Showing posts with label SANGEETHA MAALIKE. Show all posts
Showing posts with label SANGEETHA MAALIKE. Show all posts

Wednesday, December 31, 2025

"ಹಕ್ಕಿ ಮತ್ತು ಅವಳು"- ನಾಟಕ SANGEETHA MAALIKE -2025 :

 ಶನಿವಾರ, ದಶಂಬರ 27, 2025 

ಬಿರ್ತಿ ಮನೆ, ಸಾಲಿಕೇರಿ , ಬ್ರಹ್ಮಾವರ  

ಹಕ್ಕಿ ಮತ್ತು ಅವಳು 


ಕನ್ನದಲ್ಲಿಯ ಮತ್ತು ಕನ್ನಡಕ್ಕೆ ಒದಗಿ ಬಂದ ಕವನ, ಕಥೆ, ಪ್ರಬಂಧಗಳನ್ನು ಆಧರಿಸಿದ ಕಾವ್ಯ ಪ್ರಯೋಗವಿದು. ಕಾವ್ಯ ಪ್ರಯೋಗದ ರಂಗದಾಟ , ಹೆಣ್ಣಿನ ಬಿಡುಗಡೆಯ ಹಾಡುಗಳನ್ನು ಇಲ್ಲಿ ಅಭಿನಯಿಸಲಾಗುತ್ತಿದೆ. 



ಕಾವ್ಯ ಹಂದೆ ಈ ಕಾವ್ಯಭಿನಯವನ್ನು ಅದ್ಭುತವಾಗಿ ಪ್ರದರ್ಶಿಸಿದ್ದಾಳೆ.   


ದೇಹ, ದೇಶಗಳನ್ನು ಬಂಧಿಸಲ್ಪಟ್ಟ "ಅವಳು", ತನ್ನ ಬಿಡುಗಡೆಯನ್ನು ಕಾಣಸುವ ಆಟವಿದು. ಸ್ವಾತಂತ್ರ್ಯದ ಆಟ,  ಸ್ವಾತಂತ್ರ್ಯದ ಬಗ್ಗೆ ಮಾತನಾಡುವುದೆಂದರೆ ಅದು ನೋವಿನಿಂದ ಬಿಡುಗಡೆ ಪಡೆಯುವ ಹಾದಿಯೂ ಹೌದು. ತಿಳಿಯುವ ಸತ್ಯ ನೋಯಿಸ ಬಲ್ಲುದು, ಆದರೆ ತಿಳಿಯದೇ ಹೋಗುವ ಸತ್ಯ  ಕೊಲ್ಲಬಹುದು. 


ಅರಿವಿನಿಂದಲೇ ನೋವ ಬಗೆಯ ಆಸಕ್ತಿಯಲ್ಲಿ ಇದು ರೂಪು ತಳೆದಿದೆ. ನಮಗೆ ನಂಬಿಕೆ ಇದೆ.  "ಒಂದಲ್ಲ ಒಂದು ಮಿದು ಜಾಗವುಂಟು ನಮ್ಮೆಲರಲ್ಲಿ" - ಈ ನಂಬಿಕೆಯೇ ಇಂತಹ ಪ್ರಯೋಗಕ್ಕೆ  ಇಂಬು ನೀಡುವದು. 





ಬಂಧನಗಳ ಮೂಲದ ಹುಡುಕಾಟದಲ್ಲಿ ಈ ನೆಲದಗಳ, ಜಲದಗಳ , ಮುಗಿಲಗಲ ಹರವಿಕೊಂಡ ಬಿಡುಗಡೆಯ ನುಡಿಗಳನ್ನು ಆಯ್ದು ಪೋಣಿಸಿ ಕೊಂಡಿರುವೆವಿಲ್ಲಿ , ಚಾವೊಸನ ಪತಂಗ ಪರಿಣಾಮ ಸಿದ್ಧಾಂತ ಹೇಳುವಂತೆ "ಎಲ್ಲೋ ಬಡಿಯುವ ಚಿಟ್ಟೆಯ ರೆಕ್ಕೆಗಳು ಮತ್ತೆಲ್ಲೋ  ಬಿರುಗಾಳಿ ಎಬ್ಬಿಸಬಹುದು" ಎಂಬ ನಂಬಿಕೆಯಿಂದ . 
ಮಿತ್ರಾ ವೆಂಕಟರಾಜು, ವೈದೇಹಿ, ಪ್ರತಿಭಾ ನಂದ ಕುಮಾರ,ಚಿಮ ಮಾಂಡ , ಮಾಯಾ ಎಂಜಎಲೊ, ಲಾಟೇಶ,  ಅಭಿಲಾಶ ಎಸ್. ಅವರ ಬರಹಗಳನ್ನು ಇಲ್ಲಿ ಪಠ್ಯ ವಾಗಿ ಬಲಸಿಕೊಳ್ಳಲಾಗಿದೆ,


ಭಿನ್ನ ಭಾಷೆಯ ಇಲ್ಲಿಯ ಕೆಲವು ಪಠ್ಯ ಗಳನ್ನು  ಕನ್ನಡದ ವಿವೇಕಕ್ಕೆ ಒದಗಿಸಿ ಕೊಟ್ಟವರು ಜ. ನಾ. ತೇಜಶ್ರೀ, ಸುಧಾ ಅಡುಕಳ, ಕಾವ್ಯ ಶ್ರೀ ಎಚ್., ಇವರೆಲ್ಲಾರಿಗೂ ನಾವು ಋಣಿಗಳು.    


