Monday, November 9, 2020

ಶಿವರಾಮ ಕಾರಂತ ವೇದಿಕೆ - ರಾಜ್ಯೋತ್ಸವ 2020

 ಭಾನುವಾರ, ನವಂಬರ 8, 2020 


ಶಿವರಾಮ ಕಾರಂತ ವೇದಿಕೆಯು  ಕನ್ನಡ  ರಾಜ್ಯೋತ್ಸವ ಕಾರ್ಯಕ್ರಮವನ್ನು ಸಂಜೆ 5  ಗಂಟೆಗೆ  ಗೂಗಲ್ 
ಮೀಟ್ ಸಭೆಯ ಮೂಲಕ ಆಚರಿಸಿತು..



ಪ್ರೊ. ರಾಧಾಕೃಷ್ಣ ಅವರು ಕರ್ನಾಟಕ ಏಕೀಕರಣ ಮತ್ತು ಕನ್ನಡ ರಾಜ್ಯೋತ್ಸವ ಎಂಬ ವಿಚಾರದ ಮೇಲೆ ಸವಿಸ್ತಾರವಾಗಿ ಭಾಷಣ ಮಾಡಿದರು.
ವೇದಿಕೆಯ ಪ್ರಧಾನ ಕಾರ್ಯದರ್ಶಿ ಪಾ. ಚಂದ್ರಶೇಖರ ಚಡಗ ಅವರು ಸ್ವಾಗತ ಹಾಗೂ ಅತಿಥಿ ರಾಧಾಕೃಷ್ಣ ಅವರ ಪರಿಚಯ ಮಾಡಿದರು. ಸುಮಾರು 20 ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಶ್ರೀಮತಿ ಶಶಿಕಲಾ ಅವರು ಧನ್ಯವಾದ ಸಮರ್ಪಣೆ ಮಾಡಿದರು.
ಕಾರ್ಯಕ್ರಮದ ವಿವರ ಹಾಗೂ ಅತಿಥಿ ಭಾಷಣದ ವಿವರವಾದ ವರದಿಯನ್ನು ಶಶಿಕಲಾ ಅವರು ಸವಿಸ್ತಾರವಾಗಿ ಬರೆದಿರುವುದು ಈ ಕೆಳಗೆ ಓದಬಹುದು.
ಗೆಳೆಯ ಕನ್ನಡಿಗರೇ,
ಸಿರಿಗನ್ನಡ ಧ್ವಜವೆತ್ತಿ ಮೆರೆಯಿಸುತಿರುವ ನಿಮಗೆ ಸ್ವಾಗತವು 

ದಿನಾಂಕ 8.11.2020 ರಂದು ಭಾನುವಾರ 🌺"ಶಿವರಾಮ ಕಾರಂತ ವೇದಿಕೆ (ರಿ)"🌺ಆರ್. ಟಿ.ನಗರ, ವತಿಯಿಂದ ಕನ್ನಡ ರಾಜ್ಯೋತ್ಸವ 2020 , ಆಚರಣೆ ನಡೆಯಿತು. 

ಸಂಜೆ  5 ಗಂಟೆಯಿಂದ "ಗೂಗಲ್ ಮೀಟ್ ಸಭೆ" ಮೂಲಕ ನಡೆದ ಸಭೆಯಲ್ಲಿ ಮುಖ್ಯ ಭಾಷಣಕಾರರಾಗಿ 'ಪ್ರೊ. ಕೆ.ಇ. ರಾಧಾಕೃಷ್ಣ", ಖ್ಯಾತ ಶಿಕ್ಷಣ ತಜ್ಞರು, ಸಾಹಿತಿಗಳು ಆಗಮಿಸಿದ್ದರು. 
🍂ವಿಷಯ: "ಕರ್ನಾಟಕ ಏಕೀಕರಣ, ಕನ್ನಡ ರಾಜ್ಯೋತ್ಸವ"

