Friday, September 29, 2023

ಕೌಟುಂಬಿಕ ವ್ಯವಸ್ಥೆ

29/9/2023 

ಕೌಟುಂಬಿಕ  ವ್ಯವಸ್ಥೆ ಇನ್ನು ಮುಂದೆ ಇರುವುದಿಲ್ಲ. 


ಅತಿ ಶೀಘ್ರದಲ್ಲಿ ಈ ಕುಟುಂಬ ವ್ಯವಸ್ಥೆಯನ್ನು ಪೂರ್ತಿಯಾಗಿ ಕಳೆದುಕೊಳ್ಳುತ್ತೇವೆ. ಬಹಳಷ್ಟು ಜನ  ಈ ದಿನಗಳಲ್ಲಿ ಕುಟುಂಬ ವ್ಯವಸ್ಥೆಯನ್ನು ಇಷ್ಟಪಡುತ್ತಿಲ್ಲ.

ಇದಕ್ಕಿಂತ ದೌರ್ಭಾಗ್ಯದ ಪರಿಸ್ಥಿತಿ ಮತ್ತೊಂದಿಲ್ಲ.

ಕುಟುಂಬ ಎಂದರೆ ಇಷ್ಟವಿಲ್ಲದೇ ಇದ್ದರೂ ಬೇರೆಯವರ ತೋರಿಕೆಗೆ ಇಷ್ಟ ಇರುವಂತೆ ನಟಿಸುತ್ತಿದ್ದಾರೆ. ನಿಜ ಹೇಳಬೇಕೆಂದರೆ ಮನುಷ್ಯರಿಗೆ ಜನ ಎಂದರೆ ಅಲರ್ಜಿ ಆಗಿ ಬಿಟ್ಟಿದೆ. ಹತ್ತಿರದ ಜನ ಎಂದರೆ ಇಷ್ಟವಾಗುತ್ತಿಲ್ಲ .

 ಈ ಕೌಟುಂಬಿಕ ವ್ಯವಸ್ಥೆ ಕುಸಿದು ಹೋಗಲು ಕೆಲವು ಪ್ರಧಾನ ಕಾರಣಗಳು .

    1 .ಅತಿಯಾದ ಬುದ್ಧಿವಂತಿಕೆ.

   2 .ಚಿಕ್ಕದಾದ ತಪ್ಪುಗಳನ್ನು ಕೂಡ ಭರಿಸುವ ಶಕ್ತಿ ಸಹನೆ ಇಲ್ಲದಿರುವುದು .    

   3 .ಎಲ್ಲರೂ ಸಮಾನರು ಎನ್ನುವ ವಿಚಿತ್ರ ಭಾವನೆ ಬೆಳೆಯುತ್ತಿರುವುದು (ಡೆಮಾಕ್ರಸಿ).

   4 .ಮನೆಯ ಸದಸ್ಯರು, ಮಕ್ಕಳು ಎಲ್ಲರೂ ಒಟ್ಟಿಗೆ ಕುಳಿತುಕೊಂಡು ಮಾತನಾಡದೆ ಇರುವುದು.

   5.ಯಾವಾಗಲೂ ಮನೋರಂಜನೆ ಕಾರ್ಯಕ್ರಮಗಳಲ್ಲಿ ಮುಳುಗಿರುವುದು. ಎಲ್ಲೋ ಇರುವ ಸಿನಿಮಾ ನಟರು ಈ ದಿನ ಬೆಳಿಗ್ಗೆ ಏನು ಮಾಡಿದ್ದಾರೆ ಎಂದು ಹೇಳುವ ಜನರು, ಮನೆಯವರು ಹೇಗಿದ್ದಾರೆ ಯಾವಾಗ ಏನು ಮಾಡುತ್ತಾರೆ ಎಂದು ತಿಳಿದುಕೊಳ್ಳದೆ ಇರುವ ದುಸ್ಥಿತಿ ಬಂದುಬಿಟ್ಟಿದೆ.

   6 .ಚಿಕ್ಕ ಚಿಕ್ಕ ವಿಷಯಕ್ಕೆ ಮುನಿಸಿಕೊಂಡು ಹತ್ತಿರದವರನ್ನು ದೂರ ಮಾಡಿಕೊಳ್ಳುತ್ತಿದ್ದಾರೆ .

   7 .ಬೇರೆಯವರ ಕೆಟ್ಟ,ಆಕರ್ಷಕ ಮಾತುಗಳಿಂದ ಇಡೀ ಕುಟುಂಬವೇ ಒಡೆದುಹೋಗುವುದಕ್ಕೆ ಕಾರಣವಾಗುತ್ತಿರುವುದು.

   8 .ಆರ್ಥಿಕ ಸಮಸ್ಯೆಗಳಿಂದಾಗಿ ಮನೆಯ ಹಿರಿಯ ಸದಸ್ಯರು ದೃಢವಾಗಿ, ಬಲವಾಗಿ ಮತ್ತು ಸರಿಯಾಗಿ ಕುಟುಂಬ ನಿರ್ವಹಣೆ ಮಾಡದೆ ಇರುವುದು ಕೂಡ ಕಾರಣವಾಗಿದೆ.

   9 .ಮನೆಯಲ್ಲಿ ಗಂಡ -ಹೆಂಡತಿ (ತಂದೆ-ತಾಯಿ) ಸಣ್ಣಪುಟ್ಟ ವಿಷಯಗಳಿಗೆ ಜಗಳ ಮಾಡಿಕೊಳ್ಳುತ್ತಿರುವುದರಿಂದ ಮನೆಯ ಸದಸ್ಯರಿಗೆ ಆತಂಕ ಉಂಟುಮಾಡಿದೆ.

ಎಲ್ಲ ಕುಟುಂಬಗಳಲ್ಲಿ ಜಗಳ ಹೊಡೆದಾಟ, ಬಡಿದಾಟಗಳನ್ನು ನೋಡಿ ಕುಟುಂಬವೆಂದರೆ ಜಿಗುಪ್ಸೆ ಎನ್ನುತ್ತಿರುವುದು.

