Saturday, December 26, 2020

ಸಂಗೀತ ಮಾಲಿಕೆ 16 - ಗಮಕ ಸಂವಾದ

 ಶನಿವಾರ, ದಶಂಬರ 26, 2020 

ಶ್ರೀಕಾಂತ ಸೋಮಯಾಜಿ ಸ್ಮರಣಾರ್ಥ ಸಂಗೀತ ಮಾಲಿಕೆಯ ಈ ವರ್ಷದ ಕಾರ್ಯಕ್ರಮವು "ಗಮಕ ಸಂವಾದ" ದ ರೂಪದಲ್ಲಿ ಸಂಪನ್ನ ಗೊಂಡಿತು.


ಕೊರೋನ ಸಂಕಟದಿಂದಾಗಿ ಕಾರ್ಯಕ್ರಮವು ಮೈಲಾರಿ ಲೈವ್ ಮೂಲಕ ಯೂ ಟ್ಯೂಬ್ ಮತ್ತು ಫೇಸ್ ಬುಕ್ ನಲ್ಲಿ ನೇರಪ್ರಸಾರದಿಂದ ಎಲ್ಲ ಕಡೆಯಿಂದ ಮನೆಯಲ್ಲೇ ಕುಳಿತು  ವೀಕ್ಷಿಸಲು ಸಾಧ್ಯವಾಯಿತು.


ಮೊದಲಲ್ಲಿ ಅಭಿಲಾಷ ಅವರು ಕಲಾವಿದರು ಹಾಗು ಸನ್ಮಾನಿತ ಗೀತಾ ತುಂಗಾ ಅವರನ್ನು ಪರಿಚಯ ಮಾಡಿ ಸ್ವಾಗತಿಸಿದರು. ದಿ. ಶ್ರೀಕಾಂತ ಸೋಮಯಾಜಿಯವರ ಸಂಗೀತ ಆಸಕ್ತಿ, ಕಾಳಜಿ ಯನ್ನು ನೆನಪಿಸಿಕೊಂಡು, ಅವರ ನೆನಪಿಗಾಗಿ ಪ್ರತೀ ವರ್ಷದಂತೆ ಮಾಡುವ ಸಂಗೀತ ಮಾಲಿಕೆ ಕಾರ್ಯಕ್ರಮ, ಗಮಕ ಸಂವಾದ ದಿಂದ ಸೋಮಯಾಜಿಯವರ ಮನೆಯಂಗಳದಲ್ಲಿ ನಡೆಯುತ್ತಿರುವುದು ವಿಶೇಷ ಎಂದೂ ತಿಳಿಸಿದರು. 


ಸನ್ಮಾನಿತ, ಸಂಗೀತ ಶಿಕ್ಷಕಿ ಗೀತಾ ತುಂಗಾ ಅವರ ಸಂಗೀತ ಆಸಕ್ತಿ, ಮಕ್ಕಳಿಗೆ ಕಲಿಸುವ ತುಡಿತವನ್ನು ನೆನಪಿಸಿ ಲೀಲಾ ಸೋಮಯಾಜಿ, ಶ್ರೀಧರ್ ಹಂದೆ ಅವರು ಶಾಲು, ಫಲ ಪುಷ್ಪ ದೊಂದಿಗೆ ಸನ್ಮಾನಿಸಿದರು.

ಸುಮಾರು ಒಂದು ಗಂಟೆಯ ಕಾಲ, ಸುಜಯಿಂದ್ರ ಹಂದೆಯವರ  ನೇತೃತ್ವದಲ್ಲಿ ನಡೆದ ಗಮಕ ಕಾರ್ಯಕ್ರಮದಲ್ಲಿ ಶ್ರೀಧರ್ ಹಂದೆ, ಚಂದ್ರಶೇಕರ ಕೆದ್ಲಾಯ, ಕಾವ್ಯ ಹಂದೆ ಪಾಲ್ಗೊಂಡಿದ್ದು, ನಾಗೇಂದ್ರ ಐತಾಳ ಕೊಳಲು ನುಡಿಸಿ ಸಹಕರಿಸಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ ಕಲಾವಿದರುಗಳನ್ನು, ನೇರ ಪ್ರಸಾರವನ್ನು ನಡೆಸಲು ಸಹಕರಿಸಿದ ಮೈಲಾಡಿ  ಲೈವ್ ಅವರನ್ನೂ, ಅಭಿಲಾಷ ಅವರು ತುಂಬು ಹೃದಯದಿಂದ ಧನ್ಯವಾದ ಸಮರ್ಪಿಸಿದರು.

