Showing posts with label PRAKASH HEGDE ARTICLES. Show all posts
Showing posts with label PRAKASH HEGDE ARTICLES. Show all posts

Tuesday, April 23, 2024

ಮೋದಿ ಮತ್ತೊಮ್ಮೆ - 3

ಏಪ್ರಿಲ್ 1, 2024

ಪ್ರಕಾಶ್ ಹೆಗ್ಡೆ ಲೇಖನ 


ಸ್ನೇಹಿತ ಸಿಕ್ಕಿದ್ದ...

ಅವ ಎಡಬಿಡಂಗಿ ಎಡಚರರ ಪ್ರಭಾವಿತ...ಎದುರಿಗೆ ಸೆಂಟ್ರಿಸ್ಟ್...!"ನಾನು ಯಾವುದೇ ಪಕ್ಷದವ ಅಲ್ಲ....
ಮಾನವ ಧರ್ಮದವ...ನಾನು "ಮಧ್ಯ" ಸಿದ್ಧಾಂತವನ್ನು ಪ್ರತಿಪಾದಿಸುತ್ತೆನೆ "...ಎನ್ನುತ್ತಾ
ಮೋದಿಯನ್ನುಮೋದಿ ಸರಕಾರವನ್ನು ಬೈಯ್ಯುವ ಅವಕಾಶ ಸಿಕ್ಕಾಗ ತಪ್ಪದೆ ಬೈಯ್ಯುವವನು...!
" ಪ್ರಕಾಶಣ್ಣ...ನಂದು ಈ ಬಾರಿ "ನೋಟಾ ವೋಟ್.."..ಮೋದಿಯವರ ಮುಖ ನೋಡಿ ಇಷ್ಟವಿಲ್ಲದ
ಅಭ್ಯರ್ಥಿಗೆ ವೋಟ್ ಹಾಕಲಾರೆ...."..ಎನ್ನುತ್ತಾ ನನ್ನ ಮುಖ ನೋಡಿದ...
" ಪ್ರಕಾಶಣ್ಣ...ಒಳ್ಳೆಯ ಡಾಕ್ಟರ್ ಅಂತ ಡಾಕ್ಟರ್ ನ ಕಾಂಪೌಂಡ್ ರ್ ಹತ್ತಿರ
ಔಷಧ ತೆಗೆದು ಕೊಳ್ಳುವದು ಮೂರ್ಖತನ... ಅಲ್ವಾ?....ನಿನ್ನ ಎಂಪಿ ನಿಷ್ಕ್ರಿಯ.... ಈಗ ಚುನಾವಣೆಗೆ ನಿಂತವನೂ ಕೆಲಸ ಮಾಡುವದಿಲ್ಲ...ನೀನೂ ಸಹ ನೋಟಾ ಹಾಕುವದು ಒಳ್ಳೆಯದು...."
ನನಗೆ ನಗು ಬಂತು...." ನೋಡು ಡಾಕ್ಟರ್ ಒಳ್ಳೆಯವ....ಆರೋಗ್ಯದ ಪ್ರಶ್ನೆ ಬಂದಾಗ ಔಷಧ ಅತ್ಯಗತ್ಯ....
ಡಾಕ್ಟರ್ ಸಿಗಲಿಲ್ಲಅಂತ... ಕೊಳೆ ಅಡಿಕೆ ಸಾಬನ ಹತ್ತಿರವೋ...ಅಥವಾ ಹಳೆ ಗುಜರಿ ಅಂಗಡಿಗೆ ಹೋಗಿ ...
ಅವನು ಹೇಳಿದ ಔಷಧ ತೆಗೆದುಕೊಳ್ಳುವುದು ಮೂರ್ಖತನದ ಪರಮಾವಧಿ ಅಲ್ವಾ..?...ಕೊನೆ ಪಕ್ಷ
ಕಂಪೌಂಡರ್ ಗೆ ಔಷಧದ ಮಾಹಿತಿ ಇದ್ದಿರುತ್ತದೆ...ಅಥವಾ ಡಾಕ್ಟರನ್ನು ಸಂಪರ್ಕಿಸಿ ಔಷಧವನ್ನು ತೆಗೆದುಕೊಳ್ಳಬಹುದು...
ಮೋದಿ