ಕಾವ್ಯಾಳ ಅಭಿನಯ, ನೃತ್ಯ, ಸಂಭಾಷಣೆ, ಹಾಗೂ ಮುಖಭಾವ ಎಲ್ಲವೂ ತುಂಬಾ ಚಂದ. 
ರಂಗ ವಿನ್ಯಾಸ, ಬೆಳಕು, ಸಂಗೀತ ಎಲ್ಲವೂ ಆಕರ್ಷಕವಾಗಿತ್ತು. 








Abhilasha S in her Faceook post : 3/1/2026

ಡಿಸೆಂಬರ್ 27ರ ನಮ್ಮ‌ ಸಂಗೀತ ಸಂಜೆಯ ಇನ್ನೊಂದು ಮುಖ್ಯ ಕಾರ್ಯಕ್ರಮ ಸುವಿಕಾ ತಂಡದ ಕಾವ್ಯ ಹಂದೆ ಯವರ "ಹಕ್ಕಿ ಮತ್ತು ಅವಳು" ಏಕವ್ಯಕ್ತಿ ನಾಟಕ ಪ್ರದರ್ಶನ.
ಮಿತ್ರಾ ವೆಂಕಟ್ರಾಜ್ ಅವರ ಹಕ್ಕಿ ಮತ್ತು ಅವಳು ಕಥೆಯ ಜೊತೆ ಮಹಿಳಾ ಸಂವೇದೀ ಕವನಗಳನ್ನು ರಂಗ ಪ್ರಯೋಗವಾಗಿಸಿದ್ದು ಇಲ್ಲಿನ ವಿಶೇಷ. ಚಿಮಮಾಂಡ, ವೈದೇಹಿ, ಪ್ರತಿಭಾ ನಂದಕುಮಾರ್, ಕೆ.ವಿ.ತಿರುಮಲೇಶ್, ಅಭಿಲಾಷಾ, ಸುಧಾ ಆಡುಕಳ‌- ಹೀಗೆ ಅನೇಕರು "ಕನ್ನಡಿಯೊಳಗೆ ಅಡಗಿರುವ ರಾಜಕುಮಾರಿಯರು" ಕನ್ನಡಿಯೊಡೆದು ಹೊರಬಂದು ತಮ್ಮ ಅಸ್ತಿತ್ವವನ್ನು ಗುರುತಿಸಿಕೊಳ್ಳುವ ಬಗೆಯನ್ನು ಬರಹವಾಗಿಸಿದರೆ ಆ ಬರಹಗಳನ್ನು ನಟಿ ಕಾವ್ಯ ಸಶಕ್ತವಾಗಿ ರಂಗ ಕಾವ್ಯವಾಗಿಸಿದ್ದಳು. ನೈಜೀರಿಯಾದ ಚಿಮಮಾಂಡ ತನ್ನ ಸ್ನೇಹಿತೆಗೆ ಅವಳ ಮಗಳನ್ನು ಬೆಳಸುವ ಬಗೆಗೆ ನೀಡುವ ಸಲಹೆಯೊಂದಿಗೆ ಬಹಳ ಸರಳವಾಗಿ ಪ್ರಾರಂಭವಾಗುವ ನಾಟಕ ಮುಂದೆ ಭಾವ ತೀವ್ರತೆಯನ್ನು ಹೆಚ್ಚಿಸಿಕೊಳ್ಳುತ್ತ ಸಾಗುತ್ತದೆ. ತನ್ನ ಮನೆಯವರಿಂದಲೇ ತನಗಾಗುತ್ತಿರುವ ಲೈಂಗಿಕ ಶೋಷಣೆಯನ್ನು ವಿವರಿಸುವ ಪುಟ್ಟ ಬಾಲಕಿಯಾಗಿ " ನಾನೇಕೆ ಬರೆಯುತ್ತೇನೆ" ಎಂದು ಕಾವ್ಯ ಮಗ್ಧವಾಗಿ ಅಭಿನಯಿಸುತ್ತದ್ದರೆ , ಆ ತೀಕ್ಷ್ಣತೆ ನೋಡುಗರನ್ನು ಬೆಚ್ಚಿ ಬೀಳಿಸುವಂತಿತ್ತು. ಗಟ್ಟಿಗಿತ್ತಿ ಸೀತೆ, ಸುಕೋಮಲೆಯಾಗುತ್ತ ಅಸಹಾಯಕಳಾಗಿ ಪರಿತಪಿಸುತ್ತಾ ಮತ್ತೆ ಅಶೋಕ ವನವೇ ಆದ ಕತೆಯನ್ನು ಅಪೂರ್ವವಾದ ನೃತ್ಯದ ನಡೆಯ ಮೂಲಕ ಪ್ರಸ್ತುತ ಪಡಿಸಿ ಈ ಭಾಗವನ್ನು ನಟಿ ದೃಶ್ಯಕಾವ್ಯವಾಗಿಸಿದಳು. ಅಡುಗೆ ಮನೆ ಹುಡುಗಿಯರು ಹೊರದಾರಿಗಾಗಿ ಹಂಬಲಿಸುವ ಪರಿ ನಗೆಯುಕ್ಕಿಸುತ್ತಲೇ ಹಸಿ ವಾಸ್ತವವನ್ನು ಬಿಚ್ಚಿಟ್ಡಿತ್ತು. ದೇವೀ ಮಹಾತ್ಮೆ ಯ ದೇವಿ " ಪ್ರತಿ ನಿತ್ಯ ಹೆಣ್ಣುಗಳ ಮುಡಿಗೆ ಕೈ ಹಾಕುವ ಭಂಡರಿಗೆ" ಮಾತಿನಿಂದಲೇ ಚಾಟಿ ನೀಡಿದರೆ, "ಹಕ್ಕಿ ಮತ್ತು ಅವಳು" ಕತೆಯ ಆರತಿ ಹಕ್ಕಿಯ ಮಾತು ಕೇಳಿಸಿಕೊಳ್ಳುತ್ತಲೇ ತನಗೂ ರೆಕ್ಕೆ ಮೂಡಿಸಿಕೊಳ್ಳುತ್ತಾಳೆ. ಆರತಿಯ ಮನದಲ್ಲಾಗುವ ತಲ್ಲಣಗಳನ್ನು ಕಾವ್ಯ ಚೌಕಟ್ಟಿನೊಳಗೆ ಮುಖವಿಟ್ಟು ಅಭಿನಯಿಸಿದ್ದು, ಭಾವ ನಿವೇದಿಸಿಕೊಂಡದ್ದು ನೋಡುಗರ ಹೃದಯವನ್ನೇ ತಲ್ಲಣಗೊಳಿಸಿತ್ತು. ಈ ಭಾಗದಲ್ಲಿ ನಟಿಯ ಸೂಕ್ಷ್ಮ ಅಭಿನಯ ಉತ್ತುಂಗಕ್ಕೇರಿತ್ತು. ನಂತರದ ದಾಕ್ಷಾಯಿಣಿ ಪ್ರಸಂಗ ಯಕ್ಷಗಾನೀಯ ಮಾದರಿಯಲ್ಲಿದ್ದು ನಟಿಯ ಕುಣಿತ, ಅಬ್ಬರದ ಚಲನೆ ಇವೆಲ್ಲವೂ ಭಾವದ ಇನ್ನೊಂದು ಮಜಲನ್ನು ಸಾಕ್ಷಾತ್ಕರಿಸಿದವು.ಕೊನೆಯಲ್ಲಿ ಅರ್ಧನಾರೀಶ್ವರನ ಕಲ್ಪನೆಯೊಂದಿಗೆ ಮುಕ್ತಾಯವಾದ ಈ ರಂಗ ಪ್ರಯೋಗ ತಾತ್ವಿಕ ಕೊನೆ ಮುಟ್ಟಿತ್ತು.
ಇಂತದ್ದೊಂದು ಅಪೂರ್ವ ರಂಗ ಪ್ರಯೋಗವನ್ನು ವಿನ್ಯಾಸ ಮಾಡಿ ನಿರ್ದೇಶಿಸಿದವರು ಖ್ಯಾತ ರಂಗ ನಿರ್ದೇಶಕ ಡಾ.ಶ್ರೀಪಾದ ಭಟ್. ಆ ದಿನ ಅವರೂ ನಮ್ಮ‌ ಜೊತೆ ಇದ್ದದ್ದು ನಮಗೆ ಇನ್ನಷ್ಡು ಸಂತಸ ತಂದಿತ್ತು.
ಬೆಳಕನ್ನು ನೀಡಿದವರು ರೋಹಿತ್ ಬೈಕಾಡಿ , ಸಂಗೀತದಲ್ಲಿ ಸಹಕರಿಸಿದವರು ವಿನೀತಾ ಹಂದೆ, ಹಾಗಯೇ ಸಂಯೋಜನೆಯಲ್ಲಿ ಜತೆಯಾದವರು Sujayeendra Hande .
Kavya Hande ತನ್ನ ಸ್ನಾತಕೋತ್ತರ ಪದವಿ ಮುಗಿಸಿ ಈಗ ಬೆಂಗಳೂರಿನ " ಪ್ರಯೋಗ" ದಲ್ಲಿ ಕೆಲಸ ಮಾಡುತ್ತಿರುವ ಯುವ ಕಲಾವಿದೆ. ಈಗಾಗಲೇ ಈ ರಂಗ ಪ್ರಯೋಗವನ್ನು ಅನೇಕ ಕಡೆ ಪ್ರದರ್ಶನ ನೀಡಿದ್ದಲ್ಲದೇ " ಶಿಕ್ಷಣದಲ್ಲಿ ರಂಗಭೂಮಿ " ಎಂಬ ಶಿಕ್ಷಕರ ಕಾರ್ಯಾಗಾರದಲ್ಲಿಯೂ ಪ್ರದರ್ಶನ ನೀಡಿ ಗಮನ ಸೆಳೆದಿದ್ದಾಳೆ. ಈ ಪ್ರಯೋಗ ಇನ್ನಷ್ಟು ಪ್ರದರ್ಶನ ಕಂಡು ಇನ್ನಷ್ಟು ಮನಸ್ಸುಗಳ ಅರಳುವಿಕೆಗೆ ಕಾರಣವಾಗಲಿ ಎಂಬುದು ನಮ್ಮೆಲ್ಲರ ಹಾರೈಕೆ





