Showing posts with label MOVIE NEWS. Show all posts
Showing posts with label MOVIE NEWS. Show all posts

Wednesday, July 15, 2026

MAIN VAAPAS AAUNGA - SHOBHA ARTICLE

 ಮಂಗಳವಾರ, ಜುಲೈ 14, 2026 

MAIN VAAPAS AAUNGA



ನಾನು ಹಾಗೂ ನನ್ನ ಮಗಳು ಕಳೆದ ವಾರ ಬೆಂಗಳೂರಿಗೆ ಹೋಗಿ ಮೂರ್ನಾಲ್ಕು ದಿವಸಗಳಿದ್ದು ಬಂದೆವು. ಮುಖ್ಯ ಉದ್ದೇಶ ನಮ್ಮ ಮನೆಯ ಮಗು “ಸರಯೂ" ಜೊತೆಗೆ ಕಾಲ ಕಳೆಯುವುದು; ಅವಳ ಕೇಕೆ, ಕುಸುಗುಟ್ಟುವಿಕೆ, ಹಾಂ ಹೂಂ ಮಾತುಗಳ ನಡುವೆ ಕಳೆದು ಹೋಗುವುದಾಗಿತ್ತು. ಬರೀ ಅಷ್ಟಕ್ಕೆ ನಮ್ಮ ಕೆಲಸ ನಿಲ್ಲದೆ ಅದರ ನಡುವೆ ಒಂದು ಸಿನೆಮಾವನ್ನು ನೋಡಿದ್ದೂ ಆಯಿತು. ಅದು ಇಮ್ತಿಯಾಜ್ ಅಲಿಯ ಹೊಸ ಸಿನೆಮಾ" ಮೇ ವಾಪಾಸ್ ಆವೂಂಗಾ”. ನನ್ನನ್ನು ಗಾಢವಾಗಿ ತಟ್ಟಿದ ಸಿನೆಮಾ ಅದಾಗಿತ್ತು. ಸಿನೆಮಾ ಹಾಲ್ ನಲ್ಲಿ ಇದ್ದವರು ನಲ್ವತ್ತು ಐವತ್ತು ಜನರಿರಬಹುದು. ಸಿನೆಮಾ ಮುಗಿದರೂ ಯಾರೂ ತಮ್ಮ ಸೀಟ್ ಬಿಟ್ಟು ಏಳಲಿಲ್ಲ. ಎಲ್ಲರ ಕಣ್ಣುಗಳಲ್ಲೂ ಕಣ್ಣೀರು ಇಳಿಯುತ್ತಿತ್ತು; ನನ್ನ ಹಾಗೂ ವಿಭಾಳ ಕಣ್ಣುಗಳಲ್ಲೂ ಕೂಡಾ!

ಸ್ವಾತಂತ್ರ್ಯಪೂರ್ವದ ದೇಶ ವಿಭಜನೆಯ ಸಮಯದ ಪ್ರೇಮ ಕಥೆಯದು. ಎಲ್ಲೂ ಯಾವುದರ ವೈಭವೀಕರಣವಿಲ್ಲ. ನಮ್ಮ ಸುತ್ತ ಮುತ್ತ ಸಹಜವಾಗಿ ಕಾಣುವ/ನಡೆಯುವ ರೀತಿಯಲ್ಲಿ ತೆಗೆದ ಚಿತ್ರವದು. ಒಬ್ಬೊಬ್ಬರಿಗೆ ಒಂದೊಂದು ರೀತಿಯಲ್ಲಿ ಕನೆಕ್ಟ್ ಆಗುವ ಸಿನೆಮಾವದು. ನನಗೆ ಅದರಲ್ಲಿನ ‘ಶುದ್ಧ’ ಪ್ರೀತಿಯ ಭಾವ ಮನ ತಟ್ಟಿತು. ನಾನು ಮೂಲಭೂತವಾಗಿ ಭಾವನಾತ್ಮಕ ವ್ಯಕ್ತಿ. ನನ್ನಲ್ಲಿ ಪ್ರಧಾನವಾಗಿ ಇರುವುದು ಪ್ರೀತಿಯ ಭಾವ. ಹೀಗಾಗಿ ಆ ಸಿನೆಮಾದಲ್ಲಿ ಎಳೆಎಳೆಯಾಗಿ ತೋರಿಸಿದ ಪ್ರೀತಿಯ ಭಾವಬಂಧ ನನ್ನ ಸುಪ್ತ ಮನಸ್ಸನ್ನು ಕಲುಕಿತು ಎಂದರೂ ತಪ್ಪಿಲ್ಲ. ತನ್ನ ಪ್ರೀತಿಯನ್ನು ತನ್ನೊಳಗೇ ಇಟ್ಟುಕೊಂಡು, ಪ್ರಿಯತಮೆಯಿಂದ ದೂರಾದ ನೋವನ್ನು ನುಂಗಿಕೊಂಡು, ತನ್ನವರನ್ನೆಲ್ಲಾ ಕಳೆದುಕೊಂಡು, ತಾನು ಹುಟ್ಟಿ ಬೆಳೆದ ನೆಲದಿಂದ ದೂರಾಗಿ, ನಿರಾಶ್ರಿತನಾಗಿ ಹೊಸ ಜಾಗದಲ್ಲಿ ಹೊಸದಾಗಿ ಯಶಸ್ವಿ ಬದುಕನ್ನು ಕಟ್ಟಿಕೊಂಡು, ಸಾವಿಗೆ ಹತ್ತಿರವಾದರೂ ತನ್ನ ಪ್ರಿಯತಮೆಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳಲೋಸುಗ ಈ ಭೌತಿಕ ಜಗತ್ತಿಗೆ ಅಂಟಿಕೊಂಡು, ವಯಸ್ಸು ತೊಂಬತ್ತೈದು ಆಗಿ ಜೀವನ್ಮರಣದ ಅಂಚಿನಲ್ಲಿದ್ದರೂ ಸಾಯಲಾರದೆ ತೊಳಲಾಡುವ ಹಾಗೂ ಕೊನೆಗೂ ಪ್ರೇಮಿಕೆಯ ಭಾವಚಿತ್ರದೆದುರು ತನ್ನ ಮನದ ಮಾತನ್ನು ಅರುಹುತ್ತಾ ಆ ವ್ಯಕ್ತಿ ಪ್ರಾಣ ಬಿಡುವ ಗಳಿಗೆ ಇದೆಯಲ್ಲಾ ಅದು ಎಂತಹ ಕಲ್ಲು ಮನಸ್ಸಿನವರನ್ನೂ ಕರಗಿಸುವಂತಹುದು. ಇದೆಲ್ಲವನ್ನು ಸಹಜವಾಗಿ ತೋರಿಸಿದ ರೀತಿ ಹಾಗೂ ಕಥೆಯ ನಿರೂಪಣೆ ಅದ್ಭುತವಾದದ್ದು. ಪ್ರತಿಯೊಬ್ಬರ ನಟನೆ ಕೂಡಾ ಮನತಟ್ಟುವಂತಹುದು. ಸಂಗೀತ ಆಹ್ಲಾದಕರವಾಗಿ ಮನಸ್ಸಿನ ಒಳಗೆ ಇಳಿಯುವಂತಹುದು. ಸೀನ್ ಬ್ಲಾಕಿಂಗ್ ಹಾಗೂ ಫ್ಲ್ಯಾಶ್ ಬ್ಯಾಕ್ ಟೆಕ್ನಿಕ್ ಅನ್ನು ಅರ್ಥಪೂರ್ಣವಾಗಿ ಬಳಸಿಕೊಳ್ಳಲಾಗಿದೆ.

