Showing posts with label KANNADA DRAMA. Show all posts
Showing posts with label KANNADA DRAMA. Show all posts

Thursday, July 10, 2025

ಮೈ ಮನಗಳ ಸುಳಿಯಲ್ಲಿ - ಕನ್ನಡ ನಾಟಕ

 ಗುರುವಾರ, ಜುಲೈ 10, 2025

ಚೌಡಯ್ಯ ಮೆಮೋರಿಯಲ್ ಹಾಲ್, ಬೆಂಗಳೂರು.

ಜ್ಞಾನ  ಪ್ರಶಸ್ತಿ ವಿಜೇತ ಕೋಟ ಶಿವರಾಮ ಕಾರಂತರ "ಮೈಮನಗಳ ಸುಳಿಯಲ್ಲಿ" ಕಾದಂಬರಿಯ ವಿಭಿನ್ನ ರೂಪದ  ರಂಗ ಪ್ರಸ್ತುತಿ, ನಿರ್ದಿಗಂತ ತಂಡದವರಿಂದ.



ವೈಶ್ಯೆ ಮಂಜುಳಾ ಅವಳ ಆತ್ಮ ಕಥನದಿಂದ ಪ್ರಾರಂಭವಾದ ನಾಟಕ, ಬರೇ ಕತೆಯನ್ನು ಹೇಳುತ್ತಾ ಮುಂದುವರಿಯುವುದು. ಮೈ ಮತ್ತು ಮನಸ್ಸುಗಳನ್ನು ಬೇರೆ ಬೇರೆಯಾಗಿ ಪರಿಗಣಿಸಬೇಕು ಎಂಬ ಮಂಜುಲೆಯ ಅಮ್ಮನ ನಿರ್ದೇಶನ, ಹಾಗೆಯೇ ಹೆಣ್ಣು ಗಂಡಿನ ಸಂಭಂದವೆಂಬ ಕಗ್ಗಂಟಾಗಿರುವ ವಿಷಯವನ್ನು ಶೋಧಿಸುತ್ತಾರೆ.


ನಾಟಕದಲ್ಲಿ ಮಂಜುಳೆಗೆ ಸಿಗುವ ಮೂರು ಪ್ರಮುಖ ವ್ಯಕ್ತಿಗಳ ಜತೆಗಿನ ಸಂಬಂಧ ಮುಂದುವರಿಯುತ್ತದೆ. 

ಕಾದಂಬರಿಯಲ್ಲಿ ಬರುವ  ಕಂಡಲೂರು ವಾಸುದೇವ ಪೈ, ಉಳ್ಳೂರು ಸುಬ್ರಾಯ ಅಡಿಗ ಮತ್ತು ಲಕ್ಷ್ಮಣ ತೀರ್ಥ ಸ್ವಾಮಿಗಳು ಇವರೊಡನೆ ಸರಸ ಸಲ್ಲಾಪ, ಆತ್ಮೀಯ ದ್ರಶ್ಯಗಳು,  ಸಂಭಾಷಣೆ, ಅಭಿನಯ ಅದ್ಭುತವಾಗಿತ್ತು. 



ರಂಗದ ಮೇಲೆ ಅಭಿನಯಿಸಿದ ಅಕ್ಷತಾ ಕುಮಟ (ಮಂಜುಳಾ),  ರಾಜೇಶ್ ಮಾಧವನ್ (ಮೂರು ಗಂಡಸಿನ ಪಾತ್ರಗಳು) ಅಭಿನಯ ತುಂಬಾ ಚೆನ್ನಾಗಿತ್ತು.


ಪಮ್ಮ- ದುಗ್ಗಿಯ ಬೊಂಬೆ 

ನಿರ್ದಿಗಂತ ತಂಡದ ಹಲವಾರು ಕಲಾವಿದರು, ತಂತ್ರಜ್ಞರು ರಂಗ ಪ್ರಸ್ತುತಿಗೆ ಕೈ ಜೋಡಿಸಿದ್ದರು.  
ಅಮಿತ್ ರೆಡ್ಡಿ- ನಿರ್ದೇಶನ,  ಹಿನ್ನೆಲೆ ಧ್ವನಿ - ವಿಜಯಮ್ಮ, ಸಂಗೀತ - ಅನುಷ್ ಶೆಟ್ಟಿ.

