Monday, April 18, 2022

APRIL MONTH PROGRAM - K N GANESHAYYA

 Sunday, 17th April 2022

Tarala Balu Kendra Library, R.T. Nagara, Bengaluru.

Dr. K N Ganeshayya


April month program of Shivarama Karantha Vedike was held on Sunday, 17th April at the Library of TaralaBalu Kendra, R T Nagara, Bengaluru.


The emminent scientist, writer, Dr K N Ganeshayya was the chief guest for the function.



It was a very enlightning, educational session of one hour, who spoke "The truth and Development of Religious Believes"



The session was in Kannada, and he had established the scientific reason for many of the religious believes of our ancestors.


He quotes from an American writer about, Indians may die of humger but will not kill a cow for their food, as cow is believed to be a sacred animal.

Indira Sharan, the secretary, cor-ordinated the program, Sri Pa. Chandrashekhara Chadaga welcomed the guests, Mrs Deepa Phadke proposed vote of thanks with summary of the lecture.

Written on Tuesday, 19th April 2022

ಸಹ ಕಾರ್ಯದರ್ಶಿ ಶಶಿಕಲಾ ಅವರಿಂದ ಸಮಗ್ರ ವರದಿ.

ಆತ್ಮೀಯರೇ,
 
 ಶಿವರಾಮ ಕಾರಂತ ವೇದಿಕೆ(ರಿ), ಆರ್ ಟಿ ನಗರ, ಬೆಂಗಳೂರು. 
ವೇದಿಕೆಯ ಸಂಸ್ಥಾಪಕರು,  ಕಾರ್ಯಾಧ್ಯಕ್ಷರು, ಹಿರಿಯರು ಆದ ಶ್ರೀ ಪಾ.ಚಂದ್ರಶೇಖರ ಚಡಗರವರ ಮಾರ್ಗದರ್ಶನದಲ್ಲಿ ನಡೆದುಕೊಂಡು ಬರುತ್ತಿರುವ ಬೆಂಗಳೂರು ಉತ್ತರ ಭಾಗದಲ್ಲಿರುವ  ಏಕೈಕ ಕನ್ನಡ ಸಾಹಿತ್ಯ ವೇದಿಕೆ ನಮ್ಮದು.

 ದಿನಾಂಕ 17-04-2022ರ ಭಾನುವಾರದಂದು ಸಂಜೆ 4ಗಂಟೆಗೆ ಏಪ್ರಿಲ್ ಮಾಸದ ಕಾರ್ಯಕ್ರಮ ಜರುಗಿತು.

ಈ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಗಳಾಗಿ ಕೃಷಿ ವಿಜ್ಞಾನಿ, ಹಿರಿಯ ಖ್ಯಾತ ಸಾಹಿತಿ ಪ್ರೊ. ಕೆ.ಎನ್ ಗಣೇಶಯ್ಯನವರನ್ನು ಆಮಂತ್ರಿಸಲಾಗಿತ್ತು. 

ವೇದಿಕೆಯ ಕಾರ್ಯಧ್ಯಕ್ಷರಾದ ಪಾ.ಚಂದ್ರಶೇಖರ ಚಡಗರವರು ಸ್ವಾಗತ ಕೋರಿದರು. 
ಪ್ರಾರ್ಥನೆ: ಶ್ರೀಮತಿ ರಾಧಾಮಣಿ ಮತ್ತು ಸುಜಾತಾ  ನಾರಾಯಣ ಸ್ವಾಮಿ ಯವರಿಂದ
ನಿರೂಪಣೆ: ಶ್ರೀಮತಿ ಇಂದಿರಾ ಶರಣ್, ಕಾರ್ಯದರ್ಶಿ
ಅಧ್ಯಕ್ಷೀಯ ನುಡಿ: ವೇದಿಕೆಯ ಪ್ರಭಾರಿ ಅಧ್ಯಕ್ಷರು ದೀಪಾ ಪಡ್ಕೆಯವರಿಂದ

 ಅತಿಥಿಗಳ ಭಾಷಣ :: 
ಮೂಲತಃ  ಕೃಷಿ ವಿಜ್ಞಾನಿಯಾಗಿದ್ದು,
ಕಾದಂಬರಿಕಾರರಾಗಿ, ಕಥೆಗಾರರಾಗಿ, ಲೇಖಕರರಾಗಿ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಲೋಕಕ್ಕೆ ತಮ್ಮನ್ನು ತೆರೆದುಕೊಂಡು ತಮ್ಮ ವಿಶಿಷ್ಟ ಶೈಲಿಯ ಸೃಜನಾತ್ಮಕ ಬರಹಗಳ ಮೂಲಕ ಎಲ್ಲಾ ತಲೆಮಾರಿನ ಹಾಗು ಹೊಸ ಓದುಗರನ್ನು ಬರಸೆಳೆದು ಕನ್ನಡ ಸಾಹಿತ್ಯವನ್ನು ಮತ್ತಷ್ಟು ಸಿರಿವಂತವಾಗಿಸುತ್ತಿರುವ ಪ್ರೊ. ಕೆ ಎನ್ ಗಣೇಶಯ್ಯನವರು
" ಧಾರ್ಮಿಕ ನಡೆಗಳ ಮತ್ತು ನಂಬಿಕೆಗಳ ಸತ್ಯ ಮತ್ತು ವಿಕಾಸ" ವಿಷಯವಾಗಿ ಮಾತನಾಡಿದರು

