ಭಾನುವಾರ, ಡಿಸೆಂಬರ್ 15, 2024
ವಿನಾಯಕ ದೇವಸ್ಥಾನ, ಅರ್.ಟಿ. ನಗರ, ಬೆಂಗಳೂರು.
ಶಿವರಾಮ ಕಾರಂತ ವೇದಿಕೆಯ ಡಿಸೆಂಬರ್ ತಿಂಗಳ ಕಾರ್ಯಕ್ರಮದಲ್ಲಿ ರಾಷ್ಟ್ರಕವಿ ಕುವೆಂಪು ಸ್ಮರಣೆಯೊಂದಿಗೆ ಸಂಪನ್ನಗೊಂಡಿತು.
https://youtu.be/kmvHWYGGdws?si=bseW4535FM7ND-9X
ಶಿವರಾಮ ಕಾರಂತ ವೇದಿಕೆಯ ಆಶ್ರಯದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಕುವೆಂಪು ನಾಟಕಗಳ ವೈಚಾರಿಕತೆ ಕುರಿತು ನಾಟಕಕಾರ ಬೇಲೂರು ರಘುನಂದನ್ ಮಾಡಿದ ಉಪನ್ಯಾಸದ ಧ್ವನಿಮುದ್ರಿಕೆ ಇಲ್ಲಿದೆ. ಇಯರ್ ಫೋನ್ ಬಳಸಿ ಆಲಿಸಿರಿ
ಶ್ರೀಯುತ ಬೇಳೂರು ರಘುನಂದನ್ ಅವರು "ಕುವೆಂಪು ನಾಟಕಗಳ ವೈಚಾರಿಕತೆ" ಕುರಿತು ಸುಮಾರು ಒಂದು ಗಂಟೆಯ ಕಾಲ ಉಪನ್ಯಾಸ ನೀಡಿ , ವಿವಿಧ ನಾಟಕಗಳ, ಮುಖ್ಯವಾಗಿ "ಶೂದ್ರ ಶ್ರೀನಿವಾಸ", "ಬೆರಳಲ್ಲಿ ಕೊರಳ್" ಮತ್ತು ಇತರ ನಾಟಕಗಳ ವಿಶ್ಲೇಷಣೆ ನೀಡಿದರು.
ವೇದಿಕೆಯ ಅಧ್ಯಕ್ಷೆ ಶ್ರೀಮತಿ ಡಾ. ದೀಪಾ ಫಡ್ಕೆ ಅವರು ತಮ್ಮ ಪ್ರಾಸ್ತಾವಿಕ ನುಡಿಯಲ್ಲಿ "ವೈಚಾರಿಕತೆ ಮತ್ತು ಆಧ್ಯಾತ್ಮಿಕತೆ" bagge ಮಾತನಾಡಿ ಮುಖ್ಯ ಅತಿಥಿ ಯನ್ನು ಸ್ವಾಗತಿಸಿದರು.
ಶ್ರೀ ರಘುನಂದನ್ ಅವರನ್ನು ಶಾಲು, ಹಾರ ಮತ್ತು ಉದುಗೊರೆಯೊಂದಿಗೆ ಗೌರವ ಸಮರ್ಪನೆಯನ್ನು ಮಾಡಲಾಯಿತು.
ವೇದಿಕೆಯ ಕಾರ್ಯದರ್ಶಿ ಶ್ರೀಮತಿ ಮಂಜುಳಾ ಭಾರ್ಗವಿ ಅವರು ಅತಿಥಿಗಳ ಪರಿಚಯವನ್ನು ಮಾಡಿ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು.
Posted 17/12/2024
ವೇದಿಕೆಯ ಅಧ್ಯಕ್ಷೆ ಶ್ರೀಮತಿ ಡಾ. ದೀಪಾ ಫಡ್ಕೆ ಅವರು ತಮ್ಮ ಪ್ರಾಸ್ತಾವಿಕ ನುಡಿಯಲ್ಲಿ "ವೈಚಾರಿಕತೆ ಮತ್ತು ಆಧ್ಯಾತ್ಮಿಕತೆ" bagge ಮಾತನಾಡಿ ಮುಖ್ಯ ಅತಿಥಿ ಯನ್ನು ಸ್ವಾಗತಿಸಿದರು.
ಪ್ರಾರ್ಥನೆ - ಕುಮಾರಿ ಪ್ರಣತಿ
ಕುಮಾರಿ ಪ್ರಣತಿ ಅವರು ಸುಶ್ರಾವ್ಯವಾಗಿ ಹಾಡೊಂದನ್ನು ಹಾಡಿ ಪ್ರಾರ್ಥನೆ ಮಾಡಿದರು.
ಶ್ರೀ ರಘುನಂದನ್ ಅವರನ್ನು ಶಾಲು, ಹಾರ ಮತ್ತು ಉದುಗೊರೆಯೊಂದಿಗೆ ಗೌರವ ಸಮರ್ಪನೆಯನ್ನು ಮಾಡಲಾಯಿತು.
ವೇದಿಕೆಯ ಕಾರ್ಯದರ್ಶಿ ಶ್ರೀಮತಿ ಮಂಜುಳಾ ಭಾರ್ಗವಿ ಅವರು ಅತಿಥಿಗಳ ಪರಿಚಯವನ್ನು ಮಾಡಿ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು.
ವರದಿ: ಶ್ರೀಮತಿ ಮಂಜುಳಾ ಭಾರ್ಗವಿ
ಎಲ್ಲರಿಗೂ ನಮಸ್ಕಾರ.......
ಶಿವರಾಮ ಕಾರಂತ ವೇದಿಕೆ (ರಿ)
ರವೀಂದ್ರನಾಥ ಟಾಗೋರ್ ನಗರ,
ಬೆಂಗಳೂರು-560032
ದಿನಾಂಕ 15-11-2024 ಭಾನುವಾರ, ವಿನಾಯಕ ದೇವಸ್ಥಾನ, ಆರ್.ಟಿ.ನಗದ ಪಾಂಚಜನ್ಯ ಹಾಲ್ ನಲ್ಲಿ ಕಾರ್ಯಕ್ರಮ ನಡೆಯಿತು.ಇದರಲ್ಲಿ ಹಲವಾರು ಸದಸ್ಯರು ಉಪಸ್ಥಿತಿಯಲ್ಲಿದ್ದು, ಸಭೆಯನ್ನು ಯಶಸ್ವಿಯಾಗಿ ನಡೆಸಿ ಕೊಟ್ಟರು.ಅವರಿಗೆಲ್ಲಾ ಧನ್ಯವಾದಗಳನ್ನು ತಿಳಿಸುತ್ತಾ , ಕಾರಣಾಂತರಗಳಿಂದ ಬರದೇ ಉಳಿದ ಸದಸ್ಯರಿಗಾಗಿ ಇಂದಿನ ಕಾರ್ಯಕ್ರಮದ ಕುರಿತು ಈ ಒಂದು ವರದಿ.
