ನವಂಬರ 9, 2020
ಕಣ್ಣು ----- ಕೆಂಗಣ್ಣು ------- ಕರುಣೆಯ ಕಣ್ಣು
ಕೆನ್ನೆ ------ ಕೆನ್ನೆಗೆ ಬಾರಿಸೋದು ----- ಕೆನ್ನೆ ಸವರಿ ಪ್ರೀತಿಯಿಂದ ಮಾತನಾಡೋದು
ಮೂಗು---- ಇನ್ನೊಬ್ಬರ ವಿಚಾರದಲ್ಲಿ ಮೂಗು ತೋರಿಸೋದು--- ಮೂಗಿಗೊಂದು ಮೂಗುತಿ
ಕಾಲು---- ಒದೆತ ----- ಕುಣಿತ
ಆಚಾರ ------ ಅನಾಚಾರ ------- ಸದಾಚಾರ
ಆಸೆ ------ ದುರಾಸೆ ------ ಸದಾಶಯ
ನಮಗಾಗಿ ದುಡಿಯೊದು-- ಇತರರಿಂದ ದುಡಿಸಿಕೊಳ್ಳೋದು--ಇತರರಿಗಾಗಿ ದುಡಿಯೋದು
ದುಡಿದು ತಿನ್ನೋದು-- ದುಡಿಸಿ ತಿನ್ನೋದು-- ತಾನು ದುಡಿದು ಇನ್ನೊಬ್ಬರಿಗ ತಿನಿಸೋದು
ಹಸಿವಾದಾಗ ಊಟ ಮಾಡೋದು- ಹಸಿವಾಗದಿದ್ದರೂ ಊಟ ಮಾಡೋದು- ಹಸಿದವನಿಗೆ ಉಣಿಸೋದು
ಭಯ --- ಭಯೋತ್ಪಾದನೆ----- ದಯೋತ್ಪಾದನೆ
ಹಾಸ್ಯ ----- ಅಪಹಾಸ್ಯ ------ ತಿಳಿಹಾಸ್ಯ
ಜ್ಯೋತಿ ----- ಜ್ವಾಲೆ ------- ನಂದಾದೀಪ
ನೀರು------ ನೆರೆ =---------- ನೀರಿನ ನಾಲೆ
ತಲೆಯೊಳಗಿನ ಬುದ್ದಿ----- ಅದು ಕೆಟ್ಟದ್ದಾಗಿದ್ದರೆ----- ಅದು ನೆಟ್ಟಗಿದ್ದರೆ
ಮುಖ---- ಸಿಡುಕುಮುಖ----- ನಗುಮುಖ ಸಂಸ್ಕೃತಿ😊
No comments:
Post a Comment