Sunday, June 29, 2025

UDUPI AATITHYA - SAHAKARANAGARA

 Friday, 27th June 2025

Udupi Aatithya Hotel, Sahakaranagara, Bengaluru



It's Paani Poori.....

Crispy Masala Dosa.....

Nice Set dosa.....


Evening time refreshing for hotel food..... once in a way.....


Mouth watering........???

Just drive up to Udupi Aatithya at Sahakaranagara, Nice ambiance, tasty food....


I was not the only one...... Don't be jeolous..... my better half was also there.....

Enjoy.....


Posted 30/6/2025


Saturday, June 28, 2025

SUNANDI ELDERCARE CENTRE (NEW)

 Saturday, 28th June 2025

Sunandi Elder Care Centre, (Second Facility)

The Sunandi Holistic ElderCare Centre has inaugurated their new Facility at GantiganaHalli, about 20 km from the old centre at KodigeHalli,  behind Gurukula School, near  DoddaBallapura.

Mrs Roopa Lakshmi, Enterpreneur, has established the new Cetre, supported by IIMF (Insttute of Integrative Medical Foundation)




The new facility is spacious, 20 or more rooms, lot light and air, and basement for kitchen and dining.


It is with immense joy and gratitude that I invite you to witness a milestone moment in our journey of serving the senior community. After 2 years of dedicated service at our Sahakarnagar centre, we are thrilled to expand our mission of holistic eldercare with the launch of our second facility.

Date:28th June 2025  
Location: Tarahunse (Near Dravid Padukone Centre for Sports)

Short Stay | Long Stay | Rehabilitation | Rejuvenation

Your presence would make this milestone even more special!

The Sunandi Team

"Where every senior finds a home"



There was also free health checkup for Sugar, BP and ECG and massage room.




We went there, 40 minutes drive,  with Ramakrshna Bhat, partner for Bhajan/Satsang, by 12 noon, had lunch (Chitranna, Biriyani, Mosaranna) and returned home by 3 pm.




God Bless

Posted 29/6/2025


Thursday, June 26, 2025

SUNANDI BHAJANE /SATSANG -21

 Thursday, June 26, 2025

Sunandi Vraddhashrama, Sahakaranagara, Bengaluru.

Our Thursday divine session with Bhajan, to the residents of Vraddhashrama continued with inmates feeling happy.


BHAJANE
ರಾಮ ಮಂತ್ರವ ಜಪಿಸೋ ಹೇ ಮನುಜಾ......

ಸದಾ ಎನ್ನ ಹ್ರದಯದಲ್ಲಿ ವಾಸ ಮಾಡೋ ಶ್ರೀ ಹರಿ........... 

beautiful Bhajan, prayimg God Srihari, to keep within.....


BAJANAE

We are happy to see that some of the elders are eager to sing bhajan and participate.


UPANYASA

In his Upanyasa for the day, Sri Ramakrishna Bhat highlighted the importance of LOVE  to all and Bhagavantha sees your action and performance.

MANGALAARATHI

ಲೋಕಾ ಸಮಸ್ತಾ ಸುಖಿನೋ ಭವಂತು.....

LOKAA SAMASTHAA SUKHINO BHAVANTHU

OM SHANTHI...... SHANTHI..... SHANTHI......

Posted 27/6/2025






Wednesday, June 25, 2025

AHAMADABAD PLANE CRASH =AI

 Thursday, 12th June 2025

Ahmadabad, Gujarath, India

An unfortunate and tragic accident happened at Ahamadabad Airport on June 12, 2025,  when Air India Flight 171 , Boeing Dreamliner, carrying 242 passengers and crew, crashed immediately after take off, killing all, except for one survivor.



A beautiful and painful to see, a 5- minute film was made using Artificial Intelligence.


The film highlights happines, apathy, sending daughter off, a woman missing the flight due to traffic jam, family of five going to London to settle, 

HAPPY GOING TO LONDON

MISSED THE FLIGHT 

HAPPY FAMILY GOING TO LONDON

Students in Medial college Hostel, having lunch, ..... when the plane like a fireball fell killing at least 10 medical students....


And the final dooms day..... Om Shanthi.....


LONE SURVIVOR

The cause of the crash will never be known..... We say in Indian philosophy... FATE..

May God keep all those who lost their lives, RIP

Posted 25/6/2025







Tuesday, June 24, 2025

ELEMENTS 3 - RESTAURANT

 Saturday, June 21, 2025

Indiranagar, Bengaluru.

Elements 3 - is Jain and Sattwik Cozy restaurant, we went , at Indiranagar, for Lunch.



RESUARANT'S AMBIANCE

Number of items starting from soup, starters and Papad.




It was Family gatheing for clebrating Appa's Birthday, Happy times....



Food was good.... Main main, Roti, salad, curries, Biryani .... Gulab Jaamoon...



With Restaurant's owner Rajani Krishna

After Lunch, nearby Ice Cream Parlour "MILANO"


God Bless All,


Posted 25/6/2025

ಹೆಣ್ಣಿನ ಬಗ್ಗೆ ಅತೀ ಅದ್ಬುತ.

 Tuesday, 24/6/2025

WahatsApp Forwarded 

ಹೆಣ್ಣಿನ ಬಗ್ಗೆ ಅತೀ ಅದ್ಬುತ. ಎಲ್ಲರೂ ಒಮ್ಮೆ ಓದಲೇಬೇಕು :



ದಶರಥ ಮಹಾರಾಜರು ತನ್ನ ನಾಲ್ಕು ಪುತ್ರರತ್ನರ ಜೊತೆ ಸಕುಟುಂಬ - ಸಪರಿವಾರ ಸಮೇತ,ಅದ್ದೂರಿಯ ಮದುವೆಯ ದಿಬ್ಬಣದದೊಂದಿಗೆ  ಜನಕ ಮಹಾರಾಜರ ಅರಮನೆಯ ಹೆಬ್ಬಾಗಿಲಲ್ಲಿ ಬಂದು ನಿಲ್ಲುತ್ತಾರೆ. 

ಆಗ ಜನಕ ಮಹಾರಾಜರು ತನ್ನ ಪರಿವಾರದ ಜೊತೆ ಎದುರಿಗೆ ಬಂದು ರಘುರಾಮನ ಮದುವೆ ಮೆರವಣಿಗೆಗೆ ಸ್ವಾಗತಕೋರುತ್ತಾರೆ. ದಶರಥ ಮಹಾರಾಜ ತುಂಬಾ ವಿನಮ್ರದಿಂದ ಜನಕ ಮಹಾರಾಜರ ಹತ್ತಿರ ಹೋಗಿ ಅವರ ಪಾದಗಳಿಗೆ ನಮಸ್ಕಾರ ಮಾಡುತ್ತಾರೆ.