ವೇದಿಕೆಯ ಸಂಸ್ಥಾಪಕರು, ಪ್ರಸ್ತುತ ಕಾರ್ಯದರ್ಶಿಗಳು ಆದ ಪಾ.ಚಂದ್ರಶೇಖರ ಚಡಗರವರು ಸ್ವಾಗತ ಮತ್ತು ಅತಿಥಿಗಳ ಪರಿಚಯ ಮಾಡಿದರು.💐
 
ಪ್ರೊ. ಕೆ.ಇ. ರಾಧಾಕೃಷ್ಣರವರು ಕಡಲತೀರದ ಭಾರ್ಗವ ಶಿವರಾಮ ಕಾರಂತ ಎಂಬ ಮಹಾಪ್ರತಿಭೆಯ ಹೆಸರಿನಲ್ಲಿ  ಹಿರಿಯರೆಲ್ಲಾ ವೇದಿಕೆ ಕಟ್ಟಿ ಇವತ್ತಿಗೂ ಚಟುವಟಿಕೆಗಳನ್ನು  ನಡೆಸಿಕೊಂಡು ಬರುತ್ತಿದ್ದು, ಈ ವೇದಿಕೆಯಲ್ಲಿ ಪಾಲ್ಗೊಳ್ಳಲು ಅವಕಾಶ ಸಿಕ್ಕಿದ್ದು ನನ್ನ ಪುಣ್ಯ ಎಂದು ಭಾವಿಸುತ್ತೇನೆ.  ಎನ್ನುತ್ತಾ ಭಾಷಣ ಆರಂಭಿಸಿದರು🙏

ಕನ್ನಡ ನಾಡಿನ ಇತಿಹಾಸ ಬಹಳ ಹಳೆಯದು. ಪಾಣಿನಿ, ಸಂಸ್ಕೃತ ಗ್ರಂಥ, ಮಾರ್ಕಾಂಡ ಪುರಾಣ, ವ್ಯಾಸ ಮಹಾಭಾರತ, ಸಂಸ್ಕೃತದ ಶಾಸನ ಕ್ರಿ.ಶ 768 ಹೀಗೆ  ಕರ್ನಾಟಕ ಪದ ಬಳಕೆಯ ಉಲ್ಲೇಖ ಕಾಣಬಹುದು🌺

ನಮ್ಮ ದೇಶ ಸಿರಿವಂತ ದೇಶ. ಅನೇಕ ಭಾಷೆಗಳಿವೆ. ಒಂದು ಕಾಲದಲ್ಲಿ ಭಾಷೆಗಳು ಗಡಿಗೆ ಸೀಮಿತವಾಗದೆ ಒಂದು ಪ್ರದೇಶದ ಜನಕ್ಕೆ 7-8 ಭಾಷೆಗಳು ಬರುತ್ತಿದ್ದವು. ವಿದ್ವಾಂಸರು ಒಂದು ಕಡೆಯಿಂದ ಮತ್ತೊಂದು ಕಡೆಗೆ ಹೋಗಿ ತಾಳೆಗರಿಗಳ ಅಧ್ಯಯನ ಮಾಡಿ ಬೇರೆ ಭಾಷೆಗೆ ಅನುವಾದ ಮಾಡುತ್ತಿದ್ದರು. ಸ್ವಾತಂತ್ರ್ಯಕ್ಕೆ ಮುಂಚೆಯೇ ರಾಜಕೀಯ ನೆಲೆ ಭಾಷೆಗಳಿಗೆ ಬಂತು. ನಮ್ಮ ದೇಶದಲ್ಲಿ ಅನೇಕ ಸಾಧಕರು, ಯೋಗಿಗಳು, ಅವಧೂತರು, ಪಾದಚಾರಿಗಳಾಗಿ, ಕುದುರೆಗಳ ಮೂಲಕವಾಗಿ  ಊರು ಊರು ಸುತ್ತುತ್ತ ಭಾಷಾ ಬಾಂಧವ್ಯ ಬೆಸೆದಿದ್ದರು🙏