ನಮ್ಮ ಸಂಸ್ಥೆಯ ಡಿಸಂಬರ್ ತಿಂಗಳ ” ಕುವೆಂಪು ನಾಟಕಗಳ ವೈಚಾರಿಕತೆ ” ಕುರಿತ ಕಾರ್ಯಕ್ರಮಕ್ಕೆ ನಿಮ್ಮೆಲ್ಲರಿಗೂ ಸ್ವಾಗತ. ಈ ತಿಂಗಳ ಕಾರ್ಯಕ್ರಮದಲ್ಲಿ ನಮ್ಮೊಂದಿಗಿದ್ದವರು ಬೇಲೂರಿನವರಾದ ಡಾ. ರಘುನಂದನ್ ಸರ್ , ಇವರು ಖ್ಯಾತ ನಾಟಕಕಾರರೂ, ವಿಮರ್ಶಕರೂ, ನಾಟಕ ನಿರ್ದೇಶಕರೂ ಆಗಿದ್ದಾರೆ. ಅವರ ಅನೇಕ ಕಾವ್ಯ, ಮಕ್ಕಳ ಸಾಹಿತ್ಯ, ನಾಟಕ, ಕಥೆಗಳು, ಅಂಕಣ ಬರಹ, ಪ್ರವಾಸ ಸಾಹಿತ್ಯ ಮತ್ತು ಸಂಶೋಧನಾ ಬರಹಗಳು ಪ್ರಕಟವಾಗಿವೆ. ಅವರು ಕನ್ನಡ ರಂಗಭೂಮಿಯಲ್ಲಿ ವ್ಯಾಪಕವಾಗಿ ಮೆಚ್ಚುಗೆ ಪಡೆದ ಕವಿ. ರಘುನಂದನ್ ಅವರು ತಮ್ಮ ಮಾತೃಶ್ರೀಯವರಾದ ಶ್ರೀಮತಿ ಸುಬ್ಬಲಕ್ಷ್ಮಿ, ಇವರ ಸೋದರಿ ಶ್ವೇತ (ವಿಜಯಲಕ್ಷ್ಮಿ) ಮತ್ತು ತಮ್ಮ ಧರ್ಮಪತ್ನಿಯವರಾದ ಶ್ರೀಮತಿ ಲಕ್ಷ್ಮಿ , ಮಕ್ಕಳಾದ ಗೋಕುಲ್ ಸಹೃದಯ, ಉದಯರವಿ (ಪುಟಾಣಿ) ಹೀಗೆ ತಮ್ಮ ಕುಟುಂಬ ಸಮೇತ ಕಾರ್ಯಕ್ರಮಕ್ಕೆ ಆಗಮಿಸಿದ್ದರು ಎನ್ನುವುದೇ ನಮ್ಮ ಹೆಮ್ಮೆ ಹಾಗು ಸೌಭಾಗ್ಯ.
ಮೊದಲಿಗೆ, ವೇದಿಕೆಗೆ ರಘುನಂದನ್ ಸರ್ ಮತ್ತು ದೀಪಾ ಫಡ್ಕೆ ರವರು ಆಗಮಿಸಿದರು. ಎಂದಿನಂತೆ ಕುಮಾರಿ ಪ್ರಣತಿ ಅವರಿಂದ ಅತ್ಯಂತ ಸುಶ್ರಾವ್ಯವಾದ ಪ್ರಾರ್ಥನೆಯನ್ನು ಮಾಡಲಾಯಿತು. ನಂತರ ಅಧ್ಯಕ್ಷರಾದ ಡಾ.ದೀಪಾ ಫಡ್ಕೆ ರವರು ತಮ್ಮ ಪ್ರಾಸ್ತಾವಿಕ ಮತ್ತು ಸ್ವಾಗತ ನುಡಿಗಳಲ್ಲಿ ಕುವೆಂಪುರವರ ಆದರ್ಶಗಳನ್ನು ಕುರಿತು ಯುಗದ ಕವಿ ಜಗದ ಕವಿಯ ಬಗ್ಗೆ ಅತ್ಯಂತ ಚಿಕ್ಕ ಹಾಗು ಚೊಕ್ಕ ಭಾಷಣದಿಂದ ಎಲ್ಲರ ಗಮನ ಸೆಳೆದರು. ವೈಚಾರಿಕತೆ ಹಾಗು ಆಧ್ಯಾತ್ಮ ಒಂದೇ ನಾಣ್ಯದ ಎರಡು ಮುಖಗಳು ಎಂದು ಹೇಳುತ್ತಾ, ವಿದ್ಯೆಯಿಂದ ವಿನಯ ಬರಲು ಸಾಧ್ಯ ಎಂಬ ಮಾತನ್ನು ಹೇಳಿ ಕುವೆಂಪುರವರ ಬಗ್ಗೆ ಅತ್ಯಂತ ಸ್ಪಷ್ಟ ಹಾಗು ಸಮಂಜಸ ಮಾತುಗಳನ್ನು ಹೇಳಿ ತಮ್ಮ ಮಾತುಗಳನ್ನು ಮುಗಿಸಿದರು.