ಗಲಿಬಿಲಿಗೊಂಡ ಜನಕನು ದಶರಥ ಮಹಾರಾಜರನ್ನು ಎಬ್ಬಿಸಿ ಅಪ್ಪಿಕೊಂಡು ಆಶ್ಚರ್ಯದಿಂದ "ಮಹಾರಾಜ ನೀವು ದೊಡ್ಡವರು,ಮೇಲಾಗಿ ವರನ ಕಡೆಯವರು,ಹೀಗೆ ನನಗೆ ಪಾದಾಭಿವಂದನೆ ಮಾಡುವದು ಸರಿಯಲ್ಲ. ಗಂಗೆಯು ಹಿಂದಕ್ಕೆ ಹರಿಯುತ್ತಿರುವವಳೇ? ಎಂಬ ಸಂಶಯ ಮೂಡುತ್ತಿದೆ!"ಎಂದರು.

ಅದಕ್ಕೆ ಮಹಾರಾಜ ದಶರಥ ಮಹಾರಾಜರು ಅದ್ಭುತವಾದ ಉತ್ತರವನ್ನು ಕೊಡುತ್ತಾರೆ.

*"ಜನಕ ರಾಜರೇ ನೀವು ದಾನ ನೀಡುವವವರು.ಇನ್ನೂ ಸ್ವಲ್ಪ ಹೊತ್ತಿಗೆ ಕನ್ಯಾದಾನ ಮಾಡುತ್ತಿರುವವರು.

ನಾನು ಯಾಚಕ. ನಿಮ್ಮಿಂದ ಮಗನಿಗಾಗಿ ಕನ್ಯೆಯನ್ನು ಬೇಡಲು ಬಂದಿರುವವನು. ಈಗ ನೀವೇ ಹೇಳಿರಿ, ದಾನ ಮಾಡುವವನು  ದೊಡ್ಡವರೋ? ಇಲ್ಲಾ ದಾನ ಬೇಡುವವರು ದೊಡ್ಡವರೋ! ನಮ್ಮಿಬ್ಬರಲ್ಲಿ ಶ್ರೇಷ್ಠನಾರೆಂದು  ನಿಮಗೆ ಗೊತ್ತು"ಎಂದರು. 

ದಶರಥ ಮಹಾರಾಜರ ಮಾತು ಕೇಳಿದ ಜನಕನಿಗೆ ಕಣ್ಣೀರು & ಆನಂದಭಾಷ್ಪಗಳು ಒಮ್ಮೆಲೆ ಉಂಟಾದವು.

ಉದ್ವೇಗದಿಂದ ತನ್ನಲ್ಲಿಯೇ ಅಂದುಕೊಳ್ಳುತ್ತಾನೆ "ಹೌದು ಯಾರ ಮನೆಯಲ್ಲಿ ಮಗಳಿರುತ್ತಾಳೋ ಅವರೇ ಭಾಗ್ಯವಂತರು!"

ಪ್ರತಿ ಮಗಳ ಭಾಗ್ಯದಲ್ಲಿ ಅಥವಾ  ಅದೃಷ್ಟದಲ್ಲಿ ತಂದೆ ಇದ್ದೇ ಇರುತ್ತಾನೆ! ಆದರೆ ಪ್ರತಿ ತಂದೆಯ ಭಾಗ್ಯದಲ್ಲಿ ಮಗಳಿರಲ್ಲ!!

ಇದು ಭಾರತೀಯರ ಮನಸ್ಸಿನಲ್ಲಿ ಮಗಳಿಗಿರುವ ಮಹತ್ವ!!! 🙏🏻

ಸನಾತನ ಹಿಂದೂ ಧರ್ಮದಲ್ಲಿ ಹೆಣ್ಣಿನ‌ ಸ್ಥಾನಮಾನ;

ರಾಮನಿಗೆ.  ಸೀತೆ,,ಕೃಷ್ಣನಿಗೆ➖ರುಕ್ಮಿಣಿ, , ವನಿಗೆ➖ಪಾರ್ವತಿ. ನಾರಾಯಣನಿಗೆ➖ಲಕ್ಷ್ಮೀ

ಮಂತ್ರ ಪಠಣದಲ್ಲಿ➖ಗಾಯತ್ರೀ, ಗ್ರಂಥ ಪಠಣದಲ್ಲಿ➖ಗೀತಾ

ದೇವರೆದುರಿಗೆ. ವಂದನಾ, ಅರ್ಚನಾ, ಪೂಜಾ, ಆರತಿ, ಆರಾಧನಾ.. 

 ನಮ್ಮ ದಿನಚರಿಯಲ್ಲಿ

ಉದಯಕ್ಕೆ➖ಉಷಾ.. ಸಂಜೆಗೆ ➖ ಸಂಧ್ಯಾ ರಾತ್ರಿಗೆ➖ನಿಶಾ,  ಬೆಳಕಿಗೆ➖ಜ್ಯೋತಿ,  ದೀಪಾ,

ಬೆಳದಿಂಗಳಿಗೆ. ರಜನೀ, ಸೂರ್ಯಕಿರಣಕ್ಕೆ➖ರಶ್ಮಿ,  ಚಂದಿರನಿಗೆ➖ಶಶಿ, ಶಶಿಕಲಾ,

ಹೆಸರಾಗುವುದಕ್ಕೆ➖ಕೀರ್ತಿ ಕನಸಿಗೆ➖ಸ್ವಪ್ನಾ ನೋಟಕ್ಕೆ➖ನಯನಾ, ಕೇಳುವುದಕ್ಕೆ➖ಶ್ರಾವ್ಯ,

ಮಾತನಾಡುವುದಕ್ಕೆ➖ವಾಣಿ, ವಾಣಿಶ್ರೀ, ಸುಭಾಷಿಣೀ,

ಭೂಮಿಗೆ➖ವಸುಧಾ, ವಸುಂಧರಾ, ಭುವಿ, ಭುವನೇಶ್ವರೀ,

ಹಸು, ಆಕಳಿಗೆ➖ನಂದಿನೀ, ಜಗತ್ತಿಗೆ➖ಜಗದೀಶ್ವರೀ, ಜಗದಂಬಾ, ದೇಶಕ್ಕೆ➖ಭಾರತೀ,

ಕನ್ನಡ ನಾಡಿಗೆ➖ಭುವನೇಶ್ವರೀ,ಋತುಗಳಿಗೆ➖ಚೈತ್ರ, ವಸಂತ, ಗ್ರೀಷ್ಮ, ಸಮರ್ಪಣೆಗೆ➖ಅರ್ಪಣಾ

ಆಹಾರಕ್ಕೆ➖ಅನ್ನಪೂರ್ಣಾ,ನಡೆಯುವುದಕ್ಕೆ➖ಹಂಸಗಮನಾ, ನಗುವಿಗೆ➖ಸುಹಾಸಿನೀ.