ಸರಳ ರಂಗ ಸಜ್ಜಿಕೆ, ಬೆಳಕು, ಹಿನ್ನೆಲೆ ಸಂಗೀತ (ನಿರಂತರವಾಗಿ ಕೇಳಿಸುವ ಸಮುದ್ರದ ಅಲೆಗಳ ನಾದ), ಹಾಡುಗಳು ಇತ್ಯಾದಿ, ಸಾಧಾರಣ ವಾಗಿತ್ತು.


ಕಾದಂಬರಿಯನ್ನು ಓದಿ, ಬೇರೇ ರೀತಿಯ ಕಲ್ಪನೆಯನ್ನು ಇಟ್ಟುಕೊಂಡು ನಾಟಕ ವೀಕ್ಷಿಸಿಲು ಹೋದವರಿಗೆ ಒಂದು ವಿಭಿನ್ನವಾದ ಅನುಭವ.

ಸುಮಾರು ಎರಡು ಗಂಟೆಗಳ ರಂಗ ಪ್ರಸ್ತುತಿಯು ಗಂಡು ಹೆಣ್ಣಿನ ಸಂಬಂಧವು ಸಮಾಜದ ಹೊಣೆ....??


Posted 11/7/2025



Monday, April 21, 2025

ಶಿವದೂತ ಗುಳಿಗ - ಕನ್ನಡ ನಾಟಕ

 ಭಾನುವಾರ, 20 ಏಪ್ರಿಲ್ 2025

ತರಳಬಾಳು ಕೇಂದ್ರ ಸಭಾಂಗಣ. ಅರ್. ಟಿ. ನಗರ, ಬೆಂಗಳೂರು.

"ಶಿವದೂತ ಗುಳಿಗ" - ಕನ್ನಡ ನಾಟಕ 

ಕಲಾವಿದರು.


ಶಿವದೂತ ಗುಳಿಗ -ಅದೊಂದು ಸುಮಾರು ೨ ಗಂಟೆಗಳ ಕಾಲ ಕಿವಿ ಚುಚ್ಚುವ ಶಬ್ದ ದೊಂದಿಗೆ ಚೀರಾಟ, ಹಾರಾಟ, ಕೂಗಾಟ ದೊಂದಿಗೆ ಅಬ್ಬರಿಸಿದ ಕನ್ನಡ ನಾಟಕ.

ಕಲಾವಿದರು 
ಕಲಾ ಸಂಗಮದ ಎಲಾ ಸದಸ್ಯರ ಅಭಿನಯ, ಹಾವ ಭಾವ, ನೃತ್ಯ, ಸಂಭಾಷಣೆ ಎಲ್ಲವೂ ಅದ್ಭುತ.

ರಣಗ ಸಜ್ಜಿಕೆ,ಅದ್ದೂರಿಯ  ದೃಶ್ಯ ಸಂಯೋಜನೆ, ಪಾತ್ರಗಳ ರಂಗ ಪ್ರವೇಶ, ಸಂಗೀತ, ಬೆಳಕು ಎಲ್ಲವೂ ಉತ್ತಮವಾದ ನಿರ್ವಹಣೆ. ಮೂರು ಕಲಾವಿದರು ಗುಳಿಗನ ಪಾತ್ರವನ್ನು ಅತ್ಯುತ್ತಮ ವಾಗಿ  ನಿರ್ವಹಿಸಿ ಸಭಿಕರ ಮೆಚ್ಚುಗೆಯನ್ನು ಪಡೆದಿದ್ದಾರೆ.



ಅದೊಂದು ಮುಖ್ಯವಾಗಿ ಕರಾವಳಿ ಭಾಗದ ಜನರ ದೈವಾರದನೆಯ ಕಥೆ. ಕೈಲಾಸದಲ್ಲಿ ಶಿವನ ಭಸ್ಮ ಮತ್ತು ಬೆವರಿನ ಗುಳಿಗೆಯಿಂದ ಹುಟ್ಟಿದವನೇ 
"ಗುಳಿಗ", ಅತ್ಯಂತ ಬಲಶಾಲಿ, ಹಸಿವು, ಬಾಯಾರಿಕೆಯಿಂದ ಅಬ್ಬರಿಸುತ್ತಾನೆ.



