October 17, 2019
BirthiMane, Bengaluru.
Just thought of writing about my appayya, today, Birthi Venkatramana SomayajiHe was the youngest offspring for his father, born in the year 1900, and passed away in May.1990, others being two elder brothers, Subbanna Somayaji and ShakaranaNarayana Somayaji and three sisters.
The elder brothers went out from the village, Varambally, Salekeri, my father remained in the village and ancestral home and doing some small business around and priest (poojari) at the local temple - Veerabadra DurgaParameshwari temple, Salekeri.
I was born as as last son in 1948, elder brothers Seetharama (1927 - 2017), Padmanabha, (1929 - 1997) and five sisters. Vanajaksh9 (Achi), Bhagirahti, Nagaveni, Kamalakshi and Kashi.
90 years of his life, he was able bodied and hard working, climbing trees, cutting wood and growing vegetables in the house during rainy seasons and outside field during dry season. I remember, I used to help him to draw water from the well, with special arrangement or device called Etha (ಏತ)
with brothers family during my wedding Sept.1980 |
Time spent in the younger days to help in pooja rituals at the temple and during festival days lot of people come to temple, for braking the coconuts.
Sisters Bhagirathi, Vanajakshi, Nagaveni, Kashi |
I continued going to school in Brahmavara and college in Udupi, and he was a man taking issues as it comes and not very much getting upset over the things happening.
Accept as it comes.
Three generation |
After finishing my post graduation at Mysore, and working in Manipal Engineering College as Lecturer in Physics, I left for overseas to work, fits in SierraLeone, Nigeria and Dubai.
First time going abroad (Oct. 1971) |
I got the news about his death when I was working in Dubai, (in May 1990) and came home to take part in the rituals.
He used spend his time reading books, preparing SACRED THREAD using a small home device, turning with hand and he used to take pride in that work.
Shobha Somayaji wrote in her Facebook Post: (April 14, 2020)
ನನ್ನ ಅಜ್ಜಯ್ಯ ಸಾಯುವಾಗ ಅವರ ವಯಸ್ಸು 91. ನನಗೆ ನೆನಪು ಇರುವ ಹಾಗೆ ಅವರ ಚಿತ್ರಣ ಒಂದೇ ರೀತಿಯದಾಗಿತ್ತು. ಹದವಾದ ಮೈ ಕಟ್ಟು, ಕಂದು ಮೈ ಬಣ್ಣ, ಸಾಧಾರಣ ಎತ್ತರದ ನಿಲುವು, ಬೋಳುಮಂಡೆ, ಸಣ್ಣ ಪಿಳ್ಳೆ ಜುಟ್ಟು, ಬರೀ ಮೈ, ಕೋಮಣ ಕವರ್ ಮಾಡುವ ಒಂದು ಬೈರಾಸ, ಅಲ್ಲಲ್ಲಿ ಕಾಣುವ ಒಂದೆರಡು ಹಲ್ಲುಗಳು. ಮನೆಯಲ್ಲಿ ಎಷ್ಟೇ ಸಾವುನೋವಾದರೂ ನಿರ್ಲಿಪ್ತ ಭಾವ.
ಒಂದು ಘಳಿಗೆ ಕೂಡಾ ಸುಮ್ಮನೆ ಕೂರುವವರಲ್ಲ. ಗದ್ದೆಯಲ್ಲಿ, ಅಂಗಳದಲ್ಲಿ ತರಕಾರಿ ಕೃಷಿ. ಇಲ್ಲವೇ ಜನಿವಾರ ಮಾಡುವುದು. ಜನಿವಾರ ಹಿಡಿಯಲು ನಮ್ಮನ್ನು ಕರೆಯುವುದು. ನಾವು ಹೋಗಿ ಹಿಡಿಯದಿದ್ದಲ್ಲಿ ಅಲ್ಲೇ ಒಂದರಗಳಿಗೆಯ ಸಿಟ್ಟು. ಬ್ರಹ್ಮಾವರದ ಲೈಬ್ರರಿಯಿಂದ ಪುಸ್ತಕ ತಂದು ಓದುವುದು. ಕೀಟಲೆಗಾಗಿ ನಾವು ಅವರು ಗುರುತಿಗೆ ಇಟ್ಟ ಕಾಗದದ ತುಂಡನ್ನು ಬೇರೆ ಪುಟಕ್ಕೆ ಹಾಕಿಡುವುದು. ಮಾರನೆ ದಿನ ಅವರು ಪುನಃ ನಾವು ಗುರುತಿಗಿಟ್ಟ ಪುಟದಿಂದಲೇ ಓದನ್ನು ಮುಂದುವರಿಸುವುದು. ಹೀಗೇ ಅಜ್ಜಯ್ಯನ ಬಗ್ಗೆ ಸಾಲು ಸಾಲು ನೆನಪುಗಳು.
