Sunday, July 31, 2022

MOM HAPPY BIRTHDAY - FACEBOOK POST

ನಳಿನಿ ಸೋಮಯಾಜಿ ಜುಲೈ 30.

ತಿರು ಶ್ರೀಧರ್

Happy Birth Day Nalini Somayaji Amma 🌷🙏🌷

ನಳಿನಿ ಸೋಮಯಾಜಿ ಸದಾ ಹಸನ್ಮುಖಿ, ಉತ್ಸಾಹಿ, ವಿವಿಧ ಸಾಂಸ್ಕೃತಿಕ ಚಟುವಟಿಕೆಗಳ ಆಸಕ್ತೆ, ಪ್ರೋತ್ಸಾಹದಾಯಿನಿ, ಮಕ್ಕಳೊಂದಿಗೆ-ಹಿರಿಯರೊಂದಿಗೆ-ಎಲ್ಲರೊಂದಿಗೆ ಬೆರೆವವರು. ನಳಿನಿ ಸೋಮಯಾಜಿ ಮತ್ತು Jayarama Somayaji ದಂಪತಿಗಳು ಯುನೈಟೆಡ್ ಅರಾಬ್ ಎಮಿರೇಟ್ಸ್ ದೇಶದಲ್ಲಿ ಕನ್ನಡ ಸಾಂಸ್ಕೃತಿಕ ವಾತಾವರಣ ನಿರ್ಮಿಸುವಲ್ಲಿ ವಹಿಸಿದ ಪಾತ್ರವನ್ನು ಇಲ್ಲಿನ ಜನ ಇಂದೂ ಆಪ್ತವಾಗಿ ಸ್ಮರಿಸುತ್ತಾರೆ. ಶಿಕ್ಷಣ ಕ್ಷೇತ್ರದಲ್ಲಿಯೂ ಅಪಾರ ಕೆಲಸ ಮಾಡಿರುವ ಈ ದಂಪತಿಗಳು
ಇಂದೂ ಆ ಕ್ಷೇತ್ರದಲ್ಲಿ ಸಾಕಷ್ಟು ಆಪ್ತತೆಯಿಂದ ಆಸಕ್ತಿವಹಿಸಿದ್ದಾರೆ.
ಪಾಕ ವಿಚಾರದಲ್ಲಾಗಲಿ, ಪ್ರಾಣಿ - ನಿಸರ್ಗ ವಿಚಾರದಲ್ಲಾಗಲಿ, ಮಕ್ಕಳಿಗೆ ಕಥೆ ಹೇಳುವುದರಲ್ಲಾಗಲಿ, ಸಾಂಸ್ಕೃತಿಕ ಚಟುವಟಿಕೆಗಳ ಭಾಗವಹಿಕೆಯನ್ನು ಅಭಿವ್ಯಕ್ತಿಸುವುದರಲ್ಲಾಗಲಿ ಈ ಹಿರಿಯ ದಂಪತಿಗಳ ಮನೋಧರ್ಮ ಮೆಚ್ಚುಗೆ ಹುಟ್ಟಿಸುತ್ತದೆ. ಈ ಹಿರಿಯ ದಂಪತಿಗಳಿಗೆ ಮತ್ತು ಅವರ ಕುಟುಂಬವರ್ಗದವರಿಗೆ ಶುಭಕೋರುತ್ತಾ, ನಳಿನಿ ಸೋಮಯಾಜಿ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳನ್ನು ಸಲ್ಲಿಸೋಣ.
ಅಮ್ಮಾ, ಆತ್ಮೀಯ ನಮಸ್ಕಾರ ಮತ್ತು ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು. ತಮ್ಮ ಮತ್ತು ತಮ್ಮ ಕುಟುಂಬದವರ ಬದುಕು ಸಕಲ ಸುಖ, ಸೌಖ್ಯ, ಸಂಪದ, ಸಂತಸ, ಸಾಧನೆ, ಸಂತೃಪ್ತಿಗಳಿಂದ ನಿತ್ಯ ಕಂಗೊಳಿಸುತ್ತಿರಲಿ.

