Showing posts with label SHIVARAMA KARANTHA VEDIKE. Show all posts
Showing posts with label SHIVARAMA KARANTHA VEDIKE. Show all posts

Monday, September 21, 2026

ಸೆಪ್ಟಂಬರ್ ತಿಂಗಳ ಕಾರ್ಯಕ್ರಮ - ಶಿವರಾಮ ಕಾರಂತ ವೇದಿಕೆ

 ಭಾನುವಾರ, ಸೆಪ್ಟೆಂಬರ್ 20, 2026 

ತರಳಬಾಳು ಕೇಂದ್ರ ಗ್ರಂಥಾಲಯ, ಆರ್. ಟಿ. ನಗರ, ಬೆಂಗಳೂರು.

ಶಿವರಾಮ ಕಾರಂತ ವೇದಿಕೆಯು ತಿಂಗಳ ಕಾರ್ಯಕ್ರಮದಲ್ಲಿ ಡಾ ವಸುಂದರಾ ಭೂಪತಿ ಮುಖ್ಯ ಅತಿಥಿಯಾಗಿ ಭಾಗವಹಿಸಿ " ಮಹಿಳಾ ಸಬಲೀಕರಣ ಬಗ್ಗೆ" ಅದ್ಬುತವಾಗಿ ಮಾತನಾಡಿದರು. ಡಾ.ಜಗದೀಶ ಅವರು ಮಾತನಾಡಿ ಶಿಕ್ಷಣದ ಮಹತ್ವದ ಬಗ್ಗೆ ವಿವರಿಸಿದರು. 













ಡಾ ಉಮಾದೇವಿ ಅವರ ಸೊಗಸಾದ ನಿರೂಪಣೆ ,ಶ್ರೀಮತಿ ಮಂಜುಳಾ ಅವರ ಕಾರ್ಯಕ್ರಮ ನಿರ್ವಹಣೆ ಜೊತೆಗೆ ಶ್ರೀ ಸುಧೀಂದ್ರ ಮತ್ತು ಶ್ರೀಮತಿ ಕೈವಲ್ಯ ಅವರ ಸಹಕಾರದಿಂದ ಇಡೀ ಕಾರ್ಯಕ್ರಮ ಅಚ್ಚು ಕಟ್ಟಾಗಿ ನಡೆಯಿತು. ಶ್ರೀ ಕೋಟೆಯವರು ಪ್ರಾರ್ಥನೆಯನ್ನು ಸಲ್ಲಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಶ್ರೀ ಚಂದ್ರಶೇಖರ ಚಡಗರು ಗೌರವ ಸಮರ್ಪಣೆ ಮಾಡಿದರು.

ಕಾರ್ಯದರ್ಶಿ : ಮಂಜುಳಾ ಭಾರ್ಗವಿ
ಸೆಪ್ಟೆಂಬರ್ 20.2026.ರ ತಿಂಗಳ  ಕಾರ್ಯಕ್ರಮದ ಒಂದು ವರದಿ.

ಮೊದಲಿಗೆ ವಿಶೇಷ ಅತಿಥಿಗಳಾದ ಕರ್ನಾಟಕ ಪ್ರಕಾಶಕರ ಸಂಘದ ಅಧ್ಯಕ್ಷರಾದ ಡಾ. ವಸುಂಧಾರಾ ಭೂಪತಿಯವರನ್ನು ಹಾಗೂ ಡಾ. ಜಗದೀಶ್ ಎಚ್. ( ನಿವೃತ್ತ ಪ್ರಾoಶುಪಾಲರು. ಬಿ ಎಂ. ಎಸ್. ಕಾಲೇಜು) ಇವರುಗಳನ್ನು ಅಧ್ಯಕ್ಷರೊಂದಿಗೆ ವೇದಿಕೆಗೆ ಆಹ್ವಾನಿಸಲಾಯಿತು.ನಾಡಗೀತೆಗೆ ಗೌರವ ಸಲ್ಲಿಸಿ,
ಶ್ರೀ ಚಿದಂಬರ ಕೋಟೆಯವರಿಂದ ವಿಘ್ನವಿನಾಯಕನ ಪ್ರಾರ್ಥನೆಯನ್ನು ಹಾಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಅತ್ಯಂತ ಮಧುರ ಕಂಠದಿಂದ ಹಾಡಿದ  ಚಿದಂಬರ ಕೋಟೆಯವರಿಗೆ ಧನ್ಯವಾದಗಳನ್ನು ಹೇಳಿದ ಬೆನ್ನಲ್ಲೇ, ಡಾ.ವಸುಂಧರಾ ಭೂಪತಿಯವರ ಮಾತುಗಳಿಗೆ ಕಿವಿಗಳಾಗಲು ನಾವೆಲ್ಲ ಸಜ್ಜಾದೆವು. "ಶಿಕ್ಷಣದಿಂದ ಮಹಿಳಾ ಸಶಕ್ತೀಕರಣ ಸಾಧ್ಯವಾಗಿದೆಯೇ"? ಎಂಬ ವಿಷಯವನ್ನು ಹೊತ್ತು ತಂದಿದ್ದ ಡಾ. ವಸುಂಧರಾ ಮೇಡಂ, ಮೊದಲಿಗೆ  ಶಿವರಾಮ ಕಾರಂತರ ಬಗ್ಗೆ ಅತ್ಯಂತ ಅಭಿಮಾನದಿಂದಲೂ, ಕಾರಂತರು ವೈಜ್ಞಾನಿಕವಾಗಿ,ಸಾಮಾಜಿಕವಾಗಿ, ತೆರೆದುಕೊಳ್ಳುತ್ತಿದ್ದ ಬಗೆಗೆ ಕೌತುಕ ವ್ಯಕ್ತಪಡಿಸಿ, ತದ ನಂತರ ಕಾರಂತರು ತಮ್ಮ ನಡೆ, ನುಡಿ, ಯಕ್ಷಗಾನ,ಬಾಲ ಸಂಪುಟ, ಭೌತವಿಜ್ಞಾನ,ಸಾಹಿತ್ಯದ ಮೂಲಕ ಸಮಾಜಕ್ಕೆ ನೀಡಿದ ಕೊಡುಗೆಗಳನ್ನು ಚಿಕ್ಕದ್ದಾಗಿ ಚೊಕ್ಕವಾಗಿ ಹೆಸರಿಸುತ್ತಲೇ,ನಮಗರಿವಿಲ್ಲಯೇ, ತಮ್ಮ ಮುಖ್ಯ ವಿಷಯಕ್ಕೆ ನಮ್ಮನ್ನೆಲ್ಲ ಕೊಂಡೊಯ್ದಿದ್ದರು.