ಈ ವಿಷಯವನ್ನು ಆರಿಸಿಕೊಂಡ ಕಾರಣಕ್ಕೆ ನಾನು justification ಕೊಡಬೇಕಾಗುತ್ತದೆ ಎಂದು ಮಾತು ಆರಂಭಿಸಿ,ಮೊದಲನೆಯದಾಗಿ ಧಾರ್ಮಿಕ ನಡೆ ಮತ್ತು ನಂಬಿಕೆಗಳ ವಿಷಯವಾಗಿ ವಿಸ್ತಾರವಾಗಿ ನೋಡಬೇಕಾಗುತ್ತದೆ,  ಅಧ್ಯಾತ್ಮಿಕ ನಂಬಿಕೆಗಳು, ಜಾನಪದ ನಂಬಿಕೆಗಳನ್ನು ಒಟ್ಟುಗೂಡಿಸಿ ನಾನು ಧಾರ್ಮಿಕ ನಡೆ ಮತ್ತು ನಂಬಿಕೆಗಳು ಅಂತ ಇಟ್ಟಿದ್ದೇನೆ. ಎರಡನೆಯದು ಸತ್ಯ ಮತ್ತು ವಿಕಾಸ ಇದರ ಬಗ್ಗೆ ಚರ್ಚೆಯ ಮುಂದುವರಿಕೆಯಲ್ಲಿ clarity ಕೊಡುತ್ತೇನೆ ಎನ್ನುತ್ತಾ
 ಧಾರ್ಮಿಕ ನಡೆಗಳ ಬಗ್ಗೆ
 ಎರಡು ಉದಾಹರಣೆಗಳನ್ನು ಹೇಳಬೇಕಾಗಿದೆ, ಇವು ನಮ್ಮೂರಿನಿಂದ ಹುಟ್ಟಿದವು. ನಾವು ಚಿಕ್ಕವರಿದ್ದಾಗ ಧವಸಧಾನ್ಯಗಳ ಸಂಗ್ರಹವನ್ನು ದೊಡ್ಡ ದೊಡ್ಡ ಗುಡಾಣ (ಮಡಕೆ) ಗಳಲ್ಲಿ ಮಾಡ್ತಾ ಇದ್ದರು. ಅದರೊಳಗೆ ಮತ್ತೊಂದು  ಗುಡಾಣಿ  ಅಂತ ಇಡ್ತಾ ಇದ್ದರು. ಅವು ಕೂಡ ಮಣ್ಣಿನಿಂದ ಮಾಡಿದವು. ಗುಡಾಣಿ ರಚನೆಯ ಕಲ್ಪನೆಯನ್ನು ಅಲ್ಲಿಯೇ ಇದ್ದ ಎರಡು ತಿಂಡಿ ಪ್ಲೇಟ್ ಗಳನ್ನು ಒಂದರ ಮೇಲೊಂದು ಜೋಡಿಸಿ ತೋರಿಸುತ್ತಾ ಎರಡು ಸಾಸ್ ಗಳನ್ನು ಒಂದರ ಮೇಲೊಂದು ಇಟ್ಟಾಗ  ಬರುವ ಆಕಾರದಂತೆ ಇರುತ್ತಿದ್ದ ಅದರ ಗಾತ್ರ  ಕೇವಲ ಆರು ಇಂಚು ಅಥವಾ ಮುಕ್ಕಾಲು ಅಡಿ ಇರಬಹುದು. ಹೀಗೆ ಅವಶ್ಯಕತೆಗನುಗುಣವಾದ ಗಾತ್ರದಲ್ಲಿ ಕುಂಬಾರನ ಬಳಿ ಮಾಡಿಸುತ್ತಿದ್ದರು. ಒಂದು ವಿಶೇಷ ಏನೆಂದರೆ ಕೆಳಗಿನ ಸಾಸ್ ನಲ್ಲಿ ನೀರು ನಿಲ್ಲುತ್ತೆ ಮೇಲಿನ ಸಾಸ್ ನಲ್ಲಿ ಸಣ್ಣ ಸಣ್ಣ ತೂತು (ಜರಡಿಯ)ಗಳನ್ನು ಮಾಡಿರುತ್ತಿದ್ದರು. ಇದನ್ನು ದ್ವಿದಳಧಾನ್ಯ ಶೇಖರಿಸುವ ಗುಡಾಣಗಳಲ್ಲಿ ಮುಕ್ಕಾಲು ಭಾಗ ಧಾನ್ಯ ತುಂಬಿದ ನಂತರ ಗುಡಾಣಿ ಇಡುವುದು ಮತ್ತೆ ಧಾನ್ಯ ತುಂಬುವುದು ಮತ್ತೆ ಗುಡಾಣಿ ಇಡುವುದು ರೂಢಿಯಲ್ಲಿತ್ತು.  ಇದಕ್ಕೂ ಮುಂಚೆ ಇಡೀ ಗುಡಾಣಿಯನ್ನು ಒಂದು ಬಕೆಟ್ ನಲ್ಲಿ ನೀರಲ್ಲಿ ಮುಳುಗಿಸುವರು ಸಣ್ಣ ತೂತುಗಳ ಮೂಲಕ ನೀರು ಒಳಗಡೆ ಹೋಗ್ತಾ ಇತ್ತು. ಅದನ್ನು ಹೊರಗಡೆ ಇಟ್ಟು ಒಣಗಿಸಿ ಗುಡಾಣಿ ಸಿದ್ಧ ಮಾಡುತ್ತಿದ್ದರು.
ಆ ನಂಬಿಕೆಯನ್ನು ಜಾನಪದ ನಂಬಿಕೆ ಇಲ್ಲಾ ಧಾರ್ಮಿಕ  ನಂಬಿಕೆ ಅಂತೀರಾ! ಇದು ಧಾನ್ಯಗಳನ್ನು ರಕ್ಷಿಸುತ್ತೆ ಅನ್ನುವ  ಒಂದು ನಂಬಿಕೆ. ಹೇಗೆ ಅಂದರೆ ಆ ಗುಡಾಣಿಯೊಳಗೆ ಒಂದು ಭೂತ ಹೋಗುತ್ತೆ, ಅದು ಧಾನ್ಯಗಳನ್ನು ರಕ್ಷಿಸುತ್ತೆ ಅನ್ನುವ ನಂಬಿಕೆ. ನಾವು ಮಕ್ಕಳಾಗಿದ್ದಾಗ ಆ ಗುಡಾಣಿ ಕಂಡರೆ ತುಂಬಾ ಇಷ್ಟ.  ಧಾನ್ಯ   ತೆಗೆಯುತ್ತಾ  ತೆಗೆಯುತ್ತಾ ಒಂದು ಗುಡಾಣಿ ಹೊರಗಡೆ (expose) ಕಾಣುತ್ತಲ್ಲ ಆಗ  ಗುಡಾಣಿಯನ್ನು ಹೊರಗಡೆ ತೆಗೆದು ನಮ್ಮನ್ನು ಯಾರಾದರೂ ಒಬ್ಬರನ್ನು  ಏ ಬನ್ನಿ ಇಲ್ಲಿ ಅಂತ ಕರೆದು ಯಾರ ಕೈಯಲ್ಲಾದರೂ ಕೊಟ್ಟು ಈ ಗುಡಾಣಿ ಒಳಗಡೆ ಭೂತ ಇದೆಯಲ್ಲಾ ಇದನ್ನು ತೆಗೆದು ನೋಡುವಂತಿಲ್ಲ ಯಾಕೆಂದರೆ ಭೂತ ಹಿಡಿದುಕೊಳ್ಳುತ್ತೆ. ಅದಕ್ಕೆ ಇದನ್ನು ಬೆನ್ನಿನ ಹಿಂದೆ ಹಿಡಿದುಕೊಂಡು ಓಡಿ ಹೋಗಿ ಕೆರೆಗೆ ಹಾಕಿ ಹಿಂದೆ ತಿರುಗಿ ನೋಡದೆ ವಾಪಸ್ಸು ಬಂದು ಸ್ನಾನ ಮಾಡಬೇಕು ಅಂತ. ನಾವು ಮಕ್ಕಳಲ್ಲಿ  ಆಗ ಒಂಥರಾ competition ಇರ್ತಾ ಇತ್ತು. ಭೂತ ನಾನು ಎಸೀಬೇಕು ನಾನು ಎಸೀಬೇಕು ಅಂತ. ಇತ್ತೀಚಿಗೆ ಈ ಸಂಪ್ರದಾಯಗಳು ಮಾಯವಾಗಿವೆ. ಆದರೆ ನಾವು ಈ ಸತ್ಯಾಸತ್ಯತೆಗಳ ಬಗ್ಗೆ ಚರ್ಚೆ ಮಾಡಿಲ್ಲ. ಸುಮಾರು 1998 ಅಥವಾ 2000 ಕಾಲದಲ್ಲಿ ಬೆಂಗಳೂರಿನಲ್ಲಿ ಎಸ್ ಎಸ್ ಎಲ್ ಸಿ ಮಾಡ್ತಾ ಇದ್ದ ಒಂದು ಹುಡುಗಿ ನಮ್ಮೂರಿಗೆ ಬಂದಳು. ನಾನು ಮೊದಲು ಹೇಳಿದ್ದೆ ಈ ವಿಷಯ ಆಕೆಗೆ. ಅಷ್ಟೊತ್ತಿಗೆ ಬೇರೆ ರೀತಿಯ ಸಂಗ್ರಹ ಬಂದು ಇವು ಇರಲಿಲ್ಲ. ನಮ್ಮೂರ ಪಕ್ಕದಲ್ಲಿ ಒಂದು ಕಡೆ ಇದೆ ಅಂತ ಯಾರೋ ಹೇಳಿದರು. ಅಲ್ಲಿಗೆ ಕರೆದುಕೊಂಡು ಹೋಗಿದ್ದೆ. ಅವಳು ಭೂತವನ್ನು  ನಂಬಲಿಲ್ಲ. ನಾವ್ಯಾರು ಕೂಡ ಇದರ ಬಗ್ಗೆ ಚರ್ಚೆ ಮಾಡಿರಲಿಲ್ಲ.  ಆಕೆಯ ವಯಸ್ಸು ಕುತೂಹಲ ಜಾಸ್ತಿ ನೋಡಿ, ಅವಳು ನನಗೆ ಭೂತದ ಭಯವಿಲ್ಲ , ಒಳಗಡೆ ನೋಡಲೇಬೇಕು ಅಂತ ಆ ಗುಡಾಣಿ ಬ್ರೇಕ್ ಮಾಡಿದಳು. ಅದರೊಳಗಿನ ಕೆಳಗಡೆ ನೀರಿನಲ್ಲಿ  ಸಿಕ್ಕಿಹಾಕಿಕೊಂಡು ಒಂದು ರೀತಿಯ ಹುಳಗಳು ಇದ್ದವು. ಅವರೆ ಮೇಲೆ  ಒಂದು ರೀತಿಯ ಹುಳಗಳು ಬರುತ್ತೆ, ಮೇಲೆ ಮೊಟ್ಟೆ  ಇಡುತ್ತೆ, ಮೊಟ್ಟೆ ಹೊಡೆದು ಆ  ಹುಳ ಒಳಗಡೆ ಕೊರೆದುಕೊಂಡು ಹೋಗಿ  ಬೆಳೆದು adult ಆದ ಮೇಲೆ ಆಚೆ ಬರುತ್ತೆ ಅಲ್ಲಿ ತೂತು ಆಗಿರುತ್ತೆ. ಈ ರೀತಿ ಎಲ್ಲಾ ದ್ವಿದಳ ಧಾನ್ಯಗಳಿಗೂ ಆ ಕೀಟಗಳು brukits bulsbrekits ಅಂತ ಕರೀತಾರೆ.  ಅವು ಅಲ್ಲಿ ಸೆರೆಯಾಗಿದ್ದವು ಅವುಗಳನ್ನು ಬೆಂಗಳೂರಿಗೆ ತಂದು ಕೀಟಶಾಸ್ತ್ರ ವಿಭಾಗ ( endamology department) ಕ್ಕೆ ತಂದು ತೋರಿಸಿದಳು. ಅದು ಚರ್ಚೆಗಳಾಗುತ್ತಾ ಆಗುತ್ತಾ ಗೊತ್ತಾಯ್ತು  ಅದರೊಳಗೆ ಹುಳಗಳು ಬಿದ್ದಿದ್ದಾವೆ ಅಂದರೆ ಅವುಗಳನ್ನು trap ಮಾಡಿವೆ ಅಂತ ಅರ್ಥ. ಅಂದರೆ ಭೂತ ಅನ್ನುವ ಹೆಸರಿನಲ್ಲಿ ನಮ್ಮಲ್ಲಿ ನಂಬಿಕೆಯನ್ನು ಹುಟ್ಟಿಸಿದರೂ ಕೂಡ ಆ ಬೀಜಗಳ ಸಂರಕ್ಷಣೆಗೆ ಒಂದು ಒಳ್ಳೆಯ Practice ಅಂತ ಗ್ಯಾರಂಟಿ ಆಗುತ್ತೆ. ಆ ಹುಡುಗಿಯ ಪ್ರಶ್ನೆಗೆ ವಿಜ್ಞಾನಿಗಳಲ್ಲೆ ಸೇರಿ ಒಂದು ಉತ್ತರ ಕೊಟ್ಟರು.  ಆ ಉತ್ತರವನ್ನು ಉಪಯೋಗಿಸಿ ಆ ಹುಡುಗಿ Children Science Festival ಅಂತ National Level ನಲ್ಲಿ ನಡೆಯುತ್ತೆ ,ಅಲ್ಲಿ ನನ್ನ ಸಂಶೋಧನೆ ಅಂತ present ಮಾಡಿದ ಮೇಲೆ ಅವಳಿಗೆ All India Level ನಲ್ಲಿ 3rd Prize ಬಂತು. ಈಗ ಭೂತ ಇರುವ ಬಗ್ಗೆ ಒಂದು ವಿವರಣೆಯನ್ನು ಬರೆದಿದ್ದಳು. ತಳಗಡೆ  ತಿಂಗಳಾನುಗಟ್ಟಲೆ ಸಂಗ್ರಹವಾದ ನೀರಿನಲ್ಲಿ ಆ ಕೀಟಗಳು ಇದ್ದಾಗ ಒಂದು ರೀತಿಯ ಫಂಗಸ್ ಬೆಳೆಯುತ್ತೆ‌ , ನಾವು ಬ್ರೆಡ್ ಮೇಲೆ ನೋಡ್ತೇವೆ ಆ ಮಾದರಿಯ ಆ ಫಂಗಸ್, ಅವು  ಸ್ಫೋರ್ಸ  ನ produce ಮಾಡುತ್ತೆ. ಆ ಸ್ಫೋರ್ಸ ತೂತುಗಳ ಮೂಲಕ ಆಚೆ ಬಂದರೆ ನಮ್ಮ ಮೂಗಿಗೆ enter ಆದರೆ respiratory problems ಬರುತ್ತೆ. ಅದಾವುದೂ ಆಗಬಾರದು ಅನ್ನುವ ಕಾರಣಗಳಿಂದ ಭೂತ ಎಂಬ ಹೆಸರಿನಲ್ಲಿ ಹೆದರಿಕೆ ಇರಿಸಿ ಅದನ್ನು ಹಿಂದೆ ಮಾತ್ರ  ಹಿಡಿದುಕೊಳ್ಳಬೇಕು ಮುಂದೆ ನೋಡಬಾರದು ಎಸೆಯುವಾಗ ಕೂಡ ತಿರುಗಿನೋಡಬಾರದು ವಾಪಸ್ಸು ಬಂದ ಮೇಲೆ ಸ್ನಾನ ಮಾಡಬೇಕು ಕಾರಣ ಅಪ್ಪಿತಪ್ಪಿ ಮೈಗೆ ಅಂಟಿಕೊಂಡಿದ್ದರೆ ಎನ್ನವ ಕಾರಣದಿಂದ. ಕೊನೆಗೂ ಈ ಭೂತವನ್ನು 10ನೇ ತರಗತಿ ಹುಡುಗಿ ಕಂಡುಹಿಡಿದಳು. ಇದನ್ನು ಯಾಕೆ ಹೇಳ್ತಾ ಇದ್ದೇನೆ ಅಂದರೆ ಈ ಕಥೆ ಇಲ್ಲಿಗೇ ಮುಗಿಯಲಿಲ್ಲ. ನಮ್ಮ ಯೂನಿವರ್ಸಿಟಿ ಯಲ್ಲಿ  ನಾನು ಡೀನ್ ಆಗಿದ್ದೆ. ಆವಾಗ ಪ್ರತಿವರ್ಷ ನಮ್ಮ ಕಾಲೇಜಿನಲ್ಲಿ ಯಾವ subject ಹೊಸದಾಗಿ introduce ಮಾಡಬೇಕು ಯಾವುದು ತೆಗೀಬೇಕು ಅನ್ನುವುದರ ಬಗ್ಗೆ ಚರ್ಚೆ ಆಗಬೇಕಾದರೆ ಬೇರೆ ಯೂನಿವರ್ಸಿಟಿ ಯಿಂದ ಕೆಲವು ಡೀನ್ಸ್ ನ ಕರೆಯುತ್ತೇವೆ.  ಹಾಗೆ ಕೊಯಮತ್ತೂರಿನಿಂದ ಬಂದಿದ್ದ ಮೋಹನ್ ಎಂಬುವರ ಜೊತೆ ಮಾತನಾಡುತ್ತ ಈ ವಿಷಯ ಹೇಳಿದೆ It's a fantastic  tool and  technic of controlling brokeets. ಅವರು ಡೀನ್ ಆಗಿದ್ದರೂ entomologist.  ತಕ್ಷಣ it's very surprising, we have actually released a technical based on this principle ಅಂದರು. ಕೊಯಮತ್ತೂರಿನ ಯೂನಿವರ್ಸಿಟಿಯಲ್ಲಿ ವಿಜ್ಞಾನಿಗಳು ಇದನ್ನು study ಮಾಡಿ ಆ ಕೀಟಗಳ ವರ್ತನೆಯ ಆಧಾರದ ಮೇಲೆ ಇದೇ ರೀತಿಯ ಒಂದು tool/instrument ನ develop ಮಾಡಿ ಅದನ್ನು release ಮಾಡಿದ್ದಾರೆ. ಆ website ನ ಕೊಡುತ್ತೇನೆ ನೀವು ನೋಡಬಹುದು. ನಮ್ಮ ಊರಿನಲ್ಲಿ  ಗುಡಾಣಿ ಗೆ ಕೆಳಗಡೆ ನೀರನ್ನು ಹಾಕ್ತಾ ಇದ್ದರು ಮೇಲೆ ತೂತುಗಳು. ಅವರು  ಅದರ ಬದಲು ಒಂದು ನಳಿಕೆ ಹಾಕಿ ಅದರೊಳಗೆ insecticide ಅಂದರೆ poison ಇಟ್ಟು control mechanism ಅಂತ release ಮಾಡಿದ್ದಾರೆ.ಇದು ಈಗ practice ನಲ್ಲಿದೆ. ಯಾಕೆ ಹೇಳಿದೆ ಈ ವಿಷಯ ಅಂದರೆ ಇದು ಒಂದು ನಂಬಿಕೆ, ಇಲ್ಲಿ ಭೂತ ಅನ್ನುವ ನಂಬಿಕೆ ದೂರ ತಳ್ಳಬಹುದಾಗಿತ್ತು. ಆದರೆ ನಮ್ಮಲ್ಲಿ ಗುಡಾಣ,ಗುಡಾಣಿ ಮಾಯವಾಗಿದ್ದರೂ. ಕೂಡ ವಿಜ್ಞಾನಿಗಳ ಸಂಶೋಧನೆಯಿಂದ ಮತ್ತೆ ಗುಡಾಣ ಮೇಲಕ್ಕೆ ಎದ್ದು ಬಂದಿದೆ. ಯಾಕೆಂದರೆ ಈ ಭೂತ ಅನ್ನುವ ನಂಬಿಕೆಯಲ್ಲಿ ಒಂದು ಸತ್ಯ ಇದೆ. ಆ ಸತ್ಯವನ್ನು ಯಾರೂ ಯಾವತ್ತೂ ಅಳಿಸಲಾಗುವುದಿಲ್ಲ. ನಮ್ಮ ಊರಿನಲ್ಲಿ ದ್ವಿದಳ ಧಾನ್ಯಗಳ ಸಂರಕ್ಷಣೆ ಮಾಡಲಿಕ್ಕೆ ಅವರು ರಚಿಸಿಕೊಂಡಿದ್ದ ಒಂದು ಧಾರ್ಮಿಕ ಪದ್ಧತಿಯಲ್ಲಿ ಒಂದು ಸತ್ಯ ಇದೆ. ಆ ಸತ್ಯ ಗೊತ್ತಾಗಿದ್ದರೆ ಆಚರಣೆ ಮಾಡದೆ ಬಿಟ್ಟುಬಿಡ್ತಾ ಇದ್ದರು ಅನ್ನಿಸುತ್ತೆ.  ವಿಜ್ಞಾನಿಗಳ ಮೂಲಕ ಆಚೆ ಬಂದಾಗ ನಮಗೆ ಅನ್ನಿಸುವುದು ಯಾವುದೇ ಧರ್ಮದ ನಡೆ ನುಡಿ ಪದ್ಧತಿ ಬೇರೂರಿರಬೇಕಾದರೆ ಅದರಲ್ಲಿ ಸತ್ಯ ಇದ್ದರೆ ಮಾತ್ರ ಸಾಧ್ಯ. ಅಂದರೆ ನಮ್ಮಲ್ಲಿ ಎಷ್ಟೊ ನಂಬಿಕೆಗಳು, ಧಾರ್ಮಿಕ ಆಚರಣೆಗಳು, ಪದ್ಧತಿಗಳು, ನಡೆಗಳು ಇದ್ದಾವೆ. ಅವೆಲ್ಲವೂ ಕೂಡ ವರ್ಷಾನುಗಟ್ಟಲೇ ಶತಮಾನಗಳಿಂದ ಜನ ಅದನ್ನು ಪಾಲಿಸಿಕೊಂಡು ಬರ್ತಾ ಇರಬೇಕಾದರೆ ಅದರಲ್ಲಿ ಸತ್ಯ ಇಲ್ಲದಿದ್ದರೆ ಅದು ಸಾಧ್ಯವಿಲ್ಲ ಅನ್ನುವುದು ಗೊತ್ತಾಗುತ್ತದೆ. ಇದು ಸಮಾಜ ಸ್ನೇಹಿ / ಮಾನವ ಸ್ನೇಹಿ ನಂಬಿಕೆಯಾದ್ದರಿಂದ ಕೋಟ್ಯಂತರ ಬೀಜಗಳ ಸಂರಕ್ಷಣೆ ಆಗುತ್ತಿದೆ. 