ರಘುನಂದನ್ ಸರ್ ರವರ ಭಾಷಣದ ಬಗ್ಗೆ ತಿಳಿದಿದ್ದ ನಾವು ಅತ್ಯಂತ ಉತ್ಸುಕತೆಯಿಂದ ಕಾಯುತ್ತಿದ್ದ ಸಮಯಕ್ಕೆ ಅನುವು ಮಾಡಿಕೊಟ್ಟೆವು. ಕುವೆಂಪುರವರನ್ನು ನೆನಪು ಮಾಡಿಕೊಳ್ಳುವ ಮೂಲಕ ನಮ್ಮ ವಿವೇಕವನ್ನು ಹೆಚ್ಚಿಸಿ ಕೊಳ್ಳುವ ಪ್ರಯತ್ನವೇ ಈ ಕಾರ್ಯಕ್ರಮದ ತಿರುಳು. ಕುವೆಂಪು ಎಂದರೇನೆ ವಿಚಾರ ವೈಚಾರಿಕತೆ. ಕನ್ನಡದ ಹೊಸ ದಿಕ್ಕನ್ನು ಕಾಣಿಸಿದವರು ಕುವೆಂಪುರವರು , ನಾಟಕಗಳ ಮೂಲಕವೇ ಏಕೆ ನಾವು ವೈಚಾರಿಕತೆಯ ಬಗ್ಗೆ ಹೇಳಬೇಕೆಂಬುದಕ್ಕೆ ಉತ್ತರಿಸುತ್ತಾ, ವೈಚಾರಿಕತೆಯನ್ನು ನಾಟಕಗಳಿಂದಲೆ ನಾವು ಕಾಣಬೇಕಾಗುತ್ತದೆ. ಏಕೆಂದರೆ ನಾಟಕಗಳು ಒಂದು ಪ್ರದರ್ಶನ ಮಾಧ್ಯಮ, ಬಹುತೇಕ ಜನಗಳಿಗೆ ತಲುಪಬೇಕಾದ ವಿಷಯ, ಮಾಧ್ಯಮ. ಹೀಗೆ ಹೇಳುತ್ತಾ ವಿಕಸಿತರಾಗುವುದೇ ವೈಚಾರಿಕತೆಯ ಉದ್ದೇಶ. ಸಮಾಜ ಮತ್ತು ವಿಶ್ವಮಾನವ ಗುಣ ಎಂದು ಹೇಲುವ ಮೂಲಕ ತಮ್ಮ ಮಾತುಗಳನ್ನು ಆರಂಭಿಸಿದ ರಘುನಂದನ್ ಸರ್ ರವರ ಉಪನ್ಯಾಸದ ಬಗ್ಗೆ ಅದೆಷ್ಟು ಬರೆದರೂ ಸಾಲದು.ಭಾರತ ಮಾತೆ ನಮ್ಮ ಕನ್ನಡಾಂಬೆಯ ಮಡಿಲಿಗೆ ಅದೆಂಥಹ ಅನರ್ಘ್ಯ ರತ್ನಗಳನ್ನು ಸುರಿದಿದ್ದಾಳೆ ಎನಿಸುತ್ತದೆ. ರಘುನಂದನ್ ಸರ್ ರವರ ಮಾತು ನದಿ ಹರಿಯುವಷ್ಟು ಸರಾಗವಾಗಿ ನಮ್ಮ ಸ್ಮೃತಿಗೆ ಇಳಿಸಿ ಬಿಟ್ಟರೆನಿಸಿತು. ತಮ್ಮ ಬಿಡುವಿಲ್ಲದ ಸಮಯದಲ್ಲೂ ತಾವು ತುಂಬಾ ಚೆನ್ನಾಗಿ ಮಾತಿಗೆ ಸಿದ್ದತೆಗಳನ್ನು ಮಾಡಿಕೊಂಡು ಬಂದಿದ್ದರು. ಅಷ್ಟೇ ಅಲ್ಲದೇ ತಮ್ಮ ಭಾಷಣದ ಮೊದಲಿಗೆ ನಮ್ಮ ಕಾರಂತವೇದಿಕೆಯ ಉಸಿರಾಟದಂತಿರುವ ಚಂದ್ರಶೇಖರ ಚಡಗರವರನ್ನು ನೆನೆಯುತ್ತಾ ತಾವು ಮಾತಿಗಿಳಿದಿದ್ದು ನಿಜಕ್ಕೂ ಅವರ” ತುಂಬಿದ ಕೊಡ ತುಳುಕುವುದಿಲ್ಲ ”ಎಂಬ ಗುಣದ ನೆರಳು ಸರಿದ ಹಾಗೆನಿಸಿತು.
ಇನ್ನೂ ವಿಶ್ವಮಾನವ ಗುಣವನ್ನು ಸ್ವಲ್ಪ ವಿಸ್ತರಿಸುತ್ತಾ, ನಮ್ಮನ್ನೇ ನಾವು ಸೋಸಿಕೊಳ್ಳುವ ಮೂಲಕ ಜಾತಿ ಮತ ಭೇಧಗಳನ್ನು ಮೆಟ್ಟಿ ನಿಲ್ಲುವುದೇ ವಿಶ್ವಮಾನವ ಸಂದೇಶ ಎಂದರು. ಮತ್ತು ರಾಮಯಣ ದರ್ಶನಂ ಕೃತಿಯ ಬಗ್ಗೆ ಹೇಳುತ್ತಾ ಮಂಥರೆಯನ್ನು ಉದಾಹರಿಸಿದರು. ಅಳುತ್ತಿದ್ದ ಬಾಲಕ ರಾಮನನ್ನು ಸಮಾಧಾನ ಪಡಿಸಲು , ಮಂಥರೆ ಕನ್ನಡಿಯೊಳಗಿನ ಚಂದ್ರನನ್ನು ತೋರಿಸಿದಾಗ , ರಾಮ ಅಳುವುದನ್ನು ನಿಲ್ಲಿಸುತ್ತಾನೆ. ಆಗ ಮಂಥರ ಬಾಲರಾಮನನ್ನು ಎತ್ತಿ ಕೊಳ್ಳಲು ಹೋದಾಗ ಮುಗ್ದ ರಾಮ ಅದನ್ನು ತಿರಸ್ಕರಿಸುತ್ತಾನೆ. ಈ ಘಟನೆಯ ಮೂಲಕ ಪ್ರಾರಂಭವಾದ ಮಂಥರೆಯ ಕಿಚ್ಚು ರಾಮನಿಗೆ ಪಟ್ಟಾಭಿಷೇಕವಾಗದಂತೆ ತಡೆಯುವ ಮೂಲಕ ತಣ್ಣಗಾಯಿತು. ಮತ್ತು ಕುವೆಂಪು , ಬೇಂದ್ರೆ, ಕಾರಂತರು ನಮ್ಮ ಕನ್ನಡ ಸಾಹಿತ್ಯ ಲೋಕಕ್ಕೆ ಕೊಟ್ಟ ಅತ್ಯದ್ಭುತ ವೈಚಾರಿಕತೆಯ ಸೂತ್ರ ಅಥವ ಪ್ರಮೇಯವನ್ನು ನಾವು ಅಳವಡಿಸಿ ಕೊಂಡರೆ ವಿಶ್ವಮಾನವ ಗುಣ ನಮ್ಮಲ್ಲಿ ತಾನಾಗೇ ಉಧ್ಭವಿಸುವುದು ,ಸಾಹಿತ್ಯ ಅನ್ನುವುದು ಒಂದು ಅದ್ಭುತ ಜಿಜ್ಞಾಸೆ ಎನ್ನುತ್ತಾರೆ.ನಿರಂಜನರಂತಹ ಅದ್ಭುತ ಬರಹಗಾರರನ್ನೂ ಕೂಡ ನೆನಪಿಸಿ ಕೊಂಡದ್ದು ಒಂದು ಕ್ರಿಯಾಶೀಲತೆಯ ಸಂಕೇತ. ಈ ಮೂಲಕ ಕುವೆಂಪುರವರ ಮಂತ್ರಮಾಂಗಲ್ಯವನ್ನೂ ಕೂಡ ನೆನಪಿಸಿ ಕೊಂಡರು.