" ಪುಸ್ತಕಗಳ ಮಧ್ಯೆ ಸಾಹಿತ್ಯ ಚರ್ಚೆ ಎಂದರೆ ಇದೇ ನಿಜವಾದ ಮಹಿಳೆಯರ ಸಬಲೀಕರಣ" ಎಂದು ಹೇಳಿ ಮೊದಲನೇ ಮಾತಿನಲ್ಲೇ ಎಲ್ಲರ ಹೃದಯ ಗೆದ್ದರು.ನಂತರ ಜಿ. ಎಸ್. ಶಿವರುದ್ರಪ್ಪನವರ ಕವಿತೆ "ದಾಟಿ ಬಾ ನಿರ್ಭಯದ ನಿಲುವಿಗೆ"  ಕವಿತೆಯನ್ನು ನೆನೆಯುತ್ತ, ಹೆಣ್ಣು ಮಕ್ಕಳು ಮಹಾದೇವಿಯoತೆ ಮನೆ ಕಟ್ಟುವರು, ಮನ ಕಟ್ಟುವವರು, ಎಂದು  ಅತ್ಯಂತ ಸ್ಪಷ್ಟವಾಗಿ ಹೇಳಿ,ನಮ್ಮನ್ನೇ ನಾವು ಮುಕ್ತ ಮನಸಿನಿಂದ ಅವರ ಮಾತುಗಳಿಗೆ ತೆರೆದು ಕೊಳ್ಳುವoತೆ ಮಾಡಿತು. ಈ ದಿನಗಳಲ್ಲಿ ರಾಜಕೀಯದಲ್ಲಿ ಹೆಣ್ಣು ಮಕ್ಕಳನ್ನು ಎರಡನೇ ದರ್ಜೆಯ ಪ್ರಜೆ ಎಂದೇ ಗುರುತಿಸಲ್ಪಡುತ್ತಿರುವ ಈ ನಮ್ಮ ಸಮಾಜದಲ್ಲಿ ಮಹಿಳೆಯರು ಭೂಮಿಯಿಂದ ಆಗಸದ ವರೆಗೂ ಮಾಡಲ್ಪಟ್ಟ ಸಾಧನೆಗಳು, ಕಂಪನಿಗಳಲ್ಲಿ ಹನ್ನೆರಡು, ಹದಿನಾಲ್ಕು ಗಂಟೆಗಳ ಕೆಲಸ ಮಾಡಿ, ಮನೆಗೆ ಬಂದು ತಮ್ಮ ಕೆಲಸಕಾರ್ಯಗಳಲ್ಲಿ ತೊಡಗಿ ಕೊಳ್ಳುವ ಹೆಣ್ಣುಮಕ್ಕಳ ಸ್ಥಾನ ಮಾನಗಳ ಮಾತನಾಡುತ್ತಾ, ಪೌರಾಕಾರ್ಮಿಕರಾಗಿ ಇಂದು ಸಮಾಜದಲ್ಲಿ ಮಹಿಳೆಯರ ಪಾತ್ರ ಎಂಥದ್ದು? ಎಂದು ಹೇಳುತ್ತಾ. ಕುವೆಂಪುರವರು ಮಹಿಳೆಯರನ್ನು ಕುರಿತು " ಗೃಹತಪಸ್ವಿನಿ "ಎಂದು ಹೇಳಿದ ಮಾತನ್ನು ಉಲ್ಲೇಕಿಸುತ್ತ,ಅಕ್ಷರಕ್ಕೆ ಮಹಿಳೆಯರು ತೆರೆದು ಕೊಂಡದ್ದು ಸ್ವಲ್ಪ ತಡವೇ ಆದರೂ ಕೂಡ, ಅಕ್ಕಮಹಾದೇವಿ, ಸತ್ಯಕ್ಕ, ಬಾಲಸರಸ್ವತಿ, ಗಂಗೂಬಾಯಿ ಹಾನಗಲ್, ಎಂ.ಎಸ್ ಸುಬ್ಬಲಕ್ಷ್ಮಿ, ರೈತ ಹೆಣ್ಣುಮಕ್ಕಳು, ಸೇನೆಯಲ್ಲಿ ಕಮಾಂಡೋಗಳಾಗಿ, ಲೈನ್ ವುಮನ್ ಆಗಿ, ನಮ್ಮ ಸಮಾಜಕ್ಕೆ ಸೇವೆಸಲ್ಲಿಸಿರುವುದನ್ನು,
ಇನ್ನೂ ಅನೇಕ ಹೆಣ್ಣುಮಕ್ಕಳು ಈಗಲೂ ಕೂಡ ನಮ್ಮ ಸಮಾಜ ಕಟ್ಟುವ ಬಗ್ಗೆ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಬಗ್ಗೆ ಅತ್ಯಂತ ಸ್ವಾರಸ್ಯಕರವಾಗಿ ಮಾತನಾಡಿದರು. ಈಗಿನ ಕಾಲದಲ್ಲಿ ಹೆಣ್ಣು ಮಕ್ಕಳ ಮೇಲೆ ಆಗುತ್ತಿರುವ ಬಾಲ್ಯ ವಿವಾಹ,ಅತ್ಯಾಚಾರಗಳು, ಹೆಣ್ಣು ಭ್ರೂಣಹತ್ಯೆಗಳು, ಕೊಳ್ಳುಬಾಕ ಸಂಸ್ಕೃತಿ, ಸ್ಯಾರೋಗೆಟ್ ಮದರ್, ಮರ್ಯಾದೆ ಹತ್ಯೆ, ಆಸ್ತಿಯಲ್ಲಿ ಹಕ್ಕಿಲ್ಲ, ಎಂಬ ಧೋರಣೆ, ಈ ಎಲ್ಲವೂ ಕೂಡ ಬದಲಾಗಬೇಕಿದೆ, ನಮ್ಮ ಸಮಾಜಕ್ಕೆ ಮಾರಕವಾದ ಈ ಎಲ್ಲಾ ಕೆಟ್ಟ ವಿಷಯಗಳ ವಿರುದ್ಧ ಹೋರಾಡಲು ಎಲ್ಲರಿಗೂ ತಕ್ಕ ರೀತಿಯಲ್ಲಿ ಶಿಕ್ಷಣದ ಉದ್ದೇಶ, ಸಾಹಿತ್ಯದ ಉದ್ದೇಶಗಳನ್ನು ತಿಳಿಸಬೇಕಿರುವುದು ಪ್ರತಿಯೊಬ್ಬರ ಕರ್ತವ್ಯವಾಗಬೇಕು ಎಂದು ಹೇಳುತ್ತಾ, ತಮ್ಮ ವೃತ್ತಿ ಜೀವನದಲ್ಲಿ ಕಂಡ ಕೆಲವು ಸತ್ಯ ಸಂಗತಿಗಳನ್ನು ಉದಾಹರಣೆ ಮೂಲಕ ಹೇಳುತ್ತಾ, ತಮ್ಮ ಅಮೂಲ್ಯ ನುಡಿಗಳನ್ನು ನಮ್ಮ ಮುಂದಿಟ್ಟರು. ನಿಜಕ್ಕೂ ಅವೆಲ್ಲ ಮಾತುಗಳು ಹೆಣ್ಣು ಮಕ್ಕಳಿಗಷ್ಟೇ ಅಲ್ಲಾ ಪುರುಷರಿಗೂ ಕೂಡ ಬಹಳ ಉತ್ಸಾಹ ಮೂಡಿಸಿದ್ದು ಸುಳ್ಳಲ್ಲ. ಇಂಥ ಒಂದೆರಡು ಉಪನ್ಯಾಸಗಳನ್ನು ಶ್ರದ್ಧೆಯಿಂದ ಆಲಿಸಿದರೆ ಸಾಕು ಹೆಣ್ಣು ಅಥವಾ ಗಂಡು ಯಾರೇ ಆಗಲಿ,ಎಂದಿಗೂ ಜೀವನದಲ್ಲಿ ಸೋಲುವುದಿಲ್ಲ ಎನಿಸಿತು.

ಇದಾದ ನಂತರ ಡಾ. ಜಗದೀಶ್ ರವರು ಒಂದೆರಡು ಮಾತುಗಳನ್ನು ಆಡುತ್ತ, ಹಾಸ್ಯದೊಂದಿಗೆ ಶಿವರಾಮ ಕಾರಂತ ವೇದಿಕೆಯ ಅಧ್ಯಕ್ಷರಾದ ಶ್ರೀ ವೀರಶೇಖರ ಸ್ವಾಮಿಯವರಿಗೆ ಮಾತಿಗಾಗಿ ಅವಕಾಶ ಮಾಡಿ ಕೊಟ್ಟರು. ಹೆಣ್ಣು ಮಕ್ಕಳ ಬಗ್ಗೆ,ಅಧ್ಯಕ್ಷರ ಭಾವ ತುಂಬಿದ ಮಾತುಗಳು,ಬಹಳ ಸಹ್ಯವೆನಿಸಿದವು. ಹೆಣ್ಣು ಮಕ್ಕಳು ಕೋಟೆಯಾದರೂ ಸರಿ, ಕೋಣೆಯಾದರು ಸರಿ,ಬಹಳ ಅಚ್ಚುಕಟ್ಟಾಗಿ ತಮ್ಮ ಕರ್ತವ್ಯ ನಿರ್ವಹಿಸಬಲ್ಲರು ಎಂಬ ಉತ್ತೇಜನ ನುಡಿಗಳಿಂದ ತಮ್ಮ ಪುಟ್ಟ ಭಾಷಣಕ್ಕೆ ವಿರಾಮ ಕೊಟ್ಟರು. ನಂತರ ಕೋಶಧಿಕಾರಿಗಳು, ಹಾಗೂ ಸಂಸ್ಥಾಪಕರಾದ ಶ್ರೀಚಂದ್ರಶೇಖರ ಚಡಗರ ವಂದನಾರ್ಪಣೆಯೊಂದಿಗೆ ಕಾರ್ಯಕ್ರಮ ಶುಭಮುಕ್ತಾಯವಾಯಿತು.



Posted  21/9/2026 







Monday, August 24, 2026

ಸ್ವಾತಂತ್ರ್ಯ ಸಂಭ್ರಮ 2026 - ಶಿವರಾಮ ಕಾರಂತ ವೇದಿಕೆ

 ಭಾನುವಾರ, ಆಗೋಸ್ಟ್ 23, 2026 

ತರಳಬಾಳು ಕೇಂದ್ರ, ಗ್ರಂಥಾಲಯ, ಆರ್. ಟಿ. ನಗರ, ಬೆಂಗಳೂರು. 