ಪ್ರೀತಿ ಮಾಡುವುದಲ್ಲ; ಅದು ನಮ್ಮೊಳಗೆ ಉದಿಸುವುದು. ಸಾವು ಆಯ್ಕೆಯಲ್ಲ; ಅದು ನಮ್ಮನ್ನು ಹುಡುಕಿಕೊಂಡು ಬಂದಾಗ ಅದನ್ನು ಒಪ್ಪಿಕೊಳ್ಳುವುದು. ಎಂತಹ ಸರಳ ಸತ್ಯಗಳು; ಆದರೆ ಅಷ್ಟೇ ಗಹನವಾದ ವಿಚಾರಗಳಿವು. ಇಂತಹುದನ್ನು ಒಂದು ಸಿನೆಮಾದ ಮೂಲಕ ಅರುಹುವ ಕೆಲಸ ಸುಲಭದ್ದಲ್ಲ. ಆ ಸಿನೆಮಾವನ್ನು ವಿಶ್ಲೇಷಿಸುವ ಸಾಮರ್ಥ್ಯ ನನಗಿಲ್ಲ. ಆದರೆ ನನಗನಿಸಿದ್ದನ್ನು ಬರೆಯುವ ಮನಸ್ಸು ನನಗಿದೆಯಷ್ಟೆ. ಎಲ್ಲರೂ ತಪ್ಪದೇ ಚಿತ್ರಮಂದಿರಕ್ಕೆ ಹೋಗಿ ನೋಡಬೇಕಾದ ಸಿನೆಮಾವದು!

Posted 16/7/2026


Saturday, March 28, 2026

DURANDHAR - 2 THE REVENGE - MOVIE

 Friday, March 27, 2026

Galleria Mall, Yalahanka, Bengaluru

The 4-hour long movie about Indian agent working in Afghanistan and Pakistan, finally able to crush the hideouts of terrosits.


Dhurandhar The Revenge introduces Jaskirat Singh Rangi, tracing the chain of events that compel him to become Hamza Ali Mazari, and follows his rise as he operates deep inside Pakistan.



Dhurandhar (धुरंधर) is a Hindi/Sanskrit term referring to an expert, stalwart, or a highly skilled and capable person. It describes someone who is a master of their craft, a leader, or someone who efficiently bears heavy responsibilities (similar to a "key player" or "top gun").


Centered around spy-man Hamza Ali Mazari, played by Ranveer Singh, Dhurandhar is the name of the covert operation jiske tehat yeh jasoos Pakistan bheja jaata hai, to figure out ki internal politics kya chal rahi hai. The location chosen for this is the town of Lyari in Karachi. Partly because it’s politically important, but also because yahaan arajakta phaili hai. Gang wars and a diverse population of immigrants has made Lyari a hotbed for corruption and opportunism. Jiska faayda uthaakar, bataur spy ghul mil jaana asaan hai.



The film is broken up into 8 chapters, signifying little more than the passage of time. These titles, Stranger in the Land of Shadows, The Bastard King of Lyari, Bullets and Roses, The Jinn, The Devil’s Guardian, The Butterfly Effect, and finally Et Tu Brutus are perhaps an attempt to give the audience a break from trying to follow the sprawling and ever-expanding storyline by splitting it up into chunks. 

It's absolutely tiring to watch too long (4 hours) movie with so much killing, ghastly scenes explosions, and hyped scenarios.

Posted 29/3/2026





Monday, October 6, 2025

KANTARA - 1 : KANNADA MOVIE

 Monday, 6th October 2025

Elements Mall, Thanisandra, Bengaluru



We were at the movie theater at PVR Cinemas at Elements Mall this morning and the story is continuation of earlier "KANTARA" which came four years ago.



It's almost three hours movie with story from fourth century Kadamba rulers in India and the people of Kantara Forest believing in "Semi God", Daiva.

Review:
Kantara Chapter 1 Review: Rishab Shetty’s Kantara (2022) was an underdog whose growl proved so mighty that it secured multiple National Award wins and a glaringly positive box office response. But the odds of hitting the jackpot twice in a row are slim to none. Yet, Kantara: Chapter 1 is an earnest attempt to recreate the cinematic ‘aha’ moment we once witnessed.

Kantara: Chapter 1 delves deeper into the mysteries of the jungle and explores the sacred significance of the coveted land. It reiterates the notion that whenever evil overshadows the good in society, God’s avatar is born to save the desolate. In the prequel, when Kulsekhara (Gulshan Devaiah) is crowned as the King of Bangara, his death knell rings clear: he is an unjust king who thrives on exploitation and an unrightful air of arrogance.



DAIVESHWARAAYA, OM NAMASHIVAYA 


Despite some forgivable flaws, the film is a visual treat, and the second half will surely leave you jaw-dropped, long and boring. Kantara: Chapter 1 is Rishab Shetty’s attempt at amalgamating Indian folklore with mainstream cinema, and this he does well. 


BRAHMAKALASHA VIDEO SONG




Many many reviews were written in the print media and social media, and it is block buster, making lot of money, and movie is succesfully in all theatres and in many languages, throught the world.

Congratulations to Rishab Shetty and the team.

Posted 7/10/2025








Wednesday, August 13, 2025

PHOTO - KANNADA MOVIE

Tuesday, 12th August 2025

Amazon Prime (OTT)




"PHOTO" - Kannada Movie about a 10 year old boy "DURGYA" in a remote village of Raichur, sees the Vidhana Soudha in Bengaluru Photo in his classroom and is obsessed with seeing the same immediately.

The father is mason, poor daily worker, seeing the son's adamant obsession of VidhanaSoudha, decides to travel to Bengaluru, reaches and starts working in a construction company.

At the same time, Corona lockdown came and all things came to standstiill, no work, father and son decides to go back to village, but no transport.

They decide to walk the long way, miles together, the boy falling sick, father carrying him, searching for food and water and undergoes terrific hardships.

Finally, the boy dies due to Corona and cries of mother and the villagers were pathetic.

Utsav Gonwar, Writer, producer and director, has done a good job, super direction, bringing out the sesnsitivity and woes of poor people during COVID, and people are not even sympathetic.

Veeresh Gonwar as Durgya (Boy) and Mahadev Hadapad (Father) as Gyanappa have superb acting.

The Covid 19 lockdown created new perspectives of the world for many. Some got closer to their families — cooking, eating and watching movies together. Others saw their families being torn apart. Photo follows the story of a family devastated by the insensitive decision taken by the political leaders.

Photo' movie review: A powerful indictment of lockdown mismanagement The longing, anguish and desolation of the characters are portrayed in a slow narrative with long aerial shots. The cinematography by Dinesh Divakaran is admirable in 'Photo


Posted 14/8/2025



Tuesday, July 29, 2025

SU FROM SO - KANNADA MOVIE

 Tuesday, July 29, 2025

Elements Mall, Thanisandra, Bengaluru.

SU (LOCHANA) FROM SO (MESHWARA) - KANNADA MOVIE

ಸು (ಲೋಚನ) ಫ್ರಮ್ ಸೋ (ಮೆಶ್ವರ) - ಕನ್ನಡ ಸಿನೆಮಾ 


ನಾವು ಬಹಳ ಅಪರೂಪದಲ್ಲಿ, ಚಿತ್ರಮಂದಿರದಲ್ಲಿ ನೋಡಿದ ಸಿನೆಮಾ. 

ಉದಯವಾಣಿ, 26/72025
ಬಹಳಷ್ಟು ಪ್ರಚಾರವನ್ನು ಗಿಟ್ಟಿಸಿದ ಕರಾವಳಿ ಭಾಗದ ಜನತೆಯ ಜನ ಜೀವನವನ್ನು ಅಳವಡಿಸಿಕೊಂಡು ತಯಾರಿಸಿದ ಕನ್ನಡ ಸಿನೆಮ " ಸು ಫ್ರಮ್ ಸೋ"

ಹಾಸ್ಯ ಭರಿತ ಸಂಭಾಷಣೆ, ಬಣ್ಣ ಬಣ್ಣದ ಪಂಚೆಗಳನ್ನು ಧರಿಸಿ ಓಡಾಡುವ ಹಳ್ಳಿಯ  ಯುವಕರು, ದೊಡ್ಡವರು, ಮದುವೆ ಸಮಾರಂಭಗಳಲ್ಲಿ ಆಗುವ ಹಾಸ್ಯ ಮಾತುಕತೆಗಳು, ಘಟನೆ, ಎಣ್ಣೆ ಪಾರ್ಟಿಯ ಪಂಚಿನ ಸಂಭಾಷಣೆ, ಪ್ರೇಕ್ಷಕರನ್ನು ನಗಿಸುವ ವಿಷಯಗಳು.....