 ಕರ್ನಾಟಕದ ಮಟ್ಟಿಗೆ ಸ್ವಾತಂತ್ರ್ಯ ಪೂರ್ವದಲ್ಲೇ ಒತ್ತು ಬಂತು. ಬೆಳಗಾವಿ ಅಧಿವೇಶನ, ಕಾಂಗ್ರೆಸ್ ಅಧಿವೇಶನ ನಂತರ 'ಕರ್ನಾಟಕ ಏಕೀಕರಣ ಸಮಿತಿ'  ಆಗಿ ಅನೇಕ ನೇತಾರರು ಇದರ ನೇತೃತ್ವ ವಹಿಸಿದ್ದರು.
ಕವಿರಾಜ ಮಾರ್ಗದಲ್ಲಿ "ಕಾವೇರಿ ಯಿಂದ ಗೋಧಾವರಿ ನದಿಯ ನಡುವೆ ಇರುವ ಭೂಪ್ರದೇಶ ಕರ್ನಾಟಕ ಆಗುತ್ತೆ" ಎಂಬ ವಿಷಯ ಉಲ್ಲೇಖವಿದೆ🍁

 " ರಾಷ್ಟ್ರಕೂಟರ ಹೆಜ್ಜೆಯ ಗುರುತು ನೇಪಾಳದವರೆಗೂ ಇತ್ತು.  ಶಂಕರಾಚಾರ್ಯರು ನಿರ್ಮಿಸಿದ ಪಶುಪತಿ ದೇವಸ್ಥಾನ ಇದರ ಅರ್ಚಕರು ಇವತ್ತಿಗೂ ಕನ್ನಡಿಗರು"  ಚಿದಾನಂದ ಮೂರ್ತಿ, ಖ್ಯಾತ ಸಂಶೋಧಕರ ಸಂಶೋಧನೆ. ಜಯರಾಮ್ ರಮೇಶ್ ರವರು "ಕನ್ನಡ ತಮಿಳಿನ ಸಮಕಾಲೀನ" ಅನ್ನುವುದನ್ನು ಸಾಧಿಸಲು ನಡೆಸಿದ ದೊಡ್ಡ ಸಂಶೋಧನೆ. ತ್ಯಾಗರಾಜರು ತೆಲುಗು ಭಾಷಿಕರು, ತಮಿಳು ನಾಡಿನಲ್ಲಿ ನೆಲಸಿ ರಾಮನನ್ನು ಧ್ಯಾನ ಮಾಡುತ್ತ "ಕರ್ನಾಟಕ ಸಂಗೀತದ" ಪಿತಾಮಹ ರಾಗಿದ್ದು  ಮುಂತಾದ ವಿಷಯಗಳ ಬಗ್ಗೆ ವಿವರವಾಗಿ ತಿಳಿಸಿದರು🌸

