Showing posts with label YAKSHAGANA. Show all posts
Showing posts with label YAKSHAGANA. Show all posts

Sunday, August 31, 2025

YAKASHAGANA - SRIHARI LEELAMRUTHAM

 Saturday, 30th August 2025

Kenneth George School, DasaraHalli Main Road, Bhuvaneshwarinagara, Bengaluru.






The Yakshagana program was organized by "BHUVANESHWARINAGARA NAGARIKARA SEVA SAMITHI", at Kenneth George School, DasaraHalli Main Road, Bhuvaneshwarinagara.





That was more than five hours of show with fantastic dances, dialogues and costume,. The artists are so much enerzised, they continuously dance, dance and dance, without getting tired. It's amazing.







Traditional Yakshagana will not accept the kind of modern Yakshagana played these days which is purely for entertainment and excitment.


However, it was a performance of Yakshagana of FOUR different stories.

1.Hirenyaksha and Bhoodevi, Varaaha,
2. Bhakta Prahlada, - Hirenya Kashipu, - Khayadu, Narasimha
3. Vrashabhasura - Varaha
4. Padmavathi-Srinivasa Kalyana

It was entertainment for more the non-stop performance.

Posted 31/8/2025
























Monday, November 11, 2024

YAKSHAGANA - SRI DEVI BANASHANKARI MAHATME

 Sunday, 10th November 2024

Vinayaka Devasthana, R T Nagara, Bengaluru

ಶ್ರೀ ಭ್ರಾಹ್ಮಿ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿ , ಶ್ರೀ ಕ್ಷೇತ್ರ ಕಮಲಶಿಲೆ, ಹಾಗೂ ಸುವರ್ಣ ಪ್ರಸಾಧನ ಯಕ್ಷರಂಗ, ಅರ್. ಟಿ. ನಗರ, ಬೆಂಗಳೂರು ಇವರ ಸಹಯೋಗದಲ್ಲಿ

"ಶ್ರೀ ಬನಶಂಕರಿ ಮಹಾತ್ಮೆ " 

ಎಂಬ ನೂತನ ಪ್ರಸಂಗವನ್ನು ತುಂಬಾ ಚೆನ್ನಾಗಿ ಆಡಿ ತೋರಿಸಿರುವರು.




ಒಬ್ಬ ರಾಜ ಬಹಳ ವರ್ಷಗಳಿಂದ ಸಂತಾನ ಭಾಗ್ಯ ವಿಲ್ಲದಿದುರಿಂದ ಆತನ ಹೆಂಡತಿ, ರಾಜನನ್ನು ಇನ್ನೊಂದು ಮದುವೆಯಾಗಲು ಪ್ರೆರೆಪಿಸುವಳು. ಕಾರಣಾಂತರ ಗಳಿಂದ ಕಾಡಿನಲ್ಲಿದ್ದ ಚಂಪಾ ಎಂಬವಳನ್ನು ರಾಜ ಮದುವೆಯಾಗುತ್ತಾನೆ.
ನಂತರ ಶ್ರೀ ದೇವಿ ಬನಶಂಕರಿ ರಾಜನ ಮೊದಲ ಹೆಂಡತಿಗೆ ಕನಸಿನಲ್ಲಿ ಬಂದು ಫಲವನ್ನು ಕೊಟ್ಟು ಸ್ವೀಕರಿಸಿದಲ್ಲಿ ಸಂತಾನ ಭಾಗ್ಯ ಲಬಿಸುವುದು ಎಂದು ಆಶೀರ್ವದಿಸುತ್ತಾಳೆ.

ಈ ಫಲವನ್ನು ರಾಜನ ಈರ್ವರೂ ಹೆಂಡತಿಯರು ಪಡೆದು ಅವರಿಗೆ ಸುಧೀರ, ಸುಕೇತ ಎಂಬ ಮಕ್ಕಳಾಗುತ್ತದೆ.