ಉದಯವಾಣಿ, 29/7/2025

The story is about,  in a quiet villagea boy's innocent crush unleashes strange events that have everyone convinced , he's brought a ghost along with his feelings....

The presentaion and the narration very humorous, suspense and at some placees over acting.

ಸೋಮೆಶ್ವರದಿಂದ ಬಂದ ಪ್ರೇತ  (ಸುಲೋಚನ) ಅಶೋಕನ ಮೇಲೆ ಬಂದಿರುವುದು, ಜನರಿಗೆ ನಂಬಿಕೆ, ಆತಂಕ, ಭಯ, ಅವರ ಆಟಾಟೋಪಗಳು, ನಂತರ ಕಳ್ಳ ಸ್ವಾಮಿ (ರಾಜ್ ಶೆಟ್ಟಿ) ಯ ಅತಿಯಾದ ನಟನೆ, ಹಾಸ್ಯ.
ತಡ ನಂತರ ಗಂಡಸು/ಹೆಂಗಸು ವೇಷದಲ್ಲಿ ಬಂದ ಪ್ರೇತ ಜನರೊಡನೆ ಹೊಡೆದಾಟ.... ಕೆಲವೊಮ್ಮೆ ಅತೀ ಎನಿಸಿತು....

ಕರಾವಳಿ ಭಾಗದ ಮಾತಿನ ವೈಖರಿ, ಸಂಭಾಷಣೆ ..... ರವಿ ಅಣ್ಣ, ಅಶೋಕಣ್ಣ , ಚಂದ್ರಣ್ಣ, ಕೋಪದಲ್ಲಿ ಬೈಯುವ "ಬ್ಯಾವರ್ಶಿ".... ಇತ್ಯಾದಿ ಪದಗಳು ಕರಾವಳಿಯ ಜನರಿಗೆ ಇಷ್ಟವಾಗುವಂಥವುಗಳು.
ಶಿವಮೊಗ್ಗದ ವೈದ್ಯರೊಬ್ಬರು ಬರೆದಿರುವ ಪ್ರೆತಿಕ್ರಿಯೆ: 

 
UDAYAVANI 30/7/2025




ಸಿನೆಮಾ ತಂಡ ದವರಿಗೆ ಅಭಿನಂದನೆಗಳು....

Poste 30/7/2025









Tuesday, April 22, 2025

VEERA CHANDRAHASA - KANNADA MOVIE

 Monday, 21st April 2025

Mantri Malla, Malleshwara, Bengaluru




ಉದಯವಾಣಿ , 19/4/2025
ಯಕ್ಷಗಾನವನ್ನು ಬೆಳ್ಳಿ ತೆರೆಯ ಮೇಲೆ ನೋಡುವುದು ಬೇರೆಯೇ ಅನುಭವ. 
ಕೆಲವು ಸನ್ನಿವೇಶಗಳು ಅತಿಯಾಗಿ ತೋರಿಸಿ, ಸಿನೆಮಾ ವನ್ನು ನೀರಸವಾಗಿ ಮಾಡುತಿತ್ತು. 
ಹಾಸ್ಯ, ಯುದ್ಧದ ಸನ್ನಿವೇಷಗಳು , ಅಭಿನಯ, ಕುಣಿತ ರಂಗದ ಮೇಲೆ ನೋಡುವುದೇ ಚಂದ.