ಅನ್ಯೋನ್ಯವಾಗಿ, ಸಹಬಾಳ್ವೆಯಿಂದ, ಪ್ರೀತಿ ಪ್ರೇಮಗಳಿಂದ, ಇರುವ ಕುಟುಂಬಗಳು ಕಂಡುಬರದೇ ಇರುವುದು, ಈ ಕೌಟುಂಬಿಕ ವ್ಯವಸ್ಥೆಯ ಮೇಲೆ ನಂಬಿಕೆ ಇಲ್ಲದಾಗಿದೆ.

ಇದರಿಂದಾಗಿ, ಯುವಜನ ಮದುವೆ ಮಾಡಿಕೊಳ್ಳುವುದೇ ಇರುವುದು. ಮೂವತ್ತೊಂದು ದಾಟಿದರೂ ಮದುವೆಯ ಬಗ್ಗೆ ಮನೆಯಲ್ಲಿ ಪ್ರಸ್ತಾಪ ಮಾಡುವುದೇ ಇಲ್ಲ. ಕಳೆದ 30-40 ವರ್ಷಗಳಿಂದ ಸಂಸಾರವನ್ನು ನಿರ್ವಹಣೆ ಮಾಡಿದ ಕೆಲ ಹಿರಿಯರು ಕುಟುಂಬದ ಜಂಜಾಟಗಳಿಂದ ಬೇಸತ್ತು, ಈ ಕುಟುಂಬ ವ್ಯವಸ್ಥೆಯೇ ಸಾಕಪ್ಪಾ ಸಾಕು, ಎಂದು ನೇರವಾಗಿ ಮಕ್ಕಳಿಗೆ ಹೇಳುತ್ತಿದ್ದಾರೆ.

   11 .ಆರ್ಥಿಕತೆಯ ಅವಸರ ಮತ್ತು ವ್ಯತ್ಯಾಸಗಳನ್ನು ಪರಸ್ಪರ ಇನ್ನೊಬ್ಬರಿಗೆ ಹೋಲಿಸಿಕೊಳ್ಳುವುದರಿಂದ ಕುಟುಂಬ ವ್ಯವಸ್ಥೆ ನಿಲ್ಲದಾಗಿದೆ.

   12 .ಮನುಷ್ಯರಿಗೆ ಬೆಲೆಯೇ ಇಲ್ಲದಾಗಿದೆ. ಒಬ್ಬ ಮನುಷ್ಯ ಇನ್ನೊಬ್ಬ ಮನುಷ್ಯನನ್ನು ಕಂಡರೆ ಬೇಜಾರು  ಮಾಡಿಕೊಳ್ಳುತ್ತಿದ್ದಾನೆ .    ೧೨ .ಮಧ್ಯಸ್ಥಿಕೆ ವಹಿಸುವಂತಹ ಹಿರಿಯರು ಇಲ್ಲದಾಗಿದ್ದಾರೆ.ಹಿರಿಯರ ಮಾತಿಗೆ,ಅನುಭವಕ್ಕೆ ಬೆಲೆ ಇಲ್ಲದಾಗಿದೆ. ಇದರಿಂದಾಗಿ ಅವರಿಗೆ ಬೇಕಾದಂತೆ  ಬದುಕುತ್ತಿದ್ದಾರೆ.

   13 .ಕುಟುಂಬ ನಿರ್ವಹಣೆಯೂ ಒಂದು ಕಲೆಯಾಗಿದೆ. ಆ ಕಲೆಯು ಎಲ್ಲರಿಗೂ ಇಲ್ಲದಿರುವುದರಿಂದ ಕೂಡ ಈ ವ್ಯವಸ್ಥೆ ತಲೆಕೆಳಗಾಗಲು ಕಾರಣವಾಗಿದೆ.

   14 .ಮಾನವನ ಪ್ರವರ್ತನೆಯು ಕನಿಷ್ಠ ಅವಗಾಹನೆ ಇಲ್ಲದ ದುಸ್ಥಿತಿಗೆ ತಲುಪಿದೆ. ಮಾನವನು ಒರಟಾಗಿ ಪ್ರವರ್ತಿಸುತ್ತಿದ್ದಾನೆ. ನಾನು, ನನ್ನ ಹೆಂಡತಿ/ಗಂಡ ಎನ್ನುವ ಸಿದ್ಧಾಂತ ಹೋಗಿ,"ನಾನೇ ನಾನು"  "ನಾನು ನಾನೇ" ಎನ್ನುವ ಪಾಲಿಸಿ ಬಂದಿದೆ.

ಮಕ್ಕಳಿಗೆ ಮದುವೆ ಆಗುತ್ತಿದ್ದಂತೆ ಬೇರೆ ಹಾಕುವುದು ಆಚಾರವಾಗಿ ಬಿಟ್ಟಿದೆ. ಮನೆಯಲ್ಲಿ ಇಟ್ಟುಕೊಳ್ಳಲು ಭಯಪಡುತ್ತಿದ್ದಾರೆ. ಆಮೇಲೆ ನಿಷ್ಟೂರವಾಗುವುದಕ್ಕಿಂತ ಈವಾಗಲೇ ನಿಷ್ಟೂರವಾಗುವುದು ಮೇಲೂ ಎನ್ನುತ್ತಿದ್ದಾರೆ.

ಕೌಟುಂಬಿಕ  ಮೌಲ್ಯಗಳು ಕಟ್ಟುಪಾಡುಗಳು ಇನ್ನು ಮುಂದೆ ಇರುವುದಿಲ್ಲ. ಇಷ್ಟ  ಬಂದಂತೆ ಬದುಕುವ ದಿನಗಳು ಬಂದಾಗಿದೆ.

