ಊರ್ವಿ - ನಾಮಕರಣ, ತೊಟ್ಟಿಲು ಶಾಸ್ತ್ರ
ಭಾನುವಾರ, ಜುಲೈ 11, 2021
ಶ್ರೀ ರಾಘವೇಂದ್ರ ಮಠ, ಪೂರ್ಣಪ್ರಜ್ಞ ನಗರ, ಉತ್ತರಹಳ್ಳಿ, ಬೆಂಗಳೂರು.
ಮಗುವಿಗೆ ಹೆಸರು ಇಡುವ ಸಮಾರಂಭಕ್ಕೆ ನಾಮಕರಣ (Naming Ceremony) ಮತ್ತು ಮಗುವನ್ನು ತೊಟ್ಟಿಲಿಗೆ (Cradle ) ಹಾಕುವ ಕಾರ್ಯಕ್ರಮಕ್ಕೆ ತೊಟ್ಟಿಲು ಶಾಸ್ತ್ರ ಎಂದು ಕರೆಯಲಾಗುತ್ತದೆ.
ಮಗ ಸೊಸೆ, ರವಿ ವಿದ್ಯಾರಿಗೆ ಶುಕ್ರವಾರ ತಾರೀಕು 16 ಏಪ್ರಿಲ್ 2021 ರಂದು ಇಂದಿರಾನಗರದ ಮದರ್ಹುದ್ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿನ ಜನನವಾಯಿತು.
ವಿದ್ಯಾಳ ತಂದೆ ಶ್ರೀ ಶ್ರೀಧರ್ ಬಿದರಹಳ್ಳಿಯವರು ಮಗುವಿನ ನಾಮಕರಣ ಸಮಾರಂಭವನ್ನು ಉತ್ತರಹಳ್ಳಿಯ ಶ್ರೀ ರಾಘವೇಂದ್ರ ಸ್ವಾಮಿಯ ಮಠದಲ್ಲಿ ಜುಲೈ 11 ರಂದು ಮಾಡಬೇಕೆಂದು ಸಂಕಲ್ಪ ಮಾಡಿದ್ದರು.
ಸುಂದರವಾದ ಮಠದ ಆವರಣ, ಒಂದನೇ ಮಾಳಿಗೆಯಲ್ಲಿ ಕಾರ್ಯಕ್ರಮವನ್ನು ನಡೆಸಲಾಗಿತ್ತು. ದೀಪ ಹಚ್ಚಿ ಸಮಾರಂಭವನ್ನು ಪ್ರಾರಂಬಿಸಿ, ಎರಡನೇ ಮಾಳಿಗೆಯಲ್ಲಿ ಉಪಹಾರವನ್ನು (ಇಡ್ಲಿ, ಉಪ್ಪಿಟ್ಟು, ಹಲ್ವ) ಏರ್ಪಡಿಸಲಾಗಿತ್ತು.
ಅದೊಂದು ಸುಂದರವಾದ ಸಮಾರಂಭ. ಬಂಧು ಬಳಗದವರು, ಆತ್ಮೀಯರು ಸೇರಿ ಯೋಗಕ್ಷೇಮವನ್ನು ವಿಚಾರಿಸಿ, ಭೇಟಿಯಾಗುವ ಅವಕಾಶ.
ಊಟಕ್ಕೆ ಮುಂಚೆ ಒಂದು 40 ನಿಮಿಷಗಳ ಕಾಲ ಮನರಂಜನೆಗೆ ಸಂಗೀತ ಕಾರ್ಯಕ್ರಮವನ್ನು ಪ್ರಸ್ತುತ ಪಡಿಸಲಾಗಿತ್ತು. ಅದು ವೀಣೆಯಲ್ಲಿ ಕುಮಾರಿ ಲಹರಿ ಭಟ್ ಮತ್ತು ಪಿಟಿಲಿನಲ್ಲಿ (ವಯಲಿನ್)ರವಿಕಾಂತ ಸೋಮಯಾಜಿ. ಅವರೂ ಕೆಲವು ರಾಗಗಳನ್ನು ನುಡಿಸಿ ಎಲ್ಲರನ್ನೂ ಸಂತಸ ಪಡಿಸಿದರು.
ಕಾರ್ಯಕ್ರಮದ ನಂತರ ಭರ್ಜರಿ ಭೋಜನದ ವ್ಯವಸ್ತೆಯನ್ನು ಎರಡನೇ ಮಾಳಿಗೆಯಲ್ಲಿ ಏರ್ಪಡಿಸಲಾಗಿತ್ತು.
ಬರೆದಿರುವುದು ಮಂಗಳವಾರ, 13 ಜುಲೈ, 2021
ನೀವು ಚೆನ್ನಾಗಿ ಬರೆದಿದ್ದೀರಿ
ReplyDeleteಮ್ಯೂಸಿಕ್ ಪ್ರೋಗ್ರಾಮ್ ಮಿಸ್ ಮಾಡಿದಿರಿ 😛
ಧನ್ಯವಾದಗಳು. ಸಂಗೀತ ಕಾರ್ಯಕ್ರಮ ಈಗಲೇ ಸೇರಿಸುತ್ತೇನೆ.
Delete😀 👍 👌
Delete