Showing posts with label BOOK RELEASE. Show all posts
Showing posts with label BOOK RELEASE. Show all posts

Sunday, August 3, 2025

ಪುಸ್ತಕ ಬಿಡುಗಡೆ - ಕತೆಗಳ ತೋರಣ

 ಭಾನುವಾರ, ಆಗೋಸ್ಟ್ 3, 2025

ಕರ್ನಾಟಕ ಚಿತ್ರಕಲಾ ಪರಿಷತ್, ಬೆಂಗಳೂರು.



ಶಾಲಿನಿ ಮೂರ್ತಿ ಅವರ 10, 11, 12 ನೇ ಭಾಗದ "ಕತೆಗಳ ತೋರಣ" ಪುಸ್ತಕದ ಬಿಡುಗಡೆ ಸಮಾರಂಭ.




ಮಕ್ಕಳಿಂದ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಸಮಾರಂಭ, ದೀಪ ಬೆಳಗುವಿನೊಂದಿಗೆ ಮುಂದುವರಿಯಿತು.

ಶ್ರೀಮತಿ ತೇಜಸ್ವಿನಿ ಅನಂತಕುಮಾರ್ , ಶ್ರೀ ಜಿ. ಬಾಲಕೃಷ್ಣ, ಹಾಗೂ ಶ್ರೀ ಯು. ಪ್ರೇಮಚಂದ್ರ ಅವರಿಂದ ಮಕ್ಕಳ ಸಮುಖದಲ್ಲಿ ಭಾಗ 10, 11, 12 ರ "ಕತೆಗಳ ತೋರಣ" ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು.

ಜಿ. ಬಾಲಕೃಷ್ಣ 

ಯು. ಪ್ರೇಮಚಂದ್ರ 

ವಿದ್ಯಾ ಬಿ ರಾವ್ 

ತೇಜಸ್ವಿನಿ ಅನಂತಕುಮಾರ್ 
ಅತಿಥಿಗಳು ತಮ್ಮ ಭಾಷಣದಲ್ಲಿ, ಮಕ್ಕಳ ಕಥಾ ಪುಸ್ತಕಗಳು ಅವರ ಸರ್ವಾಂಗೀಣ ಬೆಳವಣಿಗೆಗೆ  ಬಹಳ ಅವಶ್ಯಕ ಎಂದು ಪ್ರತಿಪಾದಿಸಿದರು.




ಶ್ರೀಮತಿ ವಿದ್ಯಾ ಬಿ ರಾವ್ ಅವರು ಅತ್ಯಂತ ಅಚ್ಚುಕಟ್ಟಾಗಿ ಕಾರ್ಯಕ್ರಮದ ನಿರೂಪಣೆಯನ್ನು ಮಾಡಿದರು.

ಭರ್ಜರಿಯಾದ ಉಪಹಾರದೊಂದಿಗೆ ಅಂದಿನ ಕಾರ್ಯಕ್ರಮ ಮುಕ್ತಾಯಗೊಂಡಿತು.

Posted 4/8/2025

Monday, July 21, 2025

"ಸುಧಿ" - ಕೃತಿ ಬಿಡುಗಡೆ - ಶಿವರಾಮ ಕಾರಂತ ವೇದಿಕೆ

 ಭಾನುವಾರ, ಜುಲೈ 20, 2025

ತರಳಬಾಳು ಕೇಂದ್ರ ಮಿನಿ ಹಾಲ್, ಆರ್. ಟಿ. ನಗರ, ಬೆಂಗಳೂರು.

ಶಿವರಾಮ ಕಾರಂತ ವೇದಿಕೆಯ ಜುಲೈ ತಿಂಗಳ ಕಾರ್ಯಕ್ರಮವು, ಜಿ. ವಿ. ರೇಣುಕಾ  ಅವರ "ಸುಧಿ" ವೈಚಾರಿಕ ಕೃತಿ ಲೋಕಾರ್ಪಣೆಯೊಂದಿಗೆ ಸಂಪನ್ನಗೊಂಡಿತು.




ಸಂಜೆ 4 ಗಂಟೆಗೆ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ನಂತರ, ವೇದಿಕೆಯ ಅಧ್ಯಕ್ಷೆ  ದೀಪಾ ಫಡ್ಕೆ ಅವರು ಪ್ರಾಸ್ತಾವಿಕ ನುಡಿ ಹಾಗೂ ಸ್ವಾಗತವನ್ನು ಕೋರಿದರು.