ದೇಶಭಕ್ತ, ಪ್ರಾಮಾಣಿಕ...ಈ ಬಾರಿ ಅವನೇ ಪೂರ್ತಿಯಾಗಿ ಜವಾಬ್ದಾರಿ ತೆಗೆದುಕೊಂಡು ಪ್ರಚಾರ ಮಾಡುತ್ತಿದ್ದಾನೆ...ಅವನನ್ನು ಕಣ್ ಮುಚ್ಚಿ ನಂಬಬಹುದು...ಅವನಿಗೇನು ಕುಟುಂಬವೇ?ಹೆಂಡತಿಯೇ...
ಮಕ್ಕಳು ಮೊಮ್ಮಕ್ಕಳೆ!! ಆಸ್ತಿಯನ್ನುಚಿನಾದೇಶಕ್ಕೊಇಟಲಿ ದೇಶಕ್ಕೋ ತೆಗೆದುಕೊಂಡು ಹೋಗುತ್ತಾನೆ ಎನ್ನುವ ಅಗತ್ಯವೂ ಇಲ್ಲ..ವಂಶವಾದದ ಜಾತ್ಯಾತೀತ ಹೆಸರಿನಲ್ಲಿ ವೋಟ್ ಕೆಳುವವರಿಗಿಂತ ಇಂವ ಬೆಸ್ಟ್..."
ಗೆಳೆಯ ಮಾತಾಡಲಿಲ್ಲ..ಅವನ ಹೆಗಲ ಮೇಲೆ ಕೈ ಹಾಕಿದೆ..." ಇನ್ನೂ ಅರ್ಥ ಮಾಡಿಸುತ್ತೇನೆ ಕೇಳು...
ನಮಗೆ ಹಸಿವೆ ಆಗಿದೆ...ಹೋಟೆಲ್ಲಿಗೆ ಹೋಗುತ್ತೇವೆ ಅಂತ ಇಟ್ಟುಕೊಳ್ಳೋಣ....ಅಲ್ಲಿರುವುದು ಒಂದೇ ಹೋಟೆಲ್
ಮೂರು ಐಟಮ್ ಇರುತ್ತದೆ...ದೋಸೆ...ಇಡ್ಲಿ ...ವಡಾ ....ಆದರೆ ಯಾವುದೂ ಸಹ ಚೆನ್ನಾಗಿ ಇದ್ದಿರುವದಿಲ್ಲ...
ಹಸಿವೆಯ ಅಗತ್ಯ ಆಹಾರ....ಅಲ್ಲಿ ಇದ್ದುದರಲ್ಲಿ ಬೆಸ್ಟ್ ಯಾವುದೋ ಅದನ್ನು ತಿಂದು ಬರುತ್ತೇವೆ ಅಲ್ವಾ?..
ಅಥವಾ...ಇವತ್ತು ಚೆನ್ನಾಗಿಲ್ಲ..ನಾಳೆ ಚೆನ್ನಾಗಿರುವ ತಿಂಡಿ ಮಾಡಬಹುದು ಅಂತ... ಇರ್ತೀಯಾ..?
" ನೋಟಾ " ಅಂತ ಉಪವಾಸ ಇರ್ತಿಯಾ...?..."ಗೆಳೆಯನ ಬಳಿ ಉತ್ತರ ಇರಲಿಲ್ಲ....::::::: :::::::
ಚುನಾವಣೆ ಹತ್ತಿರ ಬರ್ತಾ ಇದೆ...ತಲೆ ಕೆಡಿಸಿಕೊಳ್ಳಬೇಡಿ....ನಮ್ಮ ಕೃಷ್ಣ ನಂಬಿಕೆಯೇ ನಮಗೆ ಮುಖ್ಯ...
ನಮ್ಮದೇಶ, ಧರ್ಮ, ಸಂಸ್ಕೃತಿ ನಮ್ಮ ಬದುಕು....ಇವುಗಳಿಗಾಗಿ " ಬದುಕುವ " ನಾಯಕ ಯಾರು ...?
ಅಂತ ನೋಡಿಕೊಂಡು ...ನಮ್ಮ ನಂತರವೂ ದೇಶ ಧರ್ಮ , ಸಂಸ್ಕೃತಿ ಇರಬೇಕು..ನಮ್ಮಮಕ್ಕಳು,
ಮೊಮ್ಮಕ್ಕಳ ಭವಿಷ್ಯವನ್ನು ನೆನಪಿಸಿಕೊಂಡು ಮೋದಿಯವರಿಗೆ ಮತ ಹಾಕೋಣ ...
🙏
ಜೈ ಭಜರಂಗಬಲಿ....
ಹರ ಹರ ಮಹಾದೇವ....

