ಜಪ ತಪ ಧ್ಯಾನವೆಂದರೆ ಏನು ಹೇಗೆ !!
ನಿದ್ರೆ ಅಜಾಗೃತ ಧ್ಯಾನ. ಧ್ಯಾನ ಜಾಗೃತ ನಿದ್ರೆ .
ನಿದ್ರೆ ಯಲ್ಲಿ ಪರಿಮಿತ ಶಕ್ತಿಯನ್ನು ಪಡೆಯುತ್ತೇವೆ.
ಧ್ಯಾನದಲ್ಲಿ ಅಪರಿಮಿತ ಶಕ್ತಿಯನ್ನು ಪಡೆಯುತ್ತೇವೆ.
ಈ ಶಕ್ತಿ ನಮ್ಮ ಶಾರೀರಿಕ, ಮಾನಸಿಕ, ಭೌದ್ಧಿಕ, ಆಧ್ಯಾತ್ಮಿಕ ಶಕ್ತಿಗಳನ್ನು ವೃದ್ಧಿಗೊಳಿಸುತ್ತದೆ.
ಇದು ಅತೀಂದ್ರಿಯ ಶಕ್ತಿಯನ್ನೂ ವೃದ್ಧಿಗೊಳಿಸುತ್ತದೆ.
ಧ್ಯಾನದಲ್ಲಿ ಪಡೆಯುವ ಶಕ್ತಿಯಿಂದ ಶಾರೀರಿಕ ಆರೋಗ್ಯ, ಮಾನಸಿಕ ಪ್ರಶಾಂತತೆ, ಉನ್ನತವಾದ ವಿಚಕ್ಷಣ ಜ್ಞಾನವನ್ನು ಪಡೆಯುತ್ತೇವೆ.
ಮಹತ್ತರ ವಿಶ್ವಶಕ್ತಿ ಪಡೆಯುವ ಏಕೈಕ ಮಾರ್ಗ ಧ್ಯಾನ.
ಧ್ಯಾನವೆಂದರೆ ಮತ್ತೇನು ಅಲ್ಲ.
ಪ್ರಜ್ಞಾಪೂರ್ವಕವಾಗಿ ನಮ್ಮೊಳಗೆ ನಾವು ಮಾಡುವ ಪ್ರಯಾಣವೇ ಧ್ಯಾನ.
Meditation
ಧ್ಯಾನದಲ್ಲಿ ನಮ್ಮ ಚೈತನ್ಯ
ದೇಹದಿಂದ ಮನಸ್ಸು, ಮನಸ್ಸಿನಿಂದ ಬುದ್ಧಿ, ಬುದ್ಧಿಯಿಂದ ಆತ್ಮದೆಡೆ ಪ್ರಜ್ಞಾಪೂರ್ವಕವಾಗಿ ಪ್ರಯಾಣ ಮಾಡುತ್ತದೆ.
ಧ್ಯಾನ ಮಾಡಲು ಮೊದಲು ನಾವು ಎಲ್ಲಾ ಶಾರೀರಿಕ, ಮಾನಸಿಕ ಕೆಲಸಗಳನ್ನು ನಿಲ್ಲಿಸಬೇಕು.
ಅಂದರೆ, ದೇಹದ ಅಲುಗಾಟಗಳು, ನೋಡುವುದು, ಮಾತಾಡುವುದು ಹಾಗೂ ಆಲೋಚನೆಗಳನ್ನು ನಿಲ್ಲಿಸಬೇಕು.
ಈಗ ಧ್ಯಾನ ಹೇಗೆ ಮಾಡಬೇಕು ಎಂಬುದನ್ನು ತಿಳಿಯೋಣ.
ಧ್ಯಾನ
ಧ್ಯಾನಕ್ಕೆ ಪ್ರಮುಖವಾದುದ್ದು 'ಆಸನ'
ಸ್ಥಿರವಾದ, ಸುಖವಾದ ಯಾವುದಾದರು ಆಸನವನ್ನು ಆಯ್ಕೆಮಾಡಿಕೊಳ್ಳಬೇಕು.
ನೆಲದಮೇಲಾದರೂ, ಕುರ್ಚಿಯಮೇಲಾದರೂ ಕುಳಿತು ಧ್ಯಾನಮಾಡಬಹುದು.
ಧ್ಯಾನ ಯಾವ ಸಮಯದಲ್ಲಾದರೂ ಮಾಡಬಹುದು.
ಮುಖ್ಯವಾಗಿ ಅನುಕೂಲಕರ ಸ್ಥಳ, ಸಮಯವಿರಬೇಕು. ಹಾಯಾಗಿ ಕುಳಿತುಕೊಳ್ಳಿ.
ಕಾಲುಗಳನ್ನು ಒಂದರೊಡನೆ ಒಂದು ಸೇರಿಸಿ. ಎರಡೂ ಕೈ ಬೇರಳುಗಳನ್ನು ಒಂದರೊಡನೆ ಒಂದು ಸೇರಿಸಿ.
ನಿಧನವಾಗಿ ಕಣ್ಣುಗಳನ್ನು ಮುಚ್ಚಿ. ಆರಾಮವಾಗಿ, ಸುಖವಾಗಿ ಕುಳಿತುಕೊಳ್ಳಿ.
ಕಾಲುಗಳನ್ನು ಒಂದರೊಡನೆ ಒಂದು ಸೇರಿಸಿ.
ಎರಡೂ ಕೈಬೆರಳುಗಳನ್ನು ಒಂದರೊಡನೆ ಒಂದು ಸೇರಿಸಿ ಕುಳಿತಾಗ
ನಮ್ಮೊಳಗೆ ಹಾಗೂ ನಮ್ಮ ಸುತ್ತಲೂ ಒಂದು 'ಶಕ್ತಿ ವಲಯ' ಏರ್ಪಾಡಾಗುತ್ತದೆ,
ಇದು ನಮ್ಮ ಆಸನ ಸ್ಥಿತಿಗೆ ಸ್ಥಿರತೆ ತರುತ್ತದೆ. ಕಣ್ಣುಗಳು ಮನೋದ್ವಾರಗಳು.
ಹಾಗಾಗಿ, ಕಣ್ಣುಗಳನ್ನು ಮುಚ್ಚಬೇಕು.
ಮಂತ್ರೋಚ್ಛಾರಣೆಯಾಗಲೀ ಇತರೇ ಯಾವುದೇ ಶಬ್ಧ ಉಚ್ಛರಿಸುವುದು ಮನಸ್ಸು ಮಾಡುವ ಕೇಲಸ.
ಹಾಗಾಗಿ, ಅದನ್ನು ಸಂಪೂರ್ಣವಾಗಿ ನಿಲ್ಲಿಸಬೇಕು. ಯಾವಾಗ ಶರೀರ ಸಂಪೂರ್ಣವಾಗಿ ಸ್ಥಿರವಾಗುತ್ತದೆಯೋ,
ಆವಾಗ ಚೈತನ್ಯವು ಶರೀರದಿಂದ ಮನಸ್ಸು, ಬುದ್ಧಿಯಕದೆ ಪ್ರಯಾಣಿಸುತ್ತದೆ.
ಮನಸ್ಸು ಮತ್ತೇನು ಅಲ್ಲ, ಆಲೋಚನೆಗಳ ಹುತ್ತ.
ಅನುಕ್ಷಣವು ಎಷ್ಟೋ ಆಲೋಚನೇಗಳು ಉದ್ಭವವಾಗುತ್ತಲ್ಲೇ ಇರುತ್ತದೆ.
ಇದರ ಹಿಂದೆ ಎಷ್ಟೋ ಪ್ರಶ್ನೆಗಳು- ಗೊತ್ತಿರುವ ಹಾಗೂ ಗೊತ್ತಿರದ.
ಚೈತನ್ಯವು ಮನೋಬುದ್ಧಿಯಿಂದ ಆತ್ಮದೆಡೆ ಹೋಗಲು ನಾವು ಮಾಡಬೇಕಾಗಿರುವುದು ನಮ್ಮ ಸಹಜ ಉಸಿರಾಟದ ಗತಿಯನ್ನು ಗಮನಿಸುತ್ತಾ ಇರಬೇಕು.