ಶ್ರೀಮತಿ ಚೇತನಾ ಹೆಗಡೆ ಯವರಿಂದ ಕೃತಿ ಪರಿಚಯವಾದ ನಂತರ, ಮುಖ್ಯ ಅತಿಥಿ ಅನ್ನದಾನೇಶ್ ಹರೀಶ್ ಅವರು ಕೃತಿಯ ಬಗ್ಗೆ ಮಾತನಾಡಿದರು.
ಡಾ ಅನ್ನದಾನೇಶ್ 

ಚೇತನಾ ಹೆಗಡೆ 

ಲೇಖಕಿ ಜಿ. ವಿ. ರೇಣುಕ ಅವರು ಜೀವನದ ತಮ್ಮ ಅನುಭವವನ್ನು ಅನುಸಂಧಾನದ ರೂಪದಲ್ಲಿ ಕೃತಿಯನ್ನು  ಹಾಗೂ ಅವರ ಸುಮಾರು 4000 ದಷ್ಟು ವಚನಗಳನ್ನು ಬರೆದಿರುವುದು ಎಂದು ತಿಳಿಸಿದರು.
ಜಿ. ವಿ. ರೇಣುಕಾ
ವೇದಿಕೆಯ ಕೋಶಾಧಿಕಾರಿ ಜಯರಾಮ ಸೋಮಯಾಜಿ ಅವರು ಡಾ ಅನ್ನದಾನೇಶ್ ಅವರನ್ನು ಶಾಲು ಹೊದಿಸಿ ಸನ್ಮಾನಿಸಿದರು.


ಹಲವಾರು ದಿನಪತ್ರಿಕೆಗಳಲ್ಲಿ ಕಾರ್ಯಕ್ರಮದ ಸುದ್ದಿಯನ್ನು ಪ್ರಕಟಿಸಲಾಯಿತು.




ವೇದಿಕೆಯ ಕಾರ್ಯದರ್ಶಿ ಶ್ರೀಮತಿ ಮಂಜುಳಾ ಭಾರ್ಗವಿ ಅವರು ಅಚ್ಚುಕಟ್ಟಾಗಿ ಕಾರ್ಯಕ್ರಮದ ನಿರೂಪಣೆಯನ್ನು ಮಾಡಿದರು.

ಶ್ರೀ ಸುಧೀಂದ್ರ ಅವರ ವಂದನಾರ್ಪಣೆ ಯೊಂದಿಗೆ ಅಂದಿನ ಕಾರ್ಯಕ್ರಮ ಮುಕ್ತಾಯಗೊಂಡಿತು.

