Monday, March 14, 2022

ಕವಿ ಸಂಸ್ನರಣೆ - ನಾಡೋಜ ಚನ್ನವೀರ ಕಣವಿ

 ಭಾನುವಾರ, 13 ಮಾರ್ಚ್ 2022 

ತರಳಬಾಳು ಕೇಂದ್ರ ಗ್ರಂಥಾಲಯ, ಅರ್. ಟಿ.ನಗರ, ಬೆಂಗಳೂರು,

ಸಮನ್ವಯ ಕವಿ ನಾಡೋಜ ಡಾ ಚನ್ನವೀರ ಕಣವಿ 
ಶಿವರಾಮ ಕಾರಂತ ವೇದಿಕೆ, ಅರ್.ಟಿ.ನಗರ, ಬೆಂಗಳೂರು, ಇವರು ಸಮನ್ವಯ ಕವಿ ನಾಡೋಜ ಚನ್ನವೀರ ಕಣವಿ ಅವರ ಸಂಸ್ಮರಣೆ ಕಾರ್ಯಕ್ರಮವನ್ನು ಹಮ್ಮಿ ಕೊಂಡಿತ್ತು.


ಖ್ಯಾತ ಉಪನ್ಯಸಕರೂ, ವಿಮರ್ಶಕರೂ ಆದ ಡಾ ಎಚ್.ಎಸ್. ಸತ್ಯನಾರಾಯಣ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಚನ್ನವೀರ ಕಣವಿ ಅವರ ಬದುಕು, ಬರಹ, ವ್ಯಕ್ತಿತ್ವ ದ ಬಗ್ಗೆ ಅರ್ಥಪೂರ್ಣವಾದ ಉಪನ್ಯಾಸ ವನ್ನು ಮಾಡಿದರು.

ಡಾ. ಸತ್ಯನಾರಾಯಣ 


ಶ್ರೀಮತಿ ಶಶಿಕಲಾ ಅವರು ಬರೆದ ವರದಿ:

ಮಂಜುಳಾ ಭಾರ್ಗವಿ 

ಇಂದಿರಾ ಶರಣ್ 

ದೀಪಾ ಫಡ್ಕೆ 
ಶಿವರಾಮ ಕಾರಂತ ವೇದಿಕೆ (ರಿ) ಆರ್ ಟಿ ನಗರ, ಈ ವೇದಿಕೆಯ ಸಂಸ್ಥಾಪಕರು, ಕಾರ್ಯಾಧ್ಯಕ್ಷರು ಹಿರಿಯರಾದ  ಶ್ರೀ ಪಾ. ಚಂದ್ರಶೇಖರ ಚಡಗ ಸರ್ ರವರ ಮಾರ್ಗದರ್ಶನದಲ್ಲಿ , 

 


ದಿನಾಂಕ 13.03.2022 ರ ಭಾನುವಾರ ತಿಂಗಳ ಕಾರ್ಯಕ್ರಮ ನಡೆಯಿತು. ಇತ್ತೀಚಿಗೆ ನಮ್ಮನ್ನಗಲಿದ ಸಮನ್ವಯ ಕವಿ " ಚನ್ನವೀರ ಕಣವಿ"ಯವರ ಸ್ಮರಣೆ-ನಮನ ಗಳೊಂದಿಗೆ ವೇದಿಕೆ ತನ್ನದೇ ಆದ ಗೌರವ ಸಲ್ಲಿಸಿತು.


ವೀರಶೇಖರ ಸ್ವಾಮಿ 
ವೇದಿಕೆಯ ಮುಖ್ಯ ಅತಿಥಿಗಳಾಗಿ ಸರಳರು, ಸಜ್ಜನರು, ಆಡು ಮುಟ್ಟದ ಸೊಪ್ಪಿಲ್ಲ ಇವರು ಉಪನ್ಯಾಸಕ್ಕಾಗಿ ತೆಗೆದುಕೊಳ್ಳದ ಕನ್ನಡ ಸಾಹಿತ್ಯದ ವಿಷಯವಿಲ್ಲ ಎನ್ನುವಂತಹ  ಅಗಣಿತ ಉಪನ್ಯಾಸಗಳ ಸರಮಾಲೆಯ ಕನ್ನಡ ಪ್ರಾಧ್ಯಾಪಕರು, ಡಾ. ಎಚ್ ಎಸ್ ಸತ್ಯನಾರಾಯಣ ಸರ್ ಆಗಮಿಸಿದ್ದರು. ಇವರು ಕಣವಿಯವರ ಬಗ್ಗೆ , ಅವರ ಕನ್ನಡ ಸೇವೆಯ ರೂಪಗಳು, ಅವರೊಂದಿಗಿನ ತಮ್ಮ ಒಡನಾಟ, ಸರಳ ವ್ಯಕ್ತಿತ್ವ ದರ್ಶನ, ಅವರ ಬದುಕು ಹೀಗೆ ಸೊಗಸಾಗಿ ಸರಳವಾಗಿ ಪರಿಚಯಿಸುತ್ತಾ ಭಾರತೀಯ ಸಾಹಿತ್ಯ ನಿರ್ಮಾಪಕರಲ್ಲಿ ಒಬ್ಬರು ಕಣವಿಯವರು ಎನ್ನುವ, ತಮ್ಮದೇ ಹಾದಿಯಲ್ಲಿ ಅವರು ಕಾವ್ಯ ಸೃಷ್ಟಿ ಹೀಗೆ ಅನೇಕ ಮಜಲುಗಳನ್ನು ತಮ್ಮ ಉಪನ್ಯಾಸದಲ್ಲಿ ತೆರೆದಿಟ್ಟರು.


ಶ್ರೀಮತಿ ಭಾನುಮತಿಯರು ತಾವು ತರಬೇತಿಗೊಳಿಸಿದ ಮಕ್ಕಳ ಎರಡು ತಂಡದಿಂದ ಕಣವಿಯವರ ಕವನಗಳನ್ನು ಆಯ್ದು ಸಂಗೀತ ಸಂಭ್ರಮ ಸವಿಸಿದರು.


ಅತಿಥಿಗಳಿಗೆ ನೀಡಿದ ಪುಸ್ತಕ ವ್ಯವಸ್ಥೆ ಸೋಮಯಾಜಿ ಸರ್ ರವರಿಂದ

ಪ್ರಾರ್ಥನೆ- ಮಂಜುಳಾ ಭಾರ್ಗವಿ

ಸ್ವಾಗತ- ದೀಪಾ ಫಡ್ಕೆ

ಧನ್ಯವಾದ- ವೀರಶೇಖರ ಸ್ವಾಮಿ ಸರ್

ನಿರೂಪಣೆ- ಇಂದಿರಾ ಶರಣ್

ಶ್ರೀ ವೀರಶೇಖರ ಸ್ವಾಮಿ, ಉಪಾಧ್ಯಕ್ಷರು ಇವರ ಅಧ್ಯಕ್ಷತೆ ವಹಿಸಿದ್ದರು.

ಹೀಗೆ ಸಾಹಿತ್ಯ ಚಿಂತನ ಮಂಥನದ ಮೂಲಕ ನಮ್ಮ ವೇದಿಕೆ ಹಿರಿಯ ಕವಿಗೆ ಸಲ್ಲಿಸಿತು ನಮನ.🙏

-------   ಶಶಿಕಲಾ ಆರ್

ಫೋಟೋಗ್ರಾಫರ್ : ವೆಂಕಟೇಶ ಮೂರ್ತಿ 

ಸಂಗ್ರಹಣೆ 15/3/2022 


No comments:

Post a Comment