ಆಗ ಭಾಷಾಂಧತೆ ಇರಲಿಲ್ಲ,ಸ್ವಾತಂತ್ರ್ಯ ದ ಕಾವು ಹೆಚ್ಚಾದ ಹಾಗೆ  ಧಾರವಾಡವನ್ನು ಮದ್ರಾಸ್ ಗೆ ಸೇರಿಸಬೇಕು, ದಕ್ಷಿಣ ಕನ್ನಡ ಮದ್ರಾಸ್ ಗೆ  ಸೇರಿಸುವ ಪ್ರಸ್ತಾಪ  ಸರ್ ಥಾಮಸ್ ಬನ್ರೋ ದಾಗಿತ್ತು. ಮೊದಲ ಸ್ವಾತಂತ್ರ್ಯ ಹೋರಾಟ ಕೊಡಗಿನಲ್ಲಿ ನಡೆದ ಬಗ್ಗೆ, 1920 ರಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ ಭಾಷಾವಾರು ಮಾಡಲು ಸಮಿತಿ ರಚನೆ,   ಅನೇಕ ಸಮಿತಿಗಳು, ಮಿಶ್ರ, ಸೈಮನ್ ಕಮೀಷನ್ ವಿಷಯಗಳ ಬಗ್ಗೆ ಮಾತನಾಡಿದರು. ಆಲೂರು ವೆಂಕಟರಾಯರು ಏಕೀಕರಣಕ್ಕಾಗಿ ವಿಶೇಷವಾಗಿ ದುಡಿದು ಕುಲಪುರೋಹಿತರಾದರು.
ಒಂದು ವೇಳೆ ಮೈಸೂರಿನವರು ನಮ್ಮ ಜೊತೆ ಬರದೇ ಹೋದರೂ "ಕರ್ನಾಟಕ ರಾಜ್ಯ" ಮಾಡುವ ವಿಷಯ ಜೋರಾಯಿತು.  ಕೊ. ಚನ್ನಬಸಪ್ಪನವರು  ಕೆಂಗಲ್ ಹನುಮಂತಯ್ಯನವರು, ಶ್ರೀರಂಗ ಮುಂತಾದ ಅನೇಕರು ಕರ್ನಾಟಕ ಏಕೀಕರಣದ ಹೋರಾಟದ ಚಳುವಳಿಗಳ ಮುಂದಾಳತ್ವ ವಹಿಸಿದ್ದರು✨

ಸಂವಿಧಾನ ಸಭೆಯಲ್ಲಿ ಪ್ರಬಲವಾದ ವಾದಗಳು ಬಂದರೂ ಕೂಡ. ದೇಶ ಆಗ ತಾನೇ ಸ್ವಾತಂತ್ರ್ಯ ಬಂದಿದ್ದು, ವಲ್ಲಭಬಾಯಿ ಪಟೇಲ್, ರಾಜೇಂದ್ರ ಪ್ರಸಾದ್ , ನೆಹರುವರು ಪ್ರಾಂತೀಯ ಭಾಷೆಗಳಿಂದ ದೇಶ ಹೊಡೆಯಬಹುದು ಆತಂಕದಿಂದ ಮುಂದೂಡುವ ಪ್ರಯತ್ನ ಮಾಡಿದರು. ನೆಹರೂವರ ಇರಾದೆ ಇದ್ದುದು ಸ್ವಾತಂತ್ರ್ಯ ಭಾರತ ಅನೇಕ ಸಮಸ್ಯೆಗಳ ನಡುವೆ ಭಾಷಾ ವೈಷಮ್ಯಕ್ಕೆ ಸಿಗಬಾರದು ಎಂಬ ಕಾರಣದಿಂದ ಮುಂದೂಡಿದರು🌷.  

🇪🇸1973 ರಲ್ಲಿ ದೇವರಾಜ ಅರಸರು "ಕರ್ನಾಟಕ" ನಾಮಕರಣ ಮಾಡಿದರು.🇪🇸 
ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಕನ್ನಡಕ್ಕೆ ಹೊರಾಡಿದವರು ಮನೆಯಲ್ಲಿ ಕನ್ನಡ ಮಾತನಾಡುವವರಾಗಿರಲಿಲ್ಲ. 
ಕನ್ನಡ ಶ್ರೀಮಂತಿಕೆ ಹೆಚ್ಚಿಸಲು ಹೋರಾಡಿದವರು ಪ್ರಗತಿ ಶೀಲ ಚಳುವಳಿ ಮೂಲಕ ಅ.ನಾ.ಕೃ, ಕಟ್ಟೀಮನಿ, ದೇವರು ನರಸಿಂಹ ಶಾಸ್ತ್ರಿ, ಮಹಾರಾಮ ಮೂರ್ತಿಯಂತ ಅನೇಕ ಮಹನೀಯರು. ಬೆಂಗಳೂರು ಕೆಂಪೇಗೌಡ ರಸ್ತೆಯಲ್ಲಿ  ಚಿತ್ರಮಂದಿರಗಳಲ್ಲಿ ಕನ್ನಡ ಸಿನಿಮಾಗಳು ಪ್ರದರ್ಶನ ಆಗುತ್ತಿರಲಿಲ್ಲ. ಆಗ ಇದ್ದ ಕನ್ನಡ ಭಾಷೆಯ ತಾತ್ಸಾರದ ಬಗ್ಗೆ ಹೋರಾಟ ಮಾಡಿದವರು ವಾಟಾಳ್ ನಾಗರಾಜ್👍