Vijayalakshmi Kadiyali
ನನ್ನ. ಪ್ರೀತಿಯ ಅಕ್ಕ, ನಳಿನಿ , ಸೋಮಯಾಜಿ.ಗೆ.ಜನ್ಮದಿನದ..ಶುಭಾಶಯಗಳು..... ಸದಾ ಖುಷಿ ಕೊಡುವ , ತುಂಬಾ ಮೃದು ಸ್ವಭಾವದ,ನಾಯಕತ್ವ ವಹಿಸಿ ಮುನ್ನಡೆವ ಪ್ರವೃತ್ತಿ,ಚಾಣಕ್ಯತೆ, ಸ್ವಾರ್ಥವಿಲ್ಲದ ಮನಸ್ಸು, ಪ್ರಾಮಾಣಿಕತೆಯ ಜೀವನ....ಇವಳೊಡನೇ ಅಂಟಿಕೊಂಡ ನಂಟು .......... ಜನ್ಮದಿನ ಅನ್ನೋದು,ಬಹಳ ಅಪರೂಪದ ದಿನ...ಇಷ್ಟು, ದಿನ ಕಳೆದರೂ ,ಈ ಒಂದು ದಿನ ಖುಷಿ ಕೊಡುವಂತಹ ದಿನವದು ವರ್ಷದ 364 ದಿನಗಳೂ ಒಂದೊಂದು ಅಧ್ಬುತ ದಿನಗಳೇ.ಆದರೂ...ಈ ಜನ್ಮದಿನ ಬಹಳ ಪ್ರೀತಿಯ ದಿನ........ ಮುದ್ದಾದ ಮೊಮ್ಮಕ್ಕಳೊಡನೆ,ಪತಿಯೊಡನೆ, ದೀರ್ಘಾಯುಷ್ಯ ವಾಗಿ.ಸಮೃದ್ದಿ. ಬಾಳ್ವೆಯನ್ನು ಮಾಡಲಿ , ಎಂದು , ಶ್ರೀಕೃಷ್ಣ ಮುಖ್ಯ ಪ್ರಾಣ ದೇವರಲ್ಲಿ ಪ್ರಾರ್ಥನೆ,ಮಾಡುವೆ..........
ಅಕ್ಕಾ. .ಎನ್ನುವ ,ಆಲದ ನೆರಳಿಗೆ .
ಜನುಮದಿನದ ಶುಭಾಶಯಗಳು........
ಅಕ್ಕ,ಎಂದರೆ, ಅಕ್ಕರೆಯ ಗಣಿ.ಸಕ್ಕರೆಯ ಸವಿ..ನನ್ನ ಎಲ್ಲಾ ಮನಸ್ಸಿನ ,ದುಗುಡವನ್ನೆಲ್ಲಾ,ಮರೆಸಿ,ಸೋದರಿಕೆಯ ಸವಿಯುಣಿಸಿ,ನನ್ನ ನೋವಿಗೆ ವಿರಾಮ ನೀಡುತ್ತಾಳೆ.
ಅದೊಂದು ಕರುಳ ಕುಡಿಯ ಅವಿನಾವಭಾವ ಸಂಬಂಧದ ಕೊಂಡಿ .ಎಲ್ಲರ ಬಗ್ಗೆಯೂ ಮನ ಮಿಡಿಯುತ್ತಾಳೆ.ಕಷ್ಟದಲ್ಲಿ ಮೈದಡವುತ್ತಾಳೆ..ಕೈ ಹಿಡಿಯುತ್ತಾಳೆ...
ನನಗಂತೂ ,ಬೇಸರ ,ನೋವಾದಾಗಲೆಲ್ಲ ,ಅಕ್ಕನ ,ಮನೆಗೆ ಹೋದಾಗ,ದೇವಸ್ಥಾನಕ್ಕೆ ಹೋದ ಹಾಗೆ,ದೇವರನ್ನು ,ಸ್ವತಃ ನೋಡಿದಹಾಗೆ ಬಾಸವಾಗುವಹಾಗಾಗುತ್ತೆ...
ಆಲದಮರ ಎಲ್ಲರ ನೆರಳಾಗಿರುವ ಹಾಗೆ.ಅಕ್ಕನ ಕುಟುಂಬ,ಸದಾ ಕ್ಷೇಮವಾಗಿರಲಿ ..ಅಕ್ಕ,ಬಾವನ ಪ್ರೀತಿ ,ಅಕ್ಷಯವಾಗಲಿ....
ಏಳೇಳು ಜನುಮದಲ್ಲಿಯೂ..ಈ ಅಕ್ಕನೇ ನನ್ನಕ್ಕವಾಗಲಿ...ಎಂದು..ಕೇಳಿಕೊಳ್ಳುವೆ.
ಹುಟ್ಟು ಹಬ್ಬದ ಶುಭಾಶಯಗಳು.........ನಳಿನಿ. ಅಕ್ಕಾ.....
ನಳಿನಿ ಸೋಮಯಾಜಿ 
ವಿಜಿ ನನ ತಂಗಿ ನಿನ್ನ ಪ್ರೀತಿಯ ಅಕ್ಕರೆಯ ಮನದಾಳದ ಮಾತುಗಳಿಗೆ ಜನ್ಮದಿನ ದ ಶುಭಾಶಯಗಳು ನಳಿನಿ.....
Photos posted by friendsin FACEBOOK

BY ANURADHA NATARAJ

Nalina Dwaraknath
ಹುಟ್ಟು ಹಬ್ಬದ ಶುಭಾಶಯಗಳು ನಳಿನಿ . ಸದಾ ಹೀಗೇ ಉತ್ಸಾಹದಿಂದ ನಿಮ್ಮ ಜೀವನ ಸಾಗಲಿ ಎಂದು ನಮ್ಮ ಹಾರೈಕೆ .🍬🎂💐🎁🌹

 By Veena Rajkumar

Vishala Bhat:
ಹುಟ್ಟು ಹಬ್ಬದ ಶುಭಾಶಯಗಳು ನಳಿನಿ . 💐🎉🌺🎂🎉💐🌺. ಸದಾ ಹೀಗೇ ನಗು ನಗ್ತಾ ನಿಮ್ಮ ಜೀವನ ಸಾಗಲಿ ಎಂದು ನಮ್ಮ ಹಾರೈಕೆ  
By Asha V Bhat

Rukmini Jayarama Rao
ಹಸನ್ಮುಖಿ ಪಾಕಪ್ರವೀಣೆ ಸ್ನೇಹಮಯಿ ಒಟ್ಟಾರೆ " ಸಕಲಕಲಾವಲ್ಲಭೆ " ನಮ್ಮೆಲ್ಲರ ಅಚ್ಚುಮೆಚ್ಚಿನ ಗೆಳತಿ ನಳಿನಿ ಸೋಮಯಾಜಿಗೆ ಜನುಮದಿನದ ಪ್ರೀತಿಯ ಶುಭಾಶಯಗಳು ಕಣಮ್ಮಾ
  • By Sulatha Tantry



S N Smha
ಸೋಮಯಾಜಿ ಯವರು ಆಯೋಜಿಸಿದ್ದ ಕಾರ್ಯಕ್ರಮಗಳಲ್ಲಿ ನಾವೂ ಭಾಗಿಯಾಗಿದ್ದೆವು. ಬಹಳ ಒಳ್ಳೆಯ ಜನ.
ನಳಿನಿ ಯವರಿಗೆ ಹುಟ್ಟು ಹಬ್ಬದ ಶುಭಾಶಯಗಳು.


By Usha Suresh Cukkemane

K Ramesh Ballal
Happy Birthday 🎁🎂🎊Many more happy returns of the day A very Happy birthday Nalinii Somayajiyavre May Lord Sri Krishna showers choicest blessings on you n your family Stay blessed

Roopa Satish
Happy Birthday 🎁🎂🎈 to you stay happy and enjoy Nalini Somayaji ... Ms. Nalini, you are velly velly sweet

Ganesh Rai
ಶತಮಾನಂ ಭವತಿ ಶತಾಯು: ಪುರುಷ: ಶತೇಂದ್ರಿಯ: ಆಯುಷ್ಯೆವೆಂದ್ರಿಯೆ ಪ್ರತಿತಿಷ್ಠತಿ|| 

ನಳಿನಿ ಸೋಮಯಾಜಿ 
ಹೂವಿನ ಮಳೆಯಂತೆ ಶುಭಾಶಯಗಳ ಹೊಳೆ ಹರಿಸಿದ, ಶುಭ ಹಾರೈಸಿದ
ಹಾಗೂ ಸ್ನೇಹಿತ ಬಳಗಕ್ಕೆ ಪ್ರತಿಯೋರ್ವ ರಿಗೂ ಮನಪೂರ್ಣ ಧನ್ಯವಾದಗಳು.
525 Comments and 407 likes

Wednesday, July 27, 2022

SUGAMA BHAJANE - 10

 Sunday, 24 July 2022

ZOOM ONLINE

HOST: JAYARAMA NALINI SOMAYAJI at Birthimane, Bengaluru



ವಿಷ್ಣು ಸಹಸ್ರನಾಮ (ಸಂಕ್ಷಿಪ್ತ)
It was our pleaure to host July month's Sugama Bhajane.




