Monday, April 24, 2023

ಪುಸ್ತಕ ಬಿಡುಗಡೆ - ನೂತನ್ ದೊಶೆಟ್ಟಿ

 ಭಾನುವಾರ, ಏಪ್ರಿಲ್ 23, 2023 

10 ನೇ ಕ್ರಾಸ್, ಭುವನೆಶ್ವರಿನಗರ, ಹೆಬ್ಬಾಳ , ಬೆಂಗಳೂರು.



ಶ್ರೀಮತಿ ನೂತನ್ ದೊಶೆಟ್ಟಿ ಅವರ ಎರಡು ಪುಸ್ತಕಗಳ ಬಿಡುಗಡೆ ಕಾರ್ಯಕ್ರಮವನ್ನು ತಮ್ಮ ಮನೆಯಲ್ಲಿ ಆಯೋಜಿಸಿ ನೆರವೇರಿಸಿದರು..


ನಾವೂ ಸಹ ಸ್ವಲ್ಪ ಹೊತ್ತು ಕಾರ್ಯಕ್ರಮದಲ್ಲಿ ಹಾಜರಾಗಿ, ನಂತರ ಅಲ್ಲಿಂದ ಬೇರೆ ಕಾರ್ಯಕ್ರಮಕ್ಕೆ ಹೊರಟೆವು.

ಬಿಡುಗಡೆ ಕಾರ್ಯಕ್ರಮದಲ್ಲಿ ಹಲವಾರು ಗಣ್ಯ ವ್ಯಕ್ತಿಗಳು ಭಾಗವಹಿಸಿದ್ದು ವಿಶೇಷವಾಗಿತ್ತು.


ಪ್ರಾರ್ಥನೆಯಾದ ನಂತರ, ಶ್ರೀಮತಿ ನೂತನ್ ಅವರು,  ಅತಿಥಿಗಳನ್ನು, ನೆರೆದಿದ್ದ  ಸಭಿಕರನ್ನು ಆತ್ಮೀಯವಾಗಿ ಸ್ವಾಗತಿಸಿದರು.

ಪ್ರಾರ್ಥನೆ 


ಡಾ. ಎಮ್. ಎಸ್.ಆಶಾ ದೇವಿ, ವಿಮರ್ಶಕರು, ತಮ್ಮ ಭಾಷಣದಲ್ಲಿ "ಮಾತೆಂದರೆ ಏನು ಗೂಗಲ್" ಕವನಸಂಕಲವನ್ನು ವಿಮರ್ಶಿಸುತ್ತಾ ನೂತನ್ ಅವರ ಮನಸ್ಸಿನ ಭಾವನೆಗಳು, ಸ್ರಜನಶೀಲತೆ ಯನ್ನು ಸ್ಲಾಘಿಸಿದರು.

ಡಾ. ಆಶಾ  ದೇವಿ 

ಹಾಗೆಯೇ ಮುಂದುವರಿದು, ಪ್ರಸಕ್ತ ಕಾಲಘಟ್ಟದಲ್ಲಿ ಅಸಹಿಸ್ನುತೆ, ಸ್ತ್ರೀ ಶಕ್ತಿ, ತುರ್ತುಪರಿಸ್ತಿತಿಯ ವಾತವರಣದ ವಿಷಯ ಮಾತನಾಡಿ, ತಮ್ಮ ಎಡ ಚಿಂತನೆಯನ್ನು ಹೊರಹಾಕಿದರು.



