Showing posts with label AADYAATMA. Show all posts
Showing posts with label AADYAATMA. Show all posts

Friday, September 11, 2026

ಭಜನೆ - ನಾಮ ಸ್ಮರಣೆ

 ಶುಕ್ರವಾರ 11/9/2026 

ವಾಟ್ಸ್ ಅಪ್ ನಿಂದ 


 
1. ಭಜನೆಯಿಂದ ದೈವ ಸಾನಿಧ್ಯ ಹೆಚ್ಚುವುದು         2. ಭಜನೆಯಿಂದ ಜೀವನ ದೃಷ್ಟಿ ಬದಲಾಗುವುದು

3. ಭಜನೆಯಿಂದ ಹೃದಯ ಬಲಗೊಳ್ಳುವುದು          4. ಭಜನೆಯಿಂದ ಚೈತನ್ಯ ಜಾಗೃತವಾಗುವುದು 

5. ಭಜನೆಯಿಂದ ರೋಗನಿರೋಧಕ ಶಕ್ತಿ ಹೆಚ್ಚುವುದು 6. ಭಜನೆಯಿಂದ ದೈಹಿಕ ಬೇನೆಗಳು ದೂರವಾಗುವುದು 

7. ಭಜನೆಯಿಂದ ಮೆದುಳಿಗೆ ಉತ್ತೇಜನವಾಗುವುದು  8. ಭಜನೆಯಿಂದ ಮನಸ್ಸು ಶಾಂತವಾಗುವುದು 

9. ಭಜನೆಯಿಂದ ಕಷ್ಟ ಪರಿಸ್ಥಿತಿಗಳು ಬದಲಾಗುವುದು  10. ಭಜನೆಯಿಂದ ಒತ್ತಡ ಮಾಯವಾಗುವುದು 

11. ಭಜನೆಯಿಂದ ಕೋಪ ಕಡಿಮೆಗೊಳ್ಳುವುದು       12. ಭಜನೆಯಿಂದ ಆತ್ಮಸ್ಥೈರ್ಯ ಹೆಚ್ಚುವುದು 

13. ಭಜನೆಯಿಂದ ಸಮಸ್ಯೆಗಳು ಇಲ್ಲವಾಗುವುದು 14. ಭಜನೆಯಿಂದ ಸ್ವೀಕಾರ ಮನೋಭಾವ ಪ್ರಾಪ್ತಿಯಾಗುವುದು

15. ಭಜನೆಯಿಂದ ಮನಃ ಶಾಂತಿ ದೊರೆಯುವುದು       16. ಭಜನೆಯಿಂದ ತಾಳ್ಮೆ ಉಂಟಾಗುವುದು 

17. ಭಜನೆಯಿಂದ ಬಾಂಧವ್ಯ ವೃದ್ಧಿಸುವುದು          18. ಭಜನೆಯಿಂದ ನಾಯಕತ್ವ ಬೆಳೆಯುವುದು

19. ಭಜನೆಯಿಂದ ಉತ್ತಮ ನಿದ್ರೆ ಬರುವುದು 20. ಭಜನೆಯಿಂದ ಸಂಸ್ಕಾರ ಸಿಗುವುದು

21. ಭಜನೆಯಿಂದ ಸಂತೋಷ ಸಾಧ್ಯವಾಗುವುದು 22. ಭಜನೆಯಿಂದ ಕರ್ಮ ಕಳೆಯುವುದು 

23. ಭಜನೆಯಿಂದ ಪಾಪ ಮರೆಯಾಗುವುದು 24. ಭಜನೆಯಿಂದ ಸಾಮರ್ಥ್ಯ ಹೆಚ್ಚುವುದು 

25. ಭಜನೆಯಿಂದ ದುಷ್ಚಟಗಳು ದೂರವಾಗುವುದು 26. ಭಜನೆಯಿಂದ ಚಂಚಲ ಮನಸ್ಸು ದೂರವಾಗುವುದು 

27. ಭಜನೆಯಿಂದ ಬುದ್ಧಿ ತೀಕ್ಷ್ಣ ವಾಗುವುದು 28. ಭಜನೆಯಿಂದ ಅಹಂ ಕರಗುವುದು 

29. ಭಜನೆಯಿಂದ ಸೃಜನಶೀಲತೆ ವೃದ್ಧಿಸುವುದು 30. ಭಜನೆಯಿಂದ ಮೌಲ್ಯಗಳು ಹೆಚ್ಚುವುದು 

31. ಭಜನೆಯಿಂದ ಆಧ್ಯಾತ್ಮಿಕ ಶಕ್ತಿ ಜಾಗೃತವಾಗುವುದು 32. ಭಜನೆಯಿಂದ ಭಯ ದೂರವಾಗುವುದು 

33. ಭಜನೆಯಿಂದ ಬಂಧುತ್ವ ಬೆಳೆಯುವುದು 34. ಭಜನೆಯಿಂದ ಆರೋಗ್ಯ ವೃದ್ಧಿಸುವುದು 

35. ಭಜನೆಯಿಂದ ತೃಪ್ತಿ ಸಿಗುವುದು 36. ಭಜನೆಯಿಂದ ನಿರ್ಧಾರ ಸ್ಪಷ್ಟವಾಗುವುದು 

37. ಭಜನೆಯಿಂದ ಧನಾತ್ಮಕ ಶಕ್ತಿ ಉಂಟಾಗುವುದು 38. ಭಜನೆಯಿಂದ ವಾತಾವರಣ ಶುದ್ಧಿಯಾಗುವುದು 

39. ಭಜನೆಯಿಂದ ನಕಾರಾತ್ಮಕ ಗುಣಗಳು ದೂರವಾಗುವುದು 40. ಭಜನೆಯಿಂದ ದೈವಿಕ ತರಂಗ ಉಂಟಾಗುವುದು 

41. ಭಜನೆಯಿಂದ ಉಪಟಳಗಳು ದೂರವಾಗುವುದು 42. ಭಜನೆಯಿಂದ ಜಗಳ ಇಲ್ಲವಾಗುವುದು 

43. ಭಜನೆಯಿಂದ ವಿಭಜನೆ ಇಲ್ಲವಾಗುವುದು 44. ಭಜನೆಯಿಂದ ಪ್ರಶಾಂತತೆ ಪ್ರಾಪ್ತಿಯಾಗುವುದು 

45. ಭಜನೆಯಿಂದ ಖಿನ್ನತೆ ಶಮನವಾಗುವುದು 46. ಭಜನೆಯಿಂದ ಆಲೋಚನೆಗಳು ಪರಿವರ್ತನೆಯಾಗುವುದು 

47. ಭಜನೆಯಿಂದ ವಿಶ್ರಾಂತಿ ದೊರೆಯುವುದು 48. ಭಜನೆಯಿಂದ ಪರಮಾತ್ಮನ ಸ್ವಾಮೀಪ್ಯ ಸಾಧ್ಯವಾಗುವುದು 

49. ಭಜನೆಯಿಂದ ಸುಖ ಶಾಂತಿ ನೆಮ್ಮದಿ ಆನಂದ ದೊರೆಯುವುದು 50. ಭಜನೆಯಿಂದ ಪ್ರಾಣಶಕ್ತಿ ಹೆಚ್ಚುವುದು 

51. ಭಜನೆಯಿಂದ ದೇಹದ ಕೋಶ ಗಳು ಬಲಗೊಳ್ಳುವುದು 52. ಭಜನೆಯಿಂದ ಅರಿವು ಹೆಚ್ಚುವುದು 

53. ಭಜನೆಯಿಂದ ಮಾನವ ಸದ್ಗುಣಗಳು ಹೆಚ್ಚುವುದು 54. ಭಜನೆಯಿಂದ ಆಸೆಗಳು ದೂರ ಆಗುವುದು 

55. ಭಜನೆಯಿಂದ ಜ್ಞಾನ ವೃದ್ಧಿಸುವುದು 56. ಭಜನೆಯಿಂದ ಸೃಷ್ಟಿಯ ರಹಸ್ಯ ತಿಳಿಯುವುದು 

57. ಭಜನೆಯಿಂದ ಲೌಕಿಕ ಕಾಮನೆಗಳು ನಾಶವಾಗುವುದು 58. ಭಜನೆಯಿಂದ ಶರಣಾಗತಿ ಭಾವ ಉಂಟಾಗುವುದು

59. ಭಜನೆಯಿಂದ ಜೀವನ ಶೈಲಿ ಬದಲಾಗುವುದು 60. ಭಜನೆಯಿಂದ ದುರ್ಬಲತೆ ದೂರವಾಗುವುದು 

61. ಭಜನೆಯಿಂದ ನಡವಳಿಕೆ ಉತ್ತಮವಾಗುವುದು 62. ಭಜನೆಯಿಂದ ಸತ್ವ ವೃದ್ಧಿಯಾಗುವುದು 

63. ಭಜನೆಯಿಂದ ಧಾರ್ಮಿಕ ಪ್ರಜ್ಞೆ ಜಾಗೃತವಾಗುವುದು 64. ಭಜನೆಯಿಂದ ಸಂಪ್ರದಾಯ ಪ್ರಾಪ್ತಿಯಾಗುವುದು 

65. ಭಜನೆಯಿಂದ ಭಕ್ತಿ ಭಾವ ಮೂಡುವುದು 66. ಭಜನೆಯಿಂದ ಸನ್ಮಾರ್ಗ ದೊರೆಯುವುದು 

67. ಭಜನೆಯಿಂದ ಸಾಂಸ್ಕೃತಿಕ ಉನ್ನತಿ ಸಿಗುವುದು 68. ಭಜನೆಯಿಂದ ಭವ ಬಂಧನ ಕಳೆಯುವುದು 

69. ಭಜನೆಯಿಂದ ದೈವ ಸ್ವರೂಪ ಕಾಣುವುದು 70. ಭಜನೆಯಿಂದ ಜೀವನ ಸಾರ ಅರಿಯುವುದು 

71. ಭಜನೆಯಿಂದ ಗುರು ಕಾರುಣ್ಯ ಸಾಧ್ಯವಾಗುವುದು 72. ಭಜನೆಯಿಂದ ಭೂತ ಬಾಧೆ ಇಲ್ಲ ವಾಗುವುದು 

73. ಭಜನೆಯಿಂದ ಕಾಮ ಕ್ರೋಧಾದಿಗಳು ದೂರವಾಗುವುದು 74. ಭಜನೆಯಿಂದ ಕೃತಜ್ಞತೆ ಭಾವ ಮೂಡುವುದು 

75. ಭಜನೆಯಿಂದ ಭವರೋಗ ನಾಶವಾಗುವುದು 76. ಭಜನೆಯಿಂದ ಅಂತಃಕರಣ  ಶುದ್ಧಿಯಾಗುವುದು 

77. ಭಜನೆಯಿಂದ ವಿವೇಕ ಜಾಗೃತವಾಗುವುದು 78. ಭಜನೆಯಿಂದ ದುಃಸ್ವಪ್ನ ದೂರವಾಗುವುದು 

79. ಭಜನೆಯಿಂದ ಇಷ್ಟಾರ್ಥ ಸಿದ್ದಿ ಯಾಗುವುದು 80. ಭಜನೆಯಿಂದ ವೈರಾಗ್ಯ ಪ್ರಾಪ್ತಿಯಾಗುವುದು

81. ಭಜನೆಯಿಂದ ಅಪೇಕ್ಷೆಗಳು ಇಲ್ಲವಾಗುವುದು 82. ಭಜನೆಯಿಂದ ಬ್ರಹ್ಮ ಜ್ಞಾನ ಉಂಟಾಗುವುದು 

83. ಭಜನೆಯಿಂದ ಸಂಸಾರ ಮೋಹ ದೂರವಾಗುವುದು 84. ಭಜನೆಯಿಂದ ವಿರಕ್ತಿ ಭಾವ ಮೂಡುವುದು 

85. ಭಜನೆಯಿಂದ ಮನಸ್ಸಿನ ಪ್ರವಾಹ ಕಡಿಮೆಯಾಗುವುದು 86. ಭಜನೆಯಿಂದ ಸತ್ಕರ್ಮ ಉಂಟಾಗುವುದು 

87. ಭಜನೆಯಿಂದ ಭಗವತ್ ಪ್ರೇಮ ಹೆಚ್ಚುವುದು 88. ಭಜನೆಯಿಂದ ಏಕಾಂತ ಮೌನ ಸಿದ್ಧಿಸುವುದು 

89. ಭಜನೆಯಿಂದ ಅಸೂಯೆ ಇಲ್ಲ ವಾಗುವುದು 90. ಭಜನೆಯಿಂದ ನಿರ್ವಿಕಾರ ಸ್ಥಿತಿ ಸಿಗುವುದು 

91. ಭಜನೆಯಿಂದ ಜನನ ಮರಣ ಚಕ್ರದ ಬಿಡುಗಡೆ ಸಿಗುವುದು 92. ಭಜನೆಯಿಂದ ಆಯುಷ್ಯ ವೃದ್ಧಿಸುವುದು 

93. ಭಜನೆಯಿಂದ ಶ್ರೇಯಸ್ಸು ಉಂಟಾಗುವುದು 94. ಭಜನೆಯಿಂದ ಮನೋ ವಿಕಾಸ ವಾಗುವುದು 

95. ಭಜನೆಯಿಂದ ಸಮೃದ್ಧಿ ಉಂಟಾಗುವುದು 96. ಭಜನೆಯಿಂದ ಸಕಲ ಸುಕೃತ ಪ್ರಾಪ್ತಿಯಾಗುವುದು

97. ಭಜನೆಯಿಂದ ಕತ್ತಲೆ ಮಾಯವಾಗುವುದು 98. ಭಜನೆಯಿಂದ ಸಕಲ ದುಸ್ಕೃತ ದೂರವಾಗುವುದು

99. ಭಜನೆಯಿಂದ ಸೇವಾ ಮನೋಭಾವ ಬೆಳೆಯುವುದು  

100. ಭಜನೆಯಿಂದ ಸಾಕ್ಷಾತ್ ಭಗವದ್  ಸಾಕ್ಷಾತ್ಕಾರ ಉಂಟಾಗುವುದು.