ಕುವೆಂಪುರವರ 14 ನಾಟಕಗಳ ಬಗ್ಗೆ ಮಾತನಾಡುತ್ತಾ, ಸಮಾಜದ ಜೊತೆಗೆ ನೇರವಾಗಿ ಹೇಳಬೇಕಾದ ” ಮೋಡಣ್ಣನ ತಮ್ಮ” ಎನ್ನುವ ಮಕ್ಕಳ ನಾಟಕದಲ್ಲಿ ಪ್ರಕೃತಿಯನ್ನ ಗಾಢವಾಗಿ ಪ್ರೀತಿಸುವ ಕವಿ ಕನ್ನಡದಲ್ಲಿ ಇದ್ದರೆ ಅದು ಕುವೆಂಪುರವರು ಮಾತ್ರವೆ ಎಂದು ಹೇಳುತ್ತಾರೆ. ಪ್ರಕೃತಿಯ ಜೊತೆಗೆ ಒಂದು ಅವಿನಾಭಾವ ಸಂಬಂಧ ಇಟ್ಟು ಕೊಂಡಿದ್ದ ಕುವೆಂಪುರವರು ನಮಗೆ ಕಾಣಸಿಗುತ್ತಾರೆ. ಕುವೆಂಪುರವರು ತಮ್ಮ ತಾರುಣ್ಯದ ಕನಸುಗಳನ್ನು ಪ್ರಕೃತಿಯ ಜೊತೆಗೆ ಕಾಣುತ್ತಿದ್ದರು. ಹಕ್ಕಿ ಹಾರುತಿದೆ ನೋಡಿದಿರಾ? ಎಂಬ ಸಾಲನ್ನು ಹೇಳುವ ಮೂಲಕ ತಮ್ಮ ಜೀವನದ ನೈಜ ಘಟನೆಯೊಂದನ್ನು ಬಿಚ್ಚಿಟ್ಟರು. ತಾವೂ ಕೂಡ ಚಿಕ್ಕವರಿರುವಾಗ ಬಾಲ್ಯದ ತಮ್ಮೂರಿನ ಕೆರೆಯ ಸಂಗಡ ಮಾತನಾಡುತ್ತಿದ್ದರು. ಆ ಕೆರೆಯಲ್ಲಿ ಬರುತ್ತಿದ್ದ ಅಲೆಗಳನ್ನು ಕಂಡು ತಾವು ಮಾತನಾಡಿದರ ಕಾರಣ ಕೆರೆ ಉತ್ತರಿಸುತ್ತಿದೆ ಎಂದು ಬಗೆಯುತ್ತಿದ್ದರೆಂಬ ಮುಗ್ಧತೆಯನ್ನು ಅಲ್ಲಿ ಹೇಳಲಾಯಿತು. ಕಾಳಜಿಯ ಮತ್ತೊಂದು ಮಕ್ಕಳನಾಟಕ ”ನನ್ನ ಗೋಪಾಲ” ಎಂಬುದಾಗಿದೆ . ಇದರಲ್ಲಿ ಒಬ್ಬ ಬಡ ವಿಧವೆ , ಕೃಷ್ಣನ ಪರಮ ಭಕ್ತೆ. ತನ್ನ ಮಗನಿಗೆ, ಗುರುಗಳಿಗೆ ಕೊಡಲು ,ಶ್ರೀಮಂತರಂತೆ ತನ್ನ ಬಳಿ ದುಬಾರಿ ವಸ್ತುಗಳೇನಿಲ್ಲದಿದ್ದರೂ, ಪುಟ್ಟ ಮಡಿಕೆಯೊಂದರಲ್ಲಿ ಕೊಟ್ಟು ಕಳುಹಿಸಿದ ಕೆನೆಮೊಸರನ್ನು ಗುರುಗಳು ಅತ್ಯಂತ ಕಾಳಜಿಯೊಂದಿಗೆ ಅದನ್ನು ಸ್ವೀಕರಿಸಿದರೆಂಬ ಭಕ್ತಿ ಭಾವ ಮೂಡುವ ಕುತೂಹಲಭರಿತ ಪ್ರಸಂಗವೊಂದನ್ನು ಮನ ಮುಟ್ಟುವಂತೆ ಹೇಳಿದರು. ಇನ್ನೂ ಇದೇ ನಾಟಕದ ಮತ್ತೊಂದು ಭಾಗದಲ್ಲಿ ಕಾಡಿನಿಂದ ನಡೆದು ಬರುತ್ತಿದ್ದ ಪುಟ್ಟ ಬಾಲಕನ ಭಯ ಹೋಗಲಾಡಿಸುವ ಸಲುವಾಗಿ ತಾಯಿ, ” ನಿನಗೆ ಕಾಡಿನಲ್ಲಿ ಬರುವಾಗ ಭಯವಾದರೆ ಅಲ್ಲೇ ಇರುವ ನಿನ್ನಣ್ಣನನ್ನು ಕೂಗು , ಅವನು ಬಂದು ನಿನ್ನನ್ನು ಮನೆಯವರೆಗೂ ಬಿಟ್ಟು ಹೋಗುತ್ತಾನೆ” ಎಂದು ಒಂದು ಊಹೆಯ ಸುಳ್ಳೊಂದನ್ನು ಹೇಳುತ್ತಾಳೆ. ಆದರೆ ಆ ಪುಟ್ಟ ಬಾಲಕ ಅದನ್ನೇ ನಿಜವೆಂದು ತಿಳಿದು ಒಮ್ಮೆ ಸಂಜೆ ಜಾರುವ ಸಮಯದಲ್ಲಿ ತನ್ನ ತಾಯಿಯ ನುಡಿ ನೆನಪಾಗಿ,ಕಾಡಿನ ಮಧ್ಯೆ ,ಇಲ್ಲದ ತನ್ನ ಅಣ್ಣ ಗೋಪಾಲನನ್ನು ಸಹಾಯಕ್ಕೆ ಕರೆಯುತ್ತಾನೆ. ಅವನ ಮುಗ್ದ ಪ್ರೀತಿಯನ್ನು ಕಂಡು ಸಾಕ್ಷಾತ್ ಶ್ರೀ ಕೃಷ್ಣನೆ ಗೋಪಾಲನ ವೇಷದಲ್ಲಿ ಬಂದು ಬಾಲಕನನ್ನು ಮನೆ ಸೇರಿಸಿ ಹೋಗುತ್ತಾನೆ. ಈ ಪ್ರಸಂಗವಂತು ಕೇಳುವಾಗ ನಿಜಕ್ಕೂ ನನ್ನ ಕಣ್ಣಲ್ಲಿ , ಅಶ್ರಯವಿಲ್ಲದೇ ಆನಂದ ಭಾಷ್ಪವೊಂದು ಕೆನ್ನೆಮೇಲಿಂದ ಜಾರಿತು. ಇದನ್ನೆಲ್ಲಾ ಪುಟ್ಟ ಬಾಲಕನು ತನ್ನ ತಾಯ ಬಳಿಯಲ್ಲಿ ವಿವರಿಸುವಾಗ, ತಾಯ ಕಣ್ಣಂಚು ಒದ್ದೆಯಾಗುತ್ತದೆ. ಕಡೆಗೂ ನನ್ನ ಗೋಪಾಲ ನನ್ನ ಕೈಬಿಡಲಿಲ್ಲವೆಂಬುದನ್ನು ನಿರ್ಮಲ ಮನಸಿನ ವ್ಯಕ್ತಿಗಳು ದೇವರಿಗೆ ಇಷ್ಟವಾಗುತ್ತಾರೆ, ಎನ್ನುವ ತಾಯ ವೈಚಾರಿಕತೆಯ ಸಿದ್ದಾಂತಕ್ಕೆ ನೀರೆರೆಯುತ್ತಾರೆ.ಮಗುವಿಗೆ ಕಾಣುವ ಗೋಪಾಲ ಲೋಕಕ್ಕೆ ಎಂದಿಗೂ ಕಾಣುವುದಿಲ್ಲ.
”ಯಮನ ಸೋಲು” ಸತ್ಯವಾನ ಮತ್ತು ಸಾವಿತ್ರಿ ಬಗ್ಗೆ ಹೇಳುತ್ತಾ ಸತ್ಯವಾನನನ್ನು ಕರೆದು ಕೊಂಡು ಹೋಗಲು ಬಂದ ಯಮನನ್ನು ತಡೆದು” ಸತಿಸಾವಿತ್ರಿಯಾದ ಪ್ರಸಂಗವೊಂದನ್ನು ವಿವರಿಸುವಾಗ ,ದಾಂಪತ್ಯದ ಅತ್ಯಂತ ತೂಕವುಳ್ಳ ಪಾತಿವ್ರತ್ಯದ ಬಗ್ಗೆ ಹೇಳುತ್ತಾರೆ. ಸತಿಪತಿಯೊಳಗೊಂದಾದ ಭಕುತಿ ಹಿತವೊಪ್ಪುವುದು ಎಂಬ ವಚನದ ಮೂಲಕ ಯಮನ ಸೋಲನ್ನ ತಮ್ಮ ಮಾತಿನ ಮೂಲಕ ದಾಖಲಿಸುತ್ತಾರೆ. ಇನ್ನು ಜಲಗಾರ” ನಾಟಕದ ಬಗ್ಗೆ ಹೇಳುವಾಗಿನ ಮಾತುಗಳು ನಿಜಕ್ಕೂ ಮತ್ತೊಂದು ಮಾನವೀಯತೆಯೆಂಬ ಸಾಗರದಲ್ಲಿ ತಣ್ಣನೆಯ ಅಲೆಯುಕ್ಕಿಸುವುದು.ರೈತರ ಮತ್ತು ಜಲಗಾರರ ನಡುವಿನ ವ್ಯತ್ಯಾಸಗಳನ್ನು ವಿವರಿಸುತ್ತಾರೆ. ನಮ್ಮ ದಿನ ನಿತ್ಯದ ಜೀವನದಲ್ಲಿ ಜಲಗಾರನೆಂಬ ತ್ಯಾಜ್ಯ ವಿಲೇವಾರಿ ಮಾಡುವ ಜನರನ್ನು ನಾವುಗಳು ಕಸದವರು ಎಂಬ ನಾಮದಿಂದ ಗುರುತಿಸುತ್ತೇವೆ. ಆದರೆ ಇದರ ಬಗ್ಗೆ ಯಾರನ್ನೂ, ಯಾವುದೇ ರೀತಿಯಲ್ಲಿ ಆಕ್ಷೇಪಣೆಗಳನ್ನು ಮಾಡದೆ, ತಮ್ಮ ಸರಳ ಮಾತುಗಳ ಮೂಲಕ ಒಣಕಸ ಮತ್ತು ಹಸಿ ಕಸವನ್ನು ಹೇಗೆ ಬೇರ್ಪಡಿಸಬೇಕು? ಮತ್ತು ಹಾಗೆ ಮಾಡುವಲ್ಲಿ ನಮ್ಮನಿಮ್ಮೆಲ್ಲರ ಪಾತ್ರ ಏನೆಂಬುದನ್ನು ಅರ್ಥಮಾಡಿಸಿದರು. ಬಿರುಗಾಳಿ (1930)ವಾಲ್ಮೀಕಿಯ ಭಾಗ್ಯ (1931) ಮಹಾರಾತ್ರಿ (1931)ಸ್ಶಶಾನ ಕುರುಕ್ಷೇತ್ರಂ (1931)ರಕ್ತಾಕ್ಷಿ (1933)ಹೀಗೆ ಪ್ರತಿಯೊಂದು ನಾಟಕಗಳ ಕುರಿತಾಗಿ ಅಲ್ಲಿ ಬರುವ ವಿಚಾರಗಳನ್ನು ಹಂಚಿಕೊಂಡರು. ”ಶೂದ್ರ ತಪಸ್ವಿ” (1944) ಈ ನಾಟಕದ ಬಗ್ಗೆ ಹೇಳುತ್ತಾ, ತಪಸ್ಸು ಮಾಡಲು ಯಾರು ಯೋಗ್ಯರು ಎಂಬುದನ್ನು ಕಟ್ಟಿಕೊಡುತ್ತದೆ. ಶಂಭೂಕ ಮತ್ತು ಬ್ರಾಹ್ಮಣನೊಬ್ಬನ ನಡುವಿನ ಸಂಘರ್ಷ, ಮತ್ತು ಮೈದಳೆಯಲೆ ಬೇಕಾದ ವಿವೇಕವನ್ನು ಕವಿ ಕಟ್ಟಿ ಕೊಡುತ್ತಾರೆ.