ಕತೆಗಾರ ಮಹಾಬಲ ಮೂರ್ತಿ ಕೊಡ್ಲೆಕೆರೆ, ಹೆಣ್ಣಿನ ಬಗ್ಗೆ ಕೋಮಲ ಮಾತುಗಳನ್ನು ಆಡುತ್ತಾ ನನ್ನಲ್ಲಿ ಆಂತರ್ಯದ ಒಂದು ಪುರುಷನ ಅನಿಸಿಕೆ ವ್ಯಕ್ತವಾಗುತ್ತಿದೆ ಹೆಣ್ಣಿನ ಹೊರೆತಾಗಿ ನನ್ನಲ್ಲಿ ಬಲವಿಲ್ಲ ಹೆಣ್ಣೇ ಸಬಲೇ ಎನ್ನಬಹುದು. ನೂತನ ದೋಶೆಟ್ಟಿ ಅವರು ಸ್ವರ್ಗದೊಂದಿಗೆ ಅನುಸಂಧಾನ ಕೃತಿಯಲ್ಲಿ ಚಾರಧಾಮ್ ಪ್ರವಾಸವನ್ನು ನಾವೇ ಕೈಗೊಂಡಿರುವ ರೀತಿಯಲ್ಲಿ ಕಟ್ಟಿಕೊಟ್ಟಿದ್ದಾರೆ. "ಮಾತೇಂದರೆ ಏನು ಗೂಗಲ್" ಕೃತಿಯನ್ನು ನಾನು ಓದಿಲ್ಲ. ಆದರೂ, ಮಾತನಾಡುವ ಮುನ್ನ ಗೂಗಲ್ ನಲ್ಲಿ ಏನು ಮಾತಾಡಬೇಕು ಎಂದು ಹುಡುಕಬೇಕಾದ ಸ್ಥಿತಿ ಉಂಟಾಗಬಹುದು ಎಂಬುದು ಮುನ್ನೆಚ್ಚರಿಕೆಯ ಪ್ರತೀಕವಾಗಿದೆ ಈ ಕೃತಿ ಎನ್ನಬಹುದು. ಸ್ವರ್ಗದೊಂದಿಗೆ ಅನುಸಂಧಾನ ಕೃತಿಯಲ್ಲಿ ಜೀವ ಜಗತ್ತಿನ ಕಥೆಗಳನ್ನು ಹೇಳುತ್ತಾ ಹೋಗಿದ್ದಾರೆ ಜೀವ ಜೀವದೊಂದಿಗೆ ಪ್ರಕೃತಿ ಪರಿಸರ ಸಂಬಂಧಗಳನ್ನು ಕಟ್ಟಿಕೊಟ್ಟಿದ್ದಾರೆ ಎಂದರು.

ಅಂಕಣಕಾರ ಎಸ್.‌ ಷಡಕ್ಷರಿ, ಬರವಣಿಗೆ ಎಂಬುದು ನಮಗೆ ನಾವೇ ತಂದುಕೊಳ್ಳುವ ಸ್ಫೂರ್ತಿ. ಬರವಣಿಗೆ ಕಷ್ಟವೂ ಹೌದೂ, ಇಷ್ಟವೂ ಹೌದು. ನೂತನ ಅವರು ಬರವಣಿಗೆಯಲ್ಲಿ ನಿರತರಾಗಿರಲಿ ಎಂದು ಆಶಿಸಿದರು.

ಲೇಖಕಿ ನೂತನ ದೋಶೆಟ್ಟಿ, ನಾನು ಪ್ರವಾಸ ಕಥನವನ್ನು ಬರೆಯಬೇಕೆಂದು ಬರೆಯಲಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಅಂದಿನ ದಿನದ ಪ್ರವಾಸದ ಅನುಭವವನ್ನು ಪ್ರಕಟಿಸುತ್ತಿದ್ದೆ. ಆಗ ಸ್ನೇಹಿತರು ಹಾಗೂ ಹಿತೈಷಿಗಳು ನನ್ನನ್ನು ಪುಸ್ತಕ ರೂಪದಲ್ಲಿ ಪ್ರಕಟಿಸುವಂತೆ ಒತ್ತಾಯಿಸಿದ್ದು "ಸ್ವರ್ಗದೊಂದಿಗೆ ಅನುಸಂಧಾನ" ಕೃತಿ ಸಾಕ್ಷಿ ಎಂದರು.

ಕಾಯಕ್ರಮದಲ್ಲಿ ದಕ್ಷಿಣ ವಲಯದ ನಿವೃತ್ತ ಸಹಾಯಕ ನಿರ್ದೇಶಕ ಶ್ರೀನಿವಾಸ್‌, ಕುವೆಂಪು ವಿಶ್ವವಿದ್ಯಾಲಯದ ಕುಲಪತಿ ಬಿ.ಪಿ.ವೀರಭದ್ರಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.



ಶ್ರೀಮತಿ ನೂತನ್ ದೊಶೆಟ್ಟಿ ಯವರ ಸಾಹಿತ್ಯ ಅಭಿರುಚಿ, ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಅಭಿನಂದನೆಗಳು.

ಬರೆದಿರುವುದು 25/4/2023 

No comments:

Post a Comment