ಅಭಿನಂದನೆಗಳು.. 

Posted  31/12/2025 













Tuesday, December 30, 2025

SANGEETHA MALIKE -- 18 (2025)

 Saturday, December 27, 2025

Birthi, Salekeri, Brahmavara

Paying tribute to Late Srikanth Somayaji, Sangeetha Malike Program took place after a lapse of two years.



Srimathi Sinchana Murthy, with her melodious voice, sang number of songs, some composed by Srikanth Somayaji


ಈ ಸಖಿ.. ಶ್ಯಾಮ ಬುಲಾರೆ.. 

ಚರಣ ಕಮಲದಲ್ಲಿ ಬಯಸಿ.. 

ಹಾಲುಕ್ಕಿತೋ ರಂಗಾ......

ತೊರೆದು ಜೀವಿಸಬಹುದೇ.....

ಬೇಸರವಾಗಿದೆ ಮಾತು.. ಭಾರವಾಗಿದೆ ಮೌನ....

ಸತ್ಯವಂತರ ಸಂಗವಿರಲು .. ತೀರ್ಥವೇತಕೆ...

"ಹಾಲುಕ್ಕಿತೋ ರಂಗಾ", "ತೊರೆದು ಜೀವಿಸಬಹುದೇ ಹರಿ ನಿನ್ನ ಚರಣಗಳ .." ಹಾಡುಗಳನ್ನು ಅತ್ಯಂತ ಮದುರವಾಗಿ ಹಾಡಿದರು. 





ಸುಮಾರು ಎರಡು ಗಂಟೆಗಳ ಕಾಲ ಹಾಡಿನ ಸವಿಯನ್ನು ಉಣಬಡಿಸಿ, ಕಲಾವಿದರನ್ನು ಫಲ ಶಾಲುಗಳೊಡನೆ  ಸನ್ಮಾನಿಸಲಾಯಿತು. 






ಸಂಜೆಯ ಉಪಹಾರದ ನಂತರ, ಕಾರ್ಯಕ್ರಮದ ಎರಡನೇ ಭಾಗ "ಹಕ್ಕಿ ಮತ್ತು ಅವಳು" ನಾಟಕದ ಪ್ರದರ್ಶನವು  ನಡೆಯಿತು. 

You can see that in the next blog.