ಚೆಲುವಿಕೆಗೆ➖ಚೆಲುವಿ, ರೂಪಾ, ಸೌಂದರ್ಯ, ಸುಲಕ್ಷಣ, ಮನೋಹರಿ, ಲಲಿತೆ,

ಸುವಾಸನೆಗೆ➖ಚಂದನ, ಪರಿಮಳಾ, ಒಳ್ಳೆಯ ನುಡಿಗೆ➖ಸುಭಾಷಿಣೀ, ತೇಜಸ್ಸಿಗೆ➖ತೇಜಸ್ವಿನೀ,

ಚುಕ್ಕಿಗೆ➖ಬಿಂದು, ನಕ್ಷತ್ರ, ಗೆರೆಗೆ➖ರೇಖಾ, ಶಶಿರೇಖಾ, ಮುತ್ತಿಗೆ➖ಸ್ವಾತಿ, ಹರಳಿಗೆ➖ರತ್ನ,

ಮಾದರಿಗೆ➖ಸ್ಫೂರ್ತಿ, ಪ್ರೇರಣಾ, ಪ್ರತಿಕ್ರಿಯಿಸುವುದಕ್ಕೆ➖ಸ್ಪದಂನಾ, ಕೆಲಸಕ್ಕೆ➖ಕೃತಿ, ಕೃತಿಕಾ,

ಇಷ್ಟಕ್ಕೆ➖ಪ್ರೀತಿ, ನೀರಿಗೆ➖ಗಂಗಾ, ಬಂಗಾರಕ್ಕೆ➖ಸುವರ್ಣ, ಕನಕ, ಹೇಮಾ, ಬೆಳ್ಳಿಗೆ➖ರಜತ, ರಂಜಿತ,

ಚಿತ್ತಾರಕ್ಕೆ➖ಚಿತ್ರ, ಊಹೆಗೆ➖ಕಲ್ಪನಾ, ನಿಜ ಸಂಗತಿಗೆ➖ಸತ್ಯವತೀ, ಶುದ್ಧತೆಗೆ➖ನಿರ್ಮಲಾ, ಪವಿತ್ರಾ,

ಆಲೋಚನೆಗೆ➖ಭಾವನಾ, ಕಣ್ಗಳಿಗೆ➖ನಯನಾಕ್ಷಿ, ಮೀನಾಕ್ಷಿ, ಕಮಲಾಕ್ಷಿ, ಜಲಜಾಕ್ಷಿ, ಕಾಮಾಕ್ಷಿ

ಶಿಕ್ಷಣಕ್ಕೆ➖ವಿದ್ಯಾ,ಬುದ್ಧಿಗೆ, ಚತುರತೆಗೆ➖ಪ್ರತಿಭಾ, ಸಂತೋಷಕ್ಕೆ➖ಖುಷಿ, ಆನಂದಿನಿ, ಹರ್ಷಲಾ,

ಕೋಪಕ್ಕೆ➖ಭೈರವಿ, ಕಾಳಿ, ಧೈರ್ಯಕ್ಕೆ➖ದುರ್ಗೆ,ಗೆಲುವಿಗೆ➖ಜಯಲಕ್ಷ್ಮಿ.. ವಿಜಯಲಕ್ಷ್ಮಿ,

ಹೆಸರಾಗುವುದಕ್ಕೆ➖ಕೀರ್ತಿ, ಹಾಡಿಗೆ➖ಸಂಗೀತ, ಗಾಯನಕ್ಕೆ➖ಶೃತಿ, ಪಲ್ಲವಿ, ಕೋಕಿಲ, ನಾಟ್ಯ➖ಮಯೂರಿ,

ಸಾಹಿತ್ಯ➖ಕವಿತಾ, ಕಾವ್ಯ, ಕವನ, ಪಲ್ಲವಿ. ನಿಸರ್ಗಕ್ಕೆ➖ಪ್ರಕೃತಿ, ರಕ್ಷಣೆಗೆ➖ರಕ್ಷಾ, ಸುರಕ್ಷಾ,

ವಿದ್ಯಾಭ್ಯಾಸಕ್ಕೆ➖ವಿದ್ಯಾ,ಸಂಪಾದನೆಗೆ➖ಲಕ್ಷ್ಮೀ, ಸ್ಫೂರ್ತಿಗೆ➖ಪ್ರೇರಣಾ, ಮೌನಕ್ಕೆ➖ಶಾಂತಿ,

ಮಧುರತೆಗೆ➖ಮಾಧುರಿ, ಮಂಜುಳ, ಕನಿಕರಕ್ಕೆ➖ಕರುಣಾ, ಆಕ್ರೋಶಕ್ಕೆ➖ಕಾಳಿ , ವಾತ್ಸಲ್ಯಕ್ಕೆ➖ಮಮತಾ,

ಆಯುಷ್ಯಕ್ಕೆ➖ಜೀವಿತಾ, ಮೋಡಗಳಿಗೆ➖ಮೇಘ, ಮೇಘನಾ, ಚಿಮುಕಿಸುವಿಕೆಗೆ➖ಸಿಂಚನಾ,

ಬಿಳುಪಿಗೆ➖ಶ್ವೇತಾ, ಗೌರೀ, ಕಪ್ಪಿಗೆ➖ಕೃಷ್ಣೆ, ವಾಸನೆಗೆ➖ಪರಿಮಳಾ,

ಹೂವಿಗೆ➖ಪುಷ್ಪ, ಸುಮ,, ಕುಸುಮ, ಪದ್ಮ, ಪದ್ಮಾವತಿ, ಕಮಲ, ಮಂದಾರ, ನೈದಿಲೆ, ಸೇವಂತಿ..