ವರದಿ: ಮಂಜುಳಾ ಭಾರ್ಗವಿ,  ಕಾರ್ಯದರ್ಶಿ , ಶಿವರಾಮ ಕಾರಂತ ವೇದಿಕೆ.
ಎಲ್ಲರಿಗೂ ನಮಸ್ಕಾರ.
ಶಿವರಾಮ ಕಾರಂತ ವೇದಿಕೆಯ ಜುಲೈ ತಿಂಗಳ 20 ನೇ ತಾರೀಕು, ಭಾನುವಾರದ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ, ವಚನಕಾರ್ತಿಯವರಾದ ಶ್ರೀಮತಿ ಜಿ. ವಿ. ರೇಣುಕಾ ರವರ " ಸುಧಿ "ಎಂಬ ಪುಸ್ತಕ ಬಿಡುಗಡೆಯನ್ನು ಮಾಡುವ ಮೂಲಕ ನೆರವೇರಿಸಲಾಯಿತು. 
ಇದಕ್ಕೆ ಮುಖ್ಯ ಅತಿಥಿಗಳಾಗಿ ಬಂದಿದ್ದವರು, ಡಾ. ಅನ್ನದಾನೇಶ್. ಮಹಾರಾಣಿ ಲಕ್ಷ್ಮಿ ಅಮ್ಮಣ್ಣಿ ಮಹಿಳಾ ಕಾಲೇಜಿನ ಪ್ರಾಧ್ಯಾಪಕರು.   ಕಾರ್ಯಕ್ರಮದಲ್ಲಿ ಹಲವಾರು ಸದಸ್ಯರು ಭಾಗವಹಿಸಿದ್ದು ಬಹಳ ಹೆಮ್ಮೆಯ ಸುದ್ದಿ. ಕಾರ್ಯಕ್ರಮ ಅತ್ಯಂತ ಅಚ್ಚುಕಟ್ಟಾಗಿ ನಡೆಯಿತು.
ಈ ಕಾರ್ಯಕ್ರಮದಲ್ಲಿ ಮೊದಲಿಗೆ  ಅತಿಥಿಗಳನ್ನು ವೇದಿಕೆಗೆ ಆಹ್ವಾನಿಸಲಾಯಿತು. ಮತ್ತು  ಇದಾದ ಬಳಿಕ ನಮ್ಮ ಕಾರಂತ ವೇದಿಕೆಯ ಅಧ್ಯಕ್ಷರು ಡಾ. ದೀಪ ಫಡ್ಕೆ ಅವರು ಪುಸ್ತದ ಬಗ್ಗೆ ಒಂದೆರಡು ಮಾತುಗಳನ್ನು ಆಡುತ್ತಾ, ಅತ್ಯಂತ ಅಚ್ಚುಕಟ್ಟಾಗಿ ವೇದಿಕೆಗೆ ಶುಭ ಕೋರಿದರು.ತಮ್ಮ ಪ್ರಾಸ್ತಾವಿಕ ನುಡಿಗಳ ಮೂಲಕ  ಎಲ್ಲರನ್ನುದ್ದೇಶಿಸಿ ಮಾತನಾಡಿ ಕಾರ್ಯಕ್ರಮಕ್ಕೆ ಆಗಮಿಸಿದ ಅತಿಥಿಗಳಿಗೆ ಸ್ವಾಗತ ಕೋರಿದರು.
ನಂತರ.  ' ಸುಧಿ ' ಪುಸ್ತಕವನ್ನು ಲೋಕಾರ್ಪಣೆಗೊಳಿಸಲಾಯಿತು.  ನಂತರ ಮೌoಟ್ ಕಾರ್ಮಲ್ ಕಾಲೇಜಿನ ಸಹ ಪ್ರಾಧ್ಯಪಕರಾದ ಶ್ರೀಮತಿ ಚೇತನಾ ಹೆಗಡೆ ಅವರು ಸುಧಿ ಕೃತಿಯ ಪರಿಚಯವನ್ನು ಬಹಳ ಚಂದದ ರೀತಿಯಲ್ಲಿ ಮಾಡಿದರು. 
