ಏಪ್ರಿಲ್ 1, 2024
ಪ್ರಕಾಶ್ ಹೆಗ್ಡೆ ಲೇಖನ
ಸ್ನೇಹಿತ ಸಿಕ್ಕಿದ್ದ...
ಅವ ಎಡಬಿಡಂಗಿ ಎಡಚರರ ಪ್ರಭಾವಿತ...ಎದುರಿಗೆ ಸೆಂಟ್ರಿಸ್ಟ್...!"ನಾನು ಯಾವುದೇ ಪಕ್ಷದವ ಅಲ್ಲ....
ಮಾನವ ಧರ್ಮದವ...ನಾನು "ಮಧ್ಯ" ಸಿದ್ಧಾಂತವನ್ನು ಪ್ರತಿಪಾದಿಸುತ್ತೆನೆ "...ಎನ್ನುತ್ತಾ
ಮೋದಿಯನ್ನುಮೋದಿ ಸರಕಾರವನ್ನು ಬೈಯ್ಯುವ ಅವಕಾಶ ಸಿಕ್ಕಾಗ ತಪ್ಪದೆ ಬೈಯ್ಯುವವನು...!
" ಪ್ರಕಾಶಣ್ಣ...ನಂದು ಈ ಬಾರಿ "ನೋಟಾ ವೋಟ್.."..ಮೋದಿಯವರ ಮುಖ ನೋಡಿ ಇಷ್ಟವಿಲ್ಲದ
ಅಭ್ಯರ್ಥಿಗೆ ವೋಟ್ ಹಾಕಲಾರೆ...."..ಎನ್ನುತ್ತಾ ನನ್ನ ಮುಖ ನೋಡಿದ...
" ಪ್ರಕಾಶಣ್ಣ...ಒಳ್ಳೆಯ ಡಾಕ್ಟರ್ ಅಂತ ಡಾಕ್ಟರ್ ನ ಕಾಂಪೌಂಡ್ ರ್ ಹತ್ತಿರ
ಔಷಧ ತೆಗೆದು ಕೊಳ್ಳುವದು ಮೂರ್ಖತನ... ಅಲ್ವಾ?....ನಿನ್ನ ಎಂಪಿ ನಿಷ್ಕ್ರಿಯ.... ಈಗ ಚುನಾವಣೆಗೆ ನಿಂತವನೂ ಕೆಲಸ ಮಾಡುವದಿಲ್ಲ...ನೀನೂ ಸಹ ನೋಟಾ ಹಾಕುವದು ಒಳ್ಳೆಯದು...."
ನನಗೆ ನಗು ಬಂತು...." ನೋಡು ಡಾಕ್ಟರ್ ಒಳ್ಳೆಯವ....ಆರೋಗ್ಯದ ಪ್ರಶ್ನೆ ಬಂದಾಗ ಔಷಧ ಅತ್ಯಗತ್ಯ....
ಡಾಕ್ಟರ್ ಸಿಗಲಿಲ್ಲಅಂತ... ಕೊಳೆ ಅಡಿಕೆ ಸಾಬನ ಹತ್ತಿರವೋ...ಅಥವಾ ಹಳೆ ಗುಜರಿ ಅಂಗಡಿಗೆ ಹೋಗಿ ...
ಅವನು ಹೇಳಿದ ಔಷಧ ತೆಗೆದುಕೊಳ್ಳುವುದು ಮೂರ್ಖತನದ ಪರಮಾವಧಿ ಅಲ್ವಾ..?...ಕೊನೆ ಪಕ್ಷ
ಕಂಪೌಂಡರ್ ಗೆ ಔಷಧದ ಮಾಹಿತಿ ಇದ್ದಿರುತ್ತದೆ...ಅಥವಾ ಡಾಕ್ಟರನ್ನು ಸಂಪರ್ಕಿಸಿ ಔಷಧವನ್ನು ತೆಗೆದುಕೊಳ್ಳಬಹುದು...
ಮೋದಿ
ದೇಶಭಕ್ತ, ಪ್ರಾಮಾಣಿಕ...ಈ ಬಾರಿ ಅವನೇ ಪೂರ್ತಿಯಾಗಿ ಜವಾಬ್ದಾರಿ ತೆಗೆದುಕೊಂಡು ಪ್ರಚಾರ ಮಾಡುತ್ತಿದ್ದಾನೆ...ಅವನನ್ನು ಕಣ್ ಮುಚ್ಚಿ ನಂಬಬಹುದು...ಅವನಿಗೇನು ಕುಟುಂಬವೇ?ಹೆಂಡತಿಯೇ...
