ಶನಿವಾರ, ಸೆಪ್ಟಂಬರ್ 5, 2026
ವಾಟ್ಸ್ ಆಪ್ ಮೂಲಕ
MEMORIES OF BIRTHIMANE,BIRTHDAYS, POOJA, CELEBRATIONS, FESTIVALS, VISITS, DRAMA, MUSIC, YAKSHAGANA, GET-TOGETHERS, WEDDING ENGAGEMENTS, WEDDINGS, WEDDING ANNIVERSARY, BRAHMOPADESHA, NAMAKARANA, SEEMANTHA, BOOK RELEASE, BOOK REVIEW, AND SHRADDHANJALI....
Friday, August 28, 2026
WahtsApp forwarded
ಶ್ರೀ ಗಣೇಶ, ಗಣಪತಿ ಗಣೇಶ ನ ಎಂಟು ದಿವ್ಯ ಪ್ರಕಟಣೆಗಳು, ಎಂಟು ರೂಪಗಳು
ಏಕದಂತಂ ಚತುರ್ಹಸ್ತಂ ಪಾಶಮಂಕುಶಧಾರಿಣಮ್c ರದಂ ಚ ವರದಂ ಹಸ್ತೈರ್ಬಿಭ್ರಾಣಂ ಮೂಷಕಧ್ವಜಮ್
ಶ್ಲೋಕದ ಅರ್ಥ ಒಂದೇ ದಂತವುಳ್ಳವನು ನಾಲ್ಕು ಕೈಗಳುಳ್ಳವನು ಪಾಶ ಮತ್ತು ಅಂಕುಶವನ್ನು ಧರಿಸಿದವನು ತನ್ನ ಕೈಗಳಲ್ಲಿ ಮುರಿದ ದಂತ ಮತ್ತು ವರದ ಮುದ್ರೆಯನ್ನು ಹೊತ್ತಿರುವವನು ಇಲಿಯ ಧ್ವಜವುಳ್ಳವನು ಆದ ಗಣೇಶನಿಗೆ ನಮಸ್ಕಾರ
ಚಿತ್ರದಲ್ಲಿರುವ ಗಣೇಶನ ಎಂಟು ರೂಪಗಳು
ಮೇಲಿನ ಸಾಲು: ೧ ವಲ್ಲಭ ಗಣಪತಿ ೨ ಮಹಾಗಣಪತಿ ೩ ಲಕ್ಷ್ಮೀ ಗಣಪತಿ
ಮಧ್ಯದ ಸಾಲು: ೪ ಬಾಲಗಣಪತಿ ೫ ಮಾರ್ತಾಂಡ ಗಣಪತಿ
ಕೆಳಗಿನ ಸಾಲು: ೬ ಹೆರಂಬ ಗಣಪತಿ ೭ ಸಂಪ್ರದಾಯ ಗಣಪತಿ ೮ ವೀರ ಗಣಪತಿ
ಗಣೇಶನ ಎಂಟು ರೂಪಗಳು ಎಂಟು ದಿವ್ಯ ಪ್ರಕಟಣೆಗಳು
ಈ ಚಿತ್ರವು ಶ್ರೀ ಗಣೇಶನ ವಿವಿಧ ರೂಪಗಳನ್ನು ಚಿತ್ರಿಸುತ್ತದೆ ಪ್ರತಿಯೊಂದು ರೂಪವೂ ವಿಶೇಷ ಗುಣಗಳನ್ನು ಮತ್ತು ಆಶೀರ್ವಾದಗಳನ್ನು ಪ್ರತಿನಿಧಿಸುತ್ತದೆ ಮಧ್ಯದಲ್ಲಿರುವ ಮುಖ್ಯ ಗಣಪತಿಯು ಎಲ್ಲಾ ರೂಪಗಳ ಸಂಪೂರ್ಣತೆಯನ್ನು ಪ್ರತಿನಿಧಿಸುತ್ತದೆ
ಪ್ರತಿಯೊಂದು ರೂಪದ ಸಂಕ್ಷಿಪ್ತ ವಿವರಣೆ
ವಲ್ಲಭ ಗಣಪತಿ ಪ್ರಿಯವಾದ ರೂಪ ಇಚ್ಛೆಗಳನ್ನು ಈಡೇರಿಸುವವನು
ಮಹಾಗಣಪತಿ ಅನೇಕ ಕೈಗಳು ಮತ್ತು ಶಕ್ತಿಗಳುಳ್ಳ ಮಹಾ ರೂಪ
ಲಕ್ಷ್ಮೀ ಗಣಪತಿ ಸಂಪತ್ತು ಮತ್ತು ಸಮೃದ್ಧಿಯೊಂದಿಗೆ ಸಂಬಂಧಿಸಿದ ರೂಪ
ಬಾಲಗಣಪತಿ ಮುಗ್ಧ ಮತ್ತು ಆಟವಾಡುವ ಬಾಲಕ ರೂಪ
ಮಾರ್ತಾಂಡ ಗಣಪತಿ ಸೂರ್ಯನಂತೆ ಪ್ರಕಾಶಿಸುವ ಸೌರ ರೂಪ
ಹೆರಂಬ ಗಣಪತಿ ಐದು ಮುಖಗಳುಳ್ಳ ರಕ್ಷಣಾತ್ಮಕ ರೂಪ
ಸಂಪ್ರದಾಯ ಗಣಪತಿ ಸಾಂಪ್ರದಾಯಿಕ ಆಚರಣೆಯ ರೂಪ
ವೀರ ಗಣಪತಿ ಪರಾಕ್ರಮಿ ಯೋಧ ರೂಪ
ಗಣೇಶನ ಪ್ರತಿಯೊಂದು ಪ್ರಕಟಣೆಯೂ ಬೇರೆ ಬೇರೆ ಉದ್ದೇಶಗಳನ್ನು ಪೂರೈಸುತ್ತದೆ ಮತ್ತು ನಿರ್ದಿಷ್ಟ ಆಶೀರ್ವಾದಗಳಿಗಾಗಿ ಮತ್ತು ಜೀವನದ ಸನ್ನಿವೇಶಗಳಿಗಾಗಿ ಪೂಜಿಸಲ್ಪಡುತ್ತದೆ
Posted 28/8/2026
Monday, June 15, 2026
WhatsApp forwarded
# 01.
Please stop using the term "God fearing" - Hindus never ever fear God. For us, God is everywhere and we are also part of God. God is not a separate entity to fear.
It is integral.
# 02.
Please do not use the meaningless term "RIP" when someone dies. Use "Om Shanti", "Sadhgati" or "I wish this atma attains moksha/sadhgati /Uthama lokas". Hinduism neither has the concept of "soul" nor its "resting". The terms "Atma" and "Jeeva" are, in a way, antonyms for the word "soul".(to be understood in detail)
# 03.
Please don't use the word "Mythology" for our historic epics (Ithihaas) Ramayana and Mahabharata. Rama and Krishna are historical heroes, not just mythical characters.
# 04.
Please don't be apologetic about idol worship and say “Oh, that's just symbolic". All religions have idolatry in kinds or forms - cross, words, letters (calligraphy) or direction.
Also let's stop using the words the words 'idols', 'statues' or 'images' when we refer to the sculptures of our Gods.
Use the terms 'Moorthi' or 'Vigraha'. If words like Karma, Yoga, Guru and Mantra can be in the mainstream, why not Moorthi or Vigraha?
# 04.
Please don't refer to Ganesh and Hanuman as "Elephant god" and "Monkey god" respectively. You can simply write Shree Ganesh and Shree Hanuman.
# 05.
Please don't refer to our temples as prayer halls. Temples are "devalaya" (abode of god) and not "prarthanalaya" (Prayer halls).
# 06.
Please don't wish your children "black birthday" by allowing them to blow off the candles that are kept on top of the birthday cake. Don't throw spit on the divine fire (Agni Deva). Instead, ask them to pray: "Oh divine fire, lead me from darkness to light" (Thamasoma Jyotirgamaya) by lighting a lamp. These are all strong images that go deep into the psyche.
# 07.
Please avoid using the words "spirituality" and "materialistic". For a Hindu, everything is divine. The words spirituality and materialism came to India through evangelists and Europeans who had a concept of Church vs State. Or Science vs Religion. On the contrary, in India, Sages were scientists and the foundation stone of Sanatan Dharma was Science.
# 09.
Please don't use the word "Sin" instead of "Paapa". We only have Dharma (duty, righteousness, responsibility and privilege) and Adharma (when dharma is not followed). Dharma has nothing to do with social or religious morality. 'Paapa' derives from Adharma.
# 10.
Please don't use loose translation like meditation for "dhyana" and 'breathing exercise' for "Pranayama". It conveys wrong meanings. Use the original words.
Remember, the world respects only those who respect themselves!
Please pass it on so that people can understand about Hindu Dharma..
Posted 15/6/2026
April 1, 2026
ರಾಮನ ನಡೆ ಚೆಂದ, ಕೃಷ್ಣನ ನುಡಿ ಚಂದ
👉 ರಾಮನ ಜನನ ನಡು ಮಧ್ಯಾಹ್ನವಾದರೆ, ಕೃಷ್ಣನ ಜನನ ನಡುರಾತ್ರಿ.
👉 ಬೇಸಿಗೆ ಕಾಲದಲ್ಲಿ ರಾಮನ ಜನನವಾದರೆ, ಭೋರ್ಗರೆಯುವ ಮಳೆಗಾಲದಲ್ಲಿ ಕೃಷ್ಣನ ಜನನ.
👉 ಅರಮನೆಯಲ್ಲಿ ರಾಮ ಜನಿಸಿದರೆ ಸೆರೆಮನೆಯಲ್ಲಿ ಕೃಷ್ಣ ಜನಿಸಿದ
👉 ರಾಮ ಹಿರಿಯ ಮಗನಾದರೆ, ಕೃಷ್ಣ ಕೊನೆಯ ಮಗ.
👉 ರಾಮ ಶುಕ್ಲಪಕ್ಷವಾದರೆ, ಕೃಷ್ಣ ಕೃಷ್ಣಪಕ್ಷ.
👉 ರಾಮನ ಬದುಕು ತೆರೆದಿಟ್ಟ ಪುಸ್ತಕವಾದರೆ, ಕೃಷ್ಣನದ್ದು ರಹಸ್ಯ, ನಿಗೂಢ.
👉 ರಾಮ ಏಕಪತ್ನಿ ವ್ರತಸ್ಥ, ಕೃಷ್ಣ 16108 ಪತ್ನಿಯರ ವಲ್ಲಭ.
👉ರಾಮ ಮರ್ಯಾದಾವತಾರ, ಕೃಷ್ಣ ಲೀಲಾವತಾರ.
👉ಕೃಷ್ಣನ ನುಡಿ ಭಗವದ್ಗೀತೆ, ರಾಮನ ನಡೆ ರಾಮಾಯಾಣ
👉 ಕೃಷ್ಣನಸಿದ್ಧಾಂತ, ರಾಮನ ಆಚರಣೆ
👉 ರಾಮನೇ ಯುದ್ಧ ಮಾಡಿ ಗೆದ್ದ ಕಥೆ ರಾಮಾಯಣವಾಯ್ತು.
ಕೃಷ್ಣ ಯುದ್ಧವನ್ನೇ ಮಾಡದೆ ಗೆದ್ದ ಕಥೆ ಮಹಾಭಾರತವಾಯ್ತು
👉 "ರಾಮ" ಮತ್ತು "ಕೃಷ್ಣ" ಒಂದೇ ದೇವರ ಅವತಾರವಾದರೂ ಅವರ ನಡೆ ನುಡಿಗಳಲ್ಲಿ ವ್ಯತ್ಯಾಸವಿದೆ.