ದೇವಸ್ಥಾನದ ಅರ್ಚಕರಾಗಿದ್ದರೂ ಜಾತಿಪಾತಿಯ ಬಗ್ಗೆ ಅಷ್ಟು ಮುಗಮ್ಮಾಗಿ ಇದ್ದವರಲ್ಲ. ಹೀಗಾಗಿ ಬೇರೆ ಜಾತಿಯ ನನ್ನ ಸ್ನೇಹಿತರಿಗೆ ಆರಾಮಾಗಿ ನಮ್ಮ ಮನೆಯಲ್ಲಿ ಎಲ್ಲಾ ಕಡೆಯೂ ಪ್ರವೇಶವಿತ್ತು.
ಜಾತಕದ ಬಗ್ಗೆಯೂ ಅವರಿಗೆ ಅಷ್ಟು ಒಲುಮೆ ಇರಲಿಲ್ಲ. "ಮದುವೆಗೆ ಮನಸ್ಕೂಟ ಮುಖ್ಯ" ಎನ್ನುತ್ತಿದ್ದರು. ಸರಳ ಜೀವನ ನಡೆಸುತ್ತಿದ್ದ ಅವರು ಒಂದು character ಆಗಿದ್ದರು ಅಂದರೆ ತಪ್ಪಿಲ್ಲ.

ಅಜ್ಜಯ್ಯನ ಮನೆ ಎಲ್ಲರಿಗೂ ಒಂದು ಭಾವನಾತ್ಮಕವಾಗಿ ನಂಟಿರುವ ಜಾಗ. ನಮ್ಮ ಬಿರ್ತಿ ಕುಟುಂಬದ ಸರ್ವರೂ ತಮ್ಮನ್ನು ತಾವು ಈ ಮನೆಗೆ relate ಮಾಡಿಕೊಳ್ಳುವುದು ಒಂದು great ವಿಷಯ. ಅಂತಹ ಅಂಟಿನ ಜಾಗ ಇದು.
ಈ ಮನೆಯ ವಿಶೇಷವೆಂದರೆ ನಮ್ಮ ಅಜ್ಜಯ್ಯನ 9 ಮಕ್ಕಳು, ಅವರ ಮಕ್ಕಳು ಮತ್ತು ಮೊಮ್ಮಕ್ಕಳು ಎಲ್ಲರೂ ಅದೇ ಭಾವನಾತ್ಮಕ ಭಾವದೊಂದಿಗೆ ಈ ಮನೆಗೆ ಇನ್ನೂ ಬಂದು ಕೆಲವು ಕ್ಷಣಗಳನ್ನು, ದಿನಗಳನ್ನು ಕಳೆಯುತ್ತಾರೆ. ಮನೆ ಹಳೆಯದಾದರೂ ಮನದ ಭಾವ ಹಳೆಯದಲ್ಲವಲ್ಲ!
ಈಗಿರುವ ಮನೆ 1973ರಲ್ಲಿ ನನ್ನ ಅಪ್ಪನ ನೇತೃತ್ವದಲ್ಲಿ ಕಟ್ಟಲ್ಪಟ್ಟದ್ದು. ಆ ತನಕ ಇದ್ದ ಹಳೆಯ ಮನೆಯ ನೆನಪು ನನಗೆ ಅಷ್ಟಿಲ್ಲ. ಈಗಿರುವ ಮನೆ typical ದಕ್ಷಿಣ ಕನ್ನಡ ಮಾದರಿಯ ಭವಂತಿ ಮನೆ. ಮಧ್ಯ ಅಂಗಳ ಹಾಗೂ ಸುತ್ತಲೂ ಗೋಡೆ. ಮನೆಯ ಎದುರು ತಳಿ/ದಳಿ. ಎದುರಿಗೆ asbestos sheetನ ಜಗುಲಿ. ನಂತರ ಒಂದು ಕಟ್ಟೆಯ structure. ತದನಂತರ ಚಾವಡಿ. ನಾವೆಲ್ಲರೂ ಸೇರಿದರೆ ನಮ್ಮ ರಾಜಸಭೆ ನಡೆಯುವುದು ಜಗುಲಿಯಲ್ಲೇ! ಅಲ್ಲಿರುವ ಅಜ್ಜಯ್ಯನ ಕಿಟಕಿ ಎಲ್ಲರ centre of attraction. ಒಳ್ಳೆಯ ಗಾಳಿ ಬರುವ ಜಾಗ. ನನ್ನಮ್ಮನ ಎಲೆಅಡಿಕೆ ಕುಟ್ಟಿ ತಿನ್ನುವ ಜಾಗ. ಅಮ್ಮನ ಕುಟ್ಟಾಣಿ ಹಾಗೂ ಎಲೆ ಅಡಿಕೆಯ ಪರಿಕರಗಳು ಅಜ್ಜಯ್ಯನ ಕಿಟಕಿಯ ಕಟ್ಟೆಯನ್ನು ಗುಳುಂ ಮಾಡಿರುವುದು ನಿಜವಷ್ಟೇ!