Abhilasha S in her Facebook post: 3/1/2026

ಡಿಸೆಂಬರ್ 27, 2025 ರ ಸಂಜೆ, ನಮ್ಮ ಮನೆಯಂಗಣ ಸಂಗೀತ, ಸಾಹಿತ್ಯ, ನಾಟಕದ ಗುಂಗಿನಲ್ಲಿ ಅದ್ದಿ ಹೋಗಿತ್ತು. ಬೆಂಗಳೂರಿನ ಶ್ರೀ ಅಕಾಡಮಿಯ ಸಿಂಚನಾ ಮೂರ್ತಿ, ನಮ್ಮ ಆ ದಿನದ ಗಾಯಕಿ, ಅತ್ಯಂತ ಭಾವಪೂರ್ಣ ಪ್ರಸ್ತುತಿ ನೀಡಿದ್ದು ಮಾತ್ರವಲ್ಲದೇ ತಾವು ಹಾಡಿದ ಗೀತೆಗಳ ಅರ್ಥ ವಿಸ್ತಾರದ ಬಗೆಗೂ ಮಾತಾಡುತ್ತಾ ಎರಡು ಗಂಟೆಗಳ ಕಾಲ ಶ್ರೋತ್ರಗಳನ್ನು ಸೆಳೆದಿಟ್ಟುಕೊಂಡಿದ್ದರು. ಅವರ ತಂದೆ ಶಿವಮೊಗ್ಗ ನರಸಿಂಹ ಮೂರ್ತಿಯವರಿಗೂ ಶ್ರೀಕಾಂತ ಸೋಮಯಾಜಿಗೂ ಇದ್ದ ಆತ್ಮೀಯ ಬಾಂಧವ್ಯದ ನೆಲೆಯಲ್ಲಿ ಅನೇಕ ನೆನಪುಗಳನ್ನೂ ಹಂಚಿಕೊಂಡರು. ಶ್ರೀಕಾಂತರ ಸಂಗೀತ ಸಂಯೋಜನೆಯ ಕೆಲವು ಹಾಡುಗಳನ್ನು ಹಾಡಿ, ನಿಜಾರ್ಥದಲ್ಲಿ ಶ್ರೀಕಾಂತರ ಸಂಸ್ಮರಣೆಯನ್ನು ಮಾಡಿಕೊಟ್ಟರು. ಶ್ರೀಕಾಂತರಿಗಿದ್ದ, ಕಲೆ ಮತ್ತು ಕಲಾವಿದರ ಬಗೆಗಿನ ಪ್ರೀತಿ, ಸಂಗೀತದ ಕಸರತ್ತುಗಳಿಲ್ಲದೇ ಭಾವಕ್ಕೇ ಆದ್ಯತೆ ಕೊಟ್ಟು ಅವರು ಹಾಡುತ್ತಿದ್ದ ಶೈಲಿ ಹಾಗೆಯೇ ತನ್ನ ಸಂಯೋಜನೆಯ ಹಾಡುಗಳನ್ನು ಅವರು ಆಯ್ಕೆ ಮಾಡಿಕೊಳ್ಳುತ್ತಿದ್ದ ರೀತಿ - ಇವೆಲ್ಲದರ ವೈಶಿಷ್ಟ್ಯಗಳನ್ನು ತುಂಬು ಪ್ರೀತಿಯಿಂದ ಹಂಚಿಕೊಂಡು ಒಂದು ಆಪ್ತ ವಾತಾವರಣವನ್ನೇ ಸೃಷ್ಡಿ ಮಾಡಿದರು. ಸಾವಿರಾರು ವಿದ್ಯಾರ್ಥಿಗಳನ್ನು ಹೊಂದಿರುವ ಸಿಂಚನಾ ಯಾವುದೇ ಹಮ್ಮು, ಬಿಮ್ಮು ಇಲ್ಲದೇ ನಿಗರ್ವಿಯಾಗಿರುವುದು ಅವರ ವ್ಯಕ್ತಿತ್ವದ ಬಗೆಗೆ ಇನ್ನಷ್ಟು ಗೌರವ ಮೂಡಿಸುತ್ತದೆ.
ಅವರ ಕಛೇರಿಗೆ ಹಾರ್ಮೋನಿಯಮ್ ನಲ್ಲಿ ಸಹಕರಿಸಿದ್ದು ಮಣಿಪಾಲದ ಹಿರಿಯ ಕಲಾವಿದರಾದ ಶ್ರೀ ಶಂಕರ್ ಶೆಣೈ.‌ ಇವರ ಅಸಾಧಾರಣ ಪ್ರತಿಭೆ ಕಛೇರಿಯನ್ನು ಇನ್ನಷ್ಟು ಎತ್ತರಕ್ಕೇರಿಸಿತ್ತು. ಪ್ರದೀಪ ಉಡುಪಿಯವರ ತಬಲಾ ವಾದನವೂ ಕಳೆ ನೀಡಿತು. ಒಟ್ಟಿನಲ್ಲಿ ಒಂದು ಸಾರ್ಥಕ ಸಂಜೆಯನ್ನು ನಿರ್ಮಾಣ ಮಾಡಿದ Sinchana Murthy ಮತ್ತು ತಂಡದವರಿಗೆ ನಾವು ಸೋಮಯಾಜಿ ಕುಟುಂಬ ಆಭಾರಿಯಾಗಿದ್ದೇವೆ.



Posted 30/12/2025 



















Friday, December 30, 2022

ಸಂಗೀತ ಮಾಲಿಕೆ 2022 - ಯಕ್ಷಗಾನ ವೀರ ವ್ರಷಸೇನ

 ಭಾನುವಾರ, 25 ಡಿಸೆಂಬರ್ 2022 

ಬಿರ್ತಿ, ಸಾಲಿಕೇರಿ, ಬ್ರಹ್ಮಾವರ 


ಸುಜಯೀಂದ್ರ ಹಂದೆ 


ಸಂಗೀತ ಮಾಲಿಕೆ 2022 ರ ಎರಡೆನೇ ಭಾಗವಾದ ಯಕ್ಷಗಾನ, ವೀರ ವ್ರಷಸೇನ, ಪ್ರದರ್ಶನವನ್ನು ಮಕ್ಕಳ ಮೇಳ, ಸಾಲಿಗ್ರಾಮ ಇವರು ಅತ್ಯಂತ ಅದ್ಭುತವಾಗಿ ನಡೆಸಿ ಕೊಟ್ಟರು.