ಮತ್ತೊಂದು ಉದಾಹರಣೆ ಹೇಳುತ್ತೇನೆ ಎನ್ನುತ್ತಾ ತನ್ನ ತಂದೆ ಅವರು ಪ್ರೈಮರಿ ಸ್ಕೂಲ್ ಟೀಚರ್ ಆಗಿದ್ದವರು. ಒಂದು ಬಾರಿ ಕೋರ್ಟ್ ಕೆಲಸ ಮುಗಿಸಿ ಸಂಜೆ ಅವರ ಇಷ್ಟವಾದ ತೆಲುಗು ನಟ ನಾಗೇಶ್ವರಾವ್ ಮೂವಿ ನೋಡಿಕೊಂಡು ರಾತ್ರಿ ಊರ ಕಡೆ ಸೈಕಲ್ ನಲ್ಲಿ ಬರುತ್ತಾ, ಹೊರವಲಯದ ಬೂದುಗ ಮರದಲ್ಲಿ ಕೊಳ್ಳಿದೆವ್ವ ಇದ್ದು ಹತ್ತಿರ ಹೋದರೆ ಹಿಡಿದು ಸಾಯಿಸುತ್ತೆ ಎಂಬುದು ನೆನಪಾಯಿತು. ಊರಿಗೆ ಹೋಗಲೇಬೇಕು ಏನಾದರಾಗಲಿ ಪರೀಕ್ಷೆ ಮಾಡಿಬಿಡುವ ಎಂಬ ಧೈರ್ಯದಿಂದ ಮರದ ಹತ್ತಿರಕ್ಕೆ ಮೋರಿ  ಹತ್ತಿರ ಬರುತ್ತಾ ಒಳಗಡೆ ಭಯವಿದ್ದರೂ  ಬೀಡಿ ಹಚ್ಚುತ್ತಾರೆ. ಬೀಡಿಯ ಹಚ್ಚಿದ ಕಾರಣ  ಮತ್ತೊಂದು ಬೆಂಕಿಗೆ ಕೊಳ್ಳಿದೆವ್ವ ಹೆದರಿ ಹತ್ತಿರ ಬರಲ್ಲ ಎಂಬ ನಂಬಿಕೆಯಿಂದ. ಪೂರ್ತಿ ನಿಶ್ಯಬ್ಧ. ಕೊಳ್ಳಿದೆವ್ವ ಹತ್ತಿರ ಬರುತ್ತಿರುವ ಅನುಭವ ಜೊತೆಗೆ ಢಣ ಢಣ, ಛಕ್ ಛಕ್ ಶಬ್ಧ, ಭಯದಿಂದ ಜೋರಾಗಿ ಬೀಡಿ ಸೇದಿ ಎಳೆದರಂತೆ. ಕೊನೆಗೂ ಮರಗಳ ಮಧ್ಯೆ ಹತ್ತಿರವಾಗುತ್ತಿದ್ದ ಬೆಳಕು, ಶಬ್ಧ ಆನಂತರ ಅದು ಗಂಗೆತ್ತು ಅಂತ ಗೊತ್ತಾಯ್ತು. ಗಂಗೆತ್ತು ಅಂದರೆ ಮುಂಚೆ ಊರುಗಳಲ್ಲಿ ಒಂದು ಎತ್ತು ಮತ್ತು ಹಸುಕರುವನ್ನು ಊರೂರು ತಿರುಗುತ್ತಾ ಸಂಜೆ ಸಮಯದಲ್ಲಿ ರಾಮಸೀತೆ ಆಟ ಆಡಿಸುವ ವಾಡಿಕೆ ಇತ್ತು. ಅದರ ಕತ್ತಿಗೆ ಗಂಟೆ. ಅದರ ಯಜಮಾನನ ಒಂದು ಕೈಯಲ್ಲಿ ಚಾಟಿ ಮತ್ತೊಂದು ಕೈಯಲ್ಲಿ ಲಾಟೀನಿನ ಬೆಳಕು ಇದು ಕೊಳ್ಳಿದೆವ್ವದಂತೆ ಕಂಡಿತ್ತು. 