ಅಣ್ಣ- ತಮ್ಮ, ಅಣ್ಣ- ತಂಗಿ, ಅಕ್ಕ-ತಮ್ಮ, ಗಂಡ-ಹೆಂಡತಿ ಮಧ್ಯೆ ಬಲವಾದ ಸಂಬಂಧಗಳು ಇಲ್ಲದಾಗಿದೆ. 

ಕಥೆಯೇ ಮುಗಿದು ಹೋಗುತ್ತಿದೆ.

ಪ್ರಸ್ತುತ ನಡೆಯುತ್ತಿರುವುದು ನಾಟಕ. ಈ ನಾಟಕ ಕೂಡ ಇನ್ನೂ ಕೆಲವು ದಿನಗಳ ನಂತರ ಪೂರ್ತಿಯಾಗಿ ಇರಲಾರದು.

   15 .ಡಿಜಿಟಲ್ ಪ್ಲಾಟ್ ಫಾರಂ ಮೇಲೆ ಇರುವಂತಹ ಸಂಬಂಧ, ಬಾಂಧವ್ಯಗಳೇ ನಿಜವಾದವು ಎಂದು  ತಪ್ಪು ಕಲ್ಪನೆಯಲ್ಲಿ ಬದುಕುತ್ತಿರುವ ಜನ. ಯಾರಾದರೂ ತೀರಿಕೊಂಡರೆ ಒಂದು

ಆಕರ್ಷಣೀಯ ಮೆಸೇಜ್ ಇಲ್ಲ, RIP ಎಂದು ಹಾಕಿ ಅಲ್ಲಿಗೆ  ಬಿಟ್ಟುಬಿಡುತ್ತಾರೆ. ಶವ ಸಾಗಿಸಲು ಕೂಡ 4 ಜನ ಬರದ ಪರಿಸ್ಥಿತಿ ಇರುತ್ತದೆ.

ಈ ದಿನಗಳಿಗೆ ಎಲ್ಲರೂ, ಎಲ್ಲವೂ ಕಾರಣವಾಗಿದೆ.

 ಮಾನವರಿಗೆ ಮಾನವೀಯತೆಯ ಪಾಠ ಹೇಳಿಕೊಡುವಂತಹ ದುಸ್ಥಿತಿ ಬಂದೊದಗಿದೆ. ಸಮಾಜದಲ್ಲಿ ನಂಬಿಕೆ, ನೈತಿಕತೆ ಎನ್ನುವ ಹಸಿರನ್ನು ಮಾನವ ಹೃದಯದಲ್ಲಿ ಬಿತ್ತಬೇಕಾಗಿದೆ. ಛಿದ್ರ ಛಿದ್ರವಾಗುತ್ತಿರುವ   ಕೌಟುಂಬಿಕ ಮೌಲ್ಯಗಳನ್ನು, ಕಟ್ಟುಪಾಡುಗಳನ್ನು ಒಟ್ಟುಗೂಡಿಸುವ ಜವಾಬ್ದಾರಿ ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದೆ.

 ಇಲ್ಲವಾದಲ್ಲಿ, ನಮ್ಮ ಮಕ್ಕಳ ಭವಿಷ್ಯವನ್ನು ನಾವೇ ಹಾಳು ಮಾಡಿದಂತೆ, ಭವ್ಯ ಭಾರತದ ಸಂಸ್ಕೃತಿಯನ್ನು ಅಳಿಸಿ ಹಾಕಿದಂತೆ.

ದಯಮಾಡಿ ಆಲೋಚಿಸಿ...............

Posted 29/9/2023

Tuesday, September 26, 2023

SHRADDHANJALI - K RAMESH BALLAL

 25th Septembar 2023

K RAMESH BALLAL



Facebook post from the Family.

It is very sad to hear a good friend and well wisher, K Ramesh Ballal is no more.

He is also a distant relation, used to meet him several functions and exchange matter of common interest.

His facbook post mostly contain images of Gods, especially Sri Raghavendra Swamy and Mantralaya Rayaru.

SOME FUNCTIONS ATTENDED TOGETHER

at Niranjan Bhat's wedding

at Aishwarya/Murali son's Chouala

at Niranjan Bhats Homa Pooja at Vidyapeeta.




Pray for his Soul to rest in Peace, may God give strength to bereaved family.

Om Shanthi, Om Sadgathi.

Posted 26/9/2023

Monday, September 25, 2023

GANESHA HABBA SAMBHRAMA (2023)

 Sunday, 24th September 2023

Bhuvaneshwarinagara Neighbourhood, Bengaluru.


Ganesha Habba is time for rejoice and enjoy. Huge Ganesha moorthis are installed at various places for people to worship and pray for the welfare of the family.



Many donors contribute for the celebrations of Ganesha Pooja and Festival.




Coffee Board Park saw a beautiful Ganesha Installed by Blue Boys group and successfuly done the visarjana (immersion in water) with procession, people dancing.


Family together having fun. Mom, Vidya, Kavitha, Urvi, Atharv....

Posted 25/9/2023


Sunday, September 24, 2023

SHRI KAMADHENU KSHETRA

 Sunday, 24th September 2023

Kamadhenu Kshetra, Kammasandra main road, Lakshmipura post , Dasanapura Hobli , Bengaluru North 562123 