ಶಿವರಾಮ ಕಾರಂತ ವೇದಿಕೆ, ಆರ್. ಟಿ. ನಗರ, ಬೆಂಗಳೂರು , 80 ನೇ ಸ್ವಾತಂತ್ರ್ಯ ದಿನಾಚಾರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು. 





ನೂತನವಾಗಿ ಅಧ್ಯಕ್ಷ ಸ್ಥಾನ ಸ್ವೀಕರಿಸಿದ ನಂತರ, ಶ್ರೀ ವೀರಶೇಖರ ಸ್ವಾಮಿಯವರು ಅತ್ಯಂತ ಕಾಳಜಿಯಿಂದ ಕಾರ್ಯಕ್ರಮವನ್ನು ಹಮ್ಮಿಕೊಂಡು ನಿಭಾಯಿಸಿದರು. 

ಶ್ರೀಮತಿ ನಳಿನಿ ಚಡಗ - ಪ್ರಾರ್ಥನೆ 

ಶ್ರೀ ಚಂದ್ರಶೇಖರ ಚಡಗ - ಸ್ವಾಗತ 


ಶ್ರೀಮತಿ ನಳಿನಿ ಚಡಗ ಅವರಿಂದ ಪ್ರಾರ್ಥನೆಯಾದ ನಂತರ ವೇದಿಕೆಯ ಸಂಸ್ಥಾಪಕ/ಕೋಶಾಧಿಕಾರಿಯಾದ ಶ್ರೀಯುತ ಪಾ. ಚಂದ್ರಶೇಖರ ಚಡಗ ಅವರು ಪ್ರಾಸ್ತಾವಿಕ ನುಡಿಯನ್ನು ಆಡಿ ಅತಿಥಿಗಳನ್ನು, ಸಭಿಕರನ್ನು  ಸ್ವಾಗತಿಸಿದರು.
ಶ್ರೀ ಚಂದ್ರಶೇಖರ ಕಾರಂತ 

ಇದೇ ಸಂದರ್ಭದಲ್ಲಿ , ಇತ್ತೀಚೆಗೆ ನಿಧನರಾದ ವೇದಿಕೆಯ ಮಾಜಿ ಕೋಶಾಧಿಕಾರಿ ಶ್ರೀ ಚಂದ್ರಶೇಖರ ಕಾರಾಂತರಿಗೆ ಶ್ರದ್ಧಾಂಜಲಿಯನ್ನು ಅರ್ಪಿಸಲಾಯಿತು.



ಮನರಂಜನಾ ಕಾರ್ಯಕ್ರಮದಲ್ಲಿ ಶ್ರೀ ಚಿದಂಬರ ಕೋಟೆ, ಯಶಸ್ವಿನಿ, ಶ್ರೀಮತಿ ರಜನಿ ರಾಧಾಕೃಷ್ಣನ್  ಹಾಗೂ ತಂಡದವರಿಂದ ಇತ್ತೀಚೆಗೆ ನಿಧನರಾದ ಖ್ಯಾತ ಹಿನ್ನೆಲೆ ಗಾಯಕಿ ಎಸ್. ಜಾನಕಿ ಅಮ್ಮ ಅವರಿಗೆ "ಗಾಯನ ಶ್ರದ್ಧಾಂಜಲಿ" ಯನ್ನು ಅರ್ಪಿಸಲಾಯಿತು.

ಎಸ್. ಜಾನಕಿ ಅಮ್ಮ 

ವೀರಶೇಖರ ಸ್ವಾಮಿಯವರಿಂದ ಅಧ್ಯಕ್ಷ  ಭಾಷಣದ ನಂತರ ಅತಿಥಿಗಳಿಗೆ ಗೌರವ ಸಮರ್ಪಣೆ, ಶ್ರೀಮತಿ ಕೈವಲ್ಯ ಅರಸ್ ಅವರಿಂದ ಧನ್ಯವಾದ ಸಮರ್ಪಣೆ ನಡೆಯಿತು.




ವೇದಿಕೆಯ ಕಾರ್ಯದರ್ಶಿ ಶ್ರೀಮತಿ ಮಂಜುಳಾ ಭಾರ್ಗವಿ ಅವರು ಅಚ್ಚುಕಟ್ಟಾಗಿ ಕಾರ್ಯಕ್ರಮದ ನಿರೂಪಣೆಯನ್ನು ಮಾಡಿದರು. 
ಯಶಸ್ವಿನಿ, ಚಿದಂಬರ ಕೋಟೆ 



Posted  24/8/2026 







 

















Tuesday, July 28, 2026

ವೀಣಾ ವಾದನ - ಕುಮಾರಿ ಲಹರಿ ಭಟ್

 ಭಾನುವಾರ, ಜುಲೈ 26, 2026 

ತರಳಬಾಳು ಕೇಂದ್ರ ಗ್ರಂಥಾಲಯ, ಆರ್. ಟಿ. ನಗರ, ಬೆಂಗಳೂರು. 

ಶಿವರಾಮ ಕಾರಂತ ವೇದಿಕೆ, ಆರ್. ಟಿ. ನಗರ, ಬೆಂಗಳೂರು ಹಮ್ಮಿ ಕೊಂಡಿದ್ದ ಜುಲೈ ತಿಂಗಳ ಕಾರ್ಯಕ್ರಮದಲ್ಲಿ ಕುಮಾರಿ ಲಹರಿ ಭಟ್ ಅವರ ತಂಡದೊಂದಿಗೆ ವೀಣಾ ವಾದನ ಏರ್ಪಡಿಸಲಾಗಿತ್ತು. 



ವೀಣಾ ವಾದನ ಕಛೇರಿಯಲ್ಲಿ ಮೃದಂಗದಲ್ಲಿ ಗೌತಮ್ ಗೋಪಾಲಕೃಷ್ಣ , ತಾಳ ದಲ್ಲಿ ಸುನಿಧಿ ಅರೇಕೆರಿ ಅವರು ಸಾಥ್ ನೀಡಿದ್ದರು. 


ಸುಮಾರು 50 ನಿಮಿಷಗಳ ಕಾರ್ಯಕ್ರಮವು ಅದ್ಭುತವಾಗಿ ಮೂಡಿ ಬಂದಿತ್ತು. 


ವೇದಿಕೆಯ ಕಾರ್ಯದರ್ಶಿ ಶ್ರೀಮತಿ ಮಂಜುಳಾ ಭಾರ್ಗವಿ ಅವರ ವರದಿಯಲ್ಲಿ .. 

ನಂತರ ಕುಮಾರಿ ಲಹರಿ ಭಟ್ ಮತ್ತು ತಂಡದವರಾದ ಗೌತಮ್ ಗೋಪಾಲ ಕೃಷ್ಣ, ಸುನಿಧಿ ರವರಿಂದ ವೀಣಾ ವಾದನ ಕಾರ್ಯಕ್ರಮ ಪ್ರಾರಂಭವಾಯಿತು. ದೇವಲೋಕದ ಗಂಗೆ ಭಗೀರಥನ ಮೂಲಕ ಭೂಮಿಗೆ ಇಳಿದು ಬಂದು ನಮ್ಮ ಪಾಪಗಳನ್ನೆಲ್ಲ ತೊಳೆದು ಹೋದಂತಹ ಅನುಭವ ಈ ವೀಣಾ ವಾದನದ ಮೂಲಕ ನಮಗೆ ದೊರಕಿತೇನೋ ಎನ್ನುವ ಅನುಭವ ನಿಜಕ್ಕೂ,ಮಾತಿನ ಎಣಿಕೆಗೆ ಸಿಗಲಾರದು.