ನಂತರ ಜಿ. ವಿ ರೇಣುಕಾರವರನ್ನು ಪುಸ್ತಕದ ಬಗ್ಗೆ ತಮ್ಮ ಅನುಭವವನ್ನು ಹಂಚಿಕೊಳ್ಳುವoತೆ, ಕೇಳಿಕೊಳ್ಳಲಾಯಿತು. ಹಾಗೆಯೇ ಜಿ. ವಿ ರೇಣುಕಾರವರು, ತಮ್ಮ ಜೀವನದಲ್ಲಿ ಸಾಹಿತ್ಯದ ಹಾದಿಯ ಬಗ್ಗೆ, ಕೆಲವು ಅದ್ಭುತವಾದ ಅನುಭವವನ್ನು ವೇದಿಕೆಯೊಂದಿಗೆ ಹಂಚಿಕೊಳ್ಳಲಾಯಿತು. ಇದಾದ ನಂತರ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ  ಬಂದಿದ್ದ ಡಾ. ಅನ್ನದಾನೇಶ್ ರವರು ಸುಧಿ ಪುಸ್ತಕದ ಲೇಖಕಿಗೆ ಶುಭ ಕೋರುತ್ತಾ, ನಮ್ಮ ವೇದಿಕೆಯ ಬಗ್ಗೆ ಹೆಮ್ಮೆಯ ನುಡಿಗಳನ್ನಾಡುತ್ತಾ, ತಮ್ಮ ಮಾತುಗಳನ್ನು  ಪ್ರಾರಂಭಿಸಿದರು. ಸಾಹಿತ್ಯ ಕ್ಷೇತ್ರದಲ್ಲಿ ಮಹಿಳೆಯರ ಪಾತ್ರ, ವೈಚಾರಿಕತೆ, ಮಹಿಳೆಯರು ಬೆಳೆದು ಬಂದ ಹಾದಿ, ಆಧುನಿಕ ಸಮಾಜದಲ್ಲಿ ಮಹಿಳಾ ಸಾಹಿತ್ಯದ ಕುರಿತು, ಹಾಗೂ ವಚನ ಸಾಹಿತ್ಯದಲ್ಲಿ ಮಹಿಳೆಯರ ಸಾಧನೆಗಳು ಹೀಗೆ ಹಲವಾರು ವಿಷಯದ ಬಗ್ಗೆ ಒಂದು ಒಳ ನೋಟವನ್ನು ಬೀರುತ್ತಾ, ಸಾಹಿತ್ಯ ವಲಯದಲ್ಲಿ ಅತ್ಯಂತ ಪ್ರಮುಖ ಪಾತ್ರವನ್ನು ವಹಿಸಿದ ಅಕ್ಕಮಹಾದೇವಿ, ಸಂಚಿ ಹೊನ್ನಮ್ಮನoತವರ ಹಿರಿಯರನ್ನು ಉದಾಹರಣೆಯಾಗಿ ನೀಡಿ, ತಮ್ಮ ಅಮೂಲ್ಯವಾದ ಅವರ ಸಮಯವನ್ನು ನಮ್ಮ ವೇದಿಕೆ, ಸ್ಮರಿಸುವಂತೆ ಮಾತನಾಡಿದರು.ನಂತರ  ಸಾಹಿತಿಗಳಾದ ಜಿ. ವಿ. ರೇಣುಕಾ ಹಾಗೂ ಡಾ. ಅನ್ನದಾನೇಶ್ ರವರನ್ನು ಗೌರವ ಪೂರ್ವಕವಾಗಿ ಸನ್ಮಾನಿಸಲಾಯಿತು. 
ನಂತರ ನಮ್ಮ ವೇದಿಕೆಯ ಹಿರಿಯ ಸದಸ್ಯರಾದ ಶ್ರೀ ಸುಧೀoದ್ರ ಅವರು  ಧನ್ಯವಾದ ಸಮರ್ಪಣೆ ಮಾಡಿ,ಶಿವರಾಮ ಕಾರಂತ ವೇದಿಕೆಯ ಅಧ್ಯಕ್ಷರಿಗೂ, ಕಾರ್ಯಕ್ರಮಕ್ಕೆ  ನಿರೂಪಣೆಯನ್ನು ಮಾಡಿದ,  ಶಿವರಾಮ ಕಾರಂತ ವೇದಿಕೆಯ ಕಾರ್ಯದರ್ಶಿ ಶ್ರೀಮತಿ ಮಂಜುಳಾ ಭಾರ್ಗವಿ ಅವರಿಗೂ ಈ ಸಭಾಂಗಣವನ್ನು ಒದಗಿಸಿ ಕೊಟ್ಟ ತರಳಬಾಳು ಸಂಸ್ಥೆಯವರಿಗೂ, ಕಡೆಯದಾಗಿ ಶಿವರಾಮ ಕಾರಂತ ವೇದಿಕೆಯ ಪದಾಧಿಕಾರಿಗಳು ಹಾಗೂ ಕಾರ್ಯಕಾರಿ ಸಮಿತಿಯ ಸರ್ವ ಸದಸ್ಯರಿಗೂ  ಬಹಳ ಮುಖ್ಯವಾಗಿ  ನಮ್ಮ ವೇದಿಕೆಯ ಯಶಸ್ಸಿಗೆ ಕಾರಣರಾದ  ನಿಮ್ಮೆಲ್ಲರಿಗೂ ಅವರು ಹೃತ್ಪೂರ್ವಕ ವಂದನೆಗಳನ್ನು ಸಲ್ಲಿಸಿದರು.