ನಂತರ ಶಿವನು ಅವನನ್ನು ವಿಷ್ಣುವಿನ ವೈಕುಂಟ ಕ್ಕೆ  ಹಸಿವಿನ  ಕಳುಹಿಸುತ್ತಾನೆ. , ವಿಷ್ಣುವು ಗುಳಿಗ ಶಪಿಸಿ  ಭೂಮಿಯಲ್ಲಿ ರಾಕ್ಷಸಿ "ನೆಲವುಲ್ಲ ಸಂಖೆ"ಯ ಉದರದಲ್ಲಿ ಜನಿಸಿ ಅವಳನ್ನೇ ತಿಂದು ಬಿಡುತ್ತಾನೆ.


ಹಾಗೆಯೇ ಕಥೆ ಮುಂದುವರಿದು ಗುಳಿಗ ,  ಬ್ರಾಹ್ಮಣ ಊರು, ಚಾಮುಂಡಿ, ಬಬ್ಬುರಾಯ ಬ್ರಹ್ಮ ರಾಕ್ಷಸನ್ನು ಕೊಂದು   ವಿವಿಧ ಸ್ಥಳಗಳಿಗೆ ಹೋಗಿ ಸ್ಥಾಪನೆಯಾಗಿ ಒಳ್ಳೆಯವರಿಗೆ ಒಳ್ಳೆಯವನು, ದುಷ್ಟರಿಗೆ ಕೆಟ್ಟವನಾಗಿ ಮುಂದುವರಿಯುತ್ತಾನೆ.



ಎಲ್ಲ ಸನ್ನಿವೇಶಗಳ ರಂಗ ಸಜ್ಜಿಕೆ ಸೂಪರ್ (ಅದ್ಭುತ)

ತುಂಬಿದ ಸಭಾಂಗಣ ದಲ್ಲಿ ಸಭಿಕರು ಮಂತ್ರ ಮುಗ್ಧರಾಗಿ ಕುಳಿತಿರುವುದು ನಾಟಕದ ವಿಶೇಷ. 


ನಾಟಕದ ಚಿತ್ರೀಕರಣ ಮಾಡುವುದು ನಿಷೇಧಿಸಿದ್ದರಿಂದ ವೀಡಿಯೋ ತೆಗೆಯಲಾಗಲಿಲ್ಲ.

ಹೊಸ ಪೀಳಿಗೆಯ ಜನಾಂಗಕ್ಕೆ ಒಳ್ಳೆಯ ಸಂಸ್ಕಾರ, ಪರಂಪರೆಯನ್ನು ತಿಳಿಸಿಕೊಡುವ ನಾಟಕ.

ಕಲಾ ಸಂಗಮ ತಂಡದ ಎಲ್ಲ ಸದಸ್ಯರಿಗೆ ಹಾರ್ದಿಕ ಅಭಿನಂದನೆಗಳು.

Posted 22/4/2025


Thursday, February 20, 2025

BOB MARLEY FROM KODIHALLI - KANNADA DRAMA

Sunday, February 16, 2025

Muddana Mantapa, M G M College, Udupi 

ಮುರಾರಿ - ಕೆದ್ಲಾಯ ರಂಗೋತ್ಸವ

16.02.2025, 6.30 PM

ಮುದ್ದಣ ಮಂಟಪ ಎಂಜಿಎಂ. ಕಾಲೇಜು, ಉಡುಪಿ .

ರಥಬೀದಿ ಗೆಳೆಯರು ಉಡುಪಿ, ಜಂಗಮ ಕಲೆಕ್ಟಿವ್ ಬೆಂಗಳೂರು ಪ್ರಸ್ತುತಿ

ಬಾಬ್ ಮಾರ್ಲಿ ಫ್ರಮ್ ಕೋಡಿಹಳ್ಳಿ 

ರಚನೆ,ವಿನ್ಯಾಸ,,ನಿರ್ದೇಶನ: ಲಕ್ಷ್ಮಣ್ ಕೆ. ಪಿ.