ಪ್ರಯತ್ನಪೂರ್ವಕವಾಗಿ ಶ್ವಾಸಪ್ರಕ್ರಿಯೆಯನ್ನು ಮಾಡಬಾರದು. ಶ್ವಾಸಕ್ರಿಯೆ ಅದರಷ್ಟಕ್ಕೆ ಅದೇ ಜರುಗುತ್ತಿರಬೇಕು.
ಸಹಜವಾಗಿ, ಸಾಕ್ಷೀಭೂತವಾಗಿ ಶ್ವಾಸಪ್ರಕ್ರಿಯೆಯನ್ನು ಗಮನಿಸುತ್ತಾ ಇರಬೇಕು.
ಇದೇ ಧ್ಯಾನಕ್ಕೆ ಮೂಲ. ಇದೇ ಧ್ಯಾನಕ್ಕೆ ಮಾರ್ಗ. ಆಲೋಚನೆಗಳ ಹಿಂದೆ ಹೋಗಬಾರದು.
ಪ್ರಶ್ನೆಗಳಿಗೆ ಸಿಕ್ಕಿಹಾಕಕೊಳ್ಳಬಾರದು. ಪ್ರಶ್ನೆಗಳೊಳಗೆ ಮುಳುಗಬಾರದು.
ಆಲೋಚನೆಗಳನ್ನು ನಿಲ್ಲಿಸಿ, ಗಮನವನ್ನು ಶ್ವಾಸದಕಡೆ ಕೊಂಡೊಯ್ಯಬೇಕು.
ಸಹಜವಾದ ಶ್ವಾಸವನ್ನು ಗಮನಿಸುತ್ತಾ ಇರಬೇಕು. ಪೂರ್ತಿಯಾಗಿ ಶ್ವಾಸದೊಡನೆಯೇ ಇರಬೇಕು.
ಆಗ ಆಲೋಚನೆಗಳ ಸಾಂದ್ರತೆ ಕದಿಮೆಯಾಗಲು ಶುರುವಾಗುತ್ತದೆ. ಕ್ರಮವಾಗಿ ಶ್ವಾಸವು ಚಿಕ್ಕದಾಗುತ್ತಾ
ಕೊನೆಗೆ ನಮ್ಮ ಎರಡೂ ಕಣ್ಣಿನ ಭ್ರೂಮಧ್ಯ ಭಾಗದ ನಾಸಿಕಾಗ್ರದಲ್ಲಿ ಚಿಕ್ಕ ಬೆಳಕಾಗಿ ಸೇರಿಬಿಡುತ್ತದೆ.
ಈ ಸ್ಥಿತಿಯಲ್ಲಿ ಆಲೋಚನೇಗಳು ಇರುವುದಿಲ್ಲ. ಶ್ವಾಸ ಕೂಡ ಇರುವುದಿಲ್ಲ.
ಇದೇ ಆಲೋಚನಾರಹಿತ ಸ್ಥಿತಿ. ಇದೇ ನಿರ್ಮಲ ಸ್ಥಿತಿ.ಇದೇ ಧ್ಯಾನ ಸ್ಥಿತಿ.
ಈ ಸ್ಥಿತಿಯಲ್ಲೇ ವಿಶ್ವಶಕ್ತಿ ನಮ್ಮೊಳಗೆ ಪ್ರವಹಿಸಲು ಮೊದಲಾಗುತ್ತದೆ.
ನಾವು ಯಾವಾಗ ಹೆಚ್ಚು ಧ್ಯಾನ ಮಾಡುತ್ತೇವೆಯೋ,
ಆವಾಗ ಹೆಚ್ಚು ಹೆಚ್ಚು ವಿಶ್ವ ಶಕ್ತಿ ನಮ್ಮೊಳಗೆ ಪ್ರವಹಿಸುತ್ತದೆ.
ಹಾಗೆ ಬಂದ ವಿಶ್ವಶಕ್ತಿ ನಮ್ಮ ಪ್ರಾಣಮಯ ಶರೀರಕ್ಕೆ ಪ್ರವಹಿಸುತ್ತದೆ.
- ನಿತ್ಯಸತ್ಯ
ಸತ್ಸಂಗ್ ಸಂಗ್ರಹ
No comments:
Post a Comment