ್ತ್ವದ ಆಧಾರದಲ್ಲಿ ಜೊಳ್ಳುಗಳು ಮತ್ತು ಅನುಪಯುಕ್ತ ಭತ್ತಗಳು ಸುಟ್ಟು ಕರಕಾಗಿ ಒಳ್ಳೆಯ ಅಂತಃಸತ್ತ್ವ ಇರುವ ಭತ್ತಗಳು ಮಾತ್ರ ಚೆನ್ನಾಗಿ ಅರಳಿ ಅರಳು/ಅವಲಕ್ಕಿಯಾಗಿ ಭಗವದರ್ಪಿತವಾಗುತ್ತವಂತೆ, ಈ ಸಂಸಾರದ ಕಾವಿನಲ್ಲಿ ಸುಟ್ಟುಕರಕಾದ ಜೀವಿಗಳು ತಮಸ್ಸಿಗೂ, ಕಾವಿಗೆ ಹೆದರಿದ ಜೀವಿಗಳು ಮತ್ತೆ ಮತ್ತೆ ಸಂಸಾರಕ್ಕೂ, ಉತ್ತಮ ಸತ್ತ್ವಯುತರಾದ ಸಾತ್ತ್ವಿಕ ಜೀವಿಗಳು ಮೋಕ್ಷಕ್ಕೂ ಸಲ್ಲುತ್ತಾರೆ.
ಬನ್ನಿ ನಾವೂ ನಮ್ಮ ಕರ್ಮಗಳನ್ನೂ ನಮ್ಮನ್ನೂ ಅವಲಕ್ಕಿಯಂತೆ ಭಗವಂತನಿಗರ್ಪಿಸಿ ಕೃತಕೃತ್ಯರಾಗೋಣ.
It was a good and divine session, as it was time 'HARI NAAMA SMARANE"
Lokaa Samasthaa Sukhino Bhavanthu....
God Bless All.
Posted 8/8/2025
No comments:
Post a Comment