Wednesday, October 22, 2025

ಪ್ರಕಾಶ್ ರಾವ್ ಪಯ್ಯಾರ್ - ಶ್ರದ್ಧಾಂಜಲಿ

 ಅಕ್ಟೋಬರ್ 16, 2025 

ಪ್ರಕಾಶ್ ರಾವ್ ಪಯ್ಯಾರ್ 



ಪ್ರಕಾಶ್ ರಾವ್ ಪಯ್ಯಾರ ನಿಧನ
Respects to departed soul Prakash Rao Payyar 🌷🙏🌷

ಕವಿ, ರಂಗಕರ್ಮಿ, ಧ್ವನಿ ಪ್ರತಿಷ್ಠಾನದ ಸ್ಥಾಪಕ, ಮುಂಬೈ ಹಾಗೂ ದುಬೈನಲ್ಲಿ ಕನ್ನಡ ಸಾಂಸ್ಕೃತಿಕ ಸಂಘಟನೆಯಲ್ಲಿ ಅಪಾರ ಕೆಲಸ ಮಾಡಿದ್ದು, ಕಳೆದ ಹಲವು ವರ್ಷಗಳಿಂದ ದುಬೈನಲ್ಲಿ ನೆಲೆಸಿದ್ದ ಪ್ರಕಾಶ್ ರಾವ್ ಪಯ್ಯಾರ ನಿಧನರಾಗಿದ್ದಾರೆ.

ಅಗಲಿದ ಕ್ರಿಯಾಶೀಲ ಕನ್ನಡದ ನಿಷ್ಠಾವಂತ ಚೇತನಕ್ಕೆ ನಮನ - ತಿರು ಶ್ರೀಧರ್ 

Jayarama Somayaji
ನಾವೂ ಸಹಾ ಧ್ವನಿ ಪ್ರತಿಷ್ಠಾನದ ಸಕ್ರಿಯ ಸದಸ್ಯರಾಗಿದ್ದು ಪಯ್ಯಾರ್ ಅವರು ಆತ್ಮೀಯರಾಗಿದ್ದರು.
ಅವರ ನಿಧನದ ವಾರ್ತೆಕೇಳಿ ಅತಿ ದುಃಖ ವಾಯ್ತು.
ಅವರ ಆತ್ಮಕ್ಕೆ ಚಿರ ಶಾಂತಿಯನ್ನು ಭಗವಂತನು ಕರುಣಿಸಲಿ



ಮಂಗಳೂರಿನಲ್ಲಿ  ನಡೆದ ಧ್ವನಿ ಪ್ರತಿಷ್ಟಾನ ಕಾರ್ಯಕ್ರಮ.

ಪ್ರಕಾಶ್ ರಾವ್ ಪಯ್ಯಾರ್ ಅವರು ದುಬೈಯಲ್ಲಿ "ಧ್ವನಿ ಪ್ರತಿಷ್ಟಾನ "  ಕನ್ನಡ ಕಾರ್ಯಕ್ರಮಗಳನ್ನು ಅತ್ಯಂತ ಶ್ರದ್ಧೆಯಿಂದ ಹಲವಾರು ವರ್ಷಗಳ ಕಾಲ ನಡೆಸಿಕೊಂಡು ಬರುತಿದ್ದರು. ಅವರಿಗೆ ಧ್ವನಿಯ ಬಗ್ಗೆ ಅತೀವ ಅಭಿಮಾನ, ಕಾಳಜಿ. 

ಹಲವಾರು ಕನ್ನಡದ ಗಣ್ಯ ವ್ಯಕ್ತಿಗಳನ್ನು ಭಾರತದಿಂದ ಕರೆಸಿಕೊಂಡು ಕಾರ್ಯಕ್ರಮಗಳನ್ನು ಆಯೋಜಿಸುತಿದ್ದರು. 
ರಂಗ ಕರ್ಮಿ ಬಿ. ಜಯಶ್ರೀ, ಚನ್ನವೀರ ಕಣವಿ, ವಿಶ್ವೇಶ್ವರ ಭಟ್, ವಿಶ್ವೇಶ್ವರ ಹೆಗಡೆ ಕಾಗೇರಿ, ನಟಿ ತಾರಾ, ನಮ್ಮವರೇ ಆದ ಅಭಿಲಾಷ, ಶಶಿಧರ ಕೋಟೆ, ಜಯಂತ್ ಕಾಯ್ಕಿಣಿ, ಇನ್ನೂ ಹಲವಾರು ಪ್ರತಿಷ್ಟಿತರು ಧ್ವನಿ ಕಾರ್ಯಕರ್ಮದಲ್ಲಿ ದುಬೈ ಗೆ ಬಂದು ಭಾಗವಹಿಸಿರುವರು. 
2010 ರಲ್ಲಿ ದುಬೈ ಯಲ್ಲಿ "ಪ್ರಥಮ ಮಧ್ಯಪ್ರಾಚ್ಯ ಕನ್ನಡ ಸಾಹಿತ್ಯ ಸಮೇಳನ" ಹಮ್ಮಿಕೊಂಡು ಯಶಸ್ವಿಯಾಗಿ ನಡೆಸಿರುವುದು "ಧ್ವನಿ " ಯ ಪ್ರಕಾಶ್ ರಾವ್ ಪಯ್ಯಾರ್ ಹೆಮ್ಮೆಯ ಗರಿ. 
ನಾಗಮಂಡಲ, ಹಯವದನ, ಮುಂತಾದ ನಾಟಕಗಳನ್ನು ನಿರ್ದೇಶಿಸಿ ಪ್ರದರ್ಶನವನ್ನು ಮಾಡಿಸಿರುವುದು ಪಯ್ಯಾರ್ ಅವರು. 


"ನಾಗಮಂಡಲ " ನಾಟಕದಲ್ಲಿ ಕೆಲ ದೃಶ್ಯಗಳು 



ಸನ್ಮಾನ 

ಅಗಲಿದ ಚೇತನ "ಪ್ರಕಾಶ್ ರಾವ್ ಪಯ್ಯಾರ್" ಅವರಿಗೆ ಭಗವಂತನು ಚಿರಶಾಂತಿ, ಸದ್ಗತಿಯನ್ನು ನೀಡಲಿ. 


Posted  22/10/2025 







No comments:

Post a Comment