Monday, April 8, 2024

ಮೋದಿ ಮತ್ತೊಮ್ಮೆ -2

 2014ರಲ್ಲಿ.....


" ಬೀಜೇಪಿ
ಅಧಿಕಾರಕ್ಕೆ ಬಂದಮೇಲೆ ಮುಸ್ಲಿಮರ ಬದುಕು ದುಸ್ತರವಾಗಿದೆ.. ಅಲ್ಪಸಂಖ್ಯಾತರು ಭಯದಿಂದ ಜೀವಿಸುತ್ತಿದ್ದಾರೆ.... !ಭಾರತದಲ್ಲಿ ಅಸಹಿಷ್ಣುತೆ ಜಾಸ್ತಿಯಾಗಿದೆ....."...
ಹೀಗೆ ಗುಲ್ಲೆಬ್ಬಿಸಿ ಒಂದಷ್ಟು ಬುದ್ಧಿ ಜೀವಿಗಳು ...ತಮಗೆ ಸಿಕ್ಕ ಪ್ರಶಸ್ತಿಗಳನ್ನು ವಾಪಸ್ಸು ಮಾಡುವ ಅಭಿಯಾನ
ಶುರು ಮಾಡಿದರು...!ಸಾಹಿತ್ಯದ ಪ್ರಾಮಾಣಿಕ ಓದುಗರಿಗೆ..
" ಇದು ಹೌದಾ !!..."....ಎಂದು ಹುಬ್ಬೇರಿಸುವಷ್ಟು ಆಶ್ಚರ್ಯವಾಯಿತು....!
ಒಬ್ಬ ಸ್ಟಾರ್ ನಟನಂತೂ..."ತನ್ನ ಮಡದಿ ಭಾರತದಲ್ಲಿ ಬದುಕುವದಕ್ಕೆ ಹೆದರಿಕೆ "..ಅಂತ ಹೇಳಿದಳು..
ಅಂತ ಬೊಬ್ಬೆ ಹೊಡೆದ..ಬುದ್ಧೀ ಜೀವಿಗಳ ಸುದ್ಧಿ ಚಾನೆಲ್ಲುಗಳು ತಿಂಗಳು ಗಟ್ಟಲೆ ಅವನ ಸಂದರ್ಶನ ಪ್ರಸಾರ ಮಾಡಿದವು...
******************************************************
ಗೌರಿ ಲಂಕೇಶ ಹತ್ಯೆಯ ನೆನಪನ್ನು ಈಗ ಯಾವುದಾದರೂ ಬುದ್ದಿಜೀವಿ ಸಾಹಿತಿಗಳು ನೆನಪು ಮಾಡಿಕೊಳ್ಳುತ್ತಾರಾ ?..ಖಂಡಿತ ಇಲ್ಲ..ಯಾಕೆ ಗೊತ್ತಾ ?..ತಾವು ತಿನ್ನುವ ಎಂಜಲು ಪ್ರಸಾದದ ಋಣ ತೀರಿಸಬೇಕಲ್ಲ..
ಈಗಿರುವದು ಜಾತ್ಯಾತೀತರ ಸರಕಾರ...ಇವರಿಗೆ ಬೈಯ್ಯುವ ಹಾಗಿಲ್ಲ.....ಒಂದು ವೇಳೆಇದೇ ಸಂದರ್ಭದಲ್ಲಿ
ಯಡ್ಯೂರಪ್ಪನ, ಬೊಮ್ಮಾಯಿ ಸರ್ಕಾರ ಇದ್ದಿದ್ದರೆ ಟೌನ್ ಹಾಲಿನಲ್ಲಿ ಮೊಂಬತ್ತಿಗಳ ದೀಪಾವಳಿ ಆಗುತ್ತಿತ್ತು...
ಜೇ ಎನ್ ಯೂ ಪ್ರಾಡಕ್ಟುಗಳ ಅಸಹ್ಯ ಮುಖ ಇದು....
****************************************************
ಈಗ ಜಾತ್ಯಾತೀತ ಸರಕಾರವಿದೆ...ಗೌರಿ ಲಂಕೇಶರ ಹತ್ಯೆಯ ಪ್ರಕರಣ ಏನಾಯಿತು ?..ತನಿಖೆ ಏನಾಯಿತು ?...
ಉತ್ತರ ಕೇಳಬೇಡಿ...ಯಾಕೆಂದರೆ ....ಈಗ ಅದು ಓಟು ತರುವದಿಲ್ಲ.....!ಅದರಿಂದ ಮುಗ್ಧ ಜನರ ಮನಸ್ಸನ್ನು ಕೆಡಿಸಲು ಆಗುವದಿಲ್ಲ...ಅವರಲ್ಲಿ ಗೊಂದಲ ಸೃಷ್ಟಿಸಿ....ಜಾತ್ಯಾತಿತರಿಗೆ ಓಟ್ ಹಾಕಿ ಎಂದು ಹೇಳಲಾಗುವದಿಲ್ಲ...!
ತುಕುಡೇ ಗ್ಯಾಂಗಿನವರ ದೇಶ ದ್ರೋಹಿಗಳ ಮುಖ ಅಸಹ್ಯ....
*************************************************
ಇದೆಲ್ಲ ಇರಲಿ...ದುಬೈ ಸರಕಾರ ಪ್ರಧಾನಿ ಮೋದಿಯವರಿಗೆ ತನ್ನ ದೇಶದ ಅತ್ಯುನ್ನತ ಪ್ರಶಸ್ತಿಯನ್ನು ಘೋಷಣೆ ಮಾಡಿತು...ನೆನಪಿಡಿ..ದುಬೈ ಮುಸ್ಲಿಮ್ ರಾಷ್ಟ್ರ..ನಮ್ಮಮೋದಿ ಅಲ್ಪ ಸಂಖ್ಯಾತರ ಹಾಗುಮುಸ್ಲಿಮ್ಮರ ವಿರೋಧಿ. ....ಇದರ ಬಗೆಗೆ ಪತ್ರಿಕೆಗಳಲ್ಲಿ ಮೈಗೆ ಎಣ್ಣೆ ಹಚ್ಚಿಕೊಂಡು ಬರೆಯುವ ಜೆ ಎನ್ ಯೂ ಪ್ರಾಡಕ್ಟುಗಳು ತಮ್ಮ
ಅಭಿಪ್ರಾಯ ಬರೆಯುವದಿಲ್ಲ...ಯಾಕೆಂದರೆ ಬಹುಶಃ ಅವರಿಗೆ ಇದರ ಬಗೆಗೆ ಹಣ ಸಂದಾಯ ಆಗುವದಿಲ್ಲವೇನೋ....ತುಕುಡೆ ಗ್ಯಾಂಗ್ ಅಸಹ್ಯ ಕಣ್ರೀ....