'ಗುರುತು’ ಅನ್ನುವುದು ಕೆಲವರಿಗೆ ಹೆಮ್ಮೆಯಾದರೆ, ಕೆಲವರಿಗದು ಅಸಹ್ಯ, ಹಿಂಸೆ, ಜೀವನದ್ದುದ್ದಕ್ಕೂ ಹೊತ್ತು ತಿರುಗಬೇಕಾದ ಹೆಣಭಾರದ ಚಾಕರಿ. ಹಲವು ಬಾರಿ ‘ಉಳಿವಿಗಾಗಿ’ ಗುರುತುಗಳನ್ನು ಮುಚ್ಚಿಡುತ್ತಾ ಸಾಗುವುದೇ’ ಬದುಕು’ ಅನ್ನಿಸಿಕೊಂಡು ಹರಿಯುತ್ತಾ ಹಗುರಾಗುವುದು ಸಾಗದ ದಾರಿಯಾಗಿ ಕಂಡು ದಣಿವಾಗುತ್ತದೆ. ದಣಿವಾಗುತ್ತದೆ ಎಂಬ ಕಾರಣಕ್ಕೆ ಹಾರಾಡುವ ಬಯಕೆಯನ್ನು ಬಿಡುವಂತೆಯೂ ಇರುವುದಿಲ್ಲ. ಕತ್ತಲ ದಾರಿಯಲ್ಲಿ ಮಿಂಚುಹುಳುಗಳಿಗಾಗಿ ಜೀವ ಆತುಕೊಳ್ಳಬೇಕಾಗುತ್ತದೆ. ಆಗ ಕತ್ತಲೊಂದು  ಸಂಭ್ರಮ ಬೆಳಕೊಂದು ಸಂಭ್ರಮ. ಹೀಗೆ ಗುರುತಿನ ಸುತ್ತ ಇರುವ ಹಲವು ಸಂಕೀರ್ಣ ವೀರೋಧಭಾಸಗಳನ್ನು ಎದುರುಗೊಳ್ಳುವ ಕಥನಗಳ ಗೊಂಚಲು’ ಬಾಬ್ ಮಾರ್ಲಿ ಫ್ರಮ್ ಕೋಡಿಹಳ್ಳಿ’



ಇಲ್ಲಿ‘ಬಾಬಾ ಸಾಹೇಬ್ ಅಂಬೇಡ್ಕರ್ ಅವರ ‘Waiting for a Visa’ ಒಂದು ರೂಪಕವಾಗಿ ಕಂಡು ಅವರು ನಿಜಕ್ಕೂ ಪ್ರವೇಶ ಕೇಳುತ್ತಿರುವುದು ಎಲ್ಲಿಗೆ? ಅನ್ನುವ ಪ್ರಶ್ನೆ ಮುಖ್ಯವಾಗುತ್ತದೆ.

ಪಠ್ಯ ಆಕರ: ಎನ್.ಕೆ ಹನುಮಂತಯ್ಯ, ಚಂದ್ರಶೇಕರ್ ಕೆ

ಡ್ರಮಟರ್ಗ್: ವಿ. ಎಲ್. ನರಸಿಂಹಮೂರ್ತಿ

ಅದೊಂದು ನೀರಸ, ಹಾಡುಗಳ ಕಿರುಚಾಟ, ಮೇಲಿನ ಕಥಾನಕದಂತೆ ಶೋಷಿತ ಸಮುದಾಯದ ಸಂಘರ್ಷ.

ಮೂರು ಪಾತ್ರಗಳ ಹಾಡು, ಸಂಭಾಷಣೆ, ಅನುಭವ.

ರಂಗ ವಿನ್ಯಾಸ, ಸಂಗೀತ, ಬೆಳಕು ಉತ್ತಮ.

ಅಭಿಲಾಷ, ನಳಿನಿ, ಅನೀಶ, ಅಕ್ಷಿತ ಮತ್ತು ನಾನು ವೀಕ್ಷಿಸಿದ ನನ್ನ ಕಾಲೇಜಿನಲ್ಲಿ ನಡೆದ ನಾಟಕ....


ಬರೆದಿರುವುದು 21/2/2025

Sunday, February 2, 2025

AASPHOTA - KANNADA DRAMA

 Saturday, 1st February 2025

C Ashwath KalaBhavana, Bengaluru.