ಧನ್ಯವಾದಗಳು.
ಕಾರ್ಯದರ್ಶಿ:               ಮಂಜುಳಾ ಭಾರ್ಗವಿ.

Posted 22/7/2025















Monday, April 14, 2025

ಶಿವರಾಮ ಕಾರಂತ ವೇದಿಕೆ - "ಪಾಂಗಾಳ ಡಾಕ್ಟ್ರು " - ಕೃತಿ ಬಿಡುಗಡೆ

 ಭಾನುವಾರ, 13 ಏಪ್ರಿಲ್, 2025

ತರಳಬಾಳು ಕೇಂದ್ರ, ಮಿನಿ ಹಾಲ್ , ಆರ್.ಟಿ. ನಗರ, ಬೆಂಗಳೂರು.

ಶಿವರಾಮ ಕಾರಂತ ವೇದಿಕೆಯ ಏಪ್ರಿಲ್ ತಿಂಗಳ ಕಾರ್ಯಕ್ರಮದಲ್ಲಿ ಶ್ರೀ ರಾಧಾಕೃಷ್ಣ ರಾವ್ ಪಾಂಗಳ್ ಅವರ ಕೃತಿ "ಪಾಂಗಳ್  ಡಾಕ್ಟ್ರು" ಲೋಕಾರ್ಪಣೆ ಗೊಂಡಿತು.



ಕನ್ನಡ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಶೋತ್ತಮ ಬಿಳಿಮಲೆ ಮುಖ್ಯ ಅತಿಥಿಗಳಾಗಿದ್ದು , ವೇದಿಕೆಯ ಗೌರವ ಅಧ್ಯಕ್ಷ ಎಸ.ಆರ್. ವಿಜಯಶಂಕರ್,  ಪಾಂಗಾಳ್  ಅವರ ಕೃತಿಯ ಬಗ್ಗೆ ಭಾಷಣ ಮಾಡಿದರು.


ಡಾ. ಪುರುಷೋತ್ತಮ ಬಿಳಿಮಲೆ 



ಎಸ್. ಆರ್. ವಿಜಯಶಂಕರ್ 


ಮೊದಲಿಗೆ ಪ್ರಾರ್ಥನೆಯಾದ ನಂತರ ವೇದಿಕೆಯ ಅಧ್ಯಕ್ಷೆ ಡಾ ದೀಪಾ ಫಡ್ಕೆ ಪ್ರಾಸ್ತಾವಿಕ ನುಡಿಯೊಂದಿಗೆ ಅತಿಥಿಗಳನ್ನು, ಸಭಿಕರನ್ನು ಸ್ವಾಗತಿಸಿದರು.

ಪಾ. ಚಂದ್ರಶೇಖರ ಚಡಗ 



ಕೃತಿಯ ಸಂಪಾದಕರೂ, ವೇದಿಕೆಯ ಸಂಸ್ಥಾಪಕರೂ ಆದ ಪಾ. ಚಂದ್ರಶೇಖರ ಚಡಗ ಕೃತಿಯ ಬಗ್ಗೆ ಮಾತನಾಡಿ , ಅವರನ್ನು ಗೌರವಿಸಲಾಯಿತು.



ವಿಶ್ವವಾಣಿ 

ಕನ್ನಡ ಪ್ರಭ 



ರಮೇಶ್ ಗೋಟ
 


ಶ್ರೀಮತಿ ಚೇತನಾ ಹೆಗ್ಡೆ ಕಾರ್ಯಕ್ರಮದ ನಿರೂಪಣೆಯನ್ನು ಅಚ್ಚುಕಟ್ಟಾಗಿ ಮಾಡಿದರು.
ಶ್ರೀಮತಿ ಛಾಯ ಉಪಾದ್ಯ ಅವರ ಧನ್ಯವಾದ ಸಮರ್ಪಣೆಯೊಂದಿಗೆ  ಅಂದಿನ ಕಾರ್ಯಕ್ರಮ ಮುಕ್ತಾಯ ಗೊಂಡಿತು.

Posted 14/4/2025






Sunday, December 29, 2024

ಸ್ವರ್ಗ ನಾ ಕಂಡಂತೆ - ಪುಸ್ತಕ ಬಿಡುಗಡೆ

 Saturday, December 28, 2924

Mythic Society Sabhangana, Nrupatunga Road, Bengaluru.



The ocassion was Book " SWARGA NAA KANDANTE" (ಸ್ವರ್ಗ ನಾ ಕಂಡಂತೆ)  release.


The orginal author is Dr Ranjan Pejavar, elder brother of Sudhaker Rao Pejavar.

Sudhaker Rao Pejavar

Dr Ranjan Pejavar

The program started with prayer "Gam Ganpathaye" with the guests on stage, after which ದೀಪ ಬೆಳಗಿಸುವಿಕೆ by distinguished people.


The program was presided by Padmashri Dr C R Chandrashekhar, and Dr Naa . Someshwar was Chief guest. The was translated to Kannada by Sri Satyakama Sharma.





Dr Naa Someshwar, in his speech highlighted the Book, the psychology of main character Advovate Rajashekhar, and compared with Famous author Dante.


Sudhaker Rao ( M. C.)compared the program very effectively.