ಬಳ್ಳಿಗೆ➖ಲತಾ,  ಹಾರಕ್ಕೆ➖ಮಾಲಾ, ಮಾಲಿನಿ, ಶುಭಕರ➖ಮಂಗಳ,  ಸುಮಂಗಳ, ಶುಭಾಂಗಿ

ಒಳ್ಳೆಯ ಮನಸ್ಸಿಗೆ➖ಸುಮನ ಶ್ರೀಮಂತಿಕೆಗೆ➖ಐಶ್ವರ್ಯ, ಸಿರಿ, ವಿಸ್ತಾರಕ್ಕೆ➖ವಿಶಾಲ, ವೈಶಾಲಿ,

ಜೇನಿಗೆ➖ಮಧು, ಬಯಕೆಗೆ➖ಆಶಾ, ಅಪೇಕ್ಷಾ, ತೀರ್ಮಾನಕ್ಕೆ➖ನಿಶ್ಚಿತ, ಬರಹಕ್ಕೆ➖ಲಿಖಿತ,

ನೆರಳಿಗೆ➖ಛಾಯಾ,ನಿಧಾನಕ್ಕೆ➖ಮಂದಾಕಿನಿ, ಹೂ ಗೊಂಚಲಿಗೆ➖ಮಂಜರಿ, ಕಲೆಗೆ➖ಕಲಾ,

ಗೌರವಕ್ಕೆ➖ಮಾನ್ಯ, ಮಾನ್ಯತಾ,

ನದಿಗಳಿಗೆ➖ಗಂಗಾ, ಯಮುನಾ, ಸರಸ್ವತೀ, ಭಾಗೀರಥಿ, ನರ್ಮದಾ, ಗೋದಾವರಿ, ಕಾವೇರಿ, ಹೇಮಾವತಿ, ನೇತ್ರಾವತಿ, ಶರಾವತಿ, ವೇದಾವತಿ, ಅರ್ಕಾವತಿ, ತುಂಗಾ, ಸೌಪರ್ಣಿಕಾ, ಗೌತಮಿ, ಕಪಿಲೆ, ಮಂದಾಕಿನಿ, ಕೃಷ್ಣೆ, 

ಹೀಗೆ ಎಲ್ಲೆಡೆ, ಎಲ್ಲರ ಬಾಳಲ್ಲಿ  ಹೆಣ್ಣು ಇರುವಳು

ತಾಯಿಯಾಗಿ, ಪ್ರೇಯಸಿಯಾಗಿ, ಮಗಳಾಗಿ, ಸೊಸೆಯಾಗಿ......,

Monday, June 23, 2025

ಪಂಜೆ ಮಂಗೇಶರಾಯರ ಸ್ಮರಣೆ - ಶಿವರಾಮ ಕಾರಂತ ವೇದಿಕೆ

 ಭಾನುವಾರ, 22 ಜೂನ್, 2025

ತರಳಬಾಳು ಕೇಂದ್ರ, ಮಿನಿ ಹಾಲ್, ಅರ್. ಟಿ. ನಗರ, ಬೆಂಗಳೂರು.

ಪಂಜೆ ಮಂಗೇಶರಾಯರ ಸಾಹಿತ್ಯ -  ಸ್ಮರಣೆ 

ಶಿವರಾಮ ಕಾರಂತ ವೇದಿಕೆಯ ಜೂನ್ ತಿಂಗಳ ಕಾರ್ಯಕ್ರಮದಲ್ಲಿ " ಶ್ರೀ ಪಂಜೆ ಮಂಗೇಶರಾಯರ ಸಾಹಿತ್ಯ " ಈ ವಿಚಾರ ಶ್ರೀ ಮಾಲಿಂಗೆಶ್ವರ ಭಟ್ ಹಾಗೂ ಶ್ರೀ ಎಸ್. ಅರ್. ವಿಜಯಶಂಕರ್ ಅವರ ಉಪನ್ಯಾಸದೊಂದಿಗೆ ಸಂಪನ್ನ ಗೊಂಡಿತು.



 ಪ್ರಾರ್ಥನೆ ಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮ, ವೇದಿಕೆಯ ಅಧ್ಯಕ್ಷೆ ಡಾ. ದೀಪಾ ಫಡ್ಕೆ ಅವರ ಸ್ವಾಗತ ಹಾಗೂ ಪ್ರಾಸ್ತಾವಿಕ ನುಡಿಯೊಂದಿಗೆ ಮುಂದುವರಿಯಿತು.

ಡಾ. ದೀಪಾ ಫಡ್ಕೆ 

ಡಾ. ಮಹಾಲಿಂಗೇಶ್ವರ ಭಟ್ 


ಕಾರ್ಯದರ್ಶಿ ಶ್ರೀಮತಿ ಮಂಜುಳಾ ಭಾರ್ಗವಿ ಅವರು ಅತಿಥಿಗಳ ಪರಿಚಯವನ್ನು ಮಾಡಿದರು.

ಶ್ರೀ ಎಸ್ ಅರ್ ವಿಜಯಶಂಕರ್ 

ವೇದಿಕೆಯ ಗೌರವ ಅಧ್ಯಕ್ಷ ಶ್ರೀ ಎಸ್.ಅರ್. ವಿಜಯಶಂಕರ್ ಅವರು ಮಾತನಾಡಿ, ಪಂಜೆ ಅವರ ಸಾಧನೆ, ಬದುಕು ವಿಚಾರವಾಗಿ ಮಾತನಾಡಿದರು.




ಅತಿಥಿ ಉಪನ್ಯಾಸಕ ಡಾ. ಮಹಾಲಿಂಗೇಶ್ವರ ಭಟ್ ಅವರು ಪಂಜೆ ಅವರ ಸಾಹಿತ್ಯದ ಬಗ್ಗೆ ವಿವರವಾಗಿ ಮಾತನಾಡಿದರು.


ಪ್ರೊಫೆಸರ್ ಭೋಜಪ್ಪ 


ವೇದಿಕೆಯ ಅತ್ಯಂತ ಹಿರಿಯ ಸದಸ್ಯ, 95 ವರ್ಷದ ಮುತ್ಸದ್ದಿ , ಪ್ರೊಫೆಸರ್ ಭೋಜಪ್ಪ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.
ಶ್ರೀಮತಿ ಸಂಧ್ಯಾ 

ಶ್ರೀಮತಿ ಚೇತನಾ ಹೆಗಡೆ 

ಶ್ರೀಮತಿ ಚೇತನಾ ಹೆಗಡೆ ಧನ್ಯವಾದ ಸಮರ್ಪಣೆ ಮಾಡಿದರು.. ಶ್ರೀಮರಿ ಸಂಧ್ಯಾ ಅವರು ಕಾರ್ಯಕ್ರಮದ ನಿರೂಪಣೆಯನ್ನು ಅಚ್ಚುಕಟ್ಟಾಗಿ ಮಾಡಿದರು.

