Sunday, February 16, 2025
Muddana Mantapa, M G M College, Udupi
ಮುರಾರಿ - ಕೆದ್ಲಾಯ ರಂಗೋತ್ಸವ
16.02.2025, 6.30 PM
ಮುದ್ದಣ ಮಂಟಪ ಎಂಜಿಎಂ. ಕಾಲೇಜು, ಉಡುಪಿ .
ರಥಬೀದಿ ಗೆಳೆಯರು ಉಡುಪಿ, ಜಂಗಮ ಕಲೆಕ್ಟಿವ್ ಬೆಂಗಳೂರು ಪ್ರಸ್ತುತಿ
ಬಾಬ್ ಮಾರ್ಲಿ ಫ್ರಮ್ ಕೋಡಿಹಳ್ಳಿ
ರಚನೆ,ವಿನ್ಯಾಸ,,ನಿರ್ದೇಶನ: ಲಕ್ಷ್ಮಣ್ ಕೆ. ಪಿ.
'ಗುರುತು’ ಅನ್ನುವುದು ಕೆಲವರಿಗೆ ಹೆಮ್ಮೆಯಾದರೆ, ಕೆಲವರಿಗದು ಅಸಹ್ಯ, ಹಿಂಸೆ, ಜೀವನದ್ದುದ್ದಕ್ಕೂ ಹೊತ್ತು ತಿರುಗಬೇಕಾದ ಹೆಣಭಾರದ ಚಾಕರಿ. ಹಲವು ಬಾರಿ ‘ಉಳಿವಿಗಾಗಿ’ ಗುರುತುಗಳನ್ನು ಮುಚ್ಚಿಡುತ್ತಾ ಸಾಗುವುದೇ’ ಬದುಕು’ ಅನ್ನಿಸಿಕೊಂಡು ಹರಿಯುತ್ತಾ ಹಗುರಾಗುವುದು ಸಾಗದ ದಾರಿಯಾಗಿ ಕಂಡು ದಣಿವಾಗುತ್ತದೆ. ದಣಿವಾಗುತ್ತದೆ ಎಂಬ ಕಾರಣಕ್ಕೆ ಹಾರಾಡುವ ಬಯಕೆಯನ್ನು ಬಿಡುವಂತೆಯೂ ಇರುವುದಿಲ್ಲ. ಕತ್ತಲ ದಾರಿಯಲ್ಲಿ ಮಿಂಚುಹುಳುಗಳಿಗಾಗಿ ಜೀವ ಆತುಕೊಳ್ಳಬೇಕಾಗುತ್ತದೆ. ಆಗ ಕತ್ತಲೊಂದು ಸಂಭ್ರಮ ಬೆಳಕೊಂದು ಸಂಭ್ರಮ. ಹೀಗೆ ಗುರುತಿನ ಸುತ್ತ ಇರುವ ಹಲವು ಸಂಕೀರ್ಣ ವೀರೋಧಭಾಸಗಳನ್ನು ಎದುರುಗೊಳ್ಳುವ ಕಥನಗಳ ಗೊಂಚಲು’ ಬಾಬ್ ಮಾರ್ಲಿ ಫ್ರಮ್ ಕೋಡಿಹಳ್ಳಿ’
ಇಲ್ಲಿ‘ಬಾಬಾ ಸಾಹೇಬ್ ಅಂಬೇಡ್ಕರ್ ಅವರ ‘Waiting for a Visa’ ಒಂದು ರೂಪಕವಾಗಿ ಕಂಡು ಅವರು ನಿಜಕ್ಕೂ ಪ್ರವೇಶ ಕೇಳುತ್ತಿರುವುದು ಎಲ್ಲಿಗೆ? ಅನ್ನುವ ಪ್ರಶ್ನೆ ಮುಖ್ಯವಾಗುತ್ತದೆ.
ಪಠ್ಯ ಆಕರ: ಎನ್.ಕೆ ಹನುಮಂತಯ್ಯ, ಚಂದ್ರಶೇಕರ್ ಕೆ
ಡ್ರಮಟರ್ಗ್: ವಿ. ಎಲ್. ನರಸಿಂಹಮೂರ್ತಿ
ಅದೊಂದು ನೀರಸ, ಹಾಡುಗಳ ಕಿರುಚಾಟ, ಮೇಲಿನ ಕಥಾನಕದಂತೆ ಶೋಷಿತ ಸಮುದಾಯದ ಸಂಘರ್ಷ.
ಮೂರು ಪಾತ್ರಗಳ ಹಾಡು, ಸಂಭಾಷಣೆ, ಅನುಭವ.
ರಂಗ ವಿನ್ಯಾಸ, ಸಂಗೀತ, ಬೆಳಕು ಉತ್ತಮ.
ಅಭಿಲಾಷ, ನಳಿನಿ, ಅನೀಶ, ಅಕ್ಷಿತ ಮತ್ತು ನಾನು ವೀಕ್ಷಿಸಿದ ನನ್ನ ಕಾಲೇಜಿನಲ್ಲಿ ನಡೆದ ನಾಟಕ....
ಬರೆದಿರುವುದು 21/2/2025