It's story about the factory workers woes, politicians fooling the people, industrialists using politicians to downplay workers, written by TV personality and writer T N Seetharam, some years ago, directed by Ritwik Simha and also in the lead role.





Shivaprasad, an idealistic young man,come to small town for a job interview. He gadually realizestroubles and travails created by Factory which manufactures explosives.


Rajaram, a charismatic union leader, guides Shivaprasad to organize factory workers, and they begin to fight for their rights.


Rajaram, becomes Minister after contesting in the elections and join hands with industrialists, to set up more factories and does't bother about the workers problems and issues.



Stage setting, lighting, acting of artist were good.


Posted 2/2/2025


Friday, October 18, 2024

DHARMA NATI (ಧರ್ಮ ನಟಿ) - KANNADA DRAMA

 Friday, 18th October 2024

Seva Sadana, Malleshwara, Bengaluru.

DHARMA NATI (ಧರ್ಮ ನಟಿ) 



"Dharma Nati " - a beautiful Kannada Drama presented by Kalapremi Foundations. at Seva Sadana, Malleshwara, Bengaluru.


We have witnessed similar story Drama at the same place in Dec. 2015. 

Link : https://jsomayaji.blogspot.com/2015/12/kannada-drama_80.html


The presentation of the Drama was excellent in all respects, acting, dialogues, dances, expressions, stage setting , lighting, scene changing etc.




Some scenes of the play.

The story about 10th century Maharaja of Malla, Okaka, and his wife. Maharani Sheelavathi.


Okaka was made Maharaja at his young age, as his parents died. He married later though he was impotent due to some disease at his childhood. After 5 years of marriage, he didn't have any children.


The King's court consisting of Amatya (Minister), Senadhipathi, Purohit (Priest) and Vaidya (Doctor) decides the Maharani should become "DharmaNati" for one night.


The Maharaja was furious, though from the interest of Kingdom and people, he had agree for Sheelavathi to be with another man for on night, so that the Rajya will have "Uttaradhikaari" (Heir for the throne).

Maharani chooses her former boyfriend for one night and enjoys the experience, which she could not have with her husband.


Then come the feelings, aspirations, lust and the woman's emotions of not having the experience with the man.


She blames the Man, society, rules and in general, the whole system.

The emotions, helplessness, apathy, anger of the man enacted beautifully and also the experience, lack of satisfaction, empathy and the frustration of the women, well presented.



After the show, we with actor and Director. Shwetha Srinivas and Asif Kshatriya.

From Rangaratha:

The plot of the play Dharmanati, moves around the lives of a king who is impotent and a queen who is still a virgin. The play opens with a symbolic Sufi Whirling depicting the cosmic connection of every soul. As the play unfolds, the King & the Queen are seen living in happy times. After spending five years in marriage, now they are facing the questions of a child, the heir of the vast Malla kingdom. Since the king is impotent, the queen is now forced to spend one night with a man of her choice and conceive. After a lot of argument with the king and her own morals,  the Queen finally chooses the man with whom she spends her first night. The king on the other hand is furious and broken with the queen’s decision to follow the rules. The queen now plays an active role where she finds herself with a long awaited answers. The play hints at female sexuality and nuptial bonds that cage a woman ignoring her individuality. The play has an open ending.  The loud emotional outrages of the king and the fecundity of the queen enchant the theatre and spell bound the audience. The other characters are very potential and fluid.

Well done the team "RANGA RATHA"  and Best wishes.

Posted 19/10/2024


 



Monday, August 5, 2024

JATHEGIRUVANU CHANDIRA - KANNADA DRAMA

 ಭಾನುವಾರ, ಆಗೋಸ್ಟ್ 4, 2024 

ರವಿಂದ್ರ ಕಲಾಕ್ಷೇತ್ರ, ಬೆಂಗಳೂರು. 