ಸುನಂದಿ ಹಿರಿಯ ನಾಗರೀಕರ ಆಶ್ರಮ ದಿಂದ.. 


Posted  11/9/2026 



Tuesday, September 1, 2026

"ಮರಣ ಶ್ಲೋಕ"🫠

 Tuesday, September 1, 2026

WhatsApp forwarded

"ಮರಣ ಶ್ಲೋಕ"🫠

ಅನಾಯಾಸೇನ ಮರಣಂ|

ವಿನಾ ದೈನ್ಯೇನ ಜೀವನಮ್ |

ದೇಹಾಂತೇ ತವ ಸಾಯುಜ್ಯಂ 

ದೇಹಿ ಮೇ ಪರಮೇಶ್ವರ ||

🫠ಭಾವಾರ್ಥ:-

"ಹೇ ಪರಮೇಶ್ವರನೇ, ಯಾವುದೇ ಕಷ್ಟ-ನೋವಿಲ್ಲದ ಸುಲಭ ಸಾವು {ಮರಣ} ನನ್ನದಾಗಲಿ, ಯಾರ ಮುಂದೆಯೂ ಕೈಚಾಚದ ಸ್ವಾಭಿಮಾನದ ಬದುಕು {ಜೀವನ}ನನ್ನದಾಗಲಿ ಮತ್ತು ಈ ದೇಹವನ್ನು ಬಿಟ್ಟಮೇಲೆ ಸೀದಾ ನಿನ್ನ ಪಾದ ಸೇರುವ ಭಾಗ್ಯ ನನಗೆ ಸಿಗಲಿ."


🫠, ಯಾವುದಾದರೂ ಪುಣ್ಯಕ್ಷೇತ್ರಕ್ಕೆ ಹೋದಾಗ ದೇವರ ಬಳಿ ಈ ರೀತಿ ಪ್ರಾರ್ಥನೆ ಮಾಡಿ. ಏಕೆಂದರೆ ಮಿಕ್ಕಿದ್ದೆಲ್ಲವನ್ನು ನಮ್ಮ ಯೋಗ್ಯತೆಗೆ ಅನುಸಾರವಾಗಿ ದೇವರು ಕೊಟ್ಟಿದ್ದಾನೆ. ಹೆಚ್ಚಿಗೆ ಕೇಳುವ ಅವಶ್ಯಕತೆ ಇಲ್ಲ ಏಕೆಂದರೆ. ಭಗವಂತನಿಗೆ ಗೊತ್ತು ಯಾರಿಗೆ ಏನು ಕೊಡಬೇಕೆಂದು,✍️👏🚩

🚩 ಭಗವಂತ ಶ್ರೀ ಪರಶುರಾಮ🚩


Posted  1/9/2026


Tuesday, March 31, 2026

ರಾಮನ ನಡೆ ಚೆಂದ, ಕೃಷ್ಣನ ನುಡಿ ಚಂದ

 April 1, 2026

ರಾಮನ ನಡೆ ಚೆಂದ, ಕೃಷ್ಣನ ನುಡಿ ಚಂದ



👉 ರಾಮನ ಜನನ ನಡು ಮಧ್ಯಾಹ್ನವಾದರೆ, ಕೃಷ್ಣನ ಜನನ ನಡುರಾತ್ರಿ.

👉 ಬೇಸಿಗೆ ಕಾಲದಲ್ಲಿ ರಾಮನ ಜನನವಾದರೆ, ಭೋರ್ಗರೆಯುವ ಮಳೆಗಾಲದಲ್ಲಿ ಕೃಷ್ಣನ ಜನನ.

👉 ಅರಮನೆಯಲ್ಲಿ ರಾಮ ಜನಿಸಿದರೆ ಸೆರೆಮನೆಯಲ್ಲಿ ಕೃಷ್ಣ ಜನಿಸಿದ

👉 ರಾಮ ಹಿರಿಯ ಮಗನಾದರೆ, ಕೃಷ್ಣ ಕೊನೆಯ ಮಗ.

👉 ರಾಮ ಶುಕ್ಲಪಕ್ಷವಾದರೆ, ಕೃಷ್ಣ ಕೃಷ್ಣಪಕ್ಷ.

👉 ರಾಮನ ಬದುಕು ತೆರೆದಿಟ್ಟ ಪುಸ್ತಕವಾದರೆ, ಕೃಷ್ಣನದ್ದು ರಹಸ್ಯ, ನಿಗೂಢ.

👉 ರಾಮ ಏಕಪತ್ನಿ ವ್ರತಸ್ಥ, ಕೃಷ್ಣ 16108 ಪತ್ನಿಯರ ವಲ್ಲಭ.

👉ರಾಮ ಮರ್ಯಾದಾವತಾರ, ಕೃಷ್ಣ ಲೀಲಾವತಾರ.

👉ಕೃಷ್ಣನ ನುಡಿ ಭಗವದ್ಗೀತೆ, ರಾಮನ ನಡೆ ರಾಮಾಯಾಣ

👉 ಕೃಷ್ಣನಸಿದ್ಧಾಂತ, ರಾಮನ ಆಚರಣೆ

👉 ರಾಮನೇ ಯುದ್ಧ ಮಾಡಿ ಗೆದ್ದ ಕಥೆ ರಾಮಾಯಣವಾಯ್ತು. 

ಕೃಷ್ಣ ಯುದ್ಧವನ್ನೇ ಮಾಡದೆ ಗೆದ್ದ ಕಥೆ ಮಹಾಭಾರತವಾಯ್ತು

👉 "ರಾಮ" ಮತ್ತು "ಕೃಷ್ಣ" ಒಂದೇ ದೇವರ ಅವತಾರವಾದರೂ ಅವರ ನಡೆ ನುಡಿಗಳಲ್ಲಿ ವ್ಯತ್ಯಾಸವಿದೆ. 

ನಾವು ನಮ್ಮ ಜೀವನದಲ್ಲಿ ಹೇಗೆ ಇರಬೇಕೆಂದು ರಾಮ ನಡೆದು ತೋರಿಸಿದ, 

ಕೃಷ್ಣ ಹೇಳಿ ತೋರಿಸಿದ. 

ಕೃಷ್ಣ ನುಡಿದಂತೆ ನುಡಿದಾಗ ರಾಮ ನಡೆದಂತೆ ನಡೆದಾಗ ನಾವು ರಾಮ ಕೃಷ್ಣರಾಗ್ತೇವೆ. 

ಅದಕ್ಕಾಗಿಯೇ ಹಿರಿಯರು ಹೇಳಿದ್ದು ರಾಮನ ನಡೆ ಚಂದ ಕೃಷ್ಣನ ನುಡಿ ಚಂದ

🙏🌺🙏🙏🌺🙏


ನಮ್ಮ ನಡೆ ನುಡಿ ಚೆನ್ನಾಗಿರಲಿ. ಬಾಳು ಬಂಗಾರವಾಗಲಿ. ಇತರರಿಗೆ ದಾರಿ ದೀಪವಾಗಲಿ ಎಂದು ಆಶಿಸುತ್ತಾ ಈ ನುಡಿ ಮುತ್ತುಗಳು...

Posted 1/4/2026

Friday, March 20, 2026

"ಓಂ" ಕಾರದ ಅರ್ಥ ಏನು ?

 Friday, March 20, 2026

WhatsApp Forwarded

"ಓಂಕಾರ"ವನ್ನು ಎಲ್ಲಾ ಮಂತ್ರಗಳ ರಾಜ ಎಂದು ಕರೆಯಲಾಗುತ್ತದೆ. ಯಾಕೆಂದರೆ ಎಲ್ಲಾ ಮಂತ್ರಗಳ ಮೂಲವೇ "ಓಂ".. 

"ಓಂಕಾರ"ವು ಅನಂತವಾದ ಶಕ್ತಿಯನ್ನುಪ್ರತಿನಿಧಿಸುತ್ತದೆ. "ಓಂಕಾರ"ಕ್ಕೆ ಭಾರತೀಯ ಸಂಸ್ಕೃತಿಯಲ್ಲಿ ಅತೀ ಹೆಚ್ಚು ಮಹತ್ವವನ್ನು ನೀಡಲಾಗುತ್ತದೆ. 

ದೇವರ ನಾಮಸ್ಮರಣೆಯೂ "ಓಂ" ಶಬ್ದದಿಂದಲೇ ಆರಂಭವಾಗುತ್ತದೆ. "ಓಂಕಾರ"ದ ಮೂಲಕ ಆರಂಭವಾಗುವ ದೇವರ ನಾಮಾರ್ಚನೆಯು ಹೆಚ್ಚು ಪರಿಣಾಮಕಾರಿಯಾದುದು ಎಂದು ವೇದದಲ್ಲಿ ಉಲ್ಲೇಖ ಮಾಡಲಾಗಿದೆ.

"ಓಂ" ಎನ್ನುವುದು ಒಂದು ಅಕ್ಷರವಲ್ಲ. ಅದು "ಅ.. ಉ.. ಮ" ಎಂಬ ಮೂರು ಅಕ್ಷರಗಳ ಸಂಗಮ. 

ಅ ಎಂದರೆ ಸೃಷ್ಟಿ....ಉ ಎಂದರೆ ವಿಕಸನ...ಮ ಎಂದರೆ ಮೌನ ಹಾಗೂ ವಿನಾಶ. 

ಹಾಗಾಗಿ ಈ ಒಂದೇ ಪದವು ಸೃಷ್ಟಿಯ ಆದಿ ಮತ್ತು ಅಂತ್ಯವನ್ನು ಪ್ರತಿಬಿಂಬಿಸುತ್ತದೆ. ಓಂಕಾರವನ್ನು ಪ್ರತಿದಿನ ಪಠಿಸಿದರೆ ನಿಮ್ಮ ಒತ್ತಡಗಳೆಲ್ಲಾ ನಿವಾರಣೆಯಾಗಿ ಮನಸ್ಸು ಆಹ್ಲಾದಕರವಾಗಿರುತ್ತದೆ.

🙏 ಮುಂಜಾನೆ ಎದ್ದು ಸ್ನಾನಾದಿ ಕರ್ಮಗಳನ್ನು ಮುಗಿಸಿ, ಕುಳಿತುಕೊಳ್ಳಿ, ನಿಮ್ಮ ಕಣ್ಣುಗಳನ್ನು ಮುಚ್ಚಿ ನಿರಾಳರಾಗಿ, ನಿಮ್ಮ ಎರಡೂ ಹುಬ್ಬಿನ ಮಧ್ಯಭಾಗವನ್ನು ಕೇಂದ್ರೀಕರಿಸಿ, ಓಂಕಾರವನ್ನು ನಿಧಾನವಾಗಿ ಪಠಿಸಿ. 21 ಬಾರಿ ಪಠಿಸುವುದು ಒಳ್ಳೆಯದು, ನಿಮ್ಮ ಉಸಿರಾಟದ ಮೂಲಕ ಪಠಣವನ್ನು ಲೆಕ್ಕಹಾಕಬಹುದು....

"ಓಂಕಾರ"ವನ್ನು ಹೇಳುವಾಗ ಮೂಗಿನಿಂದ ಒಳ ಸೇರಿದ ಗಾಳಿ ಅದೇ ಲಯದಲ್ಲಿ ಗಂಟಲು, ಎದೆ ಕೊನೆಗೆ ನಾಬಿಯ ಸುತ್ತಲೂ ವ್ಯಾಪಿಸಿ ಮತ್ತೂ ಕೆಳಗೆ ಹೋಗಿ ದೇಹದ ತುಂಬೆಲ್ಲಾ ವ್ಯಾಪಿಸಿ ನಿಧಾನಕ್ಕೆ ಉಸಿರು ಬಿಟ್ಟಾಗ ದೇಹದಲ್ಲಿ ಒಂದು ಕಂಪನ ಏರ್ಪಡುತ್ತದೆ....

ಉಪಯೋಗ.....

🙏ಹದಿನೈದು ದಿನಗಳ ನಿರಂತರ ಓಂಕಾರದ ಪಠಣದಿಂದ ಒತ್ತಡಗಳೆಲ್ಲಾ ನಿವಾರಣೆಯಾಗಿ, ಮನಸ್ಸು ಶಾಂತವಾಗುವುದು, ಸಂಶೋಧನೆಯ ಪ್ರಕಾರ ಓಂಕಾರವು ದೇಹದಲ್ಲಿರುವ ಅಡ್ರಿನಲಿನ್‌ ಸ್ರಾವವನ್ನು ಕಡಿಮೆಗೊಳಿಸುತ್ತದೆ, ಇದರಿಂದಾಗಿ ಮಾನಸಿಕ ಒತ್ತಡವು ನಿಧಾನವಾಗಿ ಕಡಿಮೆಯಾತ್ತದೆ ಎಂದು ಹೇಳಲಾಗುತ್ತದೆ

🙏 ಇದು ಮನಸ್ಸಿನಲ್ಲಿರುವ ಭಯ, ಅಸಮಾಧಾನವನ್ನು ನಿವಾರಣೆಗೊಳಿಸುತ್ತದೆ...