ನಾವು ನಮ್ಮ ಜೀವನದಲ್ಲಿ ಹೇಗೆ ಇರಬೇಕೆಂದು ರಾಮ ನಡೆದು ತೋರಿಸಿದ,
ಕೃಷ್ಣ ಹೇಳಿ ತೋರಿಸಿದ.
ಕೃಷ್ಣ ನುಡಿದಂತೆ ನುಡಿದಾಗ ರಾಮ ನಡೆದಂತೆ ನಡೆದಾಗ ನಾವು ರಾಮ ಕೃಷ್ಣರಾಗ್ತೇವೆ.
ಅದಕ್ಕಾಗಿಯೇ ಹಿರಿಯರು ಹೇಳಿದ್ದು ರಾಮನ ನಡೆ ಚಂದ ಕೃಷ್ಣನ ನುಡಿ ಚಂದ
🙏🌺🙏🙏🌺🙏
ನಮ್ಮ ನಡೆ ನುಡಿ ಚೆನ್ನಾಗಿರಲಿ. ಬಾಳು ಬಂಗಾರವಾಗಲಿ. ಇತರರಿಗೆ ದಾರಿ ದೀಪವಾಗಲಿ ಎಂದು ಆಶಿಸುತ್ತಾ ಈ ನುಡಿ ಮುತ್ತುಗಳು...
Posted 1/4/2026
ಶುಕ್ರವಾರ, ಮಾರ್ಚ್ 20, 2026
WhatsApp forwarded
"ದೇವರ ಮನೆ ಮತ್ತು ಪೂಜೆ" ಯ ವಿಷಯಗಳು..
೧. ದೇವರ ಮನೆ, ದೀಪಗಳು , ದೇವರ ಪೂಜಾ ಸಾಮಗ್ರಿಗಳು ಎಷ್ಟು ಶುದ್ಧವಾಗಿರುತ್ತದೋ ಅಷ್ಟೂ ಶುಭಫಲವಿರುತ್ತದೆ..
೨. ದೇವರ ಮನೆಯಲ್ಲಿ ಒಡೆದಿರುವ, ಭಿನ್ನವಾಗಿರುವ, ವಿಗ್ರಹಗಳು, ಫೋಟೋಗಳು, ಯಂತ್ರಗಳು ಇಡಬೇಡಿ..
೩. ದೇವರ ಮನೆಯಲ್ಲಿ ಗುಡಿಸೋ ಕಸವನ್ನು ಒಂದು ಬಟ್ಟೆಯಿಂದ ಗುಡಿಸಿದರೆ ತುಂಬಾ ಒಳ್ಳೆಯದು.
೪. ದೇವರ ಮನೆಯನ್ನು ಅರಿಸಿನ ಹಾಕಿದ ನೀರಿನಿಂದ ಶುದ್ಧ ಮಾಡಿ, ಆ ಮನೆಯಲ್ಲಿ ದೈವಕಳೆ ವೃದ್ಧಿಸಿ, ಹಣದ ಸಮಸ್ಯೆ ನಿವಾರಣೆಯಾಗುತ್ತದೆ,ನೆಲ ಒಣಗುವವರೆಗೂ ತುಳಿಯುವ ಹಾಗಿಲ್ಲ..
೫. ದೇವರ ಮನೆಯಲ್ಲಿ ತುಂಬಾ ವಿಗ್ರಹಗಳು ಬೇಡ, ವಿಗ್ರಹಗಳು ಜಾಸ್ತಿಯಾದರೆ "ನೈವೇದ್ಯ "ದ ಪ್ರಮಾಣವೂ ಜಾಸ್ತಿ ಮಾಡಬೇಕಾಗುವುದು..
೬. ತುಂಬಾ ಎತ್ತರದ ವಿಗ್ರಹಗಳು ಬೇಡ, ಅಕಸ್ಮಾತ್ತಾಗಿ ಇದ್ದರೆ ಪ್ರತಿದಿನ ಒಂದು ಸೇರು ಅಕ್ಕಿಯ ಅನ್ನವನ್ನಾದರೂ ನೈವೇದ್ಯ ಮಾಡಬೇಕಾಗುವುದು..
೭. ದೇವರ ವಿಗ್ರಹಗಳನ್ನು ಮಂಗಳವಾರ, ಶನಿವಾರ , ಶುಕ್ರವಾರದಂದು ಶುದ್ಧಿ ಮಾಡುವುದು ಬೇಡ..
(ಅನಿವಾರ್ಯ ಪರಿಸ್ಥತಿಗಳಲ್ಲಿ, ಗ್ರಹಣ ಕಾಲದಲ್ಲಿ, ಇತ್ಯಾದಿ ಸಮಯದಲ್ಲಿ ಮಾಡಬಹುದು)
೮. ಪ್ರತೀ ಅಮಾವಾಸ್ಯೆ ಮತ್ತು ಪೌರ್ಣಾಮಿಯ ಮರುದಿನ ದೇವರ ವಿಗ್ರಹಗಲಕನ್ನು "ಅರಿಸಿನದ ನೀರಿನಿಂದ ಶುದ್ಧ ಮಾಡಿ..
೯. ದೇವರ ಪೂಜೆಗೆ "ಆಂಜನೇಯ" ಸ್ವಾಮಿ ಇರೋ ಘಂಟೆಯನ್ನೇ ಉಪಯೋಗಿಸಿ, ಆಂಜನೇಯ ದೇವರ ಪಾದವನ್ನು ಹಿಡಿದು ಘಂಟೆಬಾರಿಸಬೇಕು..
೧೦. ದೇವರುಗಳು ಯಾವಾಗಲೂ ಆಹಾರ ಕೇಳುತ್ತಿರುತ್ತವೆ , ದೇವರ ಹತ್ತಿರ ಮಧುಪರ್ಕ ಇರಿಸಿರಿ, ರಾತ್ರಿ ಮಲಗೋಕೆ ಮುಂಚೆ ಅದನ್ನು ಮನೆಯವರೆಲ್ಲಾ ಅಥವಾ ಹಿರಿಯರಾಗಲೀ ಭಕ್ತಿಯಿಂದ ಸೇವಿಸಿ..
೧೧. ದೇವರ ಪೂಜೆ ಮಾಡೋವಾಗ ಆಕಳಿಕೆ ,ಕೋಪ, ಇವೆಲ್ಲದರಿಂದ ದೂರ ಇರಿ, ಅನಗತ್ಯ ಚಟುವಟಿಕೆಗಳು ಬೇಡ..
೧೨. ಸಂಧ್ಯಾವಂದನೆ ಮತ್ತು ಸ್ತ್ರೀಯರ ತುಳಸೀ ಪೂಜೆ ಇಲ್ಲದಿದ್ದರೆ ಯಾವ ಪೂಜೆಯೂ ಫಲ ಕೊಡುವುದಿಲ್ಲ..
೧೩. ದೇವರ ಪೂಜೆಯ ಸಮಯದಲ್ಲಿ ಪುರುಷರು ಮೇಲುಹೊದಿಕೆ ಅಂದರೆ ಶಲ್ಯವನ್ನು ಧರಿಸಿರಲೇಬೇಕು..
ಇಲ್ಲದಿದ್ದರೆ ಪೂಜಾ ಫಲ ರಾಕ್ಷಸರ ಪಾಲಾಗುವುದು..ಬರೀ ಮೈಯಲ್ಲಿ ಕುಳಿತು ಪೂಜೆ ಮಾಡುವುದು, ಊಟ ಮಾಡುವುದು ಒಳಿತಲ್ಲ..
೧೪. ಹಣೆಯಲ್ಲಿ ಕುಂಕುಮ, ಗಂಧ, ಅಥವಾ ಭಸ್ಮ .ಇತ್ಯಾದಿ ಯಾವುದದಾರೂ ಧರಿಸದೇ ಪೂಜೆ ಮಾಡಬಾರದು..
ಧರಿಸಿಯೇ ಪೂಜೆ ಮಾಡಬೇಕು, ಇಲ್ಲದಿದ್ದರೆ ಪೂಜಾಫಲ ನಶಿಸುವುದು..
೧೫. ದೇವರ ಪೂಜೆಗೆ "ಹಸಿಯಾದ ಹಾಲನ್ನು ಮಾತ್ರ ಬಳಸಿ..
೧೬. ದೇವರ ನೈವೇದ್ಯ ಮಾಡೋವಾಗ ವೀಳ್ಯದೆಲೆ, ಅಡಿಕೆ ತಾಂಬೂಲ ಇಲ್ಲದ ನೈವೇದ್ಯ ಫಲ ಕೊಡುವುದಿಲ್ಲ..
ನೈವೇದ್ಯ ಮಾಡೋವಾಗ "ತುಳಸೀಪತ್ರೆಯನ್ನು" ಬಳಸಬೇಕು..
೧೭. ದೇವರ ಪೂಜೆಗಳು ಸಂಕಲ್ಪ ಇಲ್ಲದೇ ಮಾಡಬೇಡಿ, ಸಂಕಲ್ಪ ಇದ್ದರೆ ನಿಮ್ಮ ಪ್ರಾರ್ಥನೆಗಳು ಬೇಗ ಈಡೇರುತ್ತವೆ..
೧೮. ದೇವರ ಮನೆಯಲ್ಲಿ ಚಿಕ್ಕದೀಪಗಳನ್ನು ಜೋಡಿಸಿ ಇಡಿ, ದೊಡ್ಡ ದೀಪಗಳಾಗಿದ್ದರೆ ಎಡಗಡೆ ಬಲಗಡೆ ಇಡಿ..
೧೯. ಗಣಪತಿ ಪೂಜೆ, ಮನೆದೇವರ ಪೂಜೆ, ದೇವಿ ಪೂಜೆಯಿಂದ ಮಾತ್ರ ಪೂರ್ಣ ಪೂಜಾಫಲ ದೊರೆಯವುದು..
ದೇವಿಯು ಎಲ್ಲಾ ದೇವರುಗಳ ತಾಯಿಯಾದ್ದರಿಂದ ಅಮ್ಮನವರನ್ನು ಪೂಜಿಸಿದರೇ ಮನೆಗೆ ನಮಗೆ ರಕ್ಷಣೆ..
ಮನೆದೇವರ ಪೂಜೆ ಇಲ್ಲದಿದ್ದರೆ ಯಾವ ದೇವರಗಳೂ ನಿಮ್ಮ ಮನೆಯನ್ನು ರಕ್ಷಿಸುವುದಿಲ್ಲ, ಎಂಥಾ ಕಷ್ಟಬಂದರೂ ನಮ್ಮ ಮನೆಯನ್ನು ನಮ್ಮನ್ನು ರಕ್ಷಿಸುವುದು "ಮನೆದೇವರೇ.."!
೨೦. ಮನೆಯ ಹೊಸ್ತಿಲನ್ನು ಪೊರಕೆಯಿಂದ ಗುಡಿಸಬೇಡಿ, ಹೊಸ್ತಿಲಲ್ಲಿ "ಮಹಾಲಕ್ಷ್ಮೀ" ಸಾನಿಧ್ಯ ಇರುತ್ತದೆ..
೨೧. "ಶ್ರೀ ಚಕ್ರ" , ಬಲಮುರಿ ಶಂಖ, ಬಲಮುರಿ ಗಣೇಶ, ಸಾಲಿಗ್ರಾಮಗಳು, ಎರಡೂ ಪಾದ ಕಾಣಿಸೋ ಮಹಾಲಕ್ಷ್ಮೀ .. ಇತ್ಯಾದಿ ಈ ದೇವರುಗಳೆಲ್ಲಾ "ಅಷ್ಟೈಶ್ವರ್ಯಗಳನ್ನು ಪ್ರಧಾನಿಸೋ ದೇವರುಗಳು, ಈ ದೇವರುಗಳ ಪೂಜೆ ತುಂಬಾ ವಿಶೇಷವಾಗಿರುತ್ತದೆ..
https://chat.whatsapp.com/GxE1TOKoqedCln5XUwZEcM?mode=gi_t
Thursday, February 5, 2026
Here is beautifully AI (Artificial Intelligence) created DASHAVATAARA, Mangala song
ಮಂಗಳಂ ಜಯ ಮಂಗಳಂ || ಪ ||
ಚಲಿಸುವ ಜಲದಲ್ಲಿ ಮತ್ಸ್ಯನಿಗೆ
ಧರೆಯ ಬೆನ್ನಲಿ ಪೊತ್ತ ಕೂರ್ಮನಿಗೆ
ಧರೆಯನುದ್ಧರಿಸಿದ ವರಾಹಾವತಾರಗೆ
ತರಳನ್ನ ಕಾಯ್ದಂಥ ನರಸಿಂಹಗೆ || 1 ||
ಭೂಮಿಯ ದಾನವ ಬೇಡಿದವಗೆ
ಆ ಮಹಾಕ್ಷತ್ರಿಯರ ಗೆಲಿದವಗೆ
ರಾಮಚಂದ್ರ ದಶರಥ ಸುತನಿಗೆ
ಸತ್ಯಭಾಮೆಯರಸ ಶ್ರೀಕೃಷ್ಣಗೆ || ೨ ||
ಬೆತ್ತಲೆ ನಿಂತ ಬೌದ್ಧನಿಗೆ
ಉತ್ತಮ ಹಯವೇರಿದ ಕಲ್ಕಿಗೆ
ಹತ್ತವತಾರದಿ ಭಕ್ತರ ಸಲಹಿದ
ಶಕ್ತ ಶ್ರೀ ಪುರಂದರ ವಿಠಲನಿಗೆ || ೩
ಭೀಷ್ಮಾಷ್ಟಮಿ ಅಂದರೆ ಅಂದೇ ವಿಷ್ಣು ಸಹಸ್ರನಾಮ ಜಯಂತಿ ಅದಕ್ಕಾಗಿ ಈ ಪೋಸ್ಟ್
ಶ್ರೀವಿಷ್ಣು ಸಹಸ್ರನಾಮದ ಮಹತ್ವ:
ಸರ್ವಶ್ರೇಷ್ಠವಾದ ಶ್ರೀ ವಿಷ್ಣು ಸಹಸ್ರನಾಮ
೧. ವಿಷ್ಣು ಸ್ವತಃ ತನ್ನ ಹೆಸರಿನ ಅತೀಂದ್ರಿಯ ಧ್ವನಿಯಲ್ಲಿ ಸಂಪೂರ್ಣವಾಗಿ ಅಸ್ತಿತ್ವದಲ್ಲಿರುತ್ತಾನೆ. ಹಾಗಾಗಿ ವಿಷ್ಣುಸಹಸ್ರನಾಮವನ್ನು ಹೆಚ್ಚು ಹೆಚ್ಚು ಕಾಲ ಪಠಣಮಾಡಿದರೆ ಒಳ್ಳೆಯದು.
೨. ವಿಷ್ಣು ಸಹಸ್ರನಾಮದಲ್ಲಿ ಎಲ್ಲ ವೈದಿಕ ಮಂತ್ರಗಳನ್ನು ಸೇರಿಸಲಾಗುತ್ತದೆ. ಆದ್ದರಿಂದ ಈ ಮಂತ್ರವನ್ನು ಪಠಿಸುವ ಮೂಲಕ ಹೇಳುವವರಿಗೆ ಅಷ್ಟೇ ಅಲ್ಲ ಕೇಳುವವರು ಕೂಡ ಪ್ರಯೋಜನ ಪಡೆಯುತ್ತೀರಿ
೩. ವಿಷ್ಣುಸಹಸ್ರನಾಮ ಪಾರಾಯಣಕ್ಕೂ ಭೇದವೇನೂ ಇರುವದಿಲ್ಲ. ಹಾಗೆ ಪಠಣಕ್ಕಾಗಿ ಯಾವುದೇ ಕಠಿಣ ಮತ್ತು ವೇಗದ ನಿಯಮಗಳಿಲ್ಲ. ಯಾವುದೇ ಸಂದರ್ಭಗಳಲ್ಲಿ, ಯಾವುದೇ ಸಮಯದಲ್ಲಿ ನೀವು ಎಲ್ಲಿಯಾದರೂ ಪಠಿಸಬಹುದು.
೪. ವಿಷ್ಣು ಸಹಸ್ರನಾಮವನ್ನು ಪಠಿಸುವುದರಿಂದ ನಿಮ್ಮ ಹಿಂದಿನ ಜನ್ಮದ ಕರ್ಮದ ಪ್ರತಿಕ್ರಿಯೆಗಳಿಂದ ನಿಮ್ಮನ್ನು ಮುಕ್ತಗೊಳಿಸುತ್ತದೆ.
೫. ವಿಷ್ಣು ಸಹಸ್ರನಾಮ ಪಠಿಸುವ ಭಕ್ತರಿಗೆ ಎಂದೂ ಭಯವಿಲ್ಲ. ಇದರಿಂದ ವಿಶೇಷ ಕಾಂತಿ, ವರ್ಚಸ್ಸು, ಆತ್ಮವಿಶ್ವಾಸ, ಮನೋಬಲ, ದೇಹಬಲ ಇಂದ್ರಿಯಬಲ ಹೆಚ್ಚಾಗಿ ಉತ್ತಮ ಆರೋಗ್ಯವನ್ನು ಪಡೆಯಬಹುದು.
೬. ವಿಷ್ಣುಸಹಸ್ರನಾಮವನ್ನು ಪ್ರತಿನಿತ್ಯ ಪಾರಾಯಣ ಮಾಡಿದರೆ ಜೀವನದಲ್ಲಿ ಬರುವ ಸಂಕಷ್ಟಗಳು ಪರಿಹಾರವಾಗುತ್ತವೆ.
೭. ಶುದ್ಧಮನದಿಂದ ವಿಷ್ಣುಸಹಸ್ರನಾಮವನ್ನು ಪಠಿಸಿದರೆ ಆಧ್ಯಾತ್ಮಿಕ, ಆಧಿದೈವಿಕ ಹಾಗೂ ಆಧಿಭೌತಿಕ ಪೀಡೆಗಳಿಗೆ ಪರಿಹಾರ ದೊರೆಯುತ್ತದೆ.
೮. ವಿಷ್ಣುಸಹಸ್ರನಾಮ ಅಂದರೆ ಮಹಾವಿಷ್ಣುವಿನ ಸಹಸ್ರನಾಮ ಪಠನ ಇದರಲ್ಲಿ ಅಲೌಕಿಕ ಶಕ್ತಿ ಇರುವುದನ್ನು ಅನೇಕ ಸಾಧಕರು ಕಂಡಿದ್ದಾರೆ, ಅನುಭವಿಸಿದ್ದಾರೆ. ವಿಷ್ಣುಸಹಸ್ರನಾಮ ಪಾರಾಯಣದಿಂದ ಕ್ಯಾನ್ಸೆರ್ ನಂತಹ ಭಯಂಕರ ಖಾಯಿಲೆಯಿಂದ ಹಿಡಿದು ಇನ್ನು ಇತರೆ ಕಾಯಿಲೆಗಳು ಕೂಡ ವಾಸಿಯಾಗುತ್ತವೆ.
೯. ಮನೆಯಲ್ಲಿ ಸಾಮೂಹಿಕ ಪಾರಾಯಣ ಪಠಿಸಿದರೆ ಮನೆಯ ವಾತವರಣವೇ ಬದಲಾಗುತ್ತದೆ. ಮನೆಯವ ಮೈಯಲ್ಲಿ ಮನಸ್ಸಲ್ಲಿ ಆಧ್ಯಾತ್ಮದ ಶಕ್ತಿಸಂಚಾರವಾದಂತಹ ಅನುಭವವಾಗುತ್ತದೆ. ಸಾಮೂಹಿಕ ಪಾರಾಯಣದಲ್ಲಿ ಅಂಥ ಒಂದು ವಿಶೇಷ ಶಕ್ತಿ ಇದೆ.
೧೦. ವಿಷ್ಣುಸಹಸ್ರನಾಮಕ್ಕೆ ಗಂಡಸು-ಹೆಂಗಸು-ಶೂದ್ರ-ಬ್ರಾಹ್ಮಣ ಎನ್ನುವ ಭೇದವಿಲ್ಲ. ಅದು ಎಲ್ಲಾ ವರ್ಣಾಶ್ರಮದವರಿಗೆ ಭಗವಂತ ನೀಡಿದ ಪಂಚಮ ವೇದ ಇದಾಗಿದೆ. ಹಾಗಾಗಿ ಈ ಸ್ತೋತ್ರವನ್ನು ಎಲ್ಲ ವರ್ಗದವರು ಮತ್ತು ಎಲ್ಲವಯಸ್ಸಿನವರು ಪಠಿಸಬಹುದಾಗಿದೆ.
11. ಧಾರ್ಮಿಕ ಶ್ರದ್ಧಾ ಕೇಂದ್ರಗಳಿಗೆ ಭೇಟಿ ನೀಡಿ ನಾವಾಗಿಯೇ ಪರಣ ಮಾಡಿ ಬರಬಹುದು . ಸಮಯ ವಿಲ್ಲದವರು ತಮ್ಮ ತಮ್ಮ ಮನೆಯಲ್ಲಿಯೇ ನಿತ್ಯ ಪಠಣ ಮಾಡಿದರೆ ನಮಗೂ ಹಾಗು ನಮ್ಮ ಸುತ್ತ ಮುತ್ತಲಿನ ಪರಿಸರಕ್ಕೂ ವಿಶೇಷ ಶಕ್ತಿ ಪ್ರಾಪ್ತಿಯಾಗುವುದು.
12. *ಪ್ರಾಕೃತಿಕ ಸಮತೋಲನಕ್ಕಾಗಿ,
ಗ್ರಾಮದ ಶಾಂತಿಗಾಗಿ,
ಕುಟುಂಬ ರಕ್ಷಣೆಗಾಗಿ, ನಮ್ಮೆಲ್ಲರ ಉನ್ನತಿಗಾಗಿ
ನಿತ್ಯ ಪಠಿಸೋಣ*
ಈ ನೂರು ವರ್ಷಗಳಲ್ಲಿ 36 ಸಾವಿರ ಹಗಲು ಮತ್ತು 36 ಸಾವಿರ ರಾತ್ರಿಗಳಿವೆ. ಮನುಷ್ಯ ದೇಹ 72 ಸಾವಿರ ನಾಡಿಗಳಿಂದಾಗಿದೆ. ಈ ನಾಡಿಗಳಲ್ಲಿ 36 ಸಾವಿರ ನಾಡಿಗಳು ಎಡ ಭಾಗದಲ್ಲೂ ಮತ್ತು 36 ಸಾವಿರ ನಾಡಿಗಳು ನಮ್ಮಬಲಭಾಗಲ್ಲೂ ಇರುತ್ತವೆ. ಈ ನಾಡಿಗಳಲ್ಲಿ ರಕ್ತ ಸಂಚಾರ ಸರಿಯಾಗಿ ಆದರೆ ಮನುಷ್ಯನಿಗೆ ಯಾವುದೇ ರೋಗ ಬರಲಾರದು.