ಗಜವದನ ಬೇಡುವೆ ಆದ ನಂತರ ಸಾಮಜವರಗಮನ, ಬಹಳ ಅದ್ಭುತವಾಗಿ ಬಂತು.ಪಿಳಂಗೊವಿಯ ಚೆಲ್ವಾ ಕೃಷ್ಣ ಇಂದು ಹಾಡಿನ  ವೀಣಾ ವಾದನದ ಮೂಲಕ, ಇಳಿದು ಬಂದನೇನೋ ಅನಿಸ್ತಾ ಇತ್ತು..ಬ್ರಹ್ಮಮೊಕ್ಕಟೆ ಪರ ಬ್ರಮ್ಮಮ್ಮೋಕ್ಕಟೆ..ಶಂಭೋ ಸ್ವಯಂಭೋ, ತಾರಕ್ಕ ಬಿಂದಿಗೆ ನಾನೀರಿಗೆ ಹೋಗುವೆ. ಭಾಗ್ಯದ ಲಕ್ಷ್ಮಿ ಬಾರಮ್ಮ. ತಂಬೂರಿ ಮಿಟಿದವ ಮತ್ತೇರಡು ಹಾಡುಗಳನ್ನು ತಮ್ಮ ವೀಣಾ ವಾದನದ ಮುಖಾಂತರ ಪ್ರಸ್ತುತ ಪಡಿಸಿ ನಮ್ಮನ್ನೆಲ್ಲ ಪರಕಾಯ ಪ್ರವೇಶಕ್ಕೆ ಕೊಂಡೋಯ್ದಿದ್ದಾರೆ.. .. ಅಬ್ಬಾ 
ನಿಜಕ್ಕೂ ಸಾರಸ್ವತ ಲೋಕ ಎಲ್ಲಾ ಲೋಕಗಳಿಗಿಂತ ಭಿನ್ನ ಅನ್ನೋದು ಪ್ರತಿಯೊಬ್ಬರ ಅನುಭವಕ್ಕೂ ಬರಬೇಕು.  ಈ ಮೂಲಕ ಇಂತ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಕನ್ನಡಮ್ಮನ ತೇರು ಹೀಗೇ ಸಾಗುತ್ತಿರಲಿ ಅನ್ನುವ ಆಶಯದೊಂದಿಗೆ ಮತ್ತೊಮ್ಮೆ ಕುಮಾರಿ ಲಹರಿ ಭಟ್ ರವರಿಗೆ ಮತ್ತು ಅವರ ತಂಡದವರಿಗೆ ಅತ್ಯಂತ ತುಂಬು ಹೃದಯದಯದಿಂದ ..ಧನ್ಯವಾದಗಳನ್ನ ಅರ್ಪಿಸುತ್ತಿದ್ದೇವೆ. ಕಾರ್ಯಕ್ರಮದ ಅಂತಿಮ ಘಟ್ಟ.. ವಂದನಾರ್ಪಣೆಯೊಂದಿಗೆ ಮುಕ್ತಾಯಗೊoಡಿತು.


ಕುಮಾರಿ ಲಹರಿ ಭಟ್ 

ಗೌತಮ್ ಗೋಪಾಲಕೃಷ್ಣ 

ಕಲಾವಿದರನ್ನು ಶಾಲು, ಹೂ, ಹಾರ ಮತ್ತು ಉಡುಗೊರೆ ಯೊಂದಿಗೆ ಸನ್ಮಾನ ಮಾಡಲಾಯಿತು.
ಕಲಾವಿದರ ಪರಿಚಯ: 
ಕುಮಾರಿ ಲಹರಿ ಭಟ್ 

ಗೌತಮ್ ಗೋಪಾಲಕೃಷ್ಣ 
ಲಹರಿ ಮತ್ತು ತಂಡದವರಿಗೆ ಶಿವರಾಮ ಕಾರಂತ ವೇದಿಕೆಯು ಶುಭವನ್ನು ಹಾರೈಸುತ್ತದೆ. 


Posted 28/7/2026 








 




Monday, July 27, 2026

ಜುಲೈ ತಿಂಗಳ ಕಾರ್ಯಕ್ರಮ - ವಿಶೇಷ ಉಪನ್ಯಾಸ

 ಭಾನುವಾರ, ಜುಲೈ 26, 2026 

ತರಳಬಾಳು ಕೇಂದ್ರ ಗ್ರಂಥಾಲಯ, ಆರ್. ಟಿ. ನಗರ, ಬೆಂಗಳೂರು. 


ಜುಲೈ ತಿಂಗಳ ಶಿವರಾಮ ಕಾರಂತ ವೇದಿಕೆಯ  ಕಾರ್ಯಕ್ರಮದಲ್ಲಿ ಡಾ ರಾಜಶೇಖರ ನಾಗುರ ಅವರು ಅತಿಥಿಗಳಾಗಿ " ಪ್ರಾಚೀನ ಕನ್ನಡ ಸಾಹಿತ್ಯ ಹಾಗೂ ಆಧುನಿಕ ಕನ್ನಡ ಸಾಹಿತ್ಯ ಬೆಳೆದು ಬಂದ ಹಾದಿ" ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದರು. 

ಹದಿನೈದು ನಿಮಿಷಗಳ ಕಾಲ ಉಪಹಾರ ಸೇವನೆ, ಮುಖ್ಯ ಅತಿಥಿಗಳ ಆಗಮನ, ಎಲ್ಲವೂ ಸಿದ್ಧವಾಯಿತು. 4.15 ಕ್ಕೆ ಸರಿಯಾಗಿ ಕಾರ್ಯಕ್ರಮ ಪ್ರಾರಂಭವಾಯಿತು.
ಮೊದಲಿಗೆ ಮುಖ್ಯ ಅತಿಥಿಗಳಾದ ಡಾ.ಶ್ರೀ ರಾಜಶೇಖರ ನಾಗೂರರನ್ನು ವೇದಿಕೆಗೆ ಆಹ್ವಾನಿಸಲಾಯಿತು.ಜೊತೆಗೆ ನಮ್ಮ ಉಪಾಧ್ಯಕ್ಷರು ಕೂಡ ವೇದಿಕೆಯಲ್ಲಿ ಉಪಸ್ಥಿತರಿದ್ದರು. ನಂತರ ಕುಮಾರಿ ಅದ್ವಿಕಾ. ಎನ್. ಕೆನ್ ಶ್ರೀ ಶಾಲೆಯ ಏಳನೇ ತರಗತಿಯ ವಿದ್ಯಾರ್ಥಿನಿಯು ಚಂದದ "ಪಿಳ್ಳoಗೋವಿಯ ಚೆಲ್ವ ಕೃಷ್ಣನ ಎಲ್ಲಿ ನೋಡಿದಿರಿ "ಎಂಬ ಪ್ರಾರ್ಥನೆಯನ್ನೂ ಮಾಡುತ್ತ ಕಾರ್ಯಕ್ರಮಕ್ಕೆ ಮೆರುಗು ತಂದು ಕೊಟ್ಟಳು. ನಂತರ ವೇದಿಕೆಯ ಉಪಾಧ್ಯಕ್ಷರಾದ ಶ್ರೀ ವೀರಶೇಖರ ಸ್ವಾಮಿಗಳು ಮುಖ್ಯ ಅತಿಥಿಗಳಿಗೆ ಹಾಗೂ ಸಭೆಗೆ ಸ್ವಾಗತ ಕೋರಿದರು.

ಇದಾದ ಬಳಿಕ, 
ಮುಖ್ಯ ಅತಿಥಿಗಳು ಸಭೆಯನ್ನು ಕುರಿತು ಅತ್ಯಂತ ಹೆಮ್ಮೆಯ ನುಡಿಗಳನ್ನು ಆಡುತ್ತಾ, ತಮಗೆ ಒದಗಿ ಬಂದ ಅವಕಾಶಕ್ಕಾಗಿ ಹಿರಿಯ ಕವಿಮಹಾಶಯರಿಗೆ ವಂದಿಸುತ್ತಾ, ಕಾರಂತರ ನಾಮಸ್ಮರಣೆ ಮಾಡುತ್ತಾ "ಪ್ರಾಚೀನ ಕನ್ನಡ ಸಾಹಿತ್ಯ ಮತ್ತು ಆಧುನಿಕ ಕನ್ನಡ ಸಾಹಿತ್ಯ ಬೆಳೆದು ಬಂದ ಹಾದಿ "ಈ ಕುರಿತು ತಮ್ಮ ಅಮೂಲ್ಯವಾದ ನುಡಿಗಳನ್ನು ಹೇಳುತ್ತಾ, ಕಾರ್ಯಕ್ರಮವು ಮತ್ತಷ್ಟು ಕಳೆ ಕಟ್ಟುವಂತೆ ಮಾಡಿದರು..


ರನ್ನ, ಪೊನ್ನ, ಪಂಪನ ಬಗೆಗೆ ಮಾತನಾಡುತ್ತಾ, ಆದಿ ಪುರಾಣ, ಶಾಂತಿ ಪುರಾಣ, ರನ್ನನ ಗಧಾಯುದ್ಧ, ಈ ಕುರಿತು ಅನೇಕ ಹೆಮ್ಮೆಯ ನುಡಿಗಳನ್ನು ಆಡಿದರು. ನವ್ಯ ಸಾಹಿತ್ಯದ ಕುರಿತು ಹೇಳುವಾಗ, ಭಕ್ತಿಪoಥ, ಸಾಮಾಜಿಕ ಚಳುವಳಿಗಾರರಾದ ಬಸವಣ್ಣನವರನ್ನು ಮೊದಲುಗೊಂಡು,ಅನೇಕ ಆಧುನಿಕ ಕವಿಗಳನ್ನು ಕೂಡ ತಮ್ಮ ಮಾತುಗಳಲ್ಲಿ ಸ್ಮರಣಿಸಿ ಕೊಂಡರು.