ಮತ್ತು ಬೇಡರ ಕಣ್ಣಪ್ಪನ ಉದಾಹರಣೆಯನ್ನು ಹೇಳುತ್ತಾರೆ. . ಬೆರಳ್‍ಗೆ ಕೊರಳ್ (1947) ಅರಮನೆಯಿಂದ ನಿಯೋಜಕರಾದ ದ್ರೋಣರ ಬಗ್ಗೆ ಈ ನಾಟಕದಲ್ಲಿ ಹೇಳುತ್ತಾರೆ. ಏಕಲವ್ಯನು ಅರ್ಜುನನನ್ನು ಮೀರಿಸುವ ವಿಲ್ವಿದ್ಯೆಯನ್ನು ಕಲಿತುಕೊಂಡಾಗ, ದ್ರೋಣಾಚಾರ್ಯರು ಏಕಲವ್ಯನ ಹೆಬ್ಬೆರಳನ್ನು ಗುರುದಕ್ಷಣೆಯನ್ನಾಗಿ ಕೇಳಿ ಏಕಲವ್ಯನ ಜೀವನವು ಹೇಗೆ ಕೊನೆಗೊಂಡಿತು ಎಂಬುದನ್ನು ತಿಳಿಸುತ್ತಾರೆ.
ಬಲಿದಾನ (1948) ಈ ನಾಟಕದಲ್ಲಿ ಭಾರತದ ಸ್ವಾತಂತ್ರ ದೇಶಭಕ್ತಿಯ ವೈಚಾರಿಕ ಆಯಾಮವನ್ನು ಅರ್ಥ ಮಾಡಿಸಿದ ,ಭಾರತದಲ್ಲಿ ಬ್ರಿಟೀಷರ ಆಳ್ವಿಕೆಯಿಂದ ಕಂಗೆಟ್ಟಿದ್ದ ನಮ್ಮ ಭಾರತೀಯರ ಬಗ್ಗೆ, ಕುವೆಂಪು ತರುಣನಾಗಿ ಚಿಂತೆ ಮಾಡಿದ ವಿಚಾರದ ಬಗ್ಗೆ ಹೇಳಿದರು. ಚಂದ್ರಹಾಸ (1963) ಜೈಮಿನಿ ಭಾರತದ ಪುರಾಣದ ಮಹಾಕಾವ್ಯದ ಬಗ್ಗೆ ಯೋಚಿಸುವಂತೆ ಮಾಡುತ್ತದೆ. ಕಾನೀನ (1974)ಕರ್ಣನ ಬಗ್ಗೆ ಇರುವಂಥ ಒಂದು ನಾಟಕ. ಕರ್ಣ ಸೂತಪುತ್ರನಾಗಿ ಅನುಭವಿಸಿದ ಯಾತನೆಗಳಿದ್ದರೂ, ಕರ್ಣನು ನಮ್ಮೆಲ್ಲರ ಮೇಲೆ ಬೀರಿದ ಪರಿಣಾಮಗಳನ್ನು ಕುರಿತು ಹೇಳಿದರು.
ನಮ್ಮನ್ನು ನಾವು ಎಷ್ಟು ವಿಮರ್ಶೆಗೆ ಒಳಪಡಿಸಿ ಕೊಳ್ಳುತ್ತೇವೆಯೋ ಅಷ್ಟೇ ಒಳ್ಳೆಯ ಮನುಷತ್ವ ರೂಪುಗೊಳ್ಳುತ್ತದೆ.ಅಭಿವೃದ್ದಿಯೆಂಬುದು ನಮ್ಮ ಮತಿಯನ್ನು ಚೆನ್ನಾಗಿ ಇಟ್ಟುಕೊಳ್ಳುವುದೇ ಆಗಿದೆ. ಮತಿಹೀನರಾಗಬಾರದು,ಮತಿವಂತರಾಗಬೇಕೆನ್ನುವುದೇ ಎಲ್ಲಾ ನಾಟಕಗಳ ತಿರುಳು. ಧರ್ಮವನ್ನು ಎಂದೂ ಅವರು ನಿರಾಕರಿಸಲಿಲ್ಲ. ಕಂದಾಚಾರಗಳು ನಮ್ಮ ಮೌಢ್ಯಗಳನ್ನು ಬಿಟ್ಟು ಹೊರಗೆ ಬರಬೇಕು.ಲಿಂಗತಾರತಮ್ಯ, ತೃತೀಯ ಲಿಂಗಿಗಳ ಬಗ್ಗೆ ಇರುವ ತಪ್ಪು ಕಲ್ಪನೆಯ ಬಗ್ಗೆ ಹೇಳುತ್ತಾ ಯಾರೂ ಇಲ್ಲಿ ಅಮುಖ್ಯರಲ್ಲಾ. ಯಾರೂ ಮುಖ್ಯರಲ್ಲ ಎನ್ನು ಕುವೆಂಪುರವರ ಉಕ್ತಿಯನ್ನು ಹೇಳಿ ,ನಮ್ಮ ಸಮಾಜವನ್ನು ಮುಂದೆ ನಡೆಸಲು ನಾವು ಮಾಡಬೇಕಾದ ,ನಮ್ಮ ಮನಸ್ಥಿತಿಯನ್ನು ಹೇಗೆ ತಿದ್ದಿಕೊಳ್ಳಬೇಕು, ಮಾರ್ಕ್ಸ್ ವಾದವನ್ನು ಕುರಿತು ,ಗಾಂಧೀಜಿಯವರ ಸರ್ವೋದಯದ ಪರಿಕಲ್ಪನೆಯಲ್ಲಿ ಮಾನವನ ಏಳಿಗೆ, ನಾಗರೀಕತೆಯು ಹೇಗೆ ಬೆಳೆಯಬೇಕು, ನಾಗರೀಕತೆಯನ್ನು ಹೇಗೆ ಬೆಳೆಸಬೇಕು ಎಂಬುದನ್ನು ನಾವು ಅರಿಯಬೇಕು. ನೀಡುವ ಕೈಗಳು ಇದ್ದರೆ ಮಾತ್ರ ”ಅಲ್ಪದಲ್ಲಿ ಕಲ್ಪ” ಎಂಬಂತಾಗುತ್ತದೆ. ಭಕ್ತಿಮಾರ್ಗ,ಜ್ಞಾನಮಾರ್ಗ, ಕರ್ಮಮಾರ್ಗ ಈ ಮೂರು ಮಾರ್ಗಗಳನ್ನು ನಾವು ಅನುಸರಿಸಿ ನಡೆದಾಗ ಮಾತ್ರ ನಾವು ನಿಜವಾದ ಮಾನವೀಯತೆಯನ್ನು