ಅದ್ಭುತವಾದಂತಹ " ಶ್ರೀ ಗುರುರಾಯರ" ಸಾಲಿಗ್ರಾಮ ಶಿಲಾ ಮೃತಿಕಾ ಬೃಂದಾವನ ಸನ್ನಿಧಾನವು ಮಹತ್ತರವಾಗಿ ಮೂಡಿಬಂದಿದ್ದು ,ಇದರೊಂದಿಗೆ ಸುಮಾರು 70 - 80 ಲಕ್ಷ ಶ್ರೀ ರಾಯರ ಮಹಾಪ್ರಸಾದವನ್ನು ಸ್ವೀಕರಿಸಿದ್ದಾಗಿ " ಶ್ರೀ ಗುರುರಾಯರ " ಅನುಗ್ರಹ ಈ ಮಹಾಪ್ರಸಾದದ ಪಾತ್ರೆ ಅಕ್ಷಯ ವಾಗಿಯೇ ಇರುವುದು ಶ್ರೀ ಗುರುರಾಯರ ಮಾತೃ ಹೃದಯಕೆ ಸಾಕ್ಷಿ .ಎಷ್ಟು ಜನಸ್ತೋಮ ಜನಸಾಗರ ಬಂದಾಗ (ಪ್ರತಿ ಗುರುವಾರ ಭಾನುವಾರ 15ರಿಂದ 20 ಸಾವಿರ ಜನ) ಎಲ್ಲರಿಗೂ ಮಹಾಪ್ರಸಾದ ವ್ಯವಸ್ಥೆಯನ್ನು ಮಾಡಿರುವ ಮಹಾತ್ಮರು ಶ್ರೀ ರಾಘವೇಂದ್ರ ತೀರ್ಥರು.ಈ ಅಮೃತಗಳಿಗೆ ಯಾರು ನಿರೀಕ್ಷಿಸಿದ ರೀತಿಯಲ್ಲಿ ಭಕ್ತ ಜನಕೋಟಿಯನ್ನು ಬರಮಾಡಿಕೊಂಡರು .ಇದು ಹೇಗೆ ಎಂದರೆ,  ಶ್ರೀನಿವಾಸನ ದರ್ಶನ ಕಾಂಕ್ಷಿಯಾಗಿ ಹೋದಾಗ ಆ ಭಕ್ತ ಜನ ಸಾಗರವನ್ನು ಕಂಡು ಹೀಗೆಂದು ನೋಡಿದಿದ್ದಾರೆ-  ಅವರು ಹಾಡಿನಲ್ಲಿ ನಿನ್ನ ದರ್ಶನಕ್ಕೆ ಬಂದವನಲ್ಲ ನಾನು ಈ ಹಾಡಿನಲ್ಲಿ ಹೇಳುತ್ತಾರೆ .ಎಷ್ಟು ಜನ್ಮದಲ್ಲಿ ಜ್ಞಾನ ಸಂಪಾದಿಸಿದರೆ , ಎಷ್ಟು ಹವನ - ಹೋಮ ಮಾಡಿದರೆ,  ಎಷ್ಟು ಜಪ - ತಪ ಮಾಡಿದರೆ, ಇಷ್ಟು ಜನರು ಸೇರಲಿಕ್ಕೆ ಸಾಧ್ಯ  ಏ ! ಶೀನಿವಾಸ ನೀನಿರುವ ಸ್ಥಳವೇ ಪವಿತ್ರ ಸ್ಥಳ , ನೀನಿರುವ ಜಾಗವೇ ಸರ್ವತೀರ್ಥದ ಫಲ, ನಿನ್ನ ದರ್ಶನವೇ ಸರ್ವ ಯಾತ್ರೆಯ ಫಲ ಎಂದು ಹೇಳಿದಂತೆ, ಕಾಮಧೇನು ಕ್ಷೇತ್ರವು " ಶ್ರೀ ಗುರುರಾಯರ" ಪವಿತ್ರ ಸನ್ನಿಧಾನವಾಗಿದ್ದು ಅವರ ದರ್ಶನವೇ ಸರ್ವ ಪಾಪ ಗಳ ಪರಿಹಾರ ಅವರ ಪಾದೋದಕವೇ ಸರ್ವ ರೋಗ  -   ರುಜಿನಗಳ ನಿವಾರಣೆ - ಅವರ ಫಲಮಂತ್ರಾಕ್ಷತೆಯೇ ಸರ್ವಾಭಿಷ್ಟ ಅವರ ಸೇವೆಯೇ ಜೀವನದ ಪರಮ ಜ್ಯೋತಿ - ಹೀಗೆ ಇರುವ "ಶ್ರೀ ಗುರುರಾಯರ" ವಿಶೇಷ ಸನ್ನಿಧಾನವೇ ಕಾಮಧೇನು ಕ್ಷೇತ್ರ.

Link address:

https://www.kamadhenu-kshetra.com/


ಸುಂದರ ವಾತಾವರಣದಲ್ಲಿ ಇರುವ ಶ್ರೀ ಕಾಮಧೇನು ಕ್ಷೇತ್ರ ಸಾವಿರಾರು ದಿನಂಪ್ರತಿ ಸಾವಿರಾರು ಜನರನ್ನು ಆಕರ್ಷಿಸುತ್ತದೆ. 



ಬೆಂಗಳೂರಿನಿಂದ ಸುಮಾರು 50 ಕಿ.. ಮೀ. ನಲ್ಲಿರುವ ಈ ಸ್ಥಳ, ನೆಲಮಂಗಲದ ಹತ್ತಿರ ತಿರುಗಿ ಸುಮಾರು 10 ಕಿ.ಮೀ ದೂರದಲ್ಲಿ ಈ ಜಾಗ ಸಿಗುತ್ತದೆ.


ಭಕ್ತಾದಿಗಳು ಶ್ರೀ ಗುರು ರಾಯರಿಗೆ ದೀಪ ಸೇವೆಯನ್ನು ಮಾಡಿ, ದರ್ಶನವನ್ನು ಮಾಡಿ, ಧ್ಯಾನ ಮಾಡಿ, ಪ್ರಸಾದ (ಮೊಸರು ಗಂಜಿ) ಯನ್ನು ಸ್ವೀಕರಿಸಿ ಕ್ರತಾರ್ಥರಾಗಬಹುದು 


ನಾವು, ರವಿ, ವಿದ್ಯಾ ಮತ್ತು ಊರ್ವಿ ಒಡನೆ ಕ್ಷೇತ್ರ ದರ್ಶನ ಮಾಡಿದೆವು.
ಶ್ರೀ ಶಿರಡಿ ಸಾಯಿ ಮಂದಿರ



ಹತ್ತಿರದಲ್ಲಿ ದಕ್ಷಿಣ ಶ್ರೀ ಶಿರಡಿ ಸಾಯಿ ಮಂದಿರವೂ ಇದೆ.