********************************************
ಸೌದಿ ಅರೇಬಿಯಾ ಗೊತ್ತಲ್ಲ..ಮುಸ್ಲಿಮರ ಪವಿತ್ರ ಸ್ಥಳವಿರುವ ದೇಶ...ದೇಶ ಕೂಡ ಮೋದಿಯವರನ್ನು ಕರೆದು
ತಮ್ಮದೇಶದ ಅತ್ಯುನ್ನತ ಪ್ರಶಸ್ತಿಯನ್ನು ಕೊಟ್ಟು ಸನ್ಮಾನಿಸಿತು..ತನ್ನನ್ನುತಾನು ಧನ್ಯ ಎಂದು ಭಾವಿಸಿತು...
ಆದರೆ ನಮ್ಮಲ್ಲಿ ಇನ್ನೂಕೆಲವರಿಗೆ...ಮೋದಿ ಅಲ್ಪಸಂಖ್ಯಾತ ವಿರೋಧಿ...ಮುಸ್ಲಿಮ್ ವಿರೋಧಿ...
ವಿಚಿತ್ರ ಅಲ್ಲವಾ ?...
********************************************
ಮುಸ್ಲಿಮ್ ದೇಶಗಳ ಒಂದು ಒಕ್ಕೂಟವಿದೆ...ಅಲ್ಲಿ ಮುಸ್ಲಿಮ್ ದೇಶಗಳಿ ಮಾತ್ರ ಅವಕಾಶವಿರುತ್ತದೆ..ಹಿಂದೆ
ಸುಷ್ಮಾ ಸ್ವರಾಜ್ ಇದ್ದಾಗ....ವರ್ಷ ಆ ಒಕ್ಕೂಟ ಭಾರತವನ್ನು ಆಹ್ವಾನಿಸಿತ್ತು..."ಭಾರತವನ್ನು
ಆಹ್ವಾನಿಸಿದರೆ..ತಾನು ಭಾಗವಹಿಸುವದಿಲ್ಲ...":ಅಂತ ಭಿಕಾರಿ ಪಾಕಿಸ್ತಾನ ನಮ್ಮನ್ನು ವಿರೋಧಿಸಿತು...
ಮುಸ್ಲಿಮ್ ದೇಶಗಳು ಪಾಕಿಸ್ತಾನದ ಅರಚಾಟವನ್ನು ಯಾರೂ ಕೇಳಲೇ ಇಲ್ಲ...ಭಾರತದ ಉಕ್ಕಿನ ಮಹಿಳೆ
ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅಲ್ಲಿಗೆ ಹೋಗಿದ್ದರು...ಅಲ್ಲಿ ಸೊಗಸಾದ ಭಾಷಣ ಮಾಡಿದರು...
ವೇದ ಉಪನಿಷತ್ತು..ಭಗವದ್ಗೀತೆಗಳ ಒಳ್ಳೋಳ್ಳೆ ಮಾತುಗಳನ್ನು ಉದಹರಿಸಿ ...."ನಾವು ಧರ್ಮ ಸಹಿಷ್ಣು ದೇಶ..
ಇಲ್ಲಿ ನಾವು ಸಾವಿರಾರು ಮತದವರು ..ಶಾಂತಿಯಿಂದ ಬದುಕುತ್ತೇವೆ..ನಮ್ಮ ವಿರೋಧ ಮಾನವತಾ ವಿರೋಧಿ..
ಉಗ್ರವಾದದ ವಿರುದ್ಧ.."ಅಂತ ಘಂಟಾ ಘೋಷವಾಗಿ ಹೇಳಿ ಬಂದರು..ತನ್ನನ್ನು ತಾನು ಶ್ರೇಷ್ಠ ಮುಸಲ್ಮಾನ ದೇಶವೆಂದು ಕೂಗಿಕೊಳ್ಳುವ ಭಿಕಾರಿ ಪಾಕಿಸ್ತಾನ ಅಲ್ಲಿ ಭಾಗವಹಿಸಲಿಲ್ಲ...ಯಾಕೆ ಗೊತ್ತಾ ?..
ತನ್ನ ಮರ್ಯಾದೆ ಉಳಿಸಿಕೊಳ್ಳಲು..ಇನ್ನೂ ಒಂದು ವಿಷಯ ಗೊತ್ತಾ ?..ಹಿಂದೊಮ್ಮೆಇಂದಿರಾ ಗಂಢಿಯವರ
ಸರಕಾರ ...ಇದೇ ಮುಸ್ಲಿಮ್ ರಾಷ್ಟ್ರಗಳ ಒಕ್ಕೂಟದ ಸಮಾರಂಭಕ್ಕೆ ತನ್ನಪ್ರತಿನಿಧಿಯಾಗಿ ಫಕ್ರುದ್ದೀನ್ ಅಲಿ ಅಹಮದ್ ಅವರನ್ನು ಕಳಿಸಿತ್ತು..ಅವರು ಅಲ್ಲಿ ಹೋಗಿ ಹೊಟೆಲ್ಲಿನಲ್ಲಿ ತಂಗಿದ್ದರು..ಆದರೆ ಮುಖ ತಗ್ಗಿಸಿಕೊಂಡು ವಾಪಸ್ ಬಂದಿದ್ದರು..."ಇದು ಮುಸ್ಲಿಮ್ ದೇಶಗಳ ಒಕ್ಕೂಟ..ಹಾಗಾಗಿ ಭಾರತಕ್ಕೆ ಆಹ್ವಾನ ಇಲ್ಲ..."ಅಂತ ಹೇಳಿತ್ತು..ದೇಶದ ಮರ್ಯಾದೆ ಮೂರುಪಾಲಾಗಿತ್ತು....ಈಗ ದೇಶ ಹೆಮ್ಮೆಯಿಂದ ತಲೆ ಎತ್ತಿ ನಿಲ್ಲುವಂತೆ ಮಾಡಿದ
ಮೋದಿ ಸರಕಾರ ಕೆಲವರಿಗೆ...ಅಲ್ಪ ಸಂಖ್ಯಾತ ವಿರೋಧಿ... ವಿಚಿತ್ರ ...ಅಲ್ಲವಾ ?....!
****************************************************************
ಮೋದಿಸರಕಾರದ ಯಶಸ್ವಿವಿದೇಶಂಗ ನೀತಿ..ಯಾವತ್ತಿಗೂ ಭಾರತ ಶ್ರೇಷ್ಠ ಎನ್ನುವ ದೇಶಪ್ರೇಮಿಗಳ ಸರಕಾರದ
ಸಾಧನೆಯನ್ನುಯಾವ ಬುದ್ಧಿ ಜೀವಿಯೂ ಹೊಗಳುವದಿಲ್ಲ....ಯಾಕೆಂದರೆ ಅವರೆಲ್ಲ ಬುದ್ಧಿ ಜೀವಿಗಳು..... ಅಷ್ಟೆ....ದೇಶ ಭಕ್ತರಲ್ಲ...