ಡಾ.ಜಗದೀಶ್ ಶೆಟ್ಟಿ , 
ಸಿದ್ದಾಪುರ. ಅವರ ವಿಮರ್ಶೆ.
ಚಂದ್ರಹಾಸನ ಕಥೆಯನ್ನು ಅದೆಷ್ಟೋ ಬಾರಿ ನಾವು ಕೇಳಿದ್ದೇವೆ, ಯಕ್ಷಗಾನದಲ್ಲಿ ಹಲವು ಬಾರಿ ನೋಡಿದ್ದೇವೆ. ಲಕ್ಷ್ಮೀಶ ಕವಿ ಬರೆದ ಜೈಮಿನಿ ಭಾರತದಿಂದ ಈ ಕಥೆಯನ್ನು ಹೊರತೆಗೆದು ಕುವೆಂಪುರವರು‌ ಒಂದು ಅದ್ಭುತವಾದ ನಾಟಕವನ್ನೂ ಬರೆದಿದ್ದಾರೆ.
ಹೀಗೆ ನಾಟಕವಾಗಿ ಕಂಡ, ಯಕ್ಷಗಾನ ರಂಗಭೂಮಿಯಲ್ಲಿ ಹಲವು ಶ್ರೇಷ್ಠ ಕಲಾವಿದರ ಪಾರಾಮ್ಯದಲ್ಲಿ ಮೆರೆದ ಈ ಕತೆ ಚಲನಚಿತ್ರವಾಗಿ ಹೇಗೆ ಮೂಡಿ ಬಂದೀತು ಎಂಬ ಕುತೂಹಲದೊಂದಿಗೇ ಕುಂದಾಪುರದ ಭಾರತ್ ಸಿನಿಮಾವನ್ನು ಹೊಕ್ಕವ ನಾನು.ಯಕ್ಷಗಾನವೇ ಆದರೇ ಆ ರಂಗಭೂಮಿಯಲ್ಲಿ ಒಂದು ಮಿತಿಯಿದೆ.ಭಾಗವತನ ಪೂರ್ಣ ಕಂಟ್ರೋಲ್ ಇದೆ. ಅವನೇ ನಿರ್ದೇಶಕ .ಪೌರಾಣಿಕ ನಾಟಕವಾದಲ್ಲಿ ಅದರದ್ದೇ ಆದ ವೇಷಭೂಷಣ , ಹಿನ್ನೆಲೆ ಸಂಗೀತ, ದೃಶ್ಯಗಳು ಸಾಗಿ ಹೋಗಲು ಒಂದು ರಂಗ ನಡೆಯಿದೆ. ಇದು ನಾಟಕವಲ್ಲವಂತೆ, ಯಕ್ಷಗಾನವಂತೆ ,ಅದೂ ಸಿನಿಮಾವಾಗಿ ಯಕ್ಷಗಾನವಂತೆ ಎಂದೆಲ್ಲಾ ಹೇಳುವಾಗ ಕುತೂಹಲ ಸ್ವಾಭಾವಿಕವಾಗಿಯೇ ಗರಿಗೆದರಿತ್ತು.
ಹಾಗೇ ಯೋಚನೆ ಮಾಡುತ್ತಾ ಚಿತ್ರ ವೀಕ್ಷಣೆಯಲ್ಲಿ ತೊಡಗಿಸಿಕೊಂಡೆ.
ಚಿತ್ರದ ಆರಂಭವೇ ಖುಷಿ ಕೊಟ್ಟಿತು.ಆಧುನಿಕ ತಂತ್ರಜ್ಞಾನವನ್ನು ಬಳಸಿ ಕುಂತಳ ಎಂಬ ರಾಜ್ಯ ವನ್ನು ತೋರಿಸಿದ ರೀತಿಯೇ ಅದ್ಭುತವಾಗಿ ಮೂಡಿ ಬಂದಿತು. ಚಿತ್ರದ ಪ್ರಾರಂಭದಲ್ಲಿಯೇ ಹೊಸತನ್ನು ನಿಮಗೆ ತೋರಿಸುತ್ತಿದ್ದೇವೆ ಎಂಬ ಸಂದೇಶವನ್ನು ನಿರ್ದೇಶಕರು ಆ ಮೂಲಕ ರವಾನಿಸುತ್ತಾರೆ.ನೇರ ಕಥೆಯನ್ನು ಪ್ರಾರಂಬಿಸದೇ, ಆಶ್ರಮದಲ್ಲಿ ಗುರುವೋರ್ವ ತನ್ನ ಶಿಷ್ಯರಿಗೆ ಪಾಠ ಮಾಡುತ್ತಾ ಚಂದ್ರಹಾಸನೆಂಬ ವೀರನ ಕಥೆಯನ್ನು ಗುರು ಶಿಷ್ಯರ ಸಂವಾದದ ಮೂಲಕ ಹೇಳಿಸಿಕೊಂಡು ಹೋಗುವ ಬಗೆ ಹಿತವೆನಿಸುತ್ತದೆ.
ಹೀಗೆ ಈ ಚಿತ್ರ ಮುಂದುವರಿಯುತ್ತಾ ಹೊಸ ಅನುಭವವನ್ನು ನೀಡುತ್ತಾ ಸಾಗುತ್ತದೆ.ಇಲ್ಲಿ ಹಳೆಯ ಸಂಪ್ರದಾಯದ ಜೊತೆಗೆ ಹೊಸತನವಿದೆ.ಇಲ್ಲಿ ಯಕ್ಷಗಾನದ ಆಹಾರ್ಯವಿದೆ (ವೇಷಭೂಷಣ).ಭಾಗವತರಿದ್ದಾರೆ, ಆದರೆ ನಿರ್ದೇಶಕ ರಾಗಿರುವುದಿಲ್ಲ, ಜೊತೆಗೆ ಚಿತ್ರದಲ್ಲಿ ಕಾಣಲಿಕ್ಕೂ ಸಿಗುವುದಿಲ್ಲ.ಆದರೇ ದೃಶ್ಯದಿಂದ ದೃಶ್ಯಗಳು ಸಾಗಿ ಹೋಗಲು ಇವರ ಪದ್ಯಗಳೇ ಬಳಕೆಯಾಗಿದೆ.
ಅಭಿನಯದ ಬಗ್ಗೆ ಹೇಳುವುದಿದ್ದರೆ ದುಷ್ಟ ಬುದ್ಧಿಯ ಪಾತ್ರಧಾರಿಯಾದ ಪ್ರಸನ್ನ ಶೆಟ್ಟಿಗಾರ್ ಅಗ್ರ ಪಂಕ್ತಿಯಲ್ಲಿ ನಿಲ್ಲುತ್ತಾರೆ.ಓರ್ವ ಖಳನಾಯಕ ಹೇಗಿರಬೇಕು ಎಂಬುದನ್ನು ಪ್ರಸನ್ನ ಶೆಟ್ಟಿಗಾರ್ ತನ್ನ ಗಂಭೀರವಾದ ಸ್ವರ, ಹಾವಭಾವ, ನಟನೆಯಿಂದ  ಚಿತ್ರ ಮುಗಿಸಿ ಹೊರಗೆ ಬಂದು ಬಳಿಕವೂ ಪ್ರೇಕ್ಷಕರ ಮನಸ್ಸಿನಲ್ಲಿ ಕೆಲಕಾಲ ಉಳಿದು ಬಿಡುತ್ತಾರೆ.
ಇನ್ನೂ ವೀರ ಸಿಂಹನ ಪಾತ್ರದಲ್ಲಿ ಕಾಣಿಸಿಕೊಂಡ ಹವ್ಯಾಸಿ ಯಕ್ಷಗಾನ ಕಲಾವಿದರಾದ ಸನ್ಮಿತ್ರ ನವೀನ್ ಶೆಟ್ಟಿ ಐರಬೈಲು ಅದ್ಭುತವಾಗಿ ನಟಿಸಿದ್ದಾರೆ. ಕೇವಲ ನಟಿಸಿದ್ದಲ್ಲ, ನಿಜಕ್ಕೂ ಅಬ್ಬರಿಸಿದ್ದಾರೆ. ಡೈಲಾಗ್ ಡೆಲಿವರಿಯಂತೂ ಟಾಪ್ ಕ್ಲಾಸ್. ಈ ಚಿತ್ರದ ಯಶಸ್ಸಿಗೆ ಇವರೂ ಕೂಡ ಕಾರಣೀಕರ್ತರು ಅಂತಾ ಹೇಳಬಹುದು.
ಇನ್ನೂ ಮದನನಾಗಿ ಉದಯ್ ಹೆಗಡೆ ಕಡಬಾಳ ತಮ್ಮ ಎಂದಿನ ಲವಲವಿಕೆಯಿಂದ ಗಮನ ಸೆಳೆಯುತ್ತಾರೆ. 
ವಿಷಯೆಯಾಗಿ ನಾಗಶ್ರೀಯವರು ಗಮನ ಸೆಳೆದಿದ್ದಾರೆ.ಕೀರ್ತಿ ಶೇಷ ಕಾಳಿಂಗ ನಾವುಡರ ಪದ್ಯಕ್ಕೆ ನೃತ್ಯ, ಮತ್ತು ತಮ್ಮ ಸಹಜ ಅಭಿನಯದಿಂದ ಪ್ರೇಕ್ಷಕರ ಮನ ಸೆಳೆಯುತ್ತಾರೆ.ಯಕ್ಷಗಾನವನ್ನು ಕಲಿತ ಮತ್ತು ಕಿರುತೆರೆಯ ನಟಿಯೂ ಆದ ಕಾರಣ ಚಲನಚಿತ್ರದ ಈ ಪಾತ್ರಕ್ಕೆ ಇವರೇ ಸೂಕ್ತ ಆಯ್ಕೆ ಎಂಬುದನ್ನು ತಮ್ಮ ಅಭಿನಯದಿಂದ ಶ್ರುತಪಡಿಸಿದ್ದಾರೆ.
ಇನ್ನೂ ಚಂದ್ರಹಾಸನ ಪಾತ್ರಧಾರಿಯಾದ ಶಿಥಿಲ್ ಇನ್ನೂ ಚೆಂದವಾಗಿ ಮಾಡುವ ಸಾಧ್ಯತೆಗಳು ಇತ್ತೂ ಎಂಬ ಸತ್ಯವನ್ನು ಒಪ್ಪಿಕೊಳ್ಳುತ್ತಾ,ಪ್ರಥಮ ಪ್ರಯತ್ನದಲ್ಲಿ ಗಮನ ಸೆಳೆಯುತ್ತಾರೆ. 
ಇನ್ನೂ ಹಾಸ್ಯಗಾರರಾದ ರವೀಂದ್ರ ದೇವಾಡಿಗ (ಬ್ರಾಹ್ಮಣ)ಮತ್ತು ಶ್ರೀಧರ್ ಕಾಸರಕೋಡು(ಕಪ್ಪ ದೂತ)  ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸುತ್ತಾರೆ.

