Showing posts with label BIRTHDAY. Show all posts
Showing posts with label BIRTHDAY. Show all posts

Thursday, September 17, 2026

NARENDRA MODI - HAPPY BIRTHDAY

 Thursday, September 17, 2026


Our beloved Prime Minister of India, Narendra Modi, Happy Birthday Today.

We all pray for his good health, long life and Happiness. God Bless.



The beautiful video above, completely describes the Man "Modi".....


Inspite of all leftists, communists, "Dimagi Naxals" "Naaraz Fufas" , Deep stake,  he stays strong as he is at the heart of 140 billion people of India.

at Home, Birthimane, Bengaluru




Posted 17/9/2026








Monday, September 7, 2026

SHOBHA (60) BIRTHDAY CELEBRATION

 Sunday, September 6, 2026

Shobha Residence, Hongirana School Campus, 

AmteKoppa, Sagara, Shivamogga

Shoobha, D/O Late brother B. Padmanaba Somayaji, celebrating her completing 60 years with family and friends with Music program and grand lunch at her residence.







Vijetha, s/o Shobha, describing the ocassion, said they do not believe in Homa and Havana (Religious ceremony), but rather celebrate the Happy ocassion with family and Friends and well wishers.


The house premises was beatifully decorated with shamiana and stage for Music program,  and singer and Ex-student of Hongirana and Vinay Nadig and co-singer, Apoorva, and Keyboard and Taabla for accompaniement.










Music program continued up to 1 pm and after, when the guests proceeded for grand Lunch at the School Mess Hall. The menu included Poori, Pulav, Holige, Paayasa, along with Saaru, Huli, Palya etc.







We were there in the morning with Shubha-Raghu, after staying overnight at Harsha,The Fern Hotel at Shimogga.

Returned to Bengaluru at 11.30 pm after leaving Hongirana at 4 pm

Tiffin on the way at DhruvaTare Restaurant.

Wishing SHOBHA, good health, happiness and long life.

Shobha's post in Facebook....

ಸೆಪ್ಟೆಂಬರ್ 3ರಿಂದ 6ರವರೆಗೆ ನಡೆದ ನನ್ನ ಅರವತ್ತರ ಹುಟ್ಟುಹಬ್ಬದ ಸಂಭ್ರಮ ನನಗೆ ನಿರೀಕ್ಷೆಗೂ ಮೀರಿದ ಅನುಭವವಾಯಿತು. ಶುಭಾಶಯಗಳ ಸುರಿಮಳೆ, ಉಡುಗೊರೆಗಳು, ಸನ್ಮಾನಗಳು—ಎಲ್ಲವು ನನಗೆ ಸಂತಸ ತಂದರೂ, ನಾನು ಅಷ್ಟಕ್ಕೆಲ್ಲ ಅರ್ಹಳೇ ಎಂಬ ಆತ್ಮಸಂಶಯವೂ ಮನಸ್ಸಿನಲ್ಲಿ ಮೂಡಿತು. ನಾನು ನನ್ನೊಳಗಿನ ಕರೆಗೆ ಓಗೊಟ್ಟು ಕೆಲಸ ಮಾಡಿದ ಶೋಭಾ ಅಷ್ಟೇ; ಮಹಾ ಸಾಧಕಿಯಲ್ಲ. ಆದರೂ ಎಲ್ಲರ ಪ್ರೀತಿ, ಗೌರವ, ಹೊಗಳಿಕೆಗಳು ನನ್ನನ್ನು ಭಾವಪರವಶಳನ್ನಾಗಿಸಿದವು.