*************************************************************
ಮೋದಿ ಅಲ್ಪ ಸಂಖ್ಯಾತ ವಿರೋಧಿ..ಮೋದಿ ಮುಸ್ಲಿಮ್ ವಿರೋಧಿ..ಎಂದು ಅರಚಾಡುವ ಜವಾಹರ ಲಾಲ್
ವಿಶ್ವ ವಿದ್ಯಾಲಯದ ಪ್ರಾಡಕ್ಟುಗಳು ...ಇದರ ಬಗೆಗೆ ಏನನ್ನುತ್ತಾರೆ ?...ಯಾಕೆ ಮುಸ್ಲಿಮ್ ದೇಶಗಳು
ಮೋದಿಯನ್ನು ಕರೆದು ಗೌರವಿಸುತ್ತವೆ ?...ಭಾರತದಲ್ಲಿ ಅಸಹಿಷ್ಣುತೆ ಜಾಸ್ತಿಯಾಗಿದ್ದಲ್ಲಿ....ತಮ್ಮಧರ್ಮೀಯರ ಬಗೆಗೆ ಅವರಿಗೆ ಕಾಳಜಿ ಇಲ್ಲವೆ ?...ಏನನ್ನುತ್ತಾರೆ? ಬುದ್ಧಿಜೀವಿಗಳು ?...
***************************************************
ಮೋದಿಯ ಜನಪ್ರಿಯ ಯೋಜನೆಗಳು...ಬಡವರಿಗೆ ಫ್ರೀ ಗ್ಯಾಸ್..ಉಚಿತ ಮನೆಗಳು..ಜನ ಧನ ಯೋಜನೆ..
ವಿದ್ಯುತ್ ಯೋಜನೆ...ಕಿಸಾನ್ ಸನ್ಮಾನ ಯೋಜನೆ...ಇನ್ನೂ ಅನೇಕ ಯೋಜನೆಗಳು ಇವೆಯಲ್ಲ....
ಯೋಜನೆಗಳು " ಮುಸ್ಲಿಮರಿಗೆ ಇಲ್ಲ.."ಅಂತ ನಿಯಮ ಇದೆಯಾ?ಇಲ್ಲವಲ್ಲ...!ಜಾತಿಗಳ ಮುಖ ನೋಡದೆ
ಬಡವರಿಗಾಗಿ ಆ ಯೋಜನೆಗಳು ಇವೆ...ಭಾರತೀಯರೆಲ್ಲರೂ ಒಂದು...ಮೋದಿ ನಮ್ಮ ದೇಶವನ್ನು ದೇಶ ಭಕ್ತಿಯ
ಮೂಲಕ ಒಂದು ಗೂಡಿಸುತ್ತಿದ್ದಾರೆ...ಯಾವ ಜಾತಿಯ ಹೆಸರು ಹೇಳುತ್ತಿಲ್ಲ...ಯಾವ ಮತದವರನ್ನೂ ದೂರ ಸರಿಸುತ್ತಿಲ್ಲ...ಸರ್ವ ಧರ್ಮ ಸಮಾನ.."ಸಬ್ ಕಾ ಸಾತ್.. ಸಬ್ ಕಾ ವಿಕಾಸ್..".. ! ...
ಎಲ್ಲರ ಜೊತೆಗೂಡಿ ಎಲ್ಲರ ಅಭಿವೃದ್ಧಿ..."..ಬಡವರಿಗೆ ಉಚಿತ ಗ್ಯಾಸ್ ಕೊಟ್ಟರೆ ಅಲ್ಲಿ ಜಾತಿ ಮತಗಳು ಮುಖ್ಯವಲ್ಲ...ಶೌಚಾಲಯ ಕಟ್ಟಿಸಿದರೆ ಅಲ್ಲಿ ಜಾತಿ ಮತಗಳ ಉಲ್ಲೇಖವಿಲ್ಲ.. ಕೇವಲ ಬಡವರಿಗಾಗಿ ಇದು...
ವಿದ್ಯುತ್ ಪ್ರತಿ ಹಳ್ಳಿ ಹಳ್ಳಿಗೂ ಮುಟ್ಟಿಸಿದರೆ ಅಲ್ಲಿ ಅಲ್ಪ ಸಂಖ್ಯಾತರಿಗೂ..ಎಲ್ಲ ಜಾತಿಯವರಿಗೂ ಸಿಗುತ್ತದೆ..
ಆದರೂ ಕಾಂಗ್ರೆಸ್ಸಿನವರು.ಜಾತ್ಯಾತೀತರು..ಎಡಬಿಡಂಗಿಗಳು ಮಾತ್ರ ಅರಚುತ್ತಾರೆ..
"ಮೋದಿ ಮುಸ್ಲಿಮ್ ವಿರೋಧಿ .. ಅಲ್ಪಸಂಖ್ಯಾತರ ವಿರೋಧಿ..."..ಬಹಳ ವಿಚಿತ್ರ ಕಣ್ರೀ.. ಇವರ ತರ್ಕ...!..
******************************************************
ಬಡವರಲ್ಲಿ ಜಾತಿ ನೋಡದ..ತನಗಾಗಿ ಏನನ್ನೂ ಬಯಸದ..ನಿಸ್ವಾರ್ಥಿ..ಪ್ರಾಮಾಣಿಕ...ಕುಟುಂಬ ರಾಜಕೀಯ ಮಾಡದ ಮೋದಿ ನಮ್ಮ ದೇಶದ ಹೆಮ್ಮೆ...!
ಮೋದಿ ಇನ್ನೊಮ್ಮೆ...
ಜಯ ಜಯ ಮೋದಿ...
ಮೋದಿ ಜಯ ಜಯ.. . ದೇಶ ಭಕ್ತಿಗೆ ಜೈ ಜೈ ಜೈ .......
********************************************************
( ಯಥಾ ಪ್ರಕಾರಇದು ಮೋದಿಯವರ ಬಗೆಗೆ ಬರೆದ ಲೇಖನ...ನಿಮಗೆಲ್ಲ ಇಷ್ಟ ಬಂದ ಹಾಗೆ ಹಂಚಿಕೊಳ್ಳಿ...
ನನ್ನ ಹೆಸರಿನ ಅಗತ್ಯವೂ ಇಲ್ಲ...ಕಾಪಿ ಪೇಸ್ಟ್ ಮಾಡಿಕೊಳ್ಳಿ...ಒಟ್ಟಿನಲ್ಲಿ...ಧರ್ಮ ಭಾರತದ ಭರವಸೆ....
ಮೋದಿ ಗೆಲ್ಲಬೇಕು... ಅಷ್ಟೇ..)