ಜತೆಗಿರುವನು ಚಂದಿರ - ಕನ್ನಡ ನಾಟಕ 

ಅದೊಂದು ಎರಡೂವರೆ ಗಂಟೆ ಕಾಲದ ದೀರ್ಘವಾದ ಕನ್ನಡ ನಾಟಕ. ಸಂಕಲ್ಪ ಮೈಸೂರು ತಂಡ ಅರ್ಪಿಸಿದ ,  ಜಯಂತ್ ಕಾಯ್ಕಿಣಿ ರೂಪಾಂತರ ಮಾಡಿದ, ಹಾಗೂ ವಿನ್ಯಾಸ, ನಿರ್ದೇಶನ, ಮುಖ್ಯ ಪಾತ್ರದಲ್ಲಿ ಅಭಿನಯಿಸಿದ ಹುಲುಗಪ್ಪ ಕಟ್ಟಿಮನಿ ಅವರ ಹಾಸ್ಯ/ಗಂಭೀರ ನಾಟಕ.



ಭಾರತದ ವಿಭಜನೆಯ ಸಂದರ್ಭದಲ್ಲಿ, ಮುಸುಲ್ಮಾನ ಕುಟುಂಬದ ನೋವಿನ ಕಥೆ, ವ್ಯಥೆ, ನೋವು, ನಲಿವು.

ಬೇಕರಿ ವ್ಯಾಪಾರದ ಬಡೇ ಮಿಯಾ, ಕುಟುಂಬದ ಮುಖ್ಯಸ್ಥ, ಮಡದಿ, ಮೂರು ಹೆಣ್ಣು ಮಕ್ಕಳೊಡನೆ ಸಂಸಾರ,. ಊರಿನಲ್ಲಿ ಎಲ್ಲರೂ ಇಷ್ಟ ಪಡುವ ವ್ಯಕ್ತಿ, ಕುಟುಂಬ.


ಹಬ್ಬ ಹರಿದಿನಗಳಲ್ಲಿ ಊರಿನವರೊಡನೆ ಸಂಭ್ರಮ, ನೃತ್ಯ, ಹಾಡು ಇತ್ಯಾದಿ.




ನಾಟಕದಲ್ಲಿ ಎಲಾ ಕಲಾವಿದರ ಅಭಿನಯ , ವೇಷ ಭೂಷಣ, ಸಂಭಾಷಣೆ ಉತ್ತಮವಾಗಿತ್ತು.



ಕಥೆಯ ಕೆಲವು ಭಾಗದಲ್ಲಿ ನಾಟಕವು ನೀರಸವಾಗಿ ಬೇಸರ ತರಿಸುವಂತಿತ್ತು.


ಸಂಗೀತ, ಹಾಡುಗಳು ತಾಳಕ್ಕೆ ಸರಿಯಾಗಿ ನೃತ್ಯ, ರಂಗ ಸಂಜ್ಜಿಕೆ ಎಲ್ಲವೂ ಚೆನ್ನಾಗಿತ್ತು.

ನಾಟಕ ತಂಡದವರಿಗೆ ಅಭಿನಂದನೆಗಳು.

Posted 5/8/2024 






Saturday, July 6, 2024

ಪರಸಂಗದ ಗೆಂಡೆ ತಿಮ್ಮ - ಕನ್ನಡ ನಾಟಕ

 ಶನಿವಾರ, ಜುಲೈ 6 , 2024

ನಯನ ಸಭಾಂಗಣ, ರವೀಂದ್ರ  ಕಲಾಕ್ಷೇತ್ರ, ಬೆಂಗಳೂರು.

"ಪರಸಂಗದ ಗೆಂಡೆ ತಿಮ್ಮ"ಪರಂಪರಾ ತಂಡದವರಿಂದ ಅದ್ಭುತವಾಗಿ ಪ್ರಸ್ತುತ ಪಡಿಸಿದ ಕನ್ನಡ ನಾಟಕ.


ಐದು ದಶಕಗಳ ಹಿಂದೆಯೇ ಸಿನಿಮಾದಲ್ಲಿ ಪ್ರಸಿದ್ಧವಾಗಿ ಮೆರೆದ, ಶ್ರೀ ಕೃಷ್ಣ ಆಲನಹಳ್ಳಿ ಅವರ ಕಾದಂಬರಿ ಆಧಾರಿತ ಹಳ್ಳಿಯ ಸೊಗಡಿನ ಹಿಂದಿನ ಕಥೆ, ಹಳ್ಳಿಯ ಮುಗ್ಧ ಹುಡುಗ, ಪೇಟೆಯ ಹುಡುಗಿಯನ್ನು ಮದುವೆಯಾಗಿ ಪಡುವ ಕಷ್ಟ, ಆತನ ಮನೆಯಲ್ಲಿ, ಹಳ್ಳಿಯಲ್ಲಿ ನಗೆ ಪಾಟಲಿಗೀಡಾಗಿ ದಾರುಣ ಅಂತ್ಯದ ಕಥೆ.