ಈ ಎರಡು ಉದಾಹರಣೆಗಳು, ಮೊದಲನೆಯದು ಸತ್ಯವಿದ್ದದ್ದು, ಎರಡನೆಯದು ಸತ್ಯವಿಲ್ಲದ್ದು. ಯಾವುದೇ ಒಂದು ನಂಬಿಕೆಯಲ್ಲಿ ಮಾನವ ಸ್ನೇಹಿ ಉದ್ದೇಶ ಇಲ್ಲದಿದ್ದರೆ ಅದು ಉಳಿದುಕೊಳ್ಳುವುದಿಲ್ಲ. ನಂಬಿಕೆ ವಿಕಾಸವಾಗಬೇಕಾದರೆ ಅದರಲ್ಲಿ ಸತ್ಯ, ಗಟ್ಟಿತನವಿರಬೇಕು. ಆಗ ಅದು ಶತಮಾನಗಳವರೆಗೂ ಉಳಿದುಕೊಳ್ಳುತ್ತೆ, ಒಂದೊಮ್ಮೆ ಅಳಸಿ ಹೋದರೂ ಬೇರೆ ರೂಪದಲ್ಲಿ ಉಳಿದುಕೊಂಡು ವಿಕಾಸವಾಗುತ್ತೆ.ಇದು ಇಲ್ಲಿ ಕಲಿಯಬೇಕಾದ ಮೊದಲ ಪಾಠ.
ಸಂಪೂರ್ಣ ಸತ್ಯ ಮತ್ತು ಸಂಪೂರ್ಣ ಸುಳ್ಳು ಇವೆರಡರ ಮಧ್ಯೆ ಒಂದು ನಂಬಿಕೆ.  

ಸಾರ್ವತ್ರಿಕವಲ್ಲದ ಯಾವುದೇ ಒಂದು  ಸಮೂಹಕ್ಕೆ ಮಾತ್ರ ಸೀಮಿತವಾದ ಕೆಲವು ನಂಬಿಕೆಗಳಿವೆ ಅನ್ನುವುದಕ್ಕೆ ಗೋವಿನ ಉದಾಹರಣೆ ಕೊಡಬಹುದು. ನಾವು ಭಾರತೀಯರು ಪೂಜಿಸುವ ಹಸು ಅದೇ ಪಾಶ್ಚಿಮಾತ್ಯರಿಗೆ ಆಹಾರ. ಮಾರ್ವಿನ್ ಹ್ಯಾರಿಸ್ ಎಂಬ ಪಾಶ್ಚಿಮಾತ್ಯ ವೈಜ್ಞಾನಿಕ ಲೇಖಕ ಕಲಕತ್ತೆಯಲ್ಲಿನ (1960 ಕ್ಷಾಮ ಬಂದು ಬಡತನದ) ಒಂದು ದೃಶ್ಯ ವನ್ನು ಹೀಗೆ ಬರೆಯುತ್ತಾನೆ "ಹೊಟ್ಟೆಗೆ ಊಟ ಇಲ್ಲದೆ, ಮೈಯೆಲ್ಲಾ ಎಲುಬು ತುಂಬಿಕೊಂಡಿರುವ ಮನುಷ್ಯ ಭಿಕ್ಷೆಗೆ ಕೈಯಡ್ಡುತ್ತಿರುವ ಸ್ಥಿತಿಯಲ್ಲಿ ಹಿಂದೆ ದಷ್ಟಪುಷ್ಟವಾಗಿರುವ ಹಸು. ಏನೇನೋ ತಿಂದುಕೊಂಡಿದ್ದರೂ ಕೂಡ ಈ ಬೋನಿ (ಮೂಳೆ) ಮನುಷ್ಯ, ಹಸು ತಿನ್ನದೆ ಭಿಕ್ಷೆ ಬೇಡುತ್ತಿರುವ ಇದು ಒಂದು ರೀತಿಯ ವೈವಿಧ್ಯಮಯ ( contrast) ದೃಶ್ಯ". ನಮ್ಮ ನಂಬಿಕೆಗಳು ಅವರಿಗೆ ಒಂದು ರೀತಿಯ ದಡ್ಡತನದಂತೆ ಕಂಡಿದೆ. 1960-85 ರವರೆಗೂ (ಕ್ಷಾಮ ಪರಿಸ್ಥಿತಿ ಇತ್ತು) ಈ ತರಹದ ಲೇಖನಗಳನ್ನು ಈತ ಬರೆದಿದ್ದಾನೆ. ಹಸುವನ್ನು ಭಾರತದಲ್ಲಿ ಪೂಜಿಸುವ ವಿಷಯ analyse ಮಾಡಿದರೆ ಭಾರತ monsoon ಆಧಾರಿತ ಕೃಷಿಯ ಮೇಲೆ ಅವಲಂಬಿತವಾಗಿದ್ದು. monsoon ಮಳೆ ಬಂದಾಗ ತಕ್ಷಣ  ಭೂಮಿ ಉಳುಮೆ ಮಾಡಿಮಳೆ ಬಂದಾಗ ತಕ್ಷಣ  ಭೂಮಿ ಉಳುಮೆ ಮಾಡಿ ಸಿದ್ಧಪಡಿಸಿಕೊಳ್ಳಬೇಕು.ಅದಕ್ಕೆ ಜೋಡೆತ್ತುಗಳು ಬೇಕು. ಎತ್ತುಗಳನ್ನು ಕೊಳ್ಳಲು ಕಷ್ಟ. ಅದೇ ಹಸು ಇದ್ದರೆ ವರ್ಷಕ್ಕೊಂದು ಕರು ಹಾಕುತ್ತೆ, ಅದರಲ್ಲಿನ ಗಂಡು ಕರುಗಳು ಬೇಸಾಯಕ್ಕೆ ಉಪಯೋಗಿಸಿ ಕೊಳ್ಳಬಹುದು. ಒಂದು ವೇಳೆ ಅವನಲ್ಲಿ ಎತ್ತುಗಳು ಇಲ್ಲಾ ಅಂದರೆ ಆ ವರ್ಷ ಅವನ ಕುಟುಂಬ ಆಹಾರವಿಲ್ಲದೆ ಬಳಲಬೇಕಾಗುತ್ತದೆ, ಜೊತೆಗೆ ಅವಮಾನ. ಹಾಗೆಯೇ ನಾವು ನಮ್ಮ ಆಹಾರದಲ್ಲಿ ಪ್ರೊಟೀನ್ ನ್ನು ಹಾಲು ಮೊಸರು ತುಪ್ಪದಿಂದ ಪೂರೈಸಿಕೊಂಡರೆ  ಪಾಶ್ಚಿಮಾತ್ಯರು ಮಾಂಸದಿಂದ ಪೂರೈಸಿಕೊಳ್ಳುತ್ತಾರೆ. ನಮ್ಮಲ್ಲಿ 85% ಮಾಂಸಹಾರಿಗಳೆಂದು ಕರೆಸಿಕೊಂಡರೂ ಅವರೆಲ್ಲ ಪ್ರತಿನಿತ್ಯ ಮಂಸ ಸೇವಿಸುವುದಿಲ್ಲ, ಯಾವಾಗಲಾದರೊಮ್ಮೆ ಸೇವಿಸುತ್ತಾರೆ‌  ಆದ್ದರಿಂದ ಅವರೆಲ್ಲ ಸಸ್ಯಹಾರಿಗಳು ಎನ್ನಬಹುದು.  ಅದು ಕೊಡುವ ಗೊಬ್ಬರ 83 ಕೋಟಿ ಟನ್ಗಳಷ್ಟು. ಇಷ್ಟೆಲ್ಲ ಉಪಯೋಗಿ ಹಸು ಏನು ಬಯಸುತ್ತೆ? ಸೊಪ್ಪು, ತಿಂದೆಸೆದ  ಆಹಾರ,  ಒಣಹುಲ್ಲು ಇತ್ಯಾದಿ. ಹೀಗೆ ನಮ್ಮಿಂದ ಏನನ್ನೂ ಜಾಸ್ತಿ ಖರ್ಚು ಮಾಡಿಸದ  ಎಲ್ಲವನ್ನೂ ಕೊಡುವ ಹಸು ಭಾರತದಲ್ಲಿ ದೈವಿಕ ಪ್ರಿಯ. ವೇದಕಾಲದಲ್ಲಿ ಹಸು ತಿನ್ನುತ್ತಿದ್ದರೂ ಕ್ರಮೇಣ ಜನಸಂಖ್ಯೆ ಬೆಳೆದಂತೆ, ಗಂಗಾನದಿಯ ತೀರಕ್ಕೆ ಬಂದು ದಕ್ಷಿಣಕ್ಕೆ ವ್ಯಾಪಿಸಿದ ಮನುಷ್ಯ ಕುಲ, ಮೂಲ ಕಸುಬು monsoon ಆಧಾರಿತ  ಕೃಷಿಯಾಯಿತು.
ನಿಜವಾದ ಧಾರ್ಮಿಕ ನಂಬಿಕೆ ಗಳಿಗೆ ಬೆಂಬಲ ಸಿಗಬೇಕು. ಸಮಾಜಮುಖಿಯಲ್ಲದ ನಂಬಿಕೆ ಗಳಿಂದ ಬೇರ್ಪಡಿಸದೇ ಹೋದರೆ ದೊಡ್ಡ ಅಪಾಯವಿದೆ ಎಂಬ ಸತ್ಯ ಮುಂದಿಡುತ್ತಾ
ಪವಾಡಗಳ ಬಗ್ಗೆ ಮಾತನಾಡಿದರು.

