Tuesday, March 15, 2022

THE KASHMIR FILES - HINDI MOVIE

 Tuesday, 15th March 2022

Elements Mall, Thanisandra, Bengaluru

"THE KASHMIR FILES" much talked about Hindi Movie in TV, Social Media and Newspaper released on 11th March 2022.

It is story about thousands of Kashmiri Pandits killed or made to leave on 19th January 1990.

They had slogan "CONVERT, LEAVE OR DIE" for Hindus in Kashmir.

Kashyap Saint named after Kashmir, thousands of years ago, which has been land of intellectuals, Saints, Pandits for ages.

The hatred by Muslims against Hindus, support from Pakistan towards terrorists, Federal Government at Delhi and State Government of Farooq Abdulla, made the Hindus life miserable.


Vivek Agnihotri, Film's Director, portrayed the happenings in 1990 beautifully and at some places it is extremly horror and genocide, feels terrible in the stomach.

The actors are:
Mithun Chakraborthy - Brahma Dutt
Anupam Kher - Pushkar Nath Pandit
Darshan Kumaar - Krishna Pandit
Pallavi Joshi - Radhika Menon
Chinmay Mandlekar - Farook Malik Bitta
Prakash Belwadi - Dr Mahesh Kumar
Puneet Issar - DGP Hari Narain
Atul Srivatsav - Journalist Vishnu Ram
Mrinal Kulkarni - Lakshmi Dutt


FB post from Rohith Chakrathirtha
ಇದನ್ನು ನಾಳೆಯೂ ಬರೆಯಬಹುದಿತ್ತು, ಇನ್ನಾರೇಳು ದಿನವಾದ ಮೇಲೂ ಬರೆಯಬಹುದಿತ್ತು. ಆದರೆ ಈ ಬಿಸಿಯಲ್ಲಿರುವಾಗಲೇ ಬರೆದುಬಿಟ್ಟರೆ ನಿರಾಳವಾದೇನೆಂಬ ನಂಬಿಕೆಯಲ್ಲಿ ಬರೆಯುತ್ತಿದ್ದೇನಷ್ಟೆ.
ಎರಡು ವರ್ಷದ ಹಿಂದೆ ಡಿಸೆಂಬರಲ್ಲಿ ನಾವು ನಾಲ್ಕು ಮಂದಿ ಸಿಂಧನೂರಿಗೆ ಹೊರಟಿದ್ದೆವು. ಉದ್ದೇಶ - ಅಲ್ಲಿನ ಐದು ಕಾಲೊನಿಗಳಲ್ಲಿ ಬದುಕು ಕಟ್ಟಿಕೊಂಡಿದ್ದ ಒಟ್ಟು 25,000 ನಿರಾಶ್ರಿತ ಹಿಂದೂಗಳನ್ನು ಕಣ್ಣಾರೆ ಕಾಣುವುದು, ಮಾತಾಡಿಸುವುದು, ಒಂದಷ್ಟು ಸರಕು ಸಂಪಾದಿಸಿ ಲೇಖನವೋ ಕಿರುಪುಸ್ತಿಕೆಯೋ ಮಾಡುವುದು. ಅವರೆಲ್ಲ 1968-71ರ ಸಮಯದಲ್ಲಿ ಬಾಂಗ್ಲಾದೇಶವನ್ನು (ಆಗಿನ ಪೂರ್ವ ಪಾಕಿಸ್ತಾನವನ್ನು) ಬಿಟ್ಟು ಓಡಿಬಂದವರೆಂಬುದಷ್ಟೇ ನಮಗೆ ಗೊತ್ತಿದ್ದುದು. ನಾವು ಮೂರು ತಲೆಮಾರುಗಳನ್ನು ಅಲ್ಲಿ ಭೇಟಿಯಾದೆವು.