🙏 "ಓಂಕಾರ"ದ ಪಠಣವು ನಿಮ್ಮ ಸುತ್ತಲಿನ ವಾತಾವರಣವನ್ನು ಶುದ್ಧಗೊಳಿಸಿ, ಧನಾತ್ಮಕ ಕಂಪನವನ್ನು ಉಂಟುಮಾಡುತ್ತದೆ...

🙏 "ಓಂಕಾರ"ದ ಉಚ್ಛಾರಣೆಯು ದೇಹದಲ್ಲಿರುವ ಎಲ್ಲಾ ವಿಷಕಾರಿ ಅಂಶಗಳನ್ನು ಹೊರಹಾಕುತ್ತದೆ...

🙏 "ಓಂಕಾರ" ಪಠಣದಿಂದ ನಿಮ್ಮ ಹೃದಯದ ಆರೋಗ್ಯ ವೃದ್ಧಿಯಾಗುವುದು ಹಾಗೂ ರಕ್ತಸಂಚಾರವೂ ಆರೋಗ್ಯಕರವಾಗುವುದು ಜೀರ್ಣಾಂಗವ್ಯವಸ್ಥೆಯನ್ನು ಸುಧಾರಿಸುತ್ತದೆ...

🙏 "ಓಂಕಾರ"ವು ನಿಮ್ಮಲ್ಲಿರುವ ಉದಾಸೀನತೆಯನ್ನು ಬದಿಗೆ ಸರಿಸಿ, ಉತ್ಸಾಹವನ್ನು ಹೆಚ್ಚಿಸುತ್ತದೆ

ನಿದ್ರಾಹೀನತೆ ಸಮಸ್ಯೆಯಿಂದ ಬಳಲುತ್ತಿದ್ದಲ್ಲಿ, ಮಲಗುವ ಮುನ್ನ 5ನಿಮಿಷ ಓಂಕಾರವನ್ನು ಪಠಿಸಿ...

🙏 "ಓಂಕಾರ"ದ ಪಠಣದಿಂದ ಶ್ವಾಸಕೋಶದ ಸಾಮರ್ಥ್ಯ ಹೆಚ್ಚುವುದು..

🙏 ಮನುಷ್ಯನ ಮಾನಸಿಕ ಹಾಗೂ ದೈಹಿಕ ಸ್ವಾಸ್ಥ್ಯವನ್ನು ಹೆಚ್ಚಿಸುವುದು...

🙏 "ಓಂಕಾರ" ಪದವನ್ನು ಉಚ್ಚರಿಸುವಾಗ ನಿಮ್ಮ ದೇಹದಲ್ಲಿ ಉಂಟಾಗುವ ಕಂಪನವನ್ನು ಗಮನಿಸಬಹುದು, ಈ ಕಂಪನವು ಬೆನ್ನು ಮೂಳೆಗೆ ಒಳ್ಳೆಯದು. ಇದರಿಂದಾಗಿ ಬೆನ್ನುಮೂಳೆಯ ಕಾರ್ಯಕ್ಷಮತೆ ಹೆಚ್ಚಾಗುವುದು...

🙏 "ಓಂಕಾರ"ದ ಉಚ್ಚಾರಣೆಯು ಗಂಟಲಿನ ಆರೋಗ್ಯಕ್ಕೂ ಒಳ್ಳೆಯದು, ಇದು ಥೈರಾಯ್ಡ್‌ ಗ್ರಂಥಿಯನ್ನು ಆರೋಗ್ಯವಾಗಿಡುವುದು...

🙏 "ಓಂಕಾರ" ಪದವು ನಿಮ್ಮ ದೇಹದಲ್ಲಿ ಹೊಸ ಶಕ್ತಿಯನ್ನು ಪ್ರವಹಿಸಿ, ಯಾವುದೇ ಕೆಲಸದಲ್ಲೂ ನಿಮ್ಮ ಆತ್ಮವಿಶ್ವಾಸ ವೃದ್ಧಿಯಾಗುವಂತೆ ಮಾಡುತ್ತದೆ.

ಏಕಾಗ್ರತೆಯು ವೃದ್ಧಿಯಾಗಿ, ನಿಮ್ಮ ಗುರಿಯನ್ನು ಸಾಧಿಸಲು ಓಂಕಾರವು ಸಹಕರಿಸುವುದು..

🙏 "ಓಂಕಾರ" ಪಠಣವು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ, ಸ್ವಯಂಪ್ರತಿರೋಧಕವನ್ನು ಉಂಟುಮಾಡುವುದು...

🙏 "ಓಂಕಾರ"ವನ್ನು ಪಠಿಸುವವರಿಗೆ ಮಾತ್ರವಲ್ಲದೇ, ಅವರ ಸುತ್ತಮುತ್ತಲಿನವರೂ ಓಂಕಾರದ ಕಂಪನವನ್ನು ಅನುಭವಿಸುವುದರಿಂದ ಇತರರಿಗೂ ಉಪಯೋಗವಾಗುವುದು...

🙏 "ಓಂಕಾರ"ವನ್ನು ಪಠಿಸುವುದರಿಂದ ನಿಮ್ಮ ಭಾವನೆಗಳ ಮೇಲೆ ನಿಯಂತ್ರಣವನ್ನು ಸಾಧಿಸಬಹುದು...

ನೀವು ಮೊದಲ ಬಾರಿ "ಓಂಕಾರ" ಪಠಣ ಆರಂಭಿಸುತ್ತಿದ್ದಲ್ಲಿ ಪ್ರತಿದಿನ 5 ನಿಮಿಷ ಮಾತ್ರ ಮಾಡಿ. 

ಪ್ರತಿದಿನ ಅಭ್ಯಾಸ ಮಾಡುತ್ತಾ ಹಿಡಿತ ಬಂದಂತೆ ಸಮಯವನ್ನು ನಿಧಾನವಾಗಿ ವಿಸ್ತರಿಸುತ್ತಾ ಬನ್ನಿ. 

ಆರಂಭದಲ್ಲೇ 5 ನಿಮಿಷಕ್ಕಿಂತ ಹೆಚ್ಚು ಅಭ್ಯಾಸ ಮಾಡಿದರೆ ದೇಹದಲ್ಲಿ ಉಂಟಾಗುವ ಶಕ್ತಿಯ ಕಂಪನದಿಂದ ಬಾಧೆಗೊಳಗಾಗಬಹುದು. ಯಾಕೆಂದರೆ ಓಂ ಜಪವು ದೇಹದ ಉ‍ಷ್ಣತೆಯನ್ನು ಹೆಚ್ಚಿಸುತ್ತದೆ.... 

"ಓಂಕಾರ"ದಲ್ಲಿ ಧ್ವನಿ ತರಂಗ ಹಾಗೂ ನಾದಕ್ಕೆ ಭೌತ ಶಾಸ್ತ್ರೀಯ ಮಹತ್ವಗಳನ್ನು ಇವೆ. ಓಂಕಾರದಲ್ಲಿ "ಉ" ಕಾರ, "ಅ" ಕಾರ ಹಾಗೂ "ಮ ಕಾರ" ಗಳು ಸೇರುವುದರಿಂದ ಅವುಗಳನ್ನು ಒಟ್ಟಿಗೆ ಉಚ್ಛಾರ ಮಾಡಿದಾಗ ಹೊಟ್ಟೆ ಬೆನ್ನು ಹುರಿ ಗಂಟಲು ಮೂಗು ಹಾಗೂ ಮೆದುಳಿನ ಭಾಗಗಳು ಕ್ರಿಯಾಶೀಲಾ ಆಗುತ್ತವೆ ಇದರಿಂದ ಏಕಾಗ್ರತೆ ಹೆಚ್ಚುತ್ತದೆ ಮನಸ್ಸಿಗೆ ಶಾಂತಿಯು ದೊರೆಯುತ್ತದೆ ಹಾಗೂ ನಮ್ಮ ಒತ್ತಡವೂ ಸಹಾ ಕಡಿಮೆ ಆಗುತ್ತದೆ.

"ಓಂಕಾರ" ಎಂಬ ಶಕ್ತಿ,ಧ್ಯಾನ ಎಂಬ ಸಾಧನ

🙏🙏🙏🙏🙏🙏🙏🙏🙏🙏🙏🙏

"ಓಂಕಾರ" ಮಂತ್ರದ ಮಹತ್ವ

ಪ್ರಣವ ಮಂತ್ರವನ್ನು ಜಪಿಸುತ್ತಿದ್ದಾನೆ ಸೂರ್ಯ !

ಹಲವು ವರ್ಷಗಳ ನಿರಂತರ ಅಧ್ಯಯನದಿಂದ ವಿಜ್ಞಾನಿಗಳು ಶೋಧಿಸಿದ ವೈಜ್ಞಾನಿಕ ಸತ್ಯ..!!

ಜಗತ್ಪ್ರಸಿದ್ಧ ವೈಜ್ಞಾನಿಕ ಸಂಸ್ಥೆ NASA ಹಲವು ಸಂಶೋಧನೆಗಳ ನಂತರ, ಸೂರ್ಯನಿಂದ ಪ್ರತಿಕ್ಷಣವೂ ಹೊರಹೊಮ್ಮುವ ಧ್ವನಿಯನ್ನು ರೆಕಾರ್ಡ್ ಮಾಡಿತು. ಆ ಧ್ವನಿಯನ್ನು ಕೇಳಿದ ವಿಜ್ಞಾನಿಗಳಿಗೆ ಅಚ್ಚರಿ…!! ವೇದಗಳಲ್ಲಿ ಗುಣಗಾನ ಮಾಡಲಾಗಿರುವ , ಸನಾತನ ಧರ್ಮದ ಪವಿತ್ರ ಮಂತ್ರ "ಓಂಕಾರ"..

ಇನ್ನೂ ಅಚ್ಚರಿಯೆಂದರೆ , ಸಾಮಾನ್ಯ ಮನುಷ್ಯ 20 ಮೆಗಾ ಹರ್ಟ್ಸಿನಿಂದ 2೦೦೦೦ ಮೆಗಾ ಹರ್ಟ್ಸ್ ಮಧ್ಯದ ಧ್ವನಿಯನ್ನಷ್ಟೇ ಕೇಳಬಲ್ಲ. ಅದಕ್ಕಿಂತ ಹೆಚ್ಚು ಅಥವಾ ಕಡಿಮೆ ಶಬ್ದವನ್ನು ಮನುಷ್ಯ ಗ್ರಹಿಸಲಾರ ಎಂದು ವಿಜ್ಞಾನ ತಿಳಿಸುತ್ತದೆ. ಆದರೆ ಸೂರ್ಯನಿಂದ ಬರುವ ಈ ಓಂಕಾರನಾದವನ್ನು ನಮ್ಮ ಋಷಿಮುನಿಗಳು ಅರಿತಿದ್ದಾದರೂ ಹೇಗೆ ಎಂಬುದೇ ಅಚ್ಚರಿ...!!

ವೇದಗಳಲ್ಲಿ ಕೊಂಡಾಡಿದ್ದು ಹೇಗೆ..? 

ಓಂಕಾರವನ್ನು ಮಹಾಮಂತ್ರವೆಂದು ಸ್ವೀಕರಿಸಿದ್ದು ಹೇಗೆ..? ಪ್ರಶ್ನೆಗಳು ಈಗಲೂ ವಿಜ್ಞಾನಿಗಳನ್ನ ಕಾಡುತ್ತಿವೆ..!!

ನಮ್ಮ ಋಷಿಗಳ ಪ್ರಕಾರ "ಓಂಕಾರ"ವೇ ಪರಮಾತ್ಮನ ನಿಜವಾದ ಹೆಸರು.

”ಓಮಿತ್ಯೇಕಾಕ್ಷರಂ ಬ್ರಹ್ಮ”. ಮಹರ್ಷಿ ಪತಂಜಲಿ ತಿಳಿಸುವಂತೇ “ತಸ್ಯ ವಾಚಕಃ ಪ್ರಣವಃ” ಪ್ರಣವವೆಂದರೆ “ಓಂಕಾರ”......

ಸೂರ್ಯನಿಂದ ಓಂಕಾರನಾದ ಬರಲು ಕಾರಣವಾದರೂ ಏನು..? ಇದಕ್ಕೆ ಉತ್ತರ ಗೀತೆಯಲ್ಲಿದೆ..

👇👇👇

ಭಗವಾನ್ ಶ್ರೀಕೃಷ್ಣ ಅರ್ಜುನನಿಗೆ ಹೇಳುತ್ತಾನೆ:- “ಅರ್ಜುನ, ನಿನಗಿಂದು ಯಾವ ವಿದ್ಯೆಯನ್ನು ನಾನು ಉಪದೇಶಿಸಿದೆನೋ ಈ ವಿದ್ಯೆಯನ್ನು ನಿನಗಿಂತಲೂ ಮೊದಲು ಸೂರ್ಯನಿಗೆ ಉಪದೇಶಿಸಿದ್ದೆ. ಅಂದಿನಿಂದ ಸೂರ್ಯ ನಿರಂತರವಾಗಿ ಓಂಕಾರವನ್ನು ಜಪಿಸುತ್ತಾ ಲೋಕವನ್ನು ಬೆಳಗುತ್ತಿದ್ದಾನೆ. ಕೇವಲ ಸೂರ್ಯನಷ್ಟೇ ಅಲ್ಲ. ಸಮಸ್ತ ಬ್ರಹ್ಮಾಂಡವೂ ಓಂಕಾರದಲ್ಲೇ ಅಧೀನವಾಗಿದೆ”....

ಅಂದರೆ ವಿಜ್ಞಾನಿಗಳು ಇಂದು ಕಂಡುಹಿಡಿದ ಸತ್ಯವು, ಋಷಿ-ಮುನಿಗಳಿಗೆ , ಕೃಷ್ಣನಿಗೆ ಅಂದೇ ತಿಳಿದಿತ್ತು..!!