ಹೀಗೆ ಕಥೆ ಮುಂದುವರಿದು ಸುಧೀರನ ಮಾವ ಅವನನ್ನು ಸಾಯಿಸಲು ಪ್ರಯತ್ನಿಸಿ ಕಾಡಿಗೆ ಅಟ್ಟುತ್ತಾನೆ. 
ನಂತರ ಕಾಡಿನಲ್ಲಿ ಕರಡಿ ಅವನನ್ನು ಸಾಕಿ, ಕರಡಿಯನ್ನೂ ದಾನವನೊಬ್ಬ ಸಾಯಿಸಿ, ಅವನು ಅಲ್ಲೇ ಬೆಳೆದು ದೊಡ್ಡವನಾಗಿ , ಪುನಃ ರಾಜ, ತಾಯಿ, ಸುಕೆತನನ್ನು ಗುರುತಿಸಿ ರಾಜ್ಯಕ್ಕೆ ಮರಳುತ್ತಾನೆ.
ಹಲವು ತಿರುವುಗಳಿಂದ ಮುಂದುವರಿಯುವ ಕಥೆ, ಕೊನೆಗೆ ಸುಖಾಂತ್ಯದಲ್ಲಿ ಕೊನೆಗೊಳ್ಳುತ್ತದೆ.
ಯಕ್ಷಗಾನದ ವೇಷ ಭೂಷಣ, ಅಭಿನಯ, ನೃತ್ಯ , ಹಾಡುಗಾರಿಕೆ ಎಲ್ಲವೂ ಅದ್ಭುತವಾಗಿತ್ತು.

Posted 12/11/2024

Monday, October 28, 2024

ಪ್ರಶಸ್ತಿ ಪ್ರಧಾನ - ಕಾಳಿಂಗ ನಾವುಡ , ಯಕ್ಷಗಾನ

 ಭಾನುವಾರ, 27 ಅಕ್ಟೋಬರ್ 2024

ಉದಯಬಾನು ಕಲಾ ಸಂಘ, ಚಾಮರಾಜಪೇಟೆ, ಬೆಂಗಳೂರು.



ಅದು ಕಾಳಿಂಗ ನಾವುಡ ಪ್ರಶಸ್ತಿ ಪ್ರಧಾನ ಸಮಾರಂಭ. ಕಲಾ ಕದಂಬ ಆರ್ಟ್ಸ್ ಸೆಂಟರ್ ಅವರಿಂದ ಆಯೋಜನೆ.



ಸುಮಾರು ಮೂರುವರೆ ದಶಕಗಳ ಹಿಂದೆ ಯಕ್ಷಗಾನ ಭಾಗವತಿಕೆಯಲ್ಲಿ ಪ್ರಸಿದ್ಧರಾಗಿ , ಮಿಂಚಿ , 33 ವಯಸ್ಸಿನಲ್ಲಿ ದಿವಂಗತರಾದ ಕಾಳಿಂಗ ನಾವುಡರ ಹೆಸರಿನಲ್ಲಿ ಯಕ್ಷಗಾನ ಕಲಾವಿದರಿಗೆ ಸನ್ಮಾನಿಸಿ ಪ್ರಶಸ್ತಿಯನ್ನು ನೀಡುವ ಸಮಾರಂಭ. 





ಈ ಬಾರಿ ಪ್ರಸಿದ್ಧ ಚಂಡೆ ಗಾರರಾದ ಶ್ರೀ ಶಿವಾನಂದ ಕೋಟ ಅವರು ಈ ಪ್ರಶಸ್ತಿಗೆ ಭಾಜರಾಗಿರುತ್ತಾರೆ.

ಕಾರ್ಯಕ್ರಮದಲ್ಲಿ ಗಾಯನ, ನೃತ್ಯ ಹಾಗೂ ಯಕ್ಷಗಾನವನ್ನು ಆಯೋಜಿಸಿದ್ದಾರೆ.



ರಾಧಾಕೃಷ್ಣ ಉರಾಳ 

ಆರ್. ಕೆ. ಪದ್ಮನಾಭ 

ಪ್ರಸಿದ್ಧ ಹಾಡುಗಾರ ಆರ್ ಕೆ ಪದ್ಮನಾಭ ಅವರು ಮುಖ್ಯ ಅತಿಥಿಗಳಾಗಿ, ತಮ್ಮ ಕಂಚಿನ ಕಂಟದಿಂದ ಭಾಷಣ ಮಾಡಿರುತ್ತಾರೆ.


ಸಭಾ ಕಾರ್ಯಕ್ರಮದ ನಂತರ, ಯಕ್ಷಗಾನ "ಕಾಲನೇಮಿ ಕಾಳಗ" ಪ್ರಾರಂಭ.