ಕುವೆಂಪು, ಬೇಂದ್ರೆ, ಮಾಸ್ತಿ ವೆಂಕಟೇಶ್ ಅಯ್ಯಂಗಾರ್, ಕಾರಂತರು ಹೀಗೆ ಎಲ್ಲರ ಸಾಹಿತ್ಯ ರಚನೆಯ ಪ್ರಾಕಾರಗಳನ್ನು ಕುರಿತು ಹೇಳುತ್ತಾ" ಸಾಹಿತ್ಯವೆನ್ನುವುದು ಮನುಷ್ಯನ ಸರ್ವತೋಮುಖ ಬೆಳವಣಿಗೆಗೆ ಹೇಗೆ ಕಾರ್ಯಸಿದ್ಧಿಯಾಗಿದೆ, ಮತ್ತು ಸಾಹಿತ್ಯವಿಲ್ಲದ ಜೀವನ ಹೇಗೆ ಬರಡಾಗುತ್ತದೆ ಎಂಬುದರ ಕುರಿತು, ಅತ್ಯಂತ ಸ್ವಾರಸ್ಯಕರವಾಗಿ ಮಾತನಾಡಿದರು. ಸುಮಾರು 45 ನಿಮಿಷಗಳ ಕಾಲ ಹೇಗೆ ಹೋಯಿತು,ಎಂಬುದು ತಿಳಿಯಲೇ ಇಲ್ಲ.



ಉಪನ್ಯಾಸದ ನಂತರ ಶ್ರೀ ರಾಜಶೇಖರ ನಾಗುರ ಅವರನ್ನು ಶಾಲು, ಹಾರ, ಹೂಗುಚ್ಚ, ಉಡುಗೊರೆಯೊಂದಿಗೆ ಸನ್ಮಾನಿಸಲಾಯಿತು. 

ತದ ನಂತರ ಕುಮಾರಿ ಲಜಾರಿ ಭಟ್ ಅವರ  "ವೀಣಾ ವಾದನ "   ಮುಂದಿನ ಕಾರ್ಯಕ್ರಮಕ್ಕೆ ವೇದಿಕೆಯನ್ನು ಸಜ್ಜು ಗೊಳಿಸಲಾಯಿತು. 


Posted 28/6/2026





GENERAL BODY MEETING- 2026

 Sunday, July 26, 2026

TaralaBalu Kendra Granthalaya, R,T. Nagara, Bengaluru.

The Annual Genaral Body Meeting of Shivarama Karantha Vedike held  at the  Granthalaya of TaralaBalu Kendra, Bengaluru.


MANJULA BHARGAVI


After the NAADAGEETHE singing, Dr Deepa Phadke, President, Shivarama Karantha Vedike, welcomed the memebrs present and gave an account the accomplishments of the Vedike in the year 2025 - 26.

NAADA GEETHE 

DEEPA PHADKE


Vedike Secretary, Mrs Manjula Bhargavi, informed the achiements in her reposrt, including the programs happened during the year 2025-26, and the YouTube channel containing more tha 35 novels of Shivarama Karntha.

ಎಲ್ಲರಿಗೂ ನಮಸ್ಕಾರ.
ಭಾನುವಾರದ ವಾರ್ಷಿಕ ಮಹಾಸಭೆಯ ಒಂದು ನೋಟ.

"ಯಾರಿಗೂ ಉಪದೇಶ ಮಾಡಬೇಡಿ. ನೀವೇನು ಹೇಳಬೇಕೆಂದಿದ್ದಿರೋ ಹಾಗೆ ಬದುಕಿ ತೋರಿಸಿರಿ "ಎಂಬ ಕಾರಂತರ  ಈ ನುಡಿಯನ್ನು ನೆನೆಯುತ್ತಾ

