Sunday, June 13, 2021

ತಲ್ಲಣ - ಕನ್ನಡ ಸಿನೆಮಾ

ಜೂನ್ 10, 2021 

 ತಲ್ಲಣ - ಕನ್ನಡ ಸಿನೆಮಾ 

"ತಲ್ಲಣ" ಕನ್ನಡ ಸಿನೇಮ ಮೊನ್ನೆಯಷ್ಟೇ ಅಮೆಜೋನ್ ಪ್ರೈಮ್ ನಲ್ಲಿ ನೋಡಿದೆವು. ಅತ್ಯಂತ ಮನೋಜ್ನವಾದ, ಮನಮುಟ್ಟುವ ಸನ್ನಿವೇಶಗಳು ಮನಕಲುಕುವಂತಿದೆ. ಸಾಮಾಜಿಕ ಸಮಸ್ಯೆಗಳು, ಪೋಲೀಸರ ನಡೆ, ಕಳ್ಳ ಭವಿಷ್ಯ ಹೇಳುವವರ ರೀತಿನೀತಿ ಸಾಮಾನ್ಯ ಜನರನ್ನು ಹೇಗೆ ಹತಾಶೆಯ ಅಂಚಿಗೆ ನೂಕುತ್ತದೆ ಎಂಬುದನ್ನು ಚೆನ್ನಾಗಿ ತೋರಿಸಲಾಗಿದೆ. ಮನೆಕೆಲಸ ಮಾಡುವ ಜಯಮ್ಮಳ ಕಥೆ, ಕಾಣೆಯಾದ ಅವಳ ಮಗಳ ಹುಡುಕಾಟ, ಹೃದಯಸ್ಪರ್ಶಿ ಯಾಗಿದೆ. ಅಭಿನಂದನೆಗಳು.

ಒಬ್ಬ ಸಭ್ಯ ಗೃಹಸ್ತರ ಮನೆಯಲ್ಲಿ ಕೆಲಸದಾಕೆ ಜಯಮ್ಮ. ಅವಳಿಗೆ ಹತ್ತು ವರ್ಷದ ಶಾಲೆಗೆ ಹೋಗುವ ಮಗಳು. ಗಂಡ ವೇಷ್ಟ್ ಬಾಡಿ, ಕುಡುಕ. ಜಯಮ್ಮ ಕಷ್ಟ ಪಟ್ಟು ಮನೆ ಕೆಲಸ ಮಾಡಿ, .ಒಂದು ಚಿಕ್ಕ ಮನೆಯಲ್ಲಿದ್ದು ಸಂಸಾರ ನಡೆಸುವವಳು.

ಒಂದು ದಿನ ಮಗಳು ಶಾಲೆಗೆ ಹೋದವಳು ಮನೆಗೆ ಬರಲೇ ಇಲ್ಲ. ಜಯಮ್ಮನ ಕಷ್ಟ ಪ್ರಾರಂಬಿಸಿತು. ಸಭ್ಯ ಗೃಹಸ್ತರು ಸಹಾಯ ಹಸ್ತ ಚಾಚಿದರು. ಪೋಲಿಸ್ ಸ್ಟೇಶನ್ ನಲ್ಲಿ ದೂರು ಕೊಡಲು ಪ್ರಯತ್ನಿಸಿದರು. ಅಲ್ಲಿಯ ಅವರ ಅಸಡ್ಡೆ, ನಡೆ, ಅವಮಾನದ ಮಾತುಗಳು ನಮ್ಮ ಸಮಾಜದ ಮೇಲೆ ಬೆಳಕು ಚೆಲ್ಲುವಂಥದ್ದು. ನಂತರ ಬೇರೆ ಬೇರೆ ಸ್ಥಳಗಳಲ್ಲಿ ಹುಡುಕಾಟ, ಜ್ಯೋತಿಷಿಗಳಿಗೆ ಮೊರೆ, ಕಳ್ಳ ಸನ್ಯಾಸಿಗಳಿಂದ ಸುಳ್ಳು ಭರವಸೆ, ಇತ್ಯಾದಿ ಬಹಳ ಚೆನ್ನಾಗಿ ನಿರೂಪಿಸಿ ನೋಡುಗರನ್ನು ಸೆರೆ ಹಿಡಿಯುತ್ತವೆ.

ಸಿನೆಮಾದಲ್ಲಿಯ ಸನ್ನಿವೇಶ, ಪಾತ್ರಗಳ ಅಭಿನಯ, ನಿರ್ದೇಶನ, ಸಂಗೀತ ಎಲ್ಲವೂ ಚೆನ್ನಾಗಿ ಮೂಡಿ ಬಂದಿದೆ.

ಕನ್ನಡದಲ್ಲಿ ಒಳ್ಳೆಯ ಸಿನೆಮಾಗಳು ಬರುತ್ತವೆ ಎನ್ನುವುದಕ್ಕೆ "ತಲ್ಲಣ" ಎಂಬುವುದು ನಿದರ್ಶನ.

ಸಿನೆಮಾ ತಂದದವರಿಗೆಲ್ಲ ಅಭಿನಂದನೆಗಳು.

ಬರೆದಿರುವುದು ಸೋಮವಾರ, 14 ಜೂನ್ 2021

No comments:

Post a Comment