Monday, April 1, 2024

ಮೋದಿ ಮತ್ತೊಮ್ಮೆ - 1

 2 ಏಪ್ರಿಲ್ 2024 


ರಾಮಾಯಣವನ್ನು ಗಮನಿಸಿ........
ಅಂಗದ, ಸಂಧಾನಕ್ಕೆ ಬಂದಾಗ ರಾವಣ ಗಹಗ್ಗಹಿಸಿ ನಕ್ಕಿದ್ದ....."ಅಂಗದಾ...ನಿನ್ನಪ್ಪಲಿ ಮತ್ತು ನಾನು ಇಬ್ಬರೂ ಪ್ರಾಣ ಸ್ನೇಹಿತರು....!ನಿನ್ನ ಅಪ್ಪನನ್ನು ಮರೆಯಲ್ಲಿ ನಿಂತು ಬಾಣ ಬಿಟ್ಟು ಕೊಂದವ ರಾಮ....!
ನೀನು ಈಗ ರಾಮನ ಪರವಾಗಿ ..ಸಂಧಾನಕ್ಕೆಂದು ಬಂದಿದ್ದೀಯಾ....!!ನೀನು....ನನ್ನ ಪರವಾಗಿ ನಿಲ್ಲು...
ನಿನ್ನ ಸಕಲ ರಾಜ್ಯವನ್ನು ಸುಗ್ರೀವನಿಂದ ನಿನಗೆ ನೀಡುತ್ತೇನೆ..."...ಅಂಗದ ನಕ್ಕ....
"ರಾವಣಾ....ನಾವು ಏನೇ ಮಾಡಿದರೂ ....ಯಾವುದೇ ನಿರ್ಣಯ ತೆಗೆದು ಕೊಂಡರೂ...ಅದಕ್ಕೊಂದು
ಘನತೆ ಇರಬೇಕು...ಗೌರವ ಇರಬೇಕು....ನಮ್ಮನಿರ್ಧಾರದಲ್ಲಿ..ಸತ್ಯನ್ಯಾಯ.. ಧರ್ಮಗಳಿರಬೇಕು...
ಶ್ರೀರಾಮ ಯಾರು ಗೊತ್ತಾ ?...ಅಪ್ಪ ದಶರಥ ಮಹಾರಾಜ ಕೈಕೆಯಿಗೆ ಕೊಟ್ಟ ಮಾತಿನಂತೆ..
ಪಟ್ಟಾಭಿಷೇಕವನ್ನು ಬಿಟ್ಟು...ರಾಜ್ಯವನ್ನೂ..ಅರಮನೆಯ ಸಕಲ ವೈಭೋಗವನ್ನುತ್ಯಜಿಸಿ....ತಾನು ಹದಿನಾಲ್ಕು ವರ್ಷ ವನವಾಸಕ್ಕೆ ಬಂದವ.....!ಸತ್ಯಕ್ಕಾಗಿ..ನ್ಯಾಯಕ್ಕಾಗಿ.. ಧರ್ಮಕ್ಕಾಗಿ ..ಬದುಕುತ್ತಿರುವವ ನನ್ನ
ಶ್ರೀರಾಮ...ನನ್ನ ತಂದೆ ವಾಲಿಯು ದೊಡ್ಡ ತಪ್ಪು ಮಾಡಿದ್ದ...ಹಾಗಾಗಿ ಅವನಿಗೆ ಶಿಕ್ಷೆ ಕೊಟ್ಟ... ಅದರಲ್ಲಿ ತಪ್ಪಿಲ್ಲ....
ಮರ್ಯಾದ ಪುರುಷೋತ್ತಮ ನನ್ನ ಶ್ರೀರಾಮ......ರಾಮನ ಮಡದಿ ಸೀತಾಮಾತೆಯನ್ನು ನೀನು ಬಲಾತ್ಕಾರವಾಗಿ
ಕದ್ದು ತಂದದ್ದು ತಪ್ಪು..ಅದು ಅಪರಾಧ....ಈಗಲೂ ಕಾಲ ಮಿಂಚಿಲ್ಲ....ಸೀತಾ ಮಾತೆಯನ್ನು ರಾಮನಿಗೆ ಒಪ್ಪಿಸಿ
ಧರ್ಮ ದೇವತೆ ರಾಮನಿಗೆ ಶರಣಾಗು...."..
ಅಂಗದನ ನಿಲುವು ಸ್ಪಷ್ಟವಾಗಿತ್ತು...ರಾವಣ ಗಹಗ್ಗಸಿ ನಕ್ಕ....ಅಂಗದನ ಮಾತಿಗೆ ರಾವಣ ಒಪ್ಪಲಿಲ್ಲ....
ಘನ ಘೋರ ಯುದ್ಧವಾಯಿತು....!ರಾಮ ರಾವಣನನ್ನು ಯುದ್ಧದಲ್ಲಿ ಕೊಂದು ಹಾಕಿದ....
ರಾಮ ವಿಜಯವನ್ನು ಸಾಧಿಸಿದ....ಸ್ವಲ್ಪತಡ ಆಗಬಹುದು...ಆದರೆ....ಯಾವತ್ತಿಗೂ ಸತ್ಯ..ನ್ಯಾಯ..
ಧರ್ಮದ ವಿಜಯವೇ ಶತ ಸಿದ್ಧ.....
*************************************************
ಮಹಾಭಾರತವನ್ನೂ ಗಮನಿಸಿ....
ವಿದುರ...ದಾಸಿ ಪುತ್ರ...ಕೌರವ ಎಷ್ಟೇ ಅನಾಚಾರ ಮಾಡಿದರೂ...