ಕೋಟೆಯ ರಾಜ್ಯೋತ್ಸವದಲ್ಲಿ ವಿದ್ವಾಂಸಿ ಸುಬ್ಬಲಕ್ಷ್ಮಿ ಸಂಗೀತ ಕಛೇರಿಗೆ ಅಡ್ಡಿಪಡಿಸಿ ಚಳುವಳಿ ಮಾಡಿದ ವಾಟಾಳ್ ನಾಗರಾಜ್,
ಪರಿಣಾಮ ಸುಬ್ಬಲಕ್ಷ್ಮಿ, ಬಾಲಮುರಳಿಕೃಷ್ಣ,ಜೇಸುದಾಸ್ ಮೊದಲಾದವರು ಪುರಂದರದಾಸರು ಹಾಡು ಹಾಡಲು ಶುರು ಮಾಡಿದರು🌹

ಹೊಸೂರು, ಊಟಿ,ಕಾಸರುಗೋಡುಗಳನ್ನು ನಾವು  ಕಳೆದುಕೊಂಡಿದ್ದರ ಬಗ್ಗೆ ವಿವರಿಸಿದರು. 
ಫಾದರ್ ಕಿಟಲ್ ಜರ್ಮನಿಯ ಮತಪ್ರಚಾರಕ, ಕನ್ನಡ ನಿಘಂಟಿನ ಪಿತಾಮಹ. ಪುರಂದರದಾಸರ ಕೃತಿಗಳು, ಅನೇಕ ಗ್ರಂಥಗಳ ಸಂಗ್ರಹಿಸಿ ಮೊದಲ ಬಾರಿಗೆ ಜರ್ಮನಿಗೆ ಹೋಗಿ ಕರ್ನಾಟಕ ಪ್ರಿಂಟ್ ಪ್ರೆಸ್ ಆರಂಭ ಮಾಡಿದರು ಮಾಂಗಲಿನ್. ಕೊಡಗಿಗೆ ಹೋಗಿ ಆದಿವಾಸಿಗಳ ಹಾಡಿಯಲ್ಲಿ ಶಾಲೆ ಆರಂಭಿಸಿದರು. ಇವರು
ಪ್ರಥಮ ಕನ್ನಡ ಪತ್ರಿಕೆ ತಂದರು🍁