ಪೋಸ್ಟ್ ಮಾಡಿರುವುದು 25/9/2023 



Saturday, September 23, 2023

ISKCON TEMPLE - SAMBRAMA

 Saturday, 23rd September 2023

ISKCON TEMPLE, Yeshwanthapura, Bengaluru.




That was a casual visit to ISKCON Temple at Yeshwanthapura, with Ravi, Vidya and Urvi and it was nice time spent.






That was the day of "RADHOTSAVA" and big crowd was there at the temple.


People were jumping with excitement and divine vibration in the hall.

Left the place after some time.

Posted 24/9/2023


GANESHA UTSAV - KAUSHIKI CHAKRABORTY

 Friday, 22nd Septembar 2023

Sri Sringeri Shankara Mutt, Bnegaluru.

Kaushiki Chakraborty, (Born: 24/10/1980)is Hindustani Classical Vocalist, with her team was performing at Bengaluru Ganesha Utsava at Sri Sringeri Shankara Mutt.



She is  a celebrity, performed all over at early age, her charm of singing, beautiful expression, and complete involved in singing, earned millions of fans.




She sang number of Bhajans, all of superb perdormance. Her son accompanying her, also joins her exactly with singing tone and continuing with same melody.




Though we had to go to the venue in heavy traffic in the city, it was worth the effort.

The fact is, she involves the auidience amazingly in to the mood of divinity and involvement. It was almost two and half hours program.


We landed up at nearby SLV restaurant at Gandhi Bazaar had butter roti and kadai veg and returned home by 11 pm.

Posted 23/9/2023



Thursday, September 21, 2023

SHOBHA ARTICLES

 Friday, 22nd September 2023

ಸೈಕಲ್ ಸಾಹಸ :


ನಾನು ಆರನೇ ತರಗತಿಯಿಂದ ಹತ್ತನೇ ತರಗತಿಯವರೆಗೆ ಕಲಿತದ್ದು ಕುಂದಾಪುರದಲ್ಲಿ. ನಮ್ಮ ಬಾಡಿಗೆ ಮನೆ ಬಹಳ ಹಳೆಯ ಕಾಲದ್ದಾಗಿದ್ದು ಒಂದು ತೆಂಗಿನ ತೋಟದ ಮಧ್ಯದಲ್ಲಿ ಇತ್ತು. ನನಗೆ ಅಲ್ಲಿ ನನ್ನ ವಾರಿಗೆಯ ಹಲವಾರು ಸ್ನೇಹಿತೆಯರು ಇದ್ದರು. ಆ ತೋಟದಲ್ಲಿ ಬರೀ ತೆಂಗಿನಮರಗಳಲ್ಲದೆ ಹಲವು ರೀತಿಯ ಹಣ್ಣಿನ ಮರಗಳೂ ಇದ್ದು ಮಂಗನಂತಹ ನಮಗೆ ಮರಕೋತಿ ಆಡಲು ಅನುಕೂಲವೂ ಆಗಿತ್ತು. ಮರ್ಕಟಗಳಾಗಿದ್ದ ನನಗೂ ನನ್ನ ಸ್ನೇಹಿತೆಯರಿಗೂ ಬರೀ ಮರಕೋತಿ, ಮನೆಯಾಟ ಆಡಿ ಬೋರ್ ಬರುವುದು ಸಹಜ ತಾನೆ? ಆಗ ನಮಗೆ ಹೊಳೆದ ಐಡಿಯಾ ಏನೆಂದರೆ ಬಾಡಿಗೆ ಸೈಕಲ್ ಪಡೆದು ಸೈಕಲ್ ಹೊಡೆಯುವುದನ್ನು ಕಲಿಯುವುದು. ನಮ್ಮೆಲ್ಲರ ಮನೆ ಪೇಟೆಯ ಗಡಿಬಿಡಿಯ ಆವರಣದಿಂದ ಹೊರಗಿದ್ದ ಕಾರಣ ನಮ್ಮ ಬೀದಿಯಲ್ಲಿ ಗಾಡಿಗಳ ಓಡಾಟ ಕಡಿಮೆ ಇತ್ತು. ಹೀಗಾಗಿ ನಮ್ಮ ತೋಟದ ಖಾಲಿ ಜಾಗದಲ್ಲಿ ಸೈಕಲ್ ಕಲಿತ ಮೇಲೆ ರಸ್ತೆಯ ಮೇಲೆ ಸೈಕಲ್ ಬಿಡುವುದು ಎಂಬ ನಿರ್ಧಾರದೊಂದಿಗೆ ನಮ್ಮ ಸೈಕಲ್ ಕಲಿಕೆಯ ಸಾಹಸ ಶುರುವಾಯಿತು. ಮನೆಯವರು ಏನೂ ಕಿರಿಕಿರಿ ಮಾಡದೆ ಬಾಡಿಗೆ ಕೊಡಲು ಹಣವನ್ನೂ ಕೊಟ್ಟರು.

