ಓಂ ಶ್ರೀ ಗುರುಭ್ಯೋ ನಮಃ ಹನ್ನೆರಡು ಆಧ್ಯಾತ್ಮಿಕ ನಿಯಮಗಳು
1. ಬೃಹತ ನಿಯಮ
ನಾವು ಪ್ರಪಂಚಕ್ಕೆ ಏನನ್ನು ಕೊಡುತ್ತೇವೆಯೋ ಅದೇ ನಮಗೆ ಹಿಂತಿರುಗಿ ಬರುತ್ತದೆ. ನಾವು ಬೇರೆಯವರಿಗೆ ಒಳ್ಳೆಯದನ್ನು ಮಾಡಿದರೆ ನಮಗೂ ಒಳ್ಳೆಯದೇ ಆಗುತ್ತದೆ, ಕೆಟ್ಟದ್ದನ್ನು ಮಾಡಿದರೆ ಕೆಟ್ಟದ್ದೇ ಆಗುತ್ತದೆ.
2. ಸೃಷ್ಟಿಯ ನಿಯಮ
ಜಗತ್ತಿನಲ್ಲಿ ತಾನಾಗಿ ತಾನೇ ಯಶಸ್ಸು ಸಿಗುವುದಿಲ್ಲ ಅಥವಾ ಬರುವುದಿಲ್ಲ, ಪ್ರತಿಯೊಂದು ಯಶಸ್ಸು ನಮ್ಮ ಪರಿಶ್ರಮದಿಂದಲೇ ಸಿಗುವುದು.
3. ನಮ್ರತೆಯ ನಿಯಮ
ಮೊದಲು ನಾವು ನಮ್ಮ ತಪ್ಪನ್ನು ತಿದ್ದಿಕೊಂಡರೆ ಮಾತ್ರ ಪರಿವರ್ತನೆಯಾಗಲು ಸಾಧ್ಯ.
4. ಅಭಿವೃದ್ಧಿಯ ನಿಯಮ
ನಮ್ಮನ್ನು ನಾವು ಬದಲಾಯಿಸಿಕೊಂಡರೆ ಮಾತ್ರ ನಮ್ಮ ಜೀವನವು ಅಭಿವೃದ್ಧಿಯೆಡೆಗೆ ಸಾಗುತ್ತದೆ. ಶ್ರಮ ಪಟ್ಟು ಕೆಲಸ ಮಾಡಬೇಕು, ಸೋಮಾರಿಗಳಾಗಬಾರದು.
5. ಜವಾಬ್ದಾರಿಯ ನಿಯಮ
ನಮ್ಮ ಜೀವನಕ್ಕೆ ನಾವೇ ಹೊಣೆ, ಬೇರೆಯವರನ್ನು ದೂಷಿಸುವುದು ಸರಿಯಲ್ಲ.
6. ಸಂಪರ್ಕ ನಿಯಮ
ನಮ್ಮ ಜೀವನದ ಭೂತ, ವರ್ತಮಾನ ಮತ್ತು ಭವಿಷ್ಯ ಎಲ್ಲವೂ ಸದಾ ಸಂಪರ್ಕದಲ್ಲಿರುತ್ತದೆ. ನಮ್ಮ ನಿನ್ನೆಯ ಕರ್ಮಗಳು ಇಂದು, ಮತ್ತು ಇಂದಿನ ಕರ್ಮಗಳು ನಾಳೆ ಅನುಭವಿಸುತ್ತಿರುತ್ತೇವೆ.
7. ಗಮನದ ನಿಯಮ
ನಾವು ಎರಡೆರೆಡು ಕೆಲಸಗಳ ಮೇಲೆ ಗಮನ ವಹಿಸುವುದು ವ್ಯರ್ಥ. ಮಾಡುವ ಒಂದು ಕೆಲಸ ಅಥವಾ ಕಾರ್ಯದಲ್ಲಿ ಗಮನವಿರಲಿ.
8. ಅತಿಥ್ಯದ ನಿಯಮ
ನಮ್ಮ ನೆಡವಳಿಕೆ, ನಮ್ಮ ಆಚಾರ, ವಿಚಾರ ಹಾಗೂ ಚಿಂತನೆಗೆ ಕನ್ನಡಿ ಇದ್ದಂತೆ.
9. ಇಂದು ಮತ್ತು ಈಗಿನ ನಿಯಮ
ವರ್ತಮಾನದ ಬಗ್ಗೆ ಹೆಚ್ಚು ಗಮನವಿರಬೇಕು ಭೂತ -ಭವಿಷ್ಯದ ಬಗ್ಗೆ ಅಲ್ಲ.
10. ಪರಿವರ್ತನೆಯ ನಿಯಮ
ಹಿಂದಿನ ಕರ್ಮಗಳು ಮತ್ತೆ ಮತ್ತೆ ಮರುಕಳಿಸುತ್ತದೆ. ನಾವು ಪರಿವರ್ತನೆಯಾಗಲು ಪ್ರಯತ್ನಿಸಿದರೆ ಮಾತ್ರ ಪರಿವರ್ತನೆ ಸಾಧ್ಯ.
11. ತಾಳ್ಮೆಯ ನಿಯಮ
ತಾಳ್ಮೆ, ಸಹನೆ ಮತ್ತು ಛಲದಿಂದ ಏನನ್ನು ಬೇಕಾದರೂ ಸಾಧಿಸಬಹುದು. ಇವು ಜೀವನದಲ್ಲಿ ಬಹಳ ಮುಖ್ಯ.
12. ಯಶಸ್ಸಿನ ನಿಯಮ
ಯಶಸ್ಸು ನಾವು ಹಾಕುವ ಪರಿಶ್ರಮದಷ್ಟೇ ದೊಡ್ಡದಾಗಿ ಕಾಣುತ್ತದೆ. ನಾವು ಜೀವನದಲ್ಲಿ ಯಶಸ್ಸನ್ನು ಒಮ್ಮೆ ಗಳಿಸಲು ಪ್ರಾರಂಭಿಸಿದರೆ ನಮ್ಮ ಪರಿಶ್ರಮ ಲೆಕ್ಕಕ್ಕೆ ಬರುವುದಿಲ್ಲ. ಆ ಯಶಸ್ಸಿನ ಖುಷಿಯ ಮುಂದೆ ಎಲ್ಲಾ ಪರಿಶ್ರಮವೂ, ಅದರ ನೋವು, ನಾವು ಪಟ್ಟ ಕಷ್ಟ ಎಲ್ಲವೂ ಮರೆತು ಹೋಗುತ್ತದೆ.
ಶ್ರೀ ಕೃಷ್ಣಾರ್ಪಣ ಮಸ್ತು
No comments:
Post a Comment