ಸೆಪ್ಟೆಂಬರ್ 5ರಂದು ಶಿಕ್ಷಕರ ದಿನದಂದು ನನ್ನ ಬೃಹತ್ ಚಿತ್ರವನ್ನು ಸ್ಟೇಜಿನ ಮೇಲೆ ಕಂಡಾಗ ನಾನು ಕಂಗಾಲಾದೆ. ಇಂತಹ ಆಚರಣೆಗಳನ್ನು ವಿರೋಧಿಸುವವಳಾದರೂ, ಅದರ ಹಿಂದಿನ ಶ್ರಮ ಮತ್ತು ಪ್ರೀತಿಗೆ ಮೌನವಾಗಿ ತಲೆಬಾಗಬೇಕಾಯಿತು. ನನ್ನ ಸಿದ್ಧಾಂತಗಳಿಗೆ ವಿರುದ್ಧವಾಗಿದ್ದರೂ ಆ ಸಂದರ್ಭವನ್ನು ಸ್ವೀಕರಿಸಿ ಎಲ್ಲರ ಮಾತು, ಸನ್ಮಾನಗಳಿಂದ ಭಾವಪರವಶಳಾದೆ. ಎಲ್ಲರ ಸಹಕಾರ ಮತ್ತು ಸಹಯೋಗದಿಂದ ಸಂಸ್ಥೆಯನ್ನು ಕಟ್ಟಿದ್ದು ಸತ್ಯವೆ, ಆದರೆ ಅದು ನಮ್ಮೆಲ್ಲರ ಕನಸಾದ ಮಕ್ಕಳಿಗೆ ಸಂತಸದ ಕಲಿಕೆಯ ವಾತಾವರಣ ನೀಡುವ ಶಾಲೆ ರೂಪಿಸುವ ಪ್ರಯತ್ನ ಮಾತ್ರ. ಆದರೂ ಎಲ್ಲರೂ ನನ್ನನ್ನು ಎತ್ತರದ ಸ್ಥಾನದಲ್ಲಿ ಇಟ್ಟು ನೋಡಿದ ರೀತಿ ನನಗೆ ವಿಸ್ಮಯಕಾರಿಯಾಗಿ ಕಂಡಿತು.
ನನ್ನ ಮಕ್ಕಳಿಬ್ಬರೂ ಸೆಪ್ಟೆಂಬರ್ 6ರಂದು ಆಪ್ತ, ಸರಳ, ಸುಂದರ ಸಮಾರಂಭವನ್ನು ತಮ್ಮದೇ ಖರ್ಚಿನಲ್ಲಿ ಆಯೋಜಿಸಿದ ರೀತಿ ನನಗೆ ಹೆಮ್ಮೆ ತಂದಿತು. ನನ್ನದೇ ಹಳೆಯ ವಿದ್ಯಾರ್ಥಿಗಳಿಬ್ಬರ ಸಂಗೀತ ಸುಧೆ ಎಲ್ಲರ ಮನಸ್ಸನ್ನು ತಣಿಸಿತು. ಆಹ್ವಾನಿತರು ಹೆಚ್ಚಿನ ಸಂಖ್ಯೆಯಲ್ಲಿ ಬಂದು, ಅವರ ಪ್ರೀತಿ ಮತ್ತು ಕಾಳಜಿಯನ್ನು ತೋರಿದ ಕ್ಷಣಗಳು ನನಗೆ ಆಶೀರ್ವಾದದಂತೆ ಅನಿಸಿತು.
ನನ್ನ ಬದುಕಿನ ಈ ಹಂತದಲ್ಲಿ, ನನ್ನನ್ನು ಬೆಳೆಸಿದ ಹೊಂಗಿರಣ ಕುಟುಂಬ, ಸ್ನೇಹಿತರು, ಸಂಬಂಧಿಕರು, ವಿದ್ಯಾರ್ಥಿಗಳು—ಎಲ್ಲರಿಗೂ ಹೃದಯಾಂತರಾಳದ ಕೃತಜ್ಞತೆ. ಪಯಣ ಇಲ್ಲಿಗೇ ಮುಗಿದಿಲ್ಲ; ಮುಂದೆ ನಡೆಯುವ ದಾರಿ ಇನ್ನೂ ಇದೆ. ರಾಬರ್ಟ್ ಫ್ರಾಸ್ಟ್ ಹೇಳಿದಂತೆ:
*I have promises to keep,
And miles to go before I sleep.*