Posted 24/6/2025



ANNUAL GENERAL BODY MEETING

 Sunday, June 22, 2025

TaralaBalu Kendra Mini Hall, R.T. Nagara, Bengaluru.

Annual General Body Meeting of Shivarama Karantha Vedike for the year 2024 - 2025 was held at 3 pm, 

 at the above venue, with few members present.


-
Notice was sent to all members through WhatsApp and the member turnout was not very encouraging.

President  of Shivarama Karanth Vedike, Dr Deepa Phadke, welcomed the members and spoke about the achievements and future plans.


Secretary, Mrs Manjula Bhargavi, read the report about the activities of the Vedike and the new members inducted into the committe. Also she highlighted about the new initiative taken about "ಕಾರಂತ ಕಾದಂಬರಿಗಳ ಪರಿಚಯ"  on YouTube Channel.

ಶಿವರಾಮ ಕಾರಂತ ವೇದಿಕೆಯ 2024-25 ರ ವಾರ್ಷಿಕ ವರದಿ.
ಸನ್ಮಾನ್ಯ ಅಧ್ಯಕ್ಷರೇ,
ವೇದಿಕೆಯ ಗೌರವಾನ್ವಿತ ಪದಾಧಿಕಾರಿಗಳೆ , ನೆರೆದಿರುವ ಸಕಲ ಸದಸ್ಯರೇ,  ಸನ್ಮಿತ್ರರೇ,
ಮೂವತ್ತು ವರ್ಷಗಳ ಇತಿಹಾಸವಿರುವ ನಮ್ಮ ಶಿವರಾಮ ಕಾರಂತ ವೇದಿಕೆ(ರಿ) , ಕನ್ನಡ ಸಾಹಿತ್ಯಿಕ ಕಾರ್ಯಕ್ರಮಗಳ ಜೊತೆ ಜೊತೆಗೆ ಕಲೆ ,ಸಂಸ್ಕೃತಿಗಳ ವರ್ಧನೆಗೂ ಮೀಸಲಿಟ್ಟಿದೆ. ಸಂಸ್ಥೆಯು ಸತತವಾಗಿ ಉಪನ್ಯಾಸ, ನಾಟಕ, ಯಕ್ಷಗಾನ, ಮಕ್ಕಳಿಗೆ ಸಂಬಂಧಿಸಿದಂತೆ ರಸಪ್ರಶ್ನೆ ಹೀಗೆ ವಿವಿಧ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿರುತ್ತದೆ. ಬೆಂಗಳೂರಿನ ಪ್ರತಿಷ್ಠಿತ  ಸಾಹಿತ್ಯಕ ಸಂಸ್ಥೆ ಎಂದು ಗುರುತಿಸಲ್ಪಟ್ಟಿದ್ದು,  ಬೆಂಗಳೂರು ಉತ್ತರ ಭಾಗದ ಏಕೈಕ ಸಾಹಿತ್ಯ ವೇದಿಕೆ ಎನ್ನಲು ನಮಗೆ ಹೆಮ್ಮೆ ಎನಿಸುತ್ತದೆ. 

ನಮ್ಮ ಸಂಸ್ಥೆಯ ಕಳೆದ ವಾರ್ಷಿಕ 2024-25ನೇ ಸಾಲಿನ ಮಹಾಸಭೆ ದಿನಾಂಕ 22.6.2025ರ ಭಾನುವಾರ , ಮಧ್ಯಾಹ್ನ 3 ಗಂಟೆಗೆ ಸರಿಯಾಗಿ, ತರಳಬಾಳು ಕೇಂದ್ರ, ಮಿನಿ ಹಾಲ್ ನಲ್ಲಿ .ಆರ್. ಟಿ. ನಗರ ,ಬೆಂಗಳೂರು-32 ಇಲ್ಲಿ ನಡೆಯಿತು.
2024-25 ರ ವಾರ್ಷಿಕ ವರದಿಯ ವರ್ಷದಲ್ಲಿ ಕೆಳಗೆ ಕಾಣಿಸಿದವರು ಸಂಸ್ಥೆಯ ಏಳಿಗೆಗಾಗಿ ದುಡಿದಿದ್ದಾರೆ.   
ಸಂಸ್ಥಾಪಕರು - ಶ್ರೀ ಪಾ.ಚಂದ್ರಶೇಖರ ಚಡಗ ರವರು
ಅಧ್ಯಕ್ಷರು - ಡಾ. ದೀಪಾ ಫಡ್ಕೆ
ಗೌರವಾಧ್ಯಕ್ಷರು - ಶ್ರೀ ಎಸ್.ಆರ್. ವಿಜಯಶಂಕರ
ಉಪಾಧ್ಯಕ್ಷರು - ಡಾ. ಆರ್ .ಆರ್. ಪಾಂಗಾಳ್ ಮತ್ತು ಶ್ರೀ ವೀರಶೇಖರ ಸ್ವಾಮಿ
ಕಾರ್ಯದರ್ಶಿ - ಶ್ರೀಮತಿ ಮಂಜುಳಾ ಭಾರ್ಗವಿ
ಕೋಶಾಧಿಕಾರಿ         - ಶ್ರೀ. ಬಿ. ಜಯರಾಮ ಸೋಮಯಾಜಿ
ಕಾರ್ಯಕಾರಿ ಸಮಿತಿಯ ಸದಸ್ಯರು
ಶ್ರೀ ಕೆ. ರಮೇಶ್ ಗೋಟ
ಶ್ರೀಮತಿ ಸತ್ಯಭಾಮ ರಂಗೇಗೌಡ
ಶ್ರೀಮತಿ ಅರುಣ ಮಯ್ಯ
ಶ್ರೀಮತಿ ಚೇತನಾ ಹೆಗಡೆ
ಶ್ರೀಮತಿ ಸಂಧ್ಯಾ ಮಂಜುನಾಥ್
ಶ್ರೀ ಸುಧೀoದ್ರ
ಯಕ್ಷಗಾನ ಮತ್ತು ನಾಟಕ ಸಮಿತಿ - ಶ್ರೀ ಕೆ. ಕೃಷ್ಣ ಪ್ರಸಾದ .
ಸಂಪನ್ಮೂಲ ಸಮಿತಿ- ಶ್ರೀ ಬಿ.ಎಚ್. ಎಂ. ವೀರಶೇಖರ ಸ್ವಾಮಿ ಮತ್ತು ಶ್ರೀ. ಬಿ. ಜಯರಾಮ ಸೋಮಯಾಜಿ