ಗಜವದನೆ ಬೇಡುವೇ (ಸೋಮಯಾಜಿ ದಂಪತಿ)
We were only two present, as our children were busy with their own commitment.


ಗೆಜ್ಜೆ ಕಟ್ಟಿ ನಲಿದಾಡುತ ಬಾರೋ...(ರಿಷಿ ಹಾಡು)

However, nice decoration with photos and lights were arranged and most of the group members were present by 7 pm


ರಂಗ ಬಾರೋ... ಪಾಂಡುರಂಗ ಬಾರೋ...(ನಳಿನಿ ಸೋಮಯಾಜಿ)

The session started with "VISHNU SAHASRANAMA" followed by Ganesha Stuthi, and Bhajans.


ಕಾಪಾಡು ಶ್ರೀ ಸತ್ಯನಾರಾಯಣ (ರಾಜೇಶ್ವರ ಹೊಳ್ಳ)

The following members were present:


ರಾಯರೇ ಗತಿಯು ನಮಗೇ  (ಉದಯಕುಮಾರ್)

Sudhaker Pejavar, Latha at Dubai


ಬಾಳೇ ಬಂಗಾರವಾಯಿತು.... ಸುಧಾಕರ್ ರಾವ್ ಪೇಜಾವರ್ 

Rajeshwara Holla ,Hemalatha, Mangaluru


ಮರೆಯದಿರು... ಮರೆಯದಿರು... ಮನುಜಾ... (ರಾಮಚಂದ್ರ ಉಡುಪ)

Madhusudan Talithaya, Pushpa, at Bengaluru

Ashok, Kalpana, Akshatha, Ananya, Sudhakar Khandiga, at Sharajah


ಎಲ್ಲಿ ನಿನ್ನ ಭಕ್ತರೋ ... ಅಲ್ಲೇ ದೇವಾಲಯ ... (ಜಯರಾಮ ಸೋಮಯಾಜಿ)

Ramachandra Udupa, Purushothama Udupa, at Mandarthi

Prashanth, Supriya, at Sharjah


ಕಾಗದ ಬಂದಿದೆ, ಕಾಗದ .. ಪದುಮನಾಭನ ಕಾಗದ....

(ಪುರುಷೋತ್ತಮ, ರಾಮಚಂದ್ರ ಉಡುಪ)

Udaykumar at Dubai

We, Jayarama Nalini Somayaji at Bengaluru

It was a devine feeling of singing and listening bhajans from members.

The sesioneneded with song Bhagyada Lakshmi Baramma, by us


ಭಾಗ್ಯಾದ ಲಕ್ಷ್ಮಿ ಬಾರಮ್ಮ....(ಜಯರಾಮ ನಳಿನಿ ಸೋಮಯಾಜಿ )

Aarthi song by Rajeshwara Holla.

Sahankaraya song by Udyakumar,

ಆರತಿ.... ಜಯ್ ಜಗದೀಶ ನಮೋ...(ರಾಜೇಶ್ವರ ಹೊಳ್ಳ)

Mangala song (Chalisuve jaladali) by Ramachandra & Purushothama Udupa


ಶಂಕರಾಯ..ಶಂಕರಾಯ..ಮಂಗಳಂ.... (ಉದಯಕುಮಾರ್)

Abhinandane by Ashok Kumar


ಚಲಿಸುವ ಜಲದಲಿ ಮತ್ಸ್ಯನಿಗೆ ....(ರಾಮಚಂದ್ರ ಉಡುಪ)

Chinthane - by Sudhaker Rao Pejavar,


ಚಿಂತನೆ - ಭೀಮನ ಅಮಾವಾಸ್ಯೆ (ಸುಧಾಕರ್ ರಾವ್ ಪೇಜಾವರ್ )

Thanks one and all.

Special thanks to Udaykumar, Sudhaker Rao Pejavar, for co-ordinating the event.

SARVE JANAH SUKHINO BHAVANTHU.


Written Monday, 25th July 2022




BREATHING EXERCISE (ಪ್ರಾಣಾಯಾಮ)

 * ಚಿತ್ತ ಸಮಸ್ಥಿತಿಗೆ ಪ್ರಾಣಾಯಾಮ *


ಅನೈಚ್ಛಿಕವಾದ ಉಸಿರಾಟವನ್ನು ನಮ್ಮ ಇಚ್ಛೆಗೊಳಪಡಿಸಿ ಹತೋಟಿಗೆ ತರುವುದೇ ಪ್ರಾಣಾಯಾಮ. ಮನಸ್ಸಿನ ಚಂಚಲತೆ, ಗೊಂದಲ ನಿವಾರಿಸುವ ಕ್ರಮಬದ್ಧ ಉಪಾಯ ಇದು.

ಪ್ರಾಣಾಯಾಮ ಎಂದರೇನು? ಮತ್ತು ಪ್ರಯೋಜನಗಳೇನು?

ಪ್ರಾಣ ಶಕ್ತಿ ಎಂದರೆ ದೇಹದಲ್ಲಿ ಅಡಗಿರುವ ಸೂಕ್ಷ್ಮ ಜೀವಶಕ್ತಿ (ಆಯಾಮ = ವಿಸ್ತರಿಸುವುದು, ಪ್ರಾಣ =ಪ್ರಾಣವಾಯು, ಉಚ್ಚಾಸ ಮತ್ತು ನಿಶ್ವಾಸ). ಉಸಿರಾಟದ ಮೇಲೆ ಹಿಡಿತ ತರುವುದೇ ಪ್ರಾಣಾಯಾಮ (ಗಮನ ಪೂರ್ವಕ ಉಸಿರಾಟ).ಉಸಿರಿನ ಮೂಲಕ ಪಂಚ ಪ್ರಾಣಗಳ ಹಾಗೂ ಮನಸ್ಸಿನ ಹತೋಟಿಯನ್ನು ಸಾಧಿಸುವುದೇ ಪ್ರಾಣಾಯಾಮ.ಇದು ಉಸಿರನ್ನು ಸಕ್ರಮಗೊಳಿಸುವುದೇ ಆಗಿರುತ್ತದೆ. 