Posted 8/9/2026


















Friday, September 4, 2026

HAPPY BIRTHDAY SHOBHA - 60

 Thursday, September 3, 2026

ಶೋಭಾ 

ಇವತ್ತು ನನಗೆ ಅರವತ್ತು ತುಂಬಿತು. ನನ್ನ ಪ್ರಾಂಶುಪಾಲ ಪದವಿಯಿಂದ ನಿವೃತ್ತಿ ಕೂಡಾ ತಗೊಳ್ಳುತ್ತಿರುವ ಕಾರಣ ಶಾಲೆಯ ಮಕ್ಕಳು ಹಾಗೂ ಸಿಬ್ಬಂದಿಗಳಿಗೆಲ್ಲರಿಗೂ ನಾನೇ ಒಳ್ಳೆಯ ಊಟ ಹಾಕಿಸಬೇಕೆನ್ನುವ ಯೋಚನೆ ಬಂದಾಗ ನಮ್ಮ ಟ್ರಸ್ಟಿಗಳು ಸಂಸ್ಥೆಯ ವತಿಯಿಂದ ಊಟ ಹಾಕಿಸುವುದಾಗಿ ತೀರ್ಮಾನಿಸಿ ಇವತ್ತು ನೀಚಡಿ ಪ್ರಕಾಶ ಭಟ್ಟರ ಕೈಚಳಕದ ರುಚಿಕರ ಊಟದ ವ್ಯವಸ್ಥೆ ಮಾಡಲಾಯಿತು. ಹುಟ್ಟು ಹಬ್ಬದ ಆಚರಣೆಯ ಬಗ್ಗೆ ಅಷ್ಟೊಂದು ಆಸಕ್ತಿ ಇಲ್ಲದ ನಾನು ಅಸೆಂಬ್ಲಿಗೆ ಬರಬೇಕೆಂದು ಒತ್ತಾಯ ಬಂದರೂ  ನಿರಾಸಕ್ತಿ ತೋರಿಸಿ ಅಸೆಂಬ್ಲಿಗೆ ಹೋಗಲಿಲ್ಲ. ನಂತರದಲ್ಲಿ ನನ್ನ ಯೂಶುವಲ್ ಟೈಮ್ ನಲ್ಲಿ ಶಾಲೆಯ ಕಡೆಗೆ ಹೋದೆ. ಅಲ್ಲಿ ನನಗಾಗಿ ಅನೇಕ ಅಚ್ಚರಿಗಳು ಒಂದರ ಮೇಲೊಂದರಂತೆ ಕಾಯುತ್ತಿದ್ದವು. ಸೆಕ್ಷನ್ ವೈಸ್ ಟೀಚರ್ಸ್ ಬಂದು ನನಗೆ ವಿಶ್ ಮಾಡಿ, ಗಿಫ್ಟ್ ಕೊಟ್ಟರು. ಕ್ಲಾಸ್ ವೈಸ್ ಮಕ್ಕಳ ರೆಪ್ರೆಸೆಂಟೆಟಿವ್ ಗಳು ಬಂದು ಅವರೇ ಕೈಯ್ಯಾರೆ ಮಾಡಿದ, ಅವರ ಭಾವನಾತ್ಮಕ ಬರಹಗಳಿಂದ ತುಂಬಿದ ಬಣ್ಣ ಬಣ್ಣದ ಗ್ರೀಟಿಂಗ್ಸ್ ಗಳನ್ನು ಕೊಟ್ಟರು. ಆ ಪುಟ್ಟ ಪುಟ್ಟ ಬರಹಗಳನ್ನು ಹಾಗೂ ಸಾಲುಗಳನ್ನು ಓದಿದಾಗ “ಮಕ್ಕಳು ನಮ್ಮನ್ನು ಇಷ್ಟೆಲ್ಲಾ ಗಮನಿಸಿ  ಅಸೆಸ್ ಮಾಡ್ತಾರಾ” ಅಂತ ಆಶ್ಚರ್ಯ ಆಯಿತು. ಮನತಟ್ಟುವ ಪ್ರಾಮಾಣಿಕ ಸಾಲುಗಳು ಅವರದಾಗಿದ್ದವು. ಅವರ ಮುಗ್ಧ ಭಾವನೆಗಳು ನನ್ನ ಮನಸ್ಸನ್ನು ಬಹಳ ತಟ್ಟಿದವು. ನಾನು ಬಹಳ ಭಾವಪರವಶಳಾದೆ. ಇಂಗ್ಲಿಷ್ ನಲ್ಲಿ ಹೇಳ್ತಾರಲ್ವಾ overwhelming ಅಂತ ಹಾಗೆ! ನಾನು ಇವು ಯಾವನ್ನೂ ನಿರೀಕ್ಷಿಸಿರಲಿಲ್ಲ. ಹೀಗಾಗಿ ಎಲ್ಲರೂ ತೋರಿಸಿದ ನಿಷ್ಕಪಟ ಪ್ರೀತಿಯನ್ನು ಜೀರ್ಣಿಸಿಕೊಳ್ಳುವುದು ಕಷ್ಟವೆಂದೆನಿಸಿತು.