ಕುವೆಂಪು, ಮಾಸ್ತಿ, ಬೇಂದ್ರೆ, ಪುತಿನಾ, ಶಿವರಾಮ ಕಾರಂತರ ಇವರುಗಳಿಂದ ಕನ್ನಡಕ್ಕೆ ಒಂದು ಧಾರ್ಮಿಕತೆ ವೇದಾಂತ ಸ್ಪರ್ಶ‍ ವಾಯಿತು. ಅ.ನ .ಕೃ, ತರಾಸು, ವಾಟಾಳ್ ನಾಗರಾಜ್  ಇವರು ಹೋರಾಟ ಪ್ರವೃತ್ತಿ ಕೊಟ್ಟರು. ಕನ್ನಡ ಗೀತೆಗಳು, ಕಾದಂಬರಿಗಳು ಬರತೊಡಗಿದವು. ಕನ್ನಡ ವಾತಾವರಣ ಇಲ್ಲದ ಸಮಯದಲ್ಲಿ ಕನ್ನಡ ಮಾತನಾಡುವುದು ಕೀಳಿರಿಮೆ ಅಂದುಕೊಂಡ ಸಮಯದಲ್ಲಿ ಕುವೆಂಪು "ಕನ್ನಡಕ್ಕಾಗಿ ಕೈ ಎತ್ತು ನಿನ್ನ ಕೈ ಕಲ್ಪವೃಕ್ಷ ವಾಗುವುದು", ರಾಜಾರತ್ನಂ "ನಾಲಿಗೆ ಸೀಳಿದ್ರೂ ಮೂಗ್ನಲ್ಲಿ ಕನಡ ಮಾತಾಡುವೆ" ಎಂದರು. ಸ್ವಾತಂತ್ರ್ಯ ಬಂದ 2-3 ದಶಕಗಳಲ್ಲಿ ಕನ್ನಡ ಅತ್ಯಂತ ಶ್ರೀಮಂತವಾಯಿತು. ಬಂಡಾಯ ಸಾಹಿತ್ಯ, ದಲಿತ ಚಳುವಳಿಗಳು ಅನೇಕ ಸೃಜನಶೀಲ ಸಾಹಿತ್ಯ ಸೃಷ್ಟಿಸಿ ಹೊಸ ಹೊಸ ಆಯಾಮ ನೀಡಿತು. ಕೈಲಾಸಂ ಇಂಗ್ಲೀಷ್ ನ್ನು ಕನ್ನಡಮಯ
 ಮಾಡಿದರು. ಇವರು ರಚಿಸಿದ ನಾಟಕಗಳು, ಗುಬ್ಬಿ ವೀರಣ್ಣ ಕಂಪನಿ, ಫೀರ್ ಸಾಹೇಬ್, ಚಿಂದೋಡಿ ಲೀಲಾ ಇವರುಗಳ ಮರಾಠಿ ತೀವ್ರತೆ ಇದ್ದ ಕಾಲದಲ್ಲಿ ದಿನನಿತ್ಯದ ನಾಟಕ ಪ್ರದರ್ಶನಗಳು ಕನ್ನಡಕ್ಕೆ ಪುಷ್ಟಿ ನೀಡಿತು.

ಸಾಹಿತ್ಯ ಸಮ್ಮೇಳನ ಗಳು, ಪ್ರಿಂಟ್ ಮೀಡಿಯಾ ಮೂಲಕ ಕನ್ನಡ, ಶಾಸ್ತ್ರೀಯ ಗ್ರಂಥಗಳು, ಯಕ್ಷಗಾನ ಗಳ ಮೂಲಕ ಕನ್ನಡ. ರನ್ನ, ಜನ್ನ, ಚಾಮರಸ , ವಚನ ಸಾಹಿತ್ಯ... ಹಿಡಿದು ಕ್ರೈಸ್ತರು ಮತಬೋಧನೆಗೆ ಕನ್ನಡ, ದಲಿತ ಸಾಹಿತ್ಯ ಸೃಷ್ಟಿ, ಹೊರದೇಶದಲ್ಲಿರುವ ಕನ್ನಡಿಗರಿಂದ ಸಮ್ಮೇಳನ, ಭಾಷಾಭಿಮಾನದ ಸಂಘಗಳು, ಅಚ್ಚಾಗುತ್ತಿರುವ, ಮಾರಾಟ ವಾಗುತ್ತಿರುವ ಪುಸ್ತಕಗಳು ನೋಡಿದರೆ ಕನ್ನಡ ಎತ್ತರದ ಸ್ಥಾನದಲ್ಲಿದೆ "ಕೊರೋನಾ ಕಾಲದಲ್ಲಿ ಅನೇಕರು ಆನ್ ಲೈನ್ ಮುಲಕ ಖರೀದಿಸಿರುವುದು "ಕನ್ನಡ ಧಮಧಮನಿಗಳಲ್ಲಿ ಹರಿಯುವ ಜೀವದ್ರವ" ಕ್ಕೆ ಸಾಕ್ಷಿ💐