ಇನ್ನೂ ಚಿತ್ರದ ಹೈಲೈಟ್ಸ್ ಪದ್ಯಗಳು. ಪದ್ಯಗಳು ಈ ಚಿತ್ರದ ಜೀವಾಳವೆಂದರೇ ತಪ್ಪಾಗಲಾರದು. 
ಪದ್ಯ ಸಾಹಿತ್ಯ ಒದಗಿಸಿದ ಯಕ್ಷಕವಿ ಪ್ರಸಾದ್ ಮೊಗೆಬೆಟ್ಟರು ಈ ಚಿತ್ರದಿಂದ ಮತ್ತಷ್ಟು ಎತ್ತರಕ್ಕೆ ಏರಲಿದ್ದಾರೆ.ಮೂಲ ಚಂದ್ರಹಾಸ ಚರಿತ್ರೆಯ ಪದ್ಯಗಳನ್ನು ಬಳಸಿಕೊಳ್ಳದೇ ದೃಶ್ಯಗಳು ಚಿತ್ರೀಕರಣವಾದ ಬಳಿಕ ಅದಕ್ಕೆ ಅನುಗುಣವಾಗಿ ಮೂಲ ಕಥೆಗೆ ಲೋಪವಾಗದಂತೆ, ಕಾಲಮಿತಿಯನ್ನು ಗಮನದಲ್ಲಿರಿಸಿಕೊಂಡು ಪದ್ಯಗಳನ್ನು ರಚಿಸುವುದು ನಿಜಕ್ಕೂ ಸವಾಲಿನ ಕೆಲಸವಾಗಿತ್ತು.ಅದರಲ್ಲಿ ಗೆದ್ದಿದ್ದಾರೆ ಪ್ರಸಾದ್ ಮೊಗೆಬೆಟ್ಟು.ಕತೆಯನ್ನು ಮುಂದುವರಿಸಿಕೊಂಡು ಹೋಗಲು ಬಳಸಲಾದ ಭಾಮಿನಿಗಳು, ಕೆಲವು ಕರುಣಾರಸದ ಪದ್ಯಳ ಸಾಹಿತ್ಯ ಬಹುಕಾಲ ನೆನಪಿನಲ್ಲಿ ಉಳಿಯುತ್ತದೆ.
ಹಾಗೇ ಪದ್ಯಗಳನ್ನು ಹಾಡಿದ ಭಾಗವತರಾದ ಪಟ್ಲ ಸತೀಶ ಶೆಟ್ಟಿ, ಜನ್ಸಾಲೆ ರಾಘವೇಂದ್ರ ಆಚಾರ್ಯ, ಚಿನ್ಮಯ ಕಲ್ಲಡ್ಕ, ಗಣೇಶ್ ಬಿಲ್ಲಾಡಿ, ಮೊಗೆಬೆಟ್ಟು ಎಲ್ಲರೂ ವಿಶಿಷ್ಟ ಮತ್ತು ವಿಭಿನ್ನ ರಾಗಗಳನ್ನು ಬಳಸಿ ಪದ್ಯ ಸಾಹಿತ್ಯಕ್ಕೆ ಹೊಸ ಮೆರುಗನ್ನು ನೀಡಿದ್ದಾರೆ. ಟೈಟಲ್ ಸಾಂಗ್ ಅಂತೂ ಬಹುಕಾಲ ನೆನಪಿನಲ್ಲಿ ಉಳಿಯುತ್ತದೆ. 
ಇನ್ನೊಂದು ಖುಷಿಯ ಸಂಗತಿಯೆಂದರೆ ಯಕ್ಷಗಾನ ಲೋಕದ ಧ್ರುವತಾರೆ ಕಾಳಿಂಗ ನಾವುಡರ ಒಂದು ಪದ್ಯವನ್ನು ಚಿತ್ರದಲ್ಲಿ ಅಳವಡಿಸಿಕೊಂಡ ಬಗೆ, ಮತ್ತು ಆ ಸನ್ನಿವೇಶ ಚಿತ್ರದ ಯಶಸ್ಸಿಗೆ ಕಾರಣವಾಗಬಹುದು.
ಯಕ್ಷಗಾನವನ್ನು ಚಲನಚಿತ್ರ  ಮಾಡುವುದು ತಪ್ಪೋ, ಸರಿಯೋ !!?  ಹಾಗಿರಬೇಕಿತ್ತು, ಹೀಗಿರಬೇಕಿತ್ತು ಎಂಬ ಪೂರ್ವಾಗ್ರಹಗಳನ್ನೆಲ್ಲಾ  ಬದಿಗಿರಿಸಿಕೊಂಡು ಈ ಚಲನಚಿತ್ರವನ್ನು ನೋಡಿ.ಒಂದು ವಿಶೇಷ ಅನುಭವವನ್ನು ಈ ಚಲನಚಿತ್ರ ನೀಡುತ್ತದೆ. ನೀವು ನೀಡಿದ ಹಣಕ್ಕೆ ಬೇಕಾಗುವಷ್ಟು ಮನರಂಜನೆಯನ್ನು ಈ ಚಿತ್ರ ಖಂಡಿತವಾಗಿಯೂ ನೀಡುತ್ತದೆ. ಹಾಗೇ ಯಕ್ಷಗಾನದ ಮೂಲ ಸತ್ವಕ್ಕೆ ದಕ್ಕೆ ತರುವ ಕೆಲಸವನ್ನು ಈ ಚಿತ್ರ ತಂಡ ಎಲ್ಲೂ ಮಾಡಿಲ್ಲ. ಚಲನಚಿತ್ರವಾದ ಕಾರಣ ಯುದ್ಧದ ಸನ್ನಿವೇಶಗಳಲ್ಲಿ ಒಂದಷ್ಟು ಗ್ರಾಫಿಕ್ಸ್ ಬಳಕೆ ಮಾಡಲಾಗಿದ್ದು, ರಂಗಸ್ಥಳದಲ್ಲಿರುವಾಗ ಕುದುರೆ ಏರಿ ಹೋಗುವ ಸನ್ನಿವೇಶದ ಕಲ್ಪನೆಯನ್ನು ನಾವು ಮಾಡಬೇಕು,ಇಲ್ಲಿ ಜೀವಂತ ಕುದುರೆಯನ್ನು ಏರಿ ಹೋಗುವ ಸನ್ನಿವೇಶಗಳಿವೆ.ಅದು ತಪ್ಪು ಅಂತ ಅನ್ನಿಸುವುದಿಲ್ಲ.
ಹೆಚ್ಚೇಕೆ ತಾನೋರ್ವ ಪ್ರಸಿದ್ಧ ಸಂಗೀತ ನಿರ್ದೇಶಕರಾಗಿದ್ದೂ ಕೊಂಡೂ ಈ ಚಲನಚಿತ್ರದಲ್ಲಿ ಹಿನ್ನೆಲೆ ಸಂಗೀತವಾಗಿ ಚೆಂಡೆ ಮತ್ತು ಮದ್ದಳೆಗಳನ್ನೇ ಬಹು ವಿಧವಾಗಿ  ಬಳಸಿಕೊಂಡು ಯಕ್ಷಗಾನದ ಪಾವಿತ್ರ್ಯತೆಯನ್ನು ಕಾಪಾಡಿದ್ದಾರೆ ರವಿ ಬಸ್ರೂರು.
ಯಾವುದೇ ಪ್ರಾಕಾರದ ಕಲಾವಿದನಾದರೂ ಬೆಳ್ಳಿತೆರೆಯಲ್ಲಿ ಒಮ್ಮೆ ಕಾಣಿಸಿಕೊಳ್ಳಬೇಕು ಎಂಬ ಹಂಬಲ ಆತನಿಗೆ ಇದ್ದೇ ಇರುತ್ತದೆ. ಅದನ್ನು ರವಿ ಬಸ್ರೂರು ಈ ಚಿತ್ರದ ಮೂಲಕ ಈಡೇರಿಸಿದ್ದಾರೆ.
 ಕೇವಲ ರಂಗಸ್ಥಳದಲ್ಲಿ ಮಾತ್ರ ಕಂಡ, ನಾವು ಪ್ರೀತಿಸುವ ನಮ್ಮದೇ ಮಣ್ಣಿನ ಈ ಯಕ್ಷಗಾನ ಕಲಾವಿದರುಗಳನ್ನು ಬೆಳ್ಳಿತೆರೆಯಲ್ಲಿ ಕಾಣುವಾಗ ನೀವೂ ಕೂಡ ಭಾವುಕರಾಗುತ್ತೀರಿ.
ಈ ಚಲನಚಿತ್ರದಿಂದ ಯಕ್ಷಗಾನ ತನ್ನ ಮೂಲ ಸತ್ವವನ್ನು ಕಳೆದುಕೊಳ್ಳುತ್ತದೆ, ಕಲಾವಿದರ ಭವಿಷ್ಯ ಹಾಳಾಗುತ್ತದೆ ಎಂದು ಅಲ್ಲಲ್ಲಿ ಅಪಸ್ವರಗಳು ಕೇಳಿ ಬರುತ್ತಿದೆ.ಖಂಡಿತಾ ಇಲ್ಲ. ಸಿನಿಮಾ ಆದಾಗ ನಾಟಕಗಳು ತಮ್ಮ ನೆಲೆ ಕಳೆದುಕೊಂಡವು,ನಾಟಕ ಕಲಾವಿದರ ಭವಿಷ್ಯ ಹಾಳಾಯಿತು ಎಂದು ಹೇಳಲಾಗಿತ್ತು. ಯತಾರ್ಥಕ್ಕೆ ನೋಡಿದರೆ ಅಂದಿನ ನಾಟಕದ ಕಲಾವಿದರೇ ಚಲನಚಿತ್ರದ ಹೆಸರಾಂತ ಕಲಾವಿದರುಗಳು. ಡಾ.ರಾಜಕುಮಾರ್ ರಿಂದ ತೊಡಗಿಸಿಕೊಂಡು ಇಂದಿನ ಹೊಸ ತಲೆಮಾರಿನ ಹೆಸರುವಾಸಿ ಕಲಾವಿದರೆಲ್ಲಾ ರಂಗಭೂಮಿಯ ಹಿನ್ನೆಲೆಯವರೇ. ನಾಟಕ ಅನ್ನ ನೀಡುತ್ತಿದ್ದರೇ, ಚಲನಚಿತ್ರಗಳು ಮೃಷ್ಟಾನ್ನವನ್ನೇ ಅವರಿಗೆ ನೀಡಿತು.ಆರ್ಥಿಕವಾಗಿ ಸದ್ರಢತೆಯನ್ನು ನೀಡಿದ್ದು ಇದೇ ಚಲನಚಿತ್ರರಂಗ.
ಕಲೆ ಉಳಿಯಬೇಕು ಅಂತಾದರೆ ಕಲಾವಿದ ಉಳಿಯಬೇಕು, ಅವನು ಆರ್ಥಿಕವಾಗಿ ಸಶಕ್ತನಾಗಿ ಉಳಿಯುವಂತಾದರೇ ಮಾತ್ರ ಈ ಕಲೆಯಲ್ಲಿ ತನ್ನನ್ನು ತೊಡಗಿಸಿಕೊಳ್ಳುತ್ತಾನೆ.
ಇಲ್ಲದಿದ್ದರೇ ಮಾಡಲು ಹಲವು ಉದ್ಯೋಗಗಳಿವೆ.ಇದೇ ಬೇಕೆಂದೇನೂ ಇಲ್ಲ. 
ಈ ಚಲನಚಿತ್ರದಲ್ಲಿ ಭಾಗವಹಿಸಿದ ಕಲಾವಿದರೂ ಕೂಡಾ ಅತೀ ದೊಡ್ಡ ಸಂಭಾವನೆ ಪಡೆದಿದ್ದಾರೆ ಎಂಬ ಮಾಹಿತಿಯಿದೆ. ಈ ಚಲನಚಿತ್ರದ ಪ್ರಸಾಧನ ಕೆಲಸದಲ್ಲಿ ತೊಡಗಿಸಿಕೊಂಡವರು ಕೂಡ ಯಕ್ಷಗಾನ ಕ್ಷೇತ್ರದವರೇ ಎಂಬ ವರ್ತಮಾನವಿದೆ. ಇದಲ್ಲವೇ ಧನಾತ್ಮಕ ಬೆಳವಣಿಗೆ.ತಮ್ಮ ಮೂಲ ರಂಗಸ್ಥಳದ ಕಾಯಕದೊಂದಿಗೆ ವರ್ಷಕ್ಕೆ ಒಂದೋ ಎರಡೋ ಇಂತಹ ಚಲನಚಿತ್ರಗಳ ಆಫರ್ ಗಳು ದೊರೆತರೇ ಆತನ ಆದಾಯಕ್ಕೂ ಒಂದು ಹೊಸ ಮೂಲ ದೊರೆತ ಹಾಗೆ, ಜೊತೆ ಜೊತೆಗೆ ಕೇವಲ ಒಂದೆರಡು ಜಿಲ್ಲೆಗೆ ಸೀಮಿತವಾದ ತನ್ನ ಪ್ರತಿಭೆ ಇನ್ನಿತರ ಕಡೆಯಲ್ಲಿ ಅನಾವರಣವಾಗುವುದು ಮತ್ತು ತಾನು ಮತ್ತಷ್ಟು ಬೆಳೆಯುವುದು ಇದು ಆ ಕಲಾವಿದನ ಪಾಲಿಗೆ ಹೆಗ್ಗಳಿಕೆಯಲ್ಲವೇ?
ಕಲೆ ನಿಂತ ನೀರಲ್ಲ..ಹರಿವ ತೊರೆ.ನೀರು ಹರಿಯುವುದನ್ನು ತೊರೆದು ನಿಂತ ಉದಾಹರಣೆಯಿಲ್ಲ. ಅಂತೆಯೇ ಕಲೆ ಕೂಡ. ತನ್ನ ಮೂಲ ಸತ್ವವನ್ನು ಉಳಿಸಿಕೊಂಡು ಕಾಲ ಕಾಲಕ್ಕೆ ತಾನೇ ಪರಿಷ್ಕರಣೆಗೊಳ್ಳುತ್ತಾ ಕಲೆ ಬೆಳೆಯುತ್ತದೆ ಎಂಬ ಸತ್ಯವನ್ನು ಒಪ್ಪಿಕೊಳ್ಳುತ್ತಾ..   ಒಂದು ವಿಶಿಷ್ಟ ಮತ್ತು ವಿನೂತನವಾದ ಸಾಹಸಕ್ಕೆ ಕೈ ಹಾಕಿರುವ ರವಿ ಬಸ್ರೂರು ಮತ್ತವರ ತಂಡಕ್ಕೆ  ಶುಭ ಹಾರೈಸುತ್ತಾ, ಅವರ ಮೊದಲ ಪ್ರಯತ್ನದಲ್ಲಿ ಏನಾದರೂ ಅಲ್ಪಸ್ವಲ್ಪ ಅವರು ಎಡವಿದ್ದರೂ ಅದನ್ನು ನಮ್ಮವರು ಎಂಬ ಭಾವದಿಂದ ಸ್ವೀಕರಿಸುವ ಮನಸ್ಸು ಮಾಡುವಾ.
ಚಿತ್ರವನ್ನು ಬೆಳ್ಳಿತೆರೆಯಲ್ಲಿ ಒಮ್ಮೆ ನೋಡಿ.
ನೋಡಿದ ಬಳಿಕ ನೀವೂ ಅನ್ನುತ್ತೀರಿ..
ಮೊದಲ ಪ್ರಯತ್ನದಲ್ಲಿ ರವಿ ಬಸ್ರೂರು ಮತ್ತವರ ತಂಡ ಗೆದ್ದಿದೆ ಎಂದು.