ನಾನಾಗ ಹೈಸ್ಕೂಲಿನಲ್ಲಿ ಓದುತ್ತಿದ್ದ ನೆನಪು. ನನ್ನ ಜೊತೆಗಿದ್ದವರೂ ಅದೇ ವಾರಿಗೆಯವರು. ನಾವು ನಾಲ್ಕೈದು ಜನ ಇದ್ದ ಕಾರಣ ಎರಡು ಸೈಕಲ್ ಬಾಡಿಗೆಗೆ ತಂದುಕೊಂಡು ಪರಸ್ಪರ ಒಬ್ಬರಿಗೊಬ್ಬರು ಸಹಾಯ ನೀಡುತ್ತಾ ಸೈಕಲ್ ಹೊಡೆಯುವುದನ್ನು ಕಲಿಯತೊಡಗಿದೆವು. ನಾಲ್ಕೈದು ದಿವಸಗಳೊಳಗೆ ನಾವೆಲ್ಲಾ ಯಾರ ಸಹಾಯವಿಲ್ಲದೆ ರಸ್ತೆಯ ಮೇಲೂ ಸೈಕಲ್ ಹೊಡೆಯತೊಡಗಿದೆವು. ನಮ್ಮ ಖುಷಿಗೆ ಪಾರವೇ ಇರಲಿಲ್ಲ. ಏನೋ ಮಹತ್ಸಾಧನೆ ಮಾಡಿದ ಮನಸ್ಥಿತಿ! 

ನನಗಿಂತ ಆರೇಳು ವರ್ಷ ಚಿಕ್ಕವಳಾದ ನನ್ನ ತಂಗಿ ಶೈಲ ಯಾವಾಗಲೂ ನನ್ನ ಪ್ರಯೋಗಗಳಿಗೆ ಬಲಿಪಶು😀 ಅಲ್ಪಸ್ವಲ್ಪ ಸೈಕಲ್ ಕಲಿತ ನನಗೆ ಏಕಾಂಗಿಯಾಗಿ ಸೈಕಲ್ ಹೊಡೆಯಲು ಬೋರ್ ಆಗಿ ನನ್ನ ತಂಗಿಯನ್ನು ಹಿಂದೆ ಕೂರಿಸಿಕೊಂಡು ನನ್ನ ಸೈಕಲ್ ಹೊಡೆಯುವ ಕೌಶಲ್ಯದ ಪರೀಕ್ಷೆಗೆ ಇಳಿದೆ. ಬಿಲ್ಲಿನಿಂದ ಬಿಟ್ಟ ಬಾಣದಂತೆ ಹೊಂಡಾಗುಂಡಿಯ ರಸ್ತೆಯಲ್ಲಿ ಸುಂಯ್ಯನೆ ಸೈಕಲ್ ಹೊಡೆಯುವಾಗ ಸಣ್ಣ ಬಾವಿಯಂತಿದ್ದ ರಸ್ತೆಯ ಹೊಂಡದೊಳಗೆ ನಮ್ಮಿಬ್ಬರನ್ನು ಹೊತ್ತ ಸೈಕಲ್ ಇಳಿದಾಗ ಬ್ಯಾಲೆನ್ಸ್ ತಪ್ಪಿ ನಾವಿಬ್ಬರೂ ಬಡಕ್ಕನೆ ಬಿದ್ದು ಕೈಮೈ ಸ್ವಲ್ಪ ತರಿಚಿಕೊಂಡಿತು. ರಸ್ತೆ ಮೇಲೆ ಬಿದ್ದ ನಾವಿಬ್ಬರೂ ಅಲ್ಲಿಂದ ಎದ್ದದ್ದೂ ಆಯಿತು. ಅಷ್ಟರಲ್ಲಿ ಅಲ್ಲೇ ಹತ್ತಿರದಲ್ಲಿದ್ದ ಅಂಗಡಿ ಕಟ್ಟೆ ಮೇಲೆ ಕುಳಿತಿದ್ದ ಐದಾರು ಮಂದಿ ಬಂದು ನನಗೆ ಬೈದ ಬಿರುಸಿಗೆ ನಾನು ಈವರೆಗೆ ಯಾವುದೇ ವಾಹನವನ್ನು ರಸ್ತೆಗೆ ಕೊಂಡೊಯ್ಯುವ ಧೈರ್ಯವನ್ನೇ ಕಳೆದುಕೊಂಡು "ಹಲವು ವಿದ್ಯಾ ಪಾರಂಗತೆ ಡ್ರೈವಿಂಗ್ ವಿದ್ಯಾ ಹೀನೆ"ಯಾಗಿ ಉಳಿದು ಬಿಟ್ಟಿದ್ದೇನೆ.

ಪೆಪರೋಮಿಯಾ ಪೆಲ್ಲುಸಿಡಾ 

ನೀರು ಗಂಟೆ ಗಿಡ 

ಪೆಪರೋಮಿಯಾ ಪೆಲ್ಲುಸಿಡಾ ಎಂಬ ವೈಜ್ಞಾನಿಕ ಹೆಸರಿನಿಂದ ಕರೆಯಲ್ಪಡುವ ನೀರು ಗಂಟಿ ಗಿಡ(ನಮ್ಮ ಬಾಲ ಭಾಷೆಯಲ್ಲಿ) ನಮ್ಮ ಬಾಲ್ಯದ ದಿನಗಳ ನೆನಪನ್ನು ಸದಾ ಹಸಿರಾಗಿಡುವ ಗಿಡ. 