ಮಧ್ಯಾಹ್ನದ ಊಟದ ಸಮಯದಲ್ಲಿ ಮೆಸ್ ನ ಕಡೆಗೆ ಹೋದಾಗ ಎಲ್ಲರ “ಹ್ಯಾಪಿ ಬರ್ತಡೇ" ಯ ವಿಶ್ ಹಾಗೂ ಕೈಕುಲುಕುವಿಕೆಯಲ್ಲಿ ನಾನು ‘ಕಳೆದು’ ಹೋದೆ ಎನ್ನುವುದು ಸತ್ಯದ ಮಾತು! ನಮ್ಮ ಡ್ರೈವರ್ಸ್ ಆದಿಯಾಗಿ ಎಲ್ಲರಿಂದಲೂ ಉಡುಗೊರೆಗಳು ಹಾಗೂ ಹಾರೈಕೆಗಳು. ಭಾವನೆಗಳು ಉಕ್ಕಿ ಬಂದು ಸುಸ್ತಾದ ಅನುಭವ! ಸಂಜೆ ವಿಭಾ, ಮೇದಿನಿ, ಪುಟ್ಟು, ನಮ್ಮ ಮನೆಯ ಆದ್ಯ - ಆರ್ಯಳ ಜೊತೆ ಮನೆಯಲ್ಲಿ ಕುಣಿದು ಸಂಭ್ರಮಿಸಿದ್ದು ಇವತ್ತಿನ ನನ್ನ ಅರವತ್ತನೇ ಹುಟ್ಟುಹಬ್ಬಕ್ಕೆ ‘ಶುಭ’ ವಿರಾಮವನ್ನು ನೀಡಿತು.(ಮಕ್ಕಳೊಡನೆ ಮಕ್ಕಳಾಗಿರುವುದು ಬಹಳ ರಿಲ್ಯಾಕ್ಸಿಂಗ್ ಅಂತ ನಿಮಗೆ ಗೊತ್ತಾ?) ಇದರ ಮಧ್ಯೆ ಹುಟ್ಟು ಹಬ್ಬದ ಹಾರೈಕೆಯ ಮೆಸೇಜ್ ಗಳು ಹಾಗೂ ಫೋನ್ ಗಳು ಕೂಡಾ ಖುಷಿಯ ಡೋಸ್ ಅನ್ನು ಹೆಚ್ಚಿಸಿದವು ಎಂದು ಹೇಳುವುದರ ಜೊತೆಗೆ ನಾನು ಇಂದು   "ಹಿರಿಯ ನಾಗರಿಕ”ಳ ಪಟ್ಟಕ್ಕೆ ಭಡ್ತಿ ಪಡೆದೆ ಎಂದು ಘೋಷಿಸಲು ಬಯಸುತ್ತೇನೆ!