Posted 22/4/2025





Saturday, March 8, 2025

MITHYA (ಮಿಥ್ಯಾ) - KANNADA MOVIE

Saturday, 8th March 2025

INOX, Mantri Mall, Malleshwara, Bengaluru. 

MITHYA - KANNADA MOVIE

ಇಂದು ಸುಮಂತ್ ಭಟ್ ನಿರ್ದೇಶನದ "ಮಿಥ್ಯ" ಕನ್ನಡ ಸಿನೆಮಾವನ್ನು ನೋಡಲು ಮಲ್ಲೇಶ್ವರದ ಮಂತ್ರಿ ಮಾಲ್ ನ ಐನೊಕ್ಷ್ ಥಿಯೇಟರ್ ಗೆ ಹೋಗಿದ್ದೆವು.



ಸಿನೆಮ ಆದ ನಂತರ ಸ್ವಲ್ಪ ಸಮಯ ನಿರ್ದೇಶಕ, ಸುಮಂತ್ ಭಟ್  ಅವರೊಂದಿಗೆ ಸಂವಾದವೂ ಇತ್ತು. ಅದೂ ಅವರ ಸಿನೆಮಾದ ಪ್ರೊಮೋಷನ್ ಗೆ ಆಗಿತ್ತು. 


ಮಿಥ್ಯಾ- ಒಂದು ಭಾವನಾತ್ಮಕವಾದ ಕಥೆಯ ಸಿನೆಮ. ಮಿಥುನ್ (ಮಿಥ್ಯಾ) , 11 ವರ್ಷದ ಬಾಲಕ ಮುಂಬೈ ಯಲ್ಲಿ ತಂದೆ ತಾಯಿಯನ್ನು ಕಳೆದುಕೊಂಡು ಊರಿಗೆ ಬರುತ್ತಾನೆ. ಅಲ್ಲಿ ಚಿಕ್ಕಮ್ಮ, ಅವರ ಕುಟುಂಬದೊಡನೆ ಅವನ ವಾಸ, ಜೀವನ. ಆವರು ಅವನನ್ನು ತುಂಬಾ ಚೆನ್ನಾಗಿ ನೋಡಿಕೊಂಡರೂ ಮಿಥ್ಯಾಗೆ ನಿಗೆ ತಂದೆ ತಾಯಿಯ ನೆನಪು ನಿರಂತರವಾಗಿ ಕಾಡುತ್ತಿರುತ್ತದೆ.