ನಂಬಿಕೆ ಗಳಲ್ಲಿ ಸತ್ಯ, ಸಾಂದರ್ಭಿಕ ಮತ್ತು ಸುಳ್ಳು ನಂಬಿಕೆಗಳಂತೆ ಪವಾಡಗಳಲ್ಲೂ ಕಾಣಬಹುದು. ಇದು ಕೇವಲ ಒಂದು ಮ್ಯಾಜಿಕ್ ಅಲ್ಲ. ಯಾವುದೋ ಒಂದು ಘಟನೆ/ಚರಿತ್ರೆಯ ಒಂದು ಭಾಗವನ್ನು ತುಂಬಲು ಜನಾಂಗಕ್ಕೆ ಒಂದು telescope ರೀತಿ ಸಮ್ಮೋಹನ ಮಾಡುವ ಒಂದು ಕ್ರಮ. ಅದಕ್ಕೆ ಉದಾಹರಣೆ. ಅಲಮೇಲಮ್ಮನ ಪವಾಡ. ಗಂಡನಿಲ್ಲದ ಆಕೆ ತನ್ನ  ಒಡವೆಗಳನ್ನು ದೇವರಿಗೆ ಹಾಕುತ್ತಿದ್ದದು, ಆ ಒಡವೆ ರಾಜ್ಯಕ್ಕೆ ಸೇರಬೇಕು ಅಂತ ರಾಜನಿಗೆ ಯಾರೋ ಕಿವಿ ಊದಿದರು. ರಾಜನ ಆಜ್ಞೆ ಯಂತೆ ಸೈನಿಕರು ಅವುಗಳನ್ನು ವಶಪಡಿಸಿಕೊಳ್ಳಲು ಬಂದಾಗ ಆಕೆ ತಲಕಾವೇರಿ ಗೆ ಹೋದಳು, ಅಲ್ಲಿಯೂ ಹಿಂಬಾಲಿಸಿದಾಗ ಆಕೆ  ನೊಂದು ಕಾವೇರಿಗೆ ಹಾರಿಕೊಂಡಿದ್ದು, ಹಾರಿಕೊಳ್ಳುವಾಗ ಹಾಕಿದ 3 ಶಾಪಗಳು. 1) ತಲಕಾಡು ಮರಳಾಗಲಿ. 2) ಮಾಲಂಗಿ ಮಡುವಾಗಲಿ 3) ಮೈಸೂರು ಅರಸರಿಗೆ ಮಕ್ಕಳಾಗದೆ ಹೋಗಲಿ. ಈ ಶಾಪಗಳ  ಬಗ್ಗೆ ನಾನು ಸಂಶೋಧನೆ ಮಾಡಿದೆ‌. ಅದರ ಬಗ್ಗೆ "ಮರಳ ತೆರೆಯೊಳಗೆ" ಅಂತ ಒಂದು ಕಥೆಯನ್ನೂ ಬರೆದಿರುವೆ, ತಾವುಗಳು ಓದಬಹುದು ಎನ್ನುತ್ತಾ  ಅಲಮೇಲಮ್ಮನ  ಕಾಲ ಕ್ರಿ.ಶ. 1610, ಇದಕ್ಕೂ ಮಂಚೆ ಅಲ್ಲಿ ಮರಳು ಇರಬಾರದಿತ್ತು. ನಾನು ಕೆಲವು ಪ್ರಾಶ್ಯಸಂಶೋಧನಾ ವಿಜ್ಞಾನಿಗಳ ಜೊತೆ ಹೋಗಿ ಅವರು ತೋಡುತ್ತಿದ್ದ ಕುಳಿಗಳಲ್ಲಿ ಸಂಶೋಧನೆ ಮಾಡಿ ನೋಡಿದಾಗ ಕ್ರಿ.ಶ. 1400 ರಿಂದಲೇ ಮರಳು ಅಲ್ಲಿ ಸೇರ್ತಾ ಇತ್ತು ಎನ್ನುವ ವಾಸ್ತವ ತಿಳಿಯಿತು.
ಎರಡನೆಯದು ಮೈಸೂರು ಅರಸರಿಗೆ ಮಕ್ಕಳಾಗದಿರಲಿ ವಿಷಯವಾಗಿ ಸತ್ಯಾಸತ್ಯತೆ ಪರಿಶೀಲಿಸಲು ನಾನು ಮೈಸೂರು ಅರಮನೆಗೆ ಹೋಗಿದ್ದೆ, ಅಲ್ಲಿ ಪ್ರಾಶ್ಯ ಸಂಶೋಧನಾ ಕೇಂದ್ರದಲ್ಲಿ ಒಂದಷ್ಟು ಮಾಹಿತಿ ಸಿಗುತ್ತದೆ. ಯಾರೋ ಪುಣ್ಯಾತ್ಮರು ಅದು ಹೇಗೆ ಪ್ರಿಂಟ್ ಮಾಡಾದರೋ ಗೊತ್ತಿಲ್ಲ. ದೊಡ್ಡ sheet ನಲ್ಲಿ ಮೈಸೂರು ಅರಸರ ಎಲ್ಲಾ ತಲೆಮಾರಿನ ಕಥೆಯನ್ನು ಪಟ್ಟಿಮಾಡಿದ್ದಾರೆ. ಯಾವ ರಾಜ? ಎಷ್ಟು ಹೆಂಡತಿಯರು? ಎಷ್ಟು ಮಕ್ಕಳು? ಯಾರು ಉಳಿದರು? ಯಾರು ಉಳಿಯಲಿಲ್ಲ?  ಹೀಗೆ ನನಗೆ ಆಶ್ಚರ್ಯ ಆಗಿದ್ದು ಆ ಪಟ್ಟಿ ನೋಡಿದಾಗ ಪ್ರತಿ ರಾಜನಿಗೂ ಸರಾಸರಿ ಇದ್ದ ಹೆಂಡತಿಯರ ಸಂಖ್ಯೆ! ಇದರನ್ವಯ ರಾಜರಿಗೆ 3 ರೀತಿಯ ಹೆಂಡತಿಯರು. ಪಟ್ಟದರಾಣಿಯರು 1-3, ಕಲಾರಾಣಿಯರು ಮತ್ತು ಇತರೆ ರಾಣಿಯರು. ಸರಾಸರಿ ಒಬ್ಬ ರಾಜನಿಗೆ 65 ಜನ ಹೆಂಡತಿಯರು.  ರಾಣಿ ಅಂದಾಕ್ಷಣ ಅವಳಿಗೊಂದು ಹಕ್ಕು ಸಿಗುತ್ತೆ, She can demand with presence of king by her side. ಕೆಲವು ರಾಜರಿಗೆ 125 ಜನ ಹೆಂಡತಿಯರು. 65 ಹೆಂಡತಿಯರು ಅಂದುಕೊಂಡರೂ ವರ್ಷದ 365 ದಿನದಲ್ಲಿ ಸುಮಾರು 165 ದಿವಸ ರಾಜ ರಾಜನಾಗಿ ಇರಲು ಸಾಧ್ಯವಿಲ್ಲ. ಅವನು ಗಡಿಗೆ ಹೋಗಬೇಕು. ರಾಜ್ಯದ ಇತರೆ ಸಮಸ್ಯೆಗಳನ್ನು ನಿಭಾಯಿಸಬೇಕು. ಇನ್ನು ಉಳಿದ 200 ದಿನ, ಒಂದು ಹೆಂಡತಿಯ  ಹತ್ತಿರ ವರ್ಷಕ್ಕೆ 3 ದಿನ ಕಳೆದರೂ ಆಕೆ ಗರ್ಭಿಣಿ ಯಾಗುವ ಅವಕಾಶ ತುಂಬಾ ಕಡಿಮೆ. ಪಟ್ಟದ ರಾಣಿಗೆ ಗಂಡು ಮಗುವಾದರೆ ಮಾತ್ರ ಸಂತತಿಯ ಲೆಕ್ಕ. ಆ ವಂಶವೃಕ್ಷ ಆಧಾರದ ಮೇಲೆ ಎಷ್ಟು ಬಾರಿ ಮಕ್ಕಳಾಗಿದ್ದಾರೆ ಅಂತ ನಾನು ಪಟ್ಟಿ ಮಾಡಿದೆ. ಅದರನ್ವಯ
19 ತಲೆಮಾರು
9 ತಲೆಮಾರಿಗೆ ಮಕ್ಕಳು ಆಗಿದ್ದಾರೆ
10 ತಲೆಮಾರಿಗೆ ಗಂಡು ಮಕ್ಕಳಾಗಿಲ್ಲ
ಇದರಿಂದ ಈ ಶಾಪ ಸತ್ಯಕ್ಕೆ ದೂರವಾದದ್ದು ಎಂಬುದು ನಿರೂಪಿಸುತ್ತದೆ.