Posted 4/9/2026

Thursday, July 30, 2026

HAPPY BIRTHDAY NALINI SOMAYAJI

 Thursday, July 30, 2026

Here and there

Mom Nalini Somayaji celebrated her birthday quietly, visited  Radhakrishna temple at Sanjaynagara, went to Bookshp to buy some books, had lunch.




The temple has number of deities, Balaji, Anjaneya, Subramanya, Shiradi Baba and many moore. It was a short visit,




Lunch at Hotel Adithya at Sahakaranagar, after trying couple of other hotels.


In the evening, with children of Learning Centre at home, with cake, and books given.



ಶ್ರೀ ತಿರು ಶ್ರೀಧರ್ ಅವರ Facebook ನಲ್ಲಿ ಶುಭ ಹಾರೈಕೆಗಳು:


ನಳಿನಿ ಸೋಮಯಾಜಿ
Happy Birth Day Nalini Somayaji🌷🙏🌷

ನಳಿನಿ ಸೋಮಯಾಜಿ ಸದಾ ಹಸನ್ಮುಖಿ, ಉತ್ಸಾಹಿ, ವಿವಿಧ ಸಾಂಸ್ಕೃತಿಕ ಚಟುವಟಿಕೆಗಳ ಆಸಕ್ತೆ, ಪ್ರೋತ್ಸಾಹದಾಯಿನಿ, ಮಕ್ಕಳೊಂದಿಗೆ-ಹಿರಿಯರೊಂದಿಗೆ-ಎಲ್ಲರೊಂದಿಗೆ ಬೆರೆವವರು. ನಳಿನಿ ಸೋಮಯಾಜಿ ಮತ್ತು Jayarama Somayaji ದಂಪತಿ ಯುನೈಟೆಡ್ ಅರಾಬ್ ಎಮಿರೇಟ್ಸ್ ದೇಶದಲ್ಲಿ ಕನ್ನಡ ಸಾಂಸ್ಕೃತಿಕ ವಾತಾವರಣ ನಿರ್ಮಿಸುವಲ್ಲಿ ವಹಿಸಿದ ಪಾತ್ರವನ್ನು ಅಲ್ಲಿನ ಜನ ಇಂದೂ ಆಪ್ತವಾಗಿ ಸ್ಮರಿಸುತ್ತಾರೆ. ಶಿಕ್ಷಣ ಕ್ಷೇತ್ರದಲ್ಲಿಯೂ ಅಪಾರ ಕೆಲಸ ಮಾಡಿರುವ ಈ ದಂಪತಿಗಳು ಇಂದೂ ಆ ಕ್ಷೇತ್ರದಲ್ಲಿ ಸಾಕಷ್ಟು ಆಪ್ತತೆಯಿಂದ ಆಸಕ್ತಿವಹಿಸಿದ್ದಾರೆ.

ಪಾಕ ವಿಚಾರದಲ್ಲಾಗಲಿ, ಪ್ರಾಣಿ - ನಿಸರ್ಗ ವಿಚಾರದಲ್ಲಾಗಲಿ, ಮಕ್ಕಳಿಗೆ ಕಥೆ ಹೇಳುವುದರಲ್ಲಾಗಲಿ, ಸಾಂಸ್ಕೃತಿಕ ಚಟುವಟಿಕೆಗಳ ಭಾಗವಹಿಕೆಯನ್ನು ಅಭಿವ್ಯಕ್ತಿಸುವುದರಲ್ಲಾಗಲಿ ಈ ಹಿರಿಯ ದಂಪತಿಗಳ ಮನೋಧರ್ಮ ಮೆಚ್ಚುಗೆ ಹುಟ್ಟಿಸುತ್ತದೆ. ಈ ಹಿರಿಯ ದಂಪತಿಗಳಿಗೆ ಮತ್ತು ಅವರ ಕುಟುಂಬವರ್ಗದವರಿಗೆ ಶುಭಕೋರುತ್ತಾ, ನಳಿನಿ ಸೋಮಯಾಜಿ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳನ್ನು ಸಲ್ಲಿಸೋಣ.