ಮೊದಲ ತಲೆಮಾರು - ಈಗ 75-80 ವರ್ಷಗಳ ವೃದ್ಧರು. ದೇಶಬಿಟ್ಟಾಗ ಅವರಿಗಿನ್ನೂ 30ರ ಆಸುಪಾಸು. ಹಿಂಸೆಯ ಬಿಸಿಯನ್ನು ಅನುಭವಿಸಿದವರು. ಕುಟುಂಬ ಛಿದ್ರಗೊಂಡು ದಿಕ್ಕಾಪಾಲಾದವರು. ಜೆಹಾದಿಗಳ ಕೈಯಲ್ಲಿ ಹೊಡೆತ ತಿಂದವರು. ಜೀವ ಕೈಯಲ್ಲಿ ಹಿಡಿದುಕೊಂಡು ಗಡಿ ದಾಟಿದವರು. ಭಯೋತ್ಪಾದಕರ ಗುಂಡೇಟುಗಳನ್ನು ಕೈಗೋ ಕಾಲಿಗೋ ಕಿಬ್ಬೊಟ್ಟೆಗೋ ಹೊಡೆಸಿಕೊಂಡು ಹಾಗೂ ಹೀಗೂ ಪಾರಾಗಿ ಬದುಕಿಬಂದವರು. ದುರಂತವೆಂದರೆ ಅವರಿಗಿಂದು ಹಣ್ಣು ಹಣ್ಣು ವಾರ್ಧಕ್ಯ. ಕಣ್ಣು ಕಾಣದು, ಕಿವಿ ಕೇಳದು, ಮಾತು ಅಸ್ಪಷ್ಟ. ನೆನಪು ಕೈಕೊಟ್ಟಿದೆ. ಕೆಲವನ್ನು ಅವರೇ ಉದ್ದೇಶಪೂರ್ವಕ ಮರೆತುಬಿಟ್ಟಿದ್ದಾರೆ. ಹಸಿನೆನಪುಗಳಿಗೆ ಹಿಡಿಮಣ್ಣು ಹಾಕಿ ಹೂತುಬಿಟ್ಟಿದ್ದಾರೆ. ಇಷ್ಟರ ಮೇಲೆ ಅವರಿಗೆ ಭಾಷಾಸಮಸ್ಯೆ. ನಮ್ಮ ಭಾಷೆ ಅವರಿಗೆ ತಿಳಿಯದು, ಅವರದನ್ನು ಯಾರಾದರೂ ಅನುವಾದಿಸಿ ನಮಗೆ ಹೇಳಬೇಕು.
ಎರಡನೆಯ ತಲೆಮಾರು - ಆಗಿನ್ನೂ ಚಿಕ್ಕವರು, ಮೂರ್ನಾಲ್ಕು ವರ್ಷದ ಎಳೆಕಂದಮ್ಮಗಳು. ಈಗವರಿಗೆ ಐವತ್ತೈದರವತ್ತಾಗಿದೆ. ಅಂದು ನಡೆದ ಘಟನೆಗಳೆಲ್ಲ ಮಸುಕು ಮಸುಕು. ಕೆಲವರಿಗೆ ಏನೇನೂ ನೆನಪಿಲ್ಲ. ಬೆರಳು ಚೀಪುತ್ತಿದ್ದ ಹುಡುಗರಿಗೆ ಏನು ನೆನಪಿರಲು ಸಾಧ್ಯ? ದಾರಿಯ ಬಹಳಷ್ಟು ಸಮಯ ಅವರು ನಿದ್ರಾವಶರೇ ಆಗಿದ್ದುದರಿಂದ ಏನು ನಡೆಯಿತೆಂಬುದು ಏನೇನೂ ಗೊತ್ತಿಲ್ಲದ ಸ್ಥಿತಿ. ಅಲ್ಲಿಂದ ಹೇಗೋ ಬಂದೆವು; ಯಾವುದೋ ಕ್ಯಾಂಪಲ್ಲಿದ್ದೆವು; ಆಮೇಲೆ ಇಲ್ಲಿ ತಂದು ಹಾಕಿದರಂತೆ; ಇಲ್ಲಿಂದ ಬದುಕು ಶುರುವಾಯಿತಂತೆ - ಎಂಬ ಅಂತೆಕಂತೆಗಳ ಬಾಲ್ಯಬಿಟ್ಟರೆ ಉಳಿದಂತೆ ಆ ದೇಶದ ನೆನಪು, ಬಯಕೆ ಎರಡೂ ಅಷ್ಟಕ್ಕಷ್ಟೆ.
ಮೂರನೆಯ ತಲೆಮಾರು - ಇಲ್ಲಿ ಬಂದ ಮೇಲೆ ಹುಟ್ಟಿದವರು. ಆ ಕಾರಣದಿಂದ ಭಾರತೀಯರು. ಈ ದೇಶ ಅವರಿಗೆ "ನಮ್ಮನೆ", ಅಲ್ಲಿನ ನೆನಪುಗಳೆಲ್ಲ "ಸುಮ್ಮನೆ". ಯಾರೋ ನಮ್ಮ ತಂದೆತಾಯಿಯೋ ತಾತಂದಿರೋ ಇದ್ದರಂತೆ, ಅಲ್ಲಿ ದೊಡ್ಡ ಮನೆಯಿತ್ತಂತೆ, ಜಮೀನಿತ್ತಂತೆ, ಮನೆತುಂಬ ಆಳುಮಕ್ಕಳಿದ್ದರಂತೆ ಎಂಬ ಗತವೈಭವವನ್ನು - ತಾವು ನೋಡದ ಗತವೈಭವವನ್ನು - ಹಿರಿಯರಿಂದ ಕತೆಯಂತೆ ಕೇಳಿದ್ದಷ್ಟೇ ಇವರ ಭಾಗ್ಯ. ಇವರು ಕಣ್ತೆರೆದದ್ದು ಮೂರು ಮಹಡಿಗಳ ಬಂಗಲೆಮನೆಯಲ್ಲಲ್ಲ; ಮೂರುಮುಕ್ಕಾಲಡಿ ಉದ್ದಗಲದ ಜೋಪಡಿಯಲ್ಲಿ. ಹಾಗಾಗಿ ಆ ದೂರದ ಊರಿನ ಬಗ್ಗೆ ಇವರದು ಕೇವಲ ಕಲ್ಪನಾ ವಿಲಾಸವಷ್ಟೆ.
ನಿಮಗೆ ಗೊತ್ತಿರಲಿ, ಬಾಂಗ್ಲಾ ಅಥವಾ ಪೂರ್ವಪಾಕಿಸ್ತಾನದಲ್ಲಿ 1968-71ರ ಮೂರು ವರ್ಷದಲ್ಲಿ ನಡೆದದ್ದು ಕೇವಲ ಕೊಲೆಸುಲಿಗೆಯಲ್ಲ; ಹತ್ಯಾಕಾಂಡ. ನರಮೇಧ. ಹಿಟ್ಲರ್ ಕೊಂದದ್ದು ಅರವತ್ತು ಲಕ್ಷ ಜನರನ್ನಾದರೆ (ಅದಕ್ಕವನು ಆರೇಳು ವರ್ಷ ತಗೊಂಡ), ಇದು ಕೇವಲ 9 ತಿಂಗಳಲ್ಲಿ 30 ಲಕ್ಷ ಮಂದಿ ಹಿಂದೂಗಳು ಹೆಣವಾಗಿ ಮಲಗಿದ ಕಥೆ. 30 ಲಕ್ಷ ಎಂಬುದು ಆಗಿನ ಸರಕಾರ ಬಿಡುಗಡೆಗೊಳಿಸಿದ ದಾಖಲೆ (ಸರಕಾರೀ ಸಂಖ್ಯೆಗಳಿಗಿಂತ ಮೂರ್ನಾಲ್ಕುಪಟ್ಟು ದೊಡ್ಡದೇ ಇರುತ್ತದೆ ನಿಜಸಂಖ್ಯೆ ಎಂಬುದು ನಿಮಗೆ ಗೊತ್ತಿಲ್ಲದ್ದೇನಲ್ಲ). ವಿಶ್ವಸಂಸ್ಥೆ ಇತ್ತು, ಜಗತ್ತಿನ ದೊಡ್ಡ ದೊಡ್ಡ ರಾಷ್ಟ್ರಗಳಿದ್ದವು, ಪರಮಾಣು ಅಸ್ತ್ರ ಬಗಲಲ್ಲಿಟ್ಟುಕೊಂಡ ದೈತ್ಯಶಕ್ತಿಗಳಿದ್ದವು. ಎಲ್ಲ ಇದ್ದೂ ಬಾಂಗ್ಲಾದಲ್ಲಿ ಹಿಂದೂಗಳ ಮಾರಣಹೋಮ ನಡೆಯಿತು. ಅದನ್ನು ದೂರದಲ್ಲಿದ್ದು ನೋಡಿದ, ಪೇಪರಲ್ಲಿ ಓದಿದ ನಮ್ಮಂಥ ಜನಸಾಮಾನ್ಯರು ಬಿಡಿ; ಸ್ವತಃ ಆ ಬೆಂಕಿಯನ್ನು, ದಗೆ-ದಳ್ಳುರಿಗಳನ್ನು ಅನುಭವಿಸಿ ಬಂದ ಸಮುದಾಯದಲ್ಲೇ ಮೂರನೇ ತಲೆಮಾರಿಗೆ ಬರುವಷ್ಟರಲ್ಲಿ ಹೊಟ್ಟೆಯೊಳಗಿನ ಬೆಂಕಿ ತಣ್ಣಗಾಗಿತ್ತು. "ಯಾವುದೋ ಕಾಲದಲ್ಲಿ ಆಗಿಹೋಯಿತು ಬಿಡಿ, ಈಗ ಅದರ ಬಗ್ಗೆ ಮಾತಾಡಿ ಪ್ರಯೋಜನ ಏನು?" ಎಂಬ ಧಾಟಿಯಲ್ಲಿ ಮೂರನೇ ತಲೆಮಾರಿನ ಕೆಲವರು ಮಾತಾಡಿದರು. ಇತಿಹಾಸದ ಕ್ರೌರ್ಯಗಳನ್ನ ಅದೆಷ್ಟು ಸುಲಭವಾಗಿ ಮನುಷ್ಯ ಮರೆತುಬಿಡುತ್ತಾನಲ್ಲ; ಕಾಲ ಮರೆಸಿಬಿಡುತ್ತಲ್ಲ ಎಂದು ಅಚ್ಚರಿಪಟ್ಟಿದ್ದೆ ನಾನು.
ಕಾಶ್ಮೀರದಲ್ಲಿ ಕೇವಲ ಹತ್ತು-ಹದಿನೈದು ದಿನಗಳ ಅವಧಿಯಲ್ಲಿ 90ರ ದಶಕದಲ್ಲಿ ಊರುಬಿಟ್ಟು ಓಡಿದವರು ಐದು ಲಕ್ಷ ಮಂದಿ. ಅವರಲ್ಲಿ ದೊಡ್ಡ ದೊಡ್ಡ ಪಂಡಿತರಿದ್ದರು. ಕಾವ್ಯಕೋವಿದರಿದ್ದರು. ತರ್ಕಪ್ರವೀಣರಿದ್ದರು. ತತ್ತ್ವಶಾಸ್ತ್ರವನ್ನು ಅರೆದುಕುಡಿದವರಿದ್ದರು. ಕಲೆ, ಸಂಸ್ಕೃತಿ, ಧರ್ಮಾಚರಣೆಗಳಲ್ಲಿ ಊರಿಗೇ ಹೆಸರಾದವರಿದ್ದರು. ಅವರೆಲ್ಲರಿಗೆ ಅವರದೇ ಆದ ಆಸ್ತಿಪಾಸ್ತಿ, ತೋಟ, ಶಾಲೆ, ಕೆಲಸ ಇತ್ತು. ಅವರವರ ಮನೆಮಾರುಗಳಿದ್ದವು. ದೇವಸ್ಥಾನಗಳಿದ್ದವು. ಎಲ್ಲವನ್ನೂ ಬಿಟ್ಟು ಅವರೂ ಬಾಂಗ್ಲಾದ ಹಿಂದೂಗಳಂತೆ ಅಕ್ಷರಶಃ ಉಟ್ಟ ಬಟ್ಟೆಯಲ್ಲಿ ಹೊರಟು ಬರಬೇಕಾಯಿತು. ವ್ಯಂಗ್ಯವೆಂದರೆ ಇದಾದದ್ದು ಯಾವುದೋ ಮೂರನೇ ದೇಶದಲ್ಲಲ್ಲ - ನಮ್ಮ ದೇಶದೊಳಗೇ! ಆಗ ದೇಶ ಸ್ವತಂತ್ರವಾಗಿತ್ತು. ಸಂವಿಧಾನವಿತ್ತು. ಸುಭದ್ರ ಸರಕಾರವಿತ್ತು. ಠಾಕುಠೀಕಾಗಿ ಕೆಲಸ ಮಾಡುವ ನ್ಯಾಯಾಂಗವಿತ್ತು. ದೇಶದ ತುಂಬ ಸ್ವತಂತ್ರವಾಗಿ ಕಾರ್ಯಾಚರಿಸುವ ಪತ್ರಿಕೆಗಳಿದ್ದವು, ದೂರದರ್ಶನವೂ ಇತ್ತು. ದೇಶದ 98% ಭಾಗಕ್ಕೆ ರೇಡಿಯೋ ಪ್ರಸಾರವಿತ್ತು. ಎಂದಿನಂತೆ ಅಂತಾರಾಷ್ಟ್ರೀಯ ನ್ಯಾಯಾಲಯವೂ ವಿಶ್ವಸಂಸ್ಥೆಯೂ ಇದ್ದವು. ದೇಶದ ಸೇನೆ ಕಟ್ಟುಮಸ್ತಾಗಿ ಗಡಿಕಾಯುತ್ತಲೂ ಇತ್ತು. ಇಷ್ಟೆಲ್ಲ ಇದ್ದೂ ಆ ಕಾಶ್ಮೀರದ ಹಿಂದೂಗಳು ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಓಡಿಬರಬೇಕಾಯಿತು. ಅಂದು ಬಂದವರ ಎರಡನೇ ತಲೆಮಾರಿನ ಮಂದಿ ಇದೀಗ ದೆಹಲಿ, ಮುಂಬೈ, ಬೆಂಗಳೂರು, ಹೈದರಾಬಾದಿನಂಥ ನಗರಗಳಲ್ಲಿ ಸೇರಿಹೋಗಿದ್ದಾರೆ. "ನಮ್ಮ ಕಾಶ್ಮೀರ... ನಮ್ಮ ಸರಸ್ವತಿ... ನಮ್ಮ ಮಾರ್ತಾಂಡ ದೇವಸ್ಥಾನ... ನಮ್ಮ ಶಾರದಾಪೀಠ... ನಮ್ಮ ನೆಲ... ನಮ್ಮ ಹಿಮ..." ಇದೆಯಾ ಅವರಿಗೆ ಪ್ರೀತಿ? ಅವರ ಆ ಹಿಂದಿನ ತಲೆಮಾರಿನವರದೇ ರೀತಿ? ಗೊತ್ತಿಲ್ಲ. ಬಹುಶಃ ಅದೆಷ್ಟೋ ಮಂದಿ ಈ "ಪಲಾಯನ"ದ ನಂತರ ಕಾಶ್ಮೀರದ ಹೊರಗೆ ಹುಟ್ಟಿದ ಪಂಡಿತರಿದ್ದಾರೆ. ಅವರಲ್ಲಿ ಎಷ್ಟು ಮಂದಿಯನ್ನು ಕಾಶ್ಮೀರ ಬಿಟ್ಟೂಬಿಡದೆ ಕರೆಯುತ್ತಿದೆ? ಸೆಳೆಯುತ್ತಿದೆ? ಗೊತ್ತಿಲ್ಲ.. ಆದರೆ ಬಾಂಗ್ಲಾ ನಿರಾಶ್ರಿತರ ಉದಾಹರಣೆ ನೋಡಿ ಹೇಳುವುದಾದರೆ ತಲೆಮಾರಿಂದ ತಲೆಮಾರಿಗೆ ಹೋಗುತ್ತಿದ್ದಂತೆ ಭಾವನಾತ್ಮಕ ಬಿಸಿ ಆರುತ್ತದೆ. ಅಂತರ ಸೃಷ್ಟಿಯಾಗುತ್ತದೆ. ಆ ಉತ್ಕಟತೆ, ಆ ಪರವಶತೆ.. ಅದೆಲ್ಲಿಯದೋ ಬೇರೊಂದು ಜಗತ್ತಿನದು ಎನಿಸುತ್ತದೆ. ಸ್ವಾತಂತ್ರ್ಯ ಹೋರಾಟ ಎಂದರೆ ಅದ್ಯಾವುದೋ ಭೂತಕಾಲದಲ್ಲಿ ನಡೆದ ಯಃಕಶ್ಚಿತ್ ಸಂಗತಿ ಎಂದು ಈಗಿನ ಜನರೇಶನ್ನಿಗೆ ಅನ್ನಿಸಬಹುದಲ್ಲ, ಹಾಗೆ.
ನೆನಪಿನ ಗಿಡ ಹೀಗೆ ಸೊರಗತೊಡಗಿದಾಗ ಯಾರೋ ಒಂದಷ್ಟು ನೀರು ಚಿಮುಕಿಸಬೇಕಾಗುತ್ತದೆ. ಗೊಬ್ಬರ ಹಾಕಬೇಕಾಗುತ್ತದೆ. ಗಾಳಿಬೆಳಕಿನ ವ್ಯವಸ್ಥೆ ಮಾಡಿ ಗಿಡವನ್ನು ಮತ್ತೆ ಚಿಗುರಿಸಬೇಕಾಗುತ್ತದೆ. ಕಾಶ್ಮೀರದ ಕಥೆ ನನ್ನ ಕಥೆ, ಅವರ ವ್ಯಥೆ ನಮ್ಮೆಲ್ಲರ ವ್ಯಥೆ. ಕಾಶ್ಮೀರದ ಭಟ್ಟ ಬೇರೆಯಲ್ಲ, ಇಲ್ಲಿನ ಭಟ್ಟ, ಹೆಗಡೆ, ಶೆಟ್ಟಿ, ಪೂಜಾರಿ, ಗೌಡ ಬೇರೆಯಲ್ಲ. ಇದು ಹಿಂದೂ ರಕ್ತ. ಈ ದೇಶದಲ್ಲಿ ಹುಟ್ಟಿಬೆಳೆದವರೆಲ್ಲ ನನ್ನವರು; ಈ ನೆಲಕ್ಕೆ ನಾವು ವಾರಸುದಾರರು... ಅಂತ ಅನ್ನಿಸದ ಹೊರತು ನೂರಾರು ಎಕ್ಸೊಡಸ್ಸುಗಳಾದರೂ ಜಿನೊಸೈಡುಗಳಾದರೂ ನಮಗೆ ಏನೇನೂ ಅನ್ನಿಸುವುದಿಲ್ಲ. ಅವನ್ಯಾರೋ ಅಲ್ಲಿ ಸತ್ತನೆಂಬ ಸುದ್ದಿಯನ್ನೂ ಸ್ಯಾಂಡ್ವಿಚ್ಚು ಚಪ್ಪರಿಸಿಕೊಂಡು ಓದುವ ಭಾವಶೂನ್ಯತೆಗೆ ಹೋಗುತ್ತೇವೆ ನಾವು. "ಈ ದೇಶದ ಅಷ್ಟೂ ಮಂದಿ ಒಂದೊಂದು ಹಿಡಿ ಮರಳು ಕೈಗೆತ್ತಿಕೊಂಡು ನಮ್ಮ ಮೇಲೆ ತೂರಿದ್ದರೂ ಸಾಕಿತ್ತು; ನಾವಷ್ಟೂ ಜನ ಅದರ ಬೆಟ್ಟದಲ್ಲಿ ಮುಳುಗಿಸಾಯುತ್ತಿದ್ದೆವು" ಎಂದು