ಕಾರ್ಯಕಾರಿ ಸಮಿತಿಯ ಸಮಯೋಜಿತ ಸಭೆಗಳ / ಸಂದರ್ಭಕ್ಕನುಗುಣವಾಗಿ ತೀರ್ಮಾನಗಳನ್ನು ತೆಗೆದುಕೊಳ್ಳುತ್ತ ಮೇಲ್ಕಂಡ ಅವಧಿಯ ಕಾರ್ಯಕ್ರಮಗಳನ್ನು ರೂಪಿಸಿ , ನಡೆಸಿ ಯಶಸ್ವಿಯಾಗಿರುತ್ತದೆ. ಅದರನ್ವಯ  2024-2025 ರ ವಾರ್ಷಿಕ ಅವಧಿಯ ಕಾರ್ಯಕ್ರಮಗಳ ಸಂಕ್ಷಿಪ್ತ ವರದಿಯನ್ನು ಈ ಮಹಾ ಸಭೆಯ ಮುಂದೆ ಇಡುತ್ತಿದ್ದೇನೆ.
1. ದಿನಾಂಕ 28.4.24 ಭಾನುವಾರ ಸಂಜೆ 4.00 ಗಂಟೆಗೆ ಸ್ಥಳ: ಡಿ. ಜಿ. ಕ್ಯೂ. ವಸತಿ ಸಂಕಿರ್ಣ ಆರ್.ಟಿ.ನಗರ. ಇಲ್ಲಿ ಪಾ. ವೆಂ. ಸ್ಮೃತಿ ಕಾರ್ಯಕ್ರಮ ವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಕ್ಕೆ.ಮುಖ್ಯ ಅತಿಥಿಗಳಾಗಿ ಜಯಂತ್ ಕಾಯ್ಕಿಣಿ ಮತ್ತು ಡಾ. ಶಶಿಕಲಾ ಅವರು  ವೇದಿಕೆಗೆ ಬಂದು ತಮ್ಮ ಉಪನ್ಯಾಸವನ್ನು ಮಾಡಿರುತ್ತಾರೆ. 
2. ದಿನಾಂಕ 23.ಜೂನ್.2024 ಭಾನುವಾರ ಸಂಜೆ 4.00 ಗಂಟೆಗೆ ಸ್ಥಳ: ವಿನಾಯಕ ದೇವಸ್ಥಾನ ಸಭಾಂಗಣ ಆರ್.ಟಿ.ನಗರ. ಇಲ್ಲಿ ಪ್ರೊ. ಎಲ್. ಎಸ್. ಶೇಷಗಿರಿ ರಾವ್ ಜನ್ಮ ಶತಮಾನತ್ಸವದ ಅಂಗವಾಗಿ .ಮುಖ್ಯ ಅತಿಥಿಗಳಾಗಿ ಟಿ. ಎನ್ ವಾಸುದೇವ ಮೂರ್ತಿ ಹಾಗೂ ಖ್ಯಾತ ಸಾಹಿತಿಗಳು ಹಾಗು ವಿಮರ್ಶಕರಾದ ಶ್ರೀ ಎಸ್ ಆರ್. ವಿಜಯ ಶಂಕರ ಅವರು ವೇದಿಕೆಗೆ ಬಂದು ತಮ್ಮ ಉಪನ್ಯಾಸವನ್ನು ಮಾಡಿರುತ್ತಾರೆ. 
3. ದಿನಾಂಕ 22.ಅಕ್ಟೋಬರ್ ಭಾನುವಾರ. .2024  ಸಂಜೆ 4.00 ಗಂಟೆಗೆ ಸ್ಥಳ: ವಿನಾಯಕ ದೇವಸ್ಥಾನ ಆರ್.ಟಿ.ನಗರ. ಇಲ್ಲಿ ನಮ್ಮ ಆಹಾರ ನಮ್ಮ ಅರೋಗ್ಯ .ಈ ವಿಷಯವಾಗಿ ಡಾ. ಪ್ರಸನ್ನ ಸಂತೆ ಕಡೂರ್  ವೇದಿಕೆಗೆ ಬಂದು ತಮ್ಮ ಉಪನ್ಯಾಸವನ್ನು ಮಾಡಿರುತ್ತಾರೆ. 
4. ದಿನಾಂಕ 20.ಅಕ್ಟೋಬರ್ .2024 ಭಾನುವಾರ ಸಂಜೆ 4.00 ಗಂಟೆಗೆ ಸ್ಥಳ: ವಿನಾಯಕ ದೇವಸ್ಥಾನ ಸಭಾಂಗಣ ಆರ್.ಟಿ.ನಗರ. ಇಲ್ಲಿ ಸರ್ವ ಸದಸ್ಯರ ಮಹಾ ಸಭೆ ಕಾರ್ಯಕಾರಿ ಸಮಿತಿಯ ಸಭೆ ನಡೆದಿರುತ್ತದೆ.
5. ದಿನಾಂಕ 26 ಅಕ್ಟೋಬರ್ .24 ಶನಿವಾರ ಸಂಜೆ 4.00 ಗಂಟೆಗೆ ಸ್ಥಳ: ವಿನಾಯಕ ದೇವಸ್ಥಾನ ಸಭಾಂಗಣ ಆರ್.ಟಿ.ನಗರ. ಇಲ್ಲಿ ಕಾರಂತರ ವೇದಿಕೆಯಲ್ಲಿ ಕಾರಂತರ 132 ನೆ ಹುಟ್ಟುಹಬ್ಬ ನಿರಂಜನ ಸ್ಮರಣೆ ಕಾರ್ಯಕ್ರಮ ನಡೆದಿರುತ್ತದೆ.ಇದರಲ್ಲಿ ಎಚ್. ಎಸ್. ರಾಘವೇಂದ್ರ ರಾವ್ ಅವರು ಆಗಮಿಸಿ ತಮ್ಮ ಉಪನ್ಯಾಸ ನೀಡಿರುತ್ತಾರೆ.