ಎಲ್ಲರಿಗೂ ನಮಸ್ಕಾರ 

ಶಿವರಾಮ ಕಾರಂತ ವೇದಿಕೆ (ರಿ)
ರವೀಂದ್ರನಾಥ ಟಾಗೋರ್ ನಗರ, 
ಬೆಂಗಳೂರು-560032
ಶಿವರಾಮ ಕಾರಂತ ವೇದಿಕೆಯ 2025-26 ರ ವಾರ್ಷಿಕ ವರದಿಯು ಸಂಜೆ ಮೂರು ಗಂಟೆ ಹದಿನೈದು ನಿಮಿಷಕ್ಕೆ ಸರಿಯಾಗಿ ನಡೆಯಿತು. ಅದಕ್ಕೂ ಮುಂಚೆ,ಪ್ರಪ್ರಥಮವಾಗಿ ನಾಡಗೀತೆಯನ್ನು ಎದ್ದು ನಿಂತು ಗೌರವದೊಂದಿಗೆ ಹಾಡಲಾಯಿತು..
ತದ ನಂತರ ವಾರ್ಷಿಕ ಮಹಾ ಸಭೆ 2025-26.ಈ ಕುರಿತು ಮೊದಲಿಗೆ ಅಧ್ಯಕ್ಷರಾದ ಡಾ. ದೀಪ ಫಡ್ಕೆ ಅವರು ತಮ್ಮ ಮೊದಲ ಸ್ವಾಗತ ಮತ್ತು ಪ್ರಾಸ್ತಾವಿಕ ನುಡಿಗಳನ್ನು ಆಡುತ್ತ, ನಮ್ಮ ವೇದಿಕೆ ಬೆಳೆದು ಬಂದ ಹಾದಿ, ಹಾಗೂ ಮುಂದಿನ ಪೀಳಿಗೆಯವರು ಕನ್ನಡಮ್ಮನ ಸಾಹಿತ್ಯದ ತೇರನ್ನು ಹೇಗೆ ನಡೆಸಿ ಕೊಂಡು ಹೋಗಬೇಕಿದೆ ಎಂಬುದನ್ನು ಕುರಿತು,ಬಹಳ ಸೊಗಸಾಗಿ ಹೇಳಿದರು. ನಂತರ 
ವೇದಿಕೆಯ ಕಾರ್ಯದರ್ಶಿಯಾಗಿ ನನ್ನ ವರದಿಯನ್ನು ಓದಿದೆನು. 
ಸನ್ಮಾನ್ಯ ಅಧ್ಯಕ್ಷರೇ,
ವೇದಿಕೆಯ ಗೌರವಾನ್ವಿತ ಪದಾಧಿಕಾರಿಗಳೆ ,ನೆರೆದಿರುವ ಸಕಲ ಸದಸ್ಯರೇ,  ಸನ್ಮಿತ್ರರೇ,
ಸುಮಾರು ಮೂವತ್ತು ವರ್ಷಗಳ ಇತಿಹಾಸವಿರುವ ನಮ್ಮ ಶಿವರಾಮ ಕಾರಂತ ವೇದಿಕೆ(ರಿ) ,ಕನ್ನಡ ಸಾಹಿತ್ಯಿಕ ಕಾರ್ಯಕ್ರಮಗಳ ಜೊತೆ ಜೊತೆಗೆ ಕಲೆ ,ಸಂಸ್ಕೃತಿಗಳ ವರ್ಧನೆಗೂ ಮೀಸಲಿಟ್ಟಿದೆ. ಸಂಸ್ಥೆಯು ಸತತವಾಗಿ ಉಪನ್ಯಾಸ, ನಾಟಕ, ಯಕ್ಷಗಾನ, ಮಕ್ಕಳಿಗೆ ಸಂಬಂಧಿಸಿದಂತೆ ರಸಪ್ರಶ್ನೆ,  ಹೀಗೆ ವಿವಿಧ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿರುತ್ತದೆ. ಬೆಂಗಳೂರಿನ ಪ್ರತಿಷ್ಠಿತ  ಸಾಹಿತ್ಯಕ ಸಂಸ್ಥೆ ಎಂದು ಗುರುತಿಸಲ್ಪಟ್ಟಿದ್ದು,  ಬೆಂಗಳೂರು ಉತ್ತರ ಭಾಗದ ಏಕೈಕ ಸಾಹಿತ್ಯ ವೇದಿಕೆ ಎನ್ನಲು ನಮಗೆ ಬಹಳ ಸಂತೋಷವಾಗುತ್ತದೆ. ಈ ಸಂಸ್ಥೆಯ ಸಂಸ್ಥಾಪಕರಾದ ಶ್ರೀ ಚಂದ್ರ ಶೇಖರ ಚಡಗರವರು  ಈ ವೇದಿಕೆಯ ಏಳಿಗೆಗೆ ಹತ್ತು ಹಲವು ರೀತಿಯಲ್ಲಿ ಕಾರಣರಾದರೆ, ನಮ್ಮ ನಾಡಿನ ಪ್ರಸಿದ್ಧ ಕವಿಗಳು, ಸಾಹಿತಿಗಳು, ವಿಮರ್ಶಕರು, ನಾಟಕಕಾರರು, ಸಂಗೀತಗಾರರು, ವಿದ್ವಾಂಸರು ಬಂದು ವೇದಿಕೆಯ ಗರಿಮೆಯನ್ನು ಮತ್ತಷ್ಟು ಹೆಚ್ಚಿಸಿರುವುದು, ನಮಗೆ ನಿಜಕ್ಕೂ ಹೆಮ್ಮೆ. ಇನ್ನೂ ಈ ವೇದಿಕೆಯಲ್ಲಿ ಅಧ್ಯಕ್ಷರಾಗಿ,  ಪದಾಧಿಕಾರಿಗಳಾಗಿ, ಗುರುತಿಸಿ ಕೊಂಡು ತಮ್ಮ ತನು ಮನ ಧನಗಳಿಂದ, ನಮ್ಮ ಹೆಮ್ಮೆಯ ಶಿವರಾಮ ಕಾರಂತ ವೇದಿಕೆಯ ಪ್ರತಿ ಮುನ್ನಡೆಗೂ ಕಾರಣರಾದ, ಪ್ರತಿ ಸದಸ್ಯರಿಗೂ ಕೂಡ ಅತ್ಯಂತ ತುಂಬು ಹೃದಯದಿಂದ ಅಭಿನಂದನೆಗಳನ್ನು ಸಲ್ಲಿಸುತ್ತಾ,  
ನಮ್ಮ ಸಂಸ್ಥೆಯ ಕಳೆದ ವಾರ್ಷಿಕ 2025-26 ನೇ ಸಾಲಿನ ಮಹಾಸಭೆ ದಿನಾಂಕ  22. 6. 2025 ರ ಭಾನುವಾರ , ಮಧ್ಯಾಹ್ನ 3 ಗಂಟೆಗೆ ಸರಿಯಾಗಿ ತರಳಬಾಳು ಕೇಂದ್ರದ ಗ್ರಂಥಾಲಯ ,2ನೇ ಮಹಡಿ, ಆರ್. ಟಿ. ನಗರ ,ಬೆಂಗಳೂರು-32 ಇಲ್ಲಿ ನಡೆಯಿತು.
2025-26 ರ ವಾರ್ಷಿಕ ವರದಿಯ ವರ್ಷದಲ್ಲಿ ಕೆಳಗೆ ಕಾಣಿಸಿದವರು ಸಂಸ್ಥೆಯ ಏಳಿಗೆಗಾಗಿ ದುಡಿದಿದ್ದಾರೆ.   
ಸಂಸ್ಥಾಪಕರು - ಶ್ರೀ ಪಾ.ಚಂದ್ರಶೇಖರ ಚಡಗ ರವರು
ಅಧ್ಯಕ್ಷರು          - ಡಾ. ದೀಪಾ ಫಡ್ಕೆ
ಗೌರವಾಧ್ಯಕ್ಷರು          - ಶ್ರೀ ಎಸ್.ಆರ್. ವಿಜಯಶಂಕರ
ಉಪಾಧ್ಯಕ್ಷರು - ಡಾ. ಆರ್ .ಆರ್. ಪಾಂಗಾಳ್ ಮತ್ತು ವೀರಶೇಖರ ಸ್ವಾಮಿ
ಕಾರ್ಯದರ್ಶಿ - ಶ್ರೀಮತಿ ಮಂಜುಳಾ ಭಾರ್ಗವಿ
ಕೋಶಾಧಿಕಾರಿಗಳು - ಶ್ರೀ. ಬಿ. ಜಯರಾಮ ಸೋಮಯಾಜಿ
ಕಾರ್ಯಕಾರಿ ಸಮಿತಿಯ ಸದಸ್ಯರು
ಶ್ರೀಮತಿ ಸತ್ಯಭಾಮ ರಂಗೇಗೌಡ
ಶ್ರೀಮತಿ ಅರುಣ ಮಯ್ಯ
ಶ್ರೀಮತಿ ಚೇತನ ಹೆಗಡೆ.
ಶ್ರೀಮತಿ ಸಂಧ್ಯಾ ಮಂಜುನಾಥ್.
ಶ್ರೀ ಸುದೀoದ್ರ 
ಯಕ್ಷಗಾನ ಮತ್ತು ನಾಟಕ ಸಮಿತಿ - ಶ್ರೀ ಕೆ. ಕೃಷ್ಣ ಪ್ರಸಾದ .ಸಂಪನ್ಮೂಲ ಸಮಿತಿ- ಶ್ರೀ ಬಿ.ಎಚ್. ಎಂ. ವೀರಶೇಖರ ಸ್ವಾಮಿ ಮತ್ತು ಶ್ರೀ. ಬಿ.ಜಯರಾಮ ಸೋಮಯಾಜಿ
ಕಾರ್ಯಕಾರಿ ಸಮಿತಿಯ ಸಮಯೋಜಿತ ಸಭೆಗಳ / ಸಂದರ್ಭಕ್ಕನುಗುಣವಾಗಿ ತೀರ್ಮಾನಗಳನ್ನು ತೆಗೆದುಕೊಳ್ಳುತ್ತ ಮೇಲ್ಕಂಡ ಅವಧಿಯ ಕಾರ್ಯಕ್ರಮಗಳನ್ನು ರೂಪಿಸಿ , ನಡೆಸಿ ಯಶಸ್ವಿಯಾಗಿರುತ್ತದೆ. ಅದರನ್ವಯ  2024-2025 ರ ವಾರ್ಷಿಕ ಅವಧಿಯ ಕಾರ್ಯಕ್ರಮಗಳ ಸಂಕ್ಷಿಪ್ತ ವರದಿ ಸಭೆಯ ಮುಂದೆ ಇಡುತ್ತಿದ್ದೇನೆ.  
1. ದಿನಾಂಕ 13 .4. 2025 ಭಾನುವಾರ ಸಂಜೆ 4.00 ಗಂಟೆಗೆ ಸ್ಥಳ: ತರಳಬಾಳು ಮಿನಿ ಸಭಾಂಗಣ  ಆರ್.ಟಿ.ನಗರ. ಇಲ್ಲಿ
ಪುಸ್ತಕ ಬಿಡುಗಡೆ, ಪಾಂಗಾಳ ಡಾಕ್ಟ್ರು ಎಂಬ ಕೃತಿ ಬಿಡುಗಡೆಯಾಗಿರುತ್ತದೆ. ಮುಖ್ಯ ಅತಿಥಿಗಳಾಗಿ , ಡಾ. ಪುರುಷೋತ್ತಮ ಬಿಳಿಮಲೆ ಮತ್ತು ಎಸ್. ಆರ್ ವಿಜಯಶಂಕರರವರು  ವೇದಿಕೆಯಲ್ಲಿ  ಉಪಸ್ಥಿತರಾಗಿರುತ್ತಾರೆ. 
2. ದಿನಾಂಕ 18.ಏಪ್ರಿಲ್ 2025, ಶುಕ್ರವಾರ ಮತ್ತು 19 ಶನಿವಾರ ಲಕ್ಷ್ಮೀಶ ತೋಳ್ಪಾಡಿಯವರು ಭಕ್ತಿ ಮತ್ತು ಸಾಹಿತ್ಯ ಎಂಬುದರ ಕುರಿತು ಗಾಂಧೀಭವನ ಕುಮಾರ ಕೃಪಾ ರಸ್ತೆ ಬೆಂಗಳೂರು. ಇಲ್ಲಿಗೆ ಬಂದು ಉಪನ್ಯಾಸವನ್ನು ನೀಡಿರುತ್ತಾರೆ.
3. ದಿನಾಂಕ 8 ರ ಜೂನ್  .2025 ಭಾನುವಾರ ಸಂಜೆ 4.00 ಗಂಟೆಗೆ ಸ್ಥಳ: ಪಾಂಚಜನ್ಯ ಸಭಾಂಗಣ. ವಿನಾಯಕ ದೇವಸ್ಥಾನ ಆರ್.ಟಿ.ನಗರ. ಇಲ್ಲಿ ಎಚ್.ಎಸ್.ವಿ. ನಮನ ಕಾರ್ಯಕ್ರಮದಲ್ಲಿ,ಭಾವಗೀತೆಗಳ ಹರಿಕಾರ ಎಚ್.ಎಸ್.ವೆಂಕಟೇಶ್ ಮೂರ್ತಿಯವರಿಗೆ ಶ್ರದ್ಧಾಂಜಲಿಯನ್ನು ಸಲ್ಲಿಸುವ ಕಾರ್ಯಕ್ರಮ ನಡೆದಿರುತ್ತದೆ.  