ಬರೆದಿದ್ದ ಬ್ರಿಟಿಷ್ ಅಧಿಕಾರಿಯೊಬ್ಬ. ಆದರೂ ಭಾರತೀಯರು ಪರಂಗಿಗಳಿಗೆ ದಾಸರಾದರೆಂಬುದು ಇತಿಹಾಸದ ವ್ಯಂಗ್ಯ. ಕತ್ತರಿಸಲು ಬಂದ ಒಬ್ಬೊಬ್ಬ ಮತಾಂಧನ ಮೇಲೂ ಇಲ್ಲಿದ್ದವರು ಕತ್ತಿ ಮಸೆಯುವ ಕ್ಷಾತ್ರವನ್ನು ತೋರುತ್ತಿದ್ದರೆ ಕಾಶ್ಮೀರ ಕಾಶ್ಮೀರವಾಗಿ ಉಳಿಯುತ್ತಿತ್ತೇನೋ - ಆದರೆ ಕ್ಷಾತ್ರದ ವಿಸ್ಮೃತಿ ಹತ್ತಿ ಶತಮಾನಗಳೇ ಆಗಿತ್ತಲ್ಲ ನಮಗೆ?
ಮರೆವಿನ ನಿತ್ರಾಣಕ್ಕೆ ಬಾಡಿ ಮುದುರಿದ ಗಿಡಕ್ಕೆ ಇತಿಹಾಸದ ಕಟುಸತ್ಯವೆಂಬ ನೀರೆರೆದು ಮತ್ತೆ ಚಿಗುರಿಸಿದ್ದಾರೆ ವಿವೇಕ್ ಅಗ್ನಿಹೋತ್ರಿ. ಒಂದನ್ನಂತೂ ಅರ್ಥ ಮಾಡಿಕೊಳ್ಳಬೇಕಿದೆ - ಅಫಘಾನಿಸ್ತಾನ ಕತ್ತರಿಸಿ ಬೇರೆಯಾಗಿ ಹೋದದ್ದು ಮತಾಂಧರಿಗೆ. ಪಾಕಿಸ್ತಾನ ಪಾಲಾಗಿ ಹೋದದ್ದು ಮತಾಂಧರಿಗೆ. ಬಾಂಗ್ಲಾ ತುಂಡಾಗಿ ಸ್ವತಂತ್ರಗೊಂಡು ಸೇರಿದ್ದು ಮತ್ತೆ ಮತಾಂಧರ ಮಡಿಲನ್ನೇ. ನಮ್ಮದೇ ಕಾಶ್ಮೀರದ ಒಂದಷ್ಟು ಭಾಗವೂ ಈಗ ಮತಾಂಧರದ್ದೇ ಸೊತ್ತು. ಅಂದರೆ ಪ್ರತಿಸಲವೂ ಮೂಲಭೂತವಾದ ಅಥವಾ ರಿಲಿಜನ್ ಎಂಬುದು ರಾಜಕೀಯಶಕ್ತಿಯಾಗಿ ಮುಖವಾಡ ತೊಟ್ಟು ಒಂದಷ್ಟು ಪ್ರಾಂತ್ಯ, ರಾಜ್ಯ, ದೇಶಗಳನ್ನು ಕಬಳಿಸುತ್ತಲೇ ಹಿಂದೂಸ್ತಾನವನ್ನು ಕಿರಿದಾಗಿಸುತ್ತ ಬಂದಿದೆ. ನಮ್ಮ ನಮ್ಮ ಊರುಗಳಲ್ಲೂ ಇದೇ ಮತಾಂಧತೆ ಪ್ರತ್ಯೇಕ ಕಾಲೊನಿಗಳನ್ನು ಕಟ್ಟಿಕೊಂಡು ದೇಶದೊಳಗೂ ಅಲ್ಲಲ್ಲಿ ಅಲ್ಲಲ್ಲಿ ಜಾಗಗಳನ್ನು ತಿನ್ನುತ್ತ, ಹಿಂದೂಸ್ತಾನದ ವಿಸ್ತೀರ್ಣವನ್ನು