ನನ್ನ ಜಮಾನದವರು ಕಡ್ಡಿ/ಬಳಪ ಮತ್ತು ಸ್ಲೇಟನ್ನು ಬಳಸುತ್ತಿದ್ದವರು. ಮರದ ಚೌಕಟ್ಟಿನೊಳಗೆ ಇರುತ್ತಿದ್ದ ಕರಿ ಬಳಪಕಲ್ಲಿನ ಸ್ಲೇಟಿನ ಮೇಲೆ ಬಿಳಿ ಬಳಪ/ಕಡ್ಡಿಯಿಂದ ಬರೆಯುತ್ತಿದ್ದವರು ನಾವು. ಸ್ಲೇಟ್ ಒರೆಸಲು ಮನೆಯಿಂದ ಅಮ್ಮ ಕಳಿಸುತ್ತಿದ್ದ ಸಣ್ಣ ಬಟ್ಟೆಯ ತುಂಡು ಕಳೆದು ಹೋದಾಗ ನಾವು ಮೊರೆ ಹೋಗುತ್ತಿದ್ದದ್ದು ಈ ನೀರು ಗಂಟಿ ಗಿಡಕ್ಕೆ. ಕಲ್ಲಿನ ಸಂದಿಗೊಂದಿಯಲ್ಲಿ ಬೆಳೆಯುತ್ತಿದ್ದ ಈ ಗಿಡವನ್ನು ಹುಡುಕಿ ಸ್ಲೇಟನ್ನು ಒರೆಸುವುದು ಒಂದು ಖುಷಿಯ ವಿಷಯವಾಗಿತ್ತು. ಆ ಗಿಡದ ಎಲೆಗಳಿಗೆ ಒಂದು ವಿಶಿಷ್ಟ ಸುವಾಸನೆ ಇರುತ್ತಿತ್ತು. ಗಿಡ ಕಿತ್ತಾದ ಮೇಲೆ ಅದನ್ನೊಮ್ಮೆ ಆಘ್ರಾಣಿಸಿ ನಂತರದಲ್ಲಿ ಸ್ಲೇಟನ್ನು ಒರೆಸಲು ಪ್ರಾರಂಭಿಸುತ್ತಿದ್ದೆವು. ಈ ಗಿಡ ಕಂಡಾಗಲೆಲ್ಲ ಅದನ್ನು ಹಿಸುಕಿ ಅದರಿಂದ ಹೊರ ಬರುವ ನೀರನ್ನು ನೋಡುವುದು ಕೂಡಾ ಒಂದು ಆಟವಾಗಿತ್ತು ನಮಗೆ!

ಇದು ಹತ್ತು ಹದಿನೈದು ಸೆಂಟಿಮೀಟರ್ ನಷ್ಟು ಎತ್ತರ ಬೆಳೆಯುವ ಗಿಡ. ಹೃದಯದ ಆಕಾರದ ಎಲೆಗಳನ್ನು ಹೊಂದಿರುವ ಈ ಗಿಡದ ಕಾಂಡ ನೀರಿನಿಂದ ತುಂಬಿರುತ್ತದೆ. ಅದರ ಬೀಜಗಳು ಚುಕ್ಕೆಗಳಂತೆ ನೋಡಲು ಚೆಂದ. ಗಿಡದ ಎಲೆಗಳಿಗೆ ಒಂದು ರೀತಿಯ ಹೊಳಪು ಇರುತ್ತದೆ. ಕೀಳಲು ಹೋದರೆ ಪಟಕ್ಕನೆ ತುಂಡಾಗುವಷ್ಟು ಮೃದುವಾದ ಗಿಡವಿದು. ಕೆಲವು ಗಿಡದ ಕಾಂಡ ಬಳಪದಷ್ಟು ದಪ್ಪವಿದ್ದರೆ ಕೆಲವು ಕಾಂಡ ತೆಂಗಿನ ಕಡ್ಡಿಯ ಬುಡದಷ್ಟು ಸಣ್ಣ. ಅದರ ಗಾತ್ರ ಎಷ್ಟೇ ಇದ್ದರೂ ಕೂಡಾ ಅದು ನಮ್ಮ ಸ್ಲೇಟ್ ಒರೆಸುವ ಕೆಲಸಕ್ಕೆ ಸಾಕಾಗುವಷ್ಟು ನೀರನ್ನು ಕೊಡುತ್ತಿತ್ತು. ಹೀಗಾಗಿ ಇದು ನಮ್ಮ ಆಪ್ತರಕ್ಷಕನಾಗಿ ಕೆಲಸ ಮಾಡುತ್ತಿತ್ತು.
ಇಂತಹ ಮೃದುವಾದ ಗಿಡವೊಂದು ನಮ್ಮ ಬಾಲ್ಯದ ನೆನಪನ್ನು ಕೆದಕುವಷ್ಟು ಗಟ್ಟಿಯಾಗಿರುವುದನ್ನು ಕಂಡರೆ ಅದರ ತಾಕತ್ತಿನ ಬಗ್ಗೆ ಅಚ್ಚರಿ ಎನಿಸುತ್ತದಲ್ಲಾ?! 

ಪೋಸ್ಟ್ ಮಾಡಿರುವುದು 22/9/2023 

Wednesday, September 20, 2023

ಗಣೇಶ ಚತುರ್ಥಿ ಸಂಭ್ರಮ - 2023

ಮಂಗಳವಾರ, 19 ನೇ ಸಪ್ಟಂಬರ 2023  

ಗಣೇಶ ಚತುರ್ಥಿ ಸಂಭ್ರಮ - ಶೃಂಗೇರಿ ಶಂಕರ ಮಠ 

|| ಪ್ರಣಾಮ್ಯ ಶಿರಸಾ ದೇವಂ ಗೌರಿಪುತ್ರಂ ವಿನಾಯಕಂ |

ಭಕ್ತಾವಾಸಂ ಸ್ಮರೇನಿತ್ಯಂ ಆಯುಃ ಕಾಮಾರ್ಥ ಸಿದ್ಧಯೇ ||


ಎಲ್ಲೆಲ್ಲೂ ಗಣೇಶ ಚತುರ್ಥಿಯ ಸಂಭ್ರಮಾಚರಣೆ 
ಶೃಂಗೇರಿ ಶಂಕರ ಮಠದಲ್ಲಿ ಅದ್ದೂರಿಯ ಪೆಂಡಾಲ್ ಗಳು, ಪೂಜೆ, ಸೇವೆ, ಸಂಗೀತ, ನೃತ್ಯಗಳ ಕಾರ್ಯಕ್ರಮಗಳು.