ನಮ್ಮ ಆಹಾರ ಪದ್ಧತಿಗಳು, ಭೌಗೋಳಿಕತೆ ಕನ್ನಡವನ್ನು ಒಟ್ಟಿಗೆ ನಿಲ್ಲಿಸುವುದು. ಕುವೆಂಪು, ಮಾಸ್ತಿಯವರ ಕನ್ನಡ ನಾಡನ್ನು ದೇಶ ಎಂದಿದ್ದಾರೆ. ರಾಷ್ಟ್ರ ಬೇರೆ ದೇಶ ಬೇರೆ ಎಂಬ ಅಭಿಮಾನದ ಮಾತುಗಳು ಈ ಬೆಳವಣಿಗೆಗಳಿಂದ  ಕನ್ನಡ ಖಂಡಿತ ಅಳಿಯುವ ಭಾಷೆ ಆಗುವುದಿಲ್ಲ. ಅಲ್ಲಲ್ಲಿ ಇಂಗ್ಲಿಷ್ ಪದಗಳು ಬಂದರೂ ಭಾಷೆಯ ಮಡಿವಂತಿಕೆ ಬಿಟ್ಟು, ಕಾಲಕಾಲಕ್ಕೆ ತಕ್ಕಂತೆ ಬೆಳೆಯುತ್ತದೆ.🌸

ಕೊನೆಯದಾಗಿ.....
ಅಡಿಗರ ಮಾತು " ಹೆತ್ತ ತಾಯಿ ಮತ್ತೆ ಹೊತ್ತ ತಾಯಿ ನೆಲ ಎರಡೂ ಸ್ವರ್ಗ ಸುಖಕ್ಕಿಂತಲೂ ಹಿರಿದೆಂದರು"🙏🌹🌷
▪️▪️▪️▪️▪️
ವೇದಿಕೆಯ ಪರವಾಗಿ ಶ್ರೀಮತಿ ಶಶಿಕಲಾ ಅವರಿಂದ  ಧನ್ಯವಾದಗಳೊಂದಿಗೆ ಅಂದಿನ  ಕಾರ್ಯಕ್ರಮ ಮುಕ್ತಾಯವಾಯಿತು

ನಮ್ಮ ಶಿವರಾಮ ಕಾರಂತ ವೇದಿಕೆಯು "ಕನ್ನಡ ರಾಜ್ಯೋತ್ಸವ"ವನ್ನು ಅರ್ಥ ಪೂರ್ಣ ವಾಗಿ ಸಾಹಿತಿಗಳ ಹೃದಯದಲ್ಲಿ ತುಂಬಿ ತುಳುಕುತ್ತಿದ್ದ ಜ್ಞಾನಭಂಡಾರವನ್ನು ಕನ್ನಡದ ಕಂಠದಲ್ಲಿ,  ಕನ್ನಡತಾಯಿಯ ಪರಿಪೂರ್ಣ ವಿಷಯ ಮಂಥನಕ್ಕೆ ಅವಕಾಶ ಕೊಟ್ಟು,  ಸಾಹಿತ್ಯ ವೇದಿಕೆ ವಿಶೇಷವಾಗಿ  ಆಚರಿಸಿದ್ದು ಹೆಮ್ಮೆಯ ವಿಷಯ.

ಆನ್ ಲೈನ್ ಸಭೆಯ ಉಸ್ತುವಾರಿ ಶ್ರೀ ಜಯರಾಮ ಸೋಮಯಾಜಿ ಇವರಿಗೆ ವಿಶೇಷ ಅಭಿನಂದನೆಗಳು🙏
----- ಶಶಿಕಲಾ ಆರ್

ಬರೆದಿರುವುದು 10/11/2020 

No comments:

Post a Comment