6. ದಿನಾಂಕ 10 ನವಂಬರ್ 2024 ಭಾನುವಾರ  ಬೆಳಿಗ್ಗೆ 10.00 ಗಂಟೆಯಿಂದ  ಸ್ಥಳ: ವಿನಾಯಕ ದೇವಸ್ಥಾನ, ಸಭಾಂಗಣ,  ಆರ್.ಟಿ.ನಗರ. ಇಲ್ಲಿ ಕನ್ನಡ ರಾಜ್ಯೋತ್ಸವ 2024 ಕಾರ್ಯಕ್ರಮ, ಹಿರಿಯರಿಗೆ ಗೌರವ ಸನ್ಮಾನ, ಸಾಂಸ್ಕ್ರತಿಕ ಕಾರ್ಯಕ್ರಮ, ಪ್ರಸಾದ ವಿತರಣೆ,  ಬಿ. ಎಂ. ಶ್ರೀ. ಪ್ರತಿಷ್ಟಾನದ ಅಧ್ಯಕ್ಷರಾದ ಶ್ರೀ ಭೈರಮಂಗಲ ರಾಮೇಗೌಡ ಅವರು ಆಗಮಿಸಿ ಕಾರ್ಯಕ್ರಮ ವನ್ನು ಅತ್ಯಂತ ಅದ್ಧುರಿಯಿಂದ ಆಚರಿಸಿದ್ದೇವೆ.
7. ದಿನಾಂಕ 15.ಡಿಸೆಂಬರ್ .2024 ಸೋಮವಾರ ಸಂಜೆ 4.00 ಗಂಟೆಗೆ ಸ್ಥಳ: ವಿನಾಯಕ ದೇವಸ್ಥಾನ ಆರ್.ಟಿ.ನಗರ. ಇಲ್ಲಿ ಗೆ ಶ್ರೀ ಬೇಲೂರು ರಘುನಂದನ್ ರವರು  ವೇದಿಕೆಗೆ ಬಂದು ತಮ್ಮ ಉಪನ್ಯಾಸವನ್ನು ಮಾಡಿರುತ್ತಾರೆ. 
8. ದಿನಾಂಕ 21.ಜನವರಿ 2025 ಮಂಗಳವಾರ ಕಾರ್ಯಕ್ರಮ ಸಂಜೆ 4.00 ಗಂಟೆಗೆ ಸ್ಥಳ: ವಿನಾಯಕ ದೇವಸ್ಥಾನ ಆರ್.ಟಿ.ನಗರ. ಇಲ್ಲಿ ಶಿವರಾಮ ಕಾರoತ ವೇದಿಕೆಯ 32 ನೇ ವಾರ್ಷಿಕೋತ್ಸವದ ಪ್ರಯುಕ್ತ ಕಾಯ್ಕಿಣಿ ಸಾಹಿತ್ಯ ಸಂವಾದ ಈ ಕಾರ್ಯಕ್ರಮಕ್ಕೆ ಖ್ಯಾತ ಕವಿಗಳಾದ ಜಯಂತ್ ಕಾಯ್ಕಿಣಿ, ಸಚ್ಚಿದಾನಂದ ಹೆಗಡೆ, ಸಿಂಧು ರಾವ್ ರವರು  ವೇದಿಕೆಗೆ ಬಂದು ತಮ್ಮ ಉಪನ್ಯಾಸವನ್ನು ಮಾಡಿರುತ್ತಾರೆ. 
9.ಭಾನುವಾರ ಫೆಬ್ರವರಿ 16 2025  ವಿನಾಯಕ ದೇವಸ್ಥಾನ ಸಭಾಂಗಣ ಇಲ್ಲಿ ಪಾ. ವೆಂ. ಸ್ಮೃತಿ ಕಾರ್ಯಕ್ರಮ ಕ್ಕೆ ಪುರುಷೋತ್ತಮ ಬಿಳಿಮಲೆ. ಬಿ. ಕೆ. ಸುಮತಿ ರವರು ಬಂದು ಉಪನ್ಯಾಸವನ್ನು ಮಾಡಿರುತ್ತಾರೆ.
10.ಭಾನುವಾರ ಮಾರ್ಚ್ 2025  ಸ್ಥಳ ತರಳಬಾಳು ಕೇಂದ್ರ ಮಿನಿ ಹಾಲ್. ಇಲ್ಲಿ ಮಹಿಳಾ ದಿನಾಚರಣೆಯ ಅಂಗವಾಗಿ ಎಂ. ಎಚ್ ಆಶಾ ದೇವಿ ಅವರು ಬಂದು ತಮ್ಮ ಉಪನ್ಯಾಸವನ್ನು ಮಾಡಿ ಚೇತನಾ ಹೆಗಡೆ ಅವರ " ಅವಳ ಅರಿವು "ಪುಸ್ತಕದ ಲೋಕಾರ್ಪಣೆನ್ನು ಮಾಡಿ ಸ್ತ್ರೀ ಅಸ್ಮಿತೆಯ ಕುರಿತು ಮಾತನಾಡಿರುತ್ತಾರೆ. 
  