As we had to leave early, we could not stay for Dr Chandrashekhar's speech.


Posted 30/12/2024

Monday, April 24, 2023

ಪುಸ್ತಕ ಬಿಡುಗಡೆ - ನೂತನ್ ದೊಶೆಟ್ಟಿ

 ಭಾನುವಾರ, ಏಪ್ರಿಲ್ 23, 2023 

10 ನೇ ಕ್ರಾಸ್, ಭುವನೆಶ್ವರಿನಗರ, ಹೆಬ್ಬಾಳ , ಬೆಂಗಳೂರು.



ಶ್ರೀಮತಿ ನೂತನ್ ದೊಶೆಟ್ಟಿ ಅವರ ಎರಡು ಪುಸ್ತಕಗಳ ಬಿಡುಗಡೆ ಕಾರ್ಯಕ್ರಮವನ್ನು ತಮ್ಮ ಮನೆಯಲ್ಲಿ ಆಯೋಜಿಸಿ ನೆರವೇರಿಸಿದರು..


ನಾವೂ ಸಹ ಸ್ವಲ್ಪ ಹೊತ್ತು ಕಾರ್ಯಕ್ರಮದಲ್ಲಿ ಹಾಜರಾಗಿ, ನಂತರ ಅಲ್ಲಿಂದ ಬೇರೆ ಕಾರ್ಯಕ್ರಮಕ್ಕೆ ಹೊರಟೆವು.

ಬಿಡುಗಡೆ ಕಾರ್ಯಕ್ರಮದಲ್ಲಿ ಹಲವಾರು ಗಣ್ಯ ವ್ಯಕ್ತಿಗಳು ಭಾಗವಹಿಸಿದ್ದು ವಿಶೇಷವಾಗಿತ್ತು.


ಪ್ರಾರ್ಥನೆಯಾದ ನಂತರ, ಶ್ರೀಮತಿ ನೂತನ್ ಅವರು,  ಅತಿಥಿಗಳನ್ನು, ನೆರೆದಿದ್ದ  ಸಭಿಕರನ್ನು ಆತ್ಮೀಯವಾಗಿ ಸ್ವಾಗತಿಸಿದರು.

ಪ್ರಾರ್ಥನೆ 


ಡಾ. ಎಮ್. ಎಸ್.ಆಶಾ ದೇವಿ, ವಿಮರ್ಶಕರು, ತಮ್ಮ ಭಾಷಣದಲ್ಲಿ "ಮಾತೆಂದರೆ ಏನು ಗೂಗಲ್" ಕವನಸಂಕಲವನ್ನು ವಿಮರ್ಶಿಸುತ್ತಾ ನೂತನ್ ಅವರ ಮನಸ್ಸಿನ ಭಾವನೆಗಳು, ಸ್ರಜನಶೀಲತೆ ಯನ್ನು ಸ್ಲಾಘಿಸಿದರು.

ಡಾ. ಆಶಾ  ದೇವಿ 

ಹಾಗೆಯೇ ಮುಂದುವರಿದು, ಪ್ರಸಕ್ತ ಕಾಲಘಟ್ಟದಲ್ಲಿ ಅಸಹಿಸ್ನುತೆ, ಸ್ತ್ರೀ ಶಕ್ತಿ, ತುರ್ತುಪರಿಸ್ತಿತಿಯ ವಾತವರಣದ ವಿಷಯ ಮಾತನಾಡಿ, ತಮ್ಮ ಎಡ ಚಿಂತನೆಯನ್ನು ಹೊರಹಾಕಿದರು.