ವೇದಗಳ ಸಾರವಾದ ಬ್ರಹತೀಸಹಸ್ರದಲ್ಲಿ ಒಂದು ಸಾವಿರ ಮಂತ್ರಗಳಿವೆ, ಹಾಗೂ ಈ ಒಂದು ಸಾವಿರ ಮಂತ್ರದಲ್ಲಿ 72 ,000 ಅಕ್ಷರಗಳಿವೆ. ಈ ಒಂದು ಸಾವಿರ ಮಂತ್ರಗಳ ಸಾರವನ್ನು ಒಂದು ಸಾವಿರ ನಾಮಗಳ ರೂಪದಲ್ಲಿ ವೇದವ್ಯಾಸರು ನಮಗೆ ಕರುಣಿಸಿದ್ದಾರೆ..- ಶ್ರೀ ವಿಷ್ಣು ಸಹಸ್ರ ನಾಮ ..
ವಿಷ್ಣುಸಹಸ್ರನಾಮವನ್ನು ಪಠಿಸುವುದರಿಂದ ನಾವು ಬ್ರಹತೀಸಹಸ್ರದ 72 ಸಾವಿರ ಅಕ್ಷರಗಳನ್ನು ಜಪಿಸಿದಂತಾಗುತ್ತದೆ. ಇದರಿಂದ ನಮ್ಮ 72 ಸಾವಿರ ನಾಡಿಗಳಲ್ಲಿ ಪೂರ್ಣಪ್ರಮಾಣದ ರಕ್ತ ಸಂಚಾರವಾಗುತ್ತದೆ. ಆದ್ದರಿಂದ ವಿಷ್ಣುಸಹಸ್ರನಾಮ ಭವರೋಗ ಪರಿಹಾರಕ. ಆದರೆ ಅರ್ಥ ತಿಳಿದು ಹೃದಯತುಂಬಿ ಭಕ್ತಿಯಿಂದ ಪಾರಾಯಣ ಮಾಡುವುದು ಮುಖ್ಯ.
ವೇದಗಳಿಗೆ ಕನಿಷ್ಠ 3 ಅರ್ಥಗಳಿವೆ, ಮಹಾಭಾರತ ಶ್ಲೋಕಗಳಿಗೆ ಕನಿಷ್ಠ 10 ಅರ್ಥಗಳಿದ್ದರೆ, ಶ್ರೀ ವಿಷ್ಣು ಸಹಸ್ರನಾಮದ ಪ್ರತೀ ನಾಮಕ್ಕೆ ಕನಿಷ್ಠ ನೂರು ಅರ್ಥಗಳಿವೆ !! ಈ ಕಾರಣಕ್ಕಾಗಿಯೇ ಪ್ರಾಚೀನರು ಭಗವದ್ಗೀತೆ ಮತ್ತು ಶ್ರೀ ವಿಷ್ಣುಸಹಸ್ರನಾಮವನ್ನು ಅತ್ಯಮೂಲ್ಯ ಗ್ರಂಥವಾಗಿ ಪರಿಗಣಿಸಿದ್ದಾರೆ. ವೇದಗಳ ಸಾರವಾದ ಬ್ರಹತೀಸಹಸ್ರದಲ್ಲಿ ಒಂದು ಸಾವಿರ ಮಂತ್ರಗಳಿವೆ, ಹಾಗೂ ಈ ಒಂದು ಸಾವಿರ ಮಂತ್ರದಲ್ಲಿ 72 ,000 ಅಕ್ಷರಗಳಿವೆ. ಈ ಒಂದು ಸಾವಿರ ಮಂತ್ರಗಳ ಸಾರವನ್ನು ಒಂದು ಸಾವಿರ ನಾಮಗಳ ರೂಪದಲ್ಲಿ ವೇದವ್ಯಾಸರು(ಸಾಕ್ಷಾತ್ ಶ್ರೀಹರಿ) ನಮಗೆ ಕರುಣಿಸಿದ್ದಾರೆ
ಶ್ರೀ ವಿಷ್ಣು ಸಹಸ್ರನಾಮ ಮತ್ತು ಅದರ ಮಹತ್ವದ ಬಗ್ಗೆ ಹಿರಿಯರೊಬ್ಬರಿಂದ ಕೇಳಿ ತಿಳಿದ ವಿಚಾರ ....
ತಿರುಚ್ಚಿಯ ಶ್ರೀರಂಗನಾಥ ದೇವಸ್ಥಾನ , ಅಲ್ಲಿ ಬೆಳಗಿನ ಪೂಜೆ ಆದ ಬಳಿಕ ದೇವರಿಗೆ ಸಮರ್ಪಣೆ ಮಾಡಿದ ಪ್ರಸಾದವನ್ನು ನೆರೆದ ಭಕ್ತರಿಗೆ ಹಂಚುವುದು ವಾಡಿಕೆ .ಹಾಗೆ ಅದನ್ನು ಸ್ವಕರಿಸಲು ಭಕ್ತರೆಲ್ಲರೂ ಸರದಿಯ ಸಾಲಿನಲ್ಲಿ ಬಂದು ಭಕ್ತಿಯಿಂದ ಸ್ವೀಕರಿಸುತ್ತಿದ್ದಾಗ ಕಡು ಬಡವ ಹಿರಿಯರೊಬ್ಬರು ಸರದಿಯ ಸಾಲಿನಲ್ಲಿ ನಿಲ್ಲದೆ ಎಲ್ಲರನ್ನು ದೂಡಿ ಮುಂದೆಹೋಗಿ ನಿಲ್ಲುತ್ತಿದ್ದರು ಅಲ್ಲದೆ ಕೈಯಲ್ಲಿ ದೊಡ್ಡದೊಂದು ಪಾತ್ರೆಯನ್ನು ಹಿಡಿದು ಪ್ರಸಾದವನ್ನು ಕೇಳುತ್ತಿದ್ದರು. ನಾನು ಬಡವ ನನಗೆ 6 ಜನ ಮಕ್ಕಳಿದ್ದಾರೆ , ಇದು ಸಿಗದಿದ್ದರೆ ಅವರೆಲ್ಲ ನಿರಾಹಾರರಾಗ ಬೇಕಾಗುತ್ತದೆ ಎನ್ನುತ್ತಾ ಪ್ರಸಾದವನ್ನು ಕೇಳಿ ಪಡೆಯುತ್ತಿದ್ದರು. ಆದರೆ ಇದು ಪ್ರಸಾದ ಹಂಚುವ ದೇವಸ್ಥಾನದವರಿಗೆ ಮುಜುಗರ ತರುತ್ತಿತ್ತು, ಹಾಗಾಗಿ ಅವರು ನೇರವಾಗಿ ಶ್ರೀಪಾದ ರಾಮಾನುಜರ ಬಳಿ ದೂರು ಕೊಟ್ಟರು.
ಇದನ್ನು ಕೇಳಿದ ಶ್ರೀಪಾದ ರಾಮಾನುಜರು ಆ ಬಡವನನ್ನು ನೋಡಿ ವಿಚಾರ ತಿಳಿಯಲೆಂದು ಒಂದು ದಿನ ಪ್ರಸಾದ ಹಂಚುವಲ್ಲಿಗೆ ಬಂದು ಆ ಬಡವ ಹಿರಿಯರನ್ನು ಕಂಡು ಯಾಕೆ ಹೀಗೆ ಮಾಡುತ್ತೀರಿ ಎನ್ನಲು . ಆ ಬಡವ ಹಿರಿಯರು ಸ್ವಾಮಿ ನಾನು ಬಡವ ನನಗೆ 6 ಜನ ಸಣ್ಣಸಣ್ಣ ಮಕ್ಕಳಿದ್ದಾರೆ , ಹೊಟ್ಟೆಗೆ ಗತಿಯಿಲ್ಲ ಹಾಗಾಗಿ ನಾನು ಎಲ್ಲರನ್ನು ಹಿಂದೆಹಾಕಿ ಮುಂದೆನಿಂತು ಪಾತ್ರೆಯಲ್ಲಿ ಪ್ರಸಾದ ಕೇಳುತ್ತೇನೆ. ಸಾಲಿನಲ್ಲಿ ನಿಂತರೆ ಎಲ್ಲಿ ಪ್ರಸಾದ ಖಾಲಿಯಾಗುತ್ತದೆಯೋ ಅನ್ನುವ ತವಕ..
ವಿಚಾರ ತಿಳಿದ ಶ್ರೀಪಾದ ರಾಮಾನುಜರು ಆ ಹಿರಿಯರನ್ನು ನಿಮಗೆ ಶ್ರೀ ವಿಷ್ಣುಸಹಸ್ರನಾಮ ಹೇಳಲು ಬರುತ್ತದೆಯೋ ಅನ್ನಲು ಹಿರಿಯರು ನಾನು ಕಲಿತವನಲ್ಲ .. ಆದರೆ ಇಲ್ಲಿ ದೇವಸ್ಥಾನದಲ್ಲಿ ಅಲ್ಪ ಸ್ವಲ್ಪ ಕೇಳಿದ್ದೇನೆ.. ಶ್ರೀ ವಿಷ್ಣುಸಹಸ್ರನಾಮವನ್ನು...
ಹಾಗಾದರೆ ನಿನಗೆ ಬರುವಷ್ಟು ಹೇಳು ಅನ್ನಲು ಆತ ವಿಶ್ವಂ ವಿಷ್ಣುರ್ವಷಟ್ಕಾರೋ ಭೂತಭವ್ಯಭವತ್ಪ್ರಭುಃ |
ಭೂತಕೃದ್ಭೂತಭೃದ್ಭಾವೋ ... ಅನ್ನುತ್ತಲೇ ಶ್ರೀರಾಮಾನುಜರು ಅಂದರೆ ನಿನಗೆ ಶ್ರೀ ವಿಷ್ಣುವಿನ ಸಾವಿರ ಹೆಸರಿನಲ್ಲಿ ಆರು ಹೆಸರು ಮಾತ್ರ ಬರುತ್ತದೆ .. ಹೌದು ನಾನು ಕಲಿತವನಲ್ಲ... ಆಗ ಶ್ರೀಪಾದರು ಅದಕ್ಕೇನು ಬೇಸರವಿಲ್ಲ ಅದರಲ್ಲಿ ಬರುವ ಆರನೆಯ ಹೆಸರು ಭೂತ-ಭೃತ್: ಅಂದರೆ ಎಲ್ಲಾ ಜೀವಿಗಳನ್ನು ಪೋಷಿಸುವವನು ಎಂದು , ನೀನು ಶ್ರದ್ದೆ ಮತ್ತು ಸಂಪೂರ್ಣ ಭಕ್ತಿಯಿಂದ ಆ ಆರನೆಯ ಹೆಸರನ್ನು ಜಪಮಾಡು ಅದರಿಂದ ನಿನ್ನ ಕಷ್ಟ ಪರಿಹಾರವಾಗುತ್ತದೆ ಎಂದು ಆತನಿಗೆ ಶ್ರೀ ಭೂತ-ಭೃತ್ಯಯೇ ನಮಃ ಅನ್ನುವಂತೆ ಉಪದೇಶಿಸಿದರು..
ಕೆಲದಿನಗಳ ಬಳಿಕ ಶ್ರೀಪಾದರು ಪ್ರಸಾದ ಹಂಚುವವರನ್ನು ಆ ಹಿರಿಯ ವಿಚಾರದಲ್ಲಿ ಕೇಳಿದಾಗ ಅವರು ಸ್ವಾಮಿ ಅವರು ಈಗ ಬರುತ್ತಿಲ್ಲ . ಏನಾಗಿದೆ ಅಂತ ಗೊತ್ತಿಲ್ಲ. ಬಹಳಷ್ಟು ಸಮಯ ವಾಯಿತು ಅವರನ್ನು ನೋಡದೆ.. ಆದರೆ ಒಂದು ವಿಚಾರ ದೇವರಿಗೆ ಸಮರ್ಪಣೆ ಮಾಡಿದ ಪ್ರಸಾದ ಪೂಜೆಯ ಬಳಿಕ ನೋಡಿದರೆ ಯಾರೋ ತೆಗೆದಂತೆ ಕಾಣುತ್ತದೆ . ಆ ಹಿರಿಯರು ಹೇಗೋ ಬಂದು ಅದನ್ನು ತೆಗೆಯುತ್ತಾರಾ ಏನೋ ಅನ್ನುವ ಸಂಶಯ ವ್ಯಕ್ತ ಪಡಿಸಿದರು. ಶ್ರೀಪಾದರು ಒಂದು ದಿನ ನೋಡಲು ಪ್ರಸಾದ ಪೂಜೆಯ ಬಳಿಕ ಕಮ್ಮಿಯಾದದ್ದನ್ನು ಕಂಡು...