ಭಾಗವತಿಕೆಯಲ್ಲಿ 86 ವರ್ಷದ ಹಿರಿಯರು, ಶ್ರೀ ಶ್ರೀಧರ್ ಹಂದೆಯವರು, ಅವರ ಪುತ್ರ ಬಹುಮುಖ ಪ್ರತಿಭೆಯ ಶ್ರೀ ಸುಜಯೀಂದ್ರ ಹಂದೆಯವರು ಅದ್ಭುತವಾಗಿ ಹಾಡಿದರು.


ಸುಮಾರು 90 ನಿಮಿಷಗಳ ಮಕ್ಕಳ ಮೇಳ , ಸಾಲಿಗ್ರಾಮದ ಮಕ್ಕಳು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು. ಕುಣಿತ, ಮಾತು, ಅಭಿನಯ, ಎಲ್ಲದರಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು.



ದಿ. ಶ್ರೀಕಾಂತ ಸೋಮಯಾಜಿಯವರ ಸ್ಮರನಾತ್ಮ ಮಡದಿ ಶ್ರೀಮತಿ ಅಭಿಲಾಷ, ಆಯೋಜಿಸಿರುವ ಈ ಕಾರ್ಯಕ್ರಮವು ಯಶಸ್ವಿಯಾಗಿ ಸಂಪನ್ನ ಗೊಂಡಿತು.


ಶ್ರೀ ಜಯರಾಮ ಸೋಮಯಾಜಿಯವರು ಧನ್ಯವಾದ ಸಮರ್ಪಣೆ ಮಾಡಿದರು.

ಬರೆದಿರುವುದು 31 ಡಿಸೆಂಬರ, 2022 


Wednesday, December 28, 2022

ಸಂಗೀತ ಮಾಲಿಕೆ 2022 - 17 ಹಿಂದುಸ್ತಾನಿ ಹಾಡುಗಾರಿಕೆ

 ಭಾನುವಾರ, 25 ಡಿಸೆಂಬರ್, 2022 

ಬಿರ್ತಿ, ಸಾಲಿಕೀರಿ, ಬ್ರಹ್ಮಾವರ.

ಶ್ರೀಕಾಂತ ಸೋಮಯಾಜಿ ಸ್ಮರ ನಾ ತ್ಮ ಸಂಗೀತ ಮಾಲಿಕೆ 2022 ಕಾರ್ಯಕ್ರಮ, ಬಿರ್ತಿ, ಸಾಲಿಕೇರಿ, ಸೋಮಯಾಜಿಯವರ ಮನೆಯಲ್ಲಿ ಸಂಜೆ ಸಂಪನ್ನ ಗೊಂಡಿತು.


ಕುಮಾರಿ ವೀಣಾ ನಾಯಕ್ ಕೋಟ ಮತ್ತು ತಂದದವರಿದ ಹಿಂದುಸ್ತಾನಿ ಸಂಗೀತ ಹಾಗೂ ಭಜನೆ ಗಾಯನದ ಅದ್ಭುತವಾದ ರಸ ದೌತಣ ವನ್ನು ನೀಡಿದರು.


ಸಂಜೆ 3.30 ಯಿಂದ 5.30 ಗಂಟೆಯ ವರೆಗೆ ನಡೆದ ಹಾಡುಗಾರಿಕೆ ಮತ್ತು ಭಜನೆ  ಗಾಯನ ಎಲ್ಲವರನ್ನು ಮಂತ್ರ ಮುಗ್ಧ ರನ್ನಾಗಿಸಿತು 



ಕಾರ್ಯಕೆಮದ ರೂವಾರಿ, ಶ್ರೀಕಾಂತ ಸೋಮಯಾಜಿಯ ಧರ್ಮ ಪತ್ನಿ, ಅಭಿಲಾಷ ಅವರು ಕಲಾವಿದರನ್ನು ಪರಿಚಯಿಸಿ ಧನ್ಯವಾದ ಸಂರಪಿಸಿದರು.