ಅಮ್ಮಾ, ಆತ್ಮೀಯ ನಮಸ್ಕಾರ ಮತ್ತು ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು. ತಮ್ಮ ಮತ್ತು ತಮ್ಮ ಕುಟುಂಬದವರ ಬದುಕು ಸಕಲ ಸುಖ, ಸೌಖ್ಯ, ಸಂಪದ, ಸಂತಸ, ಸಾಧನೆ, ಸಂತೃಪ್ತಿಗಳಿಂದ ನಿತ್ಯ ಕಂಗೊಳಿಸುತ್ತಿರಲಿ.
Tiru Sridhara ಅವರಿಗೆ ಅನಂತಾನಂತ ವಂದನೆಗಳು. ಶ್ರೀ ದೇವರು ನಿಮಗೆ ಹಾಗೂ ನಿಮ್ಮ ಕುಟುಂಬಕ್ಕೆ ಆಯುರಾರೋಗ್ಯ, ನೆಮ್ಮದಿಯನ್ನು ಸದಾ ಕರುಣೆಸಲಿ

 
 
by Author
Tiru Sridhara ನಮಸ್ಕಾರ ತಿರು ಶ್ರೀಧರ ಸರ್. ಮನಪೂರ್ಣ ಧನ್ಯವಾದಗಳು
ಸದಾ ಲವಲವಿಕೆಯ, ಚೈತನ್ಯದ ಚಿಲುಮೆಯಂತಿರುವ ನಳಿನಿ ಸೋಮಯಾಜಿ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು. 🌹💐🌹💐🌹
ನನಗೆ ಎರಡು ಸಾರಿ ನಳಿನಿಯವರನ್ನು ಅವರ ಪತಿ ಸೋಮಯಾಜಿ ಅವರೊಂದಿಗೆ ಭೇಟಿಯಾಗುವ ಅವಕಾಶ ಸಿಕ್ಕಿತ್ತು. ನಳಿನಿಯವರ ಬಗ್ಗೆ ಎಲ್ಲರಿಗೂ ಗೊತ್ತಿದೆ ಬಹುಮುಖ ಪ್ರತಿಭೆ ಎಂದು! ಶೈಕ್ಷಣಿಕವಾಗಿ ಮಾಡುತ್ತಿರುವ ಸೇವೆಯ ಬಗ್ಗೆಯೂ ಈ ದಂಪತಿಗಳ ಬಗ್ಗೆ ಗೊತ್ತಿದೆ. ಮೊದಲ ಸಾರಿ ನೇರವಾಗಿ ನಳಿನಿ‌ ರವೀಂದ್ರಕಲಾಕ್ಷೇತ್ರದ ಮೆಟ್ಟಿಲುಗಳ ಮುಂದೆ ಸಿಕ್ಕರು! ಇಬ್ಬರೂ ಮಾತಾಡುತ್ತಾ ನಿಂತಿದ್ದರೆ ಪತಿ ಅವರಾಗೇ ನಮ್ಮಿಬ್ಬರ ಫೋಟೊ ತೆಗೆಯುತ್ತಿದ್ದರು! ಇದ್ಯಾವ ದೊಡ್ಡ ವಿಷಯ ಅಂತ ಯಾರಿಗಾದರೂ ಅನಿಸಬಹುದೇನೋ ಗೊತ್ತಿಲ್ಲ. ನನಗೆ ಇವರಿಬ್ಬರೂ ದುಬೈನಲ್ಲಿ ಸಾಮಾಜಿಕವಾಗಿ ಹಮ್ಮಿಕೊಂಡ ವಿಷಯ ಗೊತ್ತಿದ್ದರಿಂದ, ಅವರ ಪತಿಯ ಬಗ್ಗೆ ಗೌರವವಿತ್ತು. ಆದರೆ ಹೀಗೆ ತನ್ನ ಸಂಗಾತಿಯ ಜೊತೆಯಲ್ಲಿದ್ದಾಗ, ಆಕೆಯ ಖುಷಿಯನ್ನು ತಾವಾಗೇ ಸೆರೆಹಿಡಿಯುವ ಮನಸ್ಥಿತಿ ಅಷ್ಟು ಸುಲಭಕ್ಕೆ ಇರುವಂತಹುದಲ್ಲ.‌ಆಗಲೇ ಅನಿಸಿತ್ತೇನೆಂದರೆ ಅದೆಂತಹಾ ಅನುರೂಪದ ದಂಪತಿಗಳಿವರು ಎಂಬುದು!
ನಳಿನಿ‌ ಹೀಗೇ ಖುಷಿಖುಷಿಯಾಗಿರಿ
ಚಟುವಟಿಕೆಯ ಕಾರಂಜಿ,ಸದಾ ಹಸನ್ಮುಖಿ,ಸರಳ ಸಜ್ಜನಿ ಪ್ರೀತಿಯ ಗೆಳತಿ ನಳಿನಿ ನಿಮಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು,,ಇದೇ ಜೀವನೋತ್ಸಾಹವನ್ನು ಕೊನೆಯ ಉಸಿರಿನವರೆಗೂ ಭಗವಂತ ನಿಮಗೆ ದಯಪಾಲಿಸಲಿ
 