ಶ್ರೀಪಾದರು ಆ ಹಿರಿಯರನ್ನು ಕಾಣಲು ನದಿಯನ್ನು ದಾಟಿ ಹಿರಿಯರಿದ್ದ ಸಣ್ಣ ಗುಡಿಸಲಿನತ್ತ ಹೋದಾಗ ಹಿರಿಯರು ಶ್ರೀಪಾದರ ಕಾಲಿಗೆ ನಮಸ್ಕರಿಸಿ ತಾವು ಮಹಾನ್ ಮಹಿಮರು ನಮ್ಮ ಕಷ್ಟಗಳೆಲ್ಲ ಪರಿಹಾರವಾಯಿತು. ಅಲ್ಲಿಗೆ ಪ್ರಸಾದಕ್ಕೆ ಬರಬೇಕಾಗಿಲ್ಲ ದಿನಾ ನೀವು ಕಳುಹಿಸಿದ ಹುಡುಗ ಬಂದು ನಮಗೆ ಬೇಕಾದಷ್ಟು ಪ್ರಸಾದವನ್ನು ಕೊಟ್ಟು ಹೋಗುತ್ತಿದ್ದಾನೆ . ನಿಮಗೆ ತುಂಬುದು ಹೃದಯದ ಧನ್ಯವಾದಗಳು ಅನ್ನುತ್ತಲೇ ಶ್ರೀಪಾದರಿಗೆ ಅರಿವಾಯಿತು ಇದೆಲ್ಲ ಶ್ರೀ ರಂಗನಾಥನ ಮಹಿಮೆ ....
ಭೂತ-ಭೃತ್: ಎಲ್ಲಾ ಜೀವಿಗಳನ್ನು ಪೋಷಿಸುವವನು ಅವನೇ ಹಾಗಿರುವಾಗ ಭಕ್ತಿಯಿಂದ ಪೂಜಿಸಿದ ಜಪಮಾಡಿದ ಹಿರಿಯರನ್ನು ಹೇಗೆಬಿಟ್ಟುಹೋಗುತ್ತಾನೆ ಎಂದು ಮನದಲ್ಲಿಯೇ ನೆನೆಸಿದರು. ಅಲ್ಲದೆ ಭಗವದ್ಗೀತೆಯಲ್ಲಿ ಶ್ರೀ ಕೃಷ್ಣ ಹೇಳಿದ ಮಾತು ಮತ್ತೆ ನೆನಪಾಯಿತು. ನಚ ಮಸ್ತಾನಿ ಭೂತಾನಿ .. ಪಶ್ಯಾಮಿ ಯೋಗ ಮಸ್ವರಂ..
ಶ್ರೀ ವಿಷ್ಣುಸಹಸ್ರನಾಮದ ಪ್ರತಿಯೊಂದು ಹೆಸರು ಅದರದೇ ಆದ ಮಹತ್ವವನ್ನು ಹೊಂದಿದೆ ಅದನ್ನು ಅರಿತು ಪಠಿಸಿದರೆ ಒಳ್ಳೆಯದು...
▬▬▬ஜ۩۞۩ஜ▬▬▬*▬▬▬ஜ۩۞۩ஜ▬▬
ಸರ್ವೇಷಾಂ ಸಮಸ್ತ ಸನ್ಮಂಗಳಾನಿ ಭವಂತು
'ಸರ್ವೇ ಜನಾಃ ಸುಖಿನೋ ಭವಂತು'
ಶುಭವಾಗಲಿ ಧನ್ಯವಾದಗಳು ಶ್ರೀಮತಿ ನಿರ್ಮಲ ರಾಜೇಶ್ @everyone
ಧಮೋ೯ ರಕ್ಷತಿ ರಕ್ಷಿತ: ಕೃಷ್ಣಾರ್ಪಣಮಸ್ತು*
▬▬▬ஜ۩۞۩ஜ▬▬▬▬▬▬ஜ۩۞۩ஜ▬▬▬
Sunday, June 15, 2025
WhatsApp Forwarded.
A nice story about Guru Vashista coming to Ram's Durbar and Hanuman didn't recognoze and honour him.
Moral of the story- "RAAM NAAM IS MORE PRECIOUS THAN RAAM"
ರಾಮ ಮಂತ್ರವ ಜಾಪಿಸೋ ಹೇ ಮನುಜಾ...... ಪುರಂದರದಾಸರ ಹಾಡು....
Posted 15/6/2025
7/11/2024,
WahtsApp forwarded.
ಕನ್ನಡದಲ್ಲಿ ಗಾಯತ್ರಿ ಮಂತ್ರದ ಸಂಪೂರ್ಣ ಅರ್ಥ ನಿಮಗಾಗ
ಓಂ ಭೂರ್ಭುವಸ್ವಃ ತತ್ಸವಿತುರ್ವರೇಣ್ಯಂ ಭರ್ಗೋದೇವಸ್ಯ ಧೀಮಹಿ ಧಿಯೋ ಯೋನಃ ಪ್ರಚೋದಯಾತ್||
ಬೆಳಕಿನ ಪ್ರತೀಕವಾದ ಸೂರ್ಯದೇವನಿಗೆ ಸಾಷ್ಟಾಂಗ ನಮಸ್ಕಾರ ಮಾಡುತ್ತಾ “ನಮ್ಮ ಬುದ್ಧಿ ಮತ್ತು ಕರ್ಮಗಳು ಸದಾ ಉತ್ತಮ ಮಾರ್ಗದಲ್ಲಿ ನೆಲೆಗೊಳ್ಳುವಂತೆ ಪ್ರಚೋದಿಸು’ ಎಂದು ಪ್ರಾರ್ಥಿಸುವ ಮಹಾಮಂತ್ರವೇ ಗಾಯತ್ರಿಮಂತ್ರ.
ಒಟ್ಟು 24 ಅಕ್ಷರಗಳನ್ನು ಒಳಗೊಂಡಿರುವ ಗಾಯತ್ರೀ ಮಂತ್ರವನ್ನು ನಿತ್ಯ ಜಪಿಸುವುದರಿಂದ ದೇಹದ ಆರಿಸಿದ 24 ಗ್ರಂಥಿಗಳನ್ನು ಬಲಗೊಳಿಸುತ್ತದೆ.
ಪವಿತ್ರ ಗಾಯತ್ರಿ ಉಚ್ಚಾರದ ಮೊದಲಿಗೆ ಭೂಃ ಭುವಃ ಸ್ವಃ ಎಂಬ ವ್ಯಾಹೃತಿಗಳು ಚೈತನ್ಯರೂಪಿ ಆನಂದದ ಪ್ರತೀಕಗಳು. ಭೂಃ ಎಂದರೆ ಅಗ್ನಿ, ಭುವಃ ಎಂದರೆ ವಾಯು, ಸ್ವಃ ಎಂದರೆ ಆದಿತ್ಯ. ಈ ಮೂವರೂ ಕೂಡಿಕೊಂಡ ರೂಪ ಭಗವಾನ್ ಸೂರ್ಯನದು. ಸರ್ವಶಕ್ತಿರೂಪನ ಭಕ್ತಿಯುತ ಪೂಜೆಗೆ ಇದು ನಾಂದಿ.
ಯುಗಯುಗಗಳಿಂದಲೂ ಈ ಮಂತ್ರವನ್ನು ಅಗ್ನಿಸಮ್ಮುಖದಲ್ಲೇ ಸ್ವೀಕರಿಸುತ್ತ ಬಂದ ವಾಡಿಕೆ ನಮ್ಮದು. ಅಗ್ನಿಸಮ್ಮುಖದಲ್ಲೇ ಸ್ವೀಕರಿಸಲಾಗುವ ಏಕ ಮಾತ್ರ ಮಂತ್ರ ಇದು. ಇದರಲ್ಲಿ ಗಾಯತ್ರಿ ಪ್ರತಿಪಾದ್ಯವಾದ 24 ಭಗವಂತನ ರೂಪಗಳಿವೆ.ಕೇಶವ, ನಾರಾಯಣ, ಮಾಧವ, ಗೋವಿಂದ, ವಿಷ್ಣು , ಮಧುಸೂದನ, ತ್ರಿವಿಕ್ರಮ, ವಾಮನ, ಶ್ರೀಧರ, ಹೃಷೀಕೇಶ, ಪದ್ಮನಾಭ, ದಾಮೋದರ, ಸಂಕರ್ಷಣ, ವಾಸುದೇವ, ಪ್ರದ್ಯುಮ್ನ , ಅನಿರುದ್ಧ , ಪುರುಷೋತ್ತಮ, ಅಧೋಕ್ಷಜ, ನರಸಿಂಹ, ಅಚ್ಯುತ, ಜನಾರ್ದನ, ಉಪೇಂದ್ರ, ಹರಿ , ಕೃಷ್ಣ….
ಅಷ್ಟೇ ಅಲ್ಲ ಗಾಯತ್ರಿಯಲ್ಲಿ ಹತ್ತು ಶಬ್ದಗಳಿವೆ ಅವು ವಿಷ್ಣುವಿನ 10 ಸ್ವರೂಪಗಳು…ವಿಷ್ಣುವಿನ ಹತ್ತು ಅವತಾರಗಳನ್ನು ಸೂಚಿಸುತ್ತದೆ.
ತತ್ – ಅಂದರೆ ಮತ್ಸ್ಯಾವತಾರ“ತತ್” ಭಗವಂತನ ಮತ್ಸ್ಯಾವತಾರವನ್ನು ಹೇಳುವ ಶಬ್ದ. ತತ ಅಂದರೆ ವಿಸ್ತಾರಗೊಳ್ಳುವುದು. ಹೀಗೆ ಮಾನವನಾದ ವೈವಸ್ವತ ಮನುವನ್ನು ಒಂದು ಭಾರಿ ಪ್ರಳಯದಿಂದ ಕಾಪಾಡಿದ ರೂಪವೇ ಮತ್ಸ್ಯಾವತಾರ.
ಸವಿತುಃ – ಅಂದರೆ ಕೂರ್ಮಾವತಾರ ಆಮೆಯ ರೂಪದಲ್ಲಿ ಅವತರಿಸಿ ದೇವತೆಗಳು ತಾವು ಕಳೆದುಕೊಂಡ ಅಮರತ್ವ ಹಾಗೂ ದೈವಿಕ ಶಕ್ತಿ, ಪ್ರಭಾವಗಳನ್ನು ಮರು ಸಿಗುವಂತೆ ಮಾಡಿಕೊಟ್ಟ ರೂಪ “ಕೂರ್ಮಾವತಾರ”….