ಕತೆಗಾರ ಮಹಾಬಲ ಮೂರ್ತಿ ಕೊಡ್ಲೆಕೆರೆ, ಹೆಣ್ಣಿನ ಬಗ್ಗೆ ಕೋಮಲ ಮಾತುಗಳನ್ನು ಆಡುತ್ತಾ ನನ್ನಲ್ಲಿ ಆಂತರ್ಯದ ಒಂದು ಪುರುಷನ ಅನಿಸಿಕೆ ವ್ಯಕ್ತವಾಗುತ್ತಿದೆ ಹೆಣ್ಣಿನ ಹೊರೆತಾಗಿ ನನ್ನಲ್ಲಿ ಬಲವಿಲ್ಲ ಹೆಣ್ಣೇ ಸಬಲೇ ಎನ್ನಬಹುದು. ನೂತನ ದೋಶೆಟ್ಟಿ ಅವರು ಸ್ವರ್ಗದೊಂದಿಗೆ ಅನುಸಂಧಾನ ಕೃತಿಯಲ್ಲಿ ಚಾರಧಾಮ್ ಪ್ರವಾಸವನ್ನು ನಾವೇ ಕೈಗೊಂಡಿರುವ ರೀತಿಯಲ್ಲಿ ಕಟ್ಟಿಕೊಟ್ಟಿದ್ದಾರೆ. "ಮಾತೇಂದರೆ ಏನು ಗೂಗಲ್" ಕೃತಿಯನ್ನು ನಾನು ಓದಿಲ್ಲ. ಆದರೂ, ಮಾತನಾಡುವ ಮುನ್ನ ಗೂಗಲ್ ನಲ್ಲಿ ಏನು ಮಾತಾಡಬೇಕು ಎಂದು ಹುಡುಕಬೇಕಾದ ಸ್ಥಿತಿ ಉಂಟಾಗಬಹುದು ಎಂಬುದು ಮುನ್ನೆಚ್ಚರಿಕೆಯ ಪ್ರತೀಕವಾಗಿದೆ ಈ ಕೃತಿ ಎನ್ನಬಹುದು. ಸ್ವರ್ಗದೊಂದಿಗೆ ಅನುಸಂಧಾನ ಕೃತಿಯಲ್ಲಿ ಜೀವ ಜಗತ್ತಿನ ಕಥೆಗಳನ್ನು ಹೇಳುತ್ತಾ ಹೋಗಿದ್ದಾರೆ ಜೀವ ಜೀವದೊಂದಿಗೆ ಪ್ರಕೃತಿ ಪರಿಸರ ಸಂಬಂಧಗಳನ್ನು ಕಟ್ಟಿಕೊಟ್ಟಿದ್ದಾರೆ ಎಂದರು.

ಅಂಕಣಕಾರ ಎಸ್.‌ ಷಡಕ್ಷರಿ, ಬರವಣಿಗೆ ಎಂಬುದು ನಮಗೆ ನಾವೇ ತಂದುಕೊಳ್ಳುವ ಸ್ಫೂರ್ತಿ. ಬರವಣಿಗೆ ಕಷ್ಟವೂ ಹೌದೂ, ಇಷ್ಟವೂ ಹೌದು. ನೂತನ ಅವರು ಬರವಣಿಗೆಯಲ್ಲಿ ನಿರತರಾಗಿರಲಿ ಎಂದು ಆಶಿಸಿದರು.

ಲೇಖಕಿ ನೂತನ ದೋಶೆಟ್ಟಿ, ನಾನು ಪ್ರವಾಸ ಕಥನವನ್ನು ಬರೆಯಬೇಕೆಂದು ಬರೆಯಲಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಅಂದಿನ ದಿನದ ಪ್ರವಾಸದ ಅನುಭವವನ್ನು ಪ್ರಕಟಿಸುತ್ತಿದ್ದೆ. ಆಗ ಸ್ನೇಹಿತರು ಹಾಗೂ ಹಿತೈಷಿಗಳು ನನ್ನನ್ನು ಪುಸ್ತಕ ರೂಪದಲ್ಲಿ ಪ್ರಕಟಿಸುವಂತೆ ಒತ್ತಾಯಿಸಿದ್ದು "ಸ್ವರ್ಗದೊಂದಿಗೆ ಅನುಸಂಧಾನ" ಕೃತಿ ಸಾಕ್ಷಿ ಎಂದರು.

ಕಾಯಕ್ರಮದಲ್ಲಿ ದಕ್ಷಿಣ ವಲಯದ ನಿವೃತ್ತ ಸಹಾಯಕ ನಿರ್ದೇಶಕ ಶ್ರೀನಿವಾಸ್‌, ಕುವೆಂಪು ವಿಶ್ವವಿದ್ಯಾಲಯದ ಕುಲಪತಿ ಬಿ.ಪಿ.ವೀರಭದ್ರಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.



ಶ್ರೀಮತಿ ನೂತನ್ ದೊಶೆಟ್ಟಿ ಯವರ ಸಾಹಿತ್ಯ ಅಭಿರುಚಿ, ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಅಭಿನಂದನೆಗಳು.

ಬರೆದಿರುವುದು 25/4/2023