ನಾಟಕದ ಕೆಲವು ಸನ್ನಿವೇಶ 

ಬೋ ಚಂದಾಗಯ್ತೆ.... ಹಳ್ಳಿಯ ಸೊಗಡಿನ ಸಂಭಾಷಣೆ, ಗೆಂಡೆ ತಿಮ್ಮನ ಅದ್ಭುತವಾದ ನಟನೆ, ಅವನು ಮದುವೆಯಾದ ಪ್ಯಾಟೆ ಹುಡುಗಿ, ಮಾರಂಗಿಯ ವಯ್ಯಾರ, ತಿಮ್ಮನ ತಾಯಿಯ ಮನೆಯಲ್ಲಿಯ ಜಗಳ, ಮಾರಂಗಿಯ ಅಪ್ಪನ ಸಂಧಾನ ಯತ್ನ, ಹುಡುಗಿಯು ಹಳ್ಳಿಗೆ ಬಂದ ಮೇಸ್ಟ್ರಿಗೆ ಮರುಳಾಗಿ, ಅವನೊಡನೆ ಸರಸ ಸಲ್ಲಾಪ, ತಿಮ್ಮನ ಮೇಲಿನ ಆರೋಪ, ಹಳ್ಳಿಯ ಪಂಚಾಯತಿಯಲ್ಲಿ ತೀರ್ಮಾನ, ಎಲ್ಲವೂ ಅದ್ಭುತವಾಗಿ ಮೂಡಿ ಬಂದಿರುತ್ತದೆ.


ನಾಟಕದ ರಂಗ ಸಜ್ಜಿಕೆ, ಬೆಳಕು, ರಂಗವಿನ್ಯಾಸ, ಸಂಗೀತ, ಎಲ್ಲವೂ ಮುದ ನೀಡುವಂತಿತ್ತು.






ನಾಟಕದ ಮುಂಚೆ, ಸಭಾ ಕಾರ್ಯಕ್ರಮದಲ್ಲಿ ಜನಪದ ಸಾಹಿತ್ಯದ ಮೇಧಾವಿ ಅಪ್ಪುಗೆರೆ ತಿಮ್ಮರಾಜು, ಸ್ಯಾಕ್ಸೋಫೋನ್ ನುಡಿಸುವಲ್ಲಿ ಪ್ರಸಿದ್ಧಿ ಪಡೆದ. ಕದ್ರಿ ಗೋಪಾಲ್ ಅವರ ಶಿಷ್ಯೆ, ಸುಬ್ಬಲಕ್ಷ್ಮಿ, ಹಾಗೂ ಇನ್ನೂ ಕೆಲವರಿಗೆ ಸನ್ಮಾನಿಸಲಾಯಿತು.





ನಾಟಕವನ್ನು ಸುಂದರವಾಗಿ ಪ್ರಸ್ತುತ ಪಡಿಸಿದ ಎಲಾ ಕಲಾವಿದರುಗಳಿಗೆ, ನಿರ್ದೇಶಕ ಚಂದ್ರು ಅವರಿಗೆ ಹಾರ್ದಿಕ ಅಭಿನಂದನೆಗಳು.



ಸುಮಾರು ಎರಡು ಗಂಟೆಗಳ ಕಾಲದ ನಾಟಕ, "ಪರಸಂಗದ ಗೆಂಡೆತಿಮ್ಮ" ಹಳ್ಳಿಯ ಜೀವನ, ಪ್ಯಾಟೆಯ ಬದುಕಿನ ಹಂಬಲ, ತಿಮ್ಮ - ಮಾರಂಗಿಯ ಕಥೆಯಲ್ಲಿ ಸೊಗಸಾಗಿ ಮೂಡಿ ಬಂದಿರುವುದು, ನಾಟಕ ನೋಡಿದವರಿಗೆಲ್ಲ ಖುಷಿ.

ಬರೆದಿರುವುದು, Posted, 7/7/2024