Post from Abhilasha in Facebook:

ಶ್ರೀಕಾಂತ ಸೋಮಯಾಜಿ ಸಂಗೀತ ಮಾಲಿಕೆ 2020
ಸಂಗೀತ ಸಂಜೆಯೊಂದನ್ನು ಏರ್ಪಡಿಸಿ ಬಂಧುಗಳು,ಸ್ನೇಹಿತರು, ಊರವರ ಜೊತೆ ಶ್ರೀಕಾಂತ್ ರ ನೆನಪು ಹಂಚಿಕೊಳ್ಳುವ ನಮ್ಮ‌‌ ವರ್ಷದ ವಾಡಿಕೆ ಈ ಬಾರಿ ಕೊರೋನಾ ಕಾರಣಕ್ಕೆ ತುಸು ಭಿನ್ನ‌ ಬಗೆಯಲ್ಲಿ ಜರುಗಿತು.
ಮನೆಯಂಗಳದಲ್ಲೇ ಕಾರ್ಯಕ್ರಮ ನಡೆಸಿ live ನಲ್ಲಿ ಕಾರ್ಯಕ್ರಮ ಬಿತ್ತರಗೊಳಿಸಿದೆವು.

ಈ ಬಾರಿಯ ಗೌರವ ಸಂಮಾನವನ್ನು ಸಂಗೀತ ಶಿಕ್ಷಕಿ ಶ್ರೀಮತಿ ಗೀತಾ ತುಂಗ ಅವರಿಗೆ ಅರ್ಪಿಸಿದೆವು. ಗೀತಾ ಅವರು ಹಲವಾರು ವರ್ಷಗಳಿಂದ ಬ್ರಹ್ಮಾವರ - ಕೋಟ , ಸಾಲಿಗ್ರಾಮ ಪರಿಸರದ ಹಲವಾರು ವಿದ್ಯಾರ್ಥಿಗಳಿಗೆ ಸಂಗೀತದ ಪಾಠ ಮಾಡುತ್ತಾ ಸಂಗೀತದ ಅಭಿರುಚಿ ಬೆಳೆಸುತ್ತಿರುವವರು.
ನಂತರ ಗಮಕ ಸಂವಾದ -
ಕುಮಾರವ್ಯಾಸ ಭಾರತದ ಕರ್ಣ, ಕೃಷ್ಣ, ಕುಂತಿಯರ ಸಂವಾದ ಭಾಗದ ಕಾವ್ಯವಾಚನವನ್ನು
ಎಚ್. ಶ್ರೀಧರ ಹಂದೆ, ಚಂದ್ರಶೇಖರ ಕೆದ್ಲಾಯ, ಸುಜಯೀಂದ್ರ ಹಂದೆ, ಕಾವ್ಯ ಎಚ್. ಇವರು ನಡೆಸಿಕೊಟ್ಟರು. ಈ ಪ್ರಯತ್ನ ಕಾವ್ಯವಾಚನದ ಹೊಸ ಸಾಧ್ಯತೆಯೊಂದನ್ನು ಹುಡುಕುವ ಪ್ರಯೋಗದಂತಿತ್ತು.

ಮುಂದಿನ ಬಾರಿ ಮತ್ತೆ ನಮ್ಮೆಲ್ಲ ಅಂದು ಬಂಧುಗಳು ನಮ್ಮ‌ ಮನೆಯಂಗಳದಲ್ಲಿ ಈ ನೆಪಕ್ಕಾದರೂ ನಮ್ಮ ಜೊತೆಯಾಗುವಂತಾಗಲಿ.

ಬರೆದಿರುವುದು, ಭಾನುವಾರ 27 ದಶಂಬರ 2020 



No comments:

Post a Comment