ವರೇಣ್ಯಂ – ಅಂದರೆ ವರಾಹಾವತಾರ ವರೇಣ್ಯ, ವರಾಹ ಎರಡೂ ಪರ್ಯಾಯ ಶಬ್ದಗಳು.. “ಕಪಿರ್ವರಾಹ ಶ್ರೇಷ್ಠಶ್ಚ” ವರಾಹ ಅಂದರೆ ಶ್ರೇಷ್ಠವಾದದ್ದು. ದೈತ್ಯ ಹಿರಣ್ಯಾಕ್ಷನು ಭೂಮಿಯನ್ನು ಕದ್ದು ಆಕೆಯನ್ನು ಆದಿಸ್ವರೂಪದ ನೀರಿನಲ್ಲಿ ಬಚ್ಚಿಟ್ಟಾಗ, ವಿಷ್ಣು ಆಕೆಯನ್ನು ಕಾಪಾಡಲು ವರಾಹನಾಗಿ ಕಾಣಿಸಿಕೊಂಡು ರಾಕ್ಷಸ ಹಿರಣ್ಯಾಕ್ಷನನ್ನ ಸಂಹಾರ ಮಾಡುತ್ತಾನೆ…
ಭರ್ಗಃ – ಅಂದರೆ ನರಸಿಂಹಾವತಾರ, ಶತ್ರುಗಳನ್ನು ನಾಶಮಾಡಿದ ಉಗ್ರರೂಪ… ಭಕ್ತ ಪ್ರಹ್ಲಾದನ ರಕ್ಷಣೆ ಮತ್ತು ಹಿರಣ್ಯಕಶ್ಯಪೂವಿನ ನಾಶಕ್ಕಾಗಿ ಶ್ರೀ ವಿಷ್ಣು ನರಸಿಂಹ ಅವತಾರ ತಾಳುತ್ತಾನೆ. ದುಷ್ಟರನ್ನು, ದೋಷಗಳನ್ನು, ಅಜ್ಞಾನವನ್ನು ನಾಶಮಾಡಿ ಅದರ ಮೂಲಕ “ಭ” ರತಿ ಜ್ಞಾನರೂಪ ಇದಾಗಿದೆ…
ದೇವಸ್ಯ – ಅಂದರೆ ವಾಮನಾವತಾರಬಲಿಯ ಸಂಹಾರಕ್ಕಾಗಿ ವಿಷ್ಣು ಎತ್ತಿದ ಅವತಾರ ವಾಮನಾವತಾರ. ಬಲಿಯ ಜೊತೆಗೆ ಮೂರು ಹೆಜ್ಜೆಗಳ ವ್ಯವಹಾರ ಮಾಡಿದ ರೂಪ ಇದಾಗಿದೆ….
ಧೀಮಹಿ – ಅಂದರೆ ಪರಷುರಾಮಾವತಾರ ‘ಮಹಿ’ ಅಂದರೆ ಭೂಮಿ. ದಿನು ಅಂದರೆ ಪುಷ್ಟೌ. ಭೂಮಿಯ ಮೇಲೆ ಇಪ್ಪತ್ತೊಂದು ಬಾರಿ ದುಷ್ಟ ಕ್ಷತ್ರಿಯರ ಸಂಹಾರ ಮಾಡಿ ಭೂಮಿಗೆ ಸಂತೋಷವನ್ನು ಕೊಟ್ಟ ರೂಪವೇ “ಪರುಷರಾಮಾವತಾರ”…
ಧಿಯಃ – ಅಂದರೆ ರಾಮಾವತಾರ
“ಯಂ” ಅಂದರೆ ಜ್ಞಾನ ಸ್ವರೂಪರಾದಂತ ವಾಯುದೇವ ಅವನಿಗೆ “ದಿನೋತಿ” ಆನಂದವನ್ನು ಕೊಟ್ಟ ರೂಪ “ಧಿಯಃ” ಅಂದರೆ ರಾಮರೂಪ. ದುಷ್ಟ ಶಿಕ್ಷಕ ಶಿಷ್ಟ ರಕ್ಷಕನಾಗಿ ಅಯೋಧ್ಯೆಯ ಸೂರ್ಯವಂಶದ ದಶರಥ ನಂದನ ರಾಮ, ಆತನ ಮಡದಿ ಸೀತೆ ಹಾಗೂ ಸೀತೆಯ ಅಪಹರಣ ಮಾಡಿದ ರಾವಣನ ಸಂಹಾರ ಮಾಡುತ್ತಾನೆ…
ಯಃ – ಅಂದರೆ ಕೃಷ್ಣಾವತಾರ “ಯ”ಕಾರ ವಾಚ್ಯನಾಗಿ , ಯಃ-ಜ್ಞಾನಾವತಾರ. ಒಟ್ಟು ನಾಲ್ಕು ಯೋಗಮಾರ್ಗಗಳಾದ ಭಕ್ತಿ, ಕರ್ಮ, ಧ್ಯಾನ ಮತ್ತು ಜ್ಞಾನ ಮಾರ್ಗಗಳನ್ನು ನೀಡಿ ಹಿಂದೂ ಚಿಂತನೆ ಮತ್ತು ವೈದಿಕ, ಅಧ್ಯಾತ್ಮಿಕ, ಯೋಗಿಕ ಹಾಗೂ ತಾಂತ್ರಿಕ ತತ್ವಶಾಸ್ತ್ರಗಳನ್ನು ಸಮಾಗಮವಾದ ಭಗವದ್ಗೀತೆಯ ಮೂಲಕ ಸಮಸ್ತ ವೇದಸಾರವನ್ನು ಆವಿಷ್ಕಾರ ಮಾಡಿದವ ಕೃಷ್ಣ. ಅದುವೇ “ಕೃಷ್ಣಾವತಾರ”.
ನಃ – ಅಂದರೆ ಬುದ್ಧಾವತಾರ, ನಃ ಅಂದರೆ ಬುದ್ಧ. ಚತುರಾರ್ಯ ಸತ್ಯಗಳಾದ ದುಃಖ, ದುಃಖದ ಹುಟ್ಟು, ದುಃಖದ ಅಡಗುವಿಕೆ, ಮತ್ತು ದುಃಖ ನಿವಾರಣೆಗೆ ಒಯ್ಯುವ ಅಷ್ಟಾಂಗಿಕ ಮಾರ್ಗವನ್ನು ಕಂಡು ಹಿಡಿದವ. ಕಲಿಯುಗದಲ್ಲಿ ಬುದ್ಧ ಅವತಾರದಲಿ ಶ್ರೀಮಾನ್ ಮಹಾವಿಷ್ಣುವು ಮನುಷ್ಯನಾಗಿ ಅವತರಿಸುತ್ತಾನೆ…
ಪ್ರಚೋದಯಾತ್ – ಅಂದರೆ ಕಲ್ಕ್ಯಾವತಾರ
ಶಿವಾರ್ಪಣಮಸ್ತು
(ಸದ್ವಿಚಾರ ಸಂಗ್ರಹ)
✍️ ನಿತಿನ್ ಶಾಮನೂರು
Wednesday, 6/11/2024
WahtsApp forwarded.
ದುರ್ಗಾದೇವಿಯ 10 ಕೈಗಳಲ್ಲಿರುವ 10 ಆಯುಧ
ದುರ್ಗಾದೇವಿಯ 10 ಕೈಗಳಲ್ಲಿರುವ 10 ಆಯುಧಗಳ ಅರ್ಥವೇನು ಗೊತ್ತಾ..?
ದುರ್ಗಾ ದೇವಿಯು ಶಕ್ತಿಯ ಪ್ರತೀಕವಾಗಿದ್ದಾಳೆ ಹಾಗೂ ಎಲ್ಲಾ ದೇವರು, ದೇವತೆಗಳಿಗಿಂತಲೂ ಅತ್ಯಂತ ಶಕ್ತಿಶಾಲಿಯಾಗಿದ್ದಾಳೆ. ತಾಯಿ ದುರ್ಗೆಯು ಬರೋಬ್ಬರಿ 9 ದಿನಗಳ ಕಾಲ 9 ವಿವಿಧ ರೂಪದಲ್ಲಿ ದೈತ್ಯ ರಾಕ್ಷಸ ಮಹಿಷಾಸುರನೊಂದಿಗೆ ಹೋರಾಡಿ ಆತನನ್ನು ಹತ್ಯೆಗೈಯುತ್ತಾಳೆ ಆದ್ದರಿಂದ ಈಕೆಯನ್ನು ನವದುರ್ಗ ಎಂದು ಕರೆಯುತ್ತಾರೆ. ತಾಯಿ ದುರ್ಗೆಯು ತನ್ನ 10 ಕೈಗಳಲ್ಲಿ 10 ವಿಧದ ಆಯುಧಗಳನ್ನು ಹಿಡಿದುಕೊಂಡಿದ್ದಾಳೆ. ಈ ಆಯುಧಗಳಲ್ಲಿ ಕೆಲವೊಂದನ್ನು ಉಡುಗೊರೆಯಾಗಿ ಪಡೆದುಕೊಂಡರೆ, ಇನ್ನು ಕೆಲವೊಂದನ್ನು ವರವಾಗಿ ಪಡೆದುಕೊಂಡಿರುವುದಾಗಿದೆ. ಈಕೆಯ ಕೈಯಲ್ಲಿನ ಪ್ರತಿಯೊಂದು ಆಯುಧವು ಮಾನವರ ಚಟುವಟಿಕೆಗಳನ್ನು ಸೂಚಿಸುತ್ತದೆ. ದುರ್ಗಾ ದೇವಿಯು ದುಷ್ಟರನ್ನು ಸಂಹರಿಸಲು ಯಾವೆಲ್ಲಾ ಅಸ್ತ್ರಗಳನ್ನು ಉಪಯೋಗಿಸಿದ್ದಾಳೆ ಗೊತ್ತಾ..?
ಖಡ್ಗ ಅಥವಾ ಕತ್ತಿ
ಖಡ್ಗ ಅಥವಾ ಕತ್ತಿಯು ಬುದ್ಧಿವಂತಿಕೆಯನ್ನು ಸೂಚಿಸುತ್ತದೆ. ಈ ಆಯುಧವನ್ನು ಸಾಮಾನ್ಯವಾಗಿ ಜವಾಬ್ದಾರಿಯುತ ಜನರು, ಸರಿ ಮತ್ತು ತಪ್ಪುಗಳ ಬಗ್ಗೆ ಜ್ಞಾನ ಹೊಂದಿರುವವರು ಹಿಡಿದಿರುತ್ತಾರೆ. ಖಡ್ಗವನ್ನು ನಾವು ರಾಜರುಗಳ ಬಳಿ ಹೆಚ್ಚಾಗಿ ನೋಡಬಹುದು. ತಾಯಿ ದುರ್ಗೆ ಕೈಯಲ್ಲಿ ಹಿಡಿದಿರುವ ಖಡ್ಗವು ಮನುಷ್ಯನ ಭ್ರಮೆಯನ್ನು, ಅತಿ ಆಸೆಯನ್ನು ಹಾಗೂ ಆತನ ಆತ್ಮವನ್ನು ಬಂಧಿಸುತ್ತದೆ. ಇದು ಮನುಷ್ಯನಿಗೆ ತಾನನು ಮಾಡಬೇಕಾದ ನೈಜ ಕರ್ತವ್ಯದ ಅರಿವನ್ನು ಮೂಡಿಸುತ್ತದೆ. ಖಡ್ಗಕ್ಕೆ ನಕಾರಾತ್ಮಕತೆಯನ್ನು ತೊಡೆದು ಹಾಕುವ ಸಾಮರ್ಥ್ಯವಿದೆ.