ಹೊಂದುತ್ತೇವೆ. ವಿಶ್ವಮಾನವ ಗುಣವನ್ನು ಹೊಂದುತ್ತೇವೆ. ಎಂಬ ಮಾತುಗಳನ್ನು ಹೇಳುತ್ತಾ, ತಮ್ಮ ನಿರರ್ಗಳ ಉಪನ್ಯಾಸವನ್ನು ಮುಕ್ತಾಯ ಮಾಡಿದರು. ಒಟ್ಟಿನಲ್ಲಿ ಒಂದು ಅಭೂತಪೂರ್ವ ಅನುಭೂತಿಯನ್ನು ಈಡೀ ಕಾರ್ಯಕ್ರಮದ ಉದ್ದಕ್ಕೂ ನೀಡಿದ ರಘುನಂದನ್ ಸರ್ ರವರಿಗೆ ಧನ್ಯವಾದ ಹೇಳುವುದೇ ಕಷ್ಟವಾಗಿತ್ತು. ಮತ್ತೇ ಅದೇ ಮಾತುಗಳನ್ನು ಕೇಳುಬೇಕೆನ್ನುವ ಉತ್ಸಾಹ ,ಮನದ ಮೂಲೆಯೊಳಗಿಂದ ತೂರಿ ಬರುತ್ತಿತ್ತು.
ಇಷ್ಟೆಲ್ಲಾ ಸಾಧನೆಗೈದ ಶ್ರೀ ಡಾ.ಬೇಲೂರು ರಘುನಂದನ್ ರವರಿಗೆ ಇತ್ತೀಚೆಗೆ ಭಾರತ ಸರ್ಕಾರ 2022ನೇ ಸಾಲಿನ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಕೊಡಮಾಡುವ ಉಸ್ತಾದ್ ಬಿಸ್ಮಿಲ್ಲಾಖಾನ್ ಯುವ ಪುರಸ್ಕಾರ ನೀಡಿ ಗೌರವಿಸಲಾಗಿದೆ.
ಕಾವ್ಯ,ಶ್ವೇತಪ್ರಿಯ,ಕನ್ನಡಿ ಮುಂದೆ ನಿಂತಾಗ, ಕವಿಶೈಲದ ಕವಿತೆಗಳು, ಹಸುರು, ಸೊನ್ನೆಯಾಗುವ ಕಾಯ, ರಾಗರಂಗ (ಈವರೆಗಿನ ರಂಗಗೀತೆಗಳು),ಮಗ್ಗದ ಮನೆ, ಮಕ್ಕಳ ಸಾಹಿತ್ಯ, ಚಿನ್ನಾರಿಯ ಚಿತ್ರ, ನಿಸರ್ಗ ಮತ್ತು ಗುಬ್ಬಚ್ಚಿ[೮],ಹಾರುವ ಆನೆ, ಮಕ್ಕಳ ಮಂಟಪ, ಚಿಟ್ಟೆ ಮಕ್ಕಳ ನಾಟಕ, ಕಟ್ಟುಪದ, ನೂರೊಂದು ವಚನಗಳು[೯], ಅರಿವು ತೊರೆ, ಬೆತ್ತಲು, ಅಮ್ಮಪದ ಪದ ಕಟ್ಟುಪದ, ಪ್ರವಾಸ ಸಾಹಿತ್ಯ, ಜೀವನ್ಮುಖಿ ತೀಸ್ತಾ[೧೦],ನಾಟಕ ಸಾಹಿತ್ಯ, ರಕ್ತವರ್ಣೆ[೧೧],ಸಾಲು ಮರಗಳ ತಾಯಿ ತಿಮ್ಮಕ್ಕ,ತಿಪ್ಪೇರುದ್ರ, ಭೂಮಿ,ರೂಪ ರೂಪಗಳನು ದಾಟಿ[೧೨],ಬೊಂಬಾಯ್ ಮಿಠಾಯಿ, ಮಕ್ಕಳ ನಾಟಕ, ಬೆಳಕಿನ ಅಂಗಡಿ, ಮೋಹನ ತರಂಗಿಣಿ, ಶರ್ಮಿಷ್ಠೆ (ಏಕ ವ್ಯಕ್ತಿ ನಾಟಕ), ರೂಬಿಕ್ಸ್ ಕ್ಯೂಬ್, ದಹನಾಗ್ನಿ,ತೊರೆದು ಜೀವಿಸಬಹುದೆ, ಆಯಾಮ, ಉಧೋ ಉಧೋ ಎಲ್ಲವ್ವ (ಜನಪದ ಏಕ ವ್ಯಕ್ತಿ ನಾಟಕ ), ಚಿಟ್ಟೆ (ಏಕ ವ್ಯಕ್ತಿ ನಾಟಕ), ಗರ್ಭ, ಕ್ಲೀನ್ ಆಂಡ್ ಕ್ಲಿಯರ್ ಪಾಯಖಾನೆ, ಸಾಕುಮಗಳು, ವಿಧುರಾಶ್ವಥದ ವೀರಗಾಥೆ, ಗಾರ್ಗಿ, ಮುದ್ದು ಮಗಳೇ, ಲೆಟರ್ಸ್ ಟು ಡೆಥ್, ಅಕ್ಕಯ್, ವಿದಗ್ಧೆ, ಮಾತಾ, ನಗರ ಪೂಜೆ, ನಮ್ ಸ್ಕೂಲು, ಅಧಿನಾಯಕಿ, ಅಲೆಮಾರಿ ಭಾರತ, ಆ ಇ ಫ್ಯಾಮಿಲಿ, ಥೆರೇಸಮ್ಮ, ಪ್ರೇಮಮಯಿ ಹಿಡಿಂಬೆ, ಕಥಾ ಸಾಹಿತ್ಯ, ರಂಗಿ, ಏಡಿ ಅಮ್ಮಯ್ಯ, ಅಪ್ಪ ಕಾಣೆಯಾಗಿದ್ದಾನೆ ಮತ್ತು ಇತರ ಕಥೆಗಳು, ಮಯೂರ, ಆಗಮನ, ಒಂದು ಮೂಟೆ ಅಕ್ಕಿ, ಈ ಕಥೆಗಳು ವಿವಿಧ ಕನ್ನಡ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.