ಅಜ್ಜಯ್ಯನ ಮನೆಯಲ್ಲಿ ಈಗ regular ಆಗಿ ಇರುವುದು ನನ್ನ ಅಮ್ಮ ಮತ್ತು ಅತ್ತಿಗೆ ಮಾತ್ರ. ನನ್ನ cousins ಎಲ್ಲಾ ಈಗಲೂ ಈ ಮನೆಗೆ ಬಂದು ನನ್ನ ಅಮ್ಮನೊಡನೆ ಕಥೆ ಹೊಡೆದು ಹೋಗುತ್ತಾರೆ. ನನ್ನ ಅತ್ತಿಗೆ ಬಂದವರಿಗೆ ಪ್ರೀತಿಯಿಂದ ಸತ್ಕರಿಸುತ್ತಾಳೆ. ನನ್ನ ಚಿಕ್ಕಪ್ಪ ಅವರ ಬೆಂಗಳೂರಿನ ಮನೆಗೆ ಬಿರ್ತಿ ಮನೆ ಎಂದು ನಾಮಕರಣ ಮಾಡಿದ್ದಾರೆ.
ಆ ಮನೆಯಲ್ಲಿ ಎಷ್ಟೊಂದು ಕಾರ್ಯಕ್ರಮ ನಡೆದಿವೆ; ಎಷ್ಟೊಂದು ಸಾವು ನೋವು ಉಂಟಾಗಿವೆ; ಎಷ್ಟೊಂದು ಹಬ್ಬಹರಿದಿನಗಳು, ಆಚರಣೆಗಳು ನಡೆದಿವೆ. ನಾವೆಲ್ಲ ಆ ಸಮಯದಲ್ಲಿ ಒಟ್ಟಾಗಿ ಮಾಡಿದ ದಾಂಧಲೆಗಳು, ಕೀಟಲೆಗಳು ಒಂದೇ ಎರಡೇ. ನಮ್ಮ ಆಚೆಮನೆಯವರು ಕೂಡಾ ಇದಕ್ಕೆ ಸಾಥ್.
ಕೃಷ್ಣ ಅಷ್ಟಮಿಯ timeನಲ್ಲಿ ನಾವೆಲ್ಲ cousins ಅಜ್ಜಯ್ಯನ ಮನೆಯಲ್ಲಿ ಒಂದಾಗುತ್ತಿದ್ದೆವು. ಶುಂಠಿ ಉಂಡೆಯನ್ನು ಅಲ್ಲಿರುವ ಕಂಬಕ್ಕೆ ಹಚ್ಚಿ ಉಳಿದ ಉಂಡೆಗಳಿಗೆ ಎರಡೆರಡು ಸಲ ಕೈಯೊಡ್ಡುತ್ತಿದ್ದೆವು. ಅವೆಲ್ಲ ಒಂದು ರೀತಿಯ ಮರೆಯಲಾರದ ಕ್ಷಣಗಳು. ಆ ಒಟ್ಟಿರುವ ಭಾವವೇ ಚೆಂದ! ಬರೆಯುತ್ತಾ ಹೋದರೆ ಘಟನೆಗಳು ಸರತಿ ಸಾಲಿನಲ್ಲಿ ಬರುತ್ತವೆ. ಇಂದಿಗೆ ಸಾಕಿಷ್ಟು😊

Posted 17th October 2019
No comments:
Post a Comment