ತ್ರಿಶೂಲ
ಮೂರು ತೀಕ್ಷ್ಣವಾದ ಆಕಾರವನ್ನು ಹೊಂದಿರುವ ಈ ಆಯುಧವು ಮಾನವಕುಲದ ಮೂರು ಗುಣಗಳನ್ನು ಸಂಕೇತಿಸುತ್ತದೆ. ಮೂರು ಗುಣಗಳೆಂದರೆ ತಮೋಗುಣ, ರಜೋಗುಣ ಮತ್ತು ಸತ್ವಗುಣಗಳಾಗಿವೆ. ಆದ್ದರಿಂದ ದುರ್ಗೆಯನ್ನು ಸಮಯವನ್ನೇ ಮೀರಿದವಳು ಎನ್ನಲಾಗುತ್ತದೆ. ಆಕೆ ಸಮಯಕ್ಕೆ ಮಹತ್ವವನ್ನು ನೀಡಿದವಳಲ್ಲ. ಯಾವ ಸಮಯದಲ್ಲಿ ವ್ಯಕ್ತಿ ಕೆಡುಕನ್ನು ಮಾಡುತ್ತಾನೋ ಅದೇ ಸಮಯದಲ್ಲಿ ಆಕೆ ಶಿಕ್ಷಿಸುತ್ತಾಳೆ. ಪರಶಿವನು ಈ ಆಯುಧವನ್ನು ದುರ್ಗಾದೇವಿಗೆ ನೀಡಿದ್ದಾನೆ. ತ್ರಿಶೂಲದ ಮೂರು ಅಂಶಗಳು ಭೂತಕಾಲ, ವರ್ತಮಾನಕಾಲ ಮತ್ತು ಭವಿಷ್ಯತ್‌ಕಾಲವನ್ನು ಪ್ರತಿನಿಧಿಸುತ್ತದೆ.
ಸುದರ್ಶನ ಚಕ್ರ
ಚಕ್ರವು ಜೀವಿತಾವಧಿಯನ್ನು ಪ್ರತಿನಿಧಿಸುತ್ತದೆ. ಅದು ನಾವು ಎಷ್ಟು ಸಮಯ ಬದುಕಿರುತ್ತೇವೋ ಅಷ್ಟು ಸಮಯ ನಮ್ಮ ದೇಹದಲ್ಲಿ ಸುತ್ತುತ್ತದೆ. ಚಕ್ರವು ನಮಗೆ ಸಮಯ ಎಲ್ಲವನ್ನು ನಾಶ ಮಾಡುತ್ತದೆ ಎನ್ನುವುದನ್ನು ತಿಳಿಸುತ್ತದೆ. ಆಂತರಿಕ ಜಾಗೃತಿಯನ್ನು ಮುಡಿಸುವಲ್ಲಿ ಚಕ್ರ ಪ್ರಮುಖ ಪಾತ್ರವನ್ನು ವಹಿಸಿದೆ. ಭಗವಾನ್ ವಿಷ್ಣು ತಾಯಿ ದುರ್ಗೆಗೆ ಉಡುಗೊರೆಯಾಗಿ ನೀಡಿದ ಸುದರ್ಶನ ಚಕ್ರವು ಸೃಷ್ಟಿಯ ಕೇಂದ್ರವನ್ನು ಸಂಕೇತಿಸುತ್ತದೆ. ದುರ್ಗಾದೇವಿಗೆ ನಿಷ್ಟ, ಭಕ್ತಿ ಮತ್ತು ಪ್ರೀತಿಯನ್ನು ಪ್ರದರ್ಶಿಸಲು ಚಕ್ರವು ಮನುಷ್ಯರನ್ನು ಪ್ರೇರೇಪಿಸುತ್ತದೆ.
ವಜ್ರಾಯುಧ
ವಜ್ರವು ಅಚಲತೆಯನ್ನು, ನಿರ್ಣಯವನ್ನು ಮತ್ತು ಸರ್ವೋಚ್ಛ ಶಕ್ತಿಯ ದೃಢತೆಯನ್ನು ಸಂಕೇತಿಸುತ್ತದೆ. ವಜ್ರಾಯುಧವು ಭಗವಾನ್ ಇಂದ್ರನ ಆಯುಧವಾಗಿದ್ದು, ತನ್ನ ಆಯುಧವನ್ನು ತಾಯಿ ದುರ್ಗೆಗೆ ಉಡುಗೊರೆಯಾಗಿ ನೀಡುತ್ತಾನೆ. ತಾಯಿ ದುರ್ಗೆಯನ್ನು ಪೂಜಿಸುವುದರಿಂದ ಜೀವನದಲ್ಲಿ ಆತ್ಮವಿಶ್ವಾಸವು ಹೆಚ್ಚಾಗುತ್ತದೆ ಹಾಗೂ ಕಠಿಣ ಸಮಸ್ಯೆಗಳಿಗೆ ಪರಿಹಾರವನ್ನು ಪಡೆದುಕೊಳ್ಳಲು ಸಹಕರಿಸುತ್ತದೆ.
ಬಿಲ್ಲು ಮತ್ತು ಬಾಣ
ದುರ್ಗೆಯು ತನ್ನ ಹತ್ತು ಕೈಗಳಲ್ಲಿ ಒಂದು ಕೈಯಲ್ಲಿ ಬಿಲ್ಲು ಮತ್ತು ಬಾಣವನ್ನು ಹಿಡಿದಿದ್ದಾಳೆ. ಇದು ವಾಯುವಿನ ಅಸ್ತ್ರವಾಗಿದ್ದು, ವಾಯು ತನ್ನ ಅಸ್ತ್ರವನ್ನು ದುರ್ಗೆಗೆ ನೀಡುತ್ತಾನೆ. ಅನಾದಿಕಾಲದಿಂದಲೂ ಬಿಲ್ಲ ಮತ್ತು ಬಾಣವನ್ನು ಪ್ರಮುಖ ಶಸ್ತ್ರಾಸ್ತ್ರವನ್ನಾಗಿ ಬಳಸಲಾಗುತ್ತದೆ. ದೇವರುಗಳು, ರಾಜರುಗಳು ಯುದ್ಧದ ಸಮಯದಲ್ಲಿ ಬಿಲ್ಲು, ಬಾಣಗಳನ್ನು ಬಳಸುತ್ತಿದ್ದರು. ದುರ್ಗೆಯ ಕೈಯಲ್ಲಿನ ಬಿಲ್ಲು ಮತ್ತು ಬಾಣವು ಪ್ರತಿಯೊಬ್ಬ ವ್ಯಕ್ತಿಯು ತನ್ನ ಗುರಿಯತ್ತ ಸ್ಥಿರವಾಗಿರಬೇಕು ಮತ್ತು ಅವನು ತನ್ನ ಗುರಿಯತ್ತ ಗಮನಹರಿಸಬೇಕು ಎಂಬೂದನ್ನು ಹೇಳುತ್ತದೆ. ಒಬ್ಬ ವ್ಯಕ್ತಿಯು ತನ್ನ ಗುರಿಗಳನ್ನು ಸ್ವತಂತ್ರವಾಗಿ ಸಾಧಿಸುವ ಸಾಮರ್ಥ್ಯವನ್ನು ಹೊಂದಿರಬೇಕೆಂದು ಸೂಚಿಸುತ್ತದೆ.
ಈಟಿ
ಈಟಿಯು ಅಗ್ನಿ ದೇವರ ಆಯುಧವಾಗಿದ್ದು, ಅಗ್ನಿ ದೇವನು ತನ್ನ ಆಯುಧವನ್ನು ದುರ್ಗಾದೇವಿಗೆ ಉಡುಗೊರೆಯಾಗಿ ನೀಡುತ್ತಾನೆ. ಈಟಿಯು ಶುಭ ಸಂಕೇತವಾಗಿದ್ದರೂ ಅಗ್ನಿಯ ಈ ಉಡುಗೊರೆ ಉರಿಯುವ ಶಕ್ತಿಯನ್ನು ಕೂಡ ಸೂಚಿಸುತ್ತದೆ. ಯಾವುದು ತಪ್ಪು ಮತ್ತು ಯಾವುದು ಅರಿ ಎಂದು ಯೋಚಿಸುವ ಶಕ್ತಿಯನ್ನು ನಾವು ಹೊಂದಿರಬೇಕು ಹಾಗೂ ಅದಕ್ಕೆ ತಕ್ಕಂತೆ ವರ್ತಿಸಬೇಕೆಂದು ಈಟಿ ಹೇಳುತ್ತದೆ. ಇದು ಜೀವನದ ಎಲ್ಲಾ ಅಡೆತಡೆಗಳನ್ನು ನಿವಾರಿಸಲು ಮಾನವರ ಗುಪ್ತ ಶಕ್ತಿಯ ಸಂಕೇತವಾಗಿದೆ. ಯಾವಾಗಲು ನಾವು ತಪ್ಪುಗಳಿಂದ ದೂರಿರಬೇಕೆಂದು ಈಟಿ ಹೇಳುತ್ತದೆ.
ಶಂಖ
ಶಂಖವು ಸೃಷ್ಟಿಯ ಆದಿಸ್ವರೂಪ ಧ್ವನಿಯಾದ ಓಂ ನ ಸಂಕೇತವಾಗಿದೆ. ಶಂಖವನ್ನು ವರುಣ ದೇವನು ತಾಯಿ ದುರ್ಗೆಗೆ ನೀಡಿದ್ದಾನೆ. ಬ್ರಹ್ಮಾಂಡವು ಸೃಷ್ಟಿಯಾದಾಗ ಶಂಖವು ಮೊದಲು ಹುಟ್ಟಿಕೊಂಡಿತು. ಆ ಸಂದರ್ಭದಲ್ಲಿ ಶಂಖದಿಂದ ಮೊದಲು ಹೊರಹೊಮ್ಮಿದ ಶಬ್ಧವೇ ಓಂ. ಶಂಖವನ್ನು ಹಿಂದೂ ಧರ್ಮದಲ್ಲಿ ಹೆಚ್ಚಿನ ಸಂದರ್ಭಗಳಲ್ಲಿ ಬಳಸಲಾಗುತ್ತದೆ. ಹಿಂದೂ ಧರ್ಮೀಯರ ಪ್ರಕಾರ, ಶಂಖವು ನಕಾರಾತ್ಮಕ ಶಕ್ತಿಯನ್ನು ನಾಶಮಾಡುವ ಸಾಮರ್ಥ್ಯವನ್ನು ಹೊಂದಿದೆ.
ಕಮಲ
ಕಮಲದ ಹೂ ಬ್ರಹ್ಮನ ಸಂಕೇತವಾಗಿದೆ. ಕಮಲವು ಬುದ್ಧಿವಂತಿಕೆಯನ್ನು ಪ್ರತಿನಿಧಿಸುತ್ತದೆ ಹಾಗೂ ಜ್ಞಾನದ ಮೂಲಕ ಮುಕ್ತಿಯನ್ನು ನೀಡುತ್ತದೆ. ಬ್ರಹ್ಮನು ತನ್ನ ಕಮಂಡಲದೊಂದಿಗೆ ಕಮಲವನ್ನು ಹಾಗೂ ಬುದ್ಧಿವಂತಿಕೆಯನ್ನು ತಾಯಿ ದುರ್ಗೆಗೆ ನೀಡಿದನು. ಕಮಲವು ಭಕ್ತಿಯನ್ನು ಮತ್ತು ಭಗವಾನ್ ಆಂಜನೇಯನನ್ನು ಸೂಚಿಸುತ್ತದೆ. ನಾವು ಯಾವುದೇ ಕೆಲಸವನ್ನು ಮಾಡಬೇಕಾದರೆ ಅದರ ಫಲವನ್ನು ನಿರೀಕ್ಷಿಸಿಬಾರದು. ಬದಲಾಗಿ, ನಮ್ಮ ಕೈಲಾದಷ್ಟು ಶ್ರಮಿಸಬೇಕು ಅದರ ಫಲವನ್ನು ದೇವರ ಇಚ್ಛೆಗೆ ಬಿಡಬೇಕೆಂದು ದುರ್ಗೆಯ ಕಮಲವನ್ನು ಹಿಡಿದ ಕೈ ಹೇಳುತ್ತದೆ.