ಕಿರಿದುಮಾಡುತ್ತಲೇ ಬರುತ್ತಿದೆ. ತನ್ನ ಸಾಮ್ರಾಜ್ಯವನ್ನು ಸಂಖ್ಯೆಯ ದೃಷ್ಟಿಯಿಂದಲೂ ಭೂವಿಸ್ತಾರದ ದೃಷ್ಟಿಯಿಂದಲೂ ವಿಸ್ತರಿಸಿಕೊಳ್ಳುವ ಕೆಲಸವನ್ನು ಮೂಲಭೂತವಾದ ಒಂದು ದಿನವೂ ವಿರಾಮ ಕೊಟ್ಟು ನಿಲ್ಲಿಸಿಲ್ಲ. ನೆನಪಿಡಿ - ತನ್ನ ಶತ್ರುಗಳ ಮೇಲೆ ಏರಿಹೋಗಲು ಮೂಲಭೂತವಾದ ಎಂದೆಂದೂ ಹಿಂದೇಟು ಹಾಕದು. ಸಂವಿಧಾನ ಇದೆ, ಕಾನೂನಿದೆ, ನ್ಯಾಯಾಲಯ ಇದೆ, ಮಾಧ್ಯಮ ಇದೆ... ಎಲ್ಲವೂ ಸೇರಿ ನನ್ನ ಕೈ ಕಟ್ಟಿಹಾಕುವ ಕೆಲಸ ಮಾಡಬಹುದೆಂಬ ಯಾವ ಚಿಂತೆಯನ್ನೂ ಮಾಡದೆ ಮುನ್ನುಗ್ಗುತ್ತದೆ ಮೂಲಭೂತವಾದ. ಅವರಿವರ ಜಾಗ ಕಬಳಿಸು, ಅವರಿವರ ಆಸ್ತಿ ಕಬಳಿಸು, ಅವರಿವರ ಹೆಣ್ಮಕ್ಕಳನ್ನು ಕಬಳಿಸು, ನುಂಗಿ ನುಂಗಿ ನುಂಗುತ್ತಲೇ ಹೋಗು ಎನ್ನುತ್ತದೆ ರಿಲಿಜನ್. ಯಾಕೆಂದರೆ ರಿಲಿಜನ್ನಿನ ಗರ್ಭದಲ್ಲಿರುವುದು ಮೂಲತಃ ಸಾಮ್ರಾಜ್ಯ ವಿಸ್ತಾರದ ಹಪಹಪಿ. ತುಪ್ಪ ಸುರಿದು ಬೆಂಕಿಯನ್ನು ನಂದಿಸುವ ಕತೆಯಂತೆಯೇ - ಜಾಗ ಬಿಟ್ಟುಕೊಟ್ಟು ಈ ಮೂಲಭೂತವಾದದ ಹಸಿವನ್ನು ಹಿಂಗಿಸುವ ಕತೆಯೂ.
ಹಿಂದೂಗಳ ಶೇಕಡಾವಾರು ಸಂಖ್ಯೆ ಐವತ್ತಕ್ಕಿಂತ ಕೆಳಗಿಳಿದಾಗ ಸಮಾಜದಲ್ಲಿ ಏನಾಗುತ್ತದೆ, #TheKashmirFiles ನೋಡಿ ಅರ್ಥಮಾಡಿಕೊಳ್ಳಬಹುದು. ಯಾಕೆಂದರೆ ಅಲ್ಲಿ ತೆರೆಯ ಮೇಲೆ ಮೂಡಿಬಂದಿರುವುದು ನಮ್ಮವರದೇ, ನಮ್ಮದೇ ಇತಿಹಾಸ. ಫಿಲ್ಟರ್ ಮಾಡದ ನೈಜ ಇತಿಹಾಸ.

Posted Wednesday, 16th March 2022

No comments:

Post a Comment