ಅಷ್ಟಾಂಗ ಯೋಗದ ನಾಲ್ಕನೇ ಮೆಟ್ಟಿಲೇ ಪ್ರಾಣಯಾಮ. ಪ್ರಾಣಕ್ಕೆ ಹೊಸ ಒಂದು ಆಯಾಮವೇ ಪ್ರಾಣಯಾಮ.ಈ ಪ್ರಾಣಾಯಾಮವು ಉಸಿರಾಟದ ಮೇಲೆ ಹಿಡಿತವುಂಟು ಮಾಡುವುದಲ್ಲದೆ, ಸಕ್ರಮಗೊಳಿಸಿ  ಶ್ವಾಸಕೋಶದ ಮತ್ತು ನರಮಂಡಲದ ಸಾಮರ್ಥ್ಯವನ್ನು ಹೆಚ್ಚಿಸುವುದು. ನಾಡಿ ಶುದ್ಧಿಯಾಗಿ ಮನಸ್ಸಿನ ಚಂಚಲತೆ ಇಲ್ಲದಾಗಿ ಅದು ಶಾಂತವಾಗುವುದು. ಸಂಯಮ ಉಂಟಾಗುವುದು, ವೈಜ್ಞಾನಿಕವಾಗಿ ಹೇಳುವುದಾದರೆ ನಮ್ಮ ಪ್ರಾಣಮಯ ಕೋಶದ ಶುದ್ಧೀಕರಣವಾಗಿ ಅದು ಸಶಕ್ತವಾಗುವುದು. 

ಪ್ರಾಣಾಯಾಮದಲ್ಲಿ ಅತೀ ಹೆಚ್ಚಿನ ಪ್ರಮಾಣದಲ್ಲಿ ಆಮ್ಲಜನಕವು ಶ್ವಾಶಕೋಶಕ್ಕೆ ಒದಗುತ್ತದೆ. ಹಾಗೆಯೇ ಅಷ್ಟೇ ಪ್ರಮಾಣದಲ್ಲಿ ನಿಶ್ವಾಸವು ಅಂಗಾರಾಮ್ಲ ಮತ್ತು ತ್ಯಾಜ್ಯಗಳಾದ ಕಶ್ಮಲಗಳನ್ನು ಹೊರ ಹಾಕುತ್ತದೆ.ಮಾನವನು ಸಾಮಾನ್ಯ ಉಸಿರಾಟದಿಂದ 500 ಕ್ಯೂಬಿಕ್ ಸೆಂ. ಮೀ ಗಾಳಿಯನ್ನು ತೆಗೆದುಕೊಳ್ಳುತ್ತಾನೆ.ಆದರೆ ಪ್ರಾಣಾಯಾಮದಲ್ಲಿ ಸುಮಾರು 3000-4000 ಕ್ಯೂಬಿಕ್ ಸೆಂ.ಮೀ ಗಾಳಿ ತೆಗೆದುಕೊಳ್ಳುತ್ತಾನೆ. ಸರಿಯಾಗಿ ಪ್ರಾಣಾಯಾಮ ಅಭ್ಯಾಸ ಮಾಡಿಕೊಂಡರೆ ಆಯುಸ್ಸು ಹೆಚ್ಚಿಸಿಕೊಳ್ಳಬಹುದು.

ಅನೈಚ್ಛಿಕವಾದ ಉಸಿರಾಟವನ್ನು ನಮ್ಮ ಇಚ್ಛೆಗೊಳಪಡಿಸಿ ಹತೋಟಿಗೆ ತರುವುದೇ ಪ್ರಾಣಾಯಾಮ. ಪತಂಜಲಿ ಋಷಿಯು ಮನಸ್ಸಿನ ಚಂಚಲತೆ, ಗೊಂದಲಗಳನ್ನು ನಿವಾರಿಸುವ ಕ್ರಮಬದ್ಧ ಉಪಾಯವೇ ಪ್ರಾಣಯಾಮ ಎಂದು ಹೇಳುತ್ತಾರೆ. (ಅವರೇ ಯೋಗದಲ್ಲಿ 8 ಅಂಗಗಳನ್ನು ನಿರ್ದೇಶಿಸಿ, ಅದಕ್ಕೊಂದು ವೈಜ್ಞಾನಿಕ ಚೌಕಟ್ಟು ಹಾಕಿದ ಮೊದಲಿಗರು)

ಶ್ವಾಸ ಹೆಚ್ಚೆಂದರೆ ಪ್ರಾಣವಾಹಕ ಎಂದು ಹೇಳಬಹುದು.ಪ್ರಾಣವು ಸೂಕ್ಷ್ಮ ಚೈತನ್ಯ.ಪ್ರಾಣಶಕ್ತಿಯು ನಾಡಿಗಳ ಮೂಲಕ ಸಂಚಾರಮಾಡುವುದು ಎಂದು ಯೋಗಿಗಳ ಹೇಳಿಕೆ. ಪ್ರಾಣ ಶಕ್ತಿಯ ಸಂಚಾರ ಸಮರ್ಪಕವಾದಾಗ ಎಲ್ಲಾ ಕ್ರಿಯೆಗಳು ಹದವಾಗುವುವು. ದೇಹದ ಎಲ್ಲಾ ಚಲನವಲನಗಳೂ ಐದು ವಿಧ ಪ್ರಾಣವಾಯುಗಳಿಂದ ಮತ್ತು  ಐದು ಉಪ ಪ್ರಾಣ ವಾಯುಗಳಿಂದ (ಪಂಚ ಉಪಪ್ರಾಣಗಳು)  ನಿಯಂತ್ರಿಸಲ್ಪಡುತ್ತದೆ ಎಂಬುದು ಯೋಗಿಗಳ ಅಭಿಪ್ರಾಯ. ಈ ಪಂಚ ಪ್ರಾಣಗಳು ಪ್ರಾನ, ಅಪಾನ, ಸಮಾನ, ಉದಾನ ಮತ್ತು ವ್ಯಾನ ಆಗಿದೆ. ದೇಹದ ಎಲ್ಲಾ ಚಟುವಟಿಕೆಗಳನ್ನು ಈ ಪಂಚ ಪ್ರಾಣಗಳು ಮತ್ತು ಪಂಚ ಉಪ ಪ್ರಾಣಗಳು ನಿಯಂತ್ರಿಸುತ್ತವೆ.