ಸಹೋದರಿ ನಳಿನಿ ಸೋಮಯಾಜಿಯವರಿಗೆ ಜನುಮದಿನದ ಶುಭಾಶಯಗಳು ನಿಮ್ಮ ಜೀವನದಲ್ಲಿ ಭಗವಂತನ ಸಂಪೂರ್ಣವಾದ ರಕ್ಷಣೆ ಇರಲಿ ಇಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ನಾರಾಯಣ ನಾರಾಯಣ ನಾರಾಯಣ 
ಇವರು ಹಲವಾರು ವರ್ಷಗಳಿಂದ ನನ್ನ ಆತ್ಮೀಯ ಸ್ನೇಹಿತರಾಗಿರುವುದು ನನ್ನ ಸೌಭಾಗ್ಯ. ಇವರಿಗೆ ಜನ್ಮದಿನದ ಅಂಗವಾಗಿ ಹಾರ್ದಿಕ ಶುಭಾಶಯಗಳು.

" ಪಾಕಪ್ರವೀಣೆ ನಳಿನಿಗೆ ಜನ್ಮದಿನದ ಹೆಮ್ಮೆಯ ಶುಭಾಶಯಗಳು ಕಣಮ್ಮಾ " ಆಯುರಾರೋಗ್ಯದಿಂದ ಸದಾಕಾಲ ಸಂತೋಷವಾಗಿರಮ್ಮಾ 

 
ಜನ್ಮದಿನದ ಹಾರ್ದಿಕ ಶುಭಾಶಯಗಳು ಮೇಡಂ 💐💕
ಆಯುರಾರೋಗ್ಯದೊಂದಿಗಿನ ತುಂಬು ಜೀವನೋತ್ಸಾಹವುಳ್ಳ ಚೆಂದದ ಬದುಕು ನಿಮ್ಮದಾಗಲಿ

Happy birthday Nalini. Many happy returns. It’s my birthday too. I don’t know how you showed up on my fb. But I enjoy your happy spirits and posts

Happy Birthday.May God bless you with good health and happiness and more and more talents

Vijaya Kadiyali
ಸಾವಿರ ಅಗ್ನಿ ಕುಂಡ ದಲ್ಲಿ ಪುಟಿದೆದ್ದ ಬಂಗಾರ ನೀನು.  ನಿನಗೆ ಹುಟ್ಟು ಹಬ್ಬದ ಶುಭಾಶಯಗಳು 

Happy Birthday..... God Bless.....

Posted 31/7/2026