ಹೊಸದಾಗಿ  ಕೈ ಗೊಂಡ ಕಾರಂತರ ಕಾದಂಬರಿಗಳ ಪರಿಚಯ ಮಾಲಿಕೆ (ಯೂ ಟ್ಯೂಬ್) ವಾಹಿನಿಯನ್ನು ಆರಂಭಿಸಿದೆ. ಈಗಾಗಲೇ 5 ವಿಡಿಯೋಗಳನ್ನು ಅಪ್ಲೋಡ್ ಮಾಡಲಾಗಿದೆ. ತಾವುಗಳೆಲ್ಲ ಈ ಕಾರ್ಯಕ್ರಮವನ್ನು ವೀಕ್ಷಿಸಿ ಪ್ರೋತ್ಸಾಹ ಪಡಿಸಬೇಕೆಂದು ಕೇಳಿ ಕೊಳ್ಳುತ್ತೇನೆ.

 ಆತ್ಮೀಯರೇ .
 ಮೇಲ್ಕಂಡ ವಾರ್ಷಿಕ ಅವಧಿಯ ವೇದಿಕೆಯ ಎಲ್ಲಾ ಕಾರ್ಯಕ್ರಮಗಳು ಯಶಸ್ಸಿನ ಬಾಗಿಲು ತಟ್ಟಿದ್ದು ನಮ್ಮ ಕಾರಂತ ವೇದಿಕೆಯ ಹೆಮ್ಮೆ..ಪ್ರತಿ ಯಶಸ್ಸಿನ ಕೊಂಡಿಗಳು ಮಾತ್ರ ಸಮಿತಿಯ ಪದಾಧಿಕಾರಿಗಳು ಮತ್ತು ಸದಸ್ಯರು ಎಂಬ ಹೆಮ್ಮೆಯನ್ನು ವೇದಿಕೆಯ ಪರವಾಗಿ ವ್ಯಕ್ತಪಡಿಸುತ್ತಾ, 
ಮೂರು ದಶಕಗಳ ಈ ಸಂಭ್ರಮಾಚರಣೆಯಲ್ಲಿ ಶಿವರಾಮ ಕಾರಂತ ವೇದಿಕೆಯ ಸಂಸ್ಥಾಪಕರಾದ ಪಾ. ಚಂದ್ರಶೇಖರ ಚಡಗ ಸರ್ ರವರ ಆಶಯ,ಅಪ್ಪಣೆ, ಆದರ್ಶ ಮತ್ತು ಸತತ ಮಾರ್ಗದರ್ಶನದಲ್ಲಿ ,ಹಾಗು ಅಧ್ಯಕ್ಷೀಯ ಸ್ಥಾನವನ್ನು ಅಲಂಕರಿಸಿರುವ ಡಾ.ದೀಪಾಫಡ್ಕೆ ಅವರಿಗೂ, ಗೌರವಾಧ್ಯಕ್ಷರಾದ ಶ್ರೀ ಎಸ್. ಆರ್. ವಿಜಯಶಂಕರ್ ರವರಿಗೂ , ಉಪಾಧ್ಯಕ್ಷರಾದ ವೀರಶೇಖರ ಸ್ವಾಮಿಯವರಿಗೂ, ಎಂದಿನಂತೆ ವೇದಿಕೆಯ ಲೆಕ್ಕಪತ್ರಗಳನ್ನು ಪರಿಶೋಧಿಸಿದ ಯಾವುದೇ ರೀತಿಯ ಶುಲ್ಕ ಪಡೆಯದ  ಶರತ್ ಅಂಡ್.ಕಂಪನಿ ಚಾರ್ಟೆಡ್ ಅಕೌಂಟೆಂಟ್ಸ್ ಶ್ರೀ ಶರತ್ ಚಂದ್ರ, ಅವರಿಗೆ ವೇದಿಕೆ ಅಭಾರಿಯಾಗಿದೆ.

ವೇದಿಕೆಯ ಲೆಕ್ಕಪತ್ರಗಳ ಜವಾಬ್ದಾರಿ ನಿರ್ವಹಿಸುವ ಖಜಾಂಚಿ ಶ್ರೀ ಜಯರಾಮಸೋಮಯಾಜಿ ಸರ್ ರವರಿಗೂ, ಮತ್ತು ಯೂಟ್ಯೂಬ್ ,ಫೇಸ್ಬುಕ್ ಮಾಧ್ಯಮಗಳ ಮೂಲಕವೂ ವೇದಿಕೆಯ ಕಾರ್ಯಕ್ರಮ ವೀಕ್ಷಿಸಲು ತಾಂತ್ರಿಕ ಸಹಕಾರ ಜವಾಬ್ದಾರಿ ನಿರ್ವಹಿಸಿದ ಪತ್ರಿಕೋದ್ಯಮಿ ಶ್ರೀ ಶಿವ ಸುಬ್ರಮಣ್ಯರವರು, ಸಮಿತಿ ಸದಸ್ಯರು ಶ್ರೀ ಸುದಿಂದ್ರ ರವರು, ಎಲ್ಲರಿಗೂ ತುಂಬು ಹೃದಯದಿಂದ ಧನ್ಯವಾದಗಳು.
ಅಷ್ಟೇ ಅಲ್ಲದೇ ತರಳಬಾಳು ಗ್ರಂಥಾಲಯದಿಂದ ಶ್ರೀ ವಿನಾಯಕ ದೇವಸ್ಥಾನ ಸಭಾಂಗಣದ ಆಡಳಿತ ಮಂಡಳಿಯ ಸದಸ್ಯರೂ ಹಾಗು ವೇದಿಕೆಯ ಉಪಾಧ್ಯಕ್ಷರಾದ ಶ್ರೀ ವೀರಶೇಖರ ಸ್ವಾಮಿರವರು.ತನು ಮನ ಧನಗಳಿಂದ ವೇದಿಕೆಯಲ್ಲಿ ಅದ್ಧೂರಿ ಯಕ್ಷಗಾನ ಕಾರ್ಯಕ್ರಮಗಳಿಗೆ ಸಾಕ್ಷಿಯಾಗುವ ಡಾ. ಪಾಂಗಾಳ್ ಸರ್ ರವರಿಗೂ ನಮ್ಮ ಕೃತಜ್ಞತೆಗಳನ್ನು ಅರ್ಪಿಸುತ್ತೇವೆ.
ಎಂದಿನಂತೆ ನೀವಿಲ್ಲದೇ ಯಾವ ಕಾರ್ಯಕ್ರಮಗಳಿಗೂ ಕಳೆ ಇರುವುದಿಲ್ಲ .ಪ್ರತಿ ಕಾರ್ಯಕ್ರಮದ ಹಿಂದೆ  ಕಾರ್ಯಕಾರಿ ಸಮಿತಿಯ ಸದಸ್ಯರಾದ ಪ್ರತಿಯೊಬ್ಬರ ಪಾತ್ರಗಳು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಇದ್ದುದ್ದನ್ನು ನಾವು ಕಾಣಬಹುದು.ಸಮಿತಿಯ ಪ್ರತಿ ಸದಸ್ಯರಿಗೂ ಕೂಡ ನಾನು ವಂದನೆಗಳನ್ನು ಸಲ್ಲಿಸುತ್ತೇನೆ. 
ವೇದಿಕೆಯನ್ನು ಬೆಳಸಿ ಸಾರಸ್ವತ ಲೋಕದ ದಿಗ್ಗಜರ ಸೇವೆಯನ್ನು ನೆನೆಯುತ್ತಾ ನಮ್ಮ ನಿಮ್ಮೆಲ್ಲರ ಸಾಹಿತ್ಯಾಭಿರುಚಿಯನ್ನು ಮತ್ತಷ್ಟು ಮಗದಷ್ಟು ರುಚಿಕರ ವಾಗುವಂತೆ ಮಾಡಿಕೊಂಡು ಸವಿಯೋಣ.
 ಧನ್ಯವಾದಗಳು. ಸರ್ವೇ ಜನಾ ಸುಖಿನೋಭವಂತು.
ಶ್ರೀಮತಿ ಮಂಜುಳಾ ಭಾರ್ಗವಿ, ಕಾರ್ಯದರ್ಶಿ 

Treasurer of the Vedike, Sri B Jayarama Somayaji, presented Income -Expenditure, Balance Sheet, and Receipt and Payment for the year ending 31st March 2025, audited by Chartered Accountants SHARAT AND CO.


A big thanks to Sri SharathChandra for their free, valuable service.


With couple of remarks the report was accepeted the house.

Mr ShivaSubramaniam asked that the report may be sent to the members a week in advance, so that they study the same and come prepared.

Mr Sudhindra proposed Vote of thanks.


Posted 24/5/2025