ಪ್ರಯೋಜನಗಳು: ಪ್ರಾಣ ವಾಯುವು  ಶ್ವಾಸಕೋಶಕ್ಕೆ ಸೇರಿ ಹೃದಯ ಭಾಗದಲ್ಲಿ ಚಲಿಸಿ ಆಮ್ಲಜನಕ ಪೂರೈಕೆ ಮಾಡಿ ಉಸಿರಾಟವನ್ನು ನಿಯಂತ್ರಿಸುತ್ತದೆ. ಆಹಾರ ಸ್ವೀಕಾರ  ರಕ್ತ ಮತ್ತು ನಾಡಿ ಶುದ್ಧೀಕರಣ ಮಾಡುತ್ತದೆ.ಅಪಾನ ವಾಯು ಗುದದ ಭಾಗದಲ್ಲಿದ್ದು ಹೊಟ್ಟೆಯ ಕೆಳಗಿನ ಸ್ಥಳದಲ್ಲಿ ಚಲಿಸಿ ಮಲಮೂತ್ರಕ್ಕೆ ಸಂಬಂಧಿಸಿದ ಕಶ್ಮಲಗಳನ್ನು ಹೊರ ಹಾಕುತ್ತದೆ. ನಿಶ್ವಾಸವೂ ಅಪಾನವಾಯುವಾಗಿದೆ.

‘ಸಮಾನ’ ವಾಯುವು ನಾಭಿ(ಹೊಕ್ಕುಳು) ಪ್ರದೇಶದಲ್ಲಿದ್ದು ಜಠರಕ್ಕೆ ಸಂಬಂಧಪಟ್ಟ ಜೀರ್ಣಕ್ರಿಯೆಗಳನ್ನೂ, ರಕ್ತ ಪರಿಚಲನೆಯನ್ನೂ ಅಂಗಗಳ ಕಾರ್ಯವನ್ನೂ ಸರಿಪಡಿಸುತ್ತದೆ.‘ಉದಾನ’ ವಾಯುವು ಕಂಠ ಪ್ರದೇಶದಲ್ಲಿ ಚಲಿಸಿ ಗಂಟಲಿನ ಧ್ವನಿಯನ್ನು ನಿಯಂತ್ರಿಸುತ್ತದೆ ಮತ್ತು ಜೀರ್ಣಾಂಗ ವ್ಯೆಹದ ಹತೋಟಿಯನ್ನು ಹೊಂದಿದೆ. ದೇಹಕ್ಕೆ ಚೈತನ್ಯ ನೀಡುತ್ತದೆ.

‘ವ್ಯಾನ’ ವಾಯುವು ಇಡೀ ಶರೀರದಲ್ಲಿ ಸಂಚರಿಸುತ್ತಾ ಆಹಾರ, ಗಾಳಿಗಳಿಂದ ಒದಗಿದ ಶಕ್ತಿಯನ್ನು ರಕ್ತನಾಳಗಳ ಮತ್ತು ನರಗಳ ಮೂಲಕ ಇಡೀ ದೇಹಕ್ಕೆ ವಿತರಿಸುತ್ತೆ. ದೇಹವು ಕೊಳೆಯದಂತೆ ಮಾಡುವುದು.

ಪ್ರಾಣಯಾಮದ ಮಂತ್ರ ಈ ರೀತಿ ಇದೆ.

ಪ್ರಾಣಸ್ಯೇದಂ ವಶೇ ಸರ್ವಂ ತ್ರಿದಿವೇಯತ್ ಪ್ರತಿಷ್ಠಿತಮ್‌

ಮಾತೇವ ಪುತ್ರಾನ್ ರಕ್ಷಸ್ವ, ಶ್ರೀಶ್ಚ ಪ್ರಜ್ಞಾಂಶ್ವ ವಿಧೇಹಿನ ಇತಿ

-ಅಂದರೆ ಮೂರು ಲೋಕದಲ್ಲಿ ಇರುವ ಎಲ್ಲವೂ ಪ್ರಾಣದ ನಿಯಂತ್ರಣದಲ್ಲಿದೆ. ಪ್ರಾಣವೇ, ತಾಯಿ ಮಕ್ಕಳನ್ನು ಪಾಲನೆ ಮಾಡುವಂತೆ, ನಮ್ಮನ್ನು ಪಾಲಿಸು ಮತ್ತು ಜ್ಞಾನವನ್ನು ಸಂಪತ್ತನ್ನು ನಮಗೆ ನೀಡು.

ನಾವು ಬದುಕಿರಲು ಉಸಿರಾಟ ಅಗತ್ಯ

* ಪ್ರಾಣಯಾಮದಿಂದ ದೋಷಪೂರ್ಣ ಉಸಿರಾಟ ಸಮರ್ಪಕವಾಗುವುದು.

* ಇಂದ್ರಿಯಗಳ ಹತೋಟಿ (ನಿಗ್ರಹ) ಸಾಧಿಸಿ, ಏಕಾಗ್ರತೆ ಹೊಂದಬಹದು.

* ಪ್ರಾಣಯಾಮದಿಂದ ಮನಸ್ಸು ಶುದ್ಧಗೊಳ್ಳುತ್ತದೆ. ಮನಸ್ಸಿನ ಚಂಚಲತೆ ನಿವಾರಣೆಯಾಗುವುದು. ನಮ್ಮ ಪ್ರಾಣಮಯ ಕೋಶವು ಶುದ್ಧಗೊಳ್ಳುವುದು. ಮನಸ್ಸು ಸ್ಥಿರಗೊಳ್ಳುವುದು. ಶಾಂತವಾಗುವುದು, ಏಕಾಗ್ರಗೊಳ್ಳುವುದು, ಉಸಿರನ್ನು ಸಕ್ರಮಗೊಳಿಸುವುದು.

* ಶ್ವಾಸಕೋಶದ ಸಾಮರ್ಥ್ಯವನ್ನು ಹೆಚ್ಚಿಸುವುದು.