ಅದ್ಭುತವಾದ  ಪ್ರದರ್ಶನ.ರಾಮಾಯಣದಲ್ಲಿಯ ಕಥಾ ಪ್ರಸಂಗ. ಲಕ್ಷಮಣನು ಹತರಾದಾಗ ಹನುಮಂತನು ಸಂಜೀವಿನಿ ಬೆಟ್ಟಕ್ಕೆ ಹೋಗುವ ಸಂದರ್ಭ.

ಮನೆಗೆ ಬರುವುದು ತುಂಬಾ ತಡವಾಗುವುದರಿಂದ ಅರ್ಧದಲ್ಲೇ ವಾಪಸ್ಸು ಮನೆಗೆ.

ದಾರಿಯಲ್ಲಿ ಎಸ್. ಎಲ್. ವಿ. ಹೋಟೆಲಿನಲ್ಲಿ ಫಲಾಹಾರ.

Posted 29/10/2024



Friday, October 25, 2024

SRIDEVI MAHATME (ಶ್ರೀದೇವಿ ಮಹಾತ್ಮೆ) - YAKSHAGANA

 Thursday, 24th )ctober 2024

Kenneth George School, Dasarahalli Main Road, Bhuvaneshwarinagara,

Bengaluru.


KAVYASHREE AJERU (BHAGAVATARU)

That was a rare opportunity for residents of Bhuvaneshwarinagara and Coffee Board Layout to witness YAKSHAGANA from Coastal Karnataka.



Bhuvaneshwarinagara Nagarika Seva Samithi, organized this event with association of WALKING FRIENDS.


The started little after 6 pm when the place filled with Yakshagana abhimanis.





ಅಷ್ಠ ಭುಜಗಳೊಂದಿಗೆ ಅವತಾರ  ತಾಳಿ  ಮಹಿಷಾಸುರ, ಧೂಮೃಲೋಚನ, ಚಂಡ ಮುಂಡ, ರಕ್ತಬೀಜ,  ಶುಂಬ ಹಾಗು ನಿಶುಂಬರೇ ಮೊದಲಾದ  ದೈತ್ಯರನ್ನು  ನಾಶ ಮಾಡಿ ದೇವಾನುದೇವತೆಗಳಿಗೆ ಅನುಗ್ರಹ  ಮಾಡಿದ ಕ್ಷಣ. ಅದ್ಭುತ ಕಥಾನಕ. BNNSS ಹಾಗೂ  Walkers Associationನ ಎಲ್ಲಾ ಆಯೋಜಕರಿಗೆ ತುಂಬು ಹೃದಯದ ಧನ್ಯವಾದಗಳು.  ಯಕ್ಷಗಾನ  ವಿಶ್ವ ಗಾನ


All components of Yakshagana, Heavy Costume, Kunitha (Dance), Dialogue Delivary and Dance were superb.




The energy of artists dancing on the floor to the sound of Chande amd Mridamga, and the Bhagavatharu (Vocalists) - Kavyashri Ajeru , Girish Rai, and Devaraj Acharya.





ದಿನಾಂಕ: 24.10.2024 ರಂದು ನಡೆದ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಪ್ರಂಗಕ್ಕೆ ಭುವನೇಶ್ವರಿನಗರದ ನಾಗರೀಕ ಬಂಧುಗಳು ಅತಿ ಹೆಚ್ಚು ಸಂಖ್ಯೆಯಲ್ಲಿ ಬಂಧು ಮಿತ್ರರೊಂದಿಗೆ ಆಗಮಿಸಿ ಅಭೂತಪೂರ್ವ ಯಸಸ್ಸನ್ನು ತಂದುಕೊಟ್ಟು ಕರುನಾಡ ಕಲೆಗೆ ಬೆಲೆಯನ್ನು ಭುವನೇಶ್ವರಿ ನಗರದಲ್ಲಿ ತಂದುಕೊಟ್ಟ ತಮಗೆಲ್ಲರಿಗೂ ತುಂಬು ಹೃದಯದ ಧನ್ಯವಾದಗಳು.



ಶ್ರೀ ಮಹಾಲಿಂಗೇಶ್ವರ ಪ್ರವಾಸಿ ಯಕ್ಷಗಾನ ಮಂಡಳಿ ಇವರಿಂದ ಪ್ರಸ್ತುತ ಪಡಿಸಿದ "ಶ್ರೀ ದೇವಿ ಮಹಾತ್ಮೆ "ಕಥಾ ಪ್ರಸಂಗ ಅದ್ಭುತವಾಗಿ ಮೂಡಿಬಂದು ಪ್ರೇಕ್ಷಕರು ಬಹಳ ಖುಷಿ ಪಟ್ಟರು.