ಈ ಮೂರು ಶಾಪಗಳ ವಿಷಯವಾಗಿ ಮಾತನಾಡುವುದಾದರೆ  ಯಾವ ನದಿಯಲ್ಲಿ ಮಡು ಇರುವುದಿಲ್ಲ! ಅಲ್ಲಿ ಕ್ರಿ.ಶ 1400 ರಲ್ಲಿಯೇ ಮರಳು accumulate ಆಗ್ತಾ ಬಂದಿದೆ. ಆಕೆ ಶಾಪ ಕೊಟ್ಟಿದ್ದು 1610 ರಲ್ಲಿ . ಬೇರೆ ಯಾವುದೋ ಕಾರಣದಿಂದ ಮೊದಲೇ ಮರಳು ಸಂಗ್ರಹ ಆಗ್ತಾ ಇತ್ತು. ಆಕೆಯ ಶಾಪದಿಂದಲೇ ಮಡುವಾಯಿತು ಎಂದು ನಂಬಲು ಸಾಧ್ಯವಿಲ್ಲ.
ಮೈಸೂರು ಅರಸರಿಗೆ ಮಕ್ಕಳಾಗದೇ ಹೋಗಲಿ ಇದು ಅರ್ಧ ಸತ್ಯ. ಅಂದರೆ ಪವಾಡಗಳ ಮೂರು ಭಾಗಗಳಲ್ಲಿ ಒಂದು ಸತ್ಯ ತಲಕಾಡು ಮರಳಾಗುತ್ತಿರುವುದು‌. ತಲಕಾಡು ಅರಸರ ಎರಡನೆಯ ರಾಜಧಾನಿಯಾಗಿತ್ತು. ಅದು ಎಕನಾಮಿಕಲ್ ಕ್ಯಾಪ್ಟಲ್ ಕೂಡ ಆಗಿತ್ತು. ಒಬ್ಬ ಬುದ್ಧಿವಂತರು ಇಲ್ಲಿ ಮನೆ ಕಟ್ಟಬೇಡಿ ಮರಳು ಸೇರ್ತಾ ಇದೆ, ಇನ್ನು ಜಾಸ್ತಿ ದಿವಸ ಉಳಿಯಲ್ಲ. ಶತಮಾನಗಳು ಕಳೆದ ಹಾಗೆ ಈ ನಗರ ಹಾಳಾಗುತ್ತೆ ಎನ್ನುವ ಸತ್ಯವನ್ನು ಸಾಮಾನ್ಯ ಜನರಿಗೆ ಹೇಳಬೇಕಾದರೆ ಬಹಳ ಕಷ್ಟ. ಜೊತೆಗೆ ರಾಜ ಅಲಮೇಲಮ್ಮನಿಗೆ ಹೀಗೆ ಮಾಡಿದ್ದಾನೆ ,.ಆ ದೃಷ್ಟತನವನ್ನು ಮುಂದಿನ ಜನಾಂಗಕ್ಕೆ ಒಂದು ಚರಿತ್ರೆಯಾಗಿ ತೆಗೆದುಕೊಂಡು ಹೋಗಬೇಕು. ಇವರು ಕಥೆ ಕಟ್ಟಿ ಹೇಳಿದಂತೆ  ಇವೆಲ್ಲವನ್ನು ಸೇರಿಸೋಕೆ ಅಲ್ಲೊಂದು ಮಡುವು ಹುಟ್ಟಿಸಬೇಕು. ಹೀಗೆ ಯಾರೋ ಒಬ್ಬ ಬುದ್ಧಿವಂತರು ಒಂದು ಶಾಪದ ಕಥೆಯನ್ನು ಕಟ್ಟಿ ನಮ್ಮ ಜನಾಂಗದವರೆಗೂ ಹರಿಸಿಕೊಂಡು ಬಂದಿರತಕ್ಕ ಕಥೆಯೇ ಈ ಪವಾಡದ ಕಥೆ. ವಿಶೇಷವೆಂದರೆ ಈ ಪವಾಡದಲ್ಲಿ 3 ಭಾಗ ಇದೆ ಅಂತ ಹೇಳಿದೆನಲ್ಲ. ಒಂದು ಸತ್ಯ ಆ ಸತ್ಯವನ್ನು ಮುಂದಿನ ಜನಾಂಗಕ್ಕೆ ತೆಗೆದುಕೊಂಡು ಹೋಗಬೇಕು. ಇವತ್ತಿಗೂ ನೋಡುತ್ತೇವೆ ಟನ್ ಗಟ್ಟಲೇ ಮರಳು ಅಲ್ಲಿ ಸೇರಿದೆಯಲ್ಲ! ಯಾಕೆ ಸೇರಿತು ಅನ್ನುವುದಕ್ಕೆ ಕೂಡ ನಾವು ಸಂಶೋಧನೆ ಮಾಡಿದ್ದೇವೆ. 1335ರಲ್ಲಿ ವಿಜಯನಗರದ ಒಬ್ಬ ಮಂತ್ರಿ ಅಲ್ಲಿ ಒಂದು ಅಣೆಕಟ್ಟು ಕಟ್ಟುತ್ತಾನೆ. ತಲಕಾಡಿನ ಮೇಲೆ ಕಾವೇರಿ ನದಿಗೆ ಯಾಕೆ ಕಟ್ಟಿದ ಅಂದರೆ ತಲಕಾಡು ಮುಖ್ಯ  ನಗರ, ಅಲ್ಲಿ ಕೃಷಿ ಮಾಡ್ತಾ ಇದ್ದರು. ಆ ಕೃಷಿಗೆ ಮತ್ತು ರಾಜಧಾನಿಗೆ ನೀರು ಒದಗಿಸಬೇಕು ಅಂತ ಅಣೆಕಟ್ಟು ಕಟ್ಟಿ ಒಂದು ಕಾಲುವೆ ತೆಗೆಯುತ್ತಾನೆ. ಅಣೆಕಟ್ಟು ಕಟ್ಟಿದಾಗ ಮುಂದೆ ನದಿ ಸಣ್ಣದಾಗುತ್ತದೆ. ಅದರ ಎರಡೂ ಕಡೆಯ ಪಾತ್ರಗಳು ತೆರೆದುಕೊಂಡುಬಿಡುತ್ತವೆ . ಪಾತ್ರಗಳಲ್ಲಿ ಮರಳು ಇರುತ್ತೆ, ಅಲ್ಲಿ ವಿಶೇಷವಾಗಿ ದಕ್ಷಿಣ-ಪಶ್ಚಿಮ ದಿಂದ ಗಾಳಿ ಬೀಸುತ್ತಿರುತ್ತದೆ. ಇದರಿಂದ ನದಿ ಪಾತ್ರದಲ್ಲಿದ್ದ ಮರಳನ್ನು ತಲಕಾಡಿನ ಮೇಲೆ ಹಾಕ್ತಾ ಇತ್ತು. ವಿಜ್ಞಾನಿಗಳು 1930 ರಲ್ಲಿಯೇ ಇದನ್ನು ಕಂಡುಹಿಡಿದರು. ಪ್ರತಿಕ್ಷಣ ಆ ನದಿಯಿಂದ ಮರಳು ಪ್ರತಿದಿನಕ್ಕೆ 10 ಅಡಿ ಚಲಿಸುತ್ತೆ ಅಂತ. ದಿನಕ್ಕೆ ಒಂದು ಕಣ 10 ಅಡಿ ಚಲಿಸಿದರೆ ಶತಮಾನಗಳ ಕಾಲ ಎಷ್ಟೆಷ್ಟು ಮರಳು ಅಲ್ಲಿ ಹೋಗಿರಬಹುದು! ಅಲ್ಲಿ ಬಂದಿರೋದೆಲ್ಲ ಧೂಳು ಮರಳು.  ತಲಕಾಡಿನ ಮರಳು ಬರೀ ಸಿಮೆಂಟ್ ತರಹ, ಯಾವ construct ಕೆಲಸಕ್ಕೂ ಆ ಮಣ್ಣು ಬೇಕಾಗಿಲ್ಲ. ಆದರೆ ನದಿ ದಡದಲ್ಲಿ ಉತ್ತಮ ಮರಳು ಇದ್ದು ಅಲ್ಲಿ ಸದಾ ಲಾರಿಗಳು ನಿಂತಿರುತ್ತವೆ. ಹಾಗೆ ತಲಕಾಡಿಗೆ ಗಾಳಿಯಿಂದ ತೂರಿಕೊಂಡು ಬಂದ ಧೂಳು ಮರಳು, ಅದು ನದಿಗೆ ಅಣೆಕಟ್ಟು ಕಟ್ಟಿದ್ದರಿಂದ ಆಗಿರುವುದು, ಆ ಸತ್ಯವನ್ನು ಮುಂದಿನ ಜನಾಂಗಕ್ಕೆ ಮುಟ್ಟಿಸಿ. ಅಲ್ಲಿ ರಾಜಧಾನಿಯಲ್ಲಿ ಯಾರೂ ಮನೆ ಕಟ್ಟದಿರಲಿ ಅನ್ನುವ ಒಂದು ಸೂಚನೆ ಕೊಡಲು ಮೊದಲನೆಯ ಸತ್ಯ ಹುಟ್ಟಿಕೊಂಡಿದೆ. ಎರಡನೆಯ ಸತ್ಯ ರಾಜ ಹೀಗೆ ಮಾಡಿದನಲ್ಲ ಅನ್ನುವ ಕೋಪಕ್ಕೆ ಅಥವಾ ಚರಿತ್ರೆಯ ಭಾಗವನ್ನು ಮುಂದಿನ ಜನಾಂಗಕ್ಕೆ ತೆಗೆದುಕೊಂಡು ಹೋಗುವುದಕ್ಕೆ ಅರ್ಧ ಸತ್ಯ ಹುಟ್ಟಿಕೊಂಡಿದೆ.  ಮೂರನೆಯ ಸತ್ಯ ಈ ಪವಾಡ ಕೇವಲ ಅಲಮೇಲಮ್ಮನದು ಅಲ್ಲ,ಇಂತಹ ಉದಾಹರಣೆಗಳು ಬೇಕಾದಷ್ಟಿವೆ. 