ಮೇಲಿನ ಯು ಟ್ಯೂಬ್ ಚಾನಲ್ ನಲ್ಲಿ ಕೆಲವು ಹಾಡುಗಳನ್ನೂ , ಅಭಿಲಾಷ ಅವರು ಮಾಡಿದ ಪರಿಚಯ ಹಾಗೂ ಧನ್ಯವಾದ ಸಮರ್ಪನೆಯನೂ ನೋಡಬಹುದು 
ಬರೆದಿರುವುದು 29/12/2022 


Saturday, December 26, 2020

ಸಂಗೀತ ಮಾಲಿಕೆ 16 - ಗಮಕ ಸಂವಾದ

 ಶನಿವಾರ, ದಶಂಬರ 26, 2020 

ಶ್ರೀಕಾಂತ ಸೋಮಯಾಜಿ ಸ್ಮರಣಾರ್ಥ ಸಂಗೀತ ಮಾಲಿಕೆಯ ಈ ವರ್ಷದ ಕಾರ್ಯಕ್ರಮವು "ಗಮಕ ಸಂವಾದ" ದ ರೂಪದಲ್ಲಿ ಸಂಪನ್ನ ಗೊಂಡಿತು.


ಕೊರೋನ ಸಂಕಟದಿಂದಾಗಿ ಕಾರ್ಯಕ್ರಮವು ಮೈಲಾರಿ ಲೈವ್ ಮೂಲಕ ಯೂ ಟ್ಯೂಬ್ ಮತ್ತು ಫೇಸ್ ಬುಕ್ ನಲ್ಲಿ ನೇರಪ್ರಸಾರದಿಂದ ಎಲ್ಲ ಕಡೆಯಿಂದ ಮನೆಯಲ್ಲೇ ಕುಳಿತು  ವೀಕ್ಷಿಸಲು ಸಾಧ್ಯವಾಯಿತು.


ಮೊದಲಲ್ಲಿ ಅಭಿಲಾಷ ಅವರು ಕಲಾವಿದರು ಹಾಗು ಸನ್ಮಾನಿತ ಗೀತಾ ತುಂಗಾ ಅವರನ್ನು ಪರಿಚಯ ಮಾಡಿ ಸ್ವಾಗತಿಸಿದರು. ದಿ. ಶ್ರೀಕಾಂತ ಸೋಮಯಾಜಿಯವರ ಸಂಗೀತ ಆಸಕ್ತಿ, ಕಾಳಜಿ ಯನ್ನು ನೆನಪಿಸಿಕೊಂಡು, ಅವರ ನೆನಪಿಗಾಗಿ ಪ್ರತೀ ವರ್ಷದಂತೆ ಮಾಡುವ ಸಂಗೀತ ಮಾಲಿಕೆ ಕಾರ್ಯಕ್ರಮ, ಗಮಕ ಸಂವಾದ ದಿಂದ ಸೋಮಯಾಜಿಯವರ ಮನೆಯಂಗಳದಲ್ಲಿ ನಡೆಯುತ್ತಿರುವುದು ವಿಶೇಷ ಎಂದೂ ತಿಳಿಸಿದರು. 


ಸನ್ಮಾನಿತ, ಸಂಗೀತ ಶಿಕ್ಷಕಿ ಗೀತಾ ತುಂಗಾ ಅವರ ಸಂಗೀತ ಆಸಕ್ತಿ, ಮಕ್ಕಳಿಗೆ ಕಲಿಸುವ ತುಡಿತವನ್ನು ನೆನಪಿಸಿ ಲೀಲಾ ಸೋಮಯಾಜಿ, ಶ್ರೀಧರ್ ಹಂದೆ ಅವರು ಶಾಲು, ಫಲ ಪುಷ್ಪ ದೊಂದಿಗೆ ಸನ್ಮಾನಿಸಿದರು.

ಸುಮಾರು ಒಂದು ಗಂಟೆಯ ಕಾಲ, ಸುಜಯಿಂದ್ರ ಹಂದೆಯವರ  ನೇತೃತ್ವದಲ್ಲಿ ನಡೆದ ಗಮಕ ಕಾರ್ಯಕ್ರಮದಲ್ಲಿ ಶ್ರೀಧರ್ ಹಂದೆ, ಚಂದ್ರಶೇಕರ ಕೆದ್ಲಾಯ, ಕಾವ್ಯ ಹಂದೆ ಪಾಲ್ಗೊಂಡಿದ್ದು, ನಾಗೇಂದ್ರ ಐತಾಳ ಕೊಳಲು ನುಡಿಸಿ ಸಹಕರಿಸಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ ಕಲಾವಿದರುಗಳನ್ನು, ನೇರ ಪ್ರಸಾರವನ್ನು ನಡೆಸಲು ಸಹಕರಿಸಿದ ಮೈಲಾಡಿ  ಲೈವ್ ಅವರನ್ನೂ, ಅಭಿಲಾಷ ಅವರು ತುಂಬು ಹೃದಯದಿಂದ ಧನ್ಯವಾದ ಸಮರ್ಪಿಸಿದರು.