ಚಿಕ್ಕಮ್ಮ ನಿಗೆ ಎರಡು ಹೆಣ್ಣು ಮಕ್ಕಳು, ಗಂಡ ಓಟೋ ರಿಕ್ಷಾ ಚಾಲಕ, ಮದ್ಯಮ ವರ್ಗದ ಪರಿವಾರ, ಅವರಿಗೆ ಗಂಡು ಮಗ ಇಲ್ಲ ಎನ್ನುವ ಚಿಂತೆ, ಮಿಥ್ಯಾ ನನ್ನು ತಮ್ಮ ಮಗನ ಹಾಗೆ ನೋಡಿಕೊಂಡರೂ, ಮನಸಿನ ತುಮುಲ.


ಉಡುಪಿ ಆಸುಪಾಸಿನಲ್ಲಿ ನಡೆದ ಚಿತ್ರೀಕರಣ, ಅತ್ಯಂತ ಸೊಗಸಾಗಿ ಮೂಡಿಬಂದಿದೆ. ಮಿಥ್ಯಾನ ಭಾವನೆಗಳನ್ನು ತೋರಿಸುವುದರಲ್ಲಿ ಪ್ರಥಮದಲ್ಲಿ ನಿಧಾನಿಸಿದರೂ , ನಂತರ ಆಂತರಿಕವಾಗಿ ಸಿನೆಮಾವು ಮನಸ್ಸನ್ನು ಮುಟ್ಟುತ್ತದೆ..




ನೂರು ನಿಮಿಷಗಳ ಕಾಲದ ಸಿನೆಮಾವು ಸಿನೆಮಟೋ ಗ್ರಫಿ, ಸಂಗೀತ, ಅಭಿನಯ ಎಲ್ಲವೂ ಚೆನ್ನಾಗಿದೆ.


ಶುಭ ಹಾರೈಕೆಗಳು.....

Posted 9/3/2025



Friday, July 26, 2024

IRUGAPATRU - TAMIL MOVIE

 Thursday, 25th July 2024

NETFLIX  (OTT)


We rarely watch movies, that at home.

This Tamil Language Movie 'IRUGAPATRU" (Holding Tight) caught our attention and decided to watch in Kannada. 

It's good movie, specially for married couples (Husband & Wife), to overcome relationship issues, and to live happily,  understanding each other.


The movie revolves around three married couples, each having some issue in their relationship.

Mitra-Manohar, Divya - Arjun, Pavitra - Rangesh are the three married couples.

Mitra is marriage counsellor, Divya is Software and Rangesh also a Techie.

Communicate, Co-operate, Connection and Compramise are the key factors is what the movie talks about.


Moral of the Movie....When our partners action do not meet our expectation, hold for a while, look within before reacting.

The film stars Vikram Prabhu, Shraddha Srinath, Vidharth, Sri, Abarnathi, and Saniya Iyappan. It was released theatrically on 6 October 2023. It received highly positive reviews from critics and became a box office success.

It's romantic, Drama Film, Written and  directed by Yuvaraj Dhayalan.


Posted 26/7/2024


Wednesday, April 3, 2024

VEER DAMODAR SAVARKAR - MOVIE

Wednesday, 3rd April 2024

Galleria Mall, Yalahanka, Bengaluru.

 VEER DAMODAR SAVARKAR - HINDI MOVIE 



That was a great movie, well directed , well acted by Randeep Hooda as Savarkar.

VEER DAMODAR SAVARKAR (28/5/1883 - 26/2/1966)

Th man, revolutionary, who did not believe in Non-violence for India's Freedom from British, had strong belief in"Akhand Bharath"

His argument/conversation/Interaction with notable fredom fighters  M K Gandhi, Jawaharlal Nehru, Subhaschndra Bose, Gopalakrishna Gokhale,  Chandrashekhar Azad,  Balagangadhar Tilak, and more, were beautifully picturized.


It's 3 hour movie, full of suspense, second half with Savarkar in Kalapaani Jail, so much torture and suffering.

Later, when he was released, back in India, organizing freedom struggle.

Worth watching the movie, which arouses Desha Bhakthi and Hidutva awareness.

Posted 3/4/2024



Thursday, February 29, 2024

ARTICLE 370 - HINDI MOVIE

 Thursday, 29th February 2024

GalleriaMall, Yalahanka, Bengaluru.

The real story behind the abrogation of Kashmir's Artcile 370, whixh was given special powers to Kashmir's Chief Ministers and the Government.


The situation was beautifully picturized in the Movie, and it is gripping from the beginning to the end.


Terrorism, stone pelting, Phulwama's blast of sodiers bus, and the gripping situation of Prime Minister's office and the Home Minister's presentation in the parliament are all nicely presented.



All credit goes to PMO's team and Home Minister's effort.


It was Prime Minister Narendra Modi's one of the biggest accomplishment. Now Kashnir is peaceful, economy is improving and achieving past glory.


It was a good movie.

Posted 1/3/2024



Tuesday, February 27, 2024

SHAKHAHAARI - KANNADA MOVIE

 Tuesday, 27th February 2024

Orion Mall, Rajajinagara, Bengaluru


It was unfortunate that we went to watch this movie, daring the traffic in Bengaluru in the morning of Tuesday to Orion Mall.

It was horror movie, killing, blood spilling, cutting the body part,s burning and the police have no clue.

Finally police officer becomes the victim of killing.

It was just  a waste of time.


I wonder why such movies are made, and people watch also...(Like us)


However, one song is pleasing, which has no relevence.