ಕೊನೆಯದಾಗಿ ನಮ್ಮ ಧಾರ್ಮಿಕ ಹೇಳಿಕೆಗಳು . ಇದು ನನ್ನ ಸಂಶೋಧನೆಯಲ್ಲಿ ನಾನು ಕಂಡ ಧಾರ್ಮಿಕ ಸತ್ಯ. ನಿಮಗೆಲ್ಲಾ ಗೊತ್ತಿರುವ ಹಾಗೆ ಪ್ರತಿಹಳ್ಳಿಯಲ್ಲೂ ಒಂದು ಅರಳಿಕಟ್ಟೆ ಇರುತ್ತದೆ. ಹೆಣ್ಣು ಮಕ್ಕಳು ಸುತ್ತುತ್ತಾರೆ, ಪೂಜೆ ಮಾಡುತ್ತಾರೆ. ಅರಳೀ ಮರದಿಂದ oxygen ಜಾಸ್ತಿ ಸಿಗುತ್ತೆ ಎಂಬುದು. ಸಾಮಾನ್ಯ ನಂಬಿಕೆ. ಇದು ಮತ್ತೊಂದು danger ಸುಳ್ಳು ಹುಟ್ಟುಹಾಕಿದ್ದಾರೆ. ಎಲ್ಲಾ ಮರಗಳು oxygen ಕೊಡ್ತಾವೆ.  ಅರಳೀಕಟ್ಟೆಯನ್ನು ಬಹಳ ಪ್ರಮುಖವಾದ ಉದ್ದೇಶದಿಂದ ನಮ್ಮ ಪೂರ್ವಿಕರು ಮಾಡಿದ್ದಾರೆ ಅಂತ ಹೇಳಲು ಇಷ್ಟ ಪಡುತ್ತೇನೆ. ನನ್ನ ಮಗಳು ಫ್ರೈಮರಿ ಶಾಲೆಯಲ್ಲಿ ಓದುವಾಗ 3 level ಶ್ಲೋಕ competition ಇತ್ತು. ಕೆಲವು ಶ್ಲೋಕ ಕಲಿತಿದ್ದಳು ಮತ್ತಷ್ಟು ಹೇಳಿಕೊಡಲು ಓದುವಾಗ ಒಂದು ಶ್ಲೋಕ "ಅಶ್ವತ್ಥಃ ಸರ್ವವೃಕ್ಷಾಣಾಂ ದೇವರ್ಷೀಣಾಂ ಚ ನಾರದಃ|
ಗಂಧರ್ವಾಣಾಂ ಚಿತ್ರರಥಃ ಸಿದ್ದಾನಾಂ ಕಪಿಲೋ ಮುನಿಃ|| "
...‌‌ಎಲ್ಲಾ ಮರಗಳಲ್ಲಿ ಅಶ್ವತ್ಥ ವೃಕ್ಷ ಹೇಗೆ ಶ್ರೇಷ್ಠವೊ, ಎಲ್ಲಾ ಋಷಿಗಳಲ್ಲಿ ನಾರದರು ಹೇಗೆ ಶ್ರೇಷ್ಠರೋ ಹಾಗೆ ನಾನು ಅಂತ ಕೃಷ್ಣ ಹೇಳುತ್ತಾನೆ. ಇದು ನನಗೆ ಆಶ್ಚರ್ಯ ವಾಯಿತು. ಅದೇ ಸಮಯದಲ್ಲಿ ನಾನು ಆ ವೃಕ್ಷದ ಬಗ್ಗೆ ಸಂಶೋಧನೆ ಮಾಡ್ತಾ ಇದ್ದೆ. ಅದೇ ವೇಳೆಗೆ ಅಫ್ಘಾನಿಸ್ತಾನದ ನನ್ನ research student ಗೆ ಇದರ ಬಗ್ಗೆ research ಮಾಡಲು ಹೇಳಿದ್ದೆ. ಅವನು ಸಾಮಾಜಿಕ ಅಭಿಪ್ರಾಯ, ಜನರ ನಂಬಿಕೆ, ವಿಜ್ಞಾನ ಏನು ಹೇಳುತ್ತೆ, ಬೇರೆ ವಿಜ್ಞಾನಿಗಳು ಏನು ಹೇಳಿದ್ದಾರೆ ಎಂಬ  ಸಮಗ್ರ ವಿಷಯ ಸಂಗ್ರಹಿಸಿ ಒಂದು review ಬರೆದಿದ್ದ. ಅವನು ಆರಂಭದಲ್ಲಿ "In Afghanistan phythm is revered as God" ಅಂತ. ನನಗೆ ಆಶ್ಚರ್ಯ ವಾಯಿತು!  ಅಲ್ಲಿ ಈ ವೃಕ್ಷವನ್ನು ದೇವರ ಹಾಗೆ ಕಾಣುತ್ತಾರಾ! ಅನ್ನುವ ನನ್ನ ಪ್ರಶ್ನೆಗೆ ಆತ it is in kuran ಎಂದ. ವೇದಗಳಲ್ಲಿ ಉಲ್ಲೇಖ ಇರುವಂತೆ ಪ್ರಪಂಚದಾದ್ಯಂತ tropical countries ನಲ್ಲಿ ಅಶ್ವತ್ಥ ವೃಕ್ಷವು ಜನರ ನಂಬಿಕೆಯಲ್ಲಿ ಪ್ರಾಮುಖ್ಯತೆ ಪಡೆದುಕೊಂಡಿದೆ.  ಈ ಮರ ಒಂದು ಸಂಕೀರ್ಣವಾದ ಪರಾಗಕ್ರಿಯೆಯ ಒಂದು ಚಕ್ರದಲ್ಲಿ ಸಿಕ್ಕಿಹಾಕಿಕೊಂಡಿದೆ. ಅದರ ಹಣ್ಣು (ಹಣ್ಣುಗಳ ಸಂಗ್ರಹ), ಅದರ ಪರಾಗಕ್ರಿಯೆ ನಡೆಯುವುದು ಒಂದು ಸಣ್ಣ ಕಣಜದ ಮೂಲಕ. ಅದು ಎಷ್ಟು ಚಿಕ್ಕದಾಗಿರುತ್ತದೆ ಅಂದರೆ ನೀವು ನಿಮ್ಮ ಪೆನ್ನಿನ ನಿಬ್ಬಿನ ಮೇಲೆ ಎರಡು ಮೂರು ಕೀಟಗಳನ್ನಿಡಬಹುದು, ಅಷ್ಟು ಸಣ್ಣ ಕೀಟ, ಅದು ಹೆಣ್ಣು ಕೀಟ. ಆ ಹಣ್ಣಿನ ಒಳಗಡೆ ಮೂಲತಃ ಇರುವುದು ಹೆಣ್ಣು ಹೂವುಗಳು. ಆ ಕೀಟ ಆ ಹಣ್ಣಿನ ಮೇಲೆ ಕುಳಿತುಕೊಂಡಾಗ ಅದನ್ನು microscope ನಲ್ಲಿ ಇಟ್ಟು ನೋಡಿದಾಗ, ಅದರ ಎದೆಯಲ್ಲಿ ಎರಡು ಬುಟ್ಟಿಗಳಿರುತ್ತವೆ. ಆ ಬುಟ್ಟಿಗಳ ತುಂಬ ಪರಾಗ ರೇಣುಗಳನ್ನು ತುಂಬಿಸಿಕೊಂಡಿರುತ್ತದೆ. ಆ ಕೀಟ ಅಲ್ಲಿ ಕುಳಿತುಕೊಳ್ಳುತ್ತೆ. ಆ ಹಣ್ಣಿನಲ್ಲಿ ಒಂದು ಸಣ್ಣ ತೂತಿರುತ್ತದೆ. ಆ ರಂಧ್ರದ ಮೂಲಕ ಒಳಗೆ ಆ ಕೀಟ ಹೋಗುತ್ತೆ. ಹೋಗಿ ಅಲ್ಲಿ ಪರಾಗ 
ರೇಣುಗಳನ್ನು ಎಲ್ಲಾ ಹೂವುಗಳ ಮೇಲೆ ಚೆಲ್ಲುತ್ತೆ. ಕೆಲವು ಹೂವುಗಳು ಪರಾಗ ಕ್ರಿಯೆಗೆ ಒಳಪಡುತ್ತವೆ.  ಒಂದರ ಜೊತೆಗೆ ಮತ್ತೊಂದು ಕೆಲಸ ಮಾಡುತ್ತೆ. ತನ್ನ ಹಿಂದುಗಡೆ ಮೊಟ್ಟೆ ಇಡುವ ಒಂದು ಕೊಕ್ಕು ಇರುತ್ತೆ, ಅದರ ಮೂಲಕ ಅಲ್ಲಲ್ಲಿ ಮೊಟ್ಟೆ ಇಡುತ್ತೆ. ಕೆಲವು ಹೂವುಗಳಲ್ಲಿ ಆ ಮೊಟ್ಟೆ ಇಡುವುದರಿಂದ ಹೊಸ ಕಣಜಗಳು ಬೆಳೆಯುತ್ತವೆ. ಕೆಲವು ಹೂವುಗಳಲ್ಲಿ ಪರಾಗಕ್ರಿಯೆ ಆಗುವುದರಿಂದ ಬೀಜಗಳು ಬರುತ್ತವೆ.