ಭಾರತದಲ್ಲಿ ಯಾವುದೇ  ಜಾತಿ, ಮತ, ಪಂಥಗಳ ಬೇಧಭಾವವಿಲ್ಲದೆ ಅತ್ಯಂತ ವೈಭವದಿಂದ ಆಚರಿಸುವ ಹಬ್ಬವೆಂದರೆ ಗಣೇಶ ಚತುರ್ಥಿ ಹಬ್ಬವಾಗಿದೆ. ಸಕಲ ವಿಘ್ನಗಳನ್ನು ನಿವಾರಿಸುವ ವಿನಾಯಕನು ನಂಬಿದ ಭಕ್ತರಿಗೆ ಬುದ್ಧಿ , ಆಯುಷ್ಯ ,ಆರೋಗ್ಯ , ಸಂತೋಷ ಮತ್ತು ಸಮೃದ್ಧಿಯನ್ನು ದಯಪಾಲಿಸುತ್ತಾನೆ.




ಬಿರ್ತಿಮನೆ, ಬೆಂಗಳೂರು, ಹತ್ತಿರದ ಮುಖ್ಯ ರಸ್ತೆಯಲ್ಲಿ ಗಣೇಶ ವಿಸರ್ಜನೆಯ ಸಂಭ್ರಮ 20/9/2023 




ದಾಸಶ್ರೇಷ್ಟರುಗಳು ಗಣಪತಿಯ ದೇವರನಾಮಗಳನ್ನು ರಚಿಸಿ ಅವನನ್ನು ಹಲವಾರು ರೀತಿಯಲ್ಲಿ ವರ್ಣಿಸಿದ್ದಾರೆ.  ಅವುಗಳಲ್ಲಿ ಕೆಲವು ಆಯ್ದ ಪದಗಳನ್ನು ಇಲ್ಲಿ ಸಂಗ್ರಹಿಸಲಾಗಿದೆ ;

ಅಂಬಾತನಯ;  ಆದಿಪೂಜಿತ;ಅಂಬರಾದ್ವಯಭೂಷ;  ಅಂಬರಾಧೀಶ್ವರ;ಅರವಿಂದನಯನ; ಇಭೇಂದ್ರಮುಖ;
ಇಂದುಮೌಳಿಜ; ಏಕದಂತ;ಏಕವಿಂಶತಿಪತ್ರಪೂಜಿತ ; ಕಮ್ಮಗೋಲನವೈರಿಸುತ; ಗಣನಾಥ ; ಗಜಮುಖ ; 
ಗಜಾನನ; ಗೌರೀಪುತ್ರ;ಚಾರುದೇಷ್ಣಾಹ್ವಯ;  ಪಾರ್ವತೀತನಯ ; ಪಾಶಾಂಕುಶಧರ; ಮಹಾಕಾಯ; 
ಮಹೇಶಸಂಭವ;ಮೂಷಿಕ ವಾಹನ ;ಮೂಷಿಕಾಸನ ;ಮೂಷಕರೂಢಾ;ಮೂರುಕಣ್ಣನ ಸುತ;ದರ್ಪಭಂಜನ
ದಶನಮೋದಕ;ನಾಸಿಕಾಧರ; ಬೆನಕ  ;ಹೇರಂಬ ; ಶಂಕರತನಯ; ಶಂಭುನಂದನ; ಶಂಬರಾರಿಪುತ್ರ;
 ತಾರಕಾಂತಕನನುಜ;ಚಾಮೀರಕರವರ್ಣ; ಯೂಥಪವದನ ; ರಕ್ತವಸ್ರ್ತಧರ ;ರಕ್ತಾಂಬರಧರ; 
 ರಕ್ತವಾಸದ್ವಯಭೂಷಣ;ಲಂಬಕರ್ಣ; ಲಂಬೋದರ, ವ್ಯಾಸಕರುಣಾಪಾತ್ರ;ವಕ್ರತುಂಡ; ಶೂರ್ಪಕರ್ಣ ; 
ಶಂಕರತನಯ; ಷಣ್ಮುಖನನುಜ ; ಸಿದ್ಧಿವಿನಾಯಕ ;ಸ್ವರ್ಪಿತಾಂಕುಶಪಾಶಕರ;ಸಿದ್ಧಿ ಬುದ್ಧಿ ಪ್ರಿಯ;
ಸರ್ಪವರಕಟಿಸೂತ್ರ;ವಿಘ್ನನಾಶನ ; ವೈಕೃತಗಾತ್ರ;

ಪೋಸ್ಟ್ ಮಾಡಿರುವುದು 21/8.2023 


BRAHMINS' COFFEE BAR - EATING OUTLET

 Tuesday, 19th September 2023

Near Shankara Mutt, Shankarapura, Bengaluru.

The name "Brahmins' Coffee Bar", a small space in the corner building oppposite to Sringeri Shankara Mutt.



It's eating outlet with limited menu like Idli, Vada, Chutney. Uppittu & Kesari bath and coffee of course.

No seats available to sit and eat, it's self service outlet, People stand on roadside, under the tree, in the corner.


Just by the side, two/three tables are there, where you can keep the dish, stand and eat.

It is the quality of food that is attracting the crowd.


The crowd that is coming to enjoy the dishes is amazing. People sit in the car and eat.

Sometimes there is traffic jam, security has to clear the mess.

We had some idli vada Chutney, uppittu and kesaribath and coffee.

Posted 20/9/2023

Tuesday, September 19, 2023

BENGALURU GANESH FESTIVAL - ANOOP JALOTA

 Tursday, 19th September 2023

Shri Sringeri Shankara Mutt, Bengaluru.

That was Bengaluru Ganesha Utsav at Sri Srigeri ShankaraMutt, Bengaluru.





Padmashree Sri Anoop Jalota, Bhajan Samrat, celebrity Bhakthi Sangeetha Singer, was performing at the venue.




He is a great singer, making people to be absorbed in the Bhajan and submit oneself to Almighty God. We enjoyed the program.


Before the music program, there was dance presentation by a large group.


Back home by 10 pm


posted 20/9/2023