Posted 28/2/2024


Wednesday, December 13, 2023

MAST MEIN RAHNE KA - MOVIE

 December 11, 2023

SHOBHA ARTICLE - MOVIE REVIEW



ಇವತ್ತು ನಾನು ಅಮೆಜಾನ್ ಪ್ರೈಮ್ ನಲ್ಲಿ‘ಮಸ್ತ್ ಮೇ ರೆಹ್ನೆ ಕಾ’ ಎಂಬ ಎರಡು ಗಂಟೆಯ ಅವಧಿಯ ಸಿನೆಮಾ ನೋಡಿದೆ. ಅದು ಕೇವಲ ಒಂದು ಸಿನೆಮಾ ಎಂದು ನನಗೆ ಅನಿಸಲಿಲ್ಲ. ನಾನು ನೋಡಿದ, ನೋಡುತ್ತಿರುವ, ಕೇಳಿದ ಬದುಕೇ ತೆರೆಯ ಮೇಲೆ ಮೂಡಿ ಬಂದಿರುವ ಹಾಗೆ ಕಂಡಿತು.
ನಾನು ಪುಟ್ಟ ಹಳ್ಳಿಯಲ್ಲಿ ನನ್ನದೇ ಆದ ಜನ ಹಾಗೂ ನನ್ನ ಕುಟುಂಬದ ಜೊತೆಗೆ ಇರುವವಳು. ‘ನಾನು ಒಂಟಿ’ ಎಂದು ಅನುಭವ ಬಾರದ ವಾತಾವರಣದಲ್ಲಿದ್ದೇನೆ. ಜನರೊಡನಾಟ ನನ್ನ ಜೀವನಾಡಿ ಎಂದರೂ ತಪ್ಪಿಲ್ಲ. ಆದರೆ ನನ್ನಂತಹ ಎಷ್ಟು ಜನ ನಡುವಯಸ್ಸಿನವರಿಗೆ ಇಂತಹ ಬದುಕು ಸಿಗಲು ಸಾಧ್ಯ? ಅದೂ ದೊಡ್ಡ ಪಟ್ಟಣದಲ್ಲಿ (ಈಗೀಗ ಹಳ್ಳಿಯಲ್ಲೂ) ಇರುವ ವಯಸ್ಸಾದ/ನಡು ವಯಸ್ಸಿನ ಎಷ್ಟೋ ಒಂಟಿ ಜೀವಗಳ ಒಳಗಿನ ತವಕ ತಲ್ಲಣಗಳನ್ನು ಅರಿಯುವವರಾರು? ಅವರ ಒಂಟಿತನದ ನೋವನ್ನು ಕಾಣುವವರಾರು? ಅವರ ಏಕತಾನತೆಯ ಬದುಕಿನ ಖಾಲಿತನವನ್ನು ಅರಿಯುವವರಾರು? ಅಂತಹವರ ಬದುಕಿನ ಒಳನೋಟವನ್ನು ಕೊಡುವ ಪ್ರಯತ್ನವನ್ನು ನಿರ್ದೇಶಕ ವಿಜಯ್ ಮೌರ್ಯ ಅವರು ಈ ಸಿನೆಮಾದಲ್ಲಿ ಮಾಡಿದ್ದಾರೆ. ಹಾಗೆಯೇ ಹಳ್ಳಿಯಿಂದ ಬದುಕನ್ನು ಕಟ್ಟಿಕೊಳ್ಳಲು ದೊಡ್ಡ ನಗರಕ್ಕೆ ಬಂದ ಅಮಾಯಕನ ಬದುಕಿನ ಹೋರಾಟವನ್ನೂ ಚಿತ್ರಿಸಿದ್ದಾರೆ. 
ಜಾಕಿ ಶ್ರಾಫ್, ನೀನಾ ಗುಪ್ತಾರಂತಹ ಪ್ರಬುದ್ಧ ನಟರೊಡನೆ ಅಭಿಷೇಕ್ ಚೌಹಾಣ್ ಹಾಗೂ ಮೋನಿಕಾ ಪನ್ವಾರ್ ರಂತಹ ಹೊಸ ಪ್ರತಿಭೆಗಳು ಹಿರಿಯರ ಸಮಕ್ಕೆ ಸಮನಾಗಿ ಪಾತ್ರದೊಳಗೆ ಒಂದಾಗಿ ಅಭಿನಯಿಸಿರುವುದು ಈ ಸಿನೆಮಾದ ಪ್ಲಸ್ ಪಾಯಿಂಟ್! ಇಡೀ ಸಿನೆಮಾವನ್ನು ಸಣ್ಣ ಹಾಸ್ಯ, ಅನುಕಂಪ, ದುಃಖದ ಭಾವಗಳ ಮಿಳಿತದೊಂದಿಗೆ ನೇಯಲಾಗಿದೆ. ಎಲ್ಲೂ ಕೂಡಾ ಅನಗತ್ಯವಾಗಿ ಕಥೆಯನ್ನು ಎಳೆಯದೆ, ಯಾವುದೋ ಒಂದು ಭಾವವನ್ನು ವೈಭವೀಕರಿಸದೆ ಸರಳ ನಿರೂಪಣೆಯ ಮೂಲಕ ಸಹಜವಾಗಿ ಚಿತ್ರಿಸಿರುವುದು ಈ ಸಿನೆಮಾ ನಮ್ಮೆಲ್ಲರೊಳಗೆ ಸ್ಪಂದನೆಯನ್ನು ಮೂಡಿಸುವುದರಲ್ಲಿ ಯಶಸ್ವಿಯಾಗಲು ಕಾರಣವಾಗಿದೆ. ಹಾಗೆಯೇ ಪ್ರತಿ ಪಾತ್ರದ ಚಿತ್ರಣವೂ ಒಂದು ನಿರ್ದಿಷ್ಟ ಚೌಕಟ್ಟಿನೊಳಗಿರುವುದು ಕಲಾವಿದರಿಗೆ ಪಾತ್ರಕ್ಕೆ ಜೀವ ತುಂಬಲು ಸಹಾಯಕವಾಗಿದೆ. ಇಡೀ ಸಿನೆಮಾ ನಮ್ಮ ನಮ್ಮ ಬದುಕಿಗೆ ರಿಲೇಟೆಬಲ್ ಎಂದೆಲ್ಲೋ ಅನಿಸುತ್ತದೆ. ಪ್ರಪಂಚದಲ್ಲಿ ಇನ್ನೂ ಅಲ್ಲಲ್ಲಿ ಒಳ್ಳೆಯತನ ಉಳಿದಿರುವುದನ್ನು ಈ ಸಿನೆಮಾ ತೋರಿಸುತ್ತದೆ; ವ್ಯವಹಾರಕ್ಕೂ ಮೀರಿದ ಭಾವ-ಬಂಧವನ್ನು ನಮ್ಮ ಮುಂದೆ ಬಿಚ್ಚಿಡುತ್ತದೆ.
ಎಲ್ಲೂ ಅಭಿನಯಾತಿರೇಕವಿಲ್ಲದೆ ಸಹಜಾಭಿನಯ ನೀಡುವುದರ ಮೂಲಕ ಪ್ರತಿಯೊಬ್ಬ ಕಲಾವಿದರು ಗೆಲ್ಲುತ್ತಾರೆ. ಎಲ್ಲರೂ ನೋಡಲೇಬೇಕಾದ ಉತ್ತಮ ಸಿನೆಮಾವಿದು ಎಂದು ನನ್ನ ಅಭಿಪ್ರಾಯ

Posted 14/12/2023

Thursday, August 10, 2023

ಕೌಸಲ್ಯಾ ಸುಪ್ರಜಾ ರಾಮ - ಕನ್ನಡ ಸಿನೆಮಾ

 ಗುರುವಾರ, 10 ಅಗಸ್ಟ್ 2023 

ಗೆಲೆರಿಯಾ ಮಾಲ್, ಯಲಹಂಕ,

ಕೌಸಲ್ಯಾ ಸುಪ್ರಜಾ ರಾಮ - ಕನ್ನಡ ಸಿನೆಮಾ 

ಅದೊಂದು ದೊಡ್ಡ ಆದರ್ಶ ಇತ್ತು ಕೊಂಡು ಮಾಡಿರುವ ಸಿನೆಮ.

ತಾಯಿಯ ಮಮತೆ, ಅಪ್ಪನ ದಬ್ಬಾಳಿಕೆ, ತಾನು ಗಂಡಸು ಎನ್ನುವ  ಸ್ವಪ್ರತಿಷ್ಠೆ , ತಾನು ಇಷ್ಟ ಪಟ್ಟ ಹುಡುಗಿಯ ತಿರಸ್ಕಾರ, ನಂತರ ತನಗೆ ಮದುವೆಯಾಗಲು ಸಿಕ್ಕಿದ ಹುಡುಗಿ, ಅವಳನ್ನು ಸರಿ ದಾರಿಗೆ ತರಲು ಹುಡುಗನ ಪ್ರಯತ್ನ.....











ಉದಯವಾಣಿ 29/7/2023 


ಕೆಲವು ಅತಿರೇಕದ ದ್ರಶ್ಯಗಳು.......
ಪಬ್, ಬಾರ್ ನಲ್ಲಿಯ ನ್ರತ್ಯ, ಕುಣಿತ, ಅಭಿನಯ.....
ಮ್ರತ ದೇಹದ ಚಿತ್ರಣ, ತಾಯಿ ತೀರಿದಾಗ ಅಂತ್ಯ ಸಂಸ್ಕಾರದ ಸನ್ನಿವೇಶ, ಕಾಶ್ಮೀರ ದಲ್ಲಿ ಪ್ರೇಮ ಗೀತೆ, ದ್ರಶ್ಯಗಳು ನೋಡಲು ಅಸಹ್ಯ ಎನಿಸುತ್ತದೆ.


ಅಂತಹಾ ಒಂದು ಹೇಳಿಕೊಳ್ಳುವಷ್ಟು ಚಂದದ ಸಿನೆಮಾ ಅಲ್ಲ.

ಬರೆದಿರುವುದು 11/8/2023