* ಉಸಿರಾಟ ಕ್ರಮದಲ್ಲಿದ್ದರೆ ಹೃದಯವು ಶಾಂತವಾಗುತ್ತದೆ ಮತ್ತು ಆಯಾಸವಾಗದಂತೆ ನೋಡಿಕೊಳ್ಳುತ್ತದೆ.

* ಪ್ರಾಣಯಾಮದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಆಮ್ಲಜನಕ  ಶ್ವಾಸಕೋಶಕ್ಕೆ  ಹೋಗುತ್ತದೆ.ಎಚ್ಚರವಿರುವಾಗ ಮೂಗಿನ ಬಲಹೊಳ್ಳೆಯಲ್ಲೂ ನಿದ್ರಿಸುವಾಗ ಮೂಗಿನ ಎಡ ಹೊಳ್ಳೆಯ ಮೂಲಕವೂ ಉಸಿರಾಡುತ್ತೇವೆ.ಮೂಗಿನ ಬಲಹೊಳ್ಳೆ ಸೂರ್ಯ ನಾಡಿ,  ಎಡಹೊಳ್ಳೆ ಚಂದ್ರ ನಾಡಿ. ಮೂಗಿನ ಎಡಹೊಳ್ಳೆಯಲ್ಲಿ ಉಸಿರಾಡಿದಾಗ ದೇಹವು ತಂಪಾಗುತ್ತದೆ. ಬಲ ಹೊಳ್ಳೆಯಲ್ಲಿ ಉಸಿರಾಡಿದರೆ ಶರೀರ ಬಿಸಿಯೇರುವುದು.   ಪ್ರಾಣಯಾಮ ಶಿಸ್ತುಬದ್ಧವಾಗಿ ಕ್ರಮವತ್ತಾಗಿ ದಿನ ನಿತ್ಯ ಅಭ್ಯಾಸ ಮಾಡುವುದರಿಂದ  ಶ್ವಾಸಕೋಶದ ಸಾಮರ್ಥ್ಯವನ್ನು ಹೆಚ್ಚಿಸಿ, ಅಸ್ತಮಾ, ಅಲರ್ಜಿ ಸಮಸ್ಯೆ ನಿವಾರಣೆಯಾಗುವುದು. ರಕ್ತದೊತ್ತಡ ನಿಯಂತ್ರಣದಲ್ಲಿರುವುದು. 

ನಾವು ನಿತ್ಯವೂ ನಿರಂತರವಾಗಿ ಅನೈಚ್ಛಿಕವಾಗಿ ಉಸಿರಾಟ ನಡೆಯುತ್ತಲೇ ಇರುವುದನ್ನು ಅನುಭವಿಸುತ್ತೇವೆ. ಪ್ರಾಣ (ಜೀವ) ಹೋದಾಗ ಉಸಿರಾಟ ನಿಲ್ಲುವುದು.  (ಉಸಿರಾಟ ನಿಂತು ಮರಣ ಹೊಂದುವುದು ಅಲ್ಲ) ಉಸಿರಾಟ, ಸ್ಪಂದನ ಮತ್ತು ಕ್ರಿಯೆಗಳು ಬದುಕಿರುವುದರ ಸಂಕೇತವಾಗಿದೆ.

ನಮ್ಮ ಹಿರಿಯರು, ಜ್ಞಾನಿಗಳ ಪ್ರಕಾರ, ನಾವು ಹೆಚ್ಚಿನವರು ಸಮರ್ಪಕವಾಗಿ ಉಸಿರಾಡುವುದಿಲ್ಲ. ವಾಯು ಮೂಗಿನ ಮೂಲಕ ಅದರಷ್ಟಕ್ಕೇ ಬಂದು  ಹೋಗುವುದು. ಅದರ ನಿಯಂತ್ರಣದಿಂದಾಗಿ (ಐಚ್ಛಿಕಕ್ಕೆ ಒಳಪಡಿಸಿದರೆ) ಯೋಗಿಗಳಂತೆ ದೀರ್ಘಾಯುಸ್ಸನ್ನು ಹೊಂದಬಹುದು.

ಆರೋಗ್ಯವಂತರ ಉಸಿರಾಟ ಈ ರೀತಿ ಇರಬೇಕು ಎಂದು ಜ್ಞಾನಿಗಳು ಹೇಳುತ್ತಾರೆ.

* 4 ಸೆಕೆಂಡುಗಳಿಗೆ ಒಂದು ಉಸಿರಾಟ  

* ನಿಮಿಷಕ್ಕೆ 15-20 ಬಾರಿ ಉಸಿರಾಟ

* ಗಂಟೆಗೆ 900 ಬಾರಿ ಉಸಿರಾಟ

* ದಿನಕ್ಕೆ 21,600 ಬಾರಿ ಉಸಿರಾಟ

* ವರ್ಷಕ್ಕೆ 78,84,000 ಬಾರಿ ಉಸಿರಾಟ

ಮಾನವ ಜೀವಿತ ಅವಧಿಯು 100 ವರ್ಷ ಎಂದು ಹಿರಿಯರು ಹೇಳುತ್ತಾರೆ. ಈ ನೂರು ವರ್ಷಕ್ಕೆ 78,84,00,000 ಬಾರಿ ಉಸಿರಾಟ ಜರುಗುವುದು. ಈ ಪ್ರಮಾಣ ಕಡಿಮೆ ಆದಾಗ ಆಯಸ್ಸು ಹೆಚ್ಚುವುದು. ಗುರುಮುಖೇನವೇ ಪ್ರಾಣಾಯಾಮ ಕಲಿಯಬೇಕು.  

 ನಮ್ಮ ಚಿತ್ತವು (ಮನಸ್ಸು, ಬುದ್ಧಿ, ಅಹಂಕಾರ) ಒಂದು ರಥವೆಂದೆಣಿಸಿದರೆ ಪ್ರಾಣ ಮತ್ತು ಬಯಕೆಗಳು ಎರಡು ಪ್ರಬಲ ಕುದುರೆಗಳು. ಪ್ರಾಣ(ಉಸಿರು)ವನ್ನು ಹತೋಟಿಯಲ್ಲಿಟ್ಟಾಗ ಇಂದ್ರಿಯಗಳು (ಬಯಕೆಗಳು) ನಿಯಂತ್ರಣಕ್ಕೆ ಬರುತ್ತವೆ.ಆಗ ಮನಸ್ಸು ಸ್ಥಿರ ಹಾಗೂ ಶಾಂತವಾಗುತ್ತದೆ. 