ಅಂಕಣ ಬರಹ : ಉಮಾಸಿರಿ - ೨೦೧೫ (ಅವಧಿ ಅಂತರಜಾಲ ಪತ್ರಿಕೆಯಲ್ಲಿ ಪ್ರಕಟಗೊಂಡ ಸರಣಿ ಲೇಖನಗಳು,ಚಿಣ್ಣರ ಅಂಗಳ (ಕನ್ನಡ ಮಾಣಿಕ್ಯ ಪತ್ರಿಕೆಗೆ ಬರೆದ ಅಂಕಣ) ಬೇಂದ್ರೆ ಅನುಭೂತಿ - ವಿಜಯಕರ್ನಾಟಕ (ಭೋದಿ ವೃಕ್ಷ) ಸಂಪಾದನೆ
ಕಿರಂ ಹೊಸಕವಿತೆ ಸಂಪುಟ ೧ (೨೦೧೭) ಕಿರಂ ಹೊಸಕವಿತೆ ಸಂಪುಟ ೨ (೨೦೧೮) ಚಿತ್ರ ಸುರತ ಕಥಾ ಸಾಹಿತ್ಯ ಅಪ್ಪ ಕಾಣೆಯಾಗಿದ್ದಾನೆ
ವಿಮರ್ಶೆ.ಕ್ರಿಯೆ ಪ್ರತಿಕ್ರಿಯೆ ಆಗಿದೆ.
೨೦೧೩ ರ ಮೈಸೂರು ದಸರಾ ಪ್ರಧಾನ ಕವಿಗೋಷ್ಠಿ, ೨೦೧೪ ಹಂಪಿ ಉತ್ಸವ, ೨೦೧೫ ರಲ್ಲಿ ಶ್ರವಣಬೆಳಗೊಳದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಧಾನ ಕವಿಗೋಷ್ಠಿ ಸೇರಿದಂತೆ ಹಲವೆಡೆಕವಿತೆ ವಾಚಿಸಿದ್ದಾರೆ.
ಸಪ್ನ ಪುಸ್ತಕ ಭಂಡಾರದ ವತಿಯಿಂದ ರಾಜ್ಯೋತ್ಸವ ಗೌರವ ಸನ್ಮಾನ (೨೦೧೪)
೨೦೧೬ ರಲ್ಲಿ ದೆಹಲಿಯಲ್ಲಿ ನಡೆದಕೇಂದ್ರ ಸಾಹಿತ್ಯ ಅಕಾಡೆಮಿ ನಡೆಸಿದ ಭಾರತೀಯ ಭಾಷೆಗಳ ಯುವ ಉತ್ಸವದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದರು.
೨೦೧೭ ರಲ್ಲಿ ಮಣಿಪುರದಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ನಡೆಸಿದ ಭಾರತೀಯ ಭಾಷೆಗಳ ಕವಿಗೋಷ್ಠಿಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದರು.
೨೦೧೭ ರಲ್ಲಿಕರ್ನಾಟಕ ಸರ್ಕಾರ ಕರ್ನಾಟಕ ನಾಟಕ ಅಕಾಡೆಮಿಯ ಸದಸ್ಯನನ್ನಾಗಿ ನಾಮ ನಿರ್ದೇಶನ ಮಾಡಿದೆ.
೨೦೧೯ ನೇ ಸಾಲಿನ ಬೇಲೂರು ತಾಲೂಕು ಎಂಟನೇ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ[೬೨]
೫೦ ಕ್ಕೂ ಹೆಚ್ಚು ರಾಜ್ಯ, ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ವಿಚಾರ ಸಂಕೀರ್ಣಗಳಲ್ಲಿ ಭಾಗಿಯಾಗಿದ್ದಾರೆ.
ಇದೆಲ್ಲಾ ಮುಗಿದ ನಂತರ ರಘುನಂದನ್ ಸರ್ ರವರನ್ನು ಶಿವರಾಮ ಕಾರಂತ ವೇದಿಕೆಯಿಂದ ಗೌರವಪೂರ್ಣವಾಗಿ ಸನ್ಮಾನಿಸಲಾಯಿತು.
ಕಡೆಯದಾಗಿ ನಮ್ಮ ವೇದಿಕೆಯವರಾದ ಸುಧೀಂದ್ರರವರು ವಂದನಾರ್ಪಣೆಯನ್ನು ಮಾಡಿ ಕಾರ್ಯಕ್ರಮಕ್ಕೆ ಮುಕ್ತಾಯ ಹಾಡಿದರು.
ವರದಿ : ಮಂಜುಳಾಭಾರ್ಗವಿ (ಕಾರ್ಯದರ್ಶಿ)
ಶ್ರೀ ಸುಧೀಂದ್ರ ಅವರು ಧನ್ಯವಾದ ಸಮರ್ಪಣೆ ಮಾಡಿದರು.
Posted 17/12/2024
No comments:
Post a Comment