4. ದಿನಾಂಕ 22.ಜೂನ್ .2025 ಭಾನುವಾರ ಮಧ್ಯಾಹ್ನ 3.00 ಗಂಟೆಗೆ ಸರ್ವ ಸದಸ್ಯರ ಮಹಾ ಸಭೆಯಲ್ಲಿ ವಾರ್ಷಿಕವರದಿಯೊಂದಿಗೆ, ವೇದಿಕೆಯ ಪದಾಧಿಕಾರಿಗಳು, ಮತ್ತು  ಸಮಿತಿಯ ಸದಸ್ಯರು, ಸಾಮಾನ್ಯ ಸದಸ್ಯರು, ಭಾಗವಹಿಸಿರುತ್ತಾರೆ. ಮತ್ತು ಇದೇ ದಿನ ಸಂಜೆ 4 ಗಂಟೆಗೆ ಸರಿಯಾಗಿ ಪಂಜೆ ಮಂಗೇಶ ರಾಯರ ಸಾಹಿತ್ಯ  ಈ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಡಾ. ಎಸ್. ಪಿ. ಮಹಾಲಿಂಗೇಶ್ವರ ಭಟ್ ರವರು ಬಂದಿರುತ್ತಾರೆ. ಇದು  ತರಳಬಾಳು ಮಿನಿ ಸಭಾಂಗಣದಲ್ಲಿ ಕಾರ್ಯಕ್ರಮ ಜರುಗಿರುತ್ತದೆ.
5. ದಿನಾಂಕ 20 ಜುಲೈ ಭಾನುವಾರ 2025. ಸಂಜೆ 4.00 ಗಂಟೆಗೆ ಸ್ಥಳ: ತರಳ ಬಾಳು ಮಿನಿ ಸಭಾಂಗಣ ಆರ್.ಟಿ.ನಗರ. ಇಲ್ಲಿ ಸುಧಿಪುಸ್ತಕ ಬಿಡುಗಡೆ. ಪರಿಚಯ ಡಾ. ಚೇತನ ಹೆಗಡೆ. ಡಾ. ಅನ್ನದಾನೇಶ್ ಹರೀಶ್ , ಜಿ. ವಿ.ರೇಣುಕಾರವರು ಭಾಗವಹಿಸಿರುತ್ತಾರೆ.
6. ದಿನಾಂಕ 21. ಸೆಪ್ಟಂಬರ್ 2025 ಭಾನುವಾರ . ದಾದಾಬಾಯಿ ನವರೋಜಿ ದ್ವಿಶತಮಾನೋತ್ಸವ . ವಿಶೇಷ ಉಪನ್ಯಾಸ ರಘುನಾಥ್ ಕೃಷ್ಣಮಾಚಾರ್. ಸುಧೀಂದ್ರ ಬುದ್ಧಿ . ಕೆ. ಸತ್ಯ ನಾರಾಯಣ ಸಂಜೆ 4.00 ಗಂಟೆಗೆ ಸ್ಥಳ: ತರಳಬಾಳು ಮಿನಿ ಸಭಾಂಗಣ. ಅರ್.ಟಿ.ನಗರ
 7. ದಿನಾಂಕ ನವಂಬರ್ 16 ಭಾನುವಾರ.2025 ಕನ್ನಡ ರಾಜ್ಯೋತ್ಸವ ಆಚರಣೆ  ಉಪನ್ಯಾಸ ಎಚ್. ದುಂಡಿರಾಜ್, ಡಾ. ಸಂಧ್ಯಾ ಹೆಗಡೆ ದೊಡ್ಡಹೊಂಡ. ತರಳ ಬಾಳು ಮಿನಿ ಸಭಾಂಗಣ  
8. ದಿನಾಂಕ 22 .ಮಾರ್ಚ್ 2026 ಭಾನುವಾರ ಕಾರ್ಯಕ್ರಮ ಸಂಜೆ 4.00 ಗಂಟೆಗೆ ಸ್ಥಳ:  ತರಳಬಾಳು ಮಿನಿ ಸಭಾಂಗಣ. ಅರ್.ಟಿ.ನಗರ . ಇಲ್ಲಿ ಮಹಿಳಾ ದಿನಾಚರಣೆಯ ಅಂಗವಾಗಿ ಸ್ತ್ರೀ ಧ್ವನಿಯಾಗಿ ಮುದ್ದಣ ಮನೋರಮೆ.ಡಾ .ನಾ. ದಾಮೋದರ ಶೆಟ್ಟಿ ಪ್ರೊ. ಆರ್. ಸುನಂದಮ್ಮ ಇವರು ವೇದಿಕೆಗೆ ಬಂದು ತಮ್ಮ ಉಪನ್ಯಾಸವನ್ನು ಮಾಡಿರುತ್ತಾರೆ. 
9. ಶಿವರಾಮ ಕಾರಂತರ ಕಾದಂಬರಿಗಳ ಪರಿಚಯ ಮಾಲಿಕೆ ಸುಮಾರು 35 ಕ್ಕೂ ಹೆಚ್ಚು ಕಾದಂಬರಿಗಳು , ಗಣ್ಯರ ಪರಿಚಯ .ಯೂಟ್ಯೂಬ್ ಚಾನೆಲ್ ಈ ಯಶಸ್ವಿ ಕಾರ್ಯಮದಲ್ಲಿ ನಮ್ಮ ಅಧ್ಯಕ್ಷರ ಕಾರ್ಯಕ್ಷಮತೆಯನ್ನು ನಾವೆಲ್ಲರೂ ಮನಃಪೂರ್ತಿ ಸ್ಮರಿಸಲೇ ಬೇಕು.     
ಆತ್ಮೀಯರೇ .
  ಮೇಲ್ಕಂಡ ವಾರ್ಷಿಕ ಅವಧಿಯ ವೇದಿಕೆಯ ಎಲ್ಲಾ ಕಾರ್ಯಕ್ರಮಗಳ ಯಶಸ್ಸಿನ ಹಿಂದೆ ತಮ್ಮೆಲ್ಲರ ಶ್ರಮ , ಶ್ರದ್ಧೆ, ತಮ್ಮ ಆಗಮನ , ಸಾಹಿತ್ಯಾಭಿರುಚಿ, ಜ್ಞಾನಾರ್ಜನೆಯ ಆಳ ಇವೆಲ್ಲವೂ ಇದ್ದೇ ಇದೆ. ಈ ಯಶಸ್ಸಿನ ಕಾರಣೀಕರ್ತರು  ಕೂಡ ತಾವುಗಳೆ ಆಗಿದ್ದಿರಿ. 
ಮೂರು ದಶಕಗಳ ಈ ಸಂಭ್ರಮಾಚರಣೆಯಲ್ಲಿ ಶಿವರಾಮ ಕಾರಂತ ವೇದಿಕೆಯ ಸಂಸ್ಥಾಪಕರಾದ ಪಾ. ಚಂದ್ರಶೇಖರ ಚಡಗ ಸರ್ ರವರ ಆಶಯ,ಅಪ್ಪಣೆ, ಆದರ್ಶ ಮತ್ತು ಸತತ ಮಾರ್ಗದರ್ಶನದಲ್ಲಿ ,ಹಾಗು ಅಧ್ಯಕ್ಷೀಯ ಸ್ಥಾನವನ್ನು ಅಲಂಕರಿಸಿರುವ ಡಾ.ದೀಪಾಫಡ್ಕೆ ಅವರಿಗೂ, ಗೌರವಾಧ್ಯಕ್ಷರಾದ ಶ್ರೀ ಎಸ್. ಆರ್. ವಿಜಯಶಂಕರ್ ರವರಿಗೂ , ಉಪಾಧ್ಯಕ್ಷರಾದ ವೀರಶೇಖರ ಸ್ವಾಮಿಯವರಿಗೂ, ಎಂದಿನಂತೆ ವೇದಿಕೆಯ ಲೆಕ್ಕಪತ್ರಗಳನ್ನು ಪರಿಶೋಧಿಸಿದ ಯಾವುದೇ ರೀತಿಯ ಶುಲ್ಕ ಪಡೆಯದ  ಶರತ್ ಅಂಡ್.ಕಂಪನಿ ಚಾರ್ಟೆಡ್ ಅಕೌಂಟೆಂಟ್ಸ್ ಇವರಿಗೆ ವೇದಿಕೆ ಅಭಾರಿಯಾಗಿದೆ.
ವೇದಿಕೆಯ ಲೆಕ್ಕಪತ್ರಗಳ ಜವಾಬ್ದಾರಿ ನಿರ್ವಹಿಸುವ ಖಜಾಂಚಿ, ಕೋಶಾಧಿಕಾರಿಗಳು ಆದ  ಶ್ರೀ ಜಯರಾಮ ಸೋಮಯಾಜಿ ಸರ್ ರವರಿಗೂ, ಮತ್ತು ಯೂಟ್ಯೂಬ್ ,ಫೇಸ್ಬುಕ್ ಮಾಧ್ಯಮಗಳ ಮೂಲಕವೂ ವೇದಿಕೆಯ ಕಾರ್ಯಕ್ರಮ ವೀಕ್ಷಿಸಲು ತಾಂತ್ರಿಕ ಸಹಕಾರ ಜವಾಬ್ದಾರಿ ನಿರ್ವಹಿಸಿದ ಪತ್ರಿಕೋದ್ಯಮಿ ಶ್ರೀ ಶಿವ ಸುಬ್ರಮಣ್ಯರವರು, ಸಮಿತಿ ಸದಸ್ಯರು ಶ್ರೀ ಸುದೀoದ್ರ ರವರು,ಎಲ್ಲರಿಗೂ ತುಂಬು ಹೃದಯದಿಂದ ಧನ್ಯವಾದಗಳು.
ಅಷ್ಟೇ ಅಲ್ಲದೇ ತರಳಬಾಳು ಗ್ರಂಥಾಲಯದಿಂದ ಶ್ರೀ ವಿನಾಯಕ ದೇವಸ್ಥಾನ ಸಭಾಂಗಣದ ಆಡಳಿತ ಮಂಡಳಿಯ ಸದಸ್ಯರೂ ಹಾಗು ವೇದಿಕೆಯ ಉಪಾಧ್ಯಕ್ಷರಾದ ಶ್ರೀ ವೀರಶೇಖರ ಸ್ವಾಮಿರವರು.ತನು ಮನ ಧನಗಳಿಂದ ವೇದಿಕೆಯಲ್ಲಿ ಅದ್ಧೂರಿ ಯಕ್ಷಗಾನ ಕಾರ್ಯಕ್ರಮಗಳಿಗೆ ಸಾಕ್ಷಿಯಾಗುವ ಡಾ. ಪಾಂಗಾಳ್ ಸರ್ ರವರಿಗೂ ನಮ್ಮ ಕೃತಜ್ಞತೆಗಳನ್ನು ಅರ್ಪಿಸುತ್ತೇವೆ.
 ನಾವೆಲ್ಲರೂ ಒಂದೇ ಮನುಜ ಮತ ಒಂದೆ  ಒಗ್ಗಟ್ಟಿನಲ್ಲಿ ಬಲವಿದೆ. ಎನ್ನುವಂತೆ ನೀವಿಲ್ಲದೇ ಯಾವ ಕಾರ್ಯಕ್ರಮಗಳಿಗೂ ಕಳೆ ಇರುವುದಿಲ್ಲ .ಪ್ರತಿ ಕಾರ್ಯಕ್ರಮದ ಹಿಂದೆ  ಕಾರ್ಯಕಾರಿ ಸಮಿತಿಯ ಸದಸ್ಯರಾದ ಪ್ರತಿಯೊಬ್ಬರ ಪಾತ್ರಗಳು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಇದ್ದುದ್ದನ್ನು ನಾವು ಕಾಣಬಹುದು.ಸಮಿತಿಯ ಪ್ರತಿ ಸದಸ್ಯರಿಗೂ ಕೂಡ ನಾನು ವಂದನೆಗಳನ್ನು ಸಲ್ಲಿಸುತ್ತೇನೆ. 
ಒಂದು ವಿದಾಯವು ಮರು ಹುಟ್ಟಿಗೆ ಕಾರಣ .ಒಂದು ಅಸ್ತಂಗತ ಒಂದು ಉದಯಕ್ಕೆ ಕಾರಣ ಎಂದು ಹೇಳುತ್ತಾ,  ಈ ವರ್ಷವೂ ಕೆಲವು ಅಮೂಲ್ಯರನ್ನು ವೇದಿಕೆ ಕಳೆದು ಕೊಂಡಿತು .ಅಂಥವರಲ್ಲಿ ನಮ್ಮ ವೇದಿಕೆಯ ಸದಸ್ಯರಲ್ಲಿ ಒಬ್ಬರಾದ  ಶ್ರೀ ಕೆ. ರಮೇಶ್ ಗೋಟರವರು 15.9.2025.ರಂದು ದೈವಾಧೀನರಾಗಿರುತ್ತಾರೆ. ಅವರಿಗೆ ನಮ್ಮ ಶ್ರದ್ಧಾಂಜಲಿಗಳು.  
ಒಂದು ನಿಮಿಷದ ಮೌನ ಆಚರಣೆಯ  ನಂತರ ಶ್ರೀ ಪಾ ಚಂದ್ರಶೇಖರ ಚಡಗರು ಅಗಲಿದ ರಮೇಶ್ ಗೋಟ ಅವರಿಗೆ ನುಡಿ ನಮನವನ್ನು ಸಲ್ಲಿಸಿದರು.  
ಬೇಂದ್ರೆ ಅಜ್ಜಾರ  ನುಡಿಯಂತೆ ಹುಸಿ ನಗುತ ಬಂದೇವ, ನಸು ನಗುತಾ ಬಾಳೋಣ, ತುಸು ನಗುತ ತೆರಳೋಣ, ಬಡ ನೂರು ವರುಷಾನ, ಹರುಷಾದಿ ಕಳೆಯೋಣ ಯಾಕಾರೆ ಕೆರಳೋಣ ಎಂಬ ಸಾಲುಗಳನ್ನು ನೆನೆಯುತ್ತಾ.
ಎಲ್ಲರಿಗೂ ತುಂಬೊಲವಿನ ಧನ್ಯವಾದಗಳು.
ಮಂಜುಳಾ ಭಾರ್ಗವಿ 
ಕಾರ್ಯದರ್ಶಿ 




