Monday, 26th January 2026
CoffeeBoard Park, Kempapura, Bengaluru.
ಸ್ಥಳ:ಕಾಫೀ ಬೋರ್ಡ್ ಉದ್ಯಾನವನ
ದಿನಾಂಕ: 26/01/2026
ಸಮಯ: ಬೆಳಿಗ್ಗೆ 7.45 ಗೆ ಇಂತಿ ನಿಮ್ಮವ, ರೇಣುಕ ಹೆಗ್ಗಡೆ
ಇಂದು ಬೆಳಿಗ್ಗೆ 8.10 ಗಂಟೆಗೆ ಕಾಫಿಬೋರ್ಡ್ ಉದ್ಯಾನವನದಲ್ಲಿ ಹಿರಿಯ ಪೊಲೀಸ್ ಅಧಿಕಾರಿ ಶಿವಕುಮಾರ್ ಅವರು ಧ್ವಜಾರೋಹಣ ಮಾಡುವುದರೊಂದಿಗೆ 77 ನೆ ಗಣರಾಜ್ಯೋತ್ಸವ ದಿನಾಚರಣೆ ಸಂಪನ್ನ ಗೊಂಡಿತು.
ಡಿ ಐ ಜಿ ಪಿ ಶಿವಕುಮಾರ್ ಅವರು ತಮ್ಮ ಭಾಷಣದಲ್ಲಿ ಗಣರಾಜ್ಯೋತ್ಸವದ ಶುಭಾಶಯಗಳನ್ನು ಕೋರುತ್ತಾ ಭಾರತದ "ರಾಮರಾಜ್ಯ" ಕನಸನ್ನು ಸಾಕರಗೊಳಿಸಲು ಇಂದಿನ ಯುವ ಜನಾಂಗ ಮುಂದೆ ಬರಬೇಕೆಂದು ಮನವಿಮಾಡಿದರು.
ನಿವೃತ್ತ ಕೆ. ಇ. ಬಿ. ಅಧಿಕಾರಿಯಾಗಿದ್ದ ಛಾಯಾಪತಿ ಅವರು ಗಣರಾಜ್ಯದ ಹಿನ್ನೆಲೆಯನ್ನು ಮಾತನಾಡುತ್ತಾ ಭಾರತದ ಸಂವಿಧಾನದ ಕುರಿತು ಮಾತನಾಡಿ ಡಾ ಅಂಬೇಡ್ಕರ್ ಅವರನ್ನು ಸ್ಮರಿಸಿದರು.
Posted 26/1/2026










