Post from Abhilasha in Facebook:

ಶ್ರೀಕಾಂತ ಸೋಮಯಾಜಿ ಸಂಗೀತ ಮಾಲಿಕೆ 2020
ಸಂಗೀತ ಸಂಜೆಯೊಂದನ್ನು ಏರ್ಪಡಿಸಿ ಬಂಧುಗಳು,ಸ್ನೇಹಿತರು, ಊರವರ ಜೊತೆ ಶ್ರೀಕಾಂತ್ ರ ನೆನಪು ಹಂಚಿಕೊಳ್ಳುವ ನಮ್ಮ‌‌ ವರ್ಷದ ವಾಡಿಕೆ ಈ ಬಾರಿ ಕೊರೋನಾ ಕಾರಣಕ್ಕೆ ತುಸು ಭಿನ್ನ‌ ಬಗೆಯಲ್ಲಿ ಜರುಗಿತು.
ಮನೆಯಂಗಳದಲ್ಲೇ ಕಾರ್ಯಕ್ರಮ ನಡೆಸಿ live ನಲ್ಲಿ ಕಾರ್ಯಕ್ರಮ ಬಿತ್ತರಗೊಳಿಸಿದೆವು.

ಈ ಬಾರಿಯ ಗೌರವ ಸಂಮಾನವನ್ನು ಸಂಗೀತ ಶಿಕ್ಷಕಿ ಶ್ರೀಮತಿ ಗೀತಾ ತುಂಗ ಅವರಿಗೆ ಅರ್ಪಿಸಿದೆವು. ಗೀತಾ ಅವರು ಹಲವಾರು ವರ್ಷಗಳಿಂದ ಬ್ರಹ್ಮಾವರ - ಕೋಟ , ಸಾಲಿಗ್ರಾಮ ಪರಿಸರದ ಹಲವಾರು ವಿದ್ಯಾರ್ಥಿಗಳಿಗೆ ಸಂಗೀತದ ಪಾಠ ಮಾಡುತ್ತಾ ಸಂಗೀತದ ಅಭಿರುಚಿ ಬೆಳೆಸುತ್ತಿರುವವರು.
ನಂತರ ಗಮಕ ಸಂವಾದ -
ಕುಮಾರವ್ಯಾಸ ಭಾರತದ ಕರ್ಣ, ಕೃಷ್ಣ, ಕುಂತಿಯರ ಸಂವಾದ ಭಾಗದ ಕಾವ್ಯವಾಚನವನ್ನು
ಎಚ್. ಶ್ರೀಧರ ಹಂದೆ, ಚಂದ್ರಶೇಖರ ಕೆದ್ಲಾಯ, ಸುಜಯೀಂದ್ರ ಹಂದೆ, ಕಾವ್ಯ ಎಚ್. ಇವರು ನಡೆಸಿಕೊಟ್ಟರು. ಈ ಪ್ರಯತ್ನ ಕಾವ್ಯವಾಚನದ ಹೊಸ ಸಾಧ್ಯತೆಯೊಂದನ್ನು ಹುಡುಕುವ ಪ್ರಯೋಗದಂತಿತ್ತು.

ಮುಂದಿನ ಬಾರಿ ಮತ್ತೆ ನಮ್ಮೆಲ್ಲ ಅಂದು ಬಂಧುಗಳು ನಮ್ಮ‌ ಮನೆಯಂಗಳದಲ್ಲಿ ಈ ನೆಪಕ್ಕಾದರೂ ನಮ್ಮ ಜೊತೆಯಾಗುವಂತಾಗಲಿ.

ಬರೆದಿರುವುದು, ಭಾನುವಾರ 27 ದಶಂಬರ 2020 



Friday, January 3, 2020

SANGEETHA MAALIKE (15) - 2019

Saturday, 28th Dec. 2019
Birthi, Salekeri, Brahmavara.

It is program organized by Abhilasha.S for remembering Late Srikanth Somayaji, called SANGEETHA MAALIKE.





It is also an opportunity for get-together of relatives, friends and well wishers.


Am eminent personality is honoured for his achievements and this year, the recipient was Shri ChandraShekara Kedlaya, good singer for more than 3 decades. He was given shawl, fruits and cover. He also sang Bendre's poem in reply.



This year Sangeetha Malike event had variety program.




1. Fusion Music from "NAAVU" team from Mysuru, with Anush Shetty as the leader, a young and upcoming music buff, sings and plays musical instruments. Their presentation was mixed songs with involvement of audience and most of therm were pleasant to hear.



2. EkaPatraabhinaya - by Ms Kavya Hande a brilliant presentation of revenge of Ambe.


3. Dance by LahariBhat - Excellent dance presentation about Lord Narasimha






4. "NRUTYA GAATHA" - Dance Drama by Vidushi Anaghshree of Kodavoor Nritya Nikethana. It's story of dancer, her ambitions, aspirations and her life.





There was also refreshments and dinner for all present. There were about 75-80 people present for the program.


Well organized by Abhilasha.S.

posted Saturday, 4th Jan 2020