ಕೊಡಲಿ
ಕೊಡಲಿ ಕೆಟ್ಟದ್ದನ್ನು ಅಥವಾ ನಕಾರತ್ಮಕತೆಯನ್ನು ಹೊಡೆದೋಡಿಸುವ ಸಾಮರ್ಥ್ಯವನ್ನು ಹೊಂದಿದೆ. ಅಂತೆಯೇ ನಮ್ಮೊಳಗಿನ ಕೆಟ್ಟ ಭಾವನೆಗಳನ್ನು ನಾಶಗೊಳಿಸಿಕೊಳ್ಳಬೇಕೆಂಬೂದನ್ನು ಸೂಚಿಸುತ್ತದೆ. ವಿಶ್ವಕರ್ಮನು ತಾಯಿ ದುರ್ಗೆಗೆ ಕೊಡಲಿಯನ್ನು ನೀಡುತ್ತಾನೆ. ದುಷ್ಟರ ವಿರುದ್ಧದ ಹೋರಾಟದಿಂದ ಮುಂದಾಗುವ ಪರಿಣಾಮಗಳ ಬಗ್ಗೆ ಭಯವಿಲ್ಲ ಎನ್ನುವುದನ್ನು ಇದು ಸೂಚಿಸುತ್ತದೆ.
ಹಾವು
ದುರ್ಗಾ ಮಾತೆಯ ಹತ್ತು ಕೈಗಳಲ್ಲಿ ಒಂದು ಕೈ ಖಾಲಿ ಇರುತ್ತದೆ. ಆ ಕೈಯಲ್ಲಿ ಆಕೆ ಭಕ್ತರನ್ನು ಆಶೀರ್ವದಿಸುತ್ತಾಳೆ. ಆದರೆ ಆ ಕೈಯಲ್ಲಿ ದುರ್ಗೆ ಹಾವನ್ನು ಹಿಡಿದಿದ್ದಾಳೆ. ಅಥವಾ ಮಹಿಷಾಸುರನನ್ನು ಸಂಹರಿಸಲು ಆಕೆ ಅದೇ ಕೈಯಲ್ಲಿ ತ್ರಿಶೂಲವನ್ನೂ ಕೂಡ ಹಿಡಿದಿದ್ದಾಳೆ. ಹತ್ತನೇ ಕೈಯಲ್ಲಿ ದುರ್ಗೆ ಹಾವನ್ನು ಹಿಡಿದಿದ್ದಾಳೆ. ಹಾವು ಯಾವಾಗಲೂ ಶಿವನ ಕೊರಳಲ್ಲಿ ಇರುತ್ತದೆ. ಅದೇ ಹಾವನ್ನು ಶಿವನು ಮಾತೆ ದುರ್ಗೆಗೆ ನೀಡಿದ್ದಾನೆ. ದುರ್ಗೆಯ ಹತ್ತನೇ ಕೈಯಲ್ಲಿರುವ ಹಾವು ಪ್ರಜ್ಞೆಯನ್ನು ಮತ್ತು ಶಿವನ ಪುರುಷ ಶಕ್ತಿಯನ್ನು ಸಂಕೇತಿಸುತ್ತದೆ.
ಸಿಂಹ
ಸಿಂಹವನ್ನು ಕಾಡಿನ ರಾಜ, ಎಲ್ಲಾ ಪ್ರಾಣಿಗಳ ರಾಜನೆಂದು ಹೇಳಲಾಗುತ್ತದೆ. ಹಾಗೂ ಅತ್ಯಂತ ಶಕ್ತಿಶಾಲಿ ಪ್ರಾಣಿ. ದುರ್ಗಾದೇವಿಯು ಸಿಂಹವನ್ನು ತನ್ನ ವಾಹನವನ್ನಾಗಿಸಿಕೊಂಡಿದ್ದಾಳೆ. ಯಾವುದೇ ಓರ್ವ ವ್ಯಕ್ತಿಯು ತನ್ನ ಶಕ್ತಿ ಮತ್ತು ಸಾಮರ್ಥ್ಯವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕು ಹಾಗು ಅವಶ್ಯಕತೆಯಿದ್ದಾಗ ಮಾತ್ರ ಅದನ್ನು ಪ್ರಯೋಗಿಸಬೇಕೆಂಬುದನ್ನು ದುರ್ಗೆಯು ಸೂಚಿಸುತ್ತಾಳೆ.
ಸನಾತನವೇ ಸತ್ಯ, ಸನಾತನವೇ ಶ್ರೇಷ್ಠ
ಸನಾತನವೊಂದೇ ವಿಶ್ವ ಧರ್ಮ
ಸನಾತನ ರಾಷ್ಟ್ರಕ್ಕಾಗಿ, ಸನಾತನ ಧರ್ಮಕ್ಕಾಗಿ..
ಸನಾತನ ರಾಷ್ಟ್ರಭಕ್ತರು
Posted 7/11/2024
12 August 2024
ದೇವರು ನಮಗೆ ಜೀವನವನ್ನಲ್ಲ , ಜೀವವನ್ನಷ್ಟೆ ಕೊಟ್ಟ.
ಮಣ್ಣಲ್ಲಿ ಮಣ್ಣಾಗುವ ವ್ಯಕ್ತಿಯ ದೇಹಕ್ಕೆ ಸಾವು ಖಚಿತ ... ಆದರೆ
ಮನದಲ್ಲಿ ಉಳಿಯುವ ವ್ಯಕ್ತಿಯ ವ್ಯಕ್ತಿತ್ವವು ಸದಾ ಶಾಶ್ವತ ...
* ಸಾವು ಖಚಿತ, ಆದರೆ ಸಾವು ಬಂದಾಗ ಯಾರಿಗೂ ಸಾಯಬೇಕಂತ ಅನ್ನಿಸೋದಿಲ್ಲ .
* ಊಟ ಎಲ್ಲರಿಗೂ ಬೇಕು, ಆದರೆ ಯಾರೂ ವ್ಯವಸಾಯ ಮಾಡಬೇಕನ್ನುವುದಿಲ್ಲ.
* ನೀರು ಎಲ್ಲರಿಗೂ ಬೇಕು, ಆದರೆ ಅರಣ್ಯವನ್ನು ರಕ್ಷಿಸಬೇಕು ಅಂತ ಯಾರೂ ಪ್ರಯತ್ನಿಸುವುದಿಲ್ಲ .
* ಪಾಲು ಎಲ್ಲರಿಗೂ ಬೇಕು, ಆದರೆ ಅದನ್ನು ಪಾಲಿಸಬೇಕೆನ್ನುವ ಛಲ ಯಾರಿಗೂ ಇಲ್ಲ.
* ನೆರಳು ಎಲ್ಲರಿಗೂ ಬೇಕು, ಆದರೆ ಮರಗಳನ್ನು ರಕ್ಷಿಸಬೇಕೆನ್ನುವ ಹಂಬಲ ಯಾರಿಗೂ ಇಲ್ಲ.
* ಹೆಂಡತಿ ಎಲ್ಲರಿಗೂ ಬೇಕು, ಆದರೆ ಹೆಣ್ಣು ಮಕ್ಕಳು ಕೆಲವರಿಗೆ ಬೇಡ.
* ಹುಟ್ಟಿದಾಗ ನೀ ಅಳುತ್ತಿದ್ದೆ, ಆದರೆ ಮಡಿದಾಗ ನಿನ್ನವರು ಅಳುತ್ತಿದ್ದರು.
* ಹುಟ್ಟಿದಾಗ ನಿನಗೆ ವಸ್ತ್ರ ತೊಡಿಸುವರು, ಆದರೆ ಮಡಿದಾಗ ನಿನ್ನ ವಸ್ತ್ರವ ಬಿಚ್ಚುವರು.
* ಹುಟ್ಟಿದಾಗ ಹುಡುಕುವರು ನಿನಗೆ ನೂರೆಂಟು ನಾಮ, ಆದರೆ ಮಡಿದ ಮೇಲೆ ಶವ ಎಂದೇ ನಿನ್ನ ನಾಮ.
* ನೀನೇನನ್ನೂ ಗಳಿಸದೇ ಬಂದೆ, ಆದರೆ ಮಡಿದಾಗ ನೀನು ಗಳಿಸಿದ್ದನ್ನು ಕಳೆದುಕೊಂಡೆ.
ಮಡಿದಾಗ ಮಣ್ಣಲ್ಲಿ ಮಣ್ಣಾಗಿ ಹೋಗುವ ನೀನು, ನಿನ್ನದು ಎನ್ನಲು ನಿನಗೇನಿದೆ ?
ನಿನಗೆ ಜನ್ಮ ಕೊಟ್ಟವರು ಮತ್ತೊಬ್ಬರು, ನಿನಗೆ ಹೆಸರು ಕೊಟ್ಟವರು ಮತ್ತೊಬ್ಬರು, ನಿನಗೆ ಜ್ಙಾನ ಕೊಟ್ಟವರು ಮತ್ತೊಬ್ಬರು, ಕಡೆಗೆ ನಿನ್ನ ಅಂತ್ಯ ಸಂಸ್ಕಾರ ನಿರ್ವಹಿಸುವುದು ಕೂಡಾ ಮತ್ತೊಬ್ಬರೇ... ಹೀಗಿರುವಾಗ,
ನಾನು ಎಂದು ಅಹಂಕರಿಸಲು ನೀನು ಯಾರು ?? ಏನಿದೇ ನಿನ್ನಲ್ಲಿ ???
ದೇವರು ನಮಗೆ ಜೀವನವನ್ನಲ್ಲ , ಜೀವವನ್ನಷ್ಟೆ ಕೊಟ್ಟ . ಆದರೆ
ಹೇಗೆ ಜೀವಿಸಬೇಕು ಎಂಬುದನ್ನು ಅವ ನಮಗೇ ಬಿಟ್ಟುಕೊಟ್ಟ.
ಸರ್ವೇ ಜನಾಃ ಸುಖಿನೋ ಭವಂತು
Posted 12/8/2024
Gotras and Kula/Istha God.
2. For Vishvamitra Gotras, Kula Deva is Ulluru Subrahmanya and Ishta Deva is Mahishamardini of Neelavara.
3. Alevoor Vishnumurthy Kuladev and Indrali Durga are favorite deities for Angirasa/Harita Gotras.
4. Seemanthur Janardhana is the family deity for the Kasyapa gotras and Katilu Durgaparameshwari is the Goddess of love.
5. Udupi Ananteshwar Kuladev and Bannanje Durge Ishtadev for Baradwaja Gotras.
6. Kongur Math has just started. Henceforth, it is the order of the Math that Harita Gotra should celebrate this as their family deity Gopalakrishna (Butter Krishna) and Ishta Deva Bannadka Narasimha.
Although Kadambalittaya, Kannaraya, Manjittaya and Saralaya are Angirasa gotras, Kodamgala Vishnumurthy is their clan deity. The reason for this is the wise men. This temple is also known as Puli temple because of these sages
In Shivalli there are people with the surname Aytinala (now Aitala). His family deity is called Perduru Gopalakrishna. Similarly, for Kanginnai, this is Kelamath Gopalakrishna. Many of the Puranikas, who were originally Kekunnayars of Kekuda, worship Chokkada Gopalakrishna as Kuladev.
When I inquired among many scholars about this, none of them specifically said that this is the case. Since we are immigrants from Talagunda (there is a Shivalli village there. According to Sri Srinivasa Tantris we got the name Shivalli sect from this village. There is no evidence that hundreds of Brahmin families came and settled in Shivalli on the Udupi side) after coming here we built a temple here as our clan god and as worshipers of the original mother. It is like starting to worship form as a god. Later, they migrated from here to different places and lost their connection with the original place in Kainkarya and started worshiping the god of Tamur as Kuladev. The reason for this may be that their clansmen stopped worshiping in the original temple.
Posted 6/7/2024