ಈ ಕಥಾ ಪ್ರಸಂಗವನ್ನು ನೋಡಿದ ಎಲ್ಲರಿಗೆ  ಆಯುಸ್ಸು, ಅರೋಗ್ಯ, ನೆಮ್ಮದಿ ಯನ್ನು ಕರುನಿಸುವಳು ಎಂದು ಅಷೀರ್ವಚಿಸಲಾಯಿತು.

Posted 25/10/2024



Tuesday, December 26, 2023

ಚಂದ್ರಾವಳಿ ವಿಲಾಸ - ಯಕ್ಷಗಾನ

 ಸೋಮವಾರ, 25 ಡಿಸೆಂಬರ್ 2023 

ಶ್ರೀ ಸುರಭಾರತಿ ಸಭಾಂಗಣ, ಎಚ್,ಅರ್.ಬಿ.ಅರ್. ಬಡಾವಣೆ, ಬೆಂಗಳೂರು.

ಯಕ್ಷಗಾನ - ಚಂದ್ರಾವಳಿ ವಿಲಾಸ 



ಸೊಕ್ಕಿನ ಚಂದ್ರಾವಳಿ, ಮೋಹಕ ಯಕ್ಷ ಕನ್ನಿಕೆ,  ಓರ್ವ ಅತ್ಯಂತ ಗರ್ವದ ಹೆಣ್ಣುಮಗಳು. ಅವಳು ಯಾರಿಗೂ ಹೆದರದ, ಬಗ್ಗದ ಮಹಿಳೆ.


ಅವಳ ಗರ್ವವನ್ನು ಮುರಿಯಲು ಲಾಲಿತ್ಯದ ಶ್ರೀ ಕೃಷ್ಣನು (ಶಿಥಿಲಾ ಶೆಟ್ಟಿ ಐರಬೈಲ್ರ್) ನಿರ್ಧರಿಸಿ  ಅವಳೊಡನೆ ಸರಸ ಸಲ್ಲಾಪ ಮಾಡುತ್ತಾ, ನಂತರ ಅವಳ ಅತ್ತೆ ಹಾಗೂ ಗಂಡ ಚಂದಗೋಪ  ಇರುವ ಸ್ಥಳಕ್ಕೆ ಮಾರುವೇಷದಲ್ಲಿ ತೆರಳುತ್ತಾನೆ.



ಇಲ್ಲಿ ಅಜ್ಜಿಯ ಪಾತ್ರದಲ್ಲಿ , ಹವ್ಯಾಸಿ ಯಕ್ಷರಂಗದ ಹಾಸ್ಯ ಕಲಾವಿದ, ಶ್ರೀ ಚಂದ್ರಶೇಖರ ಶೆಟ್ಟಿ ಕೊಡ್ಲಾಡಿ ಹಾಗೂ ಮಗ ಚಂದಗೊಪನ ಪಾತ್ರದಲ್ಲಿ  ಯಕ್ಷರಂಗದ ಚಾರ್ಲಿ ಚಾಪ್ಲಿನ್ ಶ್ರೀ ಸಿತಾರಮಕುಮಾರ್ ಕಟೀಲ್, ಅವರ ಸಂಭಾಷಣೆ, ಹಾಸ್ಯ ಎಲ್ಲರನ್ನು ನಗೆಗಡಲಲ್ಲಿ ತೆಲಿಸಿತ್ತು.


ಶ್ರೀಕೃಷ್ಣನು  ರಾಧೆಯೊಂದಿಗೆ ದರುಶನವನ್ನು ಮಾಡಿದಾಗ, ಚಂದಗೋಪ ಸಂತುಷ್ಟನಾಗಿ ತನ್ನ ನಮನವನ್ನು ಸಲ್ಲಿಸುವನು.




ವಿನೂತನ ಜಗದ್ಗುರು ಭಾರತೀತಿರ್ಥ ಸಭಾಭಾವನವು ಅತ್ಯಂತ ಸುಂದರವಾಗಿದೆ.
ಬರೆದಿರುವುದು 26/12/2023