ಅದನ್ನು ಖಂಡಿಸುತ್ತ ತನ್ನ ನೀತಿಯನ್ನು ಬಿಡದವ ಈ ವಿದುರ...ತನ್ನಸತ್ಯಧರ್ಮ ಪಾಲನೆಯನ್ನು ಯಾವತ್ತಿಗೂ ಪಾಲಿಸಿಕೊಂಡು ಬಂದವ...ಸಂಧಾನಕ್ಕೆಂದು ಹಸ್ತಿನಾವತಿಪುರಕ್ಕೆಶ್ರೀಕೃಷ್ಣಬಂದಾಗ...ವಿದುರನ ಮನೆಗೇ
ಮೊದಲು ಬರುತ್ತಾನೆ....!!!ತನ್ನಬದುಕಿನ ಮಹೋನ್ನತ ಕನಸು...ಶ್ರೀಕೃಷ್ಣ ಪರಮಾತ್ಮ...!ತನ್ನಮನೆಗೆ ಬಂದಿದ್ದು
ನೋಡಿ ವಿದುರ ಹಿರಿ ಹಿರಿ ಹಿಗ್ಗುತ್ತಾನೆ....ತನ್ನ ಆರಾಧ್ಯ ದೈವಶ್ರೀಕೃಷ್ಣನನ್ನು ಕಣ್ ತುಂಬಾ ನೋಡುತ್ತಾನೆ..!
ಅನುಭವಿಸುತ್ತಾನೆ..! ಆರಾಧಿಸುತ್ತಾನೆ...!ಅವನಿಗೆ ಕೊಡಲು ..ಒಂದು ತೊಟ್ಟು ಹಾಲು ಮಾತ್ರ ಇದ್ದಿರುತ್ತದೆ...
ಶ್ರೀಕೃಷ್ಣ ಅದೇ ಒಂದು ತೊಟ್ಟು ಹಾಲು ಕುಡಿದು..ಹಸ್ತಿನಾವತಿ ಪುರದಲ್ಲಿ ಭಕ್ತಿಯ ಹಾಲಿನ ಹೊಳೆಯನ್ನೇ ಹರಿಸುತ್ತಾನೆ...ವಿದುರ ಭಕ್ತಿಯಿಂದ ಮೂಕನಾಗುತ್ತಾನೆ..ಶ್ರೀಕೃಷ್ಣ ನಗುತ್ತಾನೆ..ಹಸ್ತಿನಾವತಿಪುರದಲ್ಲಿ ಶಿಕೃಷ್ಣನ ಸ್ವಾಗತಕ್ಕೆ ಭರ್ಜರಿ ತಯಾರಿ ನಡೆದಿತ್ತು...ಮೃಷ್ಟಾನ್ನ ಭೋಜನ ತಯಾರಿಸಿದ್ದರು...ಎಲ್ಲೆಲ್ಲೂ ರತ್ನಗಂಬಳಿ ಹಾಕಿದ್ದರು..ಭೀಷ್ಮ.. ಕೃಪ... ಅನೇಕ ಕೃಷ್ಣನ ಭಕ್ತರು ಅಲ್ಲಿದ್ದರೂ...ಕೃಷ್ಣ ಮಾತ್ರ ವಿದುರನ ಮನೆಗೆ ಬಂದಿದ್ದ...!
ನ್ಯಾಯ.. ಧರ್ಮ ನಂಬಿಕೆಗಳು ಯಾವತ್ತಿಗೂ ಸತ್ಯವನ್ನು ಹುಡುಕಿ ಬರುತ್ತವೆ....ಮುದ್ದು ಕೃಷ್ಣನ ಹಾಗೆ...
ಸತ್ಯ ಧರ್ಮಗಳು...ಮುದ್ದಾಗಿ ನಗುತ್ತ ವಿದುರನ ಮನೆಯನ್ನೇ ಹುಡುಕಿ ಬಂದು ಮುಗ್ಧ ಭಕ್ತಿಯನ್ನು ಸ್ವೀಕರಿಸುತ್ತವೆ...
ಹಾಲಿನ ಹೊಳೆಯನ್ನು ಹರಿಸುತ್ತವೆ...ಇಲ್ಲಿಯೂ ಗೆದ್ದಿದ್ದು ವಿದುರನ ಘನತೆಯ ಬದುಕು...!!ಸತ್ಯ ನ್ಯಾಯ
ಧರ್ಮದ ಆಚರಣೆಯ ಸ್ವಾಭಿಮಾನದ ಬದುಕು....
***************************************
ತಾತ್ಪರ್ಯವಿಷ್ಟೆ...ಬದುಕಿಗೊಂದು ಘನತೆ ಇರಬೇಕು....ಸ್ವಾಭಿಮಾನವಿರಬೇಕು....ಯಾವುದೇ ಆಮಿಶಕ್ಕೊಳಗಾದ
ಸಂಕುಚಿತ ಭಾವನೆಗಳಿಗೆ ಅವಲಂಬಿತವಾದ ಬದುಕು ನಮ್ಮದಾಗಿರಬಾರದು...
****************************************
ಇದೀಗ ಮತ್ತೊಮ್ಮೆಚುನಾವಣೆ ಬಂದಿದೆ...ಮೋದಿ ನಮ್ಮ ಜಾತಿಯವ ಅಲ್ಲವೇ ಅಲ್ಲ....ಅವನ ಕುಲ ಭಾಷೆ ರಾಜ್ಯ..
ಯಾವುದೂ ನಮ್ಮದಲ್ಲ....ಆದರೂ ಮೋದಿ ನಮ್ಮವ ಅಂತ ಅನ್ನಿಸುತ್ತಾನೆ...!ನಮ್ಮ ಮನೆಯವ ಎನ್ನುವ
ಭಾವನೆ ಬಂದಿರುತ್ತದೆ..ಕಾರಣ ಆತನ ನಿಷ್ಕಳಂಕ ಬದುಕು...!ತನಗಾಗಿ..ತನ್ನ ಕುಟುಂಬಕ್ಕಾಗಿ..ತನ್ನ