ಮಕ್ಕಳು ಮೊಮ್ಮಕ್ಕಳೆ!! ಆಸ್ತಿಯನ್ನುಚಿನಾದೇಶಕ್ಕೊಇಟಲಿ ದೇಶಕ್ಕೋ ತೆಗೆದುಕೊಂಡು ಹೋಗುತ್ತಾನೆ ಎನ್ನುವ ಅಗತ್ಯವೂ ಇಲ್ಲ..ವಂಶವಾದದ ಜಾತ್ಯಾತೀತ ಹೆಸರಿನಲ್ಲಿ ವೋಟ್ ಕೆಳುವವರಿಗಿಂತ ಇಂವ ಬೆಸ್ಟ್..."
ಗೆಳೆಯ ಮಾತಾಡಲಿಲ್ಲ..ಅವನ ಹೆಗಲ ಮೇಲೆ ಕೈ ಹಾಕಿದೆ..." ಇನ್ನೂ ಅರ್ಥ ಮಾಡಿಸುತ್ತೇನೆ ಕೇಳು...
ನಮಗೆ ಹಸಿವೆ ಆಗಿದೆ...ಹೋಟೆಲ್ಲಿಗೆ ಹೋಗುತ್ತೇವೆ ಅಂತ ಇಟ್ಟುಕೊಳ್ಳೋಣ....ಅಲ್ಲಿರುವುದು ಒಂದೇ ಹೋಟೆಲ್
ಮೂರು ಐಟಮ್ ಇರುತ್ತದೆ...ದೋಸೆ...ಇಡ್ಲಿ ...ವಡಾ ....ಆದರೆ ಯಾವುದೂ ಸಹ ಚೆನ್ನಾಗಿ ಇದ್ದಿರುವದಿಲ್ಲ...
ಹಸಿವೆಯ ಅಗತ್ಯ ಆಹಾರ....ಅಲ್ಲಿ ಇದ್ದುದರಲ್ಲಿ ಬೆಸ್ಟ್ ಯಾವುದೋ ಅದನ್ನು ತಿಂದು ಬರುತ್ತೇವೆ ಅಲ್ವಾ?..
ಅಥವಾ...ಇವತ್ತು ಚೆನ್ನಾಗಿಲ್ಲ..ನಾಳೆ ಚೆನ್ನಾಗಿರುವ ತಿಂಡಿ ಮಾಡಬಹುದು ಅಂತ... ಇರ್ತೀಯಾ..?
" ನೋಟಾ " ಅಂತ ಉಪವಾಸ ಇರ್ತಿಯಾ...?..."ಗೆಳೆಯನ ಬಳಿ ಉತ್ತರ ಇರಲಿಲ್ಲ....::::::: :::::::
ಚುನಾವಣೆ ಹತ್ತಿರ ಬರ್ತಾ ಇದೆ...ತಲೆ ಕೆಡಿಸಿಕೊಳ್ಳಬೇಡಿ....ನಮ್ಮ ಕೃಷ್ಣ ನಂಬಿಕೆಯೇ ನಮಗೆ ಮುಖ್ಯ...
ನಮ್ಮದೇಶ, ಧರ್ಮ, ಸಂಸ್ಕೃತಿ ನಮ್ಮ ಬದುಕು....ಇವುಗಳಿಗಾಗಿ " ಬದುಕುವ " ನಾಯಕ ಯಾರು ...?
ಅಂತ ನೋಡಿಕೊಂಡು ...ನಮ್ಮ ನಂತರವೂ ದೇಶ ಧರ್ಮ , ಸಂಸ್ಕೃತಿ ಇರಬೇಕು..ನಮ್ಮಮಕ್ಕಳು,
ಮೊಮ್ಮಕ್ಕಳ ಭವಿಷ್ಯವನ್ನು ನೆನಪಿಸಿಕೊಂಡು ಮೋದಿಯವರಿಗೆ ಮತ ಹಾಕೋಣ ...
ಜೈ ಭಜರಂಗಬಲಿ....
ಹರ ಹರ ಮಹಾದೇವ....
No comments:
Post a Comment