ಇಲ್ಲಿ ಲಾಭ-ನಷ್ಟ ನೋಡಿ, ಮರಕ್ಕೆ ಲಾಭ ಆ ಪರಾಗ ಕೀಟ ಪರಾಗ ರೇಣುಗಳನ್ನು ತಂದು ಪರಾಗಕ್ರಿಯೆ ಮಾಡುತ್ತೆ. ಮರ ಪ್ರತಿಫಲವಾಗಿ ಆ ಕೀಟಕ್ಕೆ ತನ್ನ ಮಕ್ಕಳನ್ನು ಬೆಳೆಸಿಕೊಳ್ಳಲು ಆಶ್ರಯ ನೀಡುತ್ತೆ.ಇದು  ಅವೆರಡರ ನಡುವೆ ಇರುವ ಸಂಬಂಧ. ವಿಚಿತ್ರವೆಂದರೆ ಈ ಪರಾಗ ಕೀಟ ಒಳಗಡೆ ಹೋಗಿ ಮೊಟ್ಟೆ ಇಟ್ಟ ಒಂದು ತಿಂಗಳಲ್ಲಿ ಹೊಸ ತಲೆಮಾರು ಬರುತ್ತೆ. ಅವೆಲ್ಲವುಗಳು ಹೆಣ್ಣುಗಳು. ಅದರಲ್ಲಿ ಬರುವ ಕೆಲವೇ ಗಂಡುಗಳು ಒಳಗಡೆಯೆ ಹೆಣ್ಣುಗಳ ಜೊತೆ ಮೀಟ್ ಮಾಡಿ ಸತ್ತುಹೋಗುತ್ತವೆ. ಗಂಡು ಯಾವತ್ತೂ ಕೂಡ ಸೂರನ್ನೇ ಕಾಣಲ್ಲ. (ಸರ್, ನೀವೆಲ್ಲ ಒಂದು ಚಪ್ಪಾಳೆ ತಟ್ಟಬೇಕು. ಯಾಕೆಂದರೆ  ಇಲ್ಲಿ ಗಂಡುಗಳು ತ್ಯಾಗಮಯಿ ಜೀವಿಗಳು, ತಾವು ಸೂರ್ಯನನ್ನೇ ನೋಡದೆ, ವಂಶೋದ್ಧಾರಕ್ಕೋಸ್ಕರ ಒಳಗಡೆಯೆ ಇದ್ದುಕೊಂಡು ಸತ್ತುಹೋಗುತ್ತವೆ - ಸಭೆಯಲ್ಲಿ ಚಪ್ಪಾಳೆ ಜೊತೆಗೆ ನಗುವಿನ ಅಲೆ ತೇಲಿತು). ಮತ್ತೊಂದು ಒಳ್ಳೇ ಕೆಲಸ ಮಾಡಬೇಕು ಆ ಗಂಡು ಕೀಟಗಳು ಹಣ್ಣು ತೂತು ಮಾಡಿ ಹೆಣ್ಣು ಕೀಟಗಳನ್ನು 'ಹೋಗಮ್ಮಾ' ಅಂತ ಕಳುಹಿಸಿ ಒಳಗಡೆ ಸತ್ತುಹೋಗುತ್ತವೆ. ಕೀಟಗಳು ಆಚೆ ಬರುತ್ತವೆ, ಅದಕ್ಕೂ ಮುಂಚೆ ಈಗ ಗಂಡು ಹೂವುಗಳು ಬಂದು ಹೆಣ್ಣು ಹೂವುಗಳ ಮೇಲೆ ಪರಾಗ ಗಂಧ ಉತ್ಪತ್ತಿ ಮಾಡುತ್ತವೆ (ಸಂಭೋಗ ಆಗಿದೆ) ಹೆಣ್ಣು ತನ್ನ ಬುಟ್ಟಿಗಳಲ್ಲಿ ತುಂಬಿಸಿಕೊಂಡು ಅವು  ಹೊರಗಡೆ ಬರುತ್ತವೆ. ಹಾರಿಬಂದು ಮೊಟ್ಟೆ ಇಟ್ಟ 25-30 ದಿವಸದಲ್ಲಿ ಹೊಸ ಕಣಜಗಳು ಬರುತ್ತವೆ. ಈಗ ಯೋಚನೆ ಮಾಡಿ, ಹೊಸ ಪರಾಗ ಕೀಟಗಳು ಬಂದಿದ್ದಾವೆ. ಅವಕ್ಕೆ ಹೊಸ ಕಾಯಿಗಳು ಸಿಗಬೇಕು. ಎಲ್ಲೋ ಒಂದು ಕಡೆ ಆ ಅರಳೀ ಮರ ಕಾಯಿಗಳನ್ನು ಬಿಡ್ತಾ ಇರಬೇಕು. ಹೀಗೆ ಆ ಪರಾಗ ಕೀಟಗಳ ಚಕ್ರವನ್ನು ಸಂಪೂರ್ಣವಾಗಿ ಕಡಿದು ಹೋಗದ ಹಾಗೆ ಮುಂದುವರಿಸಬೇಕು ಅಂದರೆ ಪ್ರತಿ ತಿಂಗಳು ಕೂಡ ಯಾವುದೋ ಒಂದು ಮರದಲ್ಲಿ ಎಲ್ಲೋ ಒಂದು ಕಡೆ ಹೊಸ ಕಾಯಿಗಳು, ಹೊಸ ಹಣ್ಣುಗಳು ಬರ್ತಾನೇ ಇರಬೇಕು.  ಆದ ಕಾರಣ ಈ ಅರಳೀಮರದಿಂದ, ಪರಿಸರದಲ್ಲಿರುವ ಸದಾ ಎಲ್ಲಾ ಪ್ರಾಣಿಗಳಿಗೂ ಆಹಾರ ಸಿಗ್ತಾ ಇರಬೇಕು. ಕಾರಣ ಪರಾಗಕ್ರಿಯೆ ಪರಿಣಾಮ. ಅಕಾಲದಲ್ಲೂ ಯಾವುದೇ ಮರದಲ್ಲಿ ಹಣ್ಣು ಇಲ್ಲದಿದ್ರೂ ಹಣ್ಣು ಬಿಡುತ್ತೆ ಈ ಮರ. ಪಕ್ಷಿಗಳು, ಅಳಿಲುಗಳು, ಕೋತಿಗಳು ಅಲ್ಲದೆ ಆನೆಗಳು ಕೂಡ ಆ ಹಣ್ಣು ತಿಂದು ಬದುಕುತ್ತವೆ. ಅಕಸ್ಮಾತ್ ಒಂದು ಪರಿಸರದಲ್ಲಿ ಅಶ್ವತ್ಥ  ಮರ ಇರಲಿಲ್ಲ ಅಂದಿದ್ದರೆ ಈ ಎಲ್ಲಾ ಪ್ರಾಣಿಗಳಿಗೂ ಅಕಾಲದಲ್ಲಿ ಆಹಾರ ಸಿಗಲಿಲ್ಲ ಅಂದರೆ  ಇಡೀ ಪ್ರಾಣಿಸಂಕುಲ ಸತ್ತು ಹೋಗುತ್ತೆ, ಆಗ ಪರಿಸರ ನಾಶವಾಗುತ್ತೆ. ಪರಿಸರ ನಾಶವಾಗದೆ  ಇರಬೇಕು ಅಂದರೆ ಈ ಹಣ್ಣು-ಮರ ಇರಬೇಕು. ಆಗಾಗಿ ಇಡೀ ಪರಿಸರವನ್ನು ತನ್ನ ಭುಜದ ಮೇಲೆ ಹೊತ್ತು ನಿಂತಿರುವ ಸಸ್ಯ ಅಶ್ವತ್ಥ ವೃಕ್ಷಗಳು.

ಮತ್ತೊಂದು ಗಮನಿಸಿ, ಪ್ರತಿ ತಿಂಗಳು ಹೊಸ ಹಣ್ಣು ಬಿಡ್ತಾ ಇರಬೇಕು ಅಂದರೆ ಯಾವ ಮರದಲ್ಲಿ ಬಿಡಬೇಕು. ಒಂದೇ ಮರ ಪ್ರತಿ ತಿಂಗಳು ಬಿಡಲು ಸಾಧ್ಯವಿಲ್ಲ. ಬೇರೆ ಬೇರೆ ಮರಗಳು, ಬೇರೆ ಬೇರೆ ಸಮಯದಲ್ಲಿ ಹಣ್ಣು ಬಿಡುತ್ತವೆ. ನೂರಾರು ಮರಗಳು ಈ ಕ್ರಿಯೆ ನಡೆಸಬೇಕು, ಪರಿಸರ ಉಳಿಯಲುಬೇಕಾಗುತ್ತದೆ.
ಪರಿಸರ ಎಂದರೇನು? ಈ ಕೀಟಗಳ ಕೇವಲ 2ಕಿಮೀ ಚಲಿಸುತ್ತವೆ. ಸುತ್ತಳತೆಯಲ್ಲಿ ಹತ್ತಾರು ಮರಗಳಿರಬೇಕು. ಅಂದರೆ ಪ್ರತಿ ಹಳ್ಳಿಯಲ್ಲೂ ಒಂದು ಅರಳೀಮರವಿರಬೇಕು. ಈ ಸತ್ಯವನ್ನು ಕಂಡುಕೊಂಡ ಜನ(ಮಾನವ) ಅರಳೀಕಟ್ಟೆ ಕಟ್ಟಿದ್ದಾನೆ. ದೇವರು ಎಂದು ಪೂಜೆ ಮಾಡ್ತಾ ಇದ್ದಾರೆ. ಇದು ಸತ್ಯ.  ಅಶ್ವತ್ಥಃ ಸರ್ವವೃಕ್ಷಾಣಾಂ ದೇವರ್ಷೀಣಾಂ ಚ ನಾರದಃ|
ಗಂಧರ್ವಾಣಾಂ ಚಿತ್ರರಥಃ ಸಿದ್ದಾನಾಂ ಕಪಿಲೋ ಮುನಿಃ|| .... ಭಗವತ್ ಗೀತೆಯಲ್ಲಿ ಬರೆದಿರುವುದು ಸತ್ಯ.

ದುರದೃಷ್ಟವಶಾತ್  ಇವತ್ತು  ದೇಶದಲ್ಲಿ ಇಂತಹದೇ ಯುದ್ಧ ನಡೀತಾ ಇದೆ. ಧಾರ್ಮಿಕ ನಂಬಿಕೆಗಳು, ಧಾರ್ಮಿಕ ಹೇಳಿಕೆಗಳು, ಧಾರ್ಮಿಕ ನಡೆಗಳು ವಿಷಯವಾಗಿ, ಎಷ್ಟು ಸತ್ಯ ಎಷ್ಟು ಸುಳ್ಳು! ಬಹುಶಃ ಎಲ್ಲರೂ ಸಾವಧಾನದಿಂದ ಪ್ರತಿಯೊಂದನ್ನೂ ಪರೀಕ್ಷೆ ಮಾಡಿ ಯಾವುದನ್ನು ಒಪ್ಪಿಕೊಳಬೇಕು ಅದನ್ನು ಒಪ್ಪಿಕೊಂಡು,. ಯಾವುದನ್ನು ಬದಲಾಯಿಸಬೇಕು ಅದನ್ನು ಬದಲಾಯಿಸಿದರೆ ಮಾತ್ರ ನಮ್ಮ ಧಾರ್ಮಿಕ ನಂಬಿಕೆಗಳು ಸತ್ಯವನ್ನು ಆಧರಿಸಿರುವ ಧಾರ್ಮಿಕ ನಂಬಿಕೆಗಳು ಮಾನವ ಸ್ನೇಹಿ ಧಾರ್ಮಿಕ ನಂಬಿಕೆಗಳು ಉಳಿದುಕೊಳ್ಳಲು ಸಾಧ್ಯ. ಎಲ್ಲವನ್ನೂ ಒಪ್ಫಿಕೊಳ್ಳೋದು ಅಥವಾ ದೂರ ತಳ್ಳೋದು  ಮಾಡಿದರೆ ಮಾನವ ಸ್ನೇಹಿ ಸತ್ಯವನ್ನು ಕೂಡ ನಾವು ಕಳೆದುಕೊಳ್ಳುತ್ತೇವೆ‌. ಆ ಎಚ್ಚರಿಕೆಯಿಂದ ನಡೆಯೋಣ.

ಮಾತು ಮುಗಿಸಿದರು.
~~~~~~
ಈ ವಿಷಯದ  ಮೇಲೆ ವೇದಿಕೆಯ ಮತ್ತೊಂದು ಕಾರ್ಯಕ್ರಮದಲ್ಲಿ ಈ ಅತಿಥಿಗಳನ್ನು  ಆಹ್ವಾನಿಸಿ ಚರ್ಚಾತ್ಮಕ ಕಾರ್ಯಕ್ರಮ ನಡೆಸುವ ಒಕ್ಕೊರಲಿನ ಉತ್ಸಾಹದ ಒಪ್ಪಿಗೆಯ ಭಾವದಲ್ಲಿ ಗೌರವ ಧನ್ಯವಾದಗಳೊಂದಿಗೆ ಅತಿಥಿಗಳಾಗಿ ಆಗಮಿಸಿದ್ದ ಪ್ರೊ. ಕೆ.ಎನ್ ಗಣೇಶಯ್ಯನವರನ್ನು ಬೀಳ್ಕೊಡಲಾಯಿತು.

ಧನ್ಯವಾದಗಳು

ಶಶಿಕಲಾ ಆರ್
ಸಹಕಾರ್ಯದರ್ಶಿ
ಶಿ..ಕಾ.ವೇದಿಕೆ
~~~~~

ಅಕ್ಷರ ರೂಪಕ್ಕೆ ಭಾಷಣ ತರುವ ನನ್ನ ಸಾಹಸದ ಕೆಲಸದಲ್ಲಿ ವ್ಯತ್ಯಾಸಗಳಾಗಿದ್ದರೆ ಕ್ಷಮಿಸಿ‌


No comments:

Post a Comment