ಮಕ್ಕಳು...ಸೊಸೆಯಿಂದಿರಿಗಾಗಿ..ಮೊಮ್ಮಕ್ಕಳಿಗಾಗಿ ...ಆಸ್ತಿ..ಹಣ..ಸಂಪತ್ತು ಮಾಡಿದ ಬದುಕು ಅವನದಲ್ಲ....
ದೇಶಕ್ಕಾಗಿ ...ತನ್ನಸ್ವಂತ ಬದುಕನ್ನೇ ತ್ಯಾಗ ಮಾಡಿದ ಮಹಾನ್ ದೇಶ ಭಕ್ತ ಮೋದಿ....
ಅವನಿಗೆ ನಾಲ್ಕಾರು ಜನ ಅಣ್ಣ ತಮ್ಮಂದಿರು..ಅವರೆಲ್ಲ ಯಾರೋ...ನಮ್ಮ ಮ್ಮ ನಿಮ್ಮಂತೆ ಸಾಮಾನ್ಯರ
ಬದುಕನ್ನು ಬದುಕುತ್ತಿದ್ದಾರೆ...ಅವನಿಗೊಬ್ಬಳು ಅಮ್ಮ ಇದ್ದಳು ಹತ್ತು ಫೂಟಿನ ರೂಮಿನಲ್ಲಿ ನಮ್ಮ ನಿಮ್ಮ
ಅಮ್ಮನಂತೆ ಸರಳ ಬದುಕು ನಡೆಸುತ್ತಿದ್ದಳು...!ಅಮ್ಮನಿಗಾದರೂ ...ಹಣ ಮಾಡುವ ಹಂಬಲ
ಮೋದಿಗೆ ಆಗಲಿಲ್ಲವೆ ?,,,,,
ಅಮ್ಮ ಕೂಡ ಅಕ್ರಮ ಆಸ್ತಿಗೆ ಒಪ್ಪುಲಿಲ್ಲವಂತೆ..,!ಶಿವಾಜಿಯ ಅಮ್ಮ ಜೀಜಾಬಾಯಿ ನೆನಪಾಗುತ್ತಾಳೆ...
ಎಂಥಹ ದೇಶ ಭಕ್ತಿಯ..ಪ್ರಾಮಾಣಿಕ... ರಕ್ತ ಅವರದ್ದು ?...ಪ್ರಧಾನಿಯಾಗಿ ಕಳೆದ ಹತ್ತು ವರ್ಷದಲ್ಲಿ...ಒಂದೇ
ಒಂದು ರಜೆಯನ್ನು ಹಾಕದೆ...ದಿನಕ್ಕೆ ಹದಿನೆಂಟು ತಾಸು ತನ್ನನ್ನು ತಾನು ದೇಶಕ್ಕೆ ಸಮರ್ಪಿಸಿಕೊಂಡವ
ಮೋದಿ....!ಅಷ್ಟು ನಿಸ್ವಾರ್ಥದ ಬದುಕು ನಮ್ಮಿಂದ ಸಾಧ್ಯವಿಲ್ಲ ಬಿಡಿ.....
::::::::::::::::::::::
ಆದರೆ ನಾವು ಒಂದು ಕೆಲಸವನ್ನು ಖಂಡಿತವಾಗಿ ಮಾಡಬಹುದು...ಒಂದು ದಿನ ರಜೆ ಸಿಗುತ್ತದೆ ಅನ್ನೋದನ್ನು ಮರೆತು...ನಮ್ಮಸ್ವಾರ್ಥವನ್ನು ಸ್ವಲ್ಪ ಬದಿಗಿಟ್ಟು ಚುನಾವಣೆಯಲ್ಲಿ ಮತ ಹಾಕೋಣ.....ದೇಶದ ಹೆಮ್ಮೆ...
ಪ್ರಾಮಾಣಿಕ ಮೋದಿಯನ್ನು ಗೆಲ್ಲಿಸೋಣ....
ದೇಶ ಭಕ್ತನಿಗಾಗಿ ನಮ್ಮಒಂದು ಮತವನ್ನು ಚಲಾಯಿಸಿ ನಮ್ಮ ದೇಶ ಧರ್ಮ..ಭಕ್ತಿಯನ್ನು ಮೆರೆಯೋಣ.....
ದಿನದ ಮತ ಹಾಕುವ ಒಂದು ಕ್ಷಣವಾದರೂ...ದೇಶಭಕ್ತಿಯ ಭಾವವನ್ನು ಅನುಭವಿಸೋಣ.....! ...
ಜೈ ಜೈ ಮೋದಿ... ಜೈ ಜೈ ಮೋದಿ..ನಮ್ಮ ಹೆಮ್ಮೆಯ ಮೋದಿ ಮತ್ತೊಮ್ಮೆ... ಮತ್ತೊಮ್ಮೆ...
ಜೈ ಶ್ರೀ ರಾಮ್...!
ಶಿವ ಶಿವ ಶಂಭೋ...
ಹರ ಹರ ಮಹಾದೇವ..!!!
(ಎಂದಿನಂತೆ....
ಇದು ಮೋದಿ ಬಗೆಗೆ ಬರೆದ ಲೇಖನ...ನಿಮಗೆಇಷ್ಟ ಆದಲ್ಲಿ..ಕಾಫಿ ಪೇಸ್ಟ್ ಮಾಡಿ...ಎಲ್ಲಕಡೆ ಹಂಚಿ...ವಾಟ್ಸಪ್...
ಇತರೆ ಸೋಷಿಯಲ್ ಮೀಡಿಯಾಗಳಲ್ಲಿ ಹಂಚಿ, ಶೇರ್ ಮಾಡಿ...
ನನ್ನ ಹೆಸರು ಬೇಕು ಅಂತೇನೂ ಇಲ್ಲ...ಒಟ್ಟಿನಲ್ಲಿ ಮೋದಿ ಗೆಲ್ಲಲಿ....ಗೆಲ್ಲಬೇಕು ...
***************************************

.....ಪ್ರಕಾಶ್ ಹೆಗ್ಡೆ