Monday, April 11, 2022

ಭೀಷ್ಮ ಪ್ರತಿಜ್ಞೆ - ಯಕ್ಷಗಾನ

 ಭಾನುವಾರ, 10 ಎಪ್ರಿಲ್ 2022 

ತರಳಬಾಳು  ಕೇಂದ್ರ , ಅರ್.ಟಿ. ನಗರ, ಬೆಂಗಳೂರು.

ಸುಮಾರು ಎರಡು ವರ್ಷಗಳ ನಂತರ ತರಳಬಾಳು ಕೆಂದ್ರ ಮತ್ತು ಸುವರ್ಣ ಪ್ರಸಾಧನ ಯಕ್ಷರಂಗ ಇವರು "ಭೀಷ್ಮ ಪ್ರತಿಜ್ಞೆ" ಎಂಬ ಯಕ್ಷಗಾನ ಪ್ರಸಂಗವನ್ನು ಸಾದರ ಪಡಿಸಿದ್ದಾರೆ.


ಹವ್ಯಾಸಿ ಮತ್ತು ವೃತ್ತಿಪರ ಕಲಾವಿದರಿಂದ ಒಟ್ಟಾದ 3 ಗಂಟೆಯ ಯಕ್ಷಗಾನ ಚೆನ್ನಾಗಿ ಮೂಡಿಬಂತು.

ಅದ್ಭುತವಾದ ಕಂಠದ ಭಾಗವತರು  ಶ್ರೀ ಸುರೇಶ್ ಶೆಟ್ಟಿ ಶಂಕರನಾರಾಯಣ ಅವರು ಸುಮಧುರವಾಗಿ ಹಾಡಿ ಪ್ರೇಕ್ಷಕರ ಮನಸೆಳೆದರು. 




ಅತೀ ಉತ್ತಮವಾದ ನಟನೆ, ನೃತ್ಯ, ಸಂಭಾಷಣೆ, ಕುಣಿತ, ಸ್ಪಷ್ಟವಾದ ಮಾತು, ವೇಷ ಭೂಷಣಗಳಿಂದ ಮಿಂಚಿದ ಕಲಾವಿದ ಶ್ರೀ ವಿಶ್ವನಾಥ ಹೆನ್ನಾಬೈಲ್  ಅವರು ದೇವವ್ರತ ಪಾತ್ರದಲ್ಲಿ ನಂತರ ಭೀಷ್ಮನ ಪ್ರತಿಜ್ಞೆ.



ಮೈಯಿಂದ ಬೆವರು ಸುರಿಸಿಕೊಂಡು, ಕುಣಿತ ಮಾಡಿ. ನಂತರ ಮಾತುಕತೆ, ಭೇಷ್ ವಿಶ್ವನಾಥ್....

ಪ್ರಸಂಗ - ಹಸ್ತಿನಾವತಿಯ ಮಹಾರಾಜ, ಶಂತನು, ಮಹಾ ಪರಾಕ್ರಮಿ, ಧರ್ಮಿಷ್ಠ, ಋಷಿ ಮುನಿಗಳಿಗೆ ಕಷ್ಟ ಕೊಡುತಿದ್ದ ರಾಕ್ಷಸರನ್ನು ಸಂಹಾರ ಮಾಡಿ, ರಾಜ್ಯವನ್ನು ಚೆನ್ನಾಗಿ ಆಳುತಿದ್ದ.


ಗಂಗೆಯ ತಟದಲ್ಲಿ ಕಂಡ, ರೂಪವತಿ, ಸತ್ಯವತಿಯನ್ನು ಮೋಹಗೊಂಡು  ಅವಳ ಷರತ್ತಿನ ಪ್ರಕಾರ ವಿವಾಹವಾಗಿದ್ದ. ಅವಳು ಗರ್ಭವತಿಯಾಗಿ ಮಗುವನ್ನು ಪಡೆದಾಗ, ಅದನ್ನು ಗಂಗೆಯಲ್ಲಿ ಬಿಡುತಿದ್ದಳು.

ಏಳು ಬಾರಿ ಹೀಗೆ ಮಾಡಿ , ಎಂಟನೆ ಬಾರಿ ಮಗುವನ್ನು ಎಸೆಯಲು ಹೋದಾಗ ಶಂತನು ಅವಳನ್ನು ತಡೆದಾಗ, ಅವಳು ಗಂಗೆಯಲ್ಲಿ ಅದ್ರಶ್ಯಳಾದಳು.

ಎಂಟನೆ ಮಗು "ದೇವವೃತ "ಅತ್ಯಂತ ಶೂರವಂತನೂ, ಧೀರ ವಂತನೂ, ರೂಪವಂತನೂ ಆಗಿ ಬೆಳೆದ.

ಒಮ್ಮೆ ಶಂತನು ಚಕ್ರವರ್ತಿಯು ನದಿ ತೀರದಲ್ಲಿ ಹೋದಾಗ ಅಲ್ಲಿಯ ಬೆಸ್ತರ ಕನ್ಯೆ ಮೇಲೆ ಮೋಹಗೊಂಡು, ಅವಳನ್ನು ವರಿಸಲು, ಅವಳ ತಂದೆಯು, ತನ್ನ ಕನ್ಯೆಗೆ ಚಕ್ರವರ್ತಿಯಿಂದ ಆಗುವ ಮಗುವು ಮುಂದಿನ ಚಚಕ್ರವರ್ತಿಯಾಗಬೇಕು ಎಂಬ ಷರತ್ತು ವಿಧಿಸಿ ಒಪ್ಪಿಗೆ ಕೊಡಲು ನಿರಾಕರಿಸಿದ. ಇದರಿಂದ ಶಂತನು ಬಹಳ ವ್ಯಸನ ಗೊಂಡ.


ಇದನ್ನು ಅರಿತ ದೇವ ವೃತ, ಬೆಸ್ತರಲ್ಲಿಗೆ ತೆರಳಿ, ತಾನು ಹಸ್ತಿನಾವತಿಯ ರಾಜನಾಗಲಾರೆ, ಆಜನ್ಮ ಬ್ರಹ್ಮಚಾರಿಯಾಗಿ  ಉಳಿಯುವುದಾಗಿ ಪ್ರತಿಜ್ಞೆ ಮಾಡಿದ. ಇದೇ "ಭೀಷ್ಮ ಪ್ರತಿಜ್ಞೆ"

ಬರೆದಿರುವುದು , ಸೋಮವಾರ, 11/4/2022 



No comments:

Post a Comment