ಯಾವಾಗ ನಾವು "ಓಂ" ಎಂದು ಜೋರಾಗಿ ಉಚ್ಚರಿಸುತ್ತೇವೋ ಆಗ ನಮ್ಮ ಮನಸ್ಸಿನಲ್ಲಿರುವ ದುಗುಡ-ದುಮ್ಮಾನಗಳು ಖಾಲಿಯಾಗುತ್ತವೆ.

ಓಂಕಾರದ ಜಪ ತೀವ್ರವಾಗುತ್ತಿದ್ದಂತೇ , ಬ್ರಹ್ಮಾಂಡದಲ್ಲಿರುವ ಓಂಕಾರ ಹಾಗೂ ಸಾಧಕನ ಓಂಕಾರನಾದಗಳ ಸಮ್ಮಿಲನವಾಗುತ್ತದೆ.

ಆ ಸಮಯದಲ್ಲಿ ಸಾಧಕನ ಮನಸ್ಸು ಧ್ಯಾನದಲ್ಲಿ ಕಳೆದುಹೋಗುತ್ತದೆ. ಈ ಅವಸ್ಥೆಯಲ್ಲಿ ಮನಸ್ಸು ಚೇತನದೊಂದಿಗೆ ಸೇರಿಕೊಳ್ಳುತ್ತದೆ..🙏

(ಸಂಗ್ರಹ)


ಸನಾತನವೇ ಸತ್ಯ, ಸನಾತನವೇ ಶ್ರೇಷ್ಠ...🙏🏻😍🚩

ಸನಾತನವೇ ವಿಶ್ವ ಧರ್ಮ...🙏🏻😍

Sunday, February 22, 2026

BHAJANE @ RAMAKRISHNA BHAT

 Sunday, February 22, 2026

Ramakrishna Bhat's Residence, 14 A Cross, Bhuvaneshwarinagara.

That was a beautiful divine chanting of Bhajane, in unison,  at Next cross neghbour Ramakrishna Bhat (Parabrahma Vittaladasa), for about 80 minutes, 




About 30 Saibaba devotees, women and men seated separately, sing bhajan on after another, as pre arranged order, each one singing beautifully, causing divine vibration.


The soulful singing of devotional songs fill the atmosphere with positivity, divinity and reverence. The collective singing with sounds of Taala and Kanjeera fosters spiritual growth and also emotional connection between everyone present.






As per the tradition of Sai Devotees, a decorated chair placed in the front, giving faith that SaiBaba is virtually sitting there and blessing the devotees.



Aarthi was performed by the host, with devotees singing "JaiJagadeesha Hare..." after ehivh VibhoothiDharana to all devotees.

A platefull of prasada with Idli vada chutney, Chitranna, Mosaranna and sweet was served to all.

Lokaa Samasthaa Sukhino Bhavanthu.... 

Om Shanthi..... Shanthi..... Shanthi....

God Bless All.


Posted 23/2/2026












Tuesday, January 27, 2026

ಶ್ರೀವಿಷ್ಣು ಸಹಸ್ರನಾಮದ ಮಹತ್ವ:

ಸೋಮವಾರ, 26/1/2026 

ಭೀಷ್ಮಾಷ್ಟಮಿ ಅಂದರೆ ಅಂದೇ ವಿಷ್ಣು ಸಹಸ್ರನಾಮ ಜಯಂತಿ ಅದಕ್ಕಾಗಿ ಈ ಪೋಸ್ಟ್

ಶ್ರೀವಿಷ್ಣು ಸಹಸ್ರನಾಮದ ಮಹತ್ವ:

ಸರ್ವಶ್ರೇಷ್ಠವಾದ ಶ್ರೀ ವಿಷ್ಣು ಸಹಸ್ರನಾಮ

೧. ವಿಷ್ಣು ಸ್ವತಃ ತನ್ನ ಹೆಸರಿನ ಅತೀಂದ್ರಿಯ ಧ್ವನಿಯಲ್ಲಿ ಸಂಪೂರ್ಣವಾಗಿ ಅಸ್ತಿತ್ವದಲ್ಲಿರುತ್ತಾನೆ. ಹಾಗಾಗಿ ವಿಷ್ಣುಸಹಸ್ರನಾಮವನ್ನು ಹೆಚ್ಚು ಹೆಚ್ಚು ಕಾಲ ಪಠಣಮಾಡಿದರೆ ಒಳ್ಳೆಯದು.

೨. ವಿಷ್ಣು ಸಹಸ್ರನಾಮದಲ್ಲಿ ಎಲ್ಲ ವೈದಿಕ ಮಂತ್ರಗಳನ್ನು ಸೇರಿಸಲಾಗುತ್ತದೆ. ಆದ್ದರಿಂದ ಈ ಮಂತ್ರವನ್ನು ಪಠಿಸುವ ಮೂಲಕ ಹೇಳುವವರಿಗೆ ಅಷ್ಟೇ ಅಲ್ಲ ಕೇಳುವವರು ಕೂಡ ಪ್ರಯೋಜನ ಪಡೆಯುತ್ತೀರಿ

೩. ವಿಷ್ಣುಸಹಸ್ರನಾಮ ಪಾರಾಯಣಕ್ಕೂ ಭೇದವೇನೂ ಇರುವದಿಲ್ಲ. ಹಾಗೆ ಪಠಣಕ್ಕಾಗಿ ಯಾವುದೇ ಕಠಿಣ ಮತ್ತು ವೇಗದ ನಿಯಮಗಳಿಲ್ಲ. ಯಾವುದೇ ಸಂದರ್ಭಗಳಲ್ಲಿ, ಯಾವುದೇ ಸಮಯದಲ್ಲಿ ನೀವು ಎಲ್ಲಿಯಾದರೂ ಪಠಿಸಬಹುದು.

೪. ವಿಷ್ಣು ಸಹಸ್ರನಾಮವನ್ನು ಪಠಿಸುವುದರಿಂದ ನಿಮ್ಮ ಹಿಂದಿನ ಜನ್ಮದ ಕರ್ಮದ ಪ್ರತಿಕ್ರಿಯೆಗಳಿಂದ ನಿಮ್ಮನ್ನು ಮುಕ್ತಗೊಳಿಸುತ್ತದೆ.

೫. ವಿಷ್ಣು ಸಹಸ್ರನಾಮ ಪಠಿಸುವ ಭಕ್ತರಿಗೆ ಎಂದೂ ಭಯವಿಲ್ಲ. ಇದರಿಂದ ವಿಶೇಷ ಕಾಂತಿ, ವರ್ಚಸ್ಸು, ಆತ್ಮವಿಶ್ವಾಸ, ಮನೋಬಲ, ದೇಹಬಲ ಇಂದ್ರಿಯಬಲ ಹೆಚ್ಚಾಗಿ ಉತ್ತಮ ಆರೋಗ್ಯವನ್ನು ಪಡೆಯಬಹುದು.

೬. ವಿಷ್ಣುಸಹಸ್ರನಾಮವನ್ನು ಪ್ರತಿನಿತ್ಯ ಪಾರಾಯಣ ಮಾಡಿದರೆ ಜೀವನದಲ್ಲಿ ಬರುವ ಸಂಕಷ್ಟಗಳು ಪರಿಹಾರವಾಗುತ್ತವೆ.

೭. ಶುದ್ಧಮನದಿಂದ ವಿಷ್ಣುಸಹಸ್ರನಾಮವನ್ನು ಪಠಿಸಿದರೆ ಆಧ್ಯಾತ್ಮಿಕ, ಆಧಿದೈವಿಕ ಹಾಗೂ ಆಧಿಭೌತಿಕ ಪೀಡೆಗಳಿಗೆ ಪರಿಹಾರ ದೊರೆಯುತ್ತದೆ.

೮. ವಿಷ್ಣುಸಹಸ್ರನಾಮ ಅಂದರೆ ಮಹಾವಿಷ್ಣುವಿನ ಸಹಸ್ರನಾಮ ಪಠನ ಇದರಲ್ಲಿ ಅಲೌಕಿಕ ಶಕ್ತಿ ಇರುವುದನ್ನು ಅನೇಕ ಸಾಧಕರು ಕಂಡಿದ್ದಾರೆ, ಅನುಭವಿಸಿದ್ದಾರೆ. ವಿಷ್ಣುಸಹಸ್ರನಾಮ ಪಾರಾಯಣದಿಂದ ಕ್ಯಾನ್ಸೆರ್ ನಂತಹ ಭಯಂಕರ ಖಾಯಿಲೆಯಿಂದ ಹಿಡಿದು ಇನ್ನು ಇತರೆ ಕಾಯಿಲೆಗಳು ಕೂಡ ವಾಸಿಯಾಗುತ್ತವೆ.

೯. ಮನೆಯಲ್ಲಿ ಸಾಮೂಹಿಕ ಪಾರಾಯಣ ಪಠಿಸಿದರೆ ಮನೆಯ ವಾತವರಣವೇ ಬದಲಾಗುತ್ತದೆ. ಮನೆಯವ ಮೈಯಲ್ಲಿ ಮನಸ್ಸಲ್ಲಿ ಆಧ್ಯಾತ್ಮದ ಶಕ್ತಿಸಂಚಾರವಾದಂತಹ ಅನುಭವವಾಗುತ್ತದೆ. ಸಾಮೂಹಿಕ ಪಾರಾಯಣದಲ್ಲಿ ಅಂಥ ಒಂದು ವಿಶೇಷ ಶಕ್ತಿ ಇದೆ.

೧೦. ವಿಷ್ಣುಸಹಸ್ರನಾಮಕ್ಕೆ ಗಂಡಸು-ಹೆಂಗಸು-ಶೂದ್ರ-ಬ್ರಾಹ್ಮಣ ಎನ್ನುವ ಭೇದವಿಲ್ಲ. ಅದು ಎಲ್ಲಾ ವರ್ಣಾಶ್ರಮದವರಿಗೆ ಭಗವಂತ ನೀಡಿದ ಪಂಚಮ ವೇದ ಇದಾಗಿದೆ. ಹಾಗಾಗಿ ಈ ಸ್ತೋತ್ರವನ್ನು ಎಲ್ಲ ವರ್ಗದವರು ಮತ್ತು ಎಲ್ಲವಯಸ್ಸಿನವರು ಪಠಿಸಬಹುದಾಗಿದೆ.

11. ಧಾರ್ಮಿಕ ಶ್ರದ್ಧಾ ಕೇಂದ್ರಗಳಿಗೆ ಭೇಟಿ ನೀಡಿ ನಾವಾಗಿಯೇ ಪರಣ ಮಾಡಿ ಬರಬಹುದು . ಸಮಯ ವಿಲ್ಲದವರು ತಮ್ಮ ತಮ್ಮ ಮನೆಯಲ್ಲಿಯೇ ನಿತ್ಯ ಪಠಣ ಮಾಡಿದರೆ ನಮಗೂ ಹಾಗು ನಮ್ಮ ಸುತ್ತ ಮುತ್ತಲಿನ ಪರಿಸರಕ್ಕೂ ವಿಶೇಷ ಶಕ್ತಿ ಪ್ರಾಪ್ತಿಯಾಗುವುದು.

12. *ಪ್ರಾಕೃತಿಕ ಸಮತೋಲನಕ್ಕಾಗಿ,

ಗ್ರಾಮದ ಶಾಂತಿಗಾಗಿ,

ಕುಟುಂಬ ರಕ್ಷಣೆಗಾಗಿ, ನಮ್ಮೆಲ್ಲರ ಉನ್ನತಿಗಾಗಿ 

ನಿತ್ಯ ಪಠಿಸೋಣ*


ಮನುಷ್ಯನ ಆಯಸ್ಸು ನೂರು ವರ್ಷ… 

ಈ ನೂರು ವರ್ಷಗಳಲ್ಲಿ 36 ಸಾವಿರ ಹಗಲು ಮತ್ತು 36 ಸಾವಿರ ರಾತ್ರಿಗಳಿವೆ. ಮನುಷ್ಯ ದೇಹ 72 ಸಾವಿರ ನಾಡಿಗಳಿಂದಾಗಿದೆ. ಈ ನಾಡಿಗಳಲ್ಲಿ 36 ಸಾವಿರ ನಾಡಿಗಳು ಎಡ ಭಾಗದಲ್ಲೂ ಮತ್ತು 36 ಸಾವಿರ ನಾಡಿಗಳು ನಮ್ಮಬಲಭಾಗಲ್ಲೂ ಇರುತ್ತವೆ. ಈ ನಾಡಿಗಳಲ್ಲಿ ರಕ್ತ ಸಂಚಾರ ಸರಿಯಾಗಿ ಆದರೆ ಮನುಷ್ಯನಿಗೆ ಯಾವುದೇ ರೋಗ ಬರಲಾರದು.

ವೇದಗಳ ಸಾರವಾದ ಬ್ರಹತೀಸಹಸ್ರದಲ್ಲಿ ಒಂದು ಸಾವಿರ ಮಂತ್ರಗಳಿವೆ, ಹಾಗೂ ಈ ಒಂದು ಸಾವಿರ ಮಂತ್ರದಲ್ಲಿ 72 ,000 ಅಕ್ಷರಗಳಿವೆ. ಈ ಒಂದು ಸಾವಿರ ಮಂತ್ರಗಳ ಸಾರವನ್ನು ಒಂದು ಸಾವಿರ ನಾಮಗಳ ರೂಪದಲ್ಲಿ ವೇದವ್ಯಾಸರು ನಮಗೆ ಕರುಣಿಸಿದ್ದಾರೆ..- ಶ್ರೀ ವಿಷ್ಣು ಸಹಸ್ರ ನಾಮ ..

ವಿಷ್ಣುಸಹಸ್ರನಾಮವನ್ನು ಪಠಿಸುವುದರಿಂದ ನಾವು ಬ್ರಹತೀಸಹಸ್ರದ 72 ಸಾವಿರ ಅಕ್ಷರಗಳನ್ನು ಜಪಿಸಿದಂತಾಗುತ್ತದೆ. ಇದರಿಂದ ನಮ್ಮ 72 ಸಾವಿರ ನಾಡಿಗಳಲ್ಲಿ ಪೂರ್ಣಪ್ರಮಾಣದ ರಕ್ತ ಸಂಚಾರವಾಗುತ್ತದೆ. ಆದ್ದರಿಂದ ವಿಷ್ಣುಸಹಸ್ರನಾಮ ಭವರೋಗ ಪರಿಹಾರಕ. ಆದರೆ ಅರ್ಥ ತಿಳಿದು ಹೃದಯತುಂಬಿ ಭಕ್ತಿಯಿಂದ ಪಾರಾಯಣ ಮಾಡುವುದು ಮುಖ್ಯ.

ವೇದಗಳಿಗೆ ಕನಿಷ್ಠ 3 ಅರ್ಥಗಳಿವೆ, ಮಹಾಭಾರತ ಶ್ಲೋಕಗಳಿಗೆ ಕನಿಷ್ಠ 10 ಅರ್ಥಗಳಿದ್ದರೆ, ಶ್ರೀ ವಿಷ್ಣು ಸಹಸ್ರನಾಮದ ಪ್ರತೀ ನಾಮಕ್ಕೆ ಕನಿಷ್ಠ ನೂರು ಅರ್ಥಗಳಿವೆ !! ಈ ಕಾರಣಕ್ಕಾಗಿಯೇ ಪ್ರಾಚೀನರು ಭಗವದ್ಗೀತೆ ಮತ್ತು ಶ್ರೀ ವಿಷ್ಣುಸಹಸ್ರನಾಮವನ್ನು ಅತ್ಯಮೂಲ್ಯ ಗ್ರಂಥವಾಗಿ ಪರಿಗಣಿಸಿದ್ದಾರೆ. ವೇದಗಳ ಸಾರವಾದ ಬ್ರಹತೀಸಹಸ್ರದಲ್ಲಿ ಒಂದು ಸಾವಿರ ಮಂತ್ರಗಳಿವೆ, ಹಾಗೂ ಈ ಒಂದು ಸಾವಿರ ಮಂತ್ರದಲ್ಲಿ 72 ,000 ಅಕ್ಷರಗಳಿವೆ. ಈ ಒಂದು ಸಾವಿರ ಮಂತ್ರಗಳ ಸಾರವನ್ನು ಒಂದು ಸಾವಿರ ನಾಮಗಳ ರೂಪದಲ್ಲಿ ವೇದವ್ಯಾಸರು(ಸಾಕ್ಷಾತ್ ಶ್ರೀಹರಿ) ನಮಗೆ ಕರುಣಿಸಿದ್ದಾರೆ

ಶ್ರೀ ವಿಷ್ಣು ಸಹಸ್ರನಾಮ ಮತ್ತು ಅದರ ಮಹತ್ವದ ಬಗ್ಗೆ ಹಿರಿಯರೊಬ್ಬರಿಂದ ಕೇಳಿ ತಿಳಿದ ವಿಚಾರ ....

ತಿರುಚ್ಚಿಯ ಶ್ರೀರಂಗನಾಥ ದೇವಸ್ಥಾನ , ಅಲ್ಲಿ ಬೆಳಗಿನ ಪೂಜೆ ಆದ ಬಳಿಕ ದೇವರಿಗೆ ಸಮರ್ಪಣೆ ಮಾಡಿದ ಪ್ರಸಾದವನ್ನು ನೆರೆದ ಭಕ್ತರಿಗೆ ಹಂಚುವುದು ವಾಡಿಕೆ .ಹಾಗೆ ಅದನ್ನು ಸ್ವಕರಿಸಲು ಭಕ್ತರೆಲ್ಲರೂ ಸರದಿಯ ಸಾಲಿನಲ್ಲಿ ಬಂದು ಭಕ್ತಿಯಿಂದ ಸ್ವೀಕರಿಸುತ್ತಿದ್ದಾಗ ಕಡು ಬಡವ ಹಿರಿಯರೊಬ್ಬರು ಸರದಿಯ ಸಾಲಿನಲ್ಲಿ ನಿಲ್ಲದೆ ಎಲ್ಲರನ್ನು ದೂಡಿ ಮುಂದೆಹೋಗಿ ನಿಲ್ಲುತ್ತಿದ್ದರು ಅಲ್ಲದೆ ಕೈಯಲ್ಲಿ ದೊಡ್ಡದೊಂದು ಪಾತ್ರೆಯನ್ನು ಹಿಡಿದು ಪ್ರಸಾದವನ್ನು ಕೇಳುತ್ತಿದ್ದರು. ನಾನು ಬಡವ ನನಗೆ 6 ಜನ ಮಕ್ಕಳಿದ್ದಾರೆ , ಇದು ಸಿಗದಿದ್ದರೆ ಅವರೆಲ್ಲ ನಿರಾಹಾರರಾಗ ಬೇಕಾಗುತ್ತದೆ ಎನ್ನುತ್ತಾ ಪ್ರಸಾದವನ್ನು ಕೇಳಿ ಪಡೆಯುತ್ತಿದ್ದರು. ಆದರೆ ಇದು ಪ್ರಸಾದ ಹಂಚುವ ದೇವಸ್ಥಾನದವರಿಗೆ ಮುಜುಗರ ತರುತ್ತಿತ್ತು, ಹಾಗಾಗಿ ಅವರು ನೇರವಾಗಿ ಶ್ರೀಪಾದ ರಾಮಾನುಜರ ಬಳಿ ದೂರು  ಕೊಟ್ಟರು.

ಇದನ್ನು ಕೇಳಿದ ಶ್ರೀಪಾದ ರಾಮಾನುಜರು ಆ ಬಡವನನ್ನು ನೋಡಿ ವಿಚಾರ ತಿಳಿಯಲೆಂದು ಒಂದು ದಿನ ಪ್ರಸಾದ ಹಂಚುವಲ್ಲಿಗೆ ಬಂದು ಆ ಬಡವ ಹಿರಿಯರನ್ನು ಕಂಡು ಯಾಕೆ ಹೀಗೆ ಮಾಡುತ್ತೀರಿ ಎನ್ನಲು . ಆ ಬಡವ ಹಿರಿಯರು ಸ್ವಾಮಿ ನಾನು ಬಡವ ನನಗೆ 6 ಜನ ಸಣ್ಣಸಣ್ಣ ಮಕ್ಕಳಿದ್ದಾರೆ , ಹೊಟ್ಟೆಗೆ ಗತಿಯಿಲ್ಲ ಹಾಗಾಗಿ ನಾನು ಎಲ್ಲರನ್ನು ಹಿಂದೆಹಾಕಿ ಮುಂದೆನಿಂತು ಪಾತ್ರೆಯಲ್ಲಿ ಪ್ರಸಾದ ಕೇಳುತ್ತೇನೆ. ಸಾಲಿನಲ್ಲಿ ನಿಂತರೆ ಎಲ್ಲಿ ಪ್ರಸಾದ ಖಾಲಿಯಾಗುತ್ತದೆಯೋ ಅನ್ನುವ ತವಕ..

ವಿಚಾರ ತಿಳಿದ ಶ್ರೀಪಾದ ರಾಮಾನುಜರು ಆ ಹಿರಿಯರನ್ನು ನಿಮಗೆ ಶ್ರೀ ವಿಷ್ಣುಸಹಸ್ರನಾಮ ಹೇಳಲು ಬರುತ್ತದೆಯೋ ಅನ್ನಲು ಹಿರಿಯರು ನಾನು ಕಲಿತವನಲ್ಲ .. ಆದರೆ ಇಲ್ಲಿ ದೇವಸ್ಥಾನದಲ್ಲಿ ಅಲ್ಪ ಸ್ವಲ್ಪ ಕೇಳಿದ್ದೇನೆ.. ಶ್ರೀ ವಿಷ್ಣುಸಹಸ್ರನಾಮವನ್ನು...

ಹಾಗಾದರೆ ನಿನಗೆ ಬರುವಷ್ಟು ಹೇಳು ಅನ್ನಲು ಆತ ವಿಶ್ವಂ ವಿಷ್ಣುರ್ವಷಟ್ಕಾರೋ ಭೂತಭವ್ಯಭವತ್ಪ್ರಭುಃ |

ಭೂತಕೃದ್ಭೂತಭೃದ್ಭಾವೋ ... ಅನ್ನುತ್ತಲೇ ಶ್ರೀರಾಮಾನುಜರು ಅಂದರೆ ನಿನಗೆ ಶ್ರೀ ವಿಷ್ಣುವಿನ ಸಾವಿರ ಹೆಸರಿನಲ್ಲಿ ಆರು ಹೆಸರು ಮಾತ್ರ ಬರುತ್ತದೆ .. ಹೌದು ನಾನು ಕಲಿತವನಲ್ಲ... ಆಗ ಶ್ರೀಪಾದರು ಅದಕ್ಕೇನು ಬೇಸರವಿಲ್ಲ ಅದರಲ್ಲಿ ಬರುವ ಆರನೆಯ ಹೆಸರು ಭೂತ-ಭೃತ್: ಅಂದರೆ ಎಲ್ಲಾ ಜೀವಿಗಳನ್ನು ಪೋಷಿಸುವವನು ಎಂದು , ನೀನು ಶ್ರದ್ದೆ ಮತ್ತು ಸಂಪೂರ್ಣ ಭಕ್ತಿಯಿಂದ ಆ ಆರನೆಯ ಹೆಸರನ್ನು ಜಪಮಾಡು ಅದರಿಂದ ನಿನ್ನ ಕಷ್ಟ ಪರಿಹಾರವಾಗುತ್ತದೆ ಎಂದು ಆತನಿಗೆ ಶ್ರೀ ಭೂತ-ಭೃತ್ಯಯೇ ನಮಃ ಅನ್ನುವಂತೆ ಉಪದೇಶಿಸಿದರು..

ಕೆಲದಿನಗಳ ಬಳಿಕ ಶ್ರೀಪಾದರು ಪ್ರಸಾದ ಹಂಚುವವರನ್ನು ಆ ಹಿರಿಯ ವಿಚಾರದಲ್ಲಿ ಕೇಳಿದಾಗ ಅವರು ಸ್ವಾಮಿ ಅವರು ಈಗ ಬರುತ್ತಿಲ್ಲ . ಏನಾಗಿದೆ ಅಂತ ಗೊತ್ತಿಲ್ಲ. ಬಹಳಷ್ಟು ಸಮಯ ವಾಯಿತು ಅವರನ್ನು ನೋಡದೆ.. ಆದರೆ ಒಂದು ವಿಚಾರ ದೇವರಿಗೆ ಸಮರ್ಪಣೆ ಮಾಡಿದ ಪ್ರಸಾದ ಪೂಜೆಯ ಬಳಿಕ ನೋಡಿದರೆ ಯಾರೋ ತೆಗೆದಂತೆ ಕಾಣುತ್ತದೆ . ಆ ಹಿರಿಯರು ಹೇಗೋ ಬಂದು ಅದನ್ನು ತೆಗೆಯುತ್ತಾರಾ ಏನೋ ಅನ್ನುವ ಸಂಶಯ ವ್ಯಕ್ತ ಪಡಿಸಿದರು. ಶ್ರೀಪಾದರು ಒಂದು ದಿನ ನೋಡಲು ಪ್ರಸಾದ ಪೂಜೆಯ ಬಳಿಕ ಕಮ್ಮಿಯಾದದ್ದನ್ನು ಕಂಡು...

ಶ್ರೀಪಾದರು ಆ ಹಿರಿಯರನ್ನು ಕಾಣಲು ನದಿಯನ್ನು ದಾಟಿ ಹಿರಿಯರಿದ್ದ ಸಣ್ಣ ಗುಡಿಸಲಿನತ್ತ ಹೋದಾಗ ಹಿರಿಯರು ಶ್ರೀಪಾದರ ಕಾಲಿಗೆ ನಮಸ್ಕರಿಸಿ ತಾವು ಮಹಾನ್ ಮಹಿಮರು ನಮ್ಮ ಕಷ್ಟಗಳೆಲ್ಲ ಪರಿಹಾರವಾಯಿತು. ಅಲ್ಲಿಗೆ ಪ್ರಸಾದಕ್ಕೆ ಬರಬೇಕಾಗಿಲ್ಲ ದಿನಾ ನೀವು ಕಳುಹಿಸಿದ ಹುಡುಗ ಬಂದು ನಮಗೆ ಬೇಕಾದಷ್ಟು ಪ್ರಸಾದವನ್ನು ಕೊಟ್ಟು ಹೋಗುತ್ತಿದ್ದಾನೆ . ನಿಮಗೆ ತುಂಬುದು ಹೃದಯದ ಧನ್ಯವಾದಗಳು ಅನ್ನುತ್ತಲೇ ಶ್ರೀಪಾದರಿಗೆ ಅರಿವಾಯಿತು ಇದೆಲ್ಲ ಶ್ರೀ ರಂಗನಾಥನ ಮಹಿಮೆ ....

ಭೂತ-ಭೃತ್: ಎಲ್ಲಾ ಜೀವಿಗಳನ್ನು ಪೋಷಿಸುವವನು ಅವನೇ ಹಾಗಿರುವಾಗ ಭಕ್ತಿಯಿಂದ ಪೂಜಿಸಿದ ಜಪಮಾಡಿದ ಹಿರಿಯರನ್ನು ಹೇಗೆಬಿಟ್ಟುಹೋಗುತ್ತಾನೆ ಎಂದು ಮನದಲ್ಲಿಯೇ ನೆನೆಸಿದರು. ಅಲ್ಲದೆ ಭಗವದ್ಗೀತೆಯಲ್ಲಿ ಶ್ರೀ ಕೃಷ್ಣ ಹೇಳಿದ ಮಾತು ಮತ್ತೆ ನೆನಪಾಯಿತು. ನಚ ಮಸ್ತಾನಿ ಭೂತಾನಿ .. ಪಶ್ಯಾಮಿ ಯೋಗ ಮಸ್ವರಂ..

ಶ್ರೀ ವಿಷ್ಣುಸಹಸ್ರನಾಮದ ಪ್ರತಿಯೊಂದು ಹೆಸರು ಅದರದೇ ಆದ ಮಹತ್ವವನ್ನು ಹೊಂದಿದೆ ಅದನ್ನು ಅರಿತು ಪಠಿಸಿದರೆ ಒಳ್ಳೆಯದು...

▬▬▬ஜ۩۞۩ஜ▬▬▬*▬▬▬ஜ۩۞۩ஜ▬▬

ಸರ್ವೇಷಾಂ ಸಮಸ್ತ ಸನ್ಮಂಗಳಾನಿ ಭವಂತು

'ಸರ್ವೇ ಜನಾಃ ಸುಖಿನೋ ಭವಂತು'

ಶುಭವಾಗಲಿ ಧನ್ಯವಾದಗಳು ಶ್ರೀಮತಿ ನಿರ್ಮಲ ರಾಜೇಶ್  @everyone 

 ಧಮೋ೯ ರಕ್ಷತಿ ರಕ್ಷಿತ: ಕೃಷ್ಣಾರ್ಪಣಮಸ್ತು*

▬▬▬ஜ۩۞۩ஜ▬▬▬▬▬▬ஜ۩۞۩ஜ▬▬▬

Friday, November 14, 2025

REAL POWER OF GOTRA

 Saturday, 15/11/2025

I am BHARADWAJA GOTRA



Do You Know the Real Power of Your Gotra?

Not a ritual. Not superstition. It’s your ancient code. 

1. Gotra is Not Your Surname. It’s Your Spiritual DNA.

You know what’s crazy?

Most of us don’t even know what Gotra we belong to.

We think it’s just some line Panditji says during puja. But it’s not that at all.

Your Gotra means - which Rishi’s mind you are connected to.

Not by blood. But by thought, energy, frequency, and knowledge.

Every Hindu is spiritually traced back to a Rishi (sage). That Rishi is your intellectual ancestor. His wisdom, his mental pattern, his inner frequency - all flow through you.

2. Gotra Doesn’t Mean Caste.

People today mix it up.

Gotra is NOT about Brahmin, Kshatriya, Vaishya, or Shudra.

It existed before caste, before surnames, even before kingdoms.

It’s the most ancient system of identity - based on knowledge, not power.

Everyone had a Gotra - even Rishis gave Gotras to students who adopted their teachings sincerely. It was earned through learning.

So no - Gotra is not a label.

It’s a stamp of spiritual heritage.

3. Every Gotra Comes from a Rishi - A Supermind

Let’s say you’re from Vashishtha Gotra.

That means your ancestral Rishi was Vashishtha Maharishi - the same sage who guided Lord Ram and even King Dasharatha.

Same way, Bharadwaj Gotra?

You’re linked to the sage who wrote huge parts of the Vedas and trained warriors and scholars.

There are 49 main Gotras - each linked to Rishis who were astronomers, healers, warriors, mantra masters, or nature scientists.

And you - yes, you - carry that blueprint inside.

4. Why Elders Forbid Same-Gotra Marriage?

Here comes a fact they never teach in school:

In ancient India, Gotra was used to track genetic lines.

Gotra travels through the male line - meaning sons carry the Rishi-line forward.

So if two people of the same Gotra marry, they’re genetically too close, like siblings.

This could cause mental and physical defects in children.

Gotra system = Ancient Indian DNA science

And we knew it thousands of years ago - way before Western science discovered genetics.

5. Gotra = Your Mental Programming

Let’s make this personal.

Some people are born thinkers.

Some have deep spiritual hunger.

Some feel peaceful in nature.

Some are natural leaders or truth-seekers.

Why?

Because your Gotra Rishi’s mind still shapes your natural instincts.

It’s like your mind is still tuned to the Rishi’s signal - the way he thought, felt, prayed, taught.

If your Gotra is of a warrior Rishi, you’ll feel courage.

If it’s from a healing Rishi, you may love Ayurveda or medicine.

This is not coincidence. This is deep programming.

6. Gotra Was Once Used to Customize Education

In ancient Gurukuls, they didn’t teach everyone the same way.

First question Guru would ask? - “Beta, tumhara Gotra kya hai?”

Why? Because that told him how the student learns best.

What branch of knowledge suits him. What mantras work best for his energy.

A student from Atri Gotra might get trained in meditation and mantras.

One from Kashyap Gotra might go deep into Ayurvedic knowledge.

Gotra wasn’t just identity - it was your learning style, your life path.

7. British Mocked It. Bollywood Made Fun Of It. We Forgot It.

When the British came, they saw this system and called it nonsense.

They mocked Gotras as superstition because they didn’t understand it.

Then Bollywood made jokes.

“Panditji asking for Gotra again!” - like it was some annoying old custom.

And slowly, we stopped asking our grandparents.

We stopped telling our children.

And in just 100 years, a 10,000-year-old system is vanishing.

They didn’t kill it. We let it die.

8. If You Don’t Know Your Gotra - You’ve Lost a Map

Imagine being part of an ancient royal family, but never knowing your own surname.

That’s how serious this is.

Your Gotra is your ancestral GPS - guiding you to

- Right mantras

- Right rituals

- Right energy healing

- Right spiritual path

- Right match in marriage

Without it, we are walking blind in our own dharma.

9. Gotra Rituals Were Not “Just for Show”

When Pandits say your Gotra in a puja, they’re not just doing a formality.

They are connecting you back to the Rishi’s energy.

Calling your spiritual lineage to witness and bless the ritual.

That’s why saying your Gotra during Sankalp (the start of any puja) is so important - it’s like saying:

“I, the child of Bharadwaj Rishi, seek divine help with full awareness of my soul’s ancestry.”

It’s beautiful. Sacred. Real.

10. Revive Your Gotra Before It’s Too Late

Ask your parents.

Ask your grandparents.

Research it if you must. But don’t live without knowing this part of you.

Write it down. Pass it to your kids. Say it with pride.

You are not just a person born in 2000 or 1990.

You are a carrier of an eternal flame, lit by a Rishi thousands of years ago.

You are the final chapter (for now) of a story that started before Mahabharat, before Ramayan, before time was counted.



11. Your Gotra is Like a Forgotten Password to Your Soul

In today’s world, we remember Wi-Fi passwords, email logins, Netflix codes…

But we forget the most ancient passcode - our Gotra.

That one word can unlock a whole stream of ancestral knowledge, mental habits, karmic memories, even your spiritual weaknesses and strengths.

It’s not just a label - it’s a key. You either use it… or lose it.

12. Women Don’t “Lose” Their Gotra After Marriage – They Preserve It Silently

Many people believe women “change” their Gotra after marriage. But Sanatan Dharma is subtle.

In rituals like Shraddha, the woman’s Gotra is still taken from her father’s side.

Why? Because Gotra travels through the Y-chromosome (the male line).

Women carry the energy, but don’t pass it genetically.

So no - a woman’s Gotra doesn’t disappear. It lives within her, even after marriage.

13. Even Gods Followed Gotra Rules

In Ramayan, when Lord Ram and Sita got married - even their Gotras were checked.

- Ram: Ikshvaku Vansh, Vashishtha Gotra

- Sita: Janaka’s daughter, Kashyap Gotra lineage

They didn’t marry blindly in the name of love. Even the Divine followed Dharma.

That’s how sacred this system was - and is.

14. Gotra and Prarabdha Karma are Linked

Ever feel like you’re drawn toward certain actions, habits, thoughts… even in childhood?

Some of that comes from your Prarabdha - the karma that has started bearing fruit in this life.

And Gotra affects this too.

Different Rishis had different karmic tendencies.

You, carrying their energy, often get similar karmic blueprints - unless you break the cycle consciously.

Knowing your Gotra helps you understand and clean up your karmic path.

15. Each Gotra Has Specific Mantras and Devatas

Gotras are not just mental lineages - they’re also connected to specific Devatas (deities) and Beej mantras that align best with your soul’s frequency.

You might wonder why some mantras don’t “work” for you.

Maybe you’re trying to charge your phone with the wrong charger.

The right mantra + your Gotra = spiritual current flows.

Knowing this can boost your meditation, mantra sadhana, and healing power 10x.

16. Gotra = Inner Guidance During Confusion

In today’s world, everyone is lost.

Confused about purpose, relationships, career, dharma.

But if you sit quietly and reflect on your Gotra, your Rishi, your ancestral qualities - you’ll get inner clarity.

Your Rishi didn’t live in confusion. His vichar dhara (thought-current) still runs through your veins.

Align with it - and you’ll feel less lost, more rooted.

17. Every Great Hindu King Respected Gotras

From Chandragupta Maurya to Harshavardhana to Shivaji Maharaj - our kings always had a Rajguru who kept record of kul (family), Gotra, and sampradaya.

Even in politics and war - they made decisions based on Gotra connections, respecting alliances and bloodlines.

Why? Because ignoring Gotra was like ignoring your spine.

18. Gotra System Protected Women From Exploitation

Before you call it “regressive,” understand this - Gotra tracking in ancient times prevented incest, maintained respect for family lines, and protected girls from hidden manipulation in small communities.

Even when a woman was abducted or separated in wars, her Gotra helped identify her home, lineage, and rightful dignity.

That’s not backward. That’s brilliant.

19. Gotra is Also Your Role in the Cosmic Puzzle

Each Rishi didn’t just do meditation - he had a duty to the cosmos.

- Some focused on healing the body

- Some on decoding the stars

- Some on protecting Dharma

- Some on building systems of justice

Your Gotra holds the echo of that purpose.

If you’re feeling empty in life - maybe it’s because you’ve forgotten your role in the cosmic play.

Find your Gotra. You’ll find your role.

20. This is Not About Religion. This is About Identity.

Even if someone is atheist… spiritual but not religious… confused about rituals… Gotra still matters.

Because this is beyond religion.

This is ancestral consciousness.

This is deep-rooted Indian wisdom that doesn’t force, but silently guides.

You don’t have to “believe” it.

You just need to remember it.

Your name may be modern.

Your lifestyle may be global.

But your Gotra is timeless.

And if you ignore it, you’re like a river that doesn’t know where it came from.

Gotra is not your past.

It’s your password to future wisdom.

Unlock it - before the next generation forgets it even existed


Posted 15/11/22025

Tuesday, September 16, 2025

"ಬ್ರಾಹ್ಮಣ ಭೋಜನ ಪ್ರಿಯಃ"

 17/9/2025, Wednesday


ಬ್ರಾಹ್ಮಣರಿಗೆ ಭೋಜನ ಮಾಡಿಸಿದರೆ ಸಕಲ ದೇವತೆಗಳೂ ತೃಪ್ತರಾಗುತ್ತಾರೆ. ತುಂಬಾ ಜನ ಇದನ್ನು ಕೊಂಕು ಮಾತಾಗಿ ಉಪಯೋಗಿಸುತ್ತಿದ್ದಾರೆ..! ಸರಿಯಾಗಿ ಅರ್ಥ ತಿಳಿದುಕೊಂಡು ಮಾತನಾಡುವುದು ಒಳಿತು..


"ಬ್ರಾಹ್ಮಣ ಭೋಜನ ಪ್ರಿಯಃ"

ಬರೀ ಇದೊಂದೇ ಸಾಲು ಮಾತ್ರನಾ ಇರೋದು,? ಖಂಡಿತಾ ಇಲ್ಲ..

"ಅಲಂಕಾರ ಪ್ರಿಯೋ ವಿಷ್ಣು

ಅಭಿಷೇಕ ಪ್ರಿಯಃ ಶಿವಃ |

ನಮಸ್ಕಾರ ಪ್ರಿಯಃ ಭಾನುಃ

ಬ್ರಾಹ್ಮಣ ಭೋಜನ ಪ್ರಿಯಃ ||

ಶ್ರೀ ಪಾರ್ವತೀ ದೇವಿ ಒಂದು ಕಡೆ ಹೇಳ್ತಾರೆ , ಭಕ್ತರು ಶಂಕರನನ್ನು ಪೂಜಿಸಿದರೆ, ಶಂಕರನು ನಾರಾಯಣರನ್ನು ಪೂಜಿಸುತ್ತಾರೆ..!

ನಾರಾಯಣನು ಶಂಕರರನ್ನು ಪೂಜಿಸುತ್ತಾರೆ..!

ಇಬ್ಬರೂ ಸೇರಿ ಸತ್ಪಾತ್ರ ಬ್ರಾಹ್ಮಣರನ್ನು ಪೂಜಿಸುತ್ತಾರೆ..

" ಗಾಯತ್ರೀ " ದೇವಿಯ ಮಕ್ಕಳೆಂದು ಬ್ರಾಹ್ಮಣರನ್ನು ಪರಿಗಣಿಸುತ್ತಾರೆ..!

"ಗಾಯತ್ರೀ" ದೇವಿ ಅಷ್ಟು ಶ್ರೇಷ್ಟವಾದ ತಾಯಿ, ಆ ತಾಯಿ ಜಪಮಾಡುವ ಬ್ರಾಹ್ಮಣರೇ ಶ್ರೇಷ್ಠರೆಂದು ಹೇಳುತ್ತಾರೆ..!

ಈ ಮೇಲಿನ ಸ್ತೋತ್ರದ ತಾತ್ಪರ್ಯವೇನೆಂದರೆ..

ವಿಷ್ಣುವಿಗೆ ಅಲಂಕಾರ ತುಂಬಾ ಇಷ್ಟ , ವಿಷ್ಣು ಅಲಂಕಾರ ಪ್ರಿಯ,.

ಶಿವನಿಗೆ ಅಭಿಷೇಕ ತುಂಬಾ ಇಷ್ಠ, ಶಿವ ಅಭಿಷೇಕ ಪ್ರಿಯ..! ಸೂರ್ಯನಿಗೆ ನಮಸ್ಕಾರ ತುಂಬಾ ಇಷ್ಟ, ಸೂರ್ಯ ನಮಸ್ಕಾರ ಪ್ರಿಯ..!

ಬ್ರಾಹ್ಮಣ ಭೋಜನ ಪ್ರಿಯಃ ಅಂದರೆ ಬ್ರಾಹ್ಮಣ ಚೆನ್ನಾಗಿ ತಿನ್ನೋಕೆ ಇಷ್ಟಪಡ್ತಾರೆ, ಅಂತ ಅಲ್ಲ,

ಬ್ರಾಹ್ಮಣರಿಗೆ ಭೋಜನ ಮಾಡಿಸಿದರೆ ಸಕಲ ದೇವತೆಗಳೂ ತೃಪ್ತ ರಾಗುತ್ತಾರೆ, ಇದರಿಂದ ಬ್ರಾಹ್ಮಣರಿಗೆ ಭೋಜನ ಮಾಡಿಸುವುದರಿಂದ ಹರಿಹರರಿಗೆ ಬೇಗ ಪ್ರಿಯವಾಗಿ, ಸಕಲ ಕಾರ್ಯಗಳೂ ಅನುಕೂಲವಾಗುತ್ತದೆ..!

ಇದು ಅದರ ಪೂರ್ಣ ಅರ್ಥ..!

ಬ್ರಾಹ್ಮಣ ಚೆನ್ನಾಗಿ ತಿಂದು ಕುಳಿತುಕೊಳ್ಳುತ್ತಾರೆ ಅಂತಾ ಅಲ್ಲ…!

ಧನ್ಯವಾದಗಳು.

ಬ್ರಾಹ್ಮಣ ನಿರ್ಧನ ಆದರೆ ಸುಧಾಮ. ಶ್ರೀ ಕೃಷ್ಣ ಅವನ ಸೇವೆ ಮಾಡುತ್ತಾನೆ.

ಬ್ರಾಹ್ಮಣ ಅವಮಾನ ಗೊಂಡರೆ, ಚಾಣಕ್ಯ ಆಗುತ್ತಾನೆ. ಬ್ರಾಹ್ಮಣ ಕೋಪಗೊಂಡರೆ, ಪರಶುರಾಮನಾಗಿ ಪೃಥ್ವಿ ಯನ್ನು ನಾಶ ಮಾಡುತ್ತಾನೆ.

ಬ್ರಾಹ್ಮಣ ವಿದ್ಯೆ ಕಲಿತರೆ ಆರ್ಯಭಟನಾಗಿ ಪ್ರಪಂಚ ಕ್ಕೆ '೦'(ಸೊನ್ನೆ) ಕೊಡುತ್ತಾನೆ.

ಯಾವಾಗ ಬ್ರಾಹ್ಮಣ ವೇದದ ವಿನಾಶ ವನ್ನು ನೋಡತ್ತಾನೊ ಆಗ ಆದಿ ಶಂಕರ ರಾಗಿ ವೈದಿಕ ಧರ್ಮ ಸಂಸ್ಥಾಪಕ ರಾಗುತ್ತಾರೆ.

ಯಾವಾಗ ಬ್ರಾಹ್ಮಣ ರೋಗಿಗಳನ್ನು ನೋಡುತ್ತಾನೊ, ಆಗ ಚರಕ ನಾಗಿ ಲೋಕಕ್ಕೆ ಆಯುರ್ವೇದ ಕೊಡುತ್ತಾನೆ.

ಬ್ರಾಹ್ಮಣ ಯಾವಾಗಲೂ ತನ್ನ ಜ್ಞಾನ ದಿಂದ ವಿಶ್ವ ವನ್ನು ಪ್ರಕಾಶಿಸುತ್ತಾನೆ. ಬ್ರಾಹ್ಮಣ ಸಮಾಜಕ್ಕೆ ವಂದನೆಗಳು.

ಬ್ರಾಹ್ಮಣ ಧರ್ಮ - ವೇದ

ಬ್ರಾಹ್ಮಣ ಕರ್ಮ - ಗಾಯತ್ರಿ

ಬ್ರಾಹ್ಮಣ ಜೀವನ - ತ್ಯಾಗ

ಬ್ರಾಹ್ಮಣ ಮಿತ್ರ - ಸುಧಾಮ

ಬ್ರಾಹ್ಮಣ ಕ್ರೌಧ - ಪರಶುರಾಮ

ಬ್ರಾಹ್ಮಣ ತ್ಯಾಗ - ಋಷಿ ದಧೀಚಿ

ಬ್ರಾಹ್ಮಣ ರಾಜ - ಬಾಜೀರಾವ ಪೇಶ್ವೆ

ಮಯೂರ ಶರ್ಮ

ಬ್ರಾಹ್ಮಣ ಪ್ರತಿಜ್ಞೆ - ಚಾಣಕ್ಯ

ಬ್ರಾಹ್ಮಣ ಬಲಿದಾನ - ಮಂಗಲಪಾಂಡೆ ಚಂದ್ರ ಶೇಖರ ಆಜಾದ.

ಬ್ರಾಹ್ಮಣ ಭಕ್ತಿ - ರಾವಣ

ಬ್ರಾಹ್ಮಣ ಜ್ಞಾನ - ಆದಿಶಂಕರಾಚಾರ್ಯರು/ಮಧ್ವಾಚಾರ್ಯರು.

ಬ್ರಾಹ್ಮಣ ಸುಧಾರಕ - ಮಹರ್ಷಿದಯಾನಂದ

ಬ್ರಾಹ್ಮಣ ರಾಜನೀತಿಜ್ಞ - ಕೌಟಿಲ್ಯ

ಬ್ರಾಹ್ಮಣ ವಿಜ್ಞಾನ - ಆರ್ಯಭಟ

ಬ್ರಾಹ್ಮಣ ಗಣಿತಜ್ಞ - ರಾಮಾನುಜಂ

ಬ್ರಾಹ್ಮಣ ಕ್ರೀಡಾ ಪಟು - ವಿಶ್ವನಾಥ, ಚಂದ್ರಶೇಖರ, ಇತ್ಯಾದಿ

ಇದೆಲ್ಲಾ -

ಕರ್ಮದಿಂದ, ಧರ್ಮದಿಂದ, ಜ್ಞಾನದಿಂದ, ವಿಜ್ಞಾನದಿಂದ, ಹೆಸರಿನಿಂದ, ಜೀವನದಿಂದ,

ಮೃತ್ಯುವಿನಿಂದ, ಭಕ್ತಿಯಿಂದ, ಶಕ್ತಿಯಿಂದ,

ಯುಕ್ತಿಯಿಂದ, ಮುಕ್ತಿಯಿಂದ, ಆತ್ಮದಿಂದ, ಪರಮಾತ್ಮನಿಂದ, ಮೌಲ್ಯದಿಂದ, ಬಲದಿಂದ, ಸಂಸ್ಕಾರದಿಂದ, ಬುದ್ಧಿಯಿಂದ, ಸಮ್ಮಾನದಿಂದ, ಕೌಶಲ್ಯದಿಂದ.

ಬ್ರಾಹ್ಮಣ ಜನ್ಮ - ವಿಷ್ಣುವಿನ ಅಂಶದಿಂದ

ಬ್ರಾಹ್ಮಣ ಬುದ್ಧಿ- ಸಮಸ್ತ ಸಮಸ್ಯೆಗಳಿಗೆ ಸಮಾಧಾನ.

ಬ್ರಾಹ್ಮಣನ ವಾಣಿ - ವೇದದ ಜ್ಞಾನ

ಬ್ರಾಹ್ಮಣ ದೃಷ್ಟಿ - ಸಮಭಾವ

ಬ್ರಾಹ್ಮಣ ಜಾತಿ - ಸಂಕಟ ಹರಣ

ಬ್ರಾಹ್ಮಣ ಕೃಪಾ - ಭವಸಾಗರ ದಾಟುವ ಸಾಧನ

ಬ್ರಾಹ್ಮಣ ಕರ್ಮ - ಸರ್ವ ಜನ ಹಿತ

ಬ್ರಾಹ್ಮಣನ ವಾಸ - ದೇವಾಲಯ

ಬ್ರಾಹ್ಮಣನ ದರ್ಶನ - ಸರ್ವಮಂಗಳ

ಬ್ರಾಹ್ಮಣನ ಆಶೀರ್ವಾದ - ಸಮಸ್ತ ಸುಖ ಹಾಗೂ ವೈಭವಗಳ ಪ್ರಾಪ್ತಿ

ಬ್ರಾಹ್ಮಣನ ವರದಾನ- ಮೋಕ್ಷ ಪ್ರಾಪ್ತಿ

ಬ್ರಾಹ್ಮಣನ ಅಸ್ತ್ರ - ಶಾಪ

ಬ್ರಾಹ್ಮಣನ ಶಸ್ತ್ರ - ಲೇಖನಿ

ಬ್ರಾಹ್ಮಣನಿಗೆ ದಾನ - ಸಹಸ್ರ ಪಾಪಗಳಿಂದ ಮುಕ್ತಿ

ಬ್ರಾಹ್ಮಣನಿಗೆ ದಕ್ಷಿಣೆ- ಏಳೇಳು ಪಾಪಗಳಿಂದ ಉದ್ಧಾರ

ಬ್ರಾಹ್ಮಣನ ಘರ್ಜನೆ - ಸರ್ವ ಭೂತಗಳ ಸಂಹಾರ

ಬ್ರಾಹ್ಮಣನ ಕೋಪ - ಸರ್ವನಾಶ

ಸರ್ವ ಬ್ರಾಹ್ಮಣರ ಏಕತಾ - ಸರ್ವ ಶಕ್ತಿಮಾನ್.

ಜಯ ಮಹಾಕಾಲ - ಜಯ ಪರಶುರಾಮ

ದಯಮಾಡಿ ಸರ್ವ ಬ್ರಾಹ್ಮಣರಿಗೂ ಈ ಸಂದೇಶವನ್ನು ಮುಟ್ಟಿಸಿ.

WhatsApp Forwarded.

Tuesday, September 9, 2025

TOTAL LUNAR ECLIPSE (BLOOD MOON)

 Sunday, 7th September 2025



On the night of 7 - 8 September 2025, a total Lunar eclpise was observed for 82 minutes. The moon appeared reddish glow, called BLOOD MOON.


A lunar eclipse occurs when Earth slips between the the Sun and the Moon, causing its shadow across the lunar surface.. The Moon's reddish glow is due to sunlight refracted through Earth's atmosphere.


As there was clouds, the blood moon could not be seen.


Posted 9/9/2025



Monday, August 25, 2025

ನಮಸ್ಕಾರದ ಪ್ರಾಮುಖ್ಯತೆ

 ನಮಸ್ಕಾರದ ಪ್ರಾಮುಖ್ಯತೆ

 


ಮಹಾಭಾರತದ ಯುದ್ಧ ನಡೆಯುತ್ತಿತ್ತು -

ಒಂದು ದಿನ, ದುರ್ಯೋಧನನ ವ್ಯಂಗ್ಯ ವಿಡಂಬನೆಯಿಂದ ನೊಂದ  ಭೀಷ್ಮ ಪಿತಾಮಹ ಹೀಗೆ ಘೋಷಿಸುತ್ತಾನೆ .

"ನಾನು ನಾಳೆ ಪಾಂಡವರನ್ನು ಕೊಲ್ಲುತ್ತೇನೆ"

ಅವರ ಘೋಷಣೆ ಬಂದ ಕೂಡಲೇ ಪಾಂಡವರ ಶಿಬಿರದಲ್ಲಿ ಆತಂಕ ಹೆಚ್ಚಾಯಿತು -

ಭೀಷ್ಮನ ಸಾಮರ್ಥ್ಯಗಳ ಬಗ್ಗೆ ಎಲ್ಲರಿಗೂ ತಿಳಿದಿತ್ತು, ಆದ್ದರಿಂದ ಪ್ರತಿಯೊಬ್ಬರೂ ಕೆಟ್ಟದ್ದರ ಸಾಧ್ಯತೆಯ ಬಗ್ಗೆ ಚಿಂತೆ ಮಾಡಿದರು. ನಂತರ  ಶ್ರೀ ಕೃಷ್ಣ ದ್ರೌಪದಿ ಗೆ, ಈಗ ನನ್ನೊಂದಿಗೆ ಬಾ -ಶ್ರೀಕೃಷ್ಣನು ದ್ರೌಪದಿಯೊಂದಿಗೆ ನೇರವಾಗಿ ಭೀಷ್ಮ ಪಿತಾಮಹನ ಶಿಬಿರವನ್ನು ತಲಿಪಿದನು -

ಶಿಬಿರದ ಹೊರಗೆ ನಿಂತು ದ್ರೌಪದಿ ಗೆ – “ಒಳಗೆ ಹೋಗಿ, ಅಜ್ಜನಿಗೆ ನಮಸ್ಕರಿಸು.” ಎಂದು ಹೇಳಿದರು

ದ್ರೌಪದಿ ಒಳಗೆ ಹೋಗಿ ಪಿತಾಮಹ ಭೀಷ್ಮನಿಗೆ ನಮಸ್ಕರಿಸಿದಾಗ -    "ಅಖಂಡ ಸೌಭಾಗ್ಯವತಿ ಭವ" ಎಂದು ಆಶೀರ್ವದಿಸಿದ ಅವರು ನಂತರ ದ್ರೌಪದಿಯನ್ನು ಕೇಳಿದರು !!

"ಮಗಳೇ, ಇಂತಹ ರಾತ್ರಿಯಲ್ಲಿ ನೀನು ಏಕಾಂಗಿಯಾಗಿ ಇಲ್ಲಿಗೆ ಹೇಗೆ ಬಂದಿದ್ದೀ, ಶ್ರೀ ಕೃಷ್ಣ ಅವರು ನಿನ್ನನ್ನು ಇಲ್ಲಿಗೆ  ಕರೆತಂದಿದ್ದಾರಾ"?

ಆಗ ದ್ರೌಪದಿ ಹೀಗೆ ಹೇಳಿದಳು -

"ಹೌದು,ಅವರು ಕೋಣೆಯ ಹೊರಗೆ ನಿಂತಿದ್ದಾರೆ" ನಂತರ ಭೀಷ್ಮನು ಸಹ ಕೋಣೆಯಿಂದ ಹೊರಬಂದನು ಮತ್ತು ಇಬ್ಬರೂ ಪರಸ್ಪರ ನಮಸ್ಕರಿಸಿದರು. "ನನ್ನ ಒಂದು ವಚನವನ್ನು ನನ್ನ ಇನ್ನೊಂದು ವಚನದಿಂದ ಮುರಿದು ಹಾಕಲು  ಶ್ರೀ ಕೃಷ್ಣನಿಂದ ಮಾತ್ರ ಸಾಧ್ಯ" ಭೀಷ್ಮ ಪಿತಾಮಹ ಹೀಗೆ ಹೇಳಿದನು.

ಶಿಬಿರದಿಂದ ಹಿಂದಿರುಗುವಾಗ, ಶ್ರೀ ಕೃಷ್ಣನು ದ್ರೌಪದಿಗೆ ಹೀಗೆ ಹೇಳಿದನು -

"ಒಮ್ಮೆ ನೀನು ಹೋಗಿ ಅಜ್ಜನಿಗೆ ಗೌರವ ಸಲ್ಲಿಸಿದ್ದಕ್ಕೇ, ನಿನ್ನ ಪತಿಯಂದಿರಿಗೆ ಜೀವನ ಸಿಕ್ಕಿದೆ".

"ಇನ್ನು ನೀನು ಭೀಷ್ಮ, ಧೃತರಾಷ್ಟ್ರ, ದ್ರೋಣಾಚಾರ್ಯ ಇತ್ಯಾದಿ ಹಿರಿಯರಿಗೆ ಪ್ರತಿದಿನ ನಮಸ್ಕಾರ ಮಾಡುತ್ತಿದ್ದರೆ, ಮತ್ತು ದುರ್ಯೋಧನ - ದುಷ್ಯಾಸನಾದಿಗಳ ಪತ್ನಿಯರು ಸಹ ಪಾಂಡವರಿಗೆ ನಮಸ್ಕಾರ ಮಾಡುತ್ತಿದ್ದರೆ, ಬಹುಶಃ ಈ ಯುದ್ಧವು ಆಗುತ್ತಿರಲಿಲ್ಲ"

ಅಂದರೆ ,

ಪ್ರಸ್ತುತ ನಮ್ಮ ಮನೆಗಳಲ್ಲಿ ಅನೇಕ ಸಮಸ್ಯೆಗಳಿಗೆ ಮೂಲ ಕಾರಣವೆಂದರೆ -

"ತಿಳಿಯದೆ ಆಗಾಗ್ಗೆ ಮನೆಯ ಹಿರಿಯರನ್ನು ಕಡೆಗಣಿಸಲಾಗುತ್ತದೆ"

"ಮನೆಯ ಮಕ್ಕಳು ಮತ್ತು ಸೊಸೆಯಂದಿರು ಪ್ರತಿದಿನ ಮನೆಯ ಎಲ್ಲಾ ಹಿರಿಯರಿಗೆ ನಮಸ್ಕರಿಸಿ ಅವರ ಆಶೀರ್ವಾದವನ್ನು ತೆಗೆದುಕೊಂಡರೆ, ಯಾವುದೇ ಮನೆಯಲ್ಲಿ ಎಂದಿಗೂ ಕ್ಲೇಶಗಳು ಉಂಟಾಗುವುದಿಲ್ಲ"

ಹಿರಿಯರು ನೀಡಿದ ಆಶೀರ್ವಾದಗಳು ರಕ್ಷಾಕವಚವಾಗಿ ಕಾರ್ಯನಿರ್ವಹಿಸುತ್ತವೆ; ಈ ರಕ್ಷಾಕವಚವನ್ನು ಯಾವುದೇ "ಆಯುಧ" ಭೇದಿಸಲು ಸಾಧ್ಯವಿಲ್ಲ.

"ವಿನಯದಿಂದ ಪ್ರತಿಯೊಬ್ಬರೂ ಈ ಸಂಸ್ಕೃತಿಯನ್ನು ಪಾಲಿಸಿದರೆ, ನಿಯಮ ಬದ್ಧವಾಗಿ ಮಾಡಿದರೆ ಆ ಮನೆ ಸ್ವರ್ಗವಾಗುತ್ತದೆ."

ಏಕೆಂದರೆ ,

ನಮಸ್ಕಾರ ಪ್ರೀತಿ,

ನಮಸ್ಕಾರ  ಶಿಸ್ತು

ನಮಸ್ಕಾರ ಶೀತಲತೆ.

ನಮಸ್ಕಾರ ಗೌರವವನ್ನು ಕಲಿಸುತ್ತವೆ.

ನಮಸ್ಕಾರದಿಂದ ಸುವಿಚಾರ  ಬರುತ್ತದೆ.

ನಮಸ್ಕಾರ ಬಾಗುವುದನ್ನು ಕಲಿಸುತ್ತದೆ.

ನಮಸ್ಕಾರ ಕೋಪವನ್ನು ಅಳಿಸುತ್ತದೆ.

ನಮಸ್ಕಾರ ಅಹಂ ಅನ್ನು ಅಳಿಸುತ್ತದೆ.

ನಮಸ್ಕಾರ ನಮ್ಮ ಸಂಸ್ಕೃತಿ

ನಮಸ್ಕಾರ ನಮ್ಮ ಸಂಸ್ಕಾರವನ್ನು ತಿಳಿಸುತ್ತದೆ...



From WhatApp forwarded 25/8/2025

Monday, August 11, 2025

ಮಹಾಭಾರತದ ಸಾರ

 August 12, 2025

ಐದು ಲಕ್ಷ ಶ್ಲೋಕಗಳನ್ನು ಒಳಗೊಂಡಿರುವ ಮಹಾಭಾರತದ ಸಾರವನ್ನು ಕೇವಲ ಒಂಬತ್ತು ಸಾಲುಗಳಲ್ಲಿ ಅರ್ಥಮಾಡಿಕೊಳ್ಳಿ.

ನೀವು ಯಾವುದೇ ಧರ್ಮದವರಾಗಿದ್ದರೂ,

ನೀವು ಗಂಡಾಗಿರಲಿ ಅಥವಾ ಹೆಣ್ಣಾಗಿರಲಿ,

ನೀವು ಬಡವರಾಗಿರಲಿ ಅಥವಾ ಶ್ರೀಮಂತರಾಗಿರಲಿ,

ನೀವು ನಿಮ್ಮ ದೇಶದಲ್ಲಿರಲಿ ಅಥವಾ ವಿದೇಶದಲ್ಲಿರಲಿ,

ಸಂಕ್ಷಿಪ್ತವಾಗಿ,

ನೀವು ಮನುಷ್ಯರಾಗಿದ್ದರೆ, ಮಹಾಭಾರತದ ಈ ಕೆಳಗಿನ ಅಮೂಲ್ಯವಾದ "9 ಮುತ್ತುಗಳನ್ನು" ಓದಿ ಅರ್ಥಮಾಡಿಕೊಳ್ಳಿ:

1. ನಿಮ್ಮ ಮಕ್ಕಳ ಅವಿವೇಕದ ಬೇಡಿಕೆಗಳು ಮತ್ತು ಆಸೆಗಳನ್ನು ನೀವು ಸಕಾಲದಲ್ಲಿ ನಿಯಂತ್ರಿಸದಿದ್ದರೆ, ನೀವು ಜೀವನದಲ್ಲಿ ಅಸಹಾಯಕರಾಗುತ್ತೀರಿ... *"ಕೌರವ್"*

2. ನೀವು ಎಷ್ಟೇ ಬಲಿಷ್ಠರಾಗಿದ್ದರೂ, ಅನ್ಯಾಯವನ್ನು ಬೆಂಬಲಿಸಿದರೆ, ನಿಮ್ಮ ಶಕ್ತಿ, ಆಯುಧಗಳು, ಕೌಶಲ್ಯ ಮತ್ತು ಆಶೀರ್ವಾದಗಳು ಎಲ್ಲವೂ ನಿಷ್ಪ್ರಯೋಜಕವಾಗುತ್ತವೆ... *"ಕರ್ಣ"*

3. ನಿಮ್ಮ ಮಕ್ಕಳು ತಮ್ಮ ಜ್ಞಾನವನ್ನು ದುರುಪಯೋಗಪಡಿಸಿಕೊಂಡು ಸಂಪೂರ್ಣ ವಿನಾಶಕ್ಕೆ ಕಾರಣರಾಗುವಷ್ಟು ಮಹತ್ವಾಕಾಂಕ್ಷೆಯುಳ್ಳವರನ್ನಾಗಿ ಮಾಡಬೇಡಿ... *"ಅಶ್ವತ್ಥಾಮ"*

4. ಅಧರ್ಮಿಗಳಿಗೆ ಶರಣಾಗುವಂತೆ ಎಂದಿಗೂ ಭರವಸೆ ನೀಡಬೇಡಿ... *"ಭೀಷ್ಮ ಪಿತಾಮಹ"*

5. ಸಂಪತ್ತು, ಅಧಿಕಾರ, ಅಧಿಕಾರ ಮತ್ತು ತಪ್ಪು ಜನರ ಬೆಂಬಲದ ದುರುಪಯೋಗವು ಅಂತಿಮವಾಗಿ ಸಂಪೂರ್ಣ ವಿನಾಶಕ್ಕೆ ಕಾರಣವಾಗುತ್ತದೆ... *"ದುರ್ಯೋಧನ"*

6. ಅಧಿಕಾರದ ಲಗಾಮನ್ನು ಕುರುಡನಿಗೆ, ಅಂದರೆ ಸ್ವಾರ್ಥ, ಸಂಪತ್ತು, ಹೆಮ್ಮೆ, ಜ್ಞಾನ, ಮೋಹ ಅಥವಾ ಕಾಮದಿಂದ ಕುರುಡನಾಗಿರುವವನಿಗೆ ಎಂದಿಗೂ ಹಸ್ತಾಂತರಿಸಬೇಡಿ, ಏಕೆಂದರೆ ಅದು ವಿನಾಶಕ್ಕೆ ಕಾರಣವಾಗುತ್ತದೆ... *"ಧೃತರಾಷ್ಟ್ರ"*

7. ಜ್ಞಾನವು ಜ್ಞಾನದೊಂದಿಗೆ ಇದ್ದರೆ, ನೀವು ಖಂಡಿತವಾಗಿಯೂ ಗೆಲ್ಲುತ್ತೀರಿ... *"ಅರ್ಜುನ್*

8. ಮೋಸ ಮಾಡುವುದರಿಂದ ಎಲ್ಲಾ ವಿಷಯಗಳಲ್ಲಿ ಯಶಸ್ಸು ಸಿಗುವುದಿಲ್ಲ... *"ಶಕುನಿ"*

9. ನೀವು ನೈತಿಕತೆ, ಸದಾಚಾರ ಮತ್ತು ಕರ್ತವ್ಯವನ್ನು ಯಶಸ್ವಿಯಾಗಿ ಎತ್ತಿಹಿಡಿದರೆ, ಜಗತ್ತಿನ ಯಾವುದೇ ಶಕ್ತಿಯು ನಿಮಗೆ ಹಾನಿ ಮಾಡಲು ಸಾಧ್ಯವಿಲ್ಲ... *"ಯುಧಿಷ್ಠಿರ"*

ಈ ಲೇಖನ ಎಲ್ಲರಿಗೂ ಪ್ರಯೋಜನಕಾರಿಯಾಗಿದೆ, ಆದ್ದರಿಂದ ದಯವಿಟ್ಟು ಯಾವುದೇ ಬದಲಾವಣೆಗಳಿಲ್ಲದೆ ಹಂಚಿಕೊಳ್ಳಿ.

"ಸರ್ವೇ ಭವಂತು ಸುಖಿನಃ - ಸರ್ವೇ ಸಂತು ನಿರಾಮಯಃ"



Posted 12/8/2025