ಅನೈಚ್ಛಿಕವಾಗಿ ಜರಗುವ ಉಸಿರಾಟವನ್ನು ಐಚ್ಛಿಕವಾಗಿ ಮಾಡಿ ಹತೋಟಿಯಲ್ಲಿಟ್ಟು ನಿಧಾನವಾಗಿ ಉಸಿರಾಡಿದರೆ ದೀರ್ಘಾಯುಸ್ಸನ್ನು ಗಳಿಸಬಹುದು. ಪ್ರಾಚೀನ ಋಷಿ ಮುನಿಗಳ ದೀರ್ಘಾಯುಸ್ಸಿನ ರಹಸ್ಯವಿದೇ ಆಗಿದೆ.ನಿಮಿಷವೊಂದಕ್ಕೆ ಕೇವಲ 5 ಬಾರಿ ಉಸಿರಾಡುವ ಆಮೆ 150ಕ್ಕೂ ಹೆಚ್ಚು ವರ್ಷ ಬದುಕಬಹದು. ಕಪ್ಪೆ ದ್ವಿಚರ (ಜಲಚರ, ಭೂಚರ) ಉಸಿರಾಡದೇ ಹಲವು ವರ್ಷ ನೆಲದಡಿಯಲ್ಲಿ ಬದುಕಬಲ್ಲದು. 

ಪ್ರಾಣಾಯಾಮ ಅಭ್ಯಾಸಕ್ಕೆ ನಿಯಮಗಳು:- 

* ಖಾಲಿ ಹೊಟ್ಟೆಯಲ್ಲಿ ಅಭ್ಯಾಸ ಮಾಡಬೇಕು. ಆಹಾರ ಸೇವಿಸಿದ 2-3 ಗಂಟೆಯ ಅನಂತರ ಅಭ್ಯಾಸ ಮಾಡಬೇಕು. ಕನಿಷ್ಠ ಉಡುಪು ಧರಿಸಿ, ದೇಹವನ್ನು ವಾತಾವರಣಕ್ಕೆ ತೆರೆದಿರಬೇಕು.

* ಸ್ಥಿರತೆ  ಕಾಪಾಡಲು ಸದಾ ಕಂಪಿಸುವ ಭೂಸ್ಪರ್ಶವಾಗದಂತೆ ಚಾಪೆ ಅಥವಾ ಜಮಖಾನ ಹಾಸಿದ ನೆಲದ ಮೇಲೆ, ಶುದ್ಧ ಪರಿಸರದಲ್ಲಿ ಅಭ್ಯಾಸ ಮಾಡಬೇಕು.

* ಅವಸರದಲ್ಲಿ ಪ್ರಾಣಾಯಾಮ ಅಭ್ಯಾಸ ಮಾಡಬಾರದು.

*ಪ್ರಾಣಯಾಮಕ್ಕೆ ಕುಳಿತಾಗ ಬೆನ್ನು ಹುರಿಯು ನೇರವಾಗಿ  ನೆಲಕ್ಕೆ ಲಂಬವಾಗಿರಲು ಬೆನ್ನು, ಕುತ್ತಿಗೆ, ಶಿರಸ್ಸು ನೇರವಾಗಿರಬೇಕು. ದೇಹ ಸಡಿಲಗೊಂಡಿರಬೇಕು. ಮುಖದಲ್ಲಿ ಪ್ರಸನ್ನತೆ ಇರಬೇಕು, ಹಾಯಾಗಿ ಅಭ್ಯಾಸ ಮಾಡಬೇಕು.

* ಪ್ರಾಣಯಾಮದಲ್ಲಿ ನಿರಂತರವಾಗಿ, ನಿಶ್ಯಬ್ದವಾಗಿ, ನಿಧಾನವಾಗಿ ಉಸಿರನ್ನು ತೆಗೆದುಕೊಂಡು (ಪೂರಕ) ಹಾಗೇ ನಿರಂತರವಾಗಿ, ನಿಶ್ಯಬ್ದವಾಗಿ ನಿಧಾನವಾಗಿ ಉಸಿರನ್ನು ಹೊರಕ್ಕೆ ಬಿಡಬೇಕು (ರೇಚಕ).

* ಅಭ್ಯಾಸ ಮಾಡುವಾಗ ಉಸಿರನ್ನು ಹಿಡಿದು ನಿಲ್ಲಿಸಬಾರದು. 

* ಕೊನೆಯಲ್ಲಿ ಶವಾಸನ ಮಾಡಬೇಕು. 

* ಪ್ರಾಣಯಾಮ ಕಲಿಯುವ ಮುಂಚೆ ಯಾವುದಾದರೂ ಒಂದು ಭಂಗಿಯಲ್ಲಿ ತುಂಬಾ ಹೊತ್ತು ನೋವಿಲ್ಲದೆ (ಸುಖಾಸನ/ಪದ್ಮಾಸನ ಇತ್ಯಾದಿ) ಕುಳಿತುಕೊಳ್ಳಲು ಅಭ್ಯಾಸ ಇರಬೇಕು.

* ಪ್ರಾಣಾಯಾಮಕ್ಕೆ ಸೂಕ್ತವಾದ ಭಂಗಿ ಸುಖಾಸನ/ಸ್ವಸ್ತಿಕಾಸನ/ಪದ್ಮಾಸನ/ವಜ್ರಾಸನ/ ವೀರಾಸನ/ ಸಿದ್ಧಾಸನ ಆಗಿರುತ್ತದೆ. ಆದ್ದರಿಂದ ಪ್ರಾಣಾಯಾಮಕ್ಕೆ ಮೊದಲು ಅಭ್ಯಾಸಿಯು ಕಡ್ಡಾಯವಾಗಿ ಕೆಲವು ಆಸನಗಳನ್ನು ಕಲಿತಿರಲೇ ಬೇಕು. ಪ್ರಾಣಾಯಾಮ  ಮಾಡುವಾಗ ನೋವಿನ ಅನುಭವ ಬಂದರೆ, ಪ್ರಾಣಾಯಾಮದ ಪ್ರಯೋಜನ ದೊರಕಲಾರದು. ಪ್ರಾಣಯಾಮದಲ್ಲಿ ಪೂರಕ, ಕುಂಭಕ, ರೇಚಕಗಳ ಅಭ್ಯಾಸ ಸಮರ್ಪಕವಾಗಿರಬೇಕು.