Treasurer of the Vedike, Jayarama Somayaji presented the report of financial transaction of Shivarama Karantha Vedike, for the year 2025 - 26. audited by Sri Sharatchandra of Sharat & Company, which was approved by the Committe and in the General Body Meeting.

JAYARAMA SOMAYAJI

ಇದಾದ ನಂತರ ಕೋಶಾಧಿಕಾರಿಗಳಾದ ಜಯರಾಮ ಸೋಮಯಾಜಿ ಯವರು ತಮ್ಮ ಲೆಕ್ಕ ಪತ್ರದ ವರದಿಯ ವಿವರವನ್ನು ಸಭೆಯ ಮುಂದೆ ಇಟ್ಟರು. ಇದನ್ನು ಕಾರ್ಯಕಾರಿ ಸಮಿತಿಯ ಸದಸ್ಯರಾದ ಶ್ರೀಮತಿ ಸತ್ಯಭಾಮ ರoಗೇಗೌಡರು ಅನುಮೋದಿಸಿದರು. ನಂತರ, ಸಂಸ್ಥಾಪಕರಾದ ಚಡಗರು, ವೇದಿಕೆಯ ಬಗ್ಗೆ ಮುಂದಿನ ದಿನಗಳಲ್ಲಿ ನಡೆಯ ಬೇಕಿರುವ ಕಾರ್ಯಕ್ರಮಗಳ ಬಗ್ಗೆ ಮುನ್ನೆಚ್ಚರಿಕೆಯ ನುಡಿಗಳನ್ನು ಹೇಳುತ್ತಾ, ಉಪಾಧ್ಯಕ್ಷರಾದ ಶ್ರೀ ವೀರಶೇಖರ ಸ್ವಾಮಿಯವರ ವಂದನಾರ್ಪಣೆಯೊಂದಿಗೆ ಸಭೆಯು ಮುಂದಿನ ಕಾರ್ಯಕ್ರಮಕ್ಕೆ ಚಾಲನೆ ನೀಡಿತು.




After some discussion on the report, it was approved.

VEERASHEKHARA SWAMY

Sri Veerashekhara Swamy, Vice President, delivered Vote of thanks.

The meeting concluded for the next program special Upanyasa.


Posted 27/7/2026