* ಪೂರಕ: ಉಸಿರನ್ನು (ಗಾಳಿಯನ್ನು) ಒಳಗೆ ತೆಗೆದುಕೊಳ್ಳುವುದರ ಜೊತೆಗೆ  ವಾತಾವರಣದಲ್ಲಿರುವ ಚೈತನ್ಯವನ್ನು ಹೀರಿಕೊಳ್ಳುವ ಕ್ರಮವಾಗಿದೆ. (ಲೀಟರ್‌ಗಟ್ಟಲೆ ಆಮ್ಲಜನಕ ತೆಗೆದುಕೊಳ್ಳುವುದು) 

* ಕುಂಭಕ: ಒಳಗೆ ತೆಗೆದುಕೊಂಡ ಉಸಿರನ್ನು ತಡೆದು ಹಿಡಿದುಕೊಳ್ಳುವುದು. (ಆರಂಭಿಕರು ಮಾಡಲೇಬಾರದು. ಮರಳಿ ಉಸಿರಾಡಲಾಗದಿದ್ದರೆ ಏನೂ ಮಾಡುವಂತಿಲ್ಲ! ಎಚ್ಚರ) 

* ರೇಚಕ:ಉಸಿರನ್ನು ಪೂರ್ತಿಯಾಗಿ ಹೊರಕ್ಕೆ ಬಿಡುವುದು(ಲೀಟರ್‌ಗಟ್ಟಲೆ ಕಾರ್ಬನ್ ಡೈ  ಆಕ್ಸೈ ಡ್ ಹೊರಕ್ಕೆ ಹಾಕುವುದು). 

ಪ್ರಾಣಾಯಾಮದಲ್ಲಿ ಹಲವು ವಿಧಗಳಿವೆ

ವಿಭಾಗೀಯ ಪ್ರಾಣಯಾಮ,ಸುಖ ಪ್ರಾಣಯಾಮ.ಬಾಹ್ಯ ಕುಂಭಕ (ನಿಶ್ವಾಸದ ಬಳಿಕ ಸ್ವಲ್ಪ ಕಾಲ ಉಚ್ವಾಸ ಮಾಡದಿರುವುದು),ಅಂತರ ಕುಂಭಕ (ಉಚ್ವಾಸದ ನಂತರ ಸ್ವಲ್ಪ ಕಾಲ ನಿಶ್ವಾಸ ಮಾಡದಿರುವುದು),ಸುಖ ಪ್ರಾಣಾಯಾಮ ಯಾ ಸರಳ ಪ್ರಾಣಯಾಮ.ನಾಡೀ ಶುದ್ಧಿ (ನಾಡೀ ಶೋಧನ) ಪ್ರಾಣಯಾಮ. ಸೂರ್ಯಾನು ಲೋಮ, ಚಂದ್ರಾನುಲೋಮ, ಸಿತ್ಕಾರೀ, ಶೀತಲೀ, ಸದಂತ, ಉಜ್ಜಯೀ, ಭ್ರಮರೀ, ಭಸ್ತ್ರಿಕಾ.

ಮೇಲಿನ ಪ್ರಾಣಾಯಾಮಗಳನ್ನು ಯೋಗ ಗುರುಗಳ ಮೂಲಕವೇ ಕಲಿಯಬೇಕು.

ಮಾಹಿತಿಯ ಮೂಲ:- ಪ್ರಜಾವಾಣಿ.

Tuesday, July 26, 2022

NEW WASHING MACHINE AT BIRTHIMANE

 Thursday, 21st July 2022

Birthimane, Bhuvaneshwarinagara, Bengaluru.

It's more than 12 years, since we were using LG washing machine.


It was becoming old, giving lot of trouble, repaired few times without much use.



It was making lot of noise, and seena used to bark when it makes sound.

At last,  it was time to give  retirment and buy a new one.

Next question..... which make, what's the budget....


After a long deliberations, and waiting, a WHIRLPOOL top loading, fully automatic, Royal Plus 6 Kg machine was ordered through Amazon Online, which arrived next day.

A technician cam and installed the same in the evening.


Trial run was made and it's working fine.

Written for fun 27/7/2022

Monday, July 25, 2022

ASLESHA BALIPOOJA, HOMA

 Monday, 25th July 2022

Vidyapeetah, Bengaluru



Niranjan, son of Jayalakshmi/Krishnamoorthy Bhat, Grandson of my sister Bhagirathi from Mayagundi, Puttur Udupi performed AsleshaBali Pooja and Vishnushasranama Homa, with his wife Vinatya for health, wealth and prosperity at Vidyapeetah, Bengaluru.
Niranjan with his wife Vinaya performed Pooja.





Close relations and welwishers from the family were invited to attend the event.


Purohiths had performed the procedure very well, the Mandala designed for Aslesha Bali was excellent.


After the thirtha prasada, Grand Lunch followed with sweets holige and Panchratna.


Returned home after the oota.

Written 26/7/2022


Sunday, July 24, 2022

VISIT HOME - SURYANARAYANA SOMAYAJI(PUTTA)

 Saturday, 23 July 2022

Rajarajeshwarinagara, Bengaluru.

Putta is son of Indiramma & Ramachandra Somayaji, extended family members.



He moved in his new house in February 2022, after Gruha Pravesha.

We could not attend the ceremony, as we were away at ooru.



After dropping Mom for her ladies Get-together, I had free time and called up Putta.

He with his wife Leela and sons (Rahul and ........ were at home and gladly invited to visit.


As Putta is from Birthi, Salekeri, spent his childhood days there, spent some time remembering about those days.

Stayed there about an hour and half and left from the place.

Written Monday 25th July 2022

Saturday, July 23, 2022

SATYANARAYANA POOJA - SHUBHA RAGHU

 Saturday, 23 July 2022

CHIGURU, CHIKKALASANDRA, BENGALURU



It's to Thank God for evrything going fine.



Lahari is completing Sixteen years.




Suddenly, Shubha Raghu decided to perform Satyanarayana Pooja at home.




Pooja started at 9 am and Aarathi and prasada over by 10.30 am

That was